Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ಕಲಬುರಗಿಯ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ನಿಂದ ಕೊಡಮಾಡುವ 2025ನೇ ಸಾಲಿನ ‘ಬಸವ ಪ್ರಶಸ್ತಿ’ಗೆ ಕವಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂಪಾಯಿ 50,000 ನಗದು ಮತ್ತು ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 11 ಜನವರಿ 2025ರಂದು ಸಂಜೆ 5.30ಕ್ಕೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದ್ದು, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿ .ಎಸ್. ಸಿದ್ದಲಿಂಗಯ್ಯ : ಖ್ಯಾತ ವಿಮರ್ಶಕ, ಕವಿ, ಸಾಹಿತಿ ಡಾ. ಜಿ .ಎಸ್. ಸಿದ್ದಲಿಂಗಯ್ಯನವರು ದಿನಾಂಕ 20 ಫೆಬ್ರವರಿ 1931ರಂದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಸಂಗಮ್ಮ ಹಾಗೂ ಜಿ. ಬಿ. ಶ್ರೀಕಂಠಯ್ಯನವರ ಪುತ್ರರಾಗಿ ಜನಿಸಿದರು. ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ., ಮೈಸೂರು ವಿ.ವಿ.ಯಿಂದ ಎಂ. ಎ. ಪದವಿ ಪಡೆದ ಇವರು ಸರ್ಕಾರಿ ಕಾಲೇಜಿನ ಅಧ್ಯಾಪಕ, ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. 1989 ರಿಂದ 1992 ರವರೆಗೆ ಕನ್ನಡ ಸಾಹಿತ್ಯ…
ಕಟೀಲು : ಕಳೆದ ಹದಿನಾರು ವರುಷಗಳಿಂದ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳನ್ನು ಮಕ್ಕಳಿಗೆ ಕಲಿಸಿಕೊಡುತ್ತಿರುವ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಪರ್ವ ಕಟೀಲಿನ ಸರಸ್ವತೀ ಸದನದಲ್ಲಿ ದಿನಾಂಕ 28 ಡಿಸೆಂಬರ್ 2024 ಮತ್ತು ದಿನಾಂಕ 29 ಡಿಸೆಂಬರ್ 2024ರಂದು ಸಂಪನ್ನಗೊಂಡಿತು. ಯಕ್ಷಗಾನದ ಪೂರ್ವರಂಗ, ಒಡ್ಡೋಲಗಗಳು, ತಾಳಮದ್ದಲೆ, ಗಾನವೈಭವ ಯಕ್ಷಗಾನ ಪ್ರಸಂಗಗಳನ್ನು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕೋಡಂಗಿ ಬಾಲಗೋಪಾಲರಾಗಿ ಮನೀಷ್ ಗಿಡಿಗೆರೆ, ತೇಜಸ್ ಸುಂಕದಕಟ್ಟೆ, ಮನೀಷ್, ಸುಶ್ವಿತ್ ಶೆಟ್ಟಿ, ತೇಜಸ್ವಿ ಆಚಾರ್ಯ, ಜೀವನ್. ಮುಖ್ಯ ಸ್ತ್ರೀವೇಷದಲ್ಲಿ ಮೈತ್ರಿ ಕುಲಾಲ್, ಸಾನ್ವಿ ಕೋಟ್ಯಾನ್, ಹೊಗಳಿಕೆಯಲ್ಲಿ ಶಿವಾನಿ, ಷಣ್ಮುಖ ಸುಬ್ರಾಯದಲ್ಲಿ ಕ್ಷಿತಿಜ್ ಕುಲಾಲ್ ಪಾತ್ರ ವಹಿಸಿದರು. ರಂಗರಂಗಿಯನ್ನು ಶ್ರಾವ್ಯಾ, ಶ್ರೇಯಾ, ಕೋಲಾಟವನ್ನು ಸುಶ್ಮಿತಾ, ಭವ್ಯಾ, ಶ್ರೀನಿಧಿ, ಅದ್ವಿಕ್, ಧನ್ಯಶ್ರೀ, ಸುದೀಷ್ಣ, ಧನ್ಯಶ್ರೀ ಆಚಾರ್ಯ, ಶ್ರೇಯಾ ಆಚಾರ್ಯ, ಧನ್ವಿಕಾ, ಹಂಸಿಕಾ, ಪೀಠಿಕಾ ಸ್ತ್ರೀವೇಷವನ್ನು ತನ್ಮಯಿ, ಆಕಾಶ್ ಎಲ್. ಕುಲಾಲ್ ಪ್ರದರ್ಶಿಸಿದರು. ಅರ್ಧನಾರೀಶ್ವರ ಅಭೀಷ್ಣಾ, ಚಪ್ಪರ ಮಂಚವನ್ನು ಪ್ರೀತಿಕಾ ಪ್ರದರ್ಶಿಸಿದರು. ರಾಮನ ಒಡ್ಡೋಲಗವನ್ನು ಭುವನ್ ಮತ್ತು ಡಿಂಪಲ್…
ಮೈಸೂರು : “ಯಾವುದೇ ಯಶಸ್ಸಾದರೂ ಅದು ಕೇವಲ ಶ್ರಮದ ಮೇಲೆ ನಿಂತಿರುತ್ತದೆ” ಎಂದು ಬಲವಾಗಿ ನಂಬಿದವಳು ನಾನು. ಅಂತ ಒಂದು ಯಶಸ್ಸನ್ನು ದಿನಾಂಕ 28 ಡಿಸೆಂಬರ್ 2024ರ ಶನಿವಾರದಂದು ಅಕ್ಷರಶಃ ಅನುಭವಿಸಿದೆ. ‘ಸ್ವರ’ ಮತ್ತು ‘ಧ್ವನಿ’ ಓದುತ್ತಿರುವ ‘ಅರಿವು ವಿದ್ಯಾಸಂಸ್ಥೆ’ಯು ಪ್ರತೀ ವರ್ಷ ಪೋಷಕರು ಹಾಗೂ ಶಿಕ್ಷಕರಿಗಾಗಿ ‘ಅರಿವು ಹಬ್ಬ’ವನ್ನು ಆಚರಿಸುತ್ತದೆ. ಇದರಲ್ಲಿ ಆಸಕ್ತ ಪೋಷಕರು ಭಾಗವಹಿಸಬಹುದು. ಮಗಳ ಒತ್ತಾಯಕ್ಕಾಗಿ ಈ ಬಾರಿ ನಾನು ಭಾಗವಹಿಸಲು ನಿರ್ಧರಿಸಿದೆ. ‘ಕರಾವಳಿ ಜನಪದ ಪ್ರಕಾರ’ಗಳನ್ನು ಪೋಷಕರ ಮೂಲಕ ರಂಗದ ಮೇಲೆ ತರಬೇಕೆಂದು ಆಲೋಚಿಸಿದೆ. ಶಾಲೆಯ ಆಡಳಿತ ಮಂಡಳಿಯು ಇದಕ್ಕೆ ಒಪ್ಪಿತು. ಕಳೆದ ಒಂದುವರೆ ತಿಂಗಳಿಂದ ಮನೆ, ಮಕ್ಕಳು, ಹೋಟೇಲ್ ಎಲ್ಲವನ್ನೂ ಮರೆತೇ ಬಿಟ್ಟಿದ್ದೆ. ಮೊರ, ಮುಟ್ಟಾಳೆ, ಬೀಸುವ ಕಲ್ಲು, ಒನಕೆ, ಹಸಿರು ಹುಲ್ಲು ಹೀಗೆ ಕಾರಿನ ತುಂಬೆಲ್ಲ ‘ಅರಿವು ಹಬ್ಬ’ದ ಸಂಭ್ರಮವನ್ನು ಕಟ್ಟಿಕೊಂಡು ಓಡಾಡಿದ್ದಾಯಿತು. ಸುಮಾರು 15 ಜನ ಪೋಷಕರ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಜ್ಜಾದರು. ಎಲ್.ಕೆ.ಜಿ.ಯಿಂದ ಹಿಡಿದು 10ನೇ ತರಗತಿಯವರೆಗಿನ ಮಕ್ಕಳ ಪೋಷಕರ…
ವಜ್ರದಂತೆ ಪ್ರತಿಭೆಯೊಂದು ಯಕ್ಷಲೋಕದಲ್ಲಿ ತನ್ನ ಛಾಪು ಮೂಡಿಸುತ್ತಾ ಹಲವಾರು ವೇದಿಕೆ ಏರಿ ಕಲಾ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿರುವ ಅಪ್ರತಿಮ ಪ್ರತಿಭಾನ್ವಿತ ಕಲಾವಿದ ವಿಕೇಶ್ ರೈ ಶೇಣಿ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೊಕ್ಕಾಡಿ ಸಮೀಪದ ಶೇಣಿಯ ನಾರಾಯಣ ರೈ ಶೇಣಿ ಹಾಗೂ ಸರಸ್ವತಿ ಎನ್ ರೈ ಇವರ ಮಗನಾಗಿ 02.03.1991ರಂದು ವಿಕೇಶ್ ರೈ ಶೇಣಿ ಅವರ ಜನನ. ಸುಳ್ಯದ ನೆಹರು ಸ್ಮಾರಕ ಕಾಲೇಜಿನಿಂದ ಬಿಬಿಎಮ್ ಪದವಿ ಪಡೆದರು. ಯಕ್ಷಗಾನ ಗುರುಗಳು:- ನಾಟ್ಯ:-ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಶ್ರೀ ಕೋಡ್ಲ ಗಣಪತಿ ಭಟ್. ಭಾಗವತಿಗೆ:- ಶ್ರೀ ವಿಶ್ವವಿನೋದ ಬನಾರಿ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು:- ಊರಿನಲ್ಲಿ ಯಕ್ಷಗಾನಕ್ಕೆ ಪೂರಕವಾದ ವಾತಾವರಣ ಇತ್ತು, ಅನೇಕ ಕಲಾವಿದರೂ ಇದ್ದರು. ಹಾಗಾಗಿ ಯಕ್ಷಗಾನದ ಆಸಕ್ತಿ ಬೆಳೆಯಿತು. ಮುಖ್ಯವಾಗಿ ಪ್ರೋತ್ಸಾಹಿಸಿದವರು ಡಾ. ಪ್ರಭಾಕರ ಶಿಶಿಲ, ಡಾ. ಚಂದ್ರಶೇಖರ ಧಾಮ್ಲೆ. ದಿ. ಶ್ರೀ ಸತ್ಯನ್ ದೇರಾಜೆ, ಶ್ರೀ ಭಕ್ತವತ್ಸಲ ಭಟ್ ನೀರಬಿದಿರೆ. ನೆಚ್ಚಿನ ಪ್ರಸಂಗಗಳು:-…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-94’ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ‘ನಾಟಕಾಷ್ಟಕ’ದ ಆರನೇದಿನದ ಕಾರ್ಯಕ್ರಮ ದಿನಾಂಕ 31 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಿದ ಶ್ರೀನಿವಾಸ ಸೋಮಯಾಜಿ ಮಾತನಾಡಿ “ಕಲಾ ಪೋಷಕರ ನೆಲೆಯಲ್ಲಿ ‘ಪುರಾಣ ಕಥಾ ಕಲ್ಯಾಣಿ ಆಖ್ಯಾನ’ದಲ್ಲಿ ಪಾತ್ರ ನಿರ್ವಹಿಸಿ ಮನಗೆದ್ದು, ಕಲಾವಿದರ ಶಕ್ತಿಯಾಗಿ ಹೆಸರಾದ ‘ಯಕ್ಷಧಾಮ’ಇದರ ಜನಾರ್ದನ ಹಂದೆ ಹಾಗೂ ಕೋಟ ಸುಬ್ರಾಯ ಆಚಾರ್ ಬಾಲ್ಯದಿಂದಲೂ ಸ್ವತಃ ಕಲಾವಿದರು. ಸಮಾಜದ ಕಲಾವಿದರಿಗಾಗಿ ಹಾಗೂ ಕಲಾ ಸಂಘಟನೆಗಾಗಿ ತಮ್ಮ ದುಡಿಮೆಯ ಒಂದಂಶವನ್ನು ದೇಣಿಗೆಯಾಗಿ ತೆತ್ತು ಸಾಧಕರೆನಿಸಿದವರು. ಇವರನ್ನು ಅಭಿನಂದಿಸುವುದು ಸರ್ವ ಸೂಕ್ತ.” ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಜನಾರ್ದನ ಹಂದೆ “ಬಾಲ್ಯದಿಂದಲೂ ನಾಟಕದಲ್ಲಿ ತೊಡಗಿಕೊಂಡದ್ದರಿಂದ ಕಲಾವಿದರ ಬದುಕನ್ನು ಅರ್ಥೈಸಿಕೊಂಡು, ಸಂಘಟನೆಯ ಕಷ್ಟ ನಷ್ಟಗಳ ಬಗ್ಗೆ ಅರಿವು ಇದ್ದುದರಿಂದ ನಮ್ಮ ಸ್ಪಂದನೆ ಅನಿವಾರ್ಯವಾಗಿ ನಡೆದು ಹೋಗುತ್ತದೆ.” ಎಂದರು. ಕಾರ್ಯಕ್ರಮದಲ್ಲಿ…
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಪ್ರಸ್ತುತ ಪಡಿಸುವ ಆನ್ಲೈನ್ ಸಂಗೀತ ಕಾರ್ಯಾಗಾರವು ದಿನಾಂಕ 18 ಜನವರಿ 2025 ಮತ್ತು 19 ಜನವರಿ 2025ರಂದು ಸಂಜೆ 8-00 ಗಂಟೆಯಿಂದ 9-30 ಗಂಟೆ ತನಕ ವಿದುಷಿ ಎಸ್.ಕೆ. ಮಹತಿಯವರಿಂದ ನಡೆಯಲಿದೆ. ಡಾ. ಎಂ. ಬಾಲಮುರಳೀಕೃಷ್ಣ ಇವರ ‘ಮುರಳಿ ಗಾನಂ’ ಸಂಯೋಜನೆಯಲ್ಲಿ ಕಾರ್ಯಾಗಾರವು ನಡೆಯಲಿದ್ದು, ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ +91 7411916098 ವಿಭು ರಾವ್ ಇವರನ್ನು ಸಂಪರ್ಕಿಸಬಹುದು.
ಹಾಸನ : ಚೈತ್ರೋದಯ ಪ್ರಕಾಶನ ಇವರ ವತಿಯಿಂದ ಶ್ರೀಮತಿ ಲಕ್ಷ್ಮೀದೇವಿ ದಾಸಪ್ಪನವರ ಪುಸ್ತಕ ಬಿಡುಗಡೆ ಸಮಾರಂಭವನ್ನು ದಿನಾಂಕ 05 ಜನವರಿ 2024ರಂದು ಬೆಳಿಗ್ಗೆ 10-30 ಗಂಟೆಗೆ ಹಾಸನದ ಸಂಸ್ಕೃತ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕೃತ ವಿದ್ವಾಂಸರಾದ ಶ್ರೀ ಪರಮೇಶ್ವರ ವಿ. ಭಟ್ ಇವರು ವಹಿಸಲಿದ್ದು, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ನಾಯಕರಹಳ್ಳಿ ಮಂಜೇಗೌಡ ಇವರು ಉದ್ಘಾಟನೆ ಮಾಡಲಿದ್ದಾರೆ. ಬಿಡುಗಡೆಗೊಳ್ಳಲಿರುವ ಕೃತಿ ‘ಬಿಡಿ ಹೂಗಳು’ ಇದರ ಪರಿಚಯವನ್ನು ಹಿರಿಯ ಸಾಹಿತಿ ಶ್ರೀಮತಿ ಸುಶೀಲಾ ಸೋಮಶೇಖರ್ ಮತ್ತು ‘ಮಹಾನ್ ಚೇತನಗಳಿಗೆ ನಮನಗಳು’ ಎಂಬ ಕೃತಿಯ ಪರಿಚಯವನ್ನು ಹಿರಿಯ ಗಮಕ ವ್ಯಾಖ್ಯಾನಕಾರರಾದ ಕೆ.ಆರ್. ಕೃಷ್ಣಯ್ಯ ಇವರುಗಳು ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀ ಕಲಾಶ್ರೀ ಗಣೇಶ ಉಡುಪ ಮತ್ತು ಶ್ರೀ ದಿಬ್ಬೂರು ರಮೇಶ್ ಇವರಿಂದ ಕವನ ಗಾಯನ ಮತ್ತು ಚಿ.ರಾ. ಸುಧನ್ವ ಎಸ್. ಇವರಿಂದ ಕವನ ವಚನ ನಡೆಯಲಿದೆ.
ಮಂಗಳೂರು : ಮಹಾಲಸ ಕಾಲೇಜ್ ಆಫ್ ವಿಷುವಲ್ ಆರ್ಟ್ ಆಯೋಜಿಸಿದ ‘ಮಂಡಲ ಮತ್ತು ಕೊಲಾಜ್ ಆರ್ಟ್’ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವು ದಿನಾಂಕ 27 ಡಿಸೆಂಬರ್ 2024ರ ಶುಕ್ರವಾರದಂದು ಕಾಲೇಜಿನಲ್ಲಿ ನಡೆಯಿತು. ಸರಳವಾಗಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಮಹಾಲಸ ಶಿಕ್ಷಣ ಸಮಿತಿ ನಿರ್ದೇಶಕ ಬಾಬು ರಾವ್, ಕಾಲೇಜಿನ ಸ್ಥಾಪಕ ತಾರಾನಾಥ ಪೈ, ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ, ಪ್ರದರ್ಶನದ ನಿರ್ದೇಶಕ ಸೈಯದ್ ಆಸಿಫ್ ಅಲಿ ಹಾಗೂ ಕಾಲೇಜಿನ ಪ್ರಾಂಶುಪಾಲ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಪ್ರದರ್ಶನದಲ್ಲಿ ನಿರುಪಯುಕ್ತ ಪೇಪರ್, ಮ್ಯಾಗಝಿನ್ ಚೂರುಗಳಿಂದ ಮೂಡಿ ಬಂದ ಪ್ರಧಾನಿ ನರೇಂದ್ರ ಮೋದಿ, ಅಬ್ದುಲ್ ಕಲಾಂ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಹಂಪಿ ಕಲ್ಲಿನರಥ, ವಿವಿಧ ಪ್ರಾಣಿಗಳು ಸಹಿತ ಸುಮಾರು 35ಕ್ಕೂ ಹೆಚ್ಚಿನ ಕಲಾಕೃತಿಗಳು ಆಕರ್ಷಿಸುತ್ತಿವೆ. ಅದೇ ರೀತಿ, ಸಾಂಪ್ರದಾಯಿಕ ಮಂಡಲ ಕಲೆಯ ಸುಮಾರು 50ರಷ್ಟು ಚಿತ್ರಕಲೆಗಳು ಇಲ್ಲಿದೆ. ಲ್ಯಾಂಡ್‌ಸ್ಕೇಪ್, ಪ್ರಾಣಿಗಳು, ಹೂವುಗಳು ಸಹಿತ ಡಾಟ್ ಪೈಂಟಿಂಗ್…
ಉಡುಪಿ : ತುಳುಕೂಟ ಉಡುಪಿ (ರಿ.) ಇದರ ವತಿಯಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರ ಸಹಯೋಗದೊಂದಿಗೆ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಇವರ ಸ್ಮರಣಾರ್ಥ ‘ತುಳು ನಾಟಕ ಹಬ್ಬ’ ಕಾರ್ಯಕ್ರಮವನ್ನು ದಿನಾಂಕ 05 ಜನವರಿ 2025ರಿಂದ 10 ಜನವರಿ 2025ರವೆರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 05 ಜನವರಿ 2025ರಂದು ಸಂಜೆ 5-00 ಗಂಟೆಗೆ ತುಳುಕೂಟದ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ಶಾಸಕರಾದ ಶ್ರೀ ಯಶ್ ಪಾಲ್ ಎ. ಸುವರ್ಣ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಇವರಿಂದ ರವಿರಾಜ್ ಎಚ್.ಪಿ. ನಿರ್ದೇಶನದಲ್ಲಿ ‘ತುದೆ ದಾಂಟಿ ಬೊಕ್ಕ’ ನಾಟಕ ಪ್ರದರ್ಶನ, ದಿನಾಂಕ 06 ಜನವರಿ 2025ರಂದು ಉಡುಪಿ ಮಲ್ಪೆಯ ಕರಾವಳಿ ಕಲಾವಿದರು (ರಿ.) ಇವರಿಂದ ಅಕ್ಷಯ್ ಆರ್. ಶೆಟ್ಟಿ ರಚಿಸಿರುವ ನಾಗರಾಜ್ ವರ್ಕಾಡಿ ನಿರ್ದೇಶನದಲ್ಲಿ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಾರ್ಷಿಕೋತ್ಸವ ‘ಆಂಜನೇಯ-56’ ಕಾರ್ಯಕ್ರಮವು ದಿನಾಂಕ 25 ಡಿಸೆಂಬರ್ 2024ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು. ಸಂಜೆ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ಇವರಿಗೆ ‘ಯಕ್ಷಾಂಜನೇಯ ಪ್ರಶಸ್ತಿ’ ಹಾಗೂ ಖ್ಯಾತ ಭಾಗವತೆ ಭವ್ಯಶ್ರೀ ಕುಲ್ಕುಂದ ಇವರಿಗೆ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ‘ವಿಂಶತಿ ಗೌರವ’ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿ ಆಶೀವರ್ಚನ ನೀಡಿದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕ ವೇದಮೂರ್ತಿ ಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ “ಕಳೆದ 56 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಂಜನೇಯ ಯಕ್ಷಗಾನ ಕಲಾ ಸಂಘದ ಸೇವೆ ಇನ್ನಷ್ಟು ಪಸರಿಸಲಿ. ಮಹಿಳಾ ತಂಡವನ್ನು ಸ್ಥಾಪಿಸಿ ಕಳೆದ 20 ವರ್ಷಗಳಿಂದ ಮುನ್ನಡೆಯುತ್ತಿರುವುದು ಯಕ್ಷಗಾನ ಕ್ಷೇತ್ರದ ಬಹುದೊಡ್ಡ ಸಾಧನೆಯಾಗಿದೆ” ಎಂದರು. ಅಧ್ಯಕ್ಷತೆ ವಹಿಸಿದ್ದ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್…