Author: roovari

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ ವತಿಯಿಂದ ಪ್ರಸ್ತುತ ಪಡಿಸುವ ಗಾಯನ ಸಂಗೀತ ಕಾರ್ಯಾಗಾರವು ದಿನಾಂಕ 20, 21, 27 ಮತ್ತು 28 ಸೆಪ್ಟೆಂಬರ್ 2025ರಂದು (ಶನಿವಾರ ಮತ್ತು ಭಾನುವಾರ) ಸಂಜೆ 7-00 ಗಂಟೆಯಿಂದ 8-30ರವೆರೆಗೆ ಆನ್ ಲೈನ್ ನಲ್ಲಿ ನಡೆಯಲಿದೆ. ಸಂಗೀತ ಕಲಾ ಆಚಾರ್ಯ ವಿದುಷಿ ಗೀತಾ ರಾಜಾ ಇವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ವಿವಿಧ ಸಂಯೋಜಕರ ಜಾವಳಿಗಳನ್ನು ಕಲಿಸಲಾಗುವುದು. ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಾಗಿ 74119 16098 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ರಂಗಮಂಡಲ ಇದರ ವತಿಯಿಂದ ‘ಯಕ್ಷಯಾತ್ರೆ’ ಮೂಡಲಪಾಯ ಯಕ್ಷಗಾನ ರೆಪರ್ಟರಿ ಪ್ರಾರಂಭಗೊಳ್ಳಲಿದೆ. ಯಾವುದೇ ರಂಗ ಶಿಕ್ಷಣ ಕೇಂದ್ರಗಳಲ್ಲಿ ರಂಗ ತರಬೇತಿ ಹೊಂದಿರದ, ಅಭಿನಯಿಸಲು ಇಚ್ಚಿಸುವ 20ರಿಂದ 30 ವರ್ಷದೊಳಗಿನ ಕುಣಿತ, ಹಾಡುಗಾರಿಕೆ ಬಲ್ಲಂತಹ ನಟಿಸಲು ಆಸಕ್ತಿ ಇರುವ ಯುವಕ, ಯುವತಿಯರು ಈ ಯಕ್ಷಯಾತ್ರೆ ರೆಪರ್ಟರಿಗೆ ಸೇರಬಹುದು. * ಕನ್ನಡ ಭಾಷೆ ಬಲ್ಲವರಾಗಿರಬೇಕು. * ಹಿರಿಯ ಕಲಾವಿದರಿಂದ ಶಿಫಾರಸ್ಸು ಪತ್ರ ತರಬೇಕು. * ಆಧಾರ್ ಕಾರ್ಡ್ ಮತ್ತು ತಂದೆ ತಾಯಿಗಳ ಒಪ್ಪಿಗೆ ಪತ್ರ ಅಗತ್ಯವಿರುತ್ತದೆ * ಗುರುಕುಲ ಮಾದರಿಯ ಮೂಡಲಪಾಯ ಯಕ್ಷಗಾನ ಶಿಬಿರ ಮತ್ತು ಪ್ರದರ್ಶನಕ್ಕೆ ಆಯ್ಕೆಯಾದವರು ಪ್ರಸಂಗದ ತಾಲೀಮೂ ಸೇರಿ 4 ತಿಂಗಳವರೆಗೆ ಯಕ್ಷಯಾತ್ರೆಯೊಡನೆ ಇರಬೇಕಾಗುತ್ತದೆ. * ನೋಂದಾವಣೆಯ ಕೊನೆಯ ದಿನಾಂಕ 21 ಸೆಪ್ಟೆಂಬರ್ 2025. * ಕಲಾವಿದರ ಆಯ್ಕೆಯನ್ನು ಆನ್ಲೈನ್ ಆಡಿಶನ್ ಮುಖಾಂತರ ದಿನಾಂಕ 05 ನವೆಂಬರ್ 2025 ಭಾನುವಾರ ನಡೆಸಲಾಗುವುದು. * ನಿಮ್ಮ ಪ್ರತಿಭೆ ಹಾಗೂ ರಂಗ ಕಾಯಕವನ್ನು ಗಮನಿಸಿ ತಿಂಗಳ ಸಂಭಾವನೆ ನೀಡಲಾಗುವುದು ಆಸಕ್ತರು ಫೋನ್…

Read More

ಉಡುಪಿ : ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬ್ರಹ್ಮಾವರ ವಲಯದ ಕೆ.ಪಿ.ಎಸ್. ಕೊಕ್ಕರ್ಣೆ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ನಾಟಕ ಮೊದಲ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ದಿನಾಂಕ 10 ಸೆಪ್ಟೆಂಬರ್ 2025ರಂದು ನಡೆದ ಈ ಸ್ಪರ್ಧೆಯಲ್ಲಿ ರೋಹಿತ್ ಎಸ್. ಬೈಕಾಡಿ ಇವರ ನಿರ್ದೇಶನದಲ್ಲಿ ಅಭಿನಯಿಸಿದ ‘ಕ್ಯೂರಿ-US’ ನಾಟಕದ ರಚನೆ ವರದರಾಜ್ ಬಿರ್ತಿ ಮಾಡಿದ್ದು, ಸಂಗೀತ – ಶುಭಕರ್ ಪುತ್ತೂರು, ರಂಗಸಜ್ಜಿಕೆ – ಹರೀಶ್ ಮತ್ತು ಪ್ರಸಾಧನ – ಶ್ರೀಶ ತೆಕ್ಕಟ್ಟೆ ಇವರದು.

Read More

ಬೆಂಗಳೂರು : ದ್ರಾವಿಡ ಭಾಷಾ ಅನುವಾದಕರ ಸಂಘ (ಡಿ.ಬಿ.ಟಿ.ಎ.)ದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಡಿ.ಬಿ.ಟಿ.ಎ. ಅನುವಾದ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎ. ಮೋಹನ ಕುಂಟಾರ್ ಆಯ್ಕೆಯಾಗಿದ್ದಾರೆ ಎಂದು ಡಿಬಿಟಿಎ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ತಿಳಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಸಾಹಿತಿ ತಕಳಿ ಶಿವಶಂಕರ ಪಿಳ್ಳೆ ಅವರ ಪ್ರಸಿದ್ಧ ಕಾದಂಬರಿ ‘ಚೆಮ್ಮೀನ್’ನ ಕನ್ನಡ ಅನುವಾದಕ್ಕೆ ಪ್ರಶಸ್ತಿ ಲಭಿಸಿದೆ. ಡಿ.ಬಿ.ಟಿ.ಎ. ವತಿಯಿಂದ ನೀಡುತ್ತಿರುವ ಈ ಪ್ರಶಸ್ತಿಯು ರೂ.11,111/- ನಗದು, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26 ಸೆಪ್ಟೆಂಬರ್ 2025ರಂದು ನಯನ ಸಭಾಂಗಣದಲ್ಲಿ ಜರುಗಲಿದೆ.

Read More

ಮಂಗಳೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಸಂಸ್ಥೆಯ 30ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಶೀರ್ಷಿಕೆಯಲ್ಲಿ ಮಂಗಳೂರಿನ ಕಲಾಸೂರ್ಯ ನೃತ್ಯಾಲಯ ಪ್ರಸ್ತುತ ಪಡಿಸುವ ‘ಕಲಾಭವ -02’ ಪ್ರಸ್ತುತಿಯನ್ನು ದಿನಾಂಕ 13 ಸೆಪ್ಟೆಂಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಜೈಲ್ ರೋಡ್, ಮೊದಲನೇ ಮಹಡಿ ಸುಬ್ರಹ್ಮಣ್ಯ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಸುಬ್ರಹ್ಮಣ್ಯ ಸಭಾದ ಅಧ್ಯಕ್ಷರಾದ ಎ.ಪಿ. ಕೃಷ್ಣ ಇವರು ಅಭ್ಯಾಗತರಾಗಿ ಭಾಗವಹಿಸಲಿದ್ದು, ವಿದ್ವಾನ್ ಬಿ. ದೀಪಕ್ ಕುಮಾರ್ ಪುತ್ತೂರು ಇವರ ಶಿಷ್ಯೆ ಪ್ರಣಮ್ಯ ಪಾಲೆಚ್ಚಾರ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.

Read More

ಉಡುಪಿ : ತುಳು ಕೂಟ ಉಡುಪಿ (ರಿ.) ಇದರ ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ದಿನಾಂಕ 11 ಸೆಪ್ಟೆಂಬರ್ 2025ರಂದು ನಡೆದ ಸಭೆಯಲ್ಲಿ ಪತ್ರಕರ್ತ ಜನಾರ್ದನ್ ಕೊಡವೂರು ಚುನಾವಣಾ ಅಧಿಕಾರಿಯ ನೆಲೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ಗೌರವ ಸಲಹೆಗಾರರಾಗಿ ಉಡುಪಿ ವಿಶ್ವನಾಥ ಶೆಣೈ, ಗೌರವಾಧ್ಯಕ್ಷರಾಗಿ ಭಾಸ್ಕರಾನಂದ ಕುಮಾರ್, ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ದಿವಾಕರ ಸನಿಲ್, ಶೋಭಾ ಶೆಟ್ಟಿ, ವಿ.ಕೆ. ಯಾದವ್, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ್ ಕಿದಿಯೂರ್, ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ದೇವಾಡಿಗ, ಸಂತೋಷ್ ಕುಮಾರ್, ಮೋಹನ್ ಶೆಟ್ಟಿ ಮೂಡನಿಡಂಬೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ ತೋನ್ಸೆ, ಉದಯ ಕುಮಾರ್ ತೆಂಕನಿಡಿಯೂರ್, ಶಿಲ್ಪಾ ಜೋಷಿ ಆಯ್ಕೆಯಾದರು. ತುಳು ಕೂಟದ ವಿವಿಧ ವಿಭಾಗಗಳಿಗೂ ಸಂಚಾಲಕರು ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು. ತುಳುಮಿನದನದ ಸಂಚಾಲಕರಾಗಿ ದಯಾನಂದ ಕೆ. ಕಪ್ಪೆಟ್ಟು, ಕೆಮ್ತೂರು ತುಳು ನಾಟಕ ಪರ್ಬದ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ನಿಟ್ಟೂರು, ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕರಾಗಿ…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಸತ್ಯ ಸಾರಮಾನಿ ಯಕ್ಷಗಾನ ಕಲಾ ಮಂಡಳಿ ಮಿಜಾರ್ ಇವರ ಜಂಟಿ ಆಶ್ರಯದಲ್ಲಿ ತುಳು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದ ಸಿರಿ ಚಾವಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಬುದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತುಳು ನಾಡಿನ ಅವಳಿ ವೀರರ ಪಾಡ್ದನ ಸಾಹಿತ್ಯ ಆಧಾರಿತ ಅಮರ ಕಥೆ ‘ಕಾರ್ನಿಕದ ಕಾನದ ಕಟದೆರ್’ ಪ್ರಸಂಗದ ಯಕ್ಷಗಾನದ ಹಿಮ್ಮೇಳದಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಮತ್ತು ಚಂದ್ರಶೇಖರ ಕಕ್ಕೆಪದವು ಭಾಗವತರಾಗಿ, ಆನಂದ ಪಡ್ರೆ ಚಂಡೆಯಲ್ಲಿ, ಗುರುಪ್ರಸಾದ್ ಬೊಳಿಂಜಡ್ಕ ಮದ್ದಲೆಯಲ್ಲಿ ಮತ್ತು ರಾಮ ಬಿ. ಅರಳ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ.

Read More

ವಿದುಷಿ ಸೌಮ್ಯಶ್ರೀ ಇಂದು ನಡೆದ ತನ್ನ ರಂಗಪ್ರವೇಶದ ಮುದವಾದ ಶುಭ ಮುಂಜಾನೆಯಲ್ಲಿ ತನ್ನ ಸಾತ್ವಿಕಾಭಿನಯದ ಸೊಬಗಿನ ನೃತ್ಯವಲ್ಲರಿಯಿಂದ ಗಮನ ಸೆಳೆದಳು. ‘ದಿ ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್’ -ನೃತ್ಯಸಂಸ್ಥೆಯ ನೃತ್ಯಗುರು ಶ್ರೀಮತಿ ಅಕ್ಷರ ಭಾರದ್ವಾಜ್ ಅವರ ಬದ್ಧತೆಯ ಉತ್ತಮ ಮಾರ್ಗದರ್ಶನದಲ್ಲಿ ಅವಳು, ನಗರದ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿ ‘ಮಾರ್ಗಂ’ ಸಂಪ್ರದಾಯದ ಹಲವು ಕೃತಿಗಳನ್ನು ಸಾಕ್ಷಾತ್ಕರಿಸಿ ಕಲಾರಸಿಕರ ಮೆಚ್ಚುಗೆ ಗಳಿಸಿದಳು. ಕರ್ನಾಟಕದ ಭರತನಾಟ್ಯ ಮೈಸೂರು ಪರಂಪರೆಯ ಶ್ರೀಮಂತಿಕೆಯನ್ನು ಒಳಗೊಂಡಿರುವ ‘ಜಯ ಜಾನಕೀ ರಮಣ’ – ‘ತೋಡಯ ಮಂಗಳಂ’ (ರಚನೆ- ಭದ್ರಾಚಲಂ ರಾಮದಾಸರು) ಶ್ರೀರಾಮನಿಗೆ ಈ ಮಂಗಳಗೀತೆಯ ಮೂಲಕ ‘ಪುಷ್ಪಾಂಜಲಿ’ಯನ್ನು ಅರ್ಪಿಸಿ, ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದಳು ಕಲಾವಿದೆ. ನಂಜನಗೂಡು ಪರಂಪರೆಯನ್ನು ಒಳಗೊಂಡಿರುವ ‘ಅಷ್ಟದಿಕ್ಪಾಲಕ ಸ್ತೋತ್ರ’ದಲ್ಲಿ ಅಷ್ಟದಿಕ್ಪಾಲಕರನ್ನು ಆರಾಧಿಸಿ, ಪೂರ್ವದಲ್ಲಿ ಇಂದ್ರ, ಆಗ್ನೇಯದಲ್ಲಿ ಅಗ್ನಿ, ದಕ್ಷಿಣದಲ್ಲಿ ಯಮ, ನೈರುತ್ಯದಲ್ಲಿ ನ್ರಿತ್ತಿ, ಪಶ್ಚಿಮದಲ್ಲಿ ವರುಣ, ವಾಯುವ್ಯದಲ್ಲಿ ವಾಯು, ಉತ್ತರದಲ್ಲಿ ಕುಬೇರ, ಈಶಾನ್ಯದಲ್ಲಿ ಈಶಾನನಿಗೆ ಅವರ ದಿವ್ಯ ಸೊಗಸಾದ ಭಂಗಿಗಳಲ್ಲಿ ನಮನ ಸಲ್ಲಿಸಿದ್ದು ನಯನ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ’ ಪ್ರಶಸ್ತಿಗೆ ಹಿರಿಯ ಬರಹಗಾರ್ತಿ ಎಲ್. ಗಿರಿಜಾ ರಾಜ್ ಇವರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪುರಸ್ಕರಿಸಲು ಅತ್ತಿಮಬ್ಬೆ ಪ್ರತಿಷ್ಟಾನ ಟ್ರಸ್ಟ್ (ರಿ.) ಈ ಪುರಸ್ಕಾರವನ್ನು ಸ್ಥಾಪಿಸಿದ್ದು 2009ರಿಂದಲೂ ಇದು ನಿರಂತರವಾಗಿ ನಡೆದುಕೊಂಡು ಶಕ್ತ ಪರಂಪರೆ ರೂಪುಗೊಂಡಿದೆ. 2025ನೆಯ ಸಾಲಿನಲ್ಲಿ ಈ ಪುರಸ್ಕಾರಕ್ಕೆ ಪಾತ್ರವಾಗಿರುವ ಎಲ್. ಗಿರಿಜಾ ರಾಜ್ ಚಿತ್ರದುರ್ಗದಲ್ಲಿ ಜನಿಸಿ ಬೆಂಗಳೂರಿನಲ್ಲಿ ನೆಲೆಗೊಂಡವರು. ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿರುವ ಇವರ ಒಟ್ಟು ಹದಿನಾರು ಕೃತಿಗಳು ಅಚ್ಚಾಗಿದ್ದು ಕಥೆ-ಲೇಖನ ಸೇರಿದಂತೆ ಹಲವು ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಚ್ಚಾಗಿವೆ. ಲೇಖಕಿಯರ ಸಂಘವೂ ಸೇರಿದಂತೆ ಹಲವು ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನಾಡೋಜ ಡಾ. ಮಹೇಶ ಜೋಶಿಯವರ ನೇತೃತ್ವದಲ್ಲಿ ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿದಾನಿಗಳ ಪರವಾಗಿ ಡಾ. ವರದಾ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಿ.ಎಂ.…

Read More

ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ ರಮಾ ಭಾರದ್ವಾಜ್ ಇವರಿಂದ ‘ಅವತರಣ’ ನಾಟ್ಯದ ಕಥೆ ನೃತ್ಯ ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಸಂಜೆ 06-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ.

Read More