Author: roovari

ಕೋಟ : ಬೆಂಗಳೂರಿನ ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆಯ 2023ರ ಸಾಲಿನ ‘ಕಾಳಿಂಗ ನಾವಡ ಪ್ರಶಸ್ತಿ’ ಪ್ರದಾನ ಸಮಾರಂಭವು ಕೋಟದ ಹಂದಟ್ಟು ಉರಾಳಕೇರಿಯ ವೇದಿಕೆಯಲ್ಲಿ ದಿನಾಂಕ 25-12-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ವೇದ ಬಹ್ಮಶ್ರೀ ಅನಂತ ಪದ್ಮನಾಭ ಐತಾಳ ಇವರು ಮಾತನಾಡಿ “ಯಕ್ಷಗಾನಕ್ಕೆ ಮೆರುಗು ನೀಡಿ, ಯಕ್ಷಗಾನದ ಪರಿಚಯವೂ ಇಲ್ಲದಂತೆ ಪ್ರದೇಶಗಳಲ್ಲಿಯೂ ಯಕ್ಷಗಾನದ ಮಹತ್ವವನ್ನು ತಮ್ಮ ಗಾಯನದ ಮೂಲಕ ಸಾರಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿದವರು ಕಾಳಿಂಗ ನಾವಡರು. ಕಾಳಿಂಗ ನಾವಡರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಹಿರಿಯ ಭಾಗವತ, ಪ್ರಸಂಗಕರ್ತ ಶ್ರೀ ಸುರೇಶ್‌ ರಾವ್‌ ಬಾರ್ಕೂರು ಅವರಿಗೆ ನೀಡುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಹೇಳಿದರು. ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಯಕ್ಷಗಾನ ಕಲಾವಿದರಾದ ಗೋವಿಂದ ಉರಾಳರು, ಗಣಪಯ್ಯ ಉರಾಳ, ಕಲಾಕದಂಬದ ಅಧ್ಯಕ್ಷ ಅಂಬರೀಶ್ ಭಟ್ ಹಾಗೂ ಕಲಾಕದಂಬದ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ ತೆಕ್ಕಟ್ಟೆ ಯಶಸ್ವಿ ಕಲಾಕೇಂದ್ರದ ಕಲಾವಿದರಿಂದ ‘ಗಾನ ವೈಭವ’ ಮತ್ತು…

Read More

‘ನಾಯಿ ನಾನು’ ನರೇಂದ್ರ ಎಸ್. ಗಂಗೊಳ್ಳಿಯವರ ಚೊಚ್ಚಲ ಕಥಾ ಸಂಕಲನ. ಇದರಲ್ಲಿ ಹದಿನೇಳು ಹೃದಯಸ್ಪರ್ಶಿ ಕಥೆಗಳಿವೆ. ಇವು ಜಗತ್ತಿನ ಸಮಸ್ತ ಜೀವಿಗಳಲ್ಲಿ ತಾನೇ ಎಲ್ಲಕ್ಕಿಂತ ಶ್ರೇಷ್ಠನೆಂದು ಬೀಗುವ ಮನುಷ್ಯನ ಹುಳುಕುಗಳನ್ನೂ, ಸ್ವಾರ್ಥ-ವಂಚನೆಗಳನ್ನೂ, ಮೂರ್ಖ ಆಲೋಚನೆಗಳನ್ನೂ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸುತ್ತವೆ. ಆದ್ದರಿಂದ ವಿಷಾದವೇ ಈ ಕಥೆಗಳ ಸ್ಥಾಯೀಭಾವ. ಹೊರಗಿನಿಂದ ಸಭ್ಯನಾಗಿ ಕಾಣುವ ಒಬ್ಬ ವ್ಯಕ್ತಿಯಲ್ಲೂ ವಿಕೃತ ಕಾಮದ ಬೇರುಗಳು ಆಳಕ್ಕಿಳಿದಿರುತ್ತವೆ ಎಂಬುದಕ್ಕೆ ನಿದರ್ಶನವಾಗಿ ನಿಲ್ಲುವ ‘ಒಳ್ಳೆಯವನು’ ಎಂಬ ಕಥೆ ಇಂದಿನ ಸಮಾಜದಲ್ಲಿ ಪುಟ್ಟ ಹುಡುಗಿಯರ ಮೇಲೂ ಅತ್ಯಾಚಾರ ನಡೆಸುವ ಕ್ರೂರ ಪುರುಷರನ್ನು ಸ್ವವಿಮರ್ಶೆಗೊಳಪಡಿಸುತ್ತದೆ. ದೇವದಾಸಿ ಪದ್ಧತಿಯ ಪುರುಷ ಕ್ರೌರ್ಯವನ್ನು ವಿರೋಧಿಸಿ ಪ್ರತಿಭಟನಾ ಪ್ರದರ್ಶನ ನಡೆಸ ಹೊರಟ ವ್ಯಕ್ತಿ ಆಂತರ್ಯದಲ್ಲಿ ಇನ್ನೂ ಬದಲಾಗದಿರುವ ಗೋಸುಂಬೆಯಾಗಿರುವುದನ್ನು ‘ಒಂದು ದೇವಿಯ ಕತೆ ‘ ತೆರೆದಿಡುತ್ತದೆ. ‘ಒಂದು ಚಪ್ಪಲಿಯ ಕತೆ ‘ ಆನ್ ಲೈನ್ ಖರೀದಿಯ ಥಳಕು ಬಳಕುಗಳ ಹಿಂದಿನ ಮೋಸದ ಕಥೆಯನ್ನು ಬಿತ್ತರಿಸುತ್ತದೆ. ಮಿತ್ರನಿಂದ ಪ್ರೇರಿತನಾಗಿ ಆನ್ ಲೈನ್ ಮೂಲಕ ದುಬಾರಿ ಹಣ ತೆತ್ತು ಆಕರ್ಷಕ ಚಪ್ಪಲಿ…

Read More

ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಭಜನಾ ಸಂಗಮ’ ಕಾರ್ಯಕ್ರಮವು ದಿನಾಂಕ 01-01-2024ರಂದು ಸಂಪನ್ನಗೊಂಡಿತು. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಭಕ್ತರ ಆಧ್ಯಾತ್ಮಿಕ ಮನೋಭಿಲಾಶೆಗಳನ್ನು ಈಡೇರಿಸಿದ ಕಲ್ಪತರು ದಿನದಂದು, ಕಲ್ಪತರು ಉತ್ಸವದ ಪ್ರಯುಕ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಂಗವಾಗಿ ಸಂಜೆ 4-30ಕ್ಕೆ ಸರಿಯಾಗಿ ದೀನ್‌ರಾಜ್ ಕಳವಾರು ಅವರ ನೇತೃತ್ವದಲ್ಲಿ 400ಕ್ಕೂ ಹೆಚ್ಚಿನ ಮಕ್ಕಳಿಂದ ಮಂಗಳಾದೇವಿ ವೃತ್ತದಿಂದ ರಾಮಕೃಷ್ಣ ಮಠದವರೆಗೆ ಕುಣಿತ ಭಜನೆಯೊಂದಿಗೆ ಭವ್ಯ ಭಜನಾ ಶೋಭಾಯಾತ್ರೆ ನಡೆಯಿತು. ಈ ಶೋಭಾಯಾತ್ರೆಯಲ್ಲಿ 500ಕ್ಕೂ ಮಿಕ್ಕ ಭಕ್ತರು ಹಾಗೂ ವಿವಿಧ ಭಜನಾ ಮಂಡಳಿಗಳ ಸದಸ್ಯರು ಪಾಲ್ಗೊಂಡಿದ್ದರು. ಮಂಗಳಾದೇವಿ ವೃತ್ತದಿಂದ ಆರಂಭಗೊಂಡ ಭಜನಾ ಶೋಭಾಯಾತ್ರೆಯು ಮಂಗಳಾದೇವಿ ರಥಬೀದಿಯ ಮೂಲಕ ಸಾಗಿ ಮಂಗಳಾದೇವಿ ದೇವಸ್ಥಾನದ ಮುಂಭಾಗವಾಗಿ ರಾಮಕೃಷ್ಣ ಮಠವನ್ನು ಪ್ರವೇಶಿಸಿತು. ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದರ ಪ್ರತಿಮೆಯ ಮುಂಭಾಗದಲ್ಲಿ ಮಕ್ಕಳು ಕುಣಿತ ಭಜನೆಯ ವಿಶೇಷ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಹಾಗೂ ಆಹ್ವಾನಿತ ಅತಿಥಿಗಳು ಮಕ್ಕಳೊಂದಿಗೆ…

Read More

ಕಾಸರಗೋಡು : ಕಾಸರಗೋಡು ನುಳ್ಳಿಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯವು ರಾಮಕ್ಷತ್ರಿಯ ಸಮಾಜದ ಸಾಹಿತಿಗಳ ತಲಾ ಒಂದೊಂದು ಕವಿತೆಗಳನ್ನು ಲೇಖಕರ ಭಾವಚಿತ್ರ, ವಿಳಾಸದೊಂದಿಗೆ ಆಯ್ದ 51 ಮಂದಿಯ ಕೃತಿ ರೂಪಕ್ಕಿಲಳಿಸಲು ಮುಂದಾಗಿದೆ. ಇದರ ಜೊತೆಗೆ ‘ರಾಮಕ್ಷತ್ರಿಯ ಕವಿತಾ ಕುಂಚ ಕವನ ಸಂಕಲನ’ಕ್ಕೆ ರಾಮಕ್ಷತ್ರಿಯ ಸಮಾಜದ ಉದಯೋನ್ಮುಖ ಕವಿ ಕವಿಯತ್ರಿಯರು ತಲಾ ಮೂರು ಕವಿತೆ ಅಥವಾ ಚುಟುಕುಗಳನ್ನು ಭಾವಚಿತ್ರ, ಮೊಬೈಲ್ ನಂಬರ್ ಮತ್ತು ವಿಳಾಸದೊಂದಿಗೆ ಈ ಕೆಳಗಿನ ವಾಟ್ಸಪ್ ಸಂಖ್ಯೆಗೆ ಫೆಬ್ರವರಿ ಒಂದರ ಒಳಗಾಗಿ ಕಳುಹಿಸಿಕೊಡಬಹುದಾಗಿದೆ. ವಾಮನ್ ರಾವ್ ಬೇಕಲ್…..9633073400, ಶ್ರೀಮತಿ ರೇಖಾ ಸುದೇಶ್ ರಾವ್………948197862, ಪ್ರದೀಪ್ ಬೇಕಲ್ 9995232032

Read More

ಬೆಂಗಳೂರು : ಖಿದ್ಮಾ ಫೌಂಡೇಶನ್ ಕರ್ನಾಟಕ ಮತ್ತು ವಿಜಯ ಕಾಲೇಜು ಜಯನಗರ ಬೆಂಗಳೂರು ಇವರ ಸಹಯೋಗದಲ್ಲಿ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ‘ಖಿದ್ಮಾ ಕಾವ್ಯಾಮೃತ’ ಕಾರ್ಯಕ್ರಮವು ದಿನಾಂಕ 07-01-2024ರ ಭಾನುವಾರದಂದು ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನ ಹಸಿರು ಭವನದಲ್ಲಿ ನಡೆಯಿತು. ಶ್ರೀ ಯೂಸಫ್ ಹೆಚ್.ಬಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿಜಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಿ.ಆರ್. ಸುಧಾ ಉದ್ಘಾಟಿಸಿದರು. ಶ್ರೀಮತಿ ಅಶ್ವಿನಿ ಎಸ್. ಅಂಗಡಿ ಕವಿಗೋಷ್ಠಿಯ ಅಧ್ಯಕ್ಷತೆ ಮತ್ತು ಡಾ. ಬಿ.ಎನ್ ಸುರೇಶ್ ಬಾಬು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಕವಿಗಳು ಸ್ವರಚಿತ ಕವನವನ್ನು ವಾಚಿಸಿದರು. ಕರ್ನಾಟಕ ಸುವರ್ಣ ಮಹೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತರಷ್ಟು ಸಾಧಕರಿಗೆ ‘ಖಿದ್ಮಾ ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ. ಎಲ್.ಕೆ. ಶ್ರೀವತ್ಸ, ಖಿದ್ಮಾ ಫೌಂಡೇಶನ್ನಿನ ಅಧ್ಯಕ್ಷ ಹಾಶಿಂ ಬನ್ನೂರು, ಶ್ರೀಮತಿ ಕಮಲಾಕ್ಷಿ…

Read More

ಮಂಗಳೂರು : ಬರಹಗಾರ್ತಿ ಅಕ್ಷತಾ ರಾಜ್ ಪೆರ್ಲ ಅವರ ‘ಮಂದಾರ ಮಲಕ’ ಮತ್ತು ಬರಹಗಾರ ಬಾಲಕೃಷ್ಣ ಕೊಡವೂರು ಅವರ ‘ಮಾಯದಪ್ಪೆ ಮಾಯಕಂದಾಲ್’ ತುಳು ನಾಟಕ ಕೃತಿಗಳ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 05-01-2024ರ ಶುಕ್ರವಾರದಂದು ಮಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರು “ಗಂಭೀರ ನಾಟಕಗಳತ್ತ ಪ್ರೇಕ್ಷಕರು ಒಲವು ತೋರುತ್ತಿರುವ ಸಂದರ್ಭದಲ್ಲಿ ಇವೆರಡು ಕೃತಿಗಳು ಬಿಡುಗಡೆಯಾಗಿರುವುದು ಸಕಾಲಿಕವಾಗಿದೆ. ಕೃತಿಗಳ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಇವು ರಂಗಕ್ಕೆ ಇಳಿಯಲಿ” ಎಂದು ಆಶಿಸಿದರು. ‘ಮಂದಾರ ಮಲಕ’ ಕೃತಿ ಪರಿಚಯಿಸಿದ ಪ್ರೊ. ಮೀನಾಕ್ಷಿ ರಾಮಚಂದ್ರ ಅವರು ಮಾತನಾಡಿ “ತುಳುವಿನ ವಾಲ್ಮೀಕಿ ಎಂದೇ ಖ್ಯಾತರಾಗಿರುವ ಮಂದಾರ ಕೇಶವ ಭಟ್ ಅವರ 446 ಪುಟಗಳ ‘ಮಂದಾರ ರಾಮಾಯಣ’ ಕೃತಿಯನ್ನು ಅಕ್ಷತಾ ರಾಜ್ ಅವರು ನಾಟಕ ರೂಪಕ್ಕೆ ಇಳಿಸಿದ್ದಾರೆ. ಮೂಲ ರಾಮಾಯಣಕ್ಕೆ ಕುಂದುಬಾರದಂತೆ ನಾಟಕ ನಿರೂಪಣೆ ಮಾಡಲಾಗಿದೆ. ನಾಟಕದಲ್ಲಿ ಸ್ತ್ರೀ ಪಾತ್ರಗಳು ಹೆಚ್ಚು ಪ್ರಭಾವ ಬೀರಿವೆ. ಮಂಥರೆ, ಶೂರ್ಪನಖಿ, ಶಬರಿಯಂತಹ ಸ್ತ್ರೀ ಪಾತ್ರಗಳ…

Read More

ಕಾಸರಗೋಡು : ಮಾಯ್ಪಾಡಿಯ ಡಯಟ್ ವಿದ್ಯಾಸಂಸ್ಥೆಯ TTC ವಿದ್ಯಾರ್ಥಿಗಳಿಗೆ ರಂಗಚಿನ್ನಾರಿಯ ಸಂಗೀತ ಘಟಕ ಸ್ವರಚಿನ್ನಾರಿಯು ಏರ್ಪಡಿಸಿದ ಒಂದು ದಿನದ ಕನ್ನಡ ನಾಡಗೀತೆ -ಭಾವಗೀತೆಗಳ ಕಲಿಕಾ ಶಿಬಿರ ‘ಕನ್ನಡ ಧ್ವನಿ’ ದಿನಾಂಕ 06-01-2024ರ ಶನಿವಾರದಂದು ನಡೆಯಿತು. ಕಾರ್ಯಕ್ರಮವನ್ನು ಡಯಟ್ ಮಾಯ್ಪಾಡಿಯ ಪ್ರಾoಶುಪಾಲರು ಶ್ರೀ ಡಾ ಕೆ ರಘುರಾಮ್ ಭಟ್ ಉಧ್ಘಾಟಿಸಿ ಮಾತನಾಡುತ್ತಾ “ಕಾಸರಗೋಡಿನ ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಗೌರವಿಸಿ ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಇಂತಹ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯ ಮತ್ತು ರಂಗಚಿನ್ನಾರಿಯು ಈ ಕೆಲಸವನ್ನು ಮಾಡುತ್ತಿರುವುದು ಪ್ರಶಂಸನೀಯ. ಮುಂದೆಯೂ ವಿವಿಧ ಕನ್ನಡ ಕಾರ್ಯಕ್ರಮಗಳಿಗೆ ಸಂಸ್ಥೆ ಮುಕ್ತ ಬೆಂಬಲ ನೀಡಲಿದೆ.” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಂಗಚಿನ್ನಾರಿ ನಿರ್ದೇಶಕರಲ್ಲಿ ಓರ್ವರಾದ ಶ್ರೀ ಕೆ ಸತೀಶ್ಚಂದ್ರ ಭಂಡಾರಿ ಮಾತನಾಡಿ ರಂಗಚಿನ್ನಾರಿಯ ಹುಟ್ಟಿನ ಉದ್ದೇಶ ಹಾಗೂ ಇದುವರೆಗೆ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಶ್ರಮವನ್ನು ನೆನಪಿಸುತ್ತಾ “ವಿದ್ಯಾರ್ಥಿಗಳು ಭಾಷಾಭಿಮಾನ ಮತ್ತು ವಿದ್ಯೆ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯಿರಿ.” ಎಂದು ಕಿವಿಮಾತನ್ನು ಹೇಳಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ…

Read More

ಖ್ಯಾತ ಹಿರಿಯ ನಾಟ್ಯಗುರು ರೇವತಿ ನರಸಿಂಹನ್ ಅವರ ಬಳಿ ಬದ್ಧತೆಯಿಂದ ನಾಟ್ಯಾಭ್ಯಾಸ ಮಾಡುತ್ತಿರುವ ಬಹುಮುಖ ಪ್ರತಿಭೆ ಧನ್ಯ ಕಶ್ಯಪ್. ಶ್ರೀ ಮುರಳೀಧರ್ ಮತ್ತು ವೀಣಾ ಅವರ ಪುತ್ರಿಯಾದ ಧನ್ಯ, ಕಳೆದ 13 ವರ್ಷಗಳಿಂದ ನಿಷ್ಠೆಯಿಂದ ನೃತ್ಯ ಕಲಿಯುತ್ತಿದ್ದು, ನಾಡಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಗಳಿಸಿದ್ದಾಳೆ. ನೃತ್ಯದ ವಿವಿಧ ಆಯಾಮಗಳನ್ನು ಅರಿತಿರುವ ಧನ್ಯ 13-01-2024ರ ಶನಿವಾರದಂದು ಸಂಜೆ 5.30 ಗಂಟೆಗೆ ಜಯನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ವಿದ್ಯುಕ್ತವಾಗಿ ತನ್ನ ‘ರಂಗಪ್ರವೇಶ’ವನ್ನು ನೆರವೇರಿಸಿಕೊಳ್ಳಲಿದ್ದಾಳೆ. ಅವಳ ಮೋಹಕ ನೃತ್ಯವನ್ನುವೀಕ್ಷಿಸಲು ಕಲಾರಸಿಕರೆಲ್ಲರಿಗೂ ಆದರದ ಸ್ವಾಗತ. ಧನ್ಯಳಿಗೆ ಬಾಲ್ಯದಿಂದಲೂ ನೃತ್ಯಾಸಕ್ತಿ. ಸಾಂಸ್ಕೃತಿಕ ಪರಿಸರದಲ್ಲಿ ಹುಟ್ಟಿ-ಬೆಳೆದು ಬಂದ ಅವಳ ಕಲಾಪೋಷಣೆಗೆ ನೀರೆರೆದವರು ಅವಳ ತಂದೆ-ತಾಯಿ. ಏಕಾಗ್ರ ನಿಷ್ಠೆಯಿಂದ ನೃತ್ಯದ ಕಲಿಕೆಯಲ್ಲಿ ಅಪರಿಮಿತ ಶ್ರದ್ಧೆ ತೋರಿದ ಧನ್ಯ, ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ‘ಡಿಸ್ಟಿಂಕ್ಷನ್’ ಗಳಿಸಿದ್ದಲ್ಲದೆ, ಸಂಗೀತ ವಿದುಷಿ ವಾಣಿ ಕಿರಣ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಜ್ಯೂನಿಯರ್ ಪರೀಕ್ಷೆಯಲ್ಲೂ ಶ್ರೇಷ್ಟಾಂಕಗಳನ್ನು ಗಳಿಸಿದ ಹೆಮ್ಮೆ ಅವಳದು. ‘ವಿದ್ವತ್’…

Read More

ಕೋಟ : ‘ಶಿವರಾಮ ಕಾರಂತ ಥೀಂ ಪಾರ್ಕ್’ ಕೋಟದಲ್ಲಿ ಗೌರವ ಗಣ್ಯರನೇಕರ ಉಪಸ್ಥಿತಿಯೊಂದಿಗೆ ದಿನಾಂಕ 31-12-2023ರಂದು ‘ಡಿ ಫಾರ್ ಡೈ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಕುಮಾರಿ ಕಾವ್ಯ ಹಂದೆ ಎಚ್. ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕಲಾ ಪ್ರತಿಭೆ ಸಂಜೀವ ಕದ್ರಿಕಟ್ಟು ಇವರ ಸಂಸ್ಮರಣಾ ಕಾರ್ಯಕ್ರಮವೂ ಜರುಗಿತು. “ಒಂದರ್ಥದಲ್ಲಿ ಕಳೆದ ವರ್ಷಗಳ ಕೊಳೆಗಳನ್ನು ಕಿತ್ತೊಗೆಯುವ ಸಂದೇಶವನ್ನು ಸಾರಿದ ಡಿಸೈನರ್ ವಿಜಿತ್ ಇವರು ರಚಿಸಿ, ನಿರ್ದೇಶಿಸಿದ ‘ಡಿ ಫಾರ್ ಡೈ’ ಕಿರುಚಿತ್ರ ಹೊಸ ವರ್ಷಕ್ಕೆ ಹೊಸ ಆಯಾಮಗಳಾಗಿ ಹೊಸೆಯಲಿ. ಕಿರಿಯ ನಿರ್ದೇಶಕನಾಗಿ ಕಿರಿಯ ಕಲಾವಿದರನ್ನೊಡಗೂಡಿಕೊಂಡು ಕಿರಿಯವಳಾದ ನನ್ನಿಂದಲೇ ಉದ್ಘಾಟಿಸಿ, ಹಿರಿತನದ ಜವಾಬ್ದಾರಿಯನ್ನು ವಿಜಿತ್ ತಂಡ ಮೆರೆದಿದೆ” ಎಂದು ಕಿರಿಯ ರಂಗ ನಟಿ ಕು. ಕಾವ್ಯ ಹಂದೆ ಎಚ್. ಕಿರುಚಿತ್ರವನ್ನು ಉದ್ಘಾಟಿಸಿ ಮಾತನ್ನಾಡಿದರು. “ಹಲವಾರು ವರ್ಷಗಳ ಹಿಂದಿನಿಂದಲೂ ನಾಟಕ ರಚಿಸಿ, ನಿರ್ದೇಶಿಸಿ, ಅಭಿನಯಿಸುವ ಮೂಲಕ ಕಲಾ ಪ್ರಪಂಚಕ್ಕೆ ಕಾಲಿರಿಸಿದ ಸಂಜೀವ ಕದ್ರಿಕಟ್ಟು, ವ್ಯಾವಹಾರಿಕವಾಗಿ ಬಹು ಚಟುವಟಿಕೆಯಲ್ಲಿ ನಿರತನಾದ ಸಂದರ್ಭದಲ್ಲಿಯೂ…

Read More

ಮೈಸೂರು : ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನದ ಪ್ರಯುಕ್ತ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶ್ರೀ ಕೊಟ್ಟೂರು ಬಸವೇಶ್ವರ ಸೇವಾ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಮತ್ತು ಸ್ವರ್ಣಭೂಮಿ ಫೌಂಡೇಷನ್ ಕರ್ನಾಟಕ ಇದರ ಸಹಕಾರದಲ್ಲಿ ‘ವಿಶ್ವಮಾನವ ಕುವೆಂಪು ಜನ್ಮದಿನಾಚರಣೆ’ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ದಿನಾಂಕ 29-12-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಕಾಸರಗೋಡು ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ರೂವಾರಿಗಳಾದ ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ದಂಪತಿಗಳಿಗೆ ‘ಕುವೆಂಪು ವಿಶ್ವಮಾನವ ಕನ್ನಡರತ್ನ ಪ್ರಶಸ್ತಿ’ಯನ್ನು ಆದರ್ಶ ಕನ್ನಡ ದಂಪತಿಗಳು ಶೀರ್ಷಿಕೆಯಲ್ಲಿ ನೀಡಿ ಗೌರವಿಸಲಾಯಿತು. ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದ ಗೌಡ, ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್, ಪಂಪ ಪ್ರಶಸ್ತಿ ಪುರಸೃತ ವಿದ್ವಾಂಸ ಡಾ. ಸಿ.ಪಿ.ಕೃಷ್ಣ ಕುಮಾರ್ (ಸಿ.ಪಿ.ಕೆ), ಕಾರ್ಯಕ್ರಮದ ರೂವಾರಿಯಾದ ಟಿ. ಶಿವಕುಮಾರ್ ಕೋಲಾರ, ಟಿ. ಸತೀಶ್ ಜವರೇ ಗೌಡ,…

Read More