Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಚಿತ್ರಕೂಟ ಸ್ಕೂಲ್ ಅರ್ಪಿಸುತ್ತಿರುವ ‘ಚಿಟ್ಟೆ ಮಕ್ಕಳ ಮೇಳ’ ಬೇಸಿಗೆ ಶಿಬಿರವನ್ನು ದಿನಾಂಕ 06 ಏಪ್ರಿಲ್ 2025ರಿಂದ 26 ಏಪ್ರಿಲ್ 2025ರವರೆಗೆ ಬೆಳಿಗ್ಗೆ 9-30ರಿಂದ 4-00 ಗಂಟೆಗೆ ತನಕ ಬೆಂಗಳೂರಿನ ನಾಗದೇವನ ಹಳ್ಳಿ ಕೆಂಗೇರಿ ಮುಖ್ಯ ರಸ್ತೆ ನಂ.37/6 ಚಿತ್ರಕೂಟ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನಾಟಕ ಮತ್ತು ಪ್ರದರ್ಶನ, ಜನಪದ ಕುಣಿತಗಳು, ಸಂಗೀತ, ಚಿತ್ರಕತೆ, ಕರಕುಶಲ ಕಲೆಗಳು, ದೇಸಿ ಆಟಗಳು, ಮುಖವಾಡ ತಯಾರಿಕೆ, ಮ್ಯಾಜಿಕ್, ಮಕ್ಕಳ ಸಂಜೆ, ಪರಿಸರ ಜಾಗೃತಿ ಜಾತ, ಹೋಳಿ ಹಬ್ಬ, ಸಾಧಕರಿಗೆ ಸನ್ಮಾನ, ಮಲ್ಲಕಂಬ, ಕೋಲು ಹೋರಾಟ ಮತ್ತು ಭರತನಾಟ್ಯ ಇತ್ಯಾದಿಗಳನ್ನು ರಂಗಾಯಣ, ನೀನಾಸಂ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಪರಿಣಿತಿ ಪಡೆದ ಕಲಾವಿದರಿಂದ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8217637620 ಮತ್ತು 9663399966 ಸಂಖ್ಯೆಯನ್ನು ಸಂಪರ್ಕಿಸಿರಿ.
ಧಾರವಾಡ : ತಮ್ಮ ರಚಿತ ಮತ್ತು ನಿರ್ದೇಶಿತ ನಾಟಕಗಳಾದ ‘ಗತಿ’ ಮತ್ತು ‘ಅತೀತ’ ಮೂಲಕ ಧಾರವಾಡದ ರಂಗಾಸಕ್ತರಿಗೆ ಚಿರಪರಿಚಿತರಾಗಿರುವ ಎಸ್.ಎನ್. ಸೇತುರಾಮ್ ಅವರು ತಮ್ಮ ಹೊಸ ನಾಟಕ ‘ತಳಿ’ ತೆಗೆದುಕೊಂಡು ಧಾರವಾಡಕ್ಕೆ ಬರುತ್ತಿದ್ದಾರೆ. ದಿನಾಂಕ 26 ಮಾರ್ಚ್ 2025, ಬುಧವಾರ ಸಂಜೆ 06-30 ಗಂಟೆಗೆ ಧಾರವಾಡದ ಸೃಜನಾ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರದಲ್ಲಿ ಸ್ನೇಹ ಪ್ರತಿಷ್ಠಾನ ಧಾರವಾಡ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ ಸಂಯುಕ್ತ ಆಶ್ರಯದಲ್ಲಿ ಅನನ್ಯ ಸಂಸ್ಥೆ ಬೆಂಗಳೂರು ಅರ್ಪಿಸುತ್ತಿರುವ ಈ ನಾಟಕ ‘ತಳಿ’ ಖಂಡಿತವಾಗಿ ಧಾರವಾಡದ ರಂಗಪ್ರೇಮಿಗಳಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಹಿನ್ನೆಲೆಯಲ್ಲಿ ಅತ್ಯುತ್ತಮ ಕೊಡುಗೆ. ಎಸ್.ಎನ್. ಸೇತುರಾಂ ಒಬ್ಬ ಕನ್ನಡದ ಕಥೆಗಾರ, ನಟ, ನಿರ್ದೇಶಕ ಮತ್ತು ನಾಟಕಕಾರ. ಬಾಲ್ಯದಿಂದಲೂ ರಂಗಭೂಮಿಯ ಕಡೆಗಿನ ಸೆಳೆತ ಇವರನ್ನು 1981ರಿಂದ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಟಿ.ಎನ್. ಸೀತಾರಾಂರವರ ಮಾಯಾಮೃಗ, ಮನ್ವಂತರ, ಮುಕ್ತ ಧಾರಾವಾಹಿಗಳಲ್ಲಿ ಇವರು ಅಭಿನಯಿಸಿದ್ದಾರೆ. ಮಂಥನ, ದಿಬ್ಬಣ ಮತ್ತು ಅನಾವರಣ ಧಾರಾವಾಹಿಗಳನ್ನು ಇವರು ನಿರ್ದೇಶಿಸಿದ್ದಾರೆ.…
ಮದ್ದೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಮಹಿಳಾ ಸರ್ಕಾರಿ ಕಾಲೇಜು ಮದ್ದೂರು, ಕ್ಷೀರಸಾಗರ ಮಿತ್ರಕೂಟ (ರಿ.) ಕೀಲಾರ ಮಂಡ್ಯ ಜಿಲ್ಲೆ, ಕರ್ನಾಟಕ ಜಾನಪದ ಪರಿಷತ್ತು ಮದ್ದೂರು ತಾಲೂಕು ಘಟಕ ಮತ್ತು ರಂಗ ಚಂದಿರ ಟ್ರಸ್ಟ್ (ರಿ.) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ 2025 ಅಂಗವಾಗಿ ರಂಗಸಂದೇಶ, ವಿಚಾರಸಂಕಿರಣ, ರಂಗಗೌರವ ಹಾಗೂ ರಂಗಸಂಭ್ರಮ ಕಾರ್ಯಕ್ರಮವನ್ನು ದಿನಾಂಕ 27 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಮದ್ದೂರು ಮಹಿಳಾ ಸರ್ಕಾರಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮದ್ದೂರು ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಬಿ. ನಾರಾಯಣ ಇವರ ಅಧ್ಯಕ್ಷತೆಯಲ್ಲಿ ಮಾನ್ಯ ಶಾಸಕರಾದ ಕೆ.ಎಂ. ಉದಯ್ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ರಂಗಭೂಮಿ ಕಲಾವಿದ ಸುರೇಶ್ ಕಂಠಿ ಇವರು ರಂಗ ಸಂದೇಶ ನೀಡಲಿದ್ದಾರೆ. ‘ರಂಗಭೂಮಿ ಮತ್ತು ಚಳುವಳಿ’ ಎಂಬ ವಿಷಯದ ಬಗ್ಗೆ ರಂಗಭೂಮಿ ಮತ್ತು ಚಲನಚಿತ್ರ ನಟರಾದ ಪಣ್ಣೆದೊಡ್ಡಿ ಆನಂದ್ ವಿಷಯ ಮಂಡನೆ ಮಾಡಲಿದ್ದಾರೆ. ರಾಮಯ್ಯ, ಸಿ. ಪುಟ್ಟಸ್ವಾಮಿ,…
ಬೆಂಗಳೂರು : ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಮತ್ತು ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ (ರಿ.) ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ‘ರಂಗೋತ್ಸವ’ ಕಾರ್ಯಕ್ರಮವನ್ನು ದಿನಾಂಕ 26, 27 ಮತ್ತು 28 ಮಾರ್ಚ್ 2025ರಂದು ಮಧ್ಯಾಹ್ನ ಗಂಟೆ 1-15ಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್ ಕೆ.ಜಿ.ಎಸ್. ಕ್ಲಬ್ ಚನ್ನಬಸವಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 26 ಮಾರ್ಚ್ 2025ರಂದು ಮಾಲತೇಶ ಬಡಿಗೇರ ಇವರ ನಿರ್ದೇಶನದಲ್ಲಿ ನೇತಾಜಿ ಕನ್ನಡ ಯುವಕ ಸಂಘ (ರಿ.) ಅಭಿನಯಿಸುವ ‘ಧೀರ ಭಗತ್’, ದಿನಾಂಕ 27 ಮಾರ್ಚ್ 2025ರಂದು ಛಾಯಾಭಾರ್ಗವಿ ಇವರ ನಿರ್ದೇಶನದಲ್ಲಿ ಚಿಕ್ಕ ಬಳ್ಳಾಪುರದ ಐಶ್ವರ್ಯ ಕಲಾನಿಕೇತನ (ರಿ.) ಅಭಿನಯಿಸುವ ‘ಶೂದ್ರ ತಪಸ್ವಿ’ ಮತ್ತು ದಿನಾಂಕ 28 ಮಾರ್ಚ್ 2025ರಂದು ಮೈಕೊ ಶಿವಶಂಕರ್ ಇವರ ನಿರ್ದೇಶನದಲ್ಲಿ ಕರ್ನಾಟಕ ಸಚಿವಾಲಯ ಕ್ಲಬ್ ಅಭಿನಯಿಸುವ ‘ನಮ್ಮ ನಿಮ್ಮೊಳಗೊಬ್ಬ’ ನಾಟಕಗಳು ಪ್ರದರ್ಶನಗೊಳ್ಳಲಿದೆ.
ಮೂಡಬಿದಿರೆ : ಆಳ್ವಾಸ್ ಸ್ವಾಯತ್ತ ಕಾಲೇಜಿನ ಇಂಗ್ಲಿಷ್ ವಿಭಾಗದ ಗ್ಲಿಸನ್ ಸಂಘದ ವತಿಯಿಂದ ವಿಶ್ವ ಕಾವ್ಯ ದಿನವನ್ನು ದಿನಾಂಕ 20 ಮಾರ್ಚ್ 2025ರ ಗುರುವಾರದಂದು ಕುವೆಂಪು ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿಯ ಶ್ರೀ ಅದಮಾರು ಮಠದ ಶಿಕ್ಷಣ ಸಮೂಹಗಳ ಉಪ ಆಡಳಿತಾಧಿಕಾರಿ ಪುಂಡರಿಕಾಕ್ಷ ಕೊಡಂಚ ಮಾತನಾಡಿ “ಕಾವ್ಯವು ನಮ್ಮ ಸಂಸ್ಕೃತಿಯ ಮಹತ್ವಪೂರ್ಣ ಅಂಗ. ಆ ಮೂಲಕ ನಮ್ಮ ಭಾವನೆ ಹಾಗೂ ಅನುಭವಗಳನ್ನು ವ್ಯಕ್ತಪಡಿಸಲು ಸಹಕಾರಿಯಾಗಿದೆ. ಕಾವ್ಯ ದಿನವನ್ನು ಆಚರಿಸುವುದರ ಮೂಲಕ ಮಹಾನ್ ಕವಿಗಳ ಕೊಡುಗೆಗಳನ್ನು ಗೌರವಿಸುವುದರ ಜೊತೆಗೆ ಹೊಸ ಬರಹಗಾರರಿಗೆ ಪ್ರೇರಣೆಯಾಗಲು ಸಹಾಯ ಮಾಡುತ್ತದೆ. ತಾರ್ಕಿಕವಾಗಿ ಯೋಚಿಸಿ ಮತ್ತು ಸಾಮಾನ್ಯ ಜ್ಞಾನವನ್ನು ಬಳಸಿದರೆ ಯಾರೂ ಬದುಕಿನಲ್ಲಿ ಪ್ರಮಾದವನ್ನೆಸಗಲಾರರು. ತಾರ್ಕಿಕ ಯೋಚನೆಯುಳ್ಳ ವ್ಯಕ್ತಿಗೆ ಅವಕಾಶಗಳು ವಿಫುಲವಾಗಿರುತ್ತವೆ ಎಂದು ಸಲಹೆ ನೀಡಿದರು. ಸುಂದರವಾದ ಭೂಮಿಯನ್ನು ಉಳಿಸಬೇಕು. ಅದು ನಮ್ಮ ಆಸೆಗಳನ್ನು ಪೂರೈಸ ಬಲ್ಲದೇ ಹೊರತು, ನಮ್ಮ ದುರಾಸೆಯನ್ನಲ್ಲ” ಎಂದರು. ಗ್ಲಿಸನ್ ಸಂಘದ ವತಿಯಿಂದ ಆಯೋಜಿಸಲಾದ ಕಾವ್ಯ ವಾಚನ ಸ್ಪರ್ಧೆಯ ವಿಜೇತರಿಗೆ…
ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ ಸ್ನೇಹ ಕಪ್ಪಣ್ಣ ಇವರ ಕರ್ನಾಟಕ ಜನಪದ ನೃತ್ಯದ ವಿಶೇಷ ಅಧ್ಯಯನಾತ್ಮಕ ‘ನೃತ್ಯ ಬೇರು’ ಇಂಗ್ಲೀಷ್ ಮತ್ತು ಕನ್ನಡ ಕೃತಿಗಳ ಬಿಡುಗಡೆ ಸಮಾರಂಭವನ್ನು ದಿನಾಂಕ 23 ಮಾರ್ಚ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ಡಾ. ಅಶ್ವಥ್ ಕಲಾಭವನದಲ್ಲಿ ಆಯೋಜಿಸಲಾಗಿದೆ. ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಶ್ರೀ ಚಿರಂಜೀವ್ ಸಿಂಗ್, ಕನ್ನಡ ವಿಶ್ವವಿದ್ಯಾಲಯ ನಿವೃತ್ತ ಕುಲಪತಿಗಳಾದ ಡಾ. ಹಿ.ಚಿ. ಬೋರಲಿಂಗಯ್ಯ, ಕೊಯಂಬತ್ತೂರ್ ಶ್ರೀಸರಸ್ವತಿ ವಿದ್ಯಾಮಂದಿರ (ಎಸ್.ಎಸ್.ವಿ.ಎಂ.) ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮಣಿಮೇಖಲೈ ಮೋಹನ್ ಮತ್ತು ಶ್ರೀ ಮೋಹನ್ ದಾಸ್, ಭಾನುಮತಿ ನೃತ್ಯ ಕಲಾಮಂದಿರಂ ನಿರ್ದೇಶಕಿ ನೃತ್ಯ ನಿಪುಣೆ ಗುರು ಶ್ರೀಮತಿ ಶೀಲಾ ಚಂದ್ರಶೇಖರ್ ಹಾಗೂ ಸಪ್ನಾ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ನಿತಿನ್ ಷಾ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹರಪನಹಳ್ಳಿ : ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದ ರಂಗಕರ್ಮಿ ಎಚ್. ಷಡಾಕ್ಷರಪ್ಪ ದಿನಾಂಕ 21 ಮಾರ್ಚ್ 2025ರ ಶುಕ್ರವಾರದಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ನಾಟಕ ಅಕಾಡೆಮಿ ಸದಸ್ಯರಾಗಿದ್ದ ಷಡಾಕ್ಷರಪ್ಪ ಅವರು ಗೋಣಿಬಸವೇಶ್ವರ ಪಾತ್ರದಿಂದ ಪ್ರಸಿದ್ಧರಾಗಿದ್ದರು. ಬಾಗಳಿಯಲ್ಲಿ ವಿಶ್ವಕಲಾ ರೈತ ನಾಟ್ಯ ಸಂಘ ಹಾಗೂ ಕನಕೇಶ್ವರ ಯುವಕರ ಕಲಾ ಸಂಘವನ್ನು ಕಟ್ಟಿದ್ದರು. 2020ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದರು. ವೇದಮೂರ್ತಿ ಕೊಟ್ರಯ್ಯ ಗವಾಯಿ ಶಿಷ್ಯರಾಗಿ, ಸಂಗೀತ ಕಲಾವಿದರಾಗಿದ್ದ ತಂದೆ ನಾಗೇಂದ್ರಪ್ಪ ಅವರ ಗರಡಿಯಲ್ಲಿ ಪಳಗಿದ್ದ ಷಡಾಕ್ಷರಪ್ಪ ಬಯಲಾಟ, ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲೂ ಅಭಿನಯಿಸಿದ್ದರು. ‘ಸಾವಿರಾರು ನಾಟಕಗಳ ಸರದಾರ’ ಎಂದೇ ಹೆಸರಾಗಿದ್ದರು. ಶ್ರೀಯುತರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಶಿವಮೊಗ್ಗ ಇದರ ವತಿಯಿಂದ ‘ಸಾಹಿತ್ಯ ಹುಣ್ಣಿಮೆ’ 235ನೆಯ ತಿಂಗಳ ಕಾರ್ಯಕ್ರಮವನ್ನು ದಿನಾಂಕ 24 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಶಿವಮೊಗ್ಗದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಇದರ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪ್ರಿಯದರ್ಶಿನಿ ಪ್ರೌಢ ಶಾಲಾ ಸಮಿತಿ ಅಧ್ಯಕ್ಷರಾದ ಎನ್. ರಮೇಶ್ ಇವರು ಉದ್ಘಾಟನೆ ಮಾಡಲಿರುವರು. ಶಿವಮೊಗ್ಗದ ಝೇಂಕಾರ ಸಿಂಗರ್ಸ್ ಇದರ ಬಸವರಾಜ್ ಮತ್ತು ತಂಡ, ಶ್ರೀಮತಿ ಶಾಂತಾ ಆನಂದ, ಅಮರನಾಥ, ಶ್ರೀಮತಿ ಸುಶೀಲಾ ಷಣ್ಮುಗಂ ಮತ್ತು ಶ್ರೀಮತಿ ಲೀಲಾವತಿ ಇವರಿಂದ ಹಾಡು, ಮೇಗರವಳ್ಳಿ ರಮೇಶ್, ಶ್ರೀಮತಿ ಎಸ್.ವಿ. ಚಂದ್ರಕಲಾ, ಶ್ರೀಮತಿ ಮಾಲಾ ರಾಮಚಂದ್ರ, ಶ್ರೀಮತಿ ಶಾರದಾ ಉಳುವೆ, ಶ್ರೀಮತಿ ಜ್ಞಾನ್ನವಿ ಆರ್. ಇವರಿಂದ ಕವನ ವಾಚನ, ಶ್ರೀಮತಿ ವಿಜಯಾ ಶ್ರೀಧರ, ಆರ್. ರತ್ನಯ್ಯ ಅವರ ಕಥೆ ಕೆ.ಎಸ್. ಮಂಜಪ್ಪ…
ಮಂಗಳೂರು : ಜಿಲ್ಲಾ ರಾಜೋತ್ಸವ ಪ್ರಶಸ್ತಿ ವಿಜೇತ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇವರ ಸಹಕಾರದೊಂದಿಗೆ ಲೇಖಕಿ ಶಶಿಲೇಖಾ ಬಿ. ಇವರ ಮೂರು ಕೃತಿಗಳ ಲೋಕಾರ್ಪಣೆ ಸಮಾರಂಭವು ದಿನಾಂಕ 22 ಮಾರ್ಚ್ 2025ರ ಶನಿವಾರ ಅಪರಾಹ್ನ 2-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಅಶೋಕನಗರ ಅಂಚೆ ಕಚೇರಿ ಬಳಿಯ ‘ಸಾಹಿತ್ಯ ಸದನ’ದಲ್ಲಿ ನಡೆಯಲಿದೆ. ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸರಾದ ಡಾ. ಗಣೇಶ ಅಮೀನ್ ಸಂಕಮಾರ್ ಕೃತಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ‘ಬೆಳಕಿನ ಬೆನ್ನು ಹತ್ತಿ’ ಕೃತಿಯ ಕುರಿತು ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾ. ಆರ್. ನರಸಿಂಹಮೂರ್ತಿ, ‘ಜೀವ ಭಾವದ ಹರಿವು’ ಕೃತಿಯ ಕುರಿತು ಮೂಡುಬಿದಿರೆ ಆಳ್ವಾಸ್ ಕಾಲೇಜು ಇಲ್ಲಿನ ಉಪನ್ಯಾಸಕಿಯಾದ ಡಾ. ಸುಧಾರಾಣಿ ಹಾಗೂ ‘ಮುಂಜಾವದ ಮಾತು’ ಕೃತಿಯ ಕುರಿತು ವಿಮರ್ಶಕರು, ಸಾಹಿತಿ ಹಾಗೂ ವಿಶ್ರಾಂತ ಆಕಾಶವಾಣಿ ಪ್ರಸಾರಕರಾದ ಶ್ರೀ ಮುದ್ದು ಮೂಡುಬೆಳ್ಳೆ…
ಕನ್ನಡ ಚಿತ್ರರಂಗದಲ್ಲಿ ಕಿರುವಯಸಿನಲ್ಲೇ ಸೂಪರ್ ಸ್ಟಾರ್ ಎನಿಸಿದ ಪಂಚಭಾಷಾತಾರೆ ಪದ್ಮಭೂಷಣ ಬಿರುದು ಹೊತ್ತ ಬಿ. ಸರೋಜಾದೇವಿಯವರದ್ದು ಒಂದು ದೊಡ್ಡ ಹೆಸರಾದರೆ ನಾಟಕ ರಂಗದಲ್ಲಿ ಹೈಸ್ಕೂಲು ಮೆಟ್ಟಿಲೇರುವಷ್ಟರಲ್ಲೇ ರಂಗ ಭೂಮಿಯ ಅನೇಕ ಹಿರಿಯ ಸಂಸ್ಥೆಗಳ ಪೈಕಿ ಲೆಕ್ಕವಿಲ್ಲದಷ್ಟು ನಾಟಕಗಳಲ್ಲಿ ಮತ್ತು ವಿವಿಧ ಸಾಂಸ್ಕೃತಿಕ ರಂಗಗಳಲ್ಲಿ ಮಿಂಚಿದ ನಮ್ಮೂರಿನ ಅಭಿನಯ ಸರಸ್ವತಿ… ಪ್ರಿಯಾ ಸರೋಜಾ ದೇವಿ. ಇವರೀರ್ವರ ಮೈಕಟ್ಟು ಮತ್ತು ಮುಖಚರ್ಯೆಯಲ್ಲೂ ಒಂದಷ್ಟು ಹೋಲಿಕೆ ಇದೆ. ಸರೋವರದ ಜಲದಲ್ಲಿ ಉದಿಸುವ ಹೂ ಕಮಲವೇ ಸರೋಜಾ..ಆಸಕ್ತಿ ಅಭಿವ್ಯಕ್ತಿ ಉತ್ಸಾಹ ಹುಮ್ಮಸ್ಸು ಸೃಜನಶೀಲತೆಗಳ ಅನ್ವರ್ಥನಾಮವೇ ಸರೋಜಾ…. ಸರೋಜಾ ದೇವಿ ಎಂದರೆ ಕಮಲವನ್ನು ಹಿಡಿದ ಕಮಲಿನೀ ಎಂದರ್ಥೈಸಬಹುದಲ್ಲವೇ. ಹೌದು ಕಮಲ ಎಲ್ಲಿದ್ದರೂ ಕಮಲ… ಅದರ ತುಂಬೆಲ್ಲವೂ ತುಮುಲ. ಇದು ನಮ್ಮ ಉಡುಪಿಯ ಸಮೀಪ ಕೊಳಂಬೆ ಗ್ರಾಮದ ಶಾಂತಿನಗರದಲ್ಲಿ ನೆಲೆಸಿದ್ದ ಸಂಸಾರ ಸರೋವರದಲ್ಲಿ ಅರಳಿದ ಚೆಲು ಕಮಲ. ತಂದೆ ಕೃಷ್ಣ ಹಾಗೂ ತಾಯಿ ಪದ್ಮಾವತಿಯ ನಾಭಿಯಲ್ಲರಳಿದ ಕಮಲ. ಇವರ ಓದು ಶುರುವಾಗಿದ್ದು ಒಳಕಾಡು ಹೈಸ್ಕೂಲಿನಲ್ಲಿ. ಕಲಿಯುವುದರಲ್ಲಿ ಚಿಕ್ಕಂದಿನಿಂದಲೂ ನಂಬರ್ ವನ್.…