Subscribe to Updates
Get the latest creative news from FooBar about art, design and business.
Author: roovari
ಧಾರವಾಡ : ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆಯವರು ಬರೆದ ‘ಸುನಂದಾ ಬೆಳಗಾಂವಕರ ವ್ಯಕ್ತಿತ್ವ ಸಾಹಿತ್ಯ’ ಎಂಬ ಪುಸ್ತಕವನ್ನು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ 29 ಡಿಸೆಂಬರ್ 2024ರಂದು ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಖ್ಯಾತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ಮಾತನಾಡಿ “ಸುನಂದಾ ಬೆಳಗಾಂವಕರ್ ಅವರ ಕೃತಿಗಳಲ್ಲಿ ಧಾರವಾಡದ ಮಣ್ಣಿನ ಗಂಧವಿದೆ. ಅವರ ಬರಹಗಳನ್ನು ಪರಿಸರ ವಿಮರ್ಶೆಯ ದೃಷ್ಟಿಕೋನದಿಂದ ಅಧ್ಯಯನ ಮಾಡಲು ಅವಕಾಶವಿದೆ. ಅವರು ತಮ್ಮ ಬರಹಗಳಲ್ಲಿ ಆಧುನಿಕ ಜಗತ್ತಿನ ಸೂಕ್ಷ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಯೋಜನೆಯ ಅಂಗವಾಗಿ ಮೂಡಿ ಬಂದಿರುವ ಈ ಕೃತಿಯು ಸುನಂದಾ ಬೆಳಗಾಂವಕರರ ಕುರಿತು ಪ್ರಕಟವಾದ ಮೊದಲ ಪುಸ್ತಕವಾಗಿದೆ. ಈ ಪುಸ್ತಕವನ್ನು ಬರೆಯುವಲ್ಲಿ ಪಟ್ಟಾಜೆಯವರು ತಲಸ್ಪರ್ಶಿ ಅಧ್ಯಯನವನ್ನು ಮಾಡಿದ್ದಾರೆ. ಮೂಲತಃ ಕಾಸರಗೋಡಿನವರಾಗಿದ್ದರೂ ಸುನಂದಾ ಅವರ ಬರಹಗಳಲ್ಲಿ ಕಂಡು ಬರುವ ಧಾರವಾಡದ ಆಡುಮಾತಿನ ಲಯವನ್ನು ಗ್ರಹಿಸಿಕೊಂಡು ಆಳವಾಗಿ ವಿಶ್ಲೇಷಿಸಿದ್ದಾರೆ. ಮೌಲಿಕ ವಿಚಾರಗಳನ್ನು ಒಳಗೊಂಡಿರುವ ಈ ಪುಸ್ತಕವು ಸುನಂದಾ…
ಮಂಗಳೂರು : ಕುಳಾಯಿ ಹೊಸಬೆಟ್ಟು ಇಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ವತಿಯಿಂದ ‘ತ್ರಿದಶ ನಾಟ್ಯ ಕಲೋತ್ಸವ’ ಕಾರ್ಯಕ್ರಮವನ್ನು ದಿನಾಂಕ 05 ಜನವರಿ 2025ರಂದು ಸಂಜೆ 5-30 ಗಂಟೆಗೆ ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರಿಂದ ನಟರಾಜ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ರಮೇಶ್ ಭಟ್ ಎಸ್. ಜಿ. ಇವರು ವಹಿಸಲಿರುವರು. ಇದೇ ಸಂದರ್ಭದಲ್ಲಿ ಕಾರ್ಕಳದ ಶ್ರೀ ನೃತ್ಯಾಲಯದ ನೃತ್ಯ ಗುರುಗಳಾದ ವಿದ್ವಾನ್ ಶ್ರೀ ಸುಬ್ರಹ್ಮಣ್ಯ ನಾವಡ ಇವರನ್ನು ಸನ್ಮಾನಿಸಲಾಗುವುದು. ಗಾನಶ್ರೀ ಸಂಗೀತ ವಿದ್ಯಾಲಯದ ಶ್ರೀಮತಿ ಶೀಲಾ ದಿವಾಕರ್ ಇವರ ಶಿಷ್ಯ ವೃಂದದವರಿಂದ ‘ಗಾನಾಮೃತ ಸಿಂಚನ’ ಮತ್ತು ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ಕೆ. ಮುರಳೀಧರ್ ಇವರಿಂದ ವೇಣುವಾದನದಲ್ಲಿ ‘ಸ್ವರ ಮಾಧುರ್ಯ’ ಭಕ್ತಿ ಭಾವ, ಚಿತ್ರ ಗೀತೆಗಳ ಸುಮಧುರ ಪ್ರಸ್ತುತಿಗೊಳ್ಳಲಿದೆ. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯ…
ಮಂಗಳೂರು : ಉರ್ವದ ನಾಟ್ಯಾರಾಧನಾ ಕಲಾಕೇಂದ್ರದ ವತಿಯಿಂದ ಆಯೋಜಿಸಿದ್ದ ‘ನಾಟ್ಯಾರಾಧನಾ ತ್ರಿಂಶೋತ್ಸವ’ದ ಸಮಾರೋಪ ಸಮಾರಂಭವು ದಿನಾಂಕ 27 ಡಿಸೆಂಬರ್ 2024ರ ಶುಕ್ರವಾರ ಪುರಭವನದಲ್ಲಿ ಉದ್ಘಾಟನೆಗೊಂಡಿತು. ಈ ಸಮಾರಂಭವನ್ನು ಉದ್ಘಾಟಿಸಿದ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಇವರು ಮಾತನಾಡಿ “ಕಲೆ ಜೀವನದ ಅವಿಭಾಜ್ಯ ಅಂಗವಾಗಿದ್ದು, ನಮ್ಮ ಕಸುಬಿನ ಜತೆಗೆ ಗಳಿಸಿದ ಸಂಪತ್ತನ್ನು ಕಲೆಗೂ ಮೀಸಲಿರಿಸಿ ಸುಂದರ ಸಮಾಜ ಕಟ್ಟಬೇಕಿದೆ. ಜನ ಭ್ರಷ್ಟರಾಗುವ ಇಂದಿನ ಸಂದರ್ಭದಲ್ಲಿ ಅವರ ಮನಸ್ಸಿನ ಮೇಲೆ ಬೇರೆ ಬೇರೆ ರೀತಿಯ ದಾಳಿಗಳು ಆಗುತ್ತಿರುತ್ತವೆ. ಇದರಿಂದ ಕಲೆ, ಮನರಂಜನೆಯ ವ್ಯತ್ಯಾಸವೇ ತಿಳಿಯದಂತೆ ಆಗುತ್ತಿದೆ. ಇದನ್ನು ನಿವಾರಿಸಲು ಹಿರಿಯರು ಕಟ್ಟಿ ಬೆಳೆಸಿದ ಕಲೆ, ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಗಟ್ಟಿಯಾಗಿ ಬೇರೂರಿಸಿಕೊಂಡು ಉತ್ತಮ ಸಮಾಜವನ್ನು ರೂಪಿಸಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು. ಭರತನಾಟ್ಯಕ್ಕೆ ಸಂಬಂಧಿಸಿ ಸಾಹಿತ್ಯ ತೆಲುಗು, ತಮಿಳಿನಲ್ಲಿ ಇರುವುದರಿಂದ ನಮ್ಮವರಿಗೆ ಅರ್ಥವಾಗುತ್ತಿರಲಿಲ್ಲ. ಇದನ್ನು ‘ನೃತ್ಯಾಮೃತ’ದ ಮೂಲಕ ವಿದುಷಿ ಸುಮಂಗಲಾ ರತ್ನಾಕರ್ ಇವರು ನಿವಾರಿಸಿದ್ದು, ಇದು ಶ್ಲಾಘನೀಯ.…
ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುತ್ತಿರುವ ಜನಪದ ಕಲೆಗಳ ಸರಣಿಯ 15ನೆಯ ಕಾರ್ಯಾಗಾರದಲ್ಲಿ ಕರ್ನಾಟಕದ ಹೆಮ್ಮೆಯ ಚನ್ನಪಟ್ಟಣದ ಗೊಂಬೆಗಳ ತಯಾರಿಕೆಯ ಕಾರ್ಯಾಗಾರವನ್ನು ದಿನಾಂಕ 04 ಜನವರಿ 2025ರಿಂದ 06 ಜನವರಿ 2025ರವರೆಗೆ ಉಡುಪಿಯ ಬಡಗುಪೇಟೆಯಲ್ಲಿ ಮಣಿಪಾಲ ವಿಶ್ವವಿದ್ಯಾಲಯ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಹಟ್ಟಿಯಂಗಡಿಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ನೈಸರ್ಗಿಕವಾದ ವರ್ಣಲೇಪನವುಳ್ಳ ಹಗುರವಾದ ಈ ಮರದ ಆಟಿಕೆಗಳು ಮತ್ತು ಗೊಂಬೆಗಳು ಈ ದೇಶೀಯ ಕಲೆಯ ವೈಶಿಷ್ಟ್ಯವಾಗಿದ್ದು, ಈ ಆಟಿಕೆಗಳು ಮಕ್ಕಳ ಆಟಕ್ಕಾಗಿ ಹಾಗೂ ಶೈಕ್ಷಣಿಕ ಬಳಕೆಗಾಗಿ ಬಹಳಷ್ಟು ಖ್ಯಾತಿಯನ್ನು ಪಡೆದಿವೆ. ಚನ್ನಪಟ್ಟಣದ ಕಲಾವಿದೆಯರಾದ ಶ್ರೀಮತಿ ಸುಕನ್ಯಾ ಹಾಗೂ ಶ್ರೀಮತಿ ಕಲಾ ಇವರುಗಳು ಈ ಕಲೆಯನ್ನು ಕಾರ್ಯಾಗಾರದಲ್ಲಿ ಕಲಿಸಿಕೊಡುತ್ತಿದ್ದು, ಉಡುಪಿಯ ಕಲಾಪ್ರಿಯರಿಗೆ ನವ ವರ್ಷಕ್ಕೆ ಹೊಸತೊಂದು ಕಲೆಯನ್ನು ಕಲಿಯುವ ಅವಕಾಶ ಲಭಿಸಲಿದೆ. ತಿರುಗಣೆ ತಂತ್ರಗಾರಿಕೆಯಲ್ಲಿ ಮರದ ಅಲಂಕೃತ ವಿನ್ಯಾಸಗಳನ್ನು ರಚಿಸಿಕೊಂಡು, ಅಂತೆಯೇ ವರ್ಣ ಲೇಪಿಸುವ ಈ ವಿಧಾನ ಪರ್ಶಿಯನ್ ಆಟಿಕೆಗಳ ಪ್ರಭಾವದಿಂದ ರೂಪಿಸಲ್ಪಟ್ಟಿದ್ದು, ಕಾರ್ಯಾಗಾರದಲ್ಲಿ…
ಬೆಂಗಳೂರು : ಹೊಸವರ್ಷದ ಹೊಸ್ತಿಲಲ್ಲಿ ನಾದ-ನೃತ್ಯಗಳ ವೈವಿಧ್ಯಪೂರ್ಣ ಕಾರ್ಯಕ್ರಮಗಳಿಂದ ರಂಜಿಸಲಿರುವ ‘ಸಂಗೀತ ಸಂಭ್ರಮ’ದ ವರ್ಣರಂಜಿತ ಕಾರ್ಯಕ್ರಮಗಳು ಬೆಂಗಳೂರಿನ ಜನತೆಗೆ ಚಿರಪರಿಚಿತ. ಮನಕಾನಂದ ನೀಡುವ ಹೊಸ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವ ‘ಸಂಗೀತ ಸಂಭ್ರಮ’ ಸಂಸ್ಥೆಯ ನೇತೃತ್ವ ವಹಿಸಿರುವವರು ಪ್ರಖ್ಯಾತ ಸಂಗೀತ ವಿದುಷಿ ಡಾ. ಪುಸ್ತಕಂ ರಮಾ. ಸಮಾಜಮುಖಿ ಕಾರ್ಯಗಳಿಗೆ ಹೆಸರಾಗಿರುವ ಸ್ನೇಹಮಯಿ ವ್ಯಕ್ತಿತ್ವದ ಕರ್ನಾಟಕ ಕಲಾಶ್ರೀ ಡಾ. ರಮಾ ಸ್ಥಾಪಿಸಿ, ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ‘ಸಂಗೀತ ಸಂಭ್ರಮ’ ಸಂಸ್ಥೆಯು ಸಾರ್ಥಕ ಮೂರುದಶಕಗಳನ್ನು ಮೀರಿ ಕ್ರಮಿಸಿದೆ. ಕಳೆದ ಹದಿನೈದು ವರ್ಷಗಳಿಂದ ಹಿರಿಯ ಹಾಗೂ ಉದಯೋನ್ಮುಖ ಕಲಾವಿದರಿಗೆ ನಿರಂತರವಾಗಿ ವೇದಿಕೆಯನ್ನು ಒದಗಿಸುತ್ತ ಬಂದಿರುವುದು ಸಂಗೀತ ಕಲಾವಿದೆ ರಮಾ ಅವರ ಅಸ್ಮಿತೆ. ಪ್ರತಿವರ್ಷ ತಪ್ಪದೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಈ ‘ನಿರಂತರಂ’ ಸಂಗೀತ ಮತ್ತು ನೃತ್ಯೋತ್ಸವವು ದಿನೇ ದಿನೇ ಜನಪ್ರಿಯತೆಯನ್ನು ಪಡೆಯುತ್ತಿದೆ. ಎಂದಿನಂತೆ ಈ ಬಾರಿಯೂ ಜನವರಿಯ ಮೊದಲ ವಾರದಲ್ಲಿ ದಿನಾಂಕ 02 ಜನವರಿ 2024ರಿಂದ 05 ಜನವರಿ 2024ರವರೆಗೆ ನಾಲ್ಕು ದಿನಗಳ ವಿಶಿಷ್ಟ ಕಾರ್ಯಕ್ರಮಗಳನ್ನು ಬೆಂಗಳೂರಿನ ಮಲ್ಲೇಶ್ವರ…
ಕಾಸರಗೋಡು : ಮಧೂರು ನಾಟ್ಯಮಂಟಪ ನೃತ್ಯಸಂಸ್ಥೆಯ ವತಿಯಿಂದ ಭರತನಾಟ್ಯ ಕಲಿಯುವ ಮಕ್ಕಳಿಗಾಗಿ ಎರಡು ದಿನ ಗಳ ನೃತ್ಯ ಕಾರ್ಯಾಗಾರವು ದಿನಾಂಕ 26 ಮತ್ತು 27 ಡಿಸೆಂಬರ್ 2024 ರಂದು ಕಾಸರಗೋಡು ಶ್ರೀ ಎಡನೀರು ಮಠದ ಶ್ರೀ ಭಾರತೀ ಕಲಾ ಸದನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ “ಶಾಸ್ತ್ರೀಯ ಕಲೆಗಳಲ್ಲಿ ಒಂದಾದ ಭರತನಾಟ್ಯ ಕಲಿಕೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದು ತುಂಬಾ ಒಳ್ಳೆಯ ಬೆಳವಣಿಗೆ. ಅದರಲ್ಲೂ ಇಂತಹ ನೃತ್ಯ ಕಾರ್ಯಾಗಾರಗಳು ಕಲಿಕೆಯ ಅಭಿವೃದ್ಧಿಗೆ ಪ್ರೇರಕ.” ಎಂದು ಹೇಳಿದರು. ನಾಟ್ಯರಂಗ ಪುತ್ತೂರು ಇದರ ನೃತ್ಯ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಕಾರ್ಯಾಗಾರ ನಡೆಸಿಕೊಟ್ಟರು. ದಿನಾಂಕ 27 ಡಿಸೆಂಬರ್ 2024ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀಮತಿ ಪ್ರಭಾ ರಾಜೆಂದ್ರ ಕಲ್ಲೂರಾಯ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿ ಶುಭಾರೈಸಿದರು. ಶಿಬಿರಾರ್ಥಿಗಳು ಎರಡು ದಿನಗಳ ಶಿಬಿರದಿಂದ ಆದ ಪ್ರಯೋಜನನ್ನು ಖುಷಿಯಿಂದ ವ್ಯಕ್ತಪಡಿಸಿದರು. ಶಿಬಿರವನ್ನು ನಾಟ್ಯಮಂಟಪದ ನಿರ್ದೇಶಕಿ ನೃತ್ಯಗುರು…
ಮಂಗಳೂರು: ಪುತ್ತೂರು ತಾಲೂಕು ಸರ್ವೆ ಗ್ರಾಮದ ಕಲ್ಪನೆಯಲ್ಲಿ ನಾಲ್ಕು ದಶಕಗಳ ಹಿಂದೆ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ಸ್ಥಾಪಿಸಿದ ನಿವೃತ್ತ ಅರಣ್ಯ ರಕ್ಷಕ ಮತ್ತು ಯಕ್ಷಗಾನ ಕಲಾಪೋಷಕ ಕಲ್ಪನೆ ಚಂದು ಗೌಡ ಇವರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ 29 ಡಿಸೆಂಬರ್ 2024ರಂದು ನಡೆಯಿತು. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ವಯೋವೃದ್ಧ ಚಂದು ಗೌಡ ಮತ್ತು ನೀಲಮ್ಮ ದಂಪತಿಯನ್ನು ಶಕ್ತಿನಗರದಲ್ಲಿರುವ ಅವರ ಮಗಳ ಮನೆಯಲ್ಲಿ ಶಾಲು ಸ್ಮರಣಿಕೆ ಮತ್ತು ಫಲ ವಸ್ತುಗಳೊಂದಿಗೆ ಸನ್ಮಾನಿಸಿದರು. ತಮ್ಮ ಕಾಲೇಜು ದಿನಗಳಲ್ಲಿ ಹವ್ಯಾಸಿ ಕಲಾವಿದರ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಗಳಿಗೆ ಚಂದು ಗೌಡರು ನೀಡಿದ ಪ್ರೋತ್ಸಾಹವನ್ನು ಸ್ಮರಿಸಿ ಮಾತನಾಡಿದ ಭಾಸ್ಕರ ರೈ ಕುಕ್ಕುವಳ್ಳಿ “ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೋಟೆಕಾರ್ ಶಂಕರ ಮಠದ ಧರ್ಮಾಧಿಕಾರಿ ಬೋಲ್ಲಾವ ಸತ್ಯ ಶಂಕರರು ನೀಡುತ್ತಿದ್ದ ಯಕ್ಷಗಾನ ತರಬೇತಿ ಸಂದರ್ಭದಲ್ಲಿ…
ಮಂಗಳೂರು : ಹವ್ಯಾಸಿ ಬಳಗ ಕದ್ರಿ (ರಿ.) ಮಂಗಳೂರು ಇದರ ತ್ರಿಂಶತಿ ಸಂಭ್ರಮ ಸಮಾರಂಭವನ್ನು ದಿನಾಂಕ 05 ಜನವರಿ 2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಆ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ, ಕೀರ್ತಿಶೇಷ ಕಲಾವಿದರ ಸಂಸ್ಮರಣೆ, ಯಕ್ಷ ಸುವಾಸಿನಿ ಪುರಸ್ಕಾರ, ಯಕ್ಷ ಪ್ರಶಸ್ತಿ ಪ್ರದಾನ – ಯಕ್ಷ ಸಂಮಾನ, ಯಕ್ಷ ಗೌರವಾಭಿನಂದನೆ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಾಯಂಕಾಲ 4-00 ಗಂಟೆಗೆ ಪ್ರಸಿದ್ಧ ಅರ್ಥಧಾರಿಗಳಿಂದ ‘ಶರಣಸುತ ತರಣಿಸೇನ’ ಯಕ್ಷಗಾನ ತಾಳಮದ್ದಳೆ, 6-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಯಂ.ಯಂ.ಸಿ. ರೈ ಯವರಿಗೆ ನುಡಿನಮನ, ಕೀರ್ತಿಶೇಷ ಕಲಾವಿದರ ಸಂಸ್ಮರಣೆ, ಯಕ್ಷ ಸುವಾಸಿನಿ ಪುರಸ್ಕಾರ, ಹಿರಿಯ ವಿಶ್ರಾಂತ ಕಲಾವಿದರಿಗೆ ‘ಯಕ್ಷ ಪ್ರಶಸ್ತಿ’ ಪ್ರದಾನ, ಯಕ್ಷಾ ಸಾಧಕರಿಗೆ ‘ಯಕ್ಷ ಸಂಮಾನ’ ಮತ್ತು ಯಕ್ಷ ಗೌರವಾಭಿನಂದನೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ರಾಜಾ ದಂಡಕ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-93’ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾದ ‘ನಾಟಕಾಷ್ಟಕ’ ಕಾರ್ಯಕ್ರಮದ 5ನೇ ದಿನದ ಕಾರ್ಯಕ್ರಮವು ದಿನಾಂಕ 30 ಡಿಸೆಂಬರ್ 2024 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕವಿ ಅಭಿಲಾಷ ಸೋಮಯಾಜಿ ಮಾತನಾಡಿ “ಕೇವಲ ಕವಿತೆಗಳನ್ನಾಧರಿಸಿದ ಏಕವ್ಯಕ್ತಿ ನಾಟಕವನ್ನು ರಂಗದಲ್ಲಿ ಪ್ರಯೋಗಿಸಲಾಗಿರುವ ನಾಟಕ ‘ಹಕ್ಕಿ ಮತ್ತು ಅವಳು’. ಹೆಣ್ಣಿನ ಮನಸ್ಥಿತಿಯನ್ನು ವಿವಿಧ ಆಯಾಮಗಳಲ್ಲಿ ಬಿಂಬಿಸುವ ಪ್ರಸ್ತುತಿ ಇದಾಗಿದೆ. ಹೆಣ್ಣೋರ್ವಳು ಅಬಲೆಯಲ್ಲ, ಸಬಲೆ ಎನ್ನುವುದನ್ನು ರಂಗದ ಮೂಲಕ ಸಮಾಜಕ್ಕೆ ಬಿತ್ತರಿಸುವ ಕಾರ್ಯ ಸಫಲವಾಗಿದೆ.” ಎಂದು ಹೇಳಿದರು. ಶ್ರೀಮತಿ ವಿನಿತಾ ಹಂದೆ, ನಟಿ ಕಾವ್ಯ ಹಂದೆ, ಉಪನ್ಯಾಸಕ ಸುಜಯೀಂದ್ರ ಹಂದೆ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಗಣೇಶ್ ಅಮೀನ್ ಕೊಮೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಡಾ. ಶ್ರೀಪಾದ ಭಟ್ ನಿರ್ದೇಶನದಲ್ಲಿ ಕಾವ್ಯಾಧಾರಿತ ಏಕವ್ಯಕ್ತಿ ನಾಟಕ ‘ಹಕ್ಕಿ ಮತ್ತು ಅವಳು’ ಪ್ರಸ್ತುತಿಗೊಂಡಿತು.
ಟಿ. ಚೌಡಯ್ಯನವರು ಮೈಸೂರು ಸಮೀಪದ ಕಾವೇರಿ ಮತ್ತು ಕಪಿಲಾ ನದಿ ಸಂಗಮದಲ್ಲಿರುವ ತಿರುಮಕೂಡಲು ಎಂಬ ಹಳ್ಳಿಯಲ್ಲಿ ಒಕ್ಕಲಿಗ ಕುಟುಂಬದಲ್ಲಿ 1895ರಲ್ಲಿ ಜನಿಸಿದರು. ತಂದೆ ಅಗಸ್ತ್ಯೇ ಗೌಡ ತಾಯಿ ಸುಂದರಮ್ಮ. ಚೌಡಯ್ಯನವರು 1910ರಲ್ಲಿ ಮೈಸೂರು ರಾಜ ಮನೆತನದ ಆಸ್ಥಾನ ಸಂಗೀತಗಾರರಾದ ಗಾನ ವಿಶಾರದ ಬಿಡಾರಂ ಕೃಷ್ಣಪ್ಪ ಇವರ ಶಿಷ್ಯರಾಗಿದ್ದರು. 1918ರವರೆಗೆ ಗುರುಕುಲ ಪದ್ಧತಿಯಲ್ಲಿ ಅತ್ಯಂತ ಕಠಿಣ ಮತ್ತು ಶಿಸ್ತಿನ ಶ್ರದ್ಧಾಪೂರ್ವಕ ಅಭ್ಯಾಸದಿಂದ ಶ್ರೇಷ್ಠ ಪಿಟೀಲು ವಾದಕರಾಗಿದ್ದು, ಗುರುಗಳ ಪ್ರೋತ್ಸಾಹ ಪಾಂಡಿತ್ಯದಿಂದಾಗಿ ಇವರ ಸಮಕಾಲೀನರಾದವರೆಲ್ಲರಿಂದ ಪ್ರೀತಿ, ಗೌರವ ಪಡೆದು ಖ್ಯಾತರಾದವರು. ಪ್ರಸಿದ್ಧ ಗಾಯಕ ಜಿ.ಎನ್. ಬಾಲಸುಬ್ರಮಣ್ಯಂ ತಮ್ಮ ಸಂಗೀತ ಕಚೇರಿಯನ್ನು ಏರ್ಪಡಿಸುವ ಮೊದಲು, ಪಿಟೀಲು ವಾದನಕ್ಕೆ ಚೌಡಯ್ಯನವರು ದೊರೆಯುವ ಸಾಧ್ಯತೆಯನ್ನು ನೋಡಿ ದಿನ ನಿಗದಿಪಡಿಸುವಂತೆ ಸಭಾ ಕಾರ್ಯದರ್ಶಿಗಳಿಗೆ ಹೇಳುತ್ತಿದ್ದರು. ಮಾತ್ರವಲ್ಲದೆ ಎಲ್ಲಾ ಪ್ರಸಿದ್ಧ ಸಂಗೀತಗಾರರೂ ಚೌಡಯ್ಯನವರೇ ಪಿಟೀಲು ವಾದನಕ್ಕೆ ಬರುವುದನ್ನು ಬಯಸುತ್ತಿದ್ದರು. ಗುರು ಬಿಡಾರಂ ಕೃಷ್ಣಪ್ಪನವರು ಸಾರ್ವಜನಿಕ ಸಂಗೀತ ಕಾರ್ಯಕ್ರಮಕ್ಕೆ ನಿಗದಿಪಡಿಸಿದ ಪಿಟೀಲುವಾದಕರು ಕಾರಣಾಂತರಗಳಿಂದ ಬರಲಾಗದ ಕಾರಣ ಪಿಟೀಲು ವಾದಕರಾಗಿ ತಮ್ಮ 17ನೇ ವಯಸ್ಸಿಗೆ…