Author: roovari

ಮಂಗಳೂರು : ಕದ್ರಿಯಲ್ಲಿ ದಿನಾಂಕ 08-12-2023ರಂದು ನಡೆದ ಕಟೀಲು ಮೇಳದ ಯಕ್ಷಗಾನ ಪ್ರದರ್ಶನದ ವೇಳೆ ಕಟೀಲು ಮೇಳದ ಕಲಾವಿದ ಅಮ್ಮುಂಜೆ ಮೋಹನ್ ಕುಮಾರ್ ಇವರಿಗೆ ‘ಕದ್ರಿ ವಿಷ್ಟು ಪ್ರಶಸ್ತಿ -2023’ನ್ನು ಪ್ರದಾನ ಮಾಡಲಾಯಿತು. ಕದ್ರಿ ಯಕ್ಷ ಬಳಗದ ಅಧ್ಯಕ್ಷರಾದ ಕದ್ರಿ ನವನೀತ್ ಶೆಟ್ಟಿ ಮಾತನಾಡಿ, “ಕಟೀಲು ಮೇಳದಲ್ಲಿ ಮೂರು ದಶಕಗಳ ತನ್ನ ಯಕ್ಷಯಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಮ್ಮುಂಜೆ ಮೋಹನ್ ಕುಮಾರ್ ಅವರು ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ ಗುಂಡಿಲ ಗುತ್ತು ಶಂಕರ ಶೆಟ್ಟಿ, ಪಡ್ರೆ ಚಂದು ಹಾಗೂ ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಡಾ. ಕೊಳ್ಳೂರು ರಾಮಚಂದ್ರ ರಾವ್ ಅವರಿಂದ ನಾಟ್ಯ ಕಲಿತವರು, ಕುರಿಯ ಗಣಪತಿ ಶಾಸ್ತ್ರಿ, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪಟ್ಲ ಸತೀಶ್ ಶೆಟ್ಟಿ ಭಾಗವತರ ಮಾರ್ಗದರ್ಶನದ ರಂಗದಲ್ಲಿ ಮೆರೆದ ಖ್ಯಾತ ಪುಂಡು ವೇಷಧಾರಿ. ಸುಧನ್ವ, ಬಬ್ರುವಾಹನ, ಅಭಿಮನ್ಯು, ಚಂಡ-ಮುಂಡ, ಸುದರ್ಶನ, ಅಶ್ವತ್ಥಾಮ, ಹಿರಣ್ಯಾಕ್ಷ, ಋತುಪರ್ಣ, ಜಾಂಬವ, ರಕ್ತಬೀಜ ಮೊದಲಾದ ಪಾತ್ರಗಳಲ್ಲಿ ತನ್ನದೇ ಶೈಲಿಯಿಂದ ಮೆರೆಯುತ್ತಿರುವ ಸರಳ-ಸಜ್ಜನಿಕೆಯ ನಿಷ್ಠ ರಂಗ ಕಲಾವಿದ”…

Read More

ಕಾಸರಗೋಡು: ದುಬಾಯಿಯ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಪತ್ರಕರ್ತ ಹಾಗೂ ಲೇಖಕ ರವಿ ನಾಯ್ಕಾಪು ಆಯ್ಕೆಯಾಗಿದ್ದಾರೆ. ನವದೆಹಲಿಯ ಅಸೋಸಿಯೇಶನ್ ಫಾರ್ ಇಕಾನಾಮಿಕ್ ಪ್ರೋಥ್ ಸಂಘಟನೆಯು ಪತ್ರಿಕಾ ರಂಗದ ಸಮಗ್ರ ಸಾಧನೆಗೆ ಕೊಡಮಾಡುವ ಈ ಸಾಲಿನ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಕಾಸರಗೋಡಿನ ಪತ್ರಕರ್ತ ಹಾಗೂ ಲೇಖಕರಾದ ರವಿ ನಾಯ್ಕಾಪು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಕಾರ್ಯದರ್ಶಿ ಝಫರ್ ಶಮೀನ್ ಅವರು ತಿಳಿಸಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 18-01-2024ರಂದು ದುಬಾಯಿಯ ಬರ್ ದುಬಾಯಿಯಲ್ಲಿರುವ ಹಾಲಿಡೇ ಇನ್ ಹೊಟೇಲ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಳೆದ ಎರಡೂವರೆ ದಶಕಗಳಿಂದ ಪೂರ್ಣಕಾಲಿಕ ಪತ್ರಕರ್ತನಾಗಿರುವ ರವಿ ನಾಯ್ಕಾಪು ಅವರು ವಿವಿಧ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ವರದಿಗಾರ, ಉಪ ಸಂಪಾದಕ, ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ, ಸಮಾಜ ಸಂಪದ ಎಂಬಿವುಗಳು ಅವರ ಪ್ರಕಟಿತ ಕೃತಿಗಳು. ಅವರ ‘ಸ್ನೇಹಗಂಗೆ’ಯು ಶ್ರೇಷ್ಠ ಸಮಾಜಮುಖಿ ಕೃತಿಗಿರುವ ಪುರಸ್ಕಾರಕ್ಕೆ ಪಾತ್ರವಾಗಿದೆ. ಅಲ್ಲದೆ ಪಠ್ಯ…

Read More

ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು ಇದರ ಅಂಗಸಂಸ್ಥೆಯಾದ ಮಹಿಳಾ ಘಟಕ ನಾರಿ ಚಿನ್ನಾರಿಯ 12ನೇ ಸರಣಿ ಕಾರ್ಯಕ್ರಮ ‘ಸಾಹಿತ್ಯ ವಲ್ಲರಿ’ಯು ದಿನಾಂಕ 31-12-2023ರಂದು ಕರಂದಕ್ಕಾಡಿನ ಪದ್ಮಗಿರಿಯ ಕಲಾಕುಟೀರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಆಕಾಶವಾಣಿ ನಿವೃತ್ತ ಉದ್ಘೋಷಕಿ ಹಾಗೂ ಹಿರಿಯ ಸಾಹಿತಿ ಶಕುಂತಳಾ ಆರ್. ಕಿಣಿ ಮಾತನಾಡಿ “ಮಹಿಳೆಯರಲ್ಲಿ ಸುಪ್ತವಾಗಿರುವ ಪ್ರತಿಭೆ ಬೆಳಕಿಗೆ ತರುವ ಮೂಲಕ ಸ್ತುತ್ಯರ್ಹ ಕೆಲಸ ಮಾಡುತ್ತಿರುವ ನಾರಿ ಚಿನ್ನಾರಿ ಒಳಧ್ವನಿಗೊಂದು ರಹದಾರಿ.” ಎಂದು ಹೇಳಿದರು. ನಾರಿ ಚಿನ್ನಾರಿಯ ಉಪಾಧ್ಯಕ್ಷೆ ಸಾಹಿತಿ ಯು. ಮಹೇಶ್ವರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಹಿತಿ ಪ್ರಸನ್ನಾ ವಿ. ಚೆಕ್ಕೆಮನೆ ಅವರನ್ನು ಗೌರವಿಸಲಾಯಿತು. ಬಳಿಕ ನಡೆದ ವಿಚಾರ ಸಂಕಿರಣದಲ್ಲಿ ‘ಯೋಗ ಮತ್ತು ನ್ಯಾಚುರೋಪತಿ’ ಎಂಬ ವಿಷಯದಲ್ಲಿ ಡಾ. ಅಂಕಿತಾ ಕಿಣಿ ಮಾಹಿತಿ ನೀಡಿದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಸಾಹಿತಿ ಶಕುಂತಳಾ ಆರ್. ಕಿಣಿ ಇವರ ಅಧ್ಯಕ್ಷತೆಯಲ್ಲಿ…

Read More

ಮಂಗಳೂರು : ಮಂಗಳೂರಿನಲ್ಲಿ ಹೊಸದಾಗಿ ರೂಪುಗೊಂಡ ‘ಸ್ವರಾನಂದ ಪ್ರತಿಷ್ಠಾನ’ವು ಬಿಇಎಮ್ ಹೈಸ್ಕೂಲಿನ ಸಭಾಂಗಣದಲ್ಲಿ ತನ್ನ ಮೊದಲನೆಯ ಕಾರ್ಯಕ್ರಮವನ್ನು ದಿನಾಂಕ 16-12-2023ರಂದು ಆಯೋಜಿಸಿತ್ತು. ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮವಾಗಿ ರಾತ್ರಿ 9 ಗಂಟೆಯಿಂದ ಮರುದಿನ ಬೆಳಿಗ್ಗೆ 7ರವರೆಗಿನ ಸಂಗೀತ ನೀಡಿದ ರಸಾನುಭವ ಬಹುಕಾಲ ನೆನಪಿನಲ್ಲುಳಿಯುವಂಥದ್ದು. ‘ಬನಮ ಚರಾವತ ಗಯ್ಯಾ’ ಎಂಬ ಸಾಲಿನೊಂದಿಗೆ ರಾಗ ಮಾಲಗುಂಜಿಯ ಸ್ವರಗಳು ಮಧ್ಯರಾತ್ರಿ 12ರ ಸುಮಾರಿನಲ್ಲಿ ಸಭಾಂಗಣವನ್ನು ಆವರಿಸುತ್ತಿದ್ದಂತೆ, ಎದುರಿಗಿದ್ದ ಶ್ರೋತೃಗಳು ನಿದ್ರೆಯ ಆಯಾಸವನ್ನೂ ಮರೆತು ವಿದುಷಿ ಅಪೂರ್ವಾ ಗೋಖಲೆ ಮತ್ತು ಪಲ್ಲವಿ ಜೋಶಿ ಸಹೋದರಿಯರ ಮೋಹಕ ಗಾಯನದಲ್ಲಿ ಲೀನರಾಗಿದ್ದರು. ಹಿಂದೂಸ್ಥಾನಿ ಸಂಗೀತ ಪರಂಪರೆಯಲ್ಲಿ ಹಿಂದೆ ರೂಢಿಯಲ್ಲಿದ್ದು ಈಗ ಕಡಿಮೆಯಾಗುತ್ತಿರುವ ಬೈಠಕ್ ಕಾರ್ಯಕ್ರಮಗಳನ್ನು ಮಂಗಳೂರು ಪ್ರದೇಶದಲ್ಲಿ ಆರಂಭಿಸುವ ಹುಮ್ಮಸ್ಸಿನಿಂದ ಸಮಾನ ಸಂಗೀತಾಸಕ್ತರು ಸೇರಿ ಆರಂಭಿಸಿದ ಸಂಸ್ಥೆಯೇ ‘ಸ್ವರಾನಂದ ಪ್ರತಿಷ್ಠಾನ’. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯ ಕಲಾವಿದರ ವಿಭಿನ್ನ ಪ್ರಸ್ತುತಿ ಕೇಳಲು ಲಭ್ಯವಾಯಿತು. ಮಾತ್ರವಲ್ಲದೆ, ರಾಗ-ಸಮಯ ಪದ್ಧತಿಗನುಸಾರವಾಗಿ ರಾತ್ರಿಯಿಂದ ಬೆಳಗಿನವರೆಗಿನ ತುಂಬಾ ವಿರಳವಾಗಿ ಕೇಳ ಸಿಗುವ ರಾಗಗಳನ್ನು ಆಸ್ವಾದಿಸುವ ಅವಕಾಶವಾಯಿತು. ಕಾರ್ಯಕ್ರಮವನ್ನು…

Read More

ಕಾರ್ಕಳ : ಭುವನೇಂದ್ರ ಪ್ರೌಢ ಶಾಲೆಯ ಶಿಕ್ಷಕಿ, ಲೇಖಕಿ ಪ್ರಜ್ವಲಾ ಶೆಣೈ ಅವರ ಕವನಸಂಕಲನ ‘ಸಮರ್ಪಣ’ ಇದರ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 17-12-2023ರಂದು ಕಾರ್ಕಳದ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಕೆ. ಶಾಂತಾರಾಮ ಕಾಮತ್ ಸಾಂಸ್ಕೃತಿಕ ಕಲಾಮಂಟಪದಲ್ಲಿ ನಡೆಯಿತು. ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುದ್ರಾಡಿಯ ಎನ್. ಎಸ್. ಡಿ. ಎಮ್. ಅನುದಾನಿತ ಪ್ರಾಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ “ಮನಸ್ಸಿಗೆ ಮುದವನ್ನು ನೀಡುವ ಜೀವನಕ್ಕೆ ಹಿತವನ್ನು ಒದಗಿಸುವ ಸಾಧನವೇ ಸಾಹಿತ್ಯಪ್ರಕಾರ. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಎಲ್ಲ ಚಟುವಟಿಕೆಗಳು ಕೂಡ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ. ಕಲೆ ಸಾಹಿತ್ಯ ಸಂಗೀತದಿಂದ ಅಧ್ಯಾತ್ಮದ ಅನುಸಂಧಾನ ಕೂಡ ಸಾಧ್ಯವಿದೆ.” ಎಂದು ಹೇಳಿದರು. ಮುಖ್ಯಅತಿಥಿಗಳಾಗಿ ಅತ್ತೂರು ಸಂತ ಲಾರೆನ್ಸ್ ಅನುದಾನಿತ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸುಬ್ರಮಣ್ಯ ಉಪಾಧ್ಯ, ಉಡುಪಿ ಸರಕಾರಿ ಪದವಿಪೂರ್ವ ಕಾಲೇಜು ಇದರ ಪ್ರೌಢಶಾಲಾ ವಿಭಾಗದ ಸಂಸ್ಕೃತ ಶಿಕ್ಷಕಿ ಲಕ್ಷ್ಮೀ ಹೆಗ್ಡೆ, ವಿಶ್ರಾಂತ ಪತ್ರಕರ್ತ ಕೆ. ಪದ್ಮಾಕರ ಭಟ್, ಉದ್ಯಮಿ ಹರೀಶ…

Read More

ಕಾರ್ಕಳ : ಕಾಂತಾವರ ಕನ್ನಡ ಸಂಘ ಹಾಗೂ ಕಾರ್ಕಳ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇವುಗಳ ಸಹಯೋಗದೊಂದಿಗೆ ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಿಂಗಳ ಅರಿವು-ತಿಳಿವು ಉಪನ್ಯಾಸ ಕಾರ್ಯಕ್ರಮವು ದಿನಾಂಕ 23-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು ಇವರು ‘ಜನ್ನನ ಯಶೋಧರ ಚರಿತೆಯ ಅಮೃತಮತಿ’ ವಿಷಯದ ಕುರಿತು ಉಪನ್ಯಾಸ ನೀಡುತ್ತಾ “ಕನ್ನಡ ಸಾಹಿತ್ಯಲೋಕದಲ್ಲಿ ಬಹುಬಗೆಯ ವಿಮರ್ಶೆಗೆ ಒಳಗಾದ ಜನ್ನನ ಯಶೋಧರ ಚರಿತೆ ಕಾವ್ಯದ ‘ಅಮೃತಮತಿ’ ಪಾತ್ರದ ಮೂಲಕ, ಹೆಣ್ಣೊಬ್ಬಳ ವಿಕೃತ ಪ್ರಣಯವನ್ನು ಚಿತ್ರಿಸಲಾಗಿದೆ. ‘ಜೀವದಯೆ ಜೈನಧರ್ಮ’, ‘ಅಹಿಂಸಾ ಪರಮೋ ಧರ್ಮಃ’ ಎನ್ನುವುದನ್ನು ಸಾರುವುದಕ್ಕೆ ಜನ್ನ ‘ಯಶೋಧರ ಚರಿತೆ’ ರಚಿಸಿದ್ದರೂ ಈ ಕಾವ್ಯದೊಳಗಿನ ಯಶೋಧರನ ಕಥೆ, ಅಮೃತಮತಿ ಹಾಗೂ ಅಷ್ಟಾವಂಕರ ಪ್ರಣಯ ಪ್ರಸಂಗಗಳು ವಿದ್ವತ್ ವಲಯದಲ್ಲಿ ಚರ್ಚೆಯ ಪ್ರಧಾನ ಅಂಶಗಳಾಗಿವೆ. ಸಕಲಗುಣಸಂಪನ್ನನಾದ ಗಂಡನನ್ನು ವಂಚಿಸಿ, ವಿಕಲಾಂಗನಾದ ಮಾವಟಿಗನೊಂದಿಗೆ ಅನೈತಿಕ ಸಂಬಂಧ ಹೊಂದುವ ಅಮೃತಮತಿ, ಗಂಡ ಹಾಗೂ ಅತ್ತೆ ಚಂದ್ರಮತಿಯನ್ನು ಕೊಂದು ತಾನೂ ಕುಷ್ಠರೋಗದ…

Read More

ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕ ಹಾಗೂ ಮಹಿಳಾ ಘಟಕದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಬಂಟ್ವಾಳ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ದಿನಾಂಕ 25-12-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ನ್ಯಾಯಾಧೀಶರಾದ ದಿನೇಶ್‌ ಹೆಗ್ಡೆ ಬದ್ಯಾರು ಅವರು ಮಾತನಾಡಿ “ಯಕ್ಷಗಾನದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿರುವ ಪಟ್ಲ ಸತೀಶ್ ಶೆಟ್ಟಿಯವರು ಕಲಾವಿದರಿಗೊಂದು ಶಕ್ತಿಯಾಗಿದ್ದಾರೆ. ಯಕ್ಷಗಾನದಿಂದ ಜ್ಞಾನದ ವೃದ್ಧಿಯಾಗುತ್ತಿದ್ದು, ಮಕ್ಕಳಲ್ಲು ಯಕ್ಷಗಾನದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಪೋಷಕರು ಪ್ರೋತ್ಸಾಹಿಸಬೇಕು” ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಯಕ್ಷಗಾನದಲ್ಲು ಸಾಕಷ್ಟು ಪರಿವರ್ತನೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಅವರಣದಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಪಟ್ಲ ಫೌಂಡೇಶನ್‌ನ ಪುಂಜಾಲಕಟ್ಟೆ ಘಟಕ ಯಕ್ಷ ಶಿಕ್ಷಣದ ಮೂಲಕ ಮಕ್ಕಳನ್ನು ಯಕ್ಷಗಾನದಲ್ಲಿ ತೊಡಗಿಸಿರುವುದು ಶ್ಲಾಘನೀಯವಾಗಿದೆ. ಸರಕಾರಿ ಮತ್ತು ಖಾಸಗಿ ಸಹಿತ ಒಟ್ಟು 40 ಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷ…

Read More

ಮಂಗಳೂರು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 79ನೇ ವಾರ್ಷಿಕೋತ್ಸವವು ದೇಲಂಪಾಡಿಯ ಕೀರಿಕ್ಕಾಡು ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ದಿನಾಂಕ 23-12-2023ರಂದು ಜರಗಿತು. ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕರಾದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಎಡನೀರಿನ ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಅವರು ಮಾತನಾಡಿ “ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಗುರುಕುಲವನ್ನು ಸ್ಥಾಪಿಸಿ ಅನೇಕ ಮಂದಿ ಶಿಷ್ಯರನ್ನು ತಯಾರು ಮಾಡಿದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು ಓರ್ವ ಅನನ್ಯ ಸಾಧಕರು. ಹಳೆಯ ತಲೆಮಾರಿನ ಪ್ರಮುಖ ಅರ್ಥಧಾರಿಯಾಗಿ, ಹಲವು ಪ್ರಸಂಗಗಳ ಕರ್ತೃವಾಗಿ ಅವರ ಕೊಡುಗೆ ಅಪಾರ. ಅವರು ಹುಟ್ಟು ಹಾಕಿದ ಈ ಸಂಘ ಇಷ್ಟು ದೀರ್ಘಕಾಲ ಕಲಾ ಸೇವೆಯಲ್ಲಿ ನಿರತವಾಗುವುದಕ್ಕೆ ಅವರ ಸಂಕಲ್ಪ ಶಕ್ತಿಯೇ ಪ್ರಮುಖ ಕಾರಣ” ಎಂದರು. ಹಿರಿಯ ಕವಯಿತ್ರಿ ಸತ್ಯವತಿ ಯಸ್. ಭಟ್ ಕೊಳಚಪ್ಪು ಸಂಸ್ಮರಣ ಭಾಷಣ ಮಾಡಿ ಕೀರಿಕ್ಕಾಡು ಅವರ ಬದುಕು ಮತ್ತು ಸಾಧನೆಗಳನ್ನು…

Read More

ಕಾಸರಗೋಡು : ಕಾಸರಗೋಡಿನ ಕೊಲ್ಲಂಗಾನ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಆಯೋಜಿಸಿದ ಐದು ದಿನಗಳ ‘ಯುಕ್ಷ ಪಂಚಕ’ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 23-12-2023ರಂದು ಮಂಗಳೂರಿನ ಪಣಂಬೂರಿನಲ್ಲಿರುವ ಶ್ರೀ ನಂದನೇಶ್ವರ ದೇವಳದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಪಿ. ಅನಂತ ಐತಾಳರು ಮಾತನಾಡಿ “ಯಕ್ಷಗಾನಕ್ಕೆ ಭಾಷೆ ರಾಜ್ಯಗಳ ಬೇಧವಿಲ್ಲ. ಕಾಸರಗೋಡಿನ ಕೊಲ್ಲಂಗಾನವೂ ಮಲೆಯಾಳೀ ಪ್ರದೇಶದಲ್ಲಿದ್ದರೂ ನಮ್ಮ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನವನ್ನು ಶುದ್ಧ ಕನ್ನಡದಲ್ಲಿ ಹಾಗೂ ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತಾ ಜನರಂಜನೆ ಮಾಡುತ್ತಾ ಬರುತ್ತಿದೆ. ನಟನಾಪ್ರಿಯನಾದ ಶ್ರೀ ನಂದನೇಶ್ವರ ದೇವಳದಲ್ಲಿ ಕಳೆದ 7 ವರ್ಷಗಳಿಂದ ‘ಯಕ್ಷ ಪಂಚಕ’ವನ್ನು ನಡೆಯುತ್ತಾ ಬರುತ್ತಿದೆ. ನಾವು ನಮ್ಮ ಕಡೆಯಿಂದ ಪೂರ್ಣ ಬೆಂಬಲ ನೀಡುತ್ತಾ ಬರುತ್ತಿದ್ದೇವೆ. ಕಲೆ ಹಾಗೂ ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ.” ಎಂದು ಹೇಳಿದರು. ಹಿರಿಯ ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಯಕ್ಷಗಾನ ಕಲಾವಿದ ಶ್ರೀ ಶ್ರೀಧರ ಐತಾಳರು ದೇವಸ್ಥಾನದ ಪ್ರೋತ್ಸಾಹವನ್ನು ನೆನಪಿಸುತ್ತಾ ಮೇಳಕ್ಕೆ ಶುಭ ಹಾರೈಸಿದರು. ಕಲಾ ಪೋಷಕರಾದ ಶ್ರೀ ಗಣಪತಿ ಐತಾಳ್, ಶ್ರೀ ರಾಜೇಶ್…

Read More

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಘಟಕ ಮತ್ತು ಕೆ.ಪಿ.ಎಸ್. ಪ್ರೌಢಶಾಲಾ ವಿಭಾಗ ಮುನಿಯಾಲು ಇವರ ಸಹಕಾರದೊಂದಿಗೆ ‘ಕನ್ನಡ ಡಿಂಡಿಮ’ ಸರಣಿಯ 7ನೇ ಕಾರ್ಯಕ್ರಮ ದಿನಾಂಕ 22-12-2023ರಂದು ಕೆ.ಪಿ.ಎಸ್. ಮುನಿಯಾಲು ಇಲ್ಲಿ ನಡೆಯಿತು. ಕನ್ನಡ ಭುವನೇಶ್ವರಿಗೆ ಪುಷ್ಪನಮನ ಸಲ್ಲಿಸಿ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಂತೋಷ ಅಮೀನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುನಿಯಾಲು ಇಲ್ಲಿ ಉದ್ಯಮಿಗಳಾದ ದಿನೇಶ ಪೈ ಉದ್ಘಾಟಿಸಿ, ಮಾತನಾಡಿ “ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಕನ್ನಡ ಡಿಂಡಿಮದಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಪ್ರೀತಿಯನ್ನು ಬೆಳೆಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸ್ಪರ್ಧೆ ಮಾಡಿ ಗುರುತಿಸಿ ಅಭಿನಂದಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಶ್ಲಾಘನೀಯವಾದದ್ದು.” ಎಂದು ಹೇಳಿದರು. ಗೋಪಿನಾಥ ಭಟ್ ಮಾತನಾಡಿ “ಇದು ವಿದ್ಯಾರ್ಥಿಗಳಿಗೆ ಕನ್ನಡ ಡಿಂಡಿಮ ಸರಣಿ ಕಾರ್ಯಕ್ರಮದ ಮೂಲಕ ಭಾಷೆಯ ಬಗ್ಗೆ ಆಸಕ್ತಿ ಬೆಳೆಸುವ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಲ್ಲಿ ಹೆಚ್ಚು ನಡೆಯಬೇಕು. ವಿದ್ಯಾರ್ಥಿಗಳು ಮತ್ತು ನಾವು ಎಲ್ಲೇ…

Read More