Author: roovari

ಬೆಂಗಳೂರು : ದ್ವಾರನ ಕುಂಟೆ ಪಾತಣ್ಣ ಪ್ರತಿಷ್ಠಾನವು ರಾಜ್ಯಮಟ್ಟದ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗಾಗಿ ಕಾದಂಬರಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ರೂಪಾಯಿ 25 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಕಾದಂಬರಿಗಳು 2023ರಲ್ಲಿ ಪ್ರಕಟವಾಗಿರಬೇಕು. ಮೂರು ಪ್ರತಿಗಳನ್ನು ದಿನಾಂಕ 30-01-2024ರ ಒಳಗಾಗಿ ಕಳುಹಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ. ಹನೀಫ್ ತಿಳಿಸಿದ್ದಾರೆ. ವಿಳಾಸ: ಅಧ್ಯಕ್ಷರು, ದ್ವಾರನ ಕುಂಟೆ ಪಾತಣ್ಣ ಪ್ರತಿಷ್ಠಾನ, ನಂ. 118, ‘ಹೊಂಬೆಳಕು’, 5ನೇ ಕ್ರಾಸ್, 1ನೇ ಬ್ಲಾಕ್, ಎಚ್.ಎಂ.ಟಿ. ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು -560073. ಹೆಚ್ಚಿನ ಮಾಹಿತಿಗಾಗಿ 9686073837 /7760350244

Read More

ಮಂಗಳೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಯುನಿಟಿ ಮಿನಿ ಹಾಲ್ ಇಲ್ಲಿ ‘ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ಮತ್ತು ಕೃತಿ ಲೋಕಾರ್ಪಣೆ’ ಸಮಾರಂಭವು ದಿನಾಂಕ 13-01-2024ರಂದು ಮುಂಜಾನೆ 9-00 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಬೆಂಗಳೂರಿನ ಕೇ.ಕ.ಸಾ.ವೇ. ಸ್ಥಾಪಕಾಧ್ಯಕ್ಷರಾದ ಶ್ರೀ ಕೊಟ್ರೇಶ ಉಪ್ಪಾರ ಇವರು ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ವೇದಿಕೆ ಅಧ್ಯಕ್ಷರಾದ ಡಾ. ಸುರೇಶ ನೆಗಳಗುಳಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರತ್ನಾ ಭಟ್, ಹಾ.ಮ. ಸತೀಶ, ಡಾ. ಸುರೇಶ್ ನೆಗಳಗುಳಿ ಇವರ ‘ಕಡಲಹನಿ ಒಡಲ ಧ್ವನಿ’ ಎಂಬ ಗಜಲ್ ಸಂಕಲನವನ್ನು ಮಂಗಳೂರಿನ ಖ್ಯಾತ ಗಜಲ್ ಕವಿ, ನಟ, ಶ್ರೀ ಮಹಮ್ಮದ್ ಬಡ್ಡೂರು ಲೋಕಾರ್ಪಣಾ ಮಾಡಲಿದ್ದಾರೆ. ಪುತ್ತೂರಿನ ವಿಶ್ರಾಂತ ಮುಖ್ಯೋಪಾಧ್ಯಾಯಿನಿ, ಸಾಹಿತಿ, ಯಕ್ಷಗಾನ ಪಟು ಶ್ರೀಮತಿ ರತ್ನಾ ಕೆ. ಭಟ್ ತಲಂಜೇರಿ ಇವರು ಸಾಹಿತ್ಯ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದು, ಖ್ಯಾತ ವ್ಯಂಗ್ಯ ಚಿತ್ರಗಾರರು ಹಾಗೂ ನಗೆ ಚುಟುಕು ಕವಿಗಳಾದ…

Read More

ಮಂಗಳೂರು : ಕಳೆದ 12 ವರ್ಷಗಳಿಂದ ಶಿಕ್ಷಣ ಕಲೆ ಸಾಹಿತ್ಯ ಸಂಸ್ಕೃತಿ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಅರೆಹೊಳೆ ಪ್ರತಿಷ್ಠಾನ, ಕಳೆದ ಒಂಬತ್ತು ವರ್ಷಗಳಿಂದ ಮಂಗಳೂರಿನಲ್ಲಿ ನೀನಾಸಂ ತಿರುಗಾಟದ ನಾಟಕಗಳನ್ನು ಆಯೋಜಿಸುತ್ತಾ ಬಂದಿದೆ. ಈ ವರ್ಷ ಕಲಾಭಿ (ರಿ.) ಹಾಗೂ ಕೆನರಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ರಂಗ ಸಂಗಾತಿ ಹಾಗೂ ರೂವಾರಿ ಸಹಕಾರದಲ್ಲಿ ಎರಡು ದಿನಗಳ ನಾಟಕೋತ್ಸವವನ್ನು ಹಮ್ಮಿಕೊಂಡಿದೆ. ದಿನಾಂಕ 12-01-2024 ಮತ್ತು 13-01-2024ರಂದು, ಪ್ರತೀ ಸಂಜೆ 7.00 ಗಂಟೆಗೆ ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಈ ನಾಟಕೋತ್ಸವದ ನಾಟಕಗಳು ಪ್ರದರ್ಶನಗೊಳ್ಳಲಿದೆ. ದಿನಾಂಕ 12-01-2024ರಂದು ಡಾ. ಚಂದ್ರಶೇಖರ ಕಂಬಾರ ಅವರ ರಚಿಸಿದ, ಕೆ.ಜಿ. ಕೃಷ್ಣಮೂರ್ತಿಯವರ ನಿರ್ದೇಶನದ ‘ಹುಲಿಯ ನೆರಳು’ ಮತ್ತು ದಿನಾಂಕ 13-01-2024ರಂದು ಲೂಯಿ ನ ಕೋಶಿ ಅವರ ರಚನೆಯ ಶ್ವೇತಾರಾಣಿ ಎಚ್.ಕೆ. ಇವರ ನಿರ್ದೇಶನದ ‘ಆ ಲಯ ಈ ಲಯ’ ನಾಟಕ ಪ್ರದರ್ಶನಗೊಳ್ಳಲಿದೆ. ‘ಹುಲಿಯ ನೆರಳು’ ಹುಲಿ ಬೇಟೆಯೊಂದರ ಹೆಳೆಯಲ್ಲಿ ಪ್ರಾರಂಭವಾಗುವ ಈ ನಾಟಕ ಕಣ್ಣಿಗೆ ಅಡ್ಡವಾಗಿರುವ ತೋರಿಕೆಯ ಪರದೆಯನ್ನು…

Read More

ಉಡುಪಿ : ದಿನಾಂಕ 06-01-2024 ರಂದು ನಿಧನರಾದ ತುಳುನಾಡ ಹಿರಿಯ ಸಾಹಿತಿ, ವಿದ್ವಾಂಸ ಡಾ. ಅಮೃತ ಸೋಮೇಶ್ವರರ ನಿಧನದ ಬಗ್ಗೆ ಸಂತಾಪ ಸಭೆ ದಿನಾಂಕ 08-01-2024ರಂದು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ನಡೆಯಿತು. ಸಭೆಯಲ್ಲಿ ಅಮೃತ ಸೋಮೇಶ್ವರ ಅವರ ವಿದ್ಯಾರ್ಥಿಯಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಮಾತನಾಡಿ “ತುಳುನಾಡ ಹಿರಿಯ ಸಾಹಿತಿ, ವಿದ್ವಾಂಸ ಡಾ. ಅಮೃತ ಸೋಮೇಶ್ವರ ಅವರ ನಿಧನ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟುಮಾಡಿದೆ. ಸೋಮೇಶ್ವರ ಅವರು ಕಾದಂಬರಿಕಾರರಾಗಿ, ಅನುವಾದಕರಾಗಿ, ಕಥಾಸಂಕಲನ, ಕವನ ಸಂಕಲನ, ರೇಡಿಯೋ ರೂಪಕ, ಧ್ವನಿಸುರುಳಿಗೆ ಸಾಹಿತ್ಯ, ನಾಟಕ, ಯಕ್ಷಗಾನ ಪ್ರಸಂಗಗಳು, ಯಕ್ಷಗಾನ ಕೃತಿಗಳು, ಗಾದೆಗಳು, ಶಬ್ದಕೋಶ, ವಚನ ಸಾಹಿತ್ಯ, ಪಾಡ್ದನ ಸಂಗ್ರಹ ಹೀಗೆ ಹತ್ತು ಹಲವು ನೆಲೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದವರು. ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲವೆಂದು ಹೇಳಬಹುದಾದಷ್ಟು ವಿಶಾಲವಾದ ಕಾರ್ಯಕ್ಷೇತ್ರ ಅವರದ್ದಾಗಿತ್ತು.” ಎಂದರು. ಪ್ರೊ. ಮುರಳೀಧರ ಉಪಾಧ್ಯಾಯರು ಮಾತನಾಡಿ ಸೋಮೇಶ್ವರ ಅವರು ಪ್ರಾಧ್ಯಾಪಕರಾಗಿದ್ದಾಗ ಹೇಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದರು ಮತ್ತು ಅವರ…

Read More

ಕೋಟ : ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪರ ನೆನಪಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ಕೊಡಮಾಡುವ 2023-24ರ ಸಾಲಿನ ಉಡುಪ ಪ್ರಶಸ್ತಿಗೆ ಕೋಟ ಅಮೃತೇಶ್ವರಿ ಮೇಳದ ಯಕ್ಷಗಾನ ಕಲಾವಿದ, ಮಟ್ಪಾಡಿ ತಿಟ್ಟಿನ ಕೋಟ ಸುರೇಶ್ ಬಂಗೇರ ಭಾಜನರಾಗಿದ್ದಾರೆ. ಯಕ್ಷಗಾನದ ದಂತಕಥೆ ಶಿರಿಯಾರ ಮಂಜು ನಾಯ್ಕರ ಮಾತುಗಾರಿಕೆ, ಗುರು ವೀರಭದ್ರ ನಾಯ್ಕರ ಹೆಜ್ಜೆಗಾರಿಕೆ, ಮೊಳಹಳ್ಳಿ ಹಿರಿಯ ನಾಯ್ಕ್ ಇವರ ರಂಗತಂತ್ರಗಳನ್ನು ಮೈಗೂಡಿಸಿಕೊಂಡು ಪ್ರಸಿದ್ದ ಪುರುಷ ವೇಷಧಾರಿಯಾಗಿ ಗುರುತಿಸಿಕೊಂಡು ಇದೀಗ ಯಕ್ಷರಂಗದಲ್ಲಿ ಎರಡನೆ ವೇಷದಲ್ಲಿ ಮಿಂಚುತ್ತಿರುವ ಸುರೇಶ್‌ ಇವರು ಸುಧನ್ವ, ಪುಷ್ಕಳ, ಶುಭ್ರಾಂಗ, ಮಾರ್ತಾಂಡತೇಜ, ಅರ್ಜುನ, ಕೃಷ್ಣ, ತಾಮ್ರಧ್ವಜ, ಪರಶುರಾಮ ಮೊದಲಾದ ಪಾತ್ರಗಳಲ್ಲದೆ ಹೊಸ ಪ್ರಸಂಗಗಳಲ್ಲೂ ಸೈ ಎನಿಸಿ, ಸೌಕೂರು, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಅಮೃತೇಶ್ವರಿ ಮೊದಲಾದ ಮೇಳಗಳಲ್ಲಿ ಸುಮಾರು 36 ವರ್ಷಗಳ ಕಾಲ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ದಿನಾಂಕ 11-02-2024ರ ಆದಿತ್ಯವಾರ ಕೋಟದ ಪಟೇಲರ ಮನೆಯ ಆವರಣದಲ್ಲಿ ಗಣ್ಯರ ಸಮಕ್ಷಮದಲ್ಲಿ ಹತ್ತು…

Read More

ಉಡುಪಿ : ಹಿರಿಯ ಜಾನಪದ ವಿದ್ವಾಂಸ ಸಮಾಜ ಸೇವಕ ಬನ್ನಂಜೆ ಬಾಬು ಅಮೀನ್ ಅವರು 80ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಬನ್ನಂಜೆ ಬಾಬು ಅಮೀನ್ -80 ಅಭಿನಂದನಾ ಸಮಿತಿ ವತಿಯಿಂದ ಉಡುಪಿ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಹಮ್ಮಿಕೊಂಡ ‘ಸಿರಿತುಪ್ಪ’ ಅಭಿನಂದನಾ ಕಾರ್ಯಕ್ರಮವು ದಿನಾಂಕ 17-12-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಮಾತನಾಡಿ “ಸಂಶೋಧಕರು, ಮಾರ್ಗದರ್ಶಕರ ಸಹಾಯ ಸಹಕಾರವಿಲ್ಲದೆ ಬನ್ನಂಜೆ ಬಾಬು ಅಮೀನರು ಜಾನಪದ, ಸಾಂಸ್ಕೃತಿಕ ಸಾಹಿತ್ಯ ಲೋಕದಲ್ಲಿ ಮಾಡಿರುವ ಅಧ್ಯಯನದಿಂದ ನೀಡಿದ ಕೊಡುಗೆ ಅತ್ಯಮೂಲ್ಯವಾದುದು. ಅವರು ಸಂಗ್ರಹ ಮಾಡಿಕೊಟ್ಟಿರುವ ಆಕರ ಸಾಮಗ್ರಿಗೆ ಬೆಲೆ ಕಟ್ಟಲು ಅಸಾಧ್ಯ, ಜ್ಞಾನ ಭಂಡಾರವೆನಿಸಿದ ಅವರು ‘ಜಾನಪದ ಅಧ್ಯಯನ ವೀರ” ಎಂದು ಅಭಿಪ್ರಾಯಪಟ್ಟರು. “ಜಾನಪದ ಕಲಾವಿದರೇ ಜಾನಪದ ಬದುಕಿನ ನಿಜವಾದ ಒಡೆಯರು, ಅಮೀನರು ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯವನ್ನು ಮಾಡುವಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಪುಸ್ತಕ ರೂಪದಲ್ಲಿ ಸಾಧನೆ ಮಾಡಿ…

Read More

‘ನೆಲ್ಚಿ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿರುವ ಮಲ್ಲಂಡ ಶೃತಿಯ ಮುದ್ದಪ್ಪ ಇವರು ಮೂಲತಃ ಪೊನಂಪೇಟೆಯ ಬೇಗೂರಿನ ಮಲ್ಲಂಡ ಮುದ್ದಪ್ಪ ಮತ್ತು ದೇವಕಿ ದಂಪತಿಯ ಮಗಳು. ತಂದೆಯವರು ನೌಕರಿಯ ಸಲುವಾಗಿ ವಿರಾಜಪೇಟೆಯಲ್ಲಿ ಇದ್ದಾಗ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯ ಸರಕಾರಿ ಶಾಲೆಯಲ್ಲಿ ಮುಗಿಸಿದ್ದಾರೆ. ಪ್ರೌಢಶಾಲಾ ಶಿಕ್ಷಣವನ್ನು ಹುದಿಕೇರಿ ಜನತಾ ಪ್ರೌಢಶಾಲೆಯಲ್ಲಿ ಕಲಿತಿದ್ದಾರೆ. ಪದವಿಪೂರ್ವ ಶಿಕ್ಷಣವನ್ನು ಮಾದಾಪುರದ ಚೆನ್ನಮ್ಮ ಕಾಲೇಜಿನಲ್ಲಿಯೂ, ಬಿ.ಕಾಂ. ಪದವಿಯನ್ನು ಸೋಮವಾರಪೇಟೆಯ ಬಿ.ಟಿ.ಸಿ.ಜಿ. ಕಾಲೇಜಿನಲ್ಲಿ ಮುಗಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದ ಕಥೆ, ಕವನ, ಶಾಯಿರಿ, ಬರವಣಿಗೆ, ಓದು, ಭಾಷಣ, ಮಕ್ಕಳಿಗೆ ಉಮ್ಮತಾಟ್ ಕಲಿಸುವುದು ಇತ್ಯಾದಿ ಗೀಳು ಅಂಟಿಸಿಕೊಂಡವರು. ಮುಂದುವರಿದು ಕಥೆ, ಕವನ ಮತ್ತು ಲೇಖನಗಳನ್ನು ಕೊಡವ ಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಬರೆದಿದ್ದಾರೆ. ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಇಪ್ಪತೈದನೆಯ ವರ್ಷಾಚರಣೆಯ (ಬೊಳ್ಳಿನಮ್ಮೆ) ಸಂದರ್ಭದಲ್ಲಿ ಇವರ ‘ಪೊಣ್ಣ್ ಜನ್ಮ’ ಎಂಬ ಮೊದಲ ಕೃತಿಯು ಕೂಟದ ಜನಪ್ರಿಯ ಸಾಹಿತ್ಯ ಮಾಲೆಯ 181ನೆಯ ಪುಸ್ತಕವಾಗಿ ಕೂಟದ ಸಹಕಾರದೊಂದಿಗೆ ಲೋಕಾರ್ಪಣೆ ಮಾಡಲಾಗಿದೆ. ಇವರ…

Read More

ಮಂಗಳಗಂಗೋತ್ರಿ : ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ‘ಬಿತ್ತಿ’ ಪತ್ರಿಕೆಯ ವತಿಯಿಂದ ಏರ್ಪಡಿಸಿದ್ದ ಕಥೆ ಮತ್ತು ಕಾವ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಕವಿಗೋಷ್ಠಿಯು ದಿನಾಂಕ 29-12-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಇವರು ಮಾತನಾಡಿ “ಕಾವ್ಯ ಮೌನದಲ್ಲಿ ಹುಟ್ಟುತ್ತದೆ. ಆದರೆ ಕಾವ್ಯ ರಚನೆಗೆ ವಸ್ತು ನಿರ್ವಹಣೆ ಸಾಮರ್ಥ್ಯ ಮತ್ತು ಭಾಷಾ ಪ್ರೌಢಿಮೆ ಬೇಕು. ಭಾಷೆಯನ್ನು ಲೀಲಾಜಾಲವಾಗಿ ಬಳಸಬೇಕಾದರೆ ಕವಿಗೆ ಭಾಷಾ ಪದ ಸಂಪತ್ತು ಒಲಿದಿರಬೇಕು” ಎಂದು ಹೇಳಿದರು. ಅತಿಥಿಯಾಗಿ ಭಾಗವಹಿಸಿದ್ದ ಡಾ. ಧನಂಜಯ ಕುಂಬ್ಳೆ ಮಾತನಾಡಿ “ಕವಿಗಳು ತಮ್ಮ ಭಾವನೆಗೆ ತಕ್ಕುದಾದ ಪ್ರತಿಮೆಗಳನ್ನು ಕಂಡುಕೊಳ್ಳುವುದು ಮತ್ತು ಕಾವ್ಯ ಲಯ ಹಾಗೂ ಭಾಷೆಯ ಲಾಲಿತ್ಯವನ್ನು ಕರಗತ ಮಾಡಿಕೊಳ್ಳುವುದು ಮುಖ್ಯ” ಎಂದರು. ಉಪನ್ಯಾಸಕ ಡಾ. ಯಶು ಕುಮಾರ್ ಮಾತನಾಡಿ “ಕತೆ ಬರೆಯುವವರು ಘಟನೆಗಳನ್ನು ಸೃಷ್ಟಿಸುವ ಮತ್ತು ಪಾತ್ರನಿರ್ವಹಣೆಯ ಕೌಶಲವನ್ನು ಹೊಂದಬೇಕು. ನಿರಂತರವಾದ ಓದು ಈ ಕೌಶಲ್ಯವನ್ನು…

Read More

ನಾಪೋಕ್ಲು : ಕೊಡಗು ಜಿಲ್ಲೆಯ ಯವಕಪಾಡಿ ನಿವಾಸಿ ಆದಿವಾಸಿ ಹೋರಾಟಗಾರ ಕುಡಿಯರ ಮುತ್ತಪ್ಪ ಅವರಿಗೆ ದಿನಾಂಕ 28-12-2023ರಂದು ರಾಜ್ಯಮಟ್ಟದ ‘ಕೊರವಂಜಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮಂಡ್ಯ ಜಿಲ್ಲಾ ಕುಳುವ ಸಮಾಜ ಹಾಗೂ ಡ್ರೀಮ್ ಫೌಂಡೇಶನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕೊರವಂಜಿ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಡ್ಯ ಜಿಲ್ಲಾ ಕುಳುವ ಸಮಾಜದ ಅಧ್ಯಕ್ಷ ಕೃಷ್ಣ ಕುಮಾರು ಗಂಗೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಂಬಾಣಿ, ಶ್ರೀರಂಗ ಪಟ್ಟಣದ ಚಂದ್ರವನ ಆಶ್ರಮದ ಡಾ. ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿ, ಸಾಂಸ್ಕೃತಿಕ ಚಿಂತಕರಾದ ಜಿ.ಸಿದ್ದರಾಮಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು. ಕುಡಿಯರ ಮುತ್ತಪ್ಪ ಕುಡಿಯ ಜನಾಂಗಕ್ಕೆ ಸರ್ಕಾರದಿಂದ ಇರುವ ಸೌಲಭ್ಯಗಳನ್ನು ತಲುಪಿಸುವ ವ್ಯವಸ್ಥೆಯನ್ನು ಕೈಗೊಂಡಿದ್ದರು. ಕೊಡಗು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ರೀಡೆ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇವರ ಸೇವೆಯನ್ನು ಪರಿಗಣಿಸಿ ವಿವೇಕಾನಂದ ಸೇವಾ ಪ್ರಶಸ್ತಿ…

Read More

ಶಿರಸಿ : ಸಾಹಿತ್ಯ ಸಂಚಲನ ಶಿರಸಿ (ಉ.ಕ.) ಹಾಗೂ ನಯನಾ ಫೌಂಡೇಶನ್ ಶಿರಸಿ (ಉ.ಕ.) ಇವರ ಸಹಯೋಗದೊಂದಿಗೆ ಆಯೋಜಯಿಸಿದ ಡಾ.ಎಚ್. ಆರ್. ವಿಶ್ವಾಸ ಅವರ ‘ಸಂಗಮ’ ಕಾದಂಬರಿ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 14-01-2024ರ ಭಾನುವಾರದಂದು ಶಿರಸಿ ದೇವಿಕೆರೆಯ ಗಣೇಶ ನೇತ್ರಾಲಯದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಲಿದೆ. ಸಾಹಿತಿಗಳಾದ ಶ್ರೀ ಗಣಪತಿ ಭಟ್ಟ, ವರ್ಗಾಸರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸರಾದ ವಿ. ಶ್ರೀ ರವಿಶಂಕರ ಹೆಗಡೆ ದೊಡ್ಡಳ್ಳಿ ಉದ್ಘಾಟಿಸಲಿದ್ದು, ಪರಿಸರ ತಜ್ಞರಾದ ಶ್ರೀ ಶಿವಾನಂದ ಕಳವೆ ಪುಸ್ತಕ ಲೋಕಾರ್ಪಣೆಗೊಳಿಸಲಿರುವರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಂಸ್ಕೃತ ಸಾಹಿತಿಗಳಾದ ಡಾ. ಎಚ್.ಆರ್.ವಿಶ್ವಾಸ, ಶಿರಸಿಯ ಗಣೇಶ ನೇತ್ರಾಲಯದ ನೇತ್ರತಜ್ಞರಾದ ಡಾ. ಶಿವರಾಮ ಕೆ.ವಿ. ಹಾಗೂ ಸಾಹಿತ್ಯ ಸಂಚಲನದ ಸಂಚಾಲಕರಾದ ಶ್ರೀ ಕೃಷ್ಣ ಪದಕಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಆಮಂತ್ರಿತ ಕವಿಗಳಿಂದ ‘ರಾಮೋಪಾಸನೆ’ ಕವಿಗೋಷ್ಠಿ ನಡೆಯಲಿದ್ದು, ಕವಿಗಳಾದ ದಾಕ್ಷಾಯಿಣಿ ಪಿ.ಸಿ. ಶಿರಸಿ, ಶೋಭಾ ವಿ. ಭಟ್ ಶಿರಸಿ, ರಾಜಲಕ್ಷ್ಮಿ ಭಟ್ ಬೊಮ್ಮನಳ್ಳಿ, ದಿನೇಶ ಭಾಗ್ವತ ಶಿರಸಿ,…

Read More