Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು: ಶ್ರೀಮಾನ್ ಕೃಷ್ಣಮೂರ್ತಿ ಕುಲಕರ್ಣಿ ಹುಬ್ಬಳ್ಳಿ ಸಾರಥ್ಯದ ‘ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್’ ಇದೀಗ ಕೇರಳ ರಾಜ್ಯದಲ್ಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸುವ ಸದುದ್ದೇಶದಿಂದ ಕಾರ್ಯಪ್ರವೃತ್ತವಾಗಿದೆ. ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರನ್ನು ಕೇರಳ ರಾಜ್ಯ ಸಂಚಾಲಕರನ್ನಾಗಿ ನೇಮಿಸಿದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಚುಟುಕು ಕವಿತೆಗಳ ಜನಪ್ರಿಯ ಕವಿ, ಸಂಘಟಕ, ಸಂಪನ್ಮೂಲ ವ್ಯಕ್ತಿಯಾದ ವೆಂಕಟ್ ಭಟ್ ಎಡನೀರು ಇವರನ್ನು ಕಾಸರಗೋಡು ಜಿಲ್ಲಾ ವ್ಯಾಪ್ತಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು ಅನೇಕ ಚುಟುಕು ಕೃತಿಗಳನ್ನು ರಚಿಸಿದ್ದಾರೆ. ನೂರಾರು ಕವಿಗೋಷ್ಠಿ ಹಾಗೂ ಕವಿತೆ ರಚನಾ ಕಾರ್ಯಾಗಾರಗಳನ್ನು ಸಂಘಟಿಸಿದ್ದಾರೆ. ಇವರ ಪ್ರಕಟಿತ ಚುಟುಕು ಕೃತಿಗಳಾದ ‘ಖರ್ಜೂರ’, ‘ನೂರೊಂದು ಕವಿತೆಗಳು’, ‘ತಿಳಿಸಾರು’, ‘ಪೆಟ್ಟಿಗೆ ಭೂತ’ ಹಾಗೂ ‘302 ಎಳ್ಳುಂಡೆ’ ಪ್ರಸಿದ್ಧಿ ಪಡೆದಿವೆ.
ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾಕೇಂದ್ರದ ವತಿಯಿಂದ ‘ನಾಟ್ಯಾರಾಧನಾ ತ್ರಿಂಶೋತ್ಸವ’ದ ಸಮಾರೋಪ ಸಮಾರಂಭದಲ್ಲಿ ‘ನೃತ್ಯ ಸಂಭ್ರಮ’ ಹಾಗೂ ‘ಯಕ್ಷ ಭರತ ಸಂಗಮ’ ಕಾರ್ಯಕ್ರಮವನ್ನು ದಿನಾಂಕ 28 ಡಿಸೆಂಬರ್ 2024ರಂದು ಪುರಭವನದಲ್ಲಿ ಆಯೋಜಿಸಿಲಾಗಿತ್ತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ಚಾರಿಟೇಬಲ್ ಟ್ರಸ್ಟಿನ ಡಾ. ಆಶಾಜ್ಯೋತಿ ರೈ ಇವರ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಾಟ್ಯಾರಾಧನಾ ಸಂಸ್ಥೆಗೆ ನಿಸ್ವಾರ್ಥವಾಗಿ ತೆರೆಮರೆಲ್ಲಿ ಆಧಾರವಾಗಿ ಸಹಕರಿಸಿದ ಹಿರಿಯ ಮೃದಂಗವಾದಕರಾದ ಶ್ರೀ ಬಿ. ರಮೇಶ್ ರಾವ್ ಸುರತ್ಕಲ್, ವರ್ಣಾಲಂಕಾರ ವಸ್ತ್ರಾಲಂಕಾರ ತಜ್ಞರಾದ ಶ್ರೀ ಎಚ್.ಯು. ಅನಂತಯ್ಯ ಹೊಸಬೆಟ್ಟು, ಶ್ರೀ ಎಚ್. ಧನಪಾಲ್ ಶೆಟ್ಟಿಗಾರ್, ಶ್ರೀ ದಿನೇಶ್ ಶೆಟ್ಟಿಗಾರ್ ಮಂಗಳೂರು ಹಾಗೂ ವಿದುಷಿ ಪ್ರಾರ್ಥನಾ ಜೆ. ಹೊಸಬೆಟ್ಟು ಇವರುಗಳನ್ನು ‘ತ್ರಿಂಶೋತ್ಸವ ಸನ್ಮಾನ’ದ ಮೂಲಕ ಗೌರವಿವಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ರಾಮನಗರದ ಡಿ.ವೈ.ಎಸ್.ಪಿ. ಶ್ರೀ ಪಿ. ದಿನಕರ್ ಶೆಟ್ಟಿ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ, ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕರಾದ ಶ್ರೀ ಪಣಂಬೂರು ವಾಸುದೇವ ಐತಾಳ್, ಕಲಾಶ್ರೀ…
ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಘಟಕ, ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಪಾವೂರು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಆಶ್ರಯದಲ್ಲಿ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ದಿನಾಂಕ 03-01-2025ರಂದು ಉಳ್ಳಾಲ ತಾಲೂಕು ಪ್ರಥಮ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮ್ಮೇಳನದಲ್ಲಿ ಜಾನಪದ ದಿಬ್ಬಣ, ಕನ್ನಡಾಂಬೆಗೆ ಜೈಕಾರ, ಕವಿಗೋಷ್ಠಿ, ಪ್ರಬಂಧ ಮಂಡನೆ, ಕಾವ್ಯ ವಾಚನ, ಗೀತಾ ಗಾಯನಗೋಷ್ಠಿ ಇವೆಲ್ಲದರಲ್ಲೂ ವಿದ್ಯಾರ್ಥಿಗಳದ್ದೇ ಪಾರಮ್ಯ. ಕನ್ನಡ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ನಡೆಸುವ ಯೋಜನೆ ಕ.ಸಾ.ಪ.ದ್ದು. ಅದರಂತೆ ತಾಲೂಕಿನ ವಿದ್ಯಾರ್ಥಿ ಸಮ್ಮೇಳನಕ್ಕಾಗಿ ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಹರೇಕಳ ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಯನ್ನೇ ಆರಿಸಲಾಗಿತ್ತು. ಇದೇ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ರಫೀದಾರವರನ್ನು ಸಮ್ಮೇಳನ ಅಧ್ಯಕ್ಷೆಯಾಗಿ ಆರಿಸಲಾಗಿತ್ತು. ಇತರ ಸಾಹಿತ್ಯ…
ಬೆಳಗಾವಿ : ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ದಿನಾಂಕ 01 ಮಾರ್ಚ್ 2025 ಮತ್ತು 02 ಮಾರ್ಚ್ 2025ರಂದು ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ನಾಲ್ಕನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಪರಿಷತ್ತು ರಾಜ್ಯಮಟ್ಟದ ಚುಟುಕು ಕಾವ್ಯಕೃತಿಗಳ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಯ ವಿವರ : 2022 ಜನವರಿಯಿಂದ 2024 ಡಿಸೆಂಬರ್ ವರೆಗಿನ ಅವಧಿಯಲ್ಲಿ ಪ್ರಕಟಗೊಂಡ ಚುಟುಕು/ಹನಿ ಗವನ ಕೃತಿಗಳಿಗೆ ಮಾತ್ರ ಅವಕಾಶ. ಯಾವುದಾದರೂ ಒಂದು ವರ್ಷದ ಕೃತಿಯ 2 ಪ್ರತಿಗಳನ್ನು ದಿನಾಂಕ 20 ಜನವರಿ 2025ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕು. ವಿಳಾಸ : ಬಸವರಾಜ ಗಾರ್ಗಿ, ಪ್ರಧಾನ ಕಾರ್ಯದರ್ಶಿ, ಹೊಂಗನಸು, 73/ ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿ, ಶ್ರೀನಗರ, ಬೆಳಗಾವಿ -590017.
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಉಪ್ಪಳ ಘಟಕದ 7ನೇ ವಾರ್ಷಿಕೋತ್ಸವವನ್ನು 12 ಜನವರಿ 2025ರಂದು ಸಂಜೆ 6-30 ಗಂಟೆಗೆ ಕುಳೂರು ಶ್ರೀಹರಿ ಭಜನಾ ಮಂದಿರದ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಉಪ್ಪಳ ಘಟಕದ ಅಧ್ಯಕ್ಷರಾದ ಶ್ರೀ ಪಿ.ಆರ್. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಭಾಗವತರಾದ ಶ್ರೀ ಜಿ.ಕೆ. ನಾವಡ ಬಾಯಾರು ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ‘ಶ್ರೀಹರಿ ದರ್ಶನ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ.
ಮಂಗಳೂರು : ಚಿರಂತನ ಚಾರಿಟೇಬಲ್ ಟ್ರಸ್ಟ್, ಸಪ್ತಕ ಬೆಂಗಳೂರು, ಐ.ಟಿ.ಸಿ. ಸಂಗೀತ ರಿಸರ್ಚ್ ಅಕಾಡೆಮಿ ಮತ್ತು ರಾಮಕೃಷ್ಣ ಮಠ ಮಂಗಳೂರು ಜಂಟಿಯಾಗಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ಪ್ರಸ್ತುತ ಪಡಿಸುವ ‘ಐ.ಟಿ.ಸಿ. ಮಿನಿ ಸಂಗೀತ ಸಮ್ಮೇಳನ’ವನ್ನು ದಿನಾಂಕ 12 ಜನವರಿ 2025ರಂದು ಬೆಳಗ್ಗೆ 10-00 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮನಂದಾಜಿ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಕೋಲ್ಕತಾದ ಶ್ರೀಮತಿ ಶತವಿಷ ಮುಖರ್ಜಿ ಇವರ ಹಾಡುಗಾರಿಕೆಗೆ ಬೆಂಗಳೂರಿನ ಗುರುಮೂರ್ತಿ ವೈದ್ಯ ತಬಲಾದಲ್ಲಿ ಮತ್ತು ಉಡುಪಿಯ ಶ್ರೀ ಪ್ರಸಾದ್ ಕಾಮತ್ ಇವರು ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ. ಶ್ರೀ ಬ್ರಜೇಶ್ವರ ಮುಖರ್ಜಿ ಇವರ ಹಾಡುಗಾರಿಕೆಗೆ ಕೋಲ್ಕತಾದ ಶ್ರೀ ಆಶಿಶ್ ಪಾಲ್ ತಬಲಾದಲ್ಲಿ ಮತ್ತು ಮುಂಬೈ ಶ್ರೀ ಸಿದ್ಧೇಶ್ ಬಿಚೊಳ್ಕರ್ ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ.
ಕಟೀಲು : ಶ್ರೀ ದುರ್ಗಾ ಮಕ್ಕಳ ಮೇಳದ 16ನೇ ವಾರ್ಷಿಕ ಕಲಾಪರ್ವದ ಸಮಾರೋಪ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 29 ಡಿಸೆಂಬರ್ 2024ರಂದು ಸರಸ್ವತೀ ಸದನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಭಾಗವಹಿಸಿ ಶುಭಾಶಂಸನೆ ಗೈದ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ “ಯಕ್ಷಗಾನ ನಮ್ಮಲ್ಲಿ ಸತ್ ಚಿಂತನೆಯನ್ನು ಬೆಳೆಸುವುದರಿಂದ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಕಟೀಲು ಮಕ್ಕಳ ಮೇಳದ ಕಾರ್ಯ ಅಭಿನಂದನೀಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ವಿದ್ವಾಂಸ ಕೆ.ಎಲ್. ಕುಂಡಂತಾಯ ಇವರಿಗೆ ‘ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ’ ಹಾಗೂ ಖ್ಯಾತ ಹಿಮ್ಮೇಳ ವಾದಕ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಯವರಿಗೆ ‘ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಈ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಇವರು ಮಾತನಾಡಿ “ಯಕ್ಷಗಾನ ಕಲಿಕೆಯತ್ತ ಮಕ್ಕಳ ಸೆಳೆತ ಸ್ತುತ್ಯರ್ಹ ಬೆಳವಣಿಗೆಯಾಗಿದ್ದು, ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ಯಕ್ಷಗಾನದ ಮೂಲಕ ಕಲಿಸುವ ಅವಕಾಶ ಇದೆ. ಇಲ್ಲದಿದ್ದರೆ ಹಿರಿಯರನ್ನು ಗೌರವಿಸುವ ಮನಸ್ಥಿತಿಯಿಂದ…
ಧಾರವಾಡ : ಸಾಹಿತ್ಯ ಗಂಗಾ ಸಂಸ್ಥೆಯು 2024ನೆಯ ಸಾಲಿನ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ಒಂದು ಸಾಂಕೇತಿಕ ಮೊತ್ತ, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಆಸಕ್ತ ಲೇಖಕ/ಲೇಖಕಿಯರು, ಪ್ರಕಾಶಕರು ಮತ್ತು ಓದುಗರು ನಿಯಮಾನುಸಾರವಾಗಿ ಕೃತಿಗಳನ್ನು ಕಳುಹಿಸಬಹುದು. ನಿಯಮಗಳು : * 2024ರಲ್ಲಿ ಮೊದಲ ಮುದ್ರಣ ಕಂಡ, ಸ್ವತಂತ್ರ ಕಾದಂಬರಿಗಳು ಮಾತ್ರ ಪ್ರಶಸ್ತಿಗೆ ಅರ್ಹ. * ಅನುವಾದ, ಅನುಸೃಷ್ಟಿ, ರೂಪಾಂತರ, ಪ್ರೇರಣೆ ಅಥವಾ ಸ್ಫೂರ್ತಿ ಪಡೆದ ಕಾದಂಬರಿಗಳಿಗೆ ಅವಕಾಶವಿಲ್ಲ. * ಒಬ್ಬ ಲೇಖಕ/ಲೇಖಕಿ ಒಂದಕ್ಕಿಂತ ಹೆಚ್ಚು ಕಾದಂಬರಿ ಪ್ರಕಟಿಸಿದ್ದಲ್ಲಿ, ಅವುಗಳಲ್ಲಿ ಅತ್ಯುತ್ತಮವಾದ ಒಂದನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. * ಆಸಕ್ತ ಲೇಖಕ/ಕಿಯರು, ಪ್ರಕಾಶಕರು ಮತ್ತು ಓದುಗರು ಕಾದಂಬರಿಯ ಮೂರು ಪ್ರತಿಗಳು, ಲೇಖಕ/ಲೇಖಕಿಯರ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಭಾವಚಿತ್ರವನ್ನು ಅಂಚೆ/ಕೊರಿಯರ್ ಮೂಲಕ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು. * ಕಾದಂಬರಿಗಳನ್ನು ಕಳಿಸಲು ಕೊನೆಯ ದಿನಾಂಕ 20 ಫೆಬ್ರುವರಿ 2025. * ಸುನಂದಾ ಬೆಳಗಾಂವಕರ ಕಾದಂಬರಿ…
ಬೈಂದೂರು : ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಮತ್ತು ಯಕ್ಷ ಗುರುಕುಲ ಬೈಂದೂರು ಇವರ ಸಹಭಾಗಿತ್ವದಲ್ಲಿ ಬೈಂದೂರಿನಲ್ಲಿ ನಾಲ್ಕು ಪ್ರೌಢಶಾಲೆಗಳ ‘ಕಿಶೋರ ಯಕ್ಷಗಾನ ಸಂಭ್ರಮ’ವು ದಿನಾಂಕ 30 ಡಿಸೆಂಬರ್ 2024ರಂದು ಉದ್ಘಾಟನೆಗೊಂಡಿತು. ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಹಿರಿಯ ಯಕ್ಷಗಾನ ಕಲಾವಿದರಾದ ಸಂಜೀವ ಗಾಣಿಗರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ಉದ್ಯಮಿಗಳಾದ ದಯಾನಂದ ಬಾಸ್ ಬೈಲ್, ದೀನಪಾಲ ಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಭಾಸ್ಕರ್ ದೇವಾಡಿಗ, ಸುರೇಶ ಬಚವಾಡಿ, ಯಕ್ಷಗಾನ ಕಲಾರಂಗದ ನಾರಾಯಣ ಎಂ. ಹೆಗಡೆ, ಹೆಚ್.ಎನ್. ಶೃಂಗೇಶ್ವರ, ಗಣೇಶ್ ಬ್ರಹ್ಮಾವರ ಭಾಗವಹಿಸಿದ್ದರು. ಬೈಂದೂರಿನ ಯಕ್ಷಗುರುಕುಲದ ಸಂಚಾಲಕರಾದ ಸುನೀಲ್ ಹೊಲಾಡು ಸ್ವಾಗತಿಸಿದ ಕಾರ್ಯಕ್ರಮವನ್ನು ಶಿಕ್ಷಕರಾದ ಸುಧಾಕರ್ ಪಿ. ನಿರ್ವಹಿಸಿದರು. ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಾಸಕರನ್ನು ಅಭಿನಂದಿಸಿದರು. ಬಳಿಕ ಸರಕಾರಿ ಪ್ರೌಢಶಾಲೆ, ಕಂಬದಕೋಣೆ ಇಲ್ಲಿನ ವಿದ್ಯಾರ್ಥಿಗಳಿಂದ, ಹೆಮ್ಮಾಡಿ ಪ್ರಭಾಕರ್ ಆಚಾರ್ಯ ನಿರ್ದೇಶನದಲ್ಲಿ ‘ದ್ರೌಪದಿ ಪ್ರತಾಪ’ ಮತ್ತು ಸರ್ಕಾರಿ ಪ್ರೌಢಶಾಲೆ ಉಪ್ಪುಂದ ಇಲ್ಲಿನ ವಿದ್ಯಾರ್ಥಿಗಳಿಂದ…
ಹೆಸರಾಂತ ಕಾದಂಬರಿಗಳನ್ನು ಹಾಗೂ ಕಥಾ ಸಂಕಲನಗಳನ್ನು ಬರೆದು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಕಾದಂಬರಿಗಳ ಸುಪ್ರಸಿದ್ಧ ಲೇಖಕಿ ಶ್ರೀಮತಿ ಎಂ.ಕೆ. ಇಂದಿರಾ. ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ದಿನಾಂಕ 05.01.1917ರಂದು ಜನಿಸಿದರು. ಇವರ ತಂದೆ ತರೀಕೆರೆ ಸೂರ್ಯನಾರಾಯಣರಾವ್ ಹಾಗೂ ತಾಯಿ ಬನಶಂಕರಮ್ಮ. ಆಗಿನ ಕಾಲದ ಜೀವನ ವಿಧಾನದ ಪ್ರಕಾರ ಎಂ. ಕೆ. ಇಂದಿರಾ ಅವರಿಗೆ 12ನೇ ವಯಸ್ಸಿನಲ್ಲಿ ಶ್ರೀಯುತ ಕೃಷ್ಣರಾವ್ ರೊಂದಿಗೆ ಬಾಲ್ಯ ವಿವಾಹ ನಡೆಯುತ್ತದೆ. ಈ ಕಾರಣದಿಂದಲೇ ಅವರು ಕೇವಲ ಆರನೆಯ ತರಗತಿ ತನಕ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ. ಸಾಹಿತ್ಯ ಲೋಕಕ್ಕೆ ಶ್ರೇಷ್ಠ ಕೃತಿಗಳನ್ನು ನೀಡಿದ ಮಹಾನ್ ಲೇಖಕಿಯಾದ ಶ್ರೀಮತಿ ಎಂ. ಕೆ. ಇಂದಿರಾ ಇವರಿಗೆ ಸಾಹಿತ್ಯ ರಚನೆಯ ಕಾರ್ಯದಲ್ಲಿ ಅವರ ಶೈಕ್ಷಣಿಕ ವ್ಯವಸ್ಥೆ ಯಾವುದೇ ರೀತಿಯ ಕೊರತೆಯನ್ನು ತಂದೊಡ್ಡಲಿಲ್ಲವೆಂಬುದು ನಿರ್ವಿವಾದ. ಮುಖ್ಯವಾಗಿ ಅವರು ಬಾಳಿ ಬದುಕಿದ ಕುಟುಂಬದಲ್ಲಿ ಹೆಚ್ಚಿನವರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಬದುಕಿನಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದರು. ಇವರ ತಾಯಿ ಬನಶಂಕರಮ್ಮ ಹಾರ್ಮೋನಿಯಂ, ಗಮಕ ಹಾಡುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.…