Author: roovari

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕಕ್ಕೆ ವಿಶೇಷ ಸಂಭ್ರಮದ ಕ್ಷಣ. ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ರಾಯಭಾರಿ ಡಾ. ಮುರಲೀ ಮೋಹನ್ ಚೂಂತಾರ್ ಇವರ ಮನೆ ‘ಸರೋಜಿನಿ’ಯಲ್ಲಿ ‘ಜೂರಿಕ್ ನಲ್ಲಿ ಕನ್ನಡ ಡಿಂಡಿಮ’ ಎಂಬ ಸಂಭ್ರಮದ ಕಾರ್ಯಕ್ರಮವನ್ನು ದಿನಾಂಕ 26 ಡಿಸೆಂಬರ್ 2024ರಂದು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಸ್ವಿಟ್ಜರ್ಲೆಂಡ್ ಜೂರಿಕ್ ಕನ್ನಡ ಕೂಟದ ಸಂಚಾಲಕರಾದ ಡಾ. ಪ್ರಭಿತಾ ಇವರು ಆಗಮಿಸಿದ್ದರು. ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಆಗಮಿಸಿದ್ದ ಇವರು ಹಿಂತಿರುಗುವ ಹಾದಿಯಲ್ಲಿ ದ.ಕ. ಜಿಲ್ಲಾ ಮಂಗಳೂರು ತಾಲೂಕು ಘಟಕದ ಪರಿಷತ್ತಿಗೆ ಭೇಟಿ ನೀಡಿದರು. ನಗರದ ಬಿಜೈ ‘ಸರೋಜಿನಿ’ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿ, ಕಾರ್ಯಕ್ರಮವನ್ನು ಪ್ರಾಯೋಜಿಸಿ ಆತಿಥ್ಯ ವಹಿಸಿಕೊಂಡಿದ್ದ ಡಾ. ಮುರಲೀ ಮೋಹನ್ ಚೂಂತಾರ್ ಇವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪರಿಷತ್ತಿನ ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ಎಸ್. ರೇವಣ್ಕರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.…

Read More

ಮಂಗಳೂರು : ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ, ಕೆನರಾ ಕಲ್ಚರಲ್ ಅಕಾಡೆಮಿ ಮತ್ತು ಕಲಾಭಿ (ರಿ.) ಮಂಗಳೂರು ಜಂಟಿಯಾಗಿ ಆಯೋಜಿಸುವ ರಂಗಸಂಗಾತಿ, ಅಸ್ತಿತ್ವ (ರಿ.) ಮತ್ತು ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಭಾಗಿತ್ವದಲ್ಲಿ ಶ್ರೀ ಸದಾನಂದ ಸುವರ್ಣರ ಗೌರವಾರ್ಥ ‘ಸದಾನಂದ ಸುವರ್ಣ ನಾಟಕೋತ್ಸವ 2025’ವನ್ನು ದಿನಾಂಕ 06 ಜನವರಿ 2025 ಮತ್ತು 07 ಜನವರಿ 2025ರಂದು ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 06 ಜನವರಿ 2025ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ.ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಮಾಲತೀ ಮಾಧವ’ ಮತ್ತು ದಿನಾಂಕ 07 ಜನವರಿ 2025ರಂದು ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿರುವ ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಅಂಕದ ಪರದೆ’ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9632794477.

Read More

ಮಡಿಕೇರಿ. ಕನ್ನಡ ನಾಡಿನ ಹಿರಿಯ ಸಾಹಿತಿ ಶಿಶು ಸಾಹಿತ್ಯದ ಪಿತಾಮಹ “ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೊ” ಕೊಡಗಿನ ನಾಡಗೀತೆಯ ರಚನಾಕಾರ ಮಡಿಕೇರಿ ಸೆಂಟ್ರಲ್ ಹೈಸ್ಕೂಲ್ ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಏಕೈಕ ಭಾರತೀಯ ಕನ್ನಡ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ, ಬ್ರಿಟಿಷರ ಕಾಲದಲ್ಲಿ ಕೊಡಗಿನ ಶಾಲಾ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ ಅಪ್ರತಿಮಾ ಸಂಘಟಕ, ದಿ. ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಸಲುವಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ದಿನಾಂಕ 06 ಜನವರಿ 2025ರ ಸೋಮವಾರ ಬೆಳಿಗ್ಗೆ ಘಂಟೆ 10.30ಕ್ಕೆ ಮಡಿಕೇರಿಯ ಜೂನಿಯರ್ ಕಾಲೇಜು ಆವರಣದ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಕರೆಯಲಾಗಿದೆ. ಈ ಸಭೆಯಲ್ಲಿ ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಚರ್ಚಿಸಬೇಕಾಗಿದೆ‌. ಶ್ರೇಷ್ಠ ಶಿಕ್ಷಕರಾದ ಹಿರಿಯ ತಲೆಮಾರಿನ ಹಿರಿಯ ಸಾಹಿತಿಗಳಾದ ಪಂಜೆ ಮಂಗೇಶರಾಯರ 150ನೇ ವರ್ಷಾಚರಣಾ ಕಾರ್ಯಕ್ರಮವನ್ನು ಯಶಸ್ವಿ ಪೂರ್ಣವಾಗಿ ನಡೆಸಲು ತಮ್ಮ ಪೂರ್ಣ…

Read More

ಬೆಂಗಳೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 5ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವು ದಿನಾಂಕ 29 ಡಿಸೆಂಬರ್ 2024ರ ಭಾನುವಾರದಂದು  ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಹಿರಿಯ ಸಾಹಿತಿ ಯೂಸಫ್. ಹೆಚ್ .ಬಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಹಿರಿಯ ಸಾಹಿತಿ ಹಾಗೂ ದೂರದರ್ಶನದ  ವಿಶ್ರಾಂತ ಅಧಿಕಾರಿಯಾದ ರಾ. ಸು. ವೆಂಕಟೇಶ ಉದ್ಘಾಟಿಸಿದರು. ಪತ್ರಕರ್ತ ಸಿನಾನ್ ಇಂದಬೆಟ್ಟು ಕುವೆಂಪು ಮತ್ತು ವೈಚಾರಿಕತೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಡಾ ಸುರೇಶ್ ಬಾಬು ಬಿ. ಎನ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡರು. ಎಂ.ಎಂ ಭಾಷಾ ನಂದಿ ಸಂದೇಶ ಭಾಷಣ ಮಾಡಿದರು ಮಾಡಿದರು. ಡಾ.ಶಾಂತ ಜಯಾನಂದ್, ಕಾವ್ಯ ಎಸ್.ಟಿ ಚಂದ್ರಪ್ಪ, ಕುಮಾರಿ ಗೌತಮಿ ಜೈನ್, ಹಾಶಿಂ ಬನ್ನೂರು, ಅಮಿತಾ ಅಶೋಕ್ ಪ್ರಸಾದ್, ಬಸವರಾಜ್, ಸರಸ್ವತಿ ಎಲ್. ಮಂಜು ಹಾಗೂ ಮಂಜು ಟಿ. ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಮತ್ತು ಸಾಂಸ್ಕೃತಿಕ ಕಲಾವಿದರು ಸಾಹಿತ್ಯದ…

Read More

ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಕಲಾವಿದರು ಕಾಣಲು ಸಿಗುತ್ತಾರೆ. ಆದರೆ ಯಕ್ಷ ಗುರು, ಸಂಘಟಕ, ಕಲಾ ಪೋಷಕ, ನಿರೂಪಕ, ಅರ್ಥಧಾರಿ, ವೇಷಧಾರಿ ಹೀಗೆ ಯಕ್ಷಗಾನ ರಂಗದಲ್ಲಿ  ಎಲ್ಲಾ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಕೆಲವು ಕಲಾವಿದರ ಸಾಲಿನಲ್ಲಿ ನಮಗೆ ಕಾಣ ಸಿಗುವ ಕಲಾವಿದರು ಶ್ರೀಯುತ ರವಿ ಅಲೆವೂರಾಯ ವರ್ಕಾಡಿ. ದಿ.ಲಕ್ಷ್ಮೀನಾರಾಯಣ ಅಲೆವೂರಾಯ ವರ್ಕಾಡಿ ಹಾಗೂ ಶ್ರೀಮತಿ ಶ್ರೀದೇವಿ ಇವರ ಮಗನಾಗಿ 0೧.೦೧.೧೯೬೪ರಂದು ಇವರ ಜನನ. BSC ಇವರ ವಿದ್ಯಾಭ್ಯಾಸ. ತಂದೆ ಸ್ವತಃ ವೇಷಧಾರಿ ಹಾಗೂ ಅರ್ಥಧಾರಿ ಆದ ಕಾರಣ ಯಕ್ಷಗಾನ ಇವರಿಗೆ ರಕ್ತಗತವಾಗಿ ಬಂದ ಕಲೆ. ಯಕ್ಷಗಾನದ ಎಲ್ಲಾ ಪುರಾಣ ಪ್ರಸಂಗಗಳು ಮತ್ತು ಕೆಲವು ತುಳು ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ದೇವಿ, ಚಂದ್ರಮತಿ, ದಮಯಂತಿ, ಕೃಷ್ಣ, ವಿಷ್ಣು, ರಾಮ, ಸ್ತ್ರೀ ವೇಷ, ಪುರುಷ ವೇಷ ಹಾಗೂ ಪುಂಡು ವೇಷ ಹೀಗೆ ಎಲ್ಲಾ ವೇಷಗಳನ್ನು ಮಾಡುವ ಓರ್ವ ಸಮರ್ಥ ಕಲಾವಿದರು ಶ್ರೀಯುತ ರವಿ ಅಲೆವೂರಾಯ ವರ್ಕಾಡಿ. ರಂಗಕ್ಕೆ ಹೋಗುವ ಮೊದಲು ಯಾವ ರೀತಿ ತಯಾರಿ ಮಾಡಿಕೊಳ್ತೀರಾ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:- ರಂಗಕ್ಕೆ…

Read More

ಮಡಿಕೇರಿ : ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ಯನ್ನು ರಾಷ್ಟ್ರಕವಿ ಕುವೆಂಪುರವರು ರಚಿಸಿದ್ದು, ನಾಡಗೀತೆಯ ಆಶಯಕ್ಕೆ ನೂರು ವರ್ಷ ತುಂಬಿದೆ. ಅದರ ನೆನಪಿಗಾಗಿ ಸಹಸ್ರಕಂಠದಲ್ಲಿ ನಾಡಗೀತೆಯನ್ನು ಹಾಡುವ ಕಾರ್ಯಕ್ರಮವನ್ನು ಮತ್ತು ರಾಷ್ಟ್ರಕವಿ ಕುವೆಂಪುರವರ 120ನೆಯ ಜನ್ಮ ದಿನಾಚರಣೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಇಲಾಖೆ, ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸರಕಾರಿ ಹಿರಿಯ ದರ್ಜೆ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ದಿನಾಂಕ 04 ಜನವರಿ 2025ರಂದು ಬೆಳಿಗ್ಗೆ ಗಂಟೆ 9-45ಕ್ಕೆ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಮಂಜುಳಾ ಕೆ., ಸಾರ್ವಜನಿಕ ಶಿಕ್ಷಣ ಇಲಾಖೆಯ…

Read More

ಧಾರವಾಡ : ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆಯವರು ಬರೆದ ‘ಸುನಂದಾ ಬೆಳಗಾಂವಕರ ವ್ಯಕ್ತಿತ್ವ ಸಾಹಿತ್ಯ’ ಎಂಬ ಪುಸ್ತಕವನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ 29 ಡಿಸೆಂಬರ್ 2024ರಂದು ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಖ್ಯಾತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ಮಾತನಾಡಿ “ಸುನಂದಾ ಬೆಳಗಾಂವಕರ್ ಅವರ ಕೃತಿಗಳಲ್ಲಿ ಧಾರವಾಡದ ಮಣ್ಣಿನ ಗಂಧವಿದೆ. ಅವರ ಬರಹಗಳನ್ನು ಪರಿಸರ ವಿಮರ್ಶೆಯ ದೃಷ್ಟಿಕೋನದಿಂದ ಅಧ್ಯಯನ ಮಾಡಲು ಅವಕಾಶವಿದೆ. ಅವರು ತಮ್ಮ ಬರಹಗಳಲ್ಲಿ ಆಧುನಿಕ ಜಗತ್ತಿನ ಸೂಕ್ಷ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಯೋಜನೆಯ ಅಂಗವಾಗಿ ಮೂಡಿ ಬಂದಿರುವ ಈ ಕೃತಿಯು ಸುನಂದಾ ಬೆಳಗಾಂವಕರರ ಕುರಿತು ಪ್ರಕಟವಾದ ಮೊದಲ ಪುಸ್ತಕವಾಗಿದೆ. ಈ ಪುಸ್ತಕವನ್ನು ಬರೆಯುವಲ್ಲಿ ಪಟ್ಟಾಜೆಯವರು ತಲಸ್ಪರ್ಶಿ ಅಧ್ಯಯನವನ್ನು ಮಾಡಿದ್ದಾರೆ. ಮೂಲತಃ ಕಾಸರಗೋಡಿನವರಾಗಿದ್ದರೂ ಸುನಂದಾ ಅವರ ಬರಹಗಳಲ್ಲಿ ಕಂಡು ಬರುವ ಧಾರವಾಡದ ಆಡುಮಾತಿನ ಲಯವನ್ನು ಗ್ರಹಿಸಿಕೊಂಡು ಆಳವಾಗಿ ವಿಶ್ಲೇಷಿಸಿದ್ದಾರೆ. ಮೌಲಿಕ ವಿಚಾರಗಳನ್ನು ಒಳಗೊಂಡಿರುವ ಈ ಪುಸ್ತಕವು ಸುನಂದಾ…

Read More

ಮಂಗಳೂರು : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ವತಿಯಿಂದ ‘ತ್ರಿದಶ ನಾಟ್ಯ ಕಲೋತ್ಸವ’ ಕಾರ್ಯಕ್ರಮವನ್ನು ದಿನಾಂಕ 05 ಜನವರಿ 2025ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರಿಂದ ನಟರಾಜ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಭಟ್ ಎಸ್. ಜಿ. ಇವರು ವಹಿಸಲಿರುವರು. ಇದೇ ಸಂದರ್ಭದಲ್ಲಿ ಕಾರ್ಕಳದ ಶ್ರೀ ನೃತ್ಯಾಲಯದ ನೃತ್ಯ ಗುರುಗಳಾದ ವಿದ್ವಾನ್ ಶ್ರೀ ಸುಬ್ರಹ್ಮಣ್ಯ ನಾವಡ ಇವರನ್ನು ಸನ್ಮಾನಿಸಲಾಗುವುದು. ಗಾನಶ್ರೀ ಸಂಗೀತ ವಿದ್ಯಾಲಯದ ಶ್ರೀಮತಿ ಶೀಲಾ ದಿವಾಕರ್ ಇವರ ಶಿಷ್ಯ ವೃಂದದವರಿಂದ ‘ಗಾನಾಮೃತ ಸಿಂಚನ’ ಮತ್ತು ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ಕೆ. ಮುರಳೀಧರ್ ಇವರಿಂದ ವೇಣುವಾದನದಲ್ಲಿ ‘ಸ್ವರ ಮಾಧುರ್ಯ’ ಭಕ್ತಿ ಭಾವ, ಚಿತ್ರ ಗೀತೆಗಳ ಸುಮಧುರ ಪ್ರಸ್ತುತಿಗೊಳ್ಳಲಿದೆ. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ…

Read More

ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾಕೇಂದ್ರದ ವತಿಯಿಂದ ಆಯೋಜಿಸಿದ್ದ ‘ನಾಟ್ಯಾರಾಧನಾ ತ್ರಿಂಶೋತ್ಸವ’ದ ಸಮಾರೋಪ ಸಮಾರಂಭವು ದಿನಾಂಕ 27 ಡಿಸೆಂಬರ್ 2024ರ ಶುಕ್ರವಾರ ಪುರಭವನದಲ್ಲಿ ಉದ್ಘಾಟನೆಗೊಂಡಿತು. ಈ ಸಮಾರಂಭವನ್ನು ಉದ್ಘಾಟಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಇವರು ಮಾತನಾಡಿ “ಕಲೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ಕಸುಬಿನ ಜತೆಗೆ ಗಳಿಸಿದ ಸಂಪತ್ತನ್ನು ಕಲೆಗೂ ಮೀಸಲಿರಿಸಿ ಸುಂದರ ಸಮಾಜ ಕಟ್ಟಬೇಕಿದೆ. ಜನ ಭ್ರಷ್ಟರಾಗುವ ಇಂದಿನ ಸಂದರ್ಭದಲ್ಲಿ ಅವರ ಮನಸ್ಸಿನ ಮೇಲೆ ಬೇರೆ ಬೇರೆ ರೀತಿಯ ದಾಳಿಗಳು ಆಗುತ್ತಿರುತ್ತವೆ. ಇದರಿಂದ ಕಲೆ, ಮನರಂಜನೆಯ ವ್ಯತ್ಯಾಸವೇ ತಿಳಿಯದಂತೆ ಆಗುತ್ತಿದೆ. ಇದನ್ನು ನಿವಾರಿಸಲು ಹಿರಿಯರು ಕಟ್ಟಿ ಬೆಳೆಸಿದ ಕಲೆ, ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಗಟ್ಟಿಯಾಗಿ ಬೇರೂರಿಸಿಕೊಂಡು ಉತ್ತಮ ಸಮಾಜವನ್ನು ರೂಪಿಸಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು. ಭರತನಾಟ್ಯಕ್ಕೆ ಸಂಬಂಧಿಸಿ ಸಾಹಿತ್ಯ ತೆಲುಗು, ತಮಿಳಿನಲ್ಲಿ ಇರುವುದರಿಂದ ನಮ್ಮವರಿಗೆ ಅರ್ಥವಾಗುತ್ತಿರಲಿಲ್ಲ. ಇದನ್ನು ‘ನೃತ್ಯಾಮೃತ’ದ ಮೂಲಕ ವಿದುಷಿ ಸುಮಂಗಲಾ ರತ್ನಾಕರ್ ಇವರು ನಿವಾರಿಸಿದ್ದು, ಇದು ಶ್ಲಾಘನೀಯ.…

Read More

ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುತ್ತಿರುವ ಜನಪದ ಕಲೆಗಳ ಸರಣಿಯ 15ನೆಯ ಕಾರ್ಯಾಗಾರದಲ್ಲಿ ಕರ್ನಾಟಕದ ಹೆಮ್ಮೆಯ ಚನ್ನಪಟ್ಟಣದ ಗೊಂಬೆಗಳ ತಯಾರಿಕೆಯ ಕಾರ್ಯಾಗಾರವನ್ನು ದಿನಾಂಕ 04 ಜನವರಿ 2025ರಿಂದ 06 ಜನವರಿ 2025ರವರೆಗೆ ಉಡುಪಿಯ ಬಡಗುಪೇಟೆಯಲ್ಲಿ ಮಣಿಪಾಲ ವಿಶ್ವವಿದ್ಯಾಲಯ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ನೈಸರ್ಗಿಕವಾದ ವರ್ಣಲೇಪನವುಳ್ಳ ಹಗುರವಾದ ಈ ಮರದ ಆಟಿಕೆಗಳು ಮತ್ತು ಗೊಂಬೆಗಳು ಈ ದೇಶೀಯ ಕಲೆಯ ವೈಶಿಷ್ಟ್ಯವಾಗಿದ್ದು, ಈ ಆಟಿಕೆಗಳು ಮಕ್ಕಳ ಆಟಕ್ಕಾಗಿ ಹಾಗೂ ಶೈಕ್ಷಣಿಕ ಬಳಕೆಗಾಗಿ ಬಹಳಷ್ಟು ಖ್ಯಾತಿಯನ್ನು ಪಡೆದಿವೆ. ಚನ್ನಪಟ್ಟಣದ ಕಲಾವಿದೆಯರಾದ ಶ್ರೀಮತಿ ಸುಕನ್ಯಾ ಹಾಗೂ ಶ್ರೀಮತಿ ಕಲಾ ಇವರುಗಳು ಈ ಕಲೆಯನ್ನು ಕಾರ್ಯಾಗಾರದಲ್ಲಿ ಕಲಿಸಿಕೊಡುತ್ತಿದ್ದು, ಉಡುಪಿಯ ಕಲಾಪ್ರಿಯರಿಗೆ ನವ ವರ್ಷಕ್ಕೆ ಹೊಸತೊಂದು ಕಲೆಯನ್ನು ಕಲಿಯುವ ಅವಕಾಶ ಲಭಿಸಲಿದೆ. ತಿರುಗಣೆ ತಂತ್ರಗಾರಿಕೆಯಲ್ಲಿ ಮರದ ಅಲಂಕೃತ ವಿನ್ಯಾಸಗಳನ್ನು ರಚಿಸಿಕೊಂಡು, ಅಂತೆಯೇ ವರ್ಣ ಲೇಪಿಸುವ ಈ ವಿಧಾನ ಪರ್ಶಿಯನ್ ಆಟಿಕೆಗಳ ಪ್ರಭಾವದಿಂದ ರೂಪಿಸಲ್ಪಟ್ಟಿದ್ದು, ಕಾರ್ಯಾಗಾರದಲ್ಲಿ…

Read More