Subscribe to Updates
Get the latest creative news from FooBar about art, design and business.
Author: roovari
ಹುಣಸಗಿ (ಯಾದಗಿರಿ ಜಿಲ್ಲೆ) : ಹುಣಸಗಿ ತಾಲೂಕಿನ ಕೊಡೇಕಲ್ಲ ಗ್ರಾಮದ ಹಿರಿಯ ಕಾಷ್ಪಶಿಲ್ಪಿ ಬಸಣ್ಣ ಕಾಳಪ್ಪ ಕಂಚಗಾರ (86) ಇವರು ದಿನಾಂಕ 31 ಅಕ್ಟೋಬರ್ 2024ರಂದು ನಿಧನರಾದರು. ಇವರು ಪತ್ನಿ, ನಾಲ್ವರು ಪುತ್ರರು. ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಬಸಣ್ಣ ಕಂಚಗಾರ ಇವರಿಗೆ 2014ರಲ್ಲಿ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಹಾಗೂ 2018ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಕಾಷ್ಟ ಶಿಲ್ಪಿಗಳಲ್ಲಿ ಹಿರಿಯರಾಗಿದ್ದ ಬಸಣ್ಣ ಕಂಚಗಾರ ಇವರು ವಿವಿಧ ಬಗೆಯ ದೇವರ ಮೂರ್ತಿಗಳನ್ನು ತಮ್ಮ ಕಲಾ ಕೌಶಲದ ಮೂಲಕ ಚಿತ್ರಿಸುವಲ್ಲಿ ಹೆಸರುವಾಸಿಯಾಗಿದ್ದರು. ಕಂಚುಗಾರಿಕೆ, ಕಂಬಾರಿಕೆ, ಎರಕ ಮತ್ತು ವಿವಿಧ ಶಿಲ್ಪಕಲಾ ಕೃತಿಗಳನ್ನು ಮಾಡುವುದರಲ್ಲಿ ಪ್ರಸಿದ್ಧರಾಗಿದ್ದ ಇವರು ತಾಲೂಕು ಆಡಳಿತದ ಪರವಾಗಿ ಕೊಡೇಕಲ್ಲ ಉಪ ತಹಶೀಲ್ದಾರ್ ಕಲ್ಲಪ್ಪ ಜಂಜಿನಗಡ್ಡಿ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ಬಂಟ್ವಾಳ : ಮಕ್ಕಳ ಕಲಾ ಲೋಕ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಇದರ ವತಿಯಿಂದ ಪಾಣೆಮಂಗಳೂರು ಶ್ರೀ ವಿಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಬಂಟ್ವಾಳ ನಗರ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳ ಸಾಹಿತ್ಯಾಸಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಒಂದು ದಿನದ ಸಾಹಿತ್ಯ ಸ್ವರಚನಾ ಪ್ರೇರಣಾ ಕಮ್ಮಟವು ದಿನಾಂಕ 26 ಅಕ್ಟೋಬರ್ 2024ರಂದು ನಡೆಯಿತು. ಪಾಣೆಮಂಗಳೂರು ಅನುದಾನಿತ ಹಿ.ಪ್ರಾ. ಶಾಲಾ ಸಂಚಾಲಕ ಯೋಗೀಶ್ ಪೈ ಕಮ್ಮಟವನ್ನು ಉದ್ಘಾಟಿಸಿ “ಭಾಷೆಯ ಉಳಿವು ಸಾಹಿತ್ಯದ ಮೂಲಕವೇ ನಡೆಯುತ್ತದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕ ವಿನೋದ್ ಎನ್. “ಮಕ್ಕಳಲ್ಲಿ ಸ್ವಂತಿಕೆಯಿದ್ದಾಗ ಅವರ ಭವಿಷ್ಯವು ಉಜ್ವಲಗೊಳ್ಳುತ್ತದೆ” ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ವಿಂಧ್ಯಾ ಎಸ್. ರೈ ಕಡೇಶಿವಾಲಯ ಮತ್ತು ಮಕ್ಕಳ ಕಲಾಲೋಕದ ಗೌರವ ಸಲಹೆಗಾರ ಭಾಸ್ಕರ ಅಡ್ಡಳ ಸಹಕರಿಸಿದರು. ಬಂಟ್ವಾಳ ನಗರ ಸಿ.ಆರ್.ಪಿ. ಸತೀಶ್ ರಾವ್, ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲಾ ಶಿಕ್ಷಕಿ ತೇಜಸ್ವಿನಿ, ಬಂಟ್ವಾಳ ಎಸ್.ವಿ.ಎಸ್.…
ಮೈಸೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಹಾಗೂ ಶ್ರೀ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶನ (ರಿ.) ಕರ್ನಾಟಕ ವಿಜಯನಗರ ಬಳ್ಳಾರಿ ಸಂಯುಕ್ತ ಆಶ್ರಯದಲ್ಲಿ ಕುವೆಂಪು ಟ್ರಸ್ಟ್ ವಿಜಯನಗರ ಒಂದನೇ ಹಂತ ಮೈಸೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭವನದಲ್ಲಿ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಮತ್ತು ಗೌರವ ಸನ್ಮಾನ ಕಾರ್ಯಕ್ರಮ’ವನ್ನು ದಿನಾಂಕ 03 ನವೆಂಬರ್ 2024ರಂದು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಇದರ ಅಧ್ಯಕ್ಷರಾದ ಶ್ರೀ ಮಡ್ಡೀಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ಕೊಡಗು ಮತ್ತು ಮೈಸೂರಿನ ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ನಾಗೇಂದ್ರ ಮತ್ತು ಸಂಗಡಿಗರಿಂದ ಪ್ರಾರ್ಥನೆ, ಕುಮಾರಿ ಸಿಂಧು ಆರ್. ಇವರಿಂದ…
ಉಡುಪಿ : ಪರ್ಯಾಯ ಪುತ್ತಿಗೆ ಮಠ ಹಾಗೂ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ `ಜಾನಪದ ಹಬ್ಬ-2024′ ಇದರ ಉದ್ಘಾಟನಾ ಸಮಾರಂಭವು ದಿನಾಂಕ 27 ಅಕ್ಟೋಬರ್ 2024ರ ಭಾನುವಾರದಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿ ಮಾತನಾಡಿ “ಮಾನವನ ಸಹಜ ಭಾವನೆಗಳನ್ನು ವ್ಯಕ್ತ ಪಡಿಸುವ ಉತ್ತಮ ಸಂದೇಶಗಳನ್ನು ನೀಡುವ ನಮ್ಮ ನಾಡಿನ ಜಾನಪದ ಕಲೆಗಳು ಶ್ರೇಷ್ಠ ಕಲೆಗಳಾಗಿವೆ. ಇವುಗಳ ಆಚರಣೆಗೆ ತನ್ನದೇ ಆದ ಮಹತ್ವವಿದೆ. ಈ ಮೂಲಕ ಜಾನಪದ ಕಲೆಗಳು ಜ್ಞಾನಪ್ರದ ಕಲೆಗಳಾಗಿವೆ. ಜಾನಪದ ಕಲೆಗಳಲ್ಲಿ ಪಾಶ್ವಿಮಾತ್ಯ ದೇಶಗಳ ಕಲೆಗಳಂತೆ ಕೃತಿಮತೆ ಇಲ್ಲ. ಪ್ರಾಚೀನ ಜಾನಪದ ಕಲೆಗಳು ಸಹಜತೆಯನ್ನು ತಂದು ಕೊಡುತ್ತವೆ. ದೀಪಾವಳಿಯ ಪರ್ವದ ಸಂದರ್ಭದಲ್ಲಿ ಈ ಜಾನಪದ ಹಬ್ಬವನ್ನು ಆಯೋಜಿಸಿರುವ…
ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮವಾಗಿ ಇದೇ ನವೆಂಬರ್ 11ರಿಂದ 17ರವರೆಗೆ ನಡೆಯುವ 12ನೇ ವರ್ಷದ ನುಡಿ ಹಬ್ಬ “ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024”ರಲ್ಲಿ ಸಾಧಕ ಕಲಾವಿದರ ಸಮ್ಮಾನ ಮತ್ತು ಪ್ರಶಸ್ತಿ ಪ್ರದಾನ ಹಾಗೂ ಕೀರ್ತಿಶೇಷ ಕಲಾವಿದರ ಸಂಸ್ಮರಣಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಸಂದರ್ಭ ನವೆಂಬರ 12ರಂದು ತೆಂಕು ತಿಟ್ಟಿನ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟರಿಗೆ ‘ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರಶಸ್ತಿ’ ಮತ್ತು ದಿನಾಂಕ 17ರಂದು ಸಮಾರೋಪ ಸಮಾರಂಭದಲ್ಲಿ ಹವ್ಯಾಸಿ ಭಾಗವತ ಮತ್ತು ಪ್ರಸಂಗಕರ್ತ ಕೆ.ಎಚ್. ಮಂಜುನಾಥ ಶೇರೆಗಾರ್ ಹರಿಹರಪುರ ಇವರಿಗೆ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಯಕ್ಷ ಭಾರತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ. ಅರುವ ಕೊರಗಪ್ಪ ಶೆಟ್ಟಿ : ತೆಂಕುತಿಟ್ಟು ಯಕ್ಷಗಾನದಲ್ಲಿ ರಂಗಸ್ಥಳದ ರಾಜ…
ಉಡುಪಿ : ರಾಗ ಧನ ಸಂಸ್ಥೆಯು ಹಮ್ಮಿಕೊಂಡಿರುವ ರಾಗರತ್ನಮಾಲಿಕೆ ಸರಣಿಯ 29ನೆಯ ಕಾರ್ಯಕ್ರಮವು ದಿನಾಂಕ 19 ಅಕ್ಟೋಬರ್ 2024ರಂದು ‘ಮಣಿಪಾಲ್ ಡಾಟ್ ನೆಟ್’ ಸಭಾಂಗಣದಲ್ಲಿ ನಡೆಯಿತು. ದೀಪೋಜ್ವಲನ ಪೂರ್ವದಲ್ಲಿ ನಡೆಸಲಾಗುವ ಸಣ್ಣ ಕಛೇರಿಯನ್ನು ನಡೆಸಿದ ಬಾಲಕಿ ಕುಮಾರಿ ಸುರಭಿ ರಾವ್ ಇವರ ಗಾಯನದಲ್ಲಿ ನವರಾಗಮಾಲಿಕಾ ವರ್ಣ, ಹಂಸಧ್ವನಿ (ಮಹಾಗಣಪತಿಂ) ಆನಂದ ಭೈರವಿ (ಕಮಲಾಂಬ) ಸುಚರಿತ್ರ (ಹರಿನಾಮದರಗಿಣಿ) ಸಿಂಧು ಭೈರವಿ (ಅಷ್ಟಪದಿ) ರಾಗಗಳ ಪ್ರಸ್ತುತಿಗಳಲ್ಲದೆ, ಸಿಂಹೇಂದ್ರ ಮಧ್ಯಮ (ಕಾಮಾಕ್ಷಿ) ಕೃತಿಯನ್ನು ಪುಟ್ಟ ರಾಗ, ಸ್ವರ ಪ್ರಸ್ತಾರ ಸಹಿತ ನಿರೂಪಿಸಲಾಯಿತು. ಸುಮಾರು 45 ನಿಮಿಷಗಳ ಕಾಲ ದೋಷರಹಿತವಾಗಿ ಹಾಡಿದ ಈ ಬಾಲೆ ಉತ್ತಮ ಭವಿಷ್ಯದ ಭರವಸೆಯನ್ನು ನೀಡಿದ್ದಾಳೆ. ಗಾಯನಕ್ಕೆ ಕುಮಾರಿ ಮಹತೀ ಕೆ. ಕಾರ್ಕಳ ವಯೊಲಿನ್ ನಲ್ಲಿಯೂ, ಶ್ರೀ ನಾರಾಯಣ ಬಳ್ಳೂಕರಾಯ ಮೃದಂಗದಲ್ಲಿಯೂ ಸಹವಾದನ ನೀಡಿದ್ದಾರೆ. ಪ್ರಧಾನ ಕಚೇರಿಯ ಗಾಯಕ ಬೆಂಗಳೂರಿನ ಶ್ರೀ ಬಿ.ಎಸ್. ಅಭಿಜಿತ್ ಹಸನ್ಮುಖಿ. ತ್ರಿಸ್ಥಾಯಿಗಳಲ್ಲಿ ಸುಲಭವಾಗಿ ಸಂಚರಿಸುವ ಮೃದು ಶಾರೀರ; ಸಹವಾದಕರೊಂದಿಗೆ, ಸಭಿಕರೊಂದಿಗೆ ಉತ್ತಮ ಸಂವಹನ. ಸಾವೇರಿ ವರ್ಣದೊಂದಿಗೆ ಕಛೇರಿ…
ಬಂಟ್ವಾಳ : ಎಳೆಯರ ಪ್ರತಿಭೆಯ ಪತ್ರಿಕೆಯಾದ ‘ಮಕ್ಕಳ ಜಗಲಿ’ ನಾಲ್ಕನೇ ವರ್ಷದ ಸಂಭ್ರಮದಲ್ಲಿ ರಾಜ್ಯ ಮಟ್ಟದ ಕವನ ಮತ್ತು ಕಥಾ ಸ್ಪರ್ಧೆ -2024ಯನ್ನು ಆಯೋಜಿಸಿದೆ. ಈ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, ವಿಷಯ ಐಚ್ಛಿಕವಾಗಿರುತ್ತದೆ. ಕಥೆ ಮತ್ತು ಕವನಗಳನ್ನು ಅಂಚೆ ಮೂಲಕ ಕಳುಹಿಸಲು ಕೊನೆಯ ದಿನಾಂಕ 07 ನವೆಂಬರ್ 2024 ಫಲಿತಾಂಶ ಪ್ರಕಟವಾಗುವ ದಿನಾಂಕ 14 ನವೆಂಬರ್ 2024 ಪ್ರತಿ ವಿಭಾಗದಲ್ಲೂ ಸಮನ 2 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಅತ್ಯುತ್ತಮ 10 ಕಥೆಗಳಿಗೆ ಮತ್ತು 10 ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಮಾಣ ಪತ್ರ ನೀಡಲಾಗುವುದು.
ಮಂಗಳೂರು : ಯುವವಾಹಿನಿ ಸಂಸ್ಥೆ ನೀಡುವ ಪ್ರಸಕ್ತ ಸಾಲಿನ ‘ವಿಶುಕುಮಾರ್ ಪ್ರಶಸ್ತಿ’ಗೆ ಪತ್ರಿಕಾ ಸಂಪಾದಕ, ಸಾಹಿತಿ, ಸಂಶೋಧಕ ಶ್ರೀ ಬಾಬು ಶಿವ ಪೂಜಾರಿ ಆಯ್ಕೆಯಾಗಿದ್ದಾರೆ. ನಾಡು ಕಂಡ ಅಪ್ರತಿಮ ಪ್ರತಿಭಾಶಾಲಿ ಕಾದಂಬರಿಕಾರ, ಕತೆಗಾರ, ನಾಟಕಕಾರ, ರಂಗನಟ, ರಂಗ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಪತ್ರಕರ್ತ, ಅಂಕಣಕಾರ, ಸಂಪಾದಕ, ಸಂಘಟಕ ವಿಶುಕುಮಾರ್ ಇವರ ಸ್ಮರಣಾರ್ಥ ಯುವವಾಹಿನಿ ಸಂಸ್ಥೆಯು ಕಳೆದ 20 ವರ್ಷಗಳಿಂದ ‘ವಿಶುಕುಮಾರ್ ಪ್ರಶಸ್ತಿ’ ನೀಡುತ್ತಾ ಬಂದಿದೆ. ಈ ಸಾಲಿನ ಪ್ರಶಸ್ತಿಗೆ ಬಿ.ಎಂ. ರೋಹಿಣಿ, ಮುದ್ದು ಮೂಡುಬೆಳ್ಳೆ, ಡಾ. ಪ್ರಭಾಕರ ನೀರುಮಾರ್ಗ, ಡಾ. ಯೋಗೀಶ್ ಕೈರೋಡಿ, ಪ್ರೊ. ಶಶಿಲೇಖಾ ಇವರನ್ನೊಳಗೊಂಡ ಆಯ್ಕೆ ಸಮಿತಿ ಈ ಆಯ್ಕೆಯನ್ನು ನಡೆಸಿದೆ. ದಿನಾಂಕ 10 ನವೆಂಬರ್ 2024ರಂದು ಉರ್ವಸ್ಟೋರ್ ನ ತುಳು ಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಯುವವಾಹಿನಿ ಸಂಸ್ಥೆಯ ವಿಶುಕುಮಾರ್ ದತ್ತಿ ನಿಧಿ ಸಮಿತಿಯ ಸಂಚಾಲಕ ಸುರೇಶ್ ಪೂಜಾರಿ ಹಾಗೂ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ…
ಮಂಗಳೂರು: ಸಾಹಿತಿ ಸಂಘಟಕ ಬಿ. ತಮ್ಮಯ್ಯ ಅವರ ನೆನಪಿನ ರಾಜ್ಯಮಟ್ಟದ ‘ಅತೀ ಸಣ್ಣ ಕಥೆ’ ಹಾಗೂ ಲಲಿತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದ್ದು, ಎರಡು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ‘ಅತೀ ಸಣ್ಣ ಕಥೆ’ ಸ್ಪರ್ಧೆಯು ಕಥೆಗಾರರಲ್ಲಿರುವ ಕಥಾ ಕೌಶಲವನ್ನು ಪ್ರಕಟಪಡಿಸುವ ವೇದಿಕೆಯಾಗಿದ್ದು, 250 ಪದಮಿತಿಯಲ್ಲಿ ಕಥೆಯನ್ನು ಬರೆದು ಕಳುಹಿಸಬೇಕು. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ತಮ್ಮ ಆಯ್ಕೆಯ ಯಾವುದಾದರೂ ವಿಷಯದ ಮೇಲೆ 5ಪುಟ ಮೀರದಂತೆ ಲಲಿತ ಪ್ರಬಂಧ ಬರೆದು ಕಳುಹಿಸಬಹುದು. ಸ್ಪರ್ಧೆಯ ನಿಯಮಗಳು : ಎರಡೂ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾರ್ಥಿಗಳು ಕಳುಹಿಸುವ ಬರಹಗಳು ಸ್ವಂತ ರಚನೆಯಾಗಿದ್ದು, ಎಲ್ಲಿಯೂ ಪ್ರಕಟಗೊಂಡಿರಬಾರದು. ಬರಹಗಳನ್ನು ನುಡಿ ಅಥವಾ ಯುನಿಕೋಡ್‌ನಲ್ಲಿ 12 ಫಾಂಟ್ ನಲ್ಲಿ ಬರೆದು ಕಳುಹಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಪ್ರಥಮ: 3,000 ರೂಪಾಯಿ, ದ್ವಿತೀಯ 2,000 ರೂಪಾಯಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಬರಹಗಾರರಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಬರಹಗಾರರು ಸ್ವ ವಿಳಾಸವನ್ನು ಮೊಬೈಲ್…
ಉಡುಪಿ : ನೃತ್ಯನಿಕೇತನ ಕೊಡವೂರಿನ ನೃತ್ಯ ಕಲಾವಿದರಿಂದ ‘ನೃತ್ಯ ದೀಪೋತ್ಸವ’ ಕಾರ್ಯಕ್ರಮವನ್ನು ದಿನಾಂಕ 02 ನವೆಂಬರ್ 2024 ಮತ್ತು 03 ನವೆಂಬರ್ 2024ರಂದು ಸಂಜೆ 6-15 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಇವರ ಸಹಕಾರದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನೃತ್ಯನಿಕೇತನದ ಸುಮಾರು 300 ಮಂದಿ ನೃತ್ಯ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆ.