Author: roovari

ಸುರತ್ಕಲ್ : ಹರಿದಾಸ, ಯಕ್ಷಗಾನ ಅರ್ಥಧಾರಿ, ಸಂಘಟಕ ಹಾಗೂ ಶೇಣಿ ಪ್ರತಿಷ್ಠಾನದ ಕಾರ್ಯದರ್ಶಿಯಾದ ಪೇಜಾವರ ಶ್ರೀ ವಿಜಯಾನಂದ ರಾವ್ ದಿನಾಂಕ 19-11-2023 ರಂದು ಹೃದಯಾಘಾತದಿಂದ ನಿಧನರಾದರು. ಇವರಿಗೆ ಮಣಿ ಕೃಷ್ಣಸ್ವಾಮಿ ಅಕಾಡಮಿಯ ವತಿಯಿಂದ ದಿನಾಂಕ 01-12-2023ರ ಶುಕ್ರವಾರ ಸಂಜೆ ಗಂಟೆ 5.00ರಿಂದ ಸುರತ್ಕಲ್ಲಿನ ಕೆನರಾ ಬ್ಯಾಂಕ್ ಕ್ರಾಸ್ ರಸ್ತೆಯಲ್ಲಿರುವ ‘ಅನುಪಲ್ಲವಿ’ಯಲ್ಲಿ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಹರಿಕಥಾ ಪರಿಷತ್ ಇದರ ಅಧ್ಯಕ್ಷರಾದ ನ್ಯಾಯವಾದಿ ಕೂಡ್ಲು ಶ್ರೀ ಮಹಾಬಲ ಶೆಟ್ಟಿ ನುಡಿ ನಮನ ಸಲ್ಲಿಸಲಿರುವರು. ಬಳಿಕ ಶ್ರೀಯುತರ ಸ್ಮರಣಾರ್ಥ ‘ಸುಧನ್ವ ಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವ ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಶ್ರೀಮತಿ ಶಾಲಿನಿ ಹೆಬ್ಬಾರ್, ಶ್ರೀ ಪಿ. ನಿತ್ಯಾನಂದ ರಾವ್ ಭಾಗವಹಿಸುವರು. ಮದ್ದಳೆಯಲ್ಲಿ ಶ್ರೀ ಕೆ. ರಾಮ ಹೊಳ್ಳ ಭಾಗವಹಿಸಲಿದ್ದು, ಅರ್ಥದಾರಿಗಳಾಗಿ ಸರ್ವ ಶ್ರೀ ಜಿ.ಕೆ. ಭಟ್, ಸೇರಾಜೆ ಸೀತಾರಾಮ ಭಟ್, ಪೇಜಾವರ ಸತ್ಯಾನಂದ ರಾವ್, ಶ್ರೀ ಚಂದ್ರಶೇಖರ ಕೋಡಿಪ್ಪಾಡಿ…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವುಗಳ ಸಹಯೋಗದೊಂದಿಗೆ ನಡೆಯುವ ‘ಅರಿವು ತಿಳಿವು’ ತಿಂಗಳ ಉಪನ್ಯಾಸ ಕಾರ್ಯಕ್ರಮವು ದಿನಾಂಕ 25-11-2023 ರಂದು ಕಾರ್ಕಳ ಸರಕಾರಿ.ಪ.ಪೂ.ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಅಕ್ಕಮಹಾದೇವಿಯ ವಚನಗಳು : ಒಂದು ಪ್ರವೇಶ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸಹಪ್ರಾಧ್ಯಾಪಕಿಯಾದ ಡಾ.ಜ್ಯೋತಿ ರೈ “ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪತಿ ಕೌಶಿಕನನ್ನು ಮತ್ತು ಸಕಲ ಸೌಭಾಗ್ಯಗಳನ್ನು ತಿರಸ್ಕರಿಸಿ ಏಕಾಂಗಿಯಾಗಿ ಆಧ್ಯಾತ್ಮದ ಹಾದಿಯಲ್ಲಿ ನಡೆದ ಅಕ್ಕಮಹಾದೇವಿಯ ದಿಟ್ಟತನ ಎಲ್ಲರಿಗೂ ಪ್ರೇರಣಾದಾಯಕವಾಗಿದೆ. ಅಲ್ಲಮಪ್ರಭುಗಳು ಹೇಳುವಂತೆ ಶಿವಶಕ್ತಿಯ ಸ್ತ್ರೀ ರೂಪವೇ ಆಗಿದ್ದ ಅಕ್ಕಮಹಾದೇವಿಯನ್ನು ಅನುಭವ ಮಂಟಪದಲ್ಲಿ ಪರೀಕ್ಷೆಗೆ ಒಡ್ಡಿ ಆಕೆಯ ವ್ಯಕ್ತಿತ್ವ, ಅಸ್ತಿತ್ವವನ್ನು ಅಲ್ಲಮಪ್ರಭುಗಳು ಜಗತ್ತಿಗೆ ಪರಿಚಯಿಸಿದರು. ಲೌಕಿಕ ಪುರುಷನನ್ನು ತಿರಸ್ಕರಿಸಿ ಅಲೌಕಿಕ ಪುರುಷ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿಯೆಂದು ಭಾವಿಸಿ ಅರಿಷಡ್ವೈರಿಗಳನ್ನೆಲ್ಲ ತೊರೆದು ಮಾನಸಿಕವಾಗಿಯೂ ಬೆತ್ತಲಾಗಿ ಶ್ರೇಷ್ಠ ವಚನಗಳನ್ನೂ ನೀಡಿದ ಆಕೆಯಲ್ಲಿ ದೈಹಿಕ ಭಾವವನ್ನು ಮೀರಿದ ಅಕ್ಕಮಹಾದೇವಿಯನ್ನು ಕಾಣಬಹುದಾಗಿದೆ. ಅಕ್ಕನ ವಚನಗಳಲ್ಲಿ…

Read More

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ವಿವಿಧ ಜಿಲ್ಲೆಗಳ ಕವಿ, ಕವಯತ್ರಿಯವರ ಕವನ ಸಂಗ್ರಹದ ‘ಕಾವ್ಯ ಕುಂಚ’ ಭಾಗ ಮೂರು ಮತ್ತು ಕಲಾಕುಂಚ ಅಭಿಮಾನಿಗಳ ಲೇಖನಗಳ ಸಂಗ್ರಹದ ಕಿರುಹೊತ್ತಿಗೆ ‘ಕುಂಚ ಕೈಪಿಡಿ’ಗಳ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 26-11-2023 ರಂದು ನಡೆಯಿತು. ದಾವಣಗೆರೆಯ ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ರೋಟರಿ ಬಾಲ ಭವನದ ಮೊದಲನೇ ಮಹಡಿಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪುಸ್ತಕಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ನಾಡಿನ ಖ್ಯಾತ ಹಿರಿಯ ಸಾಹಿತಿ ಕವಯತ್ರಿ ಹಾಗೂ ರಂಗಕರ್ಮಿಯಾದ ಧಾರವಾಡದ ಡಾ. ಹೇಮಾ ಪಟ್ಟಣಶೆಟ್ಟಿ “ನವ, ಯುವ ಸಾಹಿತಿಗಳು, ಕವಿಗಳು, ಕವಯಿತ್ರಿಯರು ಕವನ ರಚಿಸಿ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡುವುದಕ್ಕೇ ಸೀಮಿತವಾಗದೆ. ಅಕ್ಷರಜ್ಞಾನದೊಂದಿಗೆ ಅಂತರಾಳದಿಂದ ಅರಿವು ಮೂಡಿಸಿ ಆಗ ಕವನ, ಕಾವ್ಯ ರಚನೆಗಳಿಗೆ ಪರಿಪೂರ್ಣತೆ ಬರುತ್ತದೆ. ನಾಲ್ಕು ಗೋಡೆಯ ಮಧ್ಯೆ ಅಡಿಗೆಮನೆಗೆ ಸೀಮಿತವಾದ ಮಹಿಳೆಯರನ್ನು ಹೊರತಂದು ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮುಕ್ತವಾದ ಸೂಕ್ತವಾದ ವೇದಿಕೆ ಕಲ್ಪಿಸುತ್ತಿರುವ ಕಲಾಕುಂಚದ ಮೂರುವರೆ ದಶಕಗಳ ಸಾಧನೆ…

Read More

ಉಡುಪಿ : ತುಳು ಕೂಟ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ದಿ. ನಿಟ್ಟೂರು ಸಂಜೀವ ಭಂಡಾರಿ ನೆನಪಿನಲ್ಲಿ ‘ತುಳು ಭಾವಗೀತೆ ಪಂಥೊ -2023’ ಕಾರ್ಯಕ್ರಮವು ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ಇಲ್ಲಿ ದಿನಾಂಕ 26-11-2023ರಂದು ನಡೆಯಿತು. ತುಳು ಸುಗಮ ಸಂಗೀತ ಕಲಾವಿದ ಶ್ರೀ ಬಿ.ಕೆ. ಕಾರಂತ್ ಜ್ಯೋತಿ ಬೆಳಗಿಸಿ ಭಾವಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ “ಉಸಿರು ನಿಂತರೂ ಹೆಸರು ಉಳಿಸಿಸುವ ಕಾರ್ಯಕ್ರಮವನ್ನು ನಿರಂತರ ತುಳುಕೂಟ ಮಾಡುತ್ತಿದೆ. ಒಳ್ಳೆ ಕೆಲಸ ಮಾಡಿದವರ ಹೆಸರು ಅಜರಾಮರವಾಗಿರಬೇಕು. ಶಾಲೆಗೆ ಸೇರಿಸುವಾಗ ಮಾತೃ ಭಾಷೆ ತುಳು ಎಂದು ನಮೂದಿಸಿ. ಹತ್ತು ವರ್ಷದ ಬಳಿಕ ತುಳು ಕೋಟಾದಲ್ಲಿ ಸೀಟು ಸಿಗುವುದು” ಎಂದು ಹೇಳಿದರು. “ಭಾವಗೀತೆಯಲ್ಲಿ ಭಾವನಾತ್ಮಕ ಸಂಬಂಧವಿದೆ. ತಂತಜ್ಞಾನದೊಂದಿಗೆ ನಮ್ಮತನವನ್ನು ಬಿಟ್ಟುಕೊಡಬಾರದು” ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲೆಯ…

Read More

ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಕಲಾವಿದರ ಯಕ್ಷ ಪಯಣದ ಸ್ವಗತ ‘ಯಕ್ಷಾಯಣ’ ದಾಖಲೀಕರಣ ಸರಣಿ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 01-12-2023ರಂದು ಶುಕ್ರವಾರ ಸಂಜೆ ಗಂಟೆ 4ಕ್ಕೆ ಮಂಗಳಗಂಗೋತ್ರಿ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆಯಲಿದೆ. ಯಕ್ಷಾಯಣ ಸರಣಿ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ಣಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಉದ್ಘಾಟಿಸಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಜಯರಾಜ್ ಅಮೀನ್‌ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ಪ್ರಾಧ್ಯಾಪಕರಾದ ಡಾ. ಬೋಜ ಪೂಜಾರಿ ಅವರು ಗೌರವ ಉಪಸ್ಥಿತಿಯಲ್ಲಿ ಯಕ್ಷಗಾನ ವಿದ್ವಾಂಸರು ಹಾಗೂ ಅರ್ಥಧಾರಿಗಳಾಗಿರುವ ಡಾ. ಎಂ.ಪ್ರಭಾಕರ ಜೋಶಿ ಅವರು ಕಾರ್ಯಕ್ರಮದಲ್ಲಿ ತಮ್ಮ ಮಂಗಳೂರು ಯಕ್ಷಪಯಣದ ಅನುಭವ ಕಥನವನ್ನು ಹಂಚಿಕೊಳ್ಳಲಿದ್ದಾರೆ.

Read More

ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ವಿಶುಕುಮಾರ್ ದತ್ತಿನಿಧಿ ಸಮಿತಿ ಮಂಗಳೂರು ಸಹಯೋಗದಲ್ಲಿ ನಗರದ ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ – ವಿಶುಕುಮಾರ್ ಸಾಹಿತ್ಯೋತ್ಸವ ಮತ್ತು 20ನೇ ವರ್ಷದ ‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 26-11-2023ರಂದು ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಡಿ. ವೇದವ್ಯಾಸ ಕಾಮತ್ “ಹಿರಿಯರ ಕೊಡುಗೆಗಳು ಯುವಕರಿಗೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ಯುವವಾಹಿನಿ ಘಟಕ ವರ್ಷವಿಡೀ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತಿದೆ. ವಿಶುಕುಮಾರ್ ಅವರು ತಮ್ಮನ್ನು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಸಾಹಿತ್ಯದ ಜತೆ ಗೀತೆ ಹಾಡುತ್ತಿದ್ದರು. ಹಾರ್ಮೋನಿಯಂ ನುಡಿಸುತ್ತಿದ್ದರು. ನಾಟಕದ ಪಾತ್ರ ಮಾಡುತ್ತಿದ್ದರು. ನಿರ್ದೇಶಕರಾಗಿದ್ದರು. ಹಲವು ಪ್ರತಿಭೆಗಳನ್ನು ಹೊಂದಿದ ಅವರ ಸಾಧನೆ ಅಪಾರ” ಎಂದರು. ಕಾರ್ಯಕ್ರಮವನ್ನು ಕೆಸ್ಯಾಟ್ ಬೆಂಗಳೂರಿನ ಉಪ ನಿರ್ದೇಶಕ ಉಲ್ಲಾಸ್ ರಂಗಯ್ಯ ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರಾಜೇಶ್ ಬಿ.…

Read More

ಬೆಳ್ತಂಗಡಿ : ವಾಣಿ ಕಾಲೇಜು ಆವರಣದಲ್ಲಿ ದಿನಾಂಕ 17-12-2023ರಂದು ನಡೆಯಲಿರುವ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಎ.ಕೃಷ್ಣಪ್ಪ ಪೂಜಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ವಿಶ್ರಾಂತ ಪ್ರಾಚಾರ್ಯ ಎ. ಕೃಷ್ಣಪ್ಪ ಪೂಜಾರಿ ಕಡಬ ತಾಲೂಕಿನ ಆಲಂಕಾರು ಗ್ರಾಮದ ಎಂ. ತಿಮ್ಮಪ್ಪ ಪೂಜಾರಿ ಮತ್ತು ಮುತ್ತಕ್ಕೆ ಅವರ ಮಗನಾಗಿ ದಿನಾಂಕ 15-11-1947ರಂದು ಜನಿಸಿದರು. ಅವರು ಹಿರಿಯರ ಆಶಯದಂತೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ದೀರ್ಘಾವಧಿ ದುಡಿಮೆಯಲ್ಲಿ ಅಪಾರ ಶಿಷ್ಯ ವರ್ಗವನ್ನು ಪಡೆದಿದ್ದಾರೆ. ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಹಾಗೂ ಬಿಇಡಿ ಪದವಿ ಗಳಿಸಿರುವ ಇವರು, 1996ರಿಂದ 2006ರ ವರೆಗೆ ಬೇರೆ ಬೇರೆ ಸರಕಾಲ ಪ್ರಾಥಮಿಕ ಶಾಲೆಗಳಲ್ಲಿ, ಸರಕಾರಿ ಪ್ರೌಢಶಾಲೆಗಳಲ್ಲಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ನಂತರ ಬೆಳ್ತಂಗಡಿ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ 13 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟು 53 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಮಣಿಪಾಲ ಸರಳಬೆಟ್ಟು ಶಿವಪ್ಪಾಡಿ ಉಮಾಮಹೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು. ಊರಿನ ಹಿರಿಯರು, ಸಾಹಿತ್ಯಾಭಿಮಾನಿಗಳು, ಸಾಹಿತಿಗಳು, ಕಲಾವಿದರು, ಭಾಗವಹಿಸಿದ್ದ ಈ ಸಭೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್.ಪಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮಹೇಶ್ ಠಾಕೂರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇದರೊಂದಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸಮ್ಮೇಳನವನ್ನು ಊರಿನವರೆಲ್ಲರನ್ನು ಸೇರಿಸಿಕೊಂಡು ದಿನಾಂಕ 30-12-2023ರಂದು ಬಹಳ ಅದ್ದೂರಿಯಾಗಿ ನಡೆಸುವುದಾಗಿ ಎಂದು ನಿರ್ಧರಿಸಲಾಯಿತು. ಈ ಸಂದಭ೯ದಲ್ಲಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಾಜಿ ತಾಲೂಕು ಅಧ್ಯಕ್ಷ ಗಣನಾಥ್ ಎಕ್ಕಾರು, ಅಶೋಕ್ ಕಾಮತ್, ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ತಾಲೂಕು ಘಟಕದ ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಜನಾರ್ದನ್…

Read More

ಸುರತ್ಕಲ್ : ರಂಗಚಾವಡಿ ಮಂಗಳೂರು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ಮಂಗಳೂರು ಇದರ ಆಶ್ರಯದಲ್ಲಿ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇವರ ಸಹಯೋಗದೊಂದಿಗೆ ‘ರಂಗಚಾವಡಿ ವರ್ಷದ ಹಬ್ಬ’ ಮತ್ತು ‘ರಂಗಚಾವಡಿ ಪ್ರಶಸ್ತಿ 2023’ ಪ್ರದಾನ ಸಮಾರಂಭ ದಿನಾಂಕ 03-12-2023ರಂದು ಭಾನುವಾರ ಸಂಜೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. 2023ರ ಸಾಲಿನ ‘ರಂಗಚಾವಡಿ ಪ್ರಶಸ್ತಿ’ಯನ್ನು ಖ್ಯಾತ ನಾಟಕ ರಚನೆಕಾರ-ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಸ್ವೀಕರಿಸಲಿರುವರು. ಕಾರ್ಯಕ್ರಮವನ್ನು ಮುಂಬೈ ಹೇರಂಬ ಇಂಡಸ್ಟ್ರೀಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕ ಡಾ ಸಂಜೀವ ದಂಡೆಕೇರಿ, ಕಟೀಲು ಶ್ರೀ ಡೆವಲಪರ್ಸ್ ಸಂಸ್ಥೆಯ ಮಾಲಕ ಗಿರೀಶ್ ಎಂ. ಶೆಟ್ಟಿ ಕಟೀಲು, ತೆರಿಗೆ ಹಣಕಾಸು ನಿರ್ಧರಣೆ ಮತ್ತು ಅಫೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ವರುಣ್ ಚೌಟ, ಬಂಟರ ಮಾತೃ ಸಂಘದ…

Read More

ಮಂಗಳೂರು : ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿಜಿ ಯಕ್ಷ ಫೌಂಡೇಶನ್ ಆಯೋಜಿಸಿದ್ದ ‘ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಮತ್ತು ಯಕ್ಷನಾದೋತ್ಸವ’ ಕಾರ್ಯಕ್ರಮ ದಿನಾಂಕ 19-11-2023ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ ಮಾತನಾಡಿ “ಕಲಾವಿದನಿಗೆ ಚಾರಿತ್ರ್ಯ ಮುಖ್ಯ. ಚಾರಿತ್ರ್ಯದ ಪಾವಿತ್ರ್ಯ ಉಳಿಸುವುದು ಕಲಾವಿದರ ಜವಾಬ್ದಾರಿ” ಎಂದು ಹೇಳಿದರು. ಆಶೀರ್ವಚನ ನೀಡಿದ ಕುಡುಪು ನರಸಿಂಹ ತಂತ್ರಿ, “ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿರುವ ಹರಿನಾರಾಯಣ, ಲೀಲಾವತಿ ಬೈಪಾಡಿತ್ತಾಯ ದಂಪತಿ ಅದೆಷ್ಟೋ ಶಿಷ್ಯರನ್ನು ರೂಪಿಸಿದ್ದಾರೆ. ಅವರಿಂದ ವಿದ್ಯೆ ಕಲಿತವರು ಪ್ರಸಿದ್ದಿ ಪಡೆಯುತ್ತಿದ್ದಾರೆ” ಎಂದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಪಂಚಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಶುಭ ಹಾರೈಸಿದರು. ಹಿರಿಯ ಮದ್ದಳೆಗಾರ ಮಿಜಾರು ಶ್ರೀ ಮೋಹನ ಶೆಟ್ಟಿಗಾರ್ ಅವರಿಗೆ ನಗದು ರೂ.10,000/- ಒಳಗೊಂಡ ‘ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ 2023’ ಪ್ರದಾನ…

Read More