Author: roovari

ಯಕ್ಷಗಾನ – ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ ಇಂತಹ ಶಾಸ್ತ್ರೀಯ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ಕಲಾ ಪ್ರಪಂಚದಲ್ಲಿ ಪ್ರದರ್ಶನ ನೀಡುತ್ತಿರುವ ಯಕ್ಷ ದಂಪತಿ ಆನಂದ ಭಟ್ ಕೆಕ್ಕಾರು ಹಾಗೂ ವಿದ್ಯಾ ಆನಂದ ಭಟ್ ಕೆಕ್ಕಾರು. ಆನಂದ ಭಟ್ ಕೆಕ್ಕಾರು: ಹೊನ್ನಾವರದ ಕೆಕ್ಕಾರಿನ ಗಣಪತಿ ಭಟ್ ಮತ್ತು ದಿ. ವಿಜಯಲಕ್ಷ್ಮಿ ಭಟ್ ಇವರ ಮಗನಾಗಿ 13.06.1988 ರಂದು ಜನನ. ಮೆಕ್ಯಾನಿಕ್ ಇಂಜಿನಿಯರ್ ಇವರ ವಿದ್ಯಾಭ್ಯಾಸ. ಮನೆಯಲ್ಲಿ ಯಕ್ಷಗಾನ ವಾತಾವರಣ, ದೊಡ್ಡಪ್ಪ ಜಿ ಡಿ ಭಟ್ ನಾಟಕ ಕಲಾವಿದ ಜೊತೆಗೆ ಗಣಪತಿ ಮೂರ್ತಿಕಾರ, ತಂದೆಯು ನಾಟಕಕಾರ ಹಾಗೂ ತಾಯಿ ಕೂಡ ಸಾಂಸ್ಕೃತಿಕ ಆಸಕ್ತಿ ಇದ್ದುದರಿಂದ ಕೆಕ್ಕಾರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಯಕ್ಷಗಾನವನ್ನು ನೋಡಿಯೇ ಕಲಿತದ್ದು ಆದ್ರೆ ಮಂಡಿ ಭಾಸ್ಕರ್ ಭಟ್ ಅನ್ನುವರು ಮಾರ್ಗದರ್ಶನ ಮಾಡಿ ಯಕ್ಷಗಾನ ರಂಗದಲ್ಲಿ ಒಳ್ಳೆಯ ಕಲಾವಿದರಿಗೆ ರೂಪುಗೊಂಡರು. ಭೀಷ್ಮ ವಿಜಯ, ಕರ್ಣ ಪರ್ವ, ದಮಯಂತಿ, ಹರೀಶ್ಚಂದ್ರ, ವಾಲಿವಧೆ ಇತ್ಯಾದಿ ನೆಚ್ಚಿನ ಪ್ರಸಂಗಗಳು. ಭೀಷ್ಮ,…

Read More

ಮಡಿಕೇರಿ : ದಿನಾಂಕ 5 ಜನವರಿ 2025ರಂದು ನಿಧನರಾದ ರಾಜ್ಯದ ಹಿರಿಯ ಸಾಹಿತಿ ಹಾಗೂ ಮಡಿಕೇರಿಯಲ್ಲಿ 2014ರಂದು ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ. ಡಿಸೋಜ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿ ಸಂತಾಪ ಸೂಚಕ ಸಭೆಯು ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ವತಿಯಿಂದ ದಿನಾಂಕ 06 ಜನವರಿ 2025ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಾಹಿತಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಎಸ್. ಐ. ಮುನೀರ್ ಅಹಮದ್ ಮಾತನಾಡಿ “ಸಾಹಿತ್ಯ ಲೋಕ ಕಂಡಂತಹ ಸೃಜನಶೀಲ ಪರಿಸರ ಕಾಳಜಿಯುಳ್ಳ ಕಥೆಗಾರರೆನಿಸಿದ ನಾ. ಡಿಸೋಜಾ ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಸಾಹಿತ್ಯ ಕೃಷಿ ನಡೆಸಿದ್ದಾರೆ. ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿರುತ್ತಾರೆ. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ…

Read More

ಸಂಗೀತದ ಬಗ್ಗೆ ಅಗಾಧ ಪಾಂಡಿತ್ಯವುಳ್ಳ ಪಂಡಿತ್ ಆರ್. ಕೆ. ಬಿಜಾಪುರೆ ಇವರು ಸುಸಂಸ್ಕೃತ ಕುಟುಂಬದ ಸಂಗೀತಮಯ ವಾತಾವರಣವಿರುವ ಮನೆಯಿಂದ ಬಂದವರು. ಪ್ರಬುದ್ಧ ನಾಟಕಕಾರ ಮತ್ತು ಸಂಯೋಜಕ ಬೆಳಗಾವಿ ಜಿಲ್ಲೆಯ ಕಾಗ್ವಾಡದ ಕಲ್ಲೋಪಂತ್ ಬಿಜಾಪುರೆ ಮತ್ತು ಗೋದುಬಾಯಿ ದಂಪತಿಯ ಪುತ್ರ. ಪಂಡಿತ್ ಆರ್. ಕೆ. ಬಿಜಾಪುರೆ ಎಂದೇ ಪ್ರಸಿದ್ಧರಾಗಿರುವ ರಾಮ ಕಲ್ಲೋ ಬಿಜಾಪುರೆ ಇವರನ್ನು ‘ಪಂಡಿತ್ ರಾಮಭಾವು ಬಿಜಾಪುರೆ’ , ‘ಬಿಜಾಪುರೆ ಮಾಸ್ತರ್’ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರು, ಸಾಹಿತಿಗಳು, ಸಂಗೀತ ಆರಾಧಕರೂ ಆಗಿದ್ದ ತಂದೆ, ದಾಸರ ಪದ ಹಾಗೂ ಜಾನಪದ ಗೀತೆಗಳನ್ನು ಮಧುರ ಕಂಠದಿಂದ ಹಾಡುವ ತಾಯಿ ಮತ್ತು ಉತ್ತಮ ತಬಲವಾದಕ ದೊಡ್ಡಪ್ಪ ಇವರೆಲ್ಲರ ಸಂಗೀತ ಸಂಸ್ಕಾರದ ಪ್ರಭಾವ ಎಳವೆಯಲ್ಲಿಯೇ ಬಿಜಾಪುರೆಯವರ ಮೇಲೆ ಅತೀವ ಪ್ರಭಾವ ಬೀರಿತ್ತು. ತಂದೆ ಕಲ್ಲೋಪಂತರಿಗೆ ಗೋಕಾಕ ತಾಲೂಕಿನ ಅಕ್ಕತಂಗೇರ ಹಾಳಕ್ಕೆ ವರ್ಗಾವಣೆಯಾದಾಗ ಬಿಜಾಪುರೆಯವರ ಸಂಗೀತದ ಕಲಿಕೆಗೆ ಅನುಕೂಲವೇ ಆಯ್ತು. ಕಲ್ಲೋಪಂತರ ನಾಟಕಗಳಿಗೆ ಸಂಗೀತ ರಚನೆ ಮಾಡಿದ ನಾಟಕದ ಮಾಸ್ಟರ್ ಅಣ್ಣಿಗೇರಿ ಮಲ್ಲಯ್ಯನವರು…

Read More

ಮಂಗಳೂರು: ಮಂಗಳೂರಿನ ಸ್ವರಾಲಯ ಫೌಂಡೇಶನ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಸ್ವರ ಸಂಕ್ರಾಂತಿ ಉತ್ಸವ- 2025’ ಸಂಗೀತ ಕಛೇರಿ ಕಾರ್ಯಕ್ರಮವು ದಿನಾಂಕ 14 ಜನವರಿ 2024 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಕಲಾ ಶಾಲೆ ವಿದ್ಯಾರ್ಥಿಗಳಿಂದ ವಯಲಿನ್ ಪ್ರಸ್ತುತಿ ನಡೆಯಲಿದ್ದು, ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮೂವರು ಹಿರಿಯ ಕಲಾ ಸಾಧಕರಿಗೆ ‘ಸ್ವರ ಸಾಧನಾ’ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಕಲಾವಿದರಾದ ರಂಜನಿ – ಗಾಯತ್ರಿ ಇವರಿಂದ ವಿಶಿಷ್ಟ ಪರಿಕಲ್ಪನೆಯ ‘ರಸ ಬೈ ರಾಗ’ ಸಂಗೀತ ಕಚೇರಿ ನಡೆಯಲಿದ್ದು ಇವರಿಗೆ ವಯಲಿನ್‌ನಲ್ಲಿ ವಿದ್ವಾನ್ ವಿಠಲ್ ರಂಗಲ್, ಮೃದಂಗದಲ್ಲಿ ವಿದ್ವಾನ್ ಸಾಯಿ ಗಿರಿಧರ್, ಘಟಂನಲ್ಲಿ ವಿದ್ವಾನ್ ಎಸ್. ಕೃಷ್ಣ ಸಹಕರಿಸಲಿದ್ದಾರೆ. ರಂಜನಿ ಮತ್ತು ಗಾಯತ್ರಿ ಕರ್ನಾಟಿಕ್ ಸಂಗೀತ ಪ್ರಕಾರದಲ್ಲಿ ಉನ್ನತ ಸಾಧನೆ ಮಾಡಿರುವ ಕಲಾವಿದರಾಗಿದ್ದು, ‘ರಸ ಬೈ ರಾಗ’ ಪರಿಕಲ್ಪನೆಯಲ್ಲಿ ದೇಶ ವಿದೇಶದಲ್ಲಿ ಪ್ರವಾಸ ಮಾಡಿ ಸಂಗೀತ…

Read More

ಮಂಗಳೂರು : ಜ್ಞಾನರತ್ನ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ನಿಡ್ಡೋಡಿ ಮಂಗಳೂರು ಆಯೋಜಿಸುವ ‘ನೀನಾಸಂ’ ತಿರುಗಾಟದ ನಾಟಕ ಪ್ರದರ್ಶನವು ದಿನಾಂಕ 08 ಜನವರಿ 2025 ಮತ್ತು 09 ಜನವರಿ 2025ರಂದು ನಿಡ್ಡೋಡಿಯ  ಶ್ರೀ ದುರ್ಗಾದೇವಿ ವಿದ್ಯಾಸಂಸ್ಥೆಯ ಮೈದಾನದಲ್ಲಿ  ನಡೆಯಲಿದೆ. ದಿನಾಂಕ 08 ಜನವರಿ 2025ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ.ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಮಾಲತೀ ಮಾಧವ’ ಮತ್ತು ದಿನಾಂಕ 09 ಜನವರಿ 2025ರಂದು ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿರುವ ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ‘ಅಂಕದ ಪರದೆ’ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ : 9844722956/ 9008729110/ 959117201

Read More

ಕೋಲಾರ : ಬಿ. ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್, ರೋಟರಿ ಕ್ಲಬ್ ಕೋಲಾರ, ಡಾ. ಕೆ ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನ ಸಂಯುಕ್ತವಾಗಿ ಆಯೋಜಿಸಿದ ವಿಶ್ವಮಾನವ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ‘ಕಾಸರಗೋಡು – ಕೋಲಾರ ಕನ್ನಡ ಉತ್ಸವ’ ಕಾರ್ಯಕ್ರಮವು ದಿನಾಂಕ 28 ಡಿಸೆಂಬರ್ 2024ರಂದು ಕೋಲಾರದ ಪತ್ರಕರ್ತರ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಭಾಷಣ ಮಾಡಿದ ಕೋಲಾರದ ಸಿವಿಲ್ ನ್ಯಾಯಾದೀಶರಾದ ಶ್ರೀ ಹರ್ಷ ಜಿ. “ಪ್ರತಿಜ್ಞಾಬದ್ದವಾಗಿ ಕನ್ನಡ ಭಾಷೆಯನ್ನು ಕನ್ನಡಿಗರು ಬಳಸಿಕೊಂಡರೆ ಮಾತ್ರ ಕನ್ನಡ ಉಳಿಯಬಲ್ಲುದು” ಎಂದು ಹೇಳಿದರು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕನ್ನಡ ಭವನದ ರೂವಾರಿಗಳಾದ ವಾಮನ್ ರಾವ್ ಬೇಕಲ್ ಇವರು ಮಾತನಾಡಿ “ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಗುರುತರ ಹೊಣೆಗಾರಿಕೆ ಸಂಘ, ಸಂಸ್ಥೆಗಳಿಗಿದ್ದು, ಪರಸ್ಪರ ಸಹಕರಿಸಿ ಕನ್ನಡ ಕಾರ್ಯಗಳನ್ನು ಮಾಡಬೇಕಿದೆ” ಎಂದು ಹೇಳಿದರು. ಕಾರ್ಯಕ್ರಮವನ್ನು ಬಿ. ಶಿವಕುಮಾರ್ ಪ್ರಾಸ್ತಾವಿಕ…

Read More

ಮಂಗಳೂರು : ಹೊಸ ವರ್ಷದ ಆರಂಭವನ್ನು ಹೆಜ್ಜೆ ಗೆಜ್ಜೆ ನೃತ್ಯ ನಾದಗೊಳೊಂದಿಗೆ ‘ಚಕ್ರಪಾಣಿ ನೃತ್ಯ ಕಲಾ ಕೇಂದ್ರ’ ಅತ್ತಾವರ ಮಂಗಳೂರು ಇಲ್ಲಿನ ನಾಟ್ಯ ಗುರುಗಳಾದ ವಿದ್ವಾನ್ ಶ್ರೀ ಸುರೇಶ್ ಅತ್ತಾವರ್ ಇವರ ನಿರ್ದೇಶನದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ‘ಶ್ರೀ ಚಕ್ರ ನೃತ್ಯೋತ್ಸವ’ ಕಾರ್ಯಕ್ರಮವು ದಿನಾಂಕ 01 ಜನವರಿ 2025ರಂದು ಪುರಭವನದಲ್ಲಿ ಅತ್ಯಂತ ವೈಭವದಿಂದ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಅತ್ತಾವರ ಇಲ್ಲಿನ ಪ್ರಧಾನ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಭಟ್ ನೆರವೇರಿಸಿ “ಬದುಕಿನಲ್ಲಿ ಭರವಸೆ ಮೂಡಲು ಒಂದಷ್ಟು ಹೊತ್ತು ಮನಸ್ಸು ಪ್ರಪುಲ್ಲಗೊಳ್ಳಲು ನೃತ್ಯ, ಸಂಗೀತ, ಚಿತ್ರಕಲೆ, ಬರವಣಿಗೆಯಂತಹ ಹವ್ಯಾಸಗಳು ಬೇಕು. ಈ ದಿನ ನೃತ್ಯ ಹಾಗೂ ಸಂಗೀತದಲ್ಲಿ ಕಾರ್ಯಕ್ರಮ ನೀಡುವ ಎಲ್ಲರಿಗೂ ದೇವರು ಶುಭವನ್ನೇ ಕರುಣಿಸಲಿ, ಚಕ್ರಪಾಣಿ ನೃತ್ಯ ಕಲಾ ಕೇಂದ್ರ ಇನ್ನಷ್ಟು ಉತ್ತಮ ನೃತ್ಯ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಒದಗಿಸಲಿ” ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಸರಕಾರಿ…

Read More

ಉಡುಪಿ : ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ‘ಬಾಲ ಮತ್ತು ಕಿಶೋರ ಯುಗಳ ನೃತ್ಯ’ ಕಾರ್ಯಕ್ರಮವು ದಿನಾಂಕ 05 ಜನವರಿ 2025ರಂದು ಬೈಲೂರು ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಅಥಿತಿ ಶ್ರೀಯುತ ಮೋಹನ್ ರಾವ್ ಇವರು ದೀಪ ಬೆಳಗಿಸಿ ಶುಭ ಹಾರೈಸಿದರು. ಬಹಳ ವರ್ಷದಿಂದಲೂ ಬೈಲೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಮತ್ತು ಪ್ರೋತ್ಸಾಹ ಕೊಡುತ್ತಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಬಗ್ಗೆ ಪ್ರಸ್ತಾಪಿಸುತ್ತ ಶ್ರೀಯುತ ಜಯರಾಮ ಆಚಾರ್ಯರವರು ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ನಡೆಸುತ್ತಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ “ಪ್ರತಿನಿತ್ಯವೂ ದೇವತಾರಾಧನೆಯಲ್ಲಿ ರಾಜೋಪಚಾರ ಮಂತ್ರದ ಮುಖಾಂತರ ಮಾತ್ರ ನಡೆಯುತ್ತಿದ್ದು, ಇನ್ನು ಮುಂದೆ ನೃತ್ಯ, ಸಂಗೀತ ನಿತ್ಯ ಆರಾಧನೆಯಲ್ಲಿ ಬರಲಿ. ಇಂತಹ ಕಾರ್ಯಕ್ರಮಕ್ಕೆ ದೇವಸ್ಥಾನಗಳ ವ್ಯವಸ್ಥಾಪಕರು ಅವಕಾಶ ಮಾಡಲಿ” ಎಂದು ನುಡಿದರು. “ಪರಿಷತ್ ನೃತ್ಯ ಕಲೆ ಬೆಳವಣಿಗೆಗೆ ಹಲವಾರು ಉತ್ತಮ ಕಾರ್ಯಕ್ರಮ…

Read More

ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮತ್ತು ಮನೋಹರ ಗ್ರಂಥಮಾಲಾ ಇವುಗಳ ಸಹಯೋಗದಲ್ಲಿ ಹಿರಿಯ ಸಾಹಿತಿ ಡಾ. ನಾ. ಡಿಸೋಜಾ ಅವರಿಗೆ ಭಾವ ಪೂರ್ಣ ಶೃದ್ಧಾಂಜಲಿ ನುಡಿನಮನ ಕಾರ್ಯಕ್ರಮವು ದಿನಾಂಕ 06 ಜನವರಿ 2025ರಂದು ಧಾರವಾಡದ ಮನೋಹರ ಗ್ರಂಥ ಮಾಲಾ ಅಟ್ಟದಲ್ಲಿ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ. ಶಾಮಸುಂದರ ಬಿದರಕುಂದಿ “ನಾ. ಡಿಸೋಜಾ ಜನಸಾಮಾನ್ಯರ ಅನುಭೂತಿ ಇಟ್ಟುಕೊಂಡು ಕಥೆ, ಕಾದಂಬರಿ ರಚನೆ ಮಾಡಿ ಜನಪ್ರಿಯ ಸಾಹಿತಿಯಾದರು. ಮುಳುಗಡೆ ಅವರ ಸಾಹಿತ್ಯದ ಸ್ಥಾಯಿವಸ್ತು. ಮುಳುಗಡೆ ಪ್ರದೇಶದ ಜನರ ಬದುಕು, ಬವಣೆ, ನೋವು, ನಲಿವುಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದು ವಿಶೇಷತೆ. ಲಿಂಗನಮಕ್ಕಿ ಜಲಾಶಯದ ನಿರ್ಮಾಣದಿಂದ ಜನರ ಜೀವನದಲ್ಲಾದ ಬದಲಾವಣೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಬರೆದರು. ಅವರ ಹಲವು ಕತೆಗಳು, ಪ್ರಬಂಧಗಳು ಪಠ್ಯವಾಗಿವೆ. ಡಿಸೋಜಾ ಅವರ ಕಾದಂಬರಿ ‘ದ್ವೀಪ’ ಸಿನೆಮಾ ಆಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು ಹೆಗ್ಗಳಿಕೆ. ಡಿಸೋಜಾ ಅವರ ಎಲ್ಲ ಕತೆಗಳು ರೂಪಕಗಳೇ ಆಗಿವೆ. ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ…

Read More

ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-96 ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ‘ನಾಟಕಾಷ್ಟಕ’ ಕಾರ್ಯಕ್ರಮದ ಸಮಾರೋಪ ಸಮಾರಂಭ ದಿನಾಂಕ 02 ಜನವರಿ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಮಾತನಾಡಿ “ಸಮಸ್ಯೆಗಳ ಸರಮಾಲೆಯನ್ನು ಬದಿಗೊತ್ತಿ ವಿಜೃಂಭಣೆಯಿದ ಸಂಭ್ರಮಿಸುವುದಕ್ಕೆ ಸಾಧ್ಯ ಎನ್ನುವುದನ್ನು ಯಶಸ್ವೀ ಕಲಾವೃಂದ ಮಾಡಿ ತೋರಿಸಿದೆ. ಎಲ್ಲಾ ರೀತಿಯ ಸೌಲಭ್ಯ, ಸಂಪನ್ಮೂಲ, ಅವಕಾಶ ಇದ್ದಂತಹ ಸಂಸ್ಥೆಗಳಿಗೆ ನಿರಂತರವಾಗಿ ಕೆಲಸಗಳನ್ನು ಮಾಡುವುದು ಸಾಹಸವಾಗಿರುವ ಸಂದರ್ಭಗಳಲ್ಲಿ ಊಹೆಗೆ ನಿಲುಕದಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುವ ಚೇತೋಹಾರಿ ಶಕ್ತಿ ಯಶಸ್ವೀ ಕಲಾವೃಂದಕ್ಕಿದೆ. ಒಂದು ಜಾಗದಲ್ಲಿ ನಿರಂತರವಾಗಿ ಕಲಾ ಚಟುವಟಿಕೆಗಳನ್ನು ನಿರಂತರವಾಗಿ ಮಾಡುವಷ್ಟು ದೊಡ್ಡ ಸಾಮಾಜಿಕ ಉಪಕಾರಿ ಯಾವುದೂ ಇಲ್ಲ. ಯಾಕೆಂದರೆ ಇದು ಬೆಳಕು ಹಚ್ಚುವ ಕಾರ್ಯ. ‘ನಾಟಕಾಷ್ಟಕ’ ಹೆಸರೇ ಆಕರ್ಷಕ. ಜೀವನ ಕೆಟ್ರೆ ನಾಟಕದಿಂದ ಸರಿ ಮಾಡಬಹುದು, ನಾಟಕನೇ ಕೆಟ್ರೆ? ಸರಿ ಮಾಡುವುದು…

Read More