Subscribe to Updates
Get the latest creative news from FooBar about art, design and business.
Author: roovari
ದೇಶದ ಹೆಮ್ಮೆಯ ಯುವ ಸಿತಾರ್ ವಾದಕ ಮಂಗಳೂರಿನ ಅಂಕುಶ್ ಎನ್. ನಾಯಕ್ ಇವರು ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯ ವಿಭಾಗದಲ್ಲಿ ಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆ ಪಡೆದಿದ್ದಾರೆ. ದೂರದರ್ಶನ ಹಾಗೂ ಆಕಾಶವಾಣಿಯಿಂದ ಎ-ಗ್ರೇಡ್ ಪಡೆಯುವುದು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅತ್ಯುನ್ನತ ಮಟ್ಟದ ಕಲಾ ಶ್ರೇಷ್ಠತೆ ಹಾಗೂ ಮಾನ್ಯತೆಯಾಗಿದೆ. ಈ ಮೂಲಕ ಪ್ರಸಾರ ಭಾರತಿಯ ಸಹಯೋಗದೊಂದಿಗೆ ನಡೆಯುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಗೀತ ವೇದಿಕೆಗಳಿಗೆ ನುಡಿಸುವ ಅರ್ಹತೆಯನ್ನು ಅಂಕುಶ್ ಎನ್. ನಾಯಕ್ ಪಡೆದಿದ್ದಾರೆ. ಈ ಪ್ರಮಾಣೀಕರಣವನ್ನು ಶೇ. 10ಕ್ಕಿಂತ ಕಡಿಮೆ ಪ್ರದರ್ಶನ ಕಲಾವಿದರಿಗೆ ಸಾಮಾನ್ಯವಾಗಿ ನೀಡಲಾಗುತ್ತದೆ. ಇದು ಒಬ್ಬರ ಸಂಗೀತ ವೃತ್ತಿ ಜೀವನದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಸಂಗೀತದ ಪ್ರಕಾರಗಳಲ್ಲಿ ಸಾರ್ವಕಾಲಿಕ ಶ್ರೇಷ್ಠತೆಗಾಗಿ ನಿರಂತರವಾಗಿ ಅಧ್ಯಯನ ನಡೆಸಿ, ಆ ಮೂಲಕ ಸಂಗೀತಕ್ಕಾಗಿ ಜೀವನ ಸಮರ್ಪಣೆ ಮಾಡಿ, ಸಂಗೀತದ ಪಾಂಡಿತ್ಯ ಸಾಧನೆಗೆ ಈ ಗ್ರೇಡ್ ಸಾಕ್ಷಿಯಾಗಿರುತ್ತದೆ. ಪ್ರಸ್ತುತ ಅಂಕುಶ್ ಎನ್. ನಾಯಕ್ ಇವರು ಮಂಗಳೂರಿನ ಎಕ್ಸಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕರಾಗಿದ್ದಾರೆ. ಧಾರವಾಡ…
ಬೆಳಗಾವಿ : ಡಾ. ಡಿ.ಎಸ್. ಕರ್ಕಿ ಪ್ರತಿಷ್ಠಾನ ಟ್ರಸ್ಟ್ (ರಿ.) ಇದರ ವತಿಯಿಂದ ಡಾ. ಡಿ.ಎಸ್. ಕರ್ಕಿಯವರ 117ನೇ ಜನ್ಮ ದಿನೋತ್ಸವ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 29 ಡಿಸೆಂಬರ್ 2024ರಂದು ಮುಂಜಾನೆ 11-00 ಗಂಟೆಗೆ ಬೆಳಗಾವಿ ಕಿತ್ತೂರ ಚನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಗದಗಿನ ತೋಂಟದಾರ್ಯ ಮಠದ ಪೂಜ್ಯರು ಡಾ. ಸಿದ್ದರಾಮ ಸ್ವಾಮೀಜಿಯವರು ಸಾನಿಧ್ಯ ನೀಡಲಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಡಾ. ರಮೇಶ ಮು. ಕರ್ಕಿ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬ್ಯಾಡಗಿ ಕುಮಾರಿ ಮಧು ಕಾರಗಿ, ಕೋಲಾರ ಪ.ಗು. ಸಿದ್ಧಾಪುರ ಮತ್ತು ಬೆಳಗಾವಿ ಶ್ರೀಮತಿ ಸುಧಾ ಇವರಿಗೆ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಬೆಳಗಾವಿಯ ಹಿರಿಯ ಸಾಹಿತಿ ಶ್ರೀಮತಿ ಆಶಾ ಯಮಕನಮರಡಿ, ಸಂಕೇಶ್ವರದ ಹಿರಿಯ ಸಾಹಿತಿ ಶ್ರೀಮತಿ ಹಮೀದಾ ಬೇಗಂ ಮತ್ತು ಬೆಳಗಾವಿಯ ಹಿರಿಯ ಸಾಹಿತಿ ಶ್ರೀಮತಿ ಜಯಶೀಲ ಬ್ಯಾಕೋಡ ಇವರನ್ನು ಸನ್ಮಾನಿಸಲಾಗುವುದು. ಡಾ ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿಗೆ…
ಬಂಟ್ವಾಳ: ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಿಕಾಕೇಂದ್ರದ ವಿದ್ಯಾರ್ಥಿಗಳ ರಂಗಪ್ರವೇಶ, ಗುರುವಂದನಾ ಹಾಗೂ ‘ವಿಷ್ಣುಮೂರ್ತಿ ಯಕ್ಷಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 29 ಡಿಸೆಂಬರ್ 2024ರಂದು ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಕ್ಷೇತ್ರದ ತಂತ್ರಿ ವೇದಮೂರ್ತಿ ಬಾಲಕೃಷ್ಣ ಪಾಂಗಣ್ಣಾಯ ಮಧ್ಯಾಹ್ನ 2.30ಕ್ಕೆ ಈ ಕಾರ್ಯಕ್ರಮವನ್ನು ದೀಪಪ್ರಜ್ವಲನೆಗೈದು ಉದ್ಘಾಟಿಸಲಿದ್ದು, ಗುರು ಚಂದ್ರಶೇಖರ ಭಟ್ ಕೊಂಕಣಾಜೆ ಇವರ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಶಿಷ್ಯಂದಿರು ಈ ಸಮಾರಂಭದಲ್ಲಿ ರಂಗಪ್ರವೇಶ ಮಾಡಲಿದ್ದಾರೆ. ಸಂಜೆ 4ಕ್ಕೆ ಪಿಲಾತಬೆಟ್ಟು ಸಿ. ಎ. ಬ್ಯಾಂಕ್ ಇದರ ಅಧ್ಯಕ್ಷರಾದ ತುಂಗಪ್ಪ ಬಂಗೇರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಹಿರಿಯ ಹಿಮ್ಮೇಳ ವಾದಕರಾದ ಹರಿನಾರಾಯಣ ಬೈಪಡಿತ್ತಾಯರಿಗೆ ‘ಶ್ರೀ ವಿಷ್ಣುಮೂರ್ತಿ ಯಕ್ಷಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಗುರು ಚಂದ್ರಶೇಖರ ಭಟ್ ಕೊಂಕಣಾಜೆ ಇವರಿಗೆ ಗುರುವಂದನೆ ನಡೆಯಲಿದೆ. ಸಮಾರಂಭದಲ್ಲಿ ಉದ್ಯಮಿಗಳಾದ ಶ್ರೀಪತಿ ಭಟ್ ಮೂಡುಬಿದಿರೆ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ಪಾಂಗಲ್ಪಾಡಿ…
ಮಂಗಳೂರು : ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಸ್ಥಾಪಕಾಧ್ಯಕ್ಷರಾದ ಲಕ್ಷ್ಮೀ ನಾರಾಯಣ ಭಟ್ (ಸನ್ ಭಟ್ರು) ಇವರು 22 ಡಿಸೆಂಬರ್ 2024ರಂದು ನಿಧನ ಹೊಂದಿದರು. ಇವರಿಗೆ 74 ವರ್ಷ ವಯಸ್ಸಾಗಿತ್ತು. ಕಳವಾರು ಶ್ರೀ ಬೆಂಕಿನಾಥೇಶ್ವರ ಭಜನಾ ಮಂಡಳಿಯ ಹುಟ್ಟಿಗೆ ಕಾರಣಕರ್ತರಾಗಿದ್ದ ಇವರು ಪ್ರಸ್ತುತ ಮಂಡಳಿಯ ಗೌರವಾಧ್ಯಕ್ಷ ಹಾಗೂ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಭಜನೆ, ನಾಟಕ, ಯಕ್ಷಗಾನದ ಹವ್ಯಾಸಿ ಕಲಾವಿದರಾಗಿದ್ದ ಶ್ರೀಯುತರು ಪುರೋಹಿತರಾಗಿ ಜನಾನುರಾಗಿಯಾಗಿದ್ದರು. ಜೋಕಟ್ಟೆ ಶ್ರೀ ವಿಜಯ ವಿಠಲ ಭಜನ ಮಂದಿರ, ಬಜಪೆ ವಿಜಯ ವಿಠಲ ಭಜನ ಮಂದಿರ ಮತ್ತು ಶಾಂತಿನಗರ ಶ್ರೀ ಜಗದಾಂಬಿಕ ಭಜನ ಮಂದಿರದಲ್ಲಿಯೂ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಬೆಂಗಳೂರು : ರಂಗಮಂಡಲ ಬೆಂಗಳೂರು ಮತ್ತು ಜಾಗೃತಿ ಟ್ರಸ್ಟ್ (ರಿ.) ಶಾಂತಿನಗರ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಕಾರ್ಯಕ್ರಮದ ಆರನೇ ಕವಿಗೋಷ್ಠಿ ಮನುಕುಲದ ನೋವಿಗೆ ಮದ್ದಾಗಲಿ ಕವಿತೆಗಳು ಜನಸಾಮಾನ್ಯರ ದನಿಯಾಗಲಿ ಕಾವ್ಯ ಹೀಗೆ ಜನರೆಡೆಗೆ ಕಾವ್ಯ ಕೊಂಡುಹೋಗುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ರಾಜಧಾನಿ ಬೆಂಗಳೂರಿನಿಂದ ಶರಣರ ನಾಡು ಬೀದರ ಕಡೆಗೆ ‘ಕಾವ್ಯ ದೀವಟಿಗೆಯ ಪಯಣ’ವು ದಿನಾಂಕ 28 ಡಿಸೆಂಬರ್ 2024ರಂದು ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಶಾಂತಿನಗರ, ಟಿ.ವಿ. 9 ಚಾನಲ್ ಬಳಿ, ವುಡ್ ಬ್ಯಾಂಕ್ ಎದುರು ಇರುವ ಪುನೀತ್ ರಾಜಕುಮಾರ ಭವನದಲ್ಲಿ ನಡೆಯಲಿದೆ. ಬೆಂಗಳೂರು ಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಹಾಗೂ ಬರಹಗಾರ್ತಿ ಡಾ. ವಾಣಿ ಸಂದೀಪ್ ಇವರು ವಹಿಸಲಿದ್ದು, ಉದ್ಘಾಟಕರಾಗಿ ಕವಿ ಹಾಗೂ ಅಂಕಣಗಾರ್ತಿ ಎನ್. ಸಂಧ್ಯಾ ರಾಣಿ ಇವರು ಭಾಗವಹಿಸಲಿದ್ದಾರೆ. ನಾಡಿನ ಖ್ಯಾತ ಕವಿಗಳಿಂದ ‘ಕವಿತಾ ವಾಚನ’ ಮತ್ತು ‘ಪದ ಪಾದ’ ಕಾರ್ಯಕ್ರಮ ನಡೆಯಲಿದೆ.
ನಾನು ಪ್ರೀತಿಯಿಂದ ‘ವಾಸುವೇಟ್ಟಾ’ ಎಂದು ಕರೆಯುತ್ತಿದ್ದ ಪ್ರಿಯ ಲೇಖಕ, ಮಲೆಯಾಳ ಸಾಹಿತ್ಯ ದಿಗ್ಗಜ, ಬಹುಮುಖ ಪ್ರತಿಭೆ ಎಂ.ಟಿ. ವಾಸುದೇವನ್ ನಾಯರ್, ತಮ್ಮ 92ನೆಯ ವಯಸ್ಸಿನಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದ್ದಾರೆ. ಕಣ್ಣುಗಳು ತುಂಬುತ್ತಿವೆ. ಮನಸ್ಸು ಭಾರವಾಗಿದೆ. ವಯಸ್ಸು ಆಗಿದ್ದರೂ ನಮಗೆ ಹತ್ತಿರವಾದವರು ಎಷ್ಟು ಕಾಲ ನಮ್ಮ ಜತೆಗಿದ್ದರೂ ಅದು ಕಡಿಮೆಯೇ ಅನ್ನಿಸುವುದು ಸಹಜ. ಅವರು ಬಿಟ್ಟು ಹೋದ ಮಹಾ ಶೂನ್ಯವನ್ನು ಯಾರು ತಾನೇ ತುಂಬಬಲ್ಲರು? ಅವರ ಕಾದಂಬರಿಗಳನ್ನು ಕಾಸರಗೋಡು ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಓದಿ ಇಷ್ಟಪಟ್ಟಿದ್ದೆನಾದರೂ ಅವರನ್ನು ನೇರವಾಗಿ ಭೇಟಿಯಾದದ್ದು 1999 ಆಗಸ್ಟ್ 12ರಂದು ತ್ರಿಶ್ಶೂರಿನ ಕೇರಳ ಸಾಹಿತ್ಯ ಅಕಾಡೆಮಿ ಹಾಲ್ ನಲ್ಲಿ ನನ್ನ ಮೊದಲ ಅನುವಾದ ವೆಟ್ಟೂರು ರಾಮನ್ ನಾಯರರ ‘ಬದುಕಲು ಮರೆತ ಸ್ತ್ರೀ’ ಎಂಬ ಕಾದಂಬರಿಯನ್ನು ಅವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಿದಾಗ. ಅಲ್ಲಿ ಎಲ್ಲರೂ ಎಂ.ಟಿ. ಬಗ್ಗೆ ಮಾತನಾಡುತ್ತಿದ್ದುದನ್ನು ನೋಡಿದಾಗ ಅಲ್ಲಿನ ಜನರಿಗೆ ಅವರೆಂದರೆ ಎಷ್ಟೊಂದು ಭಯ-ಭಕ್ತಿ-ಪ್ರೀತಿ-ಗೌರವ ಅನ್ನುವುದು ನನಗೆ ಅರ್ಥವಾಯಿತು. ಜನರ ದೃಷ್ಟಿಯಲ್ಲಿ ಅವರೊಂದು ಲಿವಿಂಗ್ ಲೆಜೆಂಡ್…
ಮೈಸೂರು : ಸುವ್ವಿ ಅರ್ಪಿಸುವ ಕೈಲಾಸಂ ಬದುಕು ಬರಹಗಳ ಸಮೀಕ್ಷೆಯ ‘ಕೈಲಾ ಸಂಸಾರ’ ಹಾಸ್ಯ ನಾಟಕವು ದಿನಾಂಕ 29 ಡಿಸೆಂಬರ್ 2024ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ನಟನ ರಂಗ ಶಾಲೆಯಲ್ಲಿ ಪ್ರದರ್ಶನಗೊಳ್ಳಲಿದೆ. ಆಧುನಿಕ ಕನ್ನಡ ರಂಗಭೂಮಿಯ ಆಧ್ಯರಲ್ಲಿ ಕೈಲಾಸಂ ಹೆಸರು ಚಿರಸ್ಥಾಯಿ. ಅವರ ಬದುಕು ಬರಹಗಳ ಸಾರವನ್ನು ನಗುತ್ತಲೇ ಗ್ರಹಿಸುವ ಒಂದು ವಿಶಿಷ್ಟ ಪ್ರಯತ್ನ ಈ ನವೀನ ಪ್ರಯೋಗ. ರಂಗಭೂಮಿ ಕಿರುತೆರೆ ಹಿರಿತೆರೆಗಳ ಸುಂದರ್ ವೀಣಾ – ವೀಣಾ ಸುಂದರ್ ಜೊತೆಯಾಗಿ ನಿಮ್ಮನ್ನು ರಂಜಿಸಲಿದ್ದಾರೆ. ನಿರ್ಮಾಪಕಿ, ನಟಿ, ನಿರ್ದೇಶಕಿ ಶ್ರುತಿ ನಾಯ್ಡು ಈ ಪ್ರಯೋಗ ಆಯೋಜಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ – 9845223834, 7259537777 ಮತ್ತು 9480468327.
ನೀರ್ಚಾಲು : ಪ್ರೊ. ಪಿ. ಶ್ರೀಕೃಷ್ಣ ಭಟ್ ಅಭಿನಂದನ ಸಮಿತಿ ಕಾಸರಗೋಡು ಇದರ ವತಿಯಿಂದ ಸಹಸ್ರಚಂದ್ರ ದರ್ಶನ ಅಭಿನಂದನಾ ಸಮಾರಂಭ’ವನ್ನು ದಿನಾಂಕ 05 ಜನವರಿ 2025ರಂದು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮಹಾಜನ ಶಿಕ್ಷಣ ಸಂಸ್ಥೆಗಳ ಪ್ರಬಂಧಕರು ಶ್ರೀ ಜಯದೇವ ಖಂಡಿಗೆ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಅಭಿನಂದನಾ ಗ್ರಂಥ ‘ಶ್ರೀಪಥ’, ‘ಆಲೋಕನ’, ‘ಅರಿವಿನ ನೆಲೆ ಹುಡುಕಿ’ ಮತ್ತು ಶ್ರೀಕೃಷ್ಣ ಭಟ್ಟರ ವಿದ್ಯಾರ್ಥಿಗಳ ಕೃತಿಗಳು ಬಿಡುಗಡೆಗೊಳ್ಳಲಿದೆ. ಬೆಳಗ್ಗೆ 11-00 ಗಂಟೆಗೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತಕುಮಾರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಪಾದೇಕಲ್ಲು ವಿಷ್ಣು ಭಟ್ ಇವರು ‘ಶ್ರೀಕೃಷ್ಣ ಭಟ್ಟರ ಸಾಹಿತ್ಯ ಚಿಂತನೆ’, ಪ್ರಾಧ್ಯಾಪಕರಾದ ಡಾ. ಮೋಹನ ಕುಂಟಾರ್ ಇವರು ‘ಶ್ರೀಕೃಷ್ಣ ಭಟ್ಟರ ಬಹುಭಾಷಾ ಚಿಂತನೆ’ ಮತ್ತು ವಿದ್ವಾಂಸರಾದ ಶ್ರೀ ಎಸ್. ಕಾರ್ತಿಕ್…
ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ಕಲಾಸಂಘದ ಸಮಾರೋಪ ಸಮಾರಂಭದ ದಿನಾಂಕ 26 ಡಿಸೆಂಬರ್ 2024ರಂದು ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿವೇಕಾನಂದ ಮಹಾವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಅನ್ನಪೂರ್ಣ ಪಿ. ಜಿ. ಮಾತನಾಡಿ “ಕಾಲೇಜಿನಲ್ಲಿ ನಡೆಯುವ ವಿವಿಧ ಸಂಘದ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಕೌಶಲ್ಯವನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತದೆ. ಕಲಾವಿಭಾಗವನ್ನು ಆಯ್ಕೆಮಾಡಿಕೊಂಡ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಕೀಳರಿಮೆಗೆ ಒಳಗಾಗುವ ಅಗತ್ಯವಿಲ್ಲ. ಸಮಾಜದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವವರ ಶೈಕ್ಷಣಿಕ ಹಿನ್ನೆಲೆಯನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ವಿದ್ಯಾಭ್ಯಾಸದ ಹಂತದಲ್ಲಿ ಬೇರೆ ಬೇರೆ ಚಟುವಟಿಕೆಗಳಲ್ಲಿ ನಾವು ಹೇಗೆ ತೊಡಗಿಸಿಕೊಂಡಿದ್ದೇವೆ ಎಂಬುದರ ಆಧಾರದ ಮೇಲೆ ನಮ್ಮ ಭವಿಷ್ಯದ ದಿನಗಳು ನಿಂತಿರುತ್ತವೆ”. ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಅಡಳಿತ ಮಂಡಳಿಯ ನಿರ್ದೇಶಕರಾದ ಡಾ. ಕೆ. ಎನ್. ಸುಬ್ರಹ್ಮಣ್ಯ ಮಾತನಾಡಿ “ಇಂದಿನ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆಗಳು ಇರುವುದು ಸಹಜ. ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ…
ಮಂಗಳೂರು : ರಾಗ ತರಂಗ(ರಿ.)ಮಂಗಳೂರು ಇದರ ಸಾಂಸ್ಕೃತಿಕ ಸ್ಪರ್ಧೆ “ಬಾಲ ಪ್ರತಿಭಾ-2024” ದಿನಾಂಕ 13,14 ಮತ್ತು 15 ಡಿಸೆಂಬರ್ 2024ನೇ ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರದಂದು ಮಂಗಳೂರಿನ ಭಾರತೀಯ ವಿದ್ಯಾಭವನದ ಸಹಯೋಗದೊಂದಿಗೆ ವಿದ್ಯಾಭವನದ ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಸರಕಾರಿ, ಖಾಸಗಿ ಮತ್ತು ಕೇಂದ್ರೀಯ ವಿದ್ಯಾಲಯಗಳ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಗಳು ಕಳೆದ 4 ದಶಕಗಳಿಂದ ನಿರಂತರ ನಡೆಯುತ್ತಿದ್ದು, ಈ ವರ್ಷ ಸರಕಾರಿ ಶಾಲಾ ಮಕ್ಕಳಿಗಾಗಿ ಒಂದು ದಿನವನ್ನು ಮೀಸಲಾಗಿರಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣ ಮತ್ತು ಈ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಈ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಸಪ್ರಶ್ನೆ,ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರಿಯ ವಾದ್ಯ ಸಂಗೀತ, ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ, ಭಾವಗೀತೆ ಗಾಯನ, ಸುಗಮ ಸಂಗೀತ, ಆಶುಭಾಷಣ, ದೇಶಭಕ್ತಿಗೀತೆ ಗಾಯನ, ಛದ್ಮವೇಷ ಸ್ಪರ್ಧೆ, ಜನಪದ ನೃತ್ಯ, ಭರತನಾಟ್ಯ ಮುಂತಾದ ಕಲಾ ಪ್ರಕಾರಗಳ ಸಬ್ ಜೂನಿಯರ್, ಜೂನಿಯರ್ ಮತ್ತು…