Author: roovari

ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್‌ ಮಂಗಳೂರು ಇದರ ಆಶ್ರಯದಲ್ಲಿ ಪ್ರಾರಂಭಿಸುತ್ತಿರುವ ‘ವಿಶ್ವಂ ಸ್ಕೂಲ್ ಆಫ್ ಆರ್ಟ್’ ಇದರ ಉದ್ಘಾಟನಾ ಸಮಾರಂಭ ಹಾಗೂ ಕಲಾ ಪ್ರದರ್ಶನವು ದಿನಾಂಕ 17-12-2023ರ ರವಿವಾರದಂದು ಪೂರ್ವಾಹ್ನ ಗಂಟೆ 10.00ಕ್ಕೆ ಮಂಗಳೂರಿನ ಟೆಂಪಲ್ ಸ್ಕ್ವಾರ್ ನಲ್ಲಿರುವ ಪ್ರೇಮ ಪ್ಲಾಝದ 2 ನೇ ಮಹಡಿಯಲ್ಲಿ ನಡೆಯಲಿದೆ. ಮಂಗಳೂರಿನ ವಿಶ್ವಕರ್ಮ ಕಲಾ ಪರಿಷತ್ ಇದರ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ. ವಿಶ್ವಕರ್ಮ ಕಲಾ ಪರಿಷತ್ತಿನ , ಗೌರವಾಧ್ಯಕ್ಷರು ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದರಾದ ಶ್ರೀ ಪಿ. ಎನ್. ಆಚಾರ್ಯ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಚಿತ್ರ ಕಲಾವಿದರು ಹಾಗೂ ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿ (ರಿ.) ಇದರ ಗೌರವಾಧ್ಯಕ್ಷರಾದ ಶ್ರೀ ಗಣೇಶ ಸೋಮಯಾಜಿ ಬಿ., ಪರಿಸರ ಹೋರಾಟಗಾರರು, ಲೇಖಕರು…

Read More

ಹಾವೇರಿ : ಬೆಂಗಳೂರಿನ ರಂಗ ಶಂಕರ ಮತ್ತು ಶೇಷಗಿರಿಯ ಗಜಾನನ ಯುವಕ ಮಂಡಳಿ ವತಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿಯಲ್ಲಿ ಡಾ. ಶ್ರೀಪಾದ್ ಭಟ್ ಇವರ ನಿರ್ದೇಶನದಲ್ಲಿ ‘ರಂಗ ಶಿಬಿರ’ವು ದಿನಾಂಕ 22-12-2023 ರಿಂದ 27-12-2023ರವರೆಗೆ ನಡೆಯಲಿದೆ. ಈ ಶಿಬಿರದಲ್ಲಿ ಬಿ. ಸುರೇಶ ‘ನಾಟಕ ಬರೆಯುವುದು ಹೇಗೆ’, ಶರಣ್ಯ ‘ನಿರ್ದೇಶಕನ ಜವಾಬ್ದಾರಿ’, ಗರೂಡ ಪ್ರಕಾಶ್ ‘ಕಂಪನಿ ನಾಟಕ ಯಾಕೆ ಮುಖ್ಯ’, ಎಂ.ಡಿ. ಪಲ್ಲವಿ ‘ಸಂಗೀತ ಮತ್ತು ರಂಗಭೂಮಿ’ ಮತ್ತು ಸುರೇಂದ್ರನಾಥ್ ‘ರಂಗಭೂಮಿಯನ್ನು ಸಜ್ಜುಗೊಳಿಸುವುದು’ ಎಂಬ ವಿಷಯಗಳ ತರಬೇತಿ ನೀಡಲಿದ್ದಾರೆ. ಊಟ, ವಸತಿ ಸಹಿತ ಉಚಿತ ತರಬೇತಿ ನೀಡಲಾಗುವ ಈ ಶಿಬಿರದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾದ ವಸತಿ ವ್ಯವಸ್ಥೆ ಇದೆ. 18 ವರ್ಷ ವಯಸ್ಸಿನಿಂದ ಮೇಲ್ಪಟ್ಟವರು ಭಾಗವಹಿಸಬಹುದು. ಪ್ರತಿದಿನ ರಾತ್ರಿ 8 ಗಂಟೆಗೆ ನಾಟಕ ಪ್ರದರ್ಶನ ನಡೆಯುತ್ತದೆ. ಮಾಹಿತಿಗಾಗಿ ಸಂಪರ್ಕಿಸಿ ಪ್ರಭು ಗುರಪ್ಪನವರ್ 8095719018 ಮತ್ತು ನಾಗರಾಜ ಧಾರೇಶ್ವರ್ 9008551395.

Read More

ಮಂಗಳೂರು : ಹಿಂದೂಸ್ಥಾನಿ ಸಂಗೀತದಲ್ಲಿ ಪ್ರತಿಯೊಂದು ರಾಗಕ್ಕೂ ತನ್ನದೇ ಆದ ಗಾಯನ ಸಮಯವಿದೆ. ಅದರಲ್ಲೂ ರಾತ್ರಿ, ತಡರಾತ್ರಿಯ ರಾಗಗಳು ಬಹಳ‌ ರಂಗು ಹುಟ್ಟಿಸುವಂತವು. ಆ ರಾಗಗಳ ನೈಜ‌ ಪರಿಣಾಮವನ್ನು ಕಾಣಬೇಕಾದರೆ ಅವುಗಳನ್ನು ಅವುಗಳ‌ ಗಾಯನ ಸಮಯದಲ್ಲಿ‌ ಕೇಳಬೇಕು. ರಾತ್ರಿಯ ಆ‌ ನೀರವದಲ್ಲಿ ಆ ರಾಗಗಳು ಒಂದು ಅಲೌಕಿಕ ಮಾಧುರ್ಯದ ನಾದಲೋಕವನ್ನು ಸೃಜಿಸಿ ಶ್ರೋತೃಗಳನ್ನು ಮಾಧುರ್ಯದ ರಸದಲ್ಲಿ‌ ಅದ್ದಿ ಮಂತ್ರಮುಗ್ಧಗೊಳಿಸುವ ಪರಿ ಅನನ್ಯ. ಸಂಗೀತ ರಸಿಕರಿಗೆ ರಾತ್ರಿ, ತಡರಾತ್ರಿ, ಬೆಳಗ್ಗಿನ ರಾಗಗಳನ್ನು‌ ಕೇಳಲು ಅನುವು ಮಾಡಿಕೊಡುವ ಸಲುವಾಗಿ ಹಿಂದೆ ಬಹಳಷ್ಟು ಆಹೋರಾತ್ರಿ ಸಂಗೀತ ಸಮ್ಮೇಳನಗಳು ನಡೆಯುತ್ತಿದ್ದವು. ಕಛೇರಿ ಮುಗಿದರೂ ಆ ರಾಗಗಳ ಗುಂಗು ಶ್ರೋತೃಗಳ ಕಿವಿಯಲ್ಲಿ ಬಹಳ ಕಾಲ‌ ಉಳಿಯುತ್ತಿತ್ತು. ಆದರೆ ಇತ್ತೀಚೆಗೆ ಆಹೋರಾತ್ರಿ ಕಚೇರಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ತನ್ನ ಜೀವನವನ್ನೇ ಮುಡಿಪಾಗಿಟ್ಟು ಕಠಿಣ ಸಾಧನೆಯ ಮೂಲಕ ರಾತ್ರಿ, ಮಧ್ಯಾರಾತ್ರಿಯ ರಾಗಗಳನ್ನು ಒಲಿಸಿಕೊಂಡ ಸಾಧಕನಿಗೆ ಆ ರಾಗಗಳನ್ನು ಹಾಡುವ ಅವಕಾಶ ಇಲ್ಲವಾಗಿದೆ. ಹಾಗಾಗಿ ರಾತ್ರಿಯ ಆ ಎಲ್ಲಾ ಅಪೂರ್ವ ರಾಗಗಳು…

Read More

ಬೆಂಗಳೂರು : ಸಪ್ತಕ್ ಬೆಂಗಳೂರು ಪ್ರಸ್ತುತ ಪಡಿಸುವ ‘ಸ್ವರ ಸಂಧ್ಯಾ’ ಕಾರ್ಯಕ್ರಮವು ದಿನಾಂಕ 17-12-2023ರಂದು ಸಂಜೆ 5.30ಕ್ಕೆ ಬೆಂಗಳೂರಿನ ಬಸವನಗುಡಿ, ಶ್ರೀ ಬಿ.ಪಿ. ವಾಡಿಯ ರೋಡಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇಲ್ಲಿ ನಡೆಯಲಿದೆ. ಶ್ರೀಮತಿ ಗೀತಾ ಹೆಗ್ಡೆ, ಶ್ರೀ ಓಂಕಾರ್ ಹವಾಲ್ದಾರ್ ಮತ್ತು ಪಂ. ನಾಗರಾಜ್ ಹವಾಲ್ದಾರ್ ಇವರ ಶಿಷ್ಯೆಯಾದ ಬೆಂಗಳೂರಿನ ಶ್ರೀಮತಿ ದಿವ್ಯ ಶೆಣೈ ಇವರ ಹಾಡುಗಾರಿಕೆಗೆ ಶ್ರೀ ಪ್ರಹ್ಲಾದ್ ದೇಶಪಾಂಡೆ ತಬಲದಲ್ಲಿ ಮತ್ತು ಶ್ರೀಮತಿ ನೀತಾ ಬೆಳೆಯೂರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಮುಂಬೈಯ ಪಂ. ಬಿ. ಕೃಷ್ಣ ಭಟ್ ಇವರ ಹಾಡುಗಾರಿಕೆಗೆ ಶ್ರೀ ಗುರುಮೂರ್ತಿ ವೈದ್ಯ ತಬಲದಲ್ಲಿ ಮತ್ತು ಶ್ರೀ ಅಶ್ವಿನ್ ವಾಲಾವಲ್ಕರ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Read More

ಬೆಂಗಳೂರು : ಅಭಿನಯ ತರಂಗ ಪ್ರಸ್ತುತ ಪಡಿಸುವ ಶ್ವೇತಾ ರಾಣಿ ಹೆಚ್.ಕೆ. ಇವರ ರಂಗವಿನ್ಯಾಸ, ವಸ್ತ್ರವಿನ್ಯಾಸ ಮತ್ತು ನಿರ್ದೇಶನದ ‘ಆತಂಕವಾದಿಯ ಆಕಸ್ಮಿಕ ಸಾವು’ ನಾಟಕವು ದಿನಾಂಕ 16-12-2023ರಂದು ಸಂಜೆ ಗಂಟೆ 7ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ಸಹ ನಿರ್ದೇಶನ ಸ್ಕಂದಾ ಘಾಟೆ ಮಾಡಿದ್ದು, ಬೆಳಕು ವಿನ್ಯಾಸ ಮಂಜು ನಾರಾಯಣ್ ಹಾಗೂ ಬೆಳಕು ನಿರ್ವಹಣೆ ಸಚಿನ್ ಇವರದ್ದು. ಈ ನಾಟಕದ ಪಾತ್ರವರ್ಗದಲ್ಲಿ ಕಾರ್ತಿಕ್ ಎಚ್.ಆರ್., ಅಮಿತ್, ಚಂದನ್, ಚೇತನ್, ಶರತ್, ನಂದಿನಿ, ಯೋಗೀಶ್, ಲಕ್ಷ್ಯ, ದರ್ಶನ ಮತ್ತು ರಂಗವೇಂದ್ರ ಅಭಿನಯಿಸಲಿದ್ದಾರೆ. ನಿರ್ದೇಶಕರು ಶ್ವೇತಾ ರಾಣಿ ಹೆಚ್.ಕೆ. ಹಾಸನ ಜಿಲ್ಲೆಯವರಾದ ಶ್ವೇತಾ ರಾಣಿ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಪದವಿ, ನೀನಾಸಂ ತಿರುಗಾಟದಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿರುತ್ತಾರೆ. ರಾಷ್ಟ್ರೀಯ ನಾಟಕ ಶಾಲೆ ದೆಹಲಿಯಲ್ಲಿ ಪದವಿ ಪಡೆದ ನಂತರ ಕರ್ನಾಟಕದ ಹಲವು ಕಡೆ ಅಭಿನಯ ಶಿಬಿರಗಳನ್ನು ನಡೆಸಿದ್ದಾರೆ. ಅನೇಕ ನಾಟಕಗಳಿಗೆ ರಂಗ ವಿನ್ಯಾಸಕರಾಗಿ, ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡಿದ ಅನುಭವ ಇವರದು.…

Read More

ಮಂಗಳೂರು : ಹರಿಪಾದಗೈದಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪುಣ್ಯ ತಿಥಿಯ ಸಲುವಾಗಿ ಕಲ್ಕೂರ ಪ್ರತಿಷ್ಠಾನವು ವಿಶ್ವೇಶತೀರ್ಥ ಶ್ರೀಪಾದರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ. ಕಾಲೇಜು ಹಾಗೂ ಮುಕ್ತ ಎಂಬ 2 ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಪ್ರಬಂಧದ ವಿಷಯ : ಕಾಲೇಜು ವಿಭಾಗ – ” ವಿಶ್ವೇಶ ತೀರ್ಥರು ನಾನು ಕಂಡಂತೆ ” ಹಾಗೂ ಮುಕ್ತ ವಿಭಾಗ – ” ವಿಶ್ವೇಶತೀರ್ಥ ಶ್ರೀಪಾದರು ವಿಶ್ವಮಾನ್ಯರು – ಅವಲೋಕನ, ಅನುಸಂಧಾನ.” ಪ್ರಬಂಧವನ್ನು ಮೂರು ಪುಟಗಳಿಗೆ ಮೀರದಂತೆ ಬರೆದು ದಿನಾಂಕ 23-12-2023ರ ಶನಿವಾರದೊಳಗಾಗಿ, ಸ್ವ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮ ಗಾಂಧಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು ಈ ವಿಳಾಸಕ್ಕೆ ತಲಪುವಂತೆ ಕಳುಹಿಸಿಕೊಡಬೇಕು.

Read More

ಮಂಗಳೂರು : ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ದ.ಕ. ಆಶ್ರಯದಲ್ಲಿ ಜಾನಪದ ಕಡಲೋತ್ಸವ, ಜಾನಪದ ಪ್ರದರ್ಶನ, ಆಹಾರ ಮೇಳ ಇದರ ಪ್ರಯುಕ್ತ ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿ, ಬದುಕು, ಕಲೆ, ಅಚಾರ, ವಿಚಾರ ಪ್ರತಿಬಿಂಬಿಸುವ ವಿಷಯಾಧಾರಿತ ‘ಜಾನಪದ ಸ್ಪರ್ಧಾಕೂಟ’ವು ದಿನಾಂಕ 11-12-2023ರಂದು ಬೆಳಿಗ್ಗೆ 8ರಿಂದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಸ್ಪರ್ಧಾ ವಿಷಯ : ಕರಾವಳಿ ಕರ್ನಾಟಕದ ಜಾನಪದ ಸಂಸ್ಕೃತಿ, ಬದುಕು, ಕಲೆ, ಅಚಾರ, ವಿಚಾರ ಪ್ರತಿಬಿಂಬಿಸುವ ವಿಷಯಾಧಾರಿತ. ನೋಂದಾವಣೆ ಕಡೇ ದಿನಾಂಕ 06-12-2023ರಂದು ನಿಯಮಗಳು : 1. ಈ ಸ್ಪರ್ಧೆಯು ನಿಗದಿತ ತಂಡಗಳ ನಡುವೆ ನಡೆಯಲಿದೆ. 2. ಮೊದಲು ನೊಂದಾಯಿಸಿದವರಿಗೆ ಮೊದಲ ಪ್ರಾಶಸ್ತ್ಯ. 3. ಪ್ರತಿಯೊಂದು ತಂಡಕ್ಕೆ ನಿರೂಪಣೆ ಸೇರಿ 20 ನಿಮಿಷಗಳ ಕಾಲಾವಕಾಶಗಳನ್ನು ನೀಡಲಾಗುವುದು. 4. 18 ನಿಮಿಷದ ಪ್ರದರ್ಶನ ಆದ ಕೂಡಲೇ ತಂಡಕ್ಕೆ ಸೂಚನೆ ನೀಡಲಾಗುವುದು. 5. ಕರಾವಳಿ ಕರ್ನಾಟಕದ ಸಂಸ್ಕೃತಿಯನ್ನುಒಳಗೊಂಡಿರುವ ಒಂದು ಹಾಡು, ಒಂದು ನೃತ್ಯ ಕಡ್ಡಾಯವಾಗಿರಬೇಕು. 6. ತಂಡದಲ್ಲಿ ಕನಿಷ್ಠ 10 ಜನ,…

Read More

ಕುಂದಾಪುರ : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯು ಇದರ ವಾರ್ಷಿಕೋತ್ಸವದ ಪ್ರಯುಕ್ತ ಆನ್ಲೈನ್ ಯಕ್ಷಗಾನ ಗೊಂಬೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಸ್ಪರ್ಧೆಯ ನಿಯಮಗಳು: * ಸ್ಪರ್ಧೆಯು 18 ವರ್ಷದೊಳಗಿನ ಹಾಗೂ 18 ವರ್ಷ ಮೇಲ್ಪಟ್ಟು ಎರಡು ವಿಭಾಗದಲ್ಲಿ ನಡೆಯುತ್ತದೆ. * 18 ವರ್ಷದೊಳಗಿನ ವಿಭಾಗದಲ್ಲಿ ಸ್ಪರ್ಧಿಸಲು ಜನ್ಮ ದಿನಾಂಕವನ್ನು ಒಳಗೊ೦ಡ ದಾಖಲೆಯನ್ನು ನೀಡಬೇಕು. * ಬಿಡಿಸಿದ ಚಿತ್ರದ ಛಾಯಾ ಚಿತ್ರವನ್ನು ವಾಟ್ಸಪ್ ಮಾಡಿ, ಆನಂತರ ಬಿಡಿಸಿದ ಚಿತ್ರವನ್ನು ಅಂಚೆ ಮೂಲಕ ಕಳುಹಿಸಬೇಕು. * ನೀವು ಚಿತ್ರ ಬಿಡಿಸುವ ಸಂದರ್ಭದ ವಿವಿಧ ಹಂತಗಳ ಫೋಟೋಗಳ PDF ಮಾಡಿ ಕಳುಹಿಸಬೇಕು. * ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರಶಂಸನಾ ಪತ್ರ ಹಾಗೂ ನಗದನ್ನು ಅಕಾಡೆಮಿಯ ವಾರ್ಷಿಕೋತ್ಸವದಂದು ನೀಡಲಾಗುವುದು. * ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರೂ ದಿನಾಂಕ 28-01-2024ರಂದು ನಡೆಯುವ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಂಸನಾ ಪತ್ರವನ್ನು ಸ್ವೀಕರಿಸುವುದು. * ಸ್ಪರ್ಧೆಗೆ ನೀಡಿದ ಚಿತ್ರವನ್ನು ಹಿಂದಿರುಗಿಸಲಾಗುವುದಿಲ್ಲ. • ಆಯೋಜಕರ ತೀರ್ಮಾನವೇ ಅಂತಿಮ. ಇಲ್ಲಿ ಕೊಟ್ಟಿರುವ ಯಕ್ಷಗಾನ…

Read More

ಸುರತ್ಕಲ್: ಶ್ರೀ ನಾಟ್ಯಾಂಜಲಿ ಕಲಾ ಅಕಾಡಮಿ ಸುರತ್ಕಲ್, ಖಂಡಿಗೆ, ಚೇಳ್ಳಾರು ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಪ್ರಸ್ತುತಪಡಿಸುವ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ 21ನೇ ಸಂಗೀತ ಕಛೇರಿ ‘ಮಂಜುನಾದ’ ದಿನಾಂಕ 10-12-2023ರ ಭಾನುವಾರ ಸಂಜೆ ಘಂಟೆ 5.25 ರಿಂದ ಖಂಡಿಗೆ, ಚೇಳ್ಳಾರು ರಸ್ತೆಯಲ್ಲಿರುವ ನಾಟ್ಯಾಂಜಲಿ ಕಲಾಮಂದಿರದಲ್ಲಿ ನಡೆಯಲಿದೆ. ಶಾಂತಲಾ ನಾಟ್ಯಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಎಂ ನಾರಾಯಣ, ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ) ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಇದರ ಗೌರವ್ಯಾಧ್ಯಕ್ಷರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹಾಗೂ ಮಣಿ ಕೃಷ್ಣಸ್ವಾಮಿ ಅಕಾಡೆಮಿ(ರಿ) ಇದರ ಅಧ್ಯಕ್ಷರಾದ ಕ್ಯಾ. ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ. ಬಳಿಕ ನಡೆಯಲಿರುವ ಸಂಗೀತ ಕಛೇರಿಯಲ್ಲಿ ಬೆಂಗಳೂರಿನ ಅದಿತಿ ಪ್ರಹ್ಲಾದ್ ಹಾಗೂ ಸ್ಮೃತಿ ಭಾಸ್ಕರ್, ಕಿನ್ನಿಗೋಳಿಯ ಆಶ್ಮೀಜಾ ಉಡುಪ ಮತ್ತು ಮಂಗಳೂರಿನ ಮೇಧಾ ಉಡುಪ ಹಾಡುಗಾರಿಕೆ ನಡೆಸಲಿದ್ದು, ಇವರಿಗೆ…

Read More

ಮೂದಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ 29 ನೇ ವರ್ಷದ ಆಳ್ವಾಸ್ ವಿರಾಸತ್ ಕಾರ್ಯಕ್ರಮವು ದಿನಾಂಕ 14-12-2023 ರಿಂದ 17-12-2023ರ ವರೆಗೆ ಮೂದಬಿದಿರೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ದಿನಾಂಕ 14-12-2023 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಗೌರವಾನ್ವಿತ ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ತಂಡಗಳ 3000ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ‘ಭವ್ಯ ಸಾಂಸ್ಕೃತಿಕ ಮೆರವಣಿಗೆ’ ಮತ್ತು ವೇದಘೋಷಗಳು, ಭಜನ್‌ಗಳು, ಪುಷ್ಪಪಲ್ಲಕ್ಕಿಗಳು ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ ವಿನಾಯಕ, ಸರಸ್ಕೃತಿ, ಶ್ರೀ ಲಕ್ಷ್ಮೀ, ಹನುಮಂತ, ಶ್ರೀರಾಮ, ಶ್ರೀಕೃಷ್ಣಾದಿ ಆರೂಢ ದೇವರ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ. ದಿನಾಂಕ 15-12-2023 ರಂದು ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರಾದ ಬೆನ್ನಿ ದಯಾಲ್ ಇವರಿಂದ ‘ಗಾನ ವೈಭವ’ ಬಳಿಕ ಆಳ್ವಾಸ್…

Read More