Author: roovari

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಗ್ರಾಮ ಪಂಚಾಯತ್ ಕೆದಂಬಾಡಿ ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿಯವರ ಪೋಷಕತ್ವದಲ್ಲಿ ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ‘ಗ್ರಾಮ ಸಾಹಿತ್ಯ ಸಂಭ್ರಮ’ ಸರಣಿ-1 ಹಾಗೂ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು ದಿನಾಂಕ 28 ಡಿಸೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ದ.ಕ.ಜಿ.ಪ.ಹಿ.ಪ್ರಾ. ಶಾಲೆ ಕೆದಂಬಾಡಿ ಇದರ 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಬಿ. ಆಯಿಷತ್ ಮುನೀಷ ಇವರು ಗ್ರಾಮ ಸಾಹಿತ್ಯ ಸಂಭ್ರಮ ಇದರ ಸರ್ವಾಧ್ಯಕ್ಷತೆ ವಹಿಸಲಿರುವರು. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ…

Read More

ಕನಕಪುರ : ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆ ‘ರಂಗಕಹಳೆ’ ಬೆಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ‘23ನೇ ಕುವೆಂಪು ನಾಟಕೋತ್ಸವ 2024’ವನ್ನು ದಿನಾಂಕ 28 ಡಿಸೆಂಬರ್ 2024 ಮತ್ತು 29 ಡಿಸೆಂಬರ್ 2024ರಂದು ಪ್ರತಿದಿನ ಸಂಜೆ 6-00 ಗಂಟೆಗೆ ಕನಕಪುರದ ಡಾ. ಬಿ.ಆರ್. ಅಂಬೇಡ್ಕರ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 28 ಡಿಸೆಂಬರ್ 2024ರಂದು ‘ಬೊಮ್ಮನ ಹಳ್ಳಿಯ ಕಿಂದರಿ ಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ಎಂಬ ನಾಟಕ ಪ್ರದರ್ಶನ ಹಾಗೂ ಶ್ರೀ ಕುವೆಂಪು ಗೀತೆ ಗಾಯನ ಮತ್ತು ನೃತ್ಯ ಪ್ರದರ್ಶನ ನಡೆಯಲಿದೆ. ದಿನಾಂಕ 29 ಡಿಸೆಂಬರ್ 2024ರಂದು ಬಾಲಕ ಕುವೆಂಪು ಕಿರುಚಿತ್ರ ಹಾಗೂ ‘ಶೂದ್ರತಪಸ್ವಿ’ ಮತ್ತು ‘ಯಮನ ಸೋಲು’ ನಾಟಕ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಖಿದ್ಮಾ ಫೌಂಡೇಶನ್ ಕರ್ನಾಟಕ ಇದರ 5ನೇ ವಾರ್ಷಿಕೋತ್ಸವ, ವಿಶ್ವ ಮಾನವ ದಿನಾಚರಣೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸೌಹಾರ್ದ ಸಮ್ಮಿಲನ ಕಾರ್ಯಕ್ರಮವು ದಿನಾಂಕ 29 ಡಿಸೆಂಬರ್ 2024ರ ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ಕವಿ ಮತ್ತು ಚಿಂತಕರಾದ ಯೂಸಫ್. ಹೆಚ್ .ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ದೂರದರ್ಶನದ ವಿಶ್ರಾಂತ ಅಧಿಕಾರಿಗಳಾದ ರಾ. ಸು. ವೆಂಕಟೇಶ ಇವರು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಅತಿಥಿಗಳಾಗಿ ಡಾ. ಸುರೇಶ್ ಬಾಬು ಬಿ. ಎನ್., ಡಾ. ಎಂ. ಎಂ. ಭಾಷಾ ನಂದಿ, ಸಿನಾನ್ ಇಂದಬೆಟ್ಟು, ಡಾ. ಕೆ. ಜಿ. ಗೋಪಾಲಕೃಷ್ಣ,‌ ಡಾ. ಕಾವ್ಯ ಎಸ್. ಟಿ ಚಂದ್ರಪ್ಪ, ಕುಮಾರಿ ಗೌತಮಿ ಜೈನ್, ಶಾಂತ ಜಯಾನಂದ್ ಹಾಗೂ ಯೂಸುಫ್ ರೆಂಜಲಾಡಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಕವಿಗಳು ಮತ್ತು ಸಾಂಸ್ಕೃತಿಕ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಯೋಜಕ…

Read More

ಕಾಸರಗೋಡು : ಪತ್ರಕರ್ತೆ, ಸಂಘಟಕಿ, ರಂಗಕಲಾವಿದೆ ಪೂರ್ಣಿಮಾ ಪವಾರ್ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ರಾಯಚೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಕಾಸರಗೋಡು ಕನ್ನಡ ಭವನದ ನಿರ್ದೇಶಕರಾದ ಸಿ.ವೈ. ಮೆಣಸಿನಕಾಯಿ ನಾಮ ನಿರ್ದೇಶನ ಮಾಡಿದರು. ವಿಜಯನಗರ ಜಿಲ್ಲಾಧ್ಯಕ್ಷರಾದ ಚಿಟಗೇರಿ ಕೊಟ್ರೇಶಿ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಪೂರ್ಣಿಮಾ ಪವಾರ್ ಇವರು, ಕನ್ನಡ ಭವನ ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕರ್ನಾಟಕದಿಂದ ಕಾಸರಗೋಡಿಗೆ, ಆಗಮಿಸುವ, ಸಾಹಿತ್ಯ, ಸಾಂಸ್ಕೃತಿಕ ರಾಯಭಾರಿಗಳಿಗೆ “ಉಚಿತ ವಸತಿ ಸೌಕರ್ಯ “, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಮತ್ತು ರಜತ ಸಂಭ್ರಮ ವಿಶೇಷ ಕಾರ್ಯಕ್ರಮಗಳ ಜವಾಬ್ದಾರಿ ಸ್ವೀಕರಿಸಿ, ಜಿಲ್ಲಾ ಘಟಕವನ್ನು ವಿಸ್ತರಿಸಿ ಕಾರ್ಯ ಪ್ರವೃತರಾಗಬೇಕೆಂದು ಕಾಸರಗೋಡು ಕನ್ನಡ ಭವನದ ಸ್ಥಾಪಕಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಚಾಲಕಿಯಾದ…

Read More

ಭಾರತದ ಮಹತ್ವದ ಲೇಖಕರಲ್ಲಿ ಒಬ್ಬರಾದ ಎಂ.ಟಿ. ವಾಸುದೇವನ್ ನಾಯರ್ ಅವರು ಮಲಯಾಳಂ ಕಥನ ಸಾಹಿತ್ಯದಲ್ಲಿ ಹೊಸಶಖೆಯನ್ನು ಆರಂಭಿಸಿದ ಕತೆಗಾರರಾಗಿದ್ದಾರೆ. ಕನ್ನಡದ ನೆಲದಲ್ಲಿ ನವ್ಯ ಸಾಹಿತ್ಯ ಆರಂಭವಾಗಲು ಕಾರಣವಾದ ವಸ್ತು ವಿಚಾರಗಳೇ ಮಲಯಾಳದಲ್ಲಿ ‘ಮಾಡರ್ನಿಸಂ’ ಆರಂಭವಾಗಲು ಕಾರಣವಾಗಿದ್ದು, ಅದನ್ನೇ ಮುಖ್ಯ ಸಂವೇದನೆಯನ್ನಾಗಿರಿಸಿಕೊಂಡ ಎಂ.ಟಿ.ಯವರು ಸಾಮಾಜಿಕ ಮೌಲ್ಯ ಮತ್ತು ಆದರ್ಶಗಳು ಕುಸಿದು ಬೀಳುತ್ತಿರುವುದನ್ನು ಕಂಡು ಭ್ರಮನಿರಸನಗೊಂಡು ಆತ್ಮ ವಿಮರ್ಶೆಯತ್ತ ತಿರುಗಿದರು. ವ್ಯಕ್ತಿಯ ವೈಯಕ್ತಿಕ ವಿಚಾರಗಳು ಮತ್ತು ಒಂಟಿತನದ ಭಾವವನ್ನು ಅಭಿವ್ಯಕ್ತಿಸುವಲ್ಲಿ ಆಸಕ್ತಿಯನ್ನು ಹೊಂದಿದ್ದ ಅವರು ಹೆನ್ರಿ ಜೇಮ್ಸ್ ಮತ್ತು ಜೇಮ್ಸ್ ಜಾಯ್ಸರ ವಿಧಾನದಿಂದ ಸ್ಪೂರ್ತಿಯನ್ನು ಪಡೆದು ಬರವಣಿಗೆಯನ್ನು ಆರಂಭಿಸಿದರು. ಬಳಿಕ ಮಲಯಾಳಂ ಕಥಾ ಸಾಹಿತ್ಯವು ಕಾಲ್ಪನಿಕತೆಯನ್ನು ಮೀರಿ ನಿಂತು ವ್ಯಕ್ತಿತ್ವದ ಪೂರ್ಣತೆಯತ್ತ ಗಮನ ಹರಿಸತೊಡಗಿತು. ಎಂ.ಟಿ.ಯವರು ಪ್ರತಿನಿಧಿಸುವ ನಾಯರ್ ಸಮುದಾಯವನ್ನು ಒಳಗೊಂಡ ಸಾಮಾಜಿಕ ಸ್ವರೂಪ ಮತ್ತು ಸಾಹಿತ್ಯಕ ಪರಿಸರವು ಅವರ ಬರಹಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ರಾಜರ ಆಡಳಿತ ಕಾಲದಲ್ಲಿ ನಾಯಮ್ಮಾರರು ರಾಜ್ಯದ ರಕ್ಷಣಾ ವ್ಯವಸ್ಥೆಯನ್ನು ವಹಿಸಿದ್ದರು. ಇವರನ್ನು ಶೂದ್ರರು ಎನ್ನಲಾಗುತ್ತಿತ್ತು. ಕೊಚ್ಚಿ,…

Read More

ಮಂಗಳೂರು : ತುಳುಕೂಟ (ರಿ.) ಕುಡ್ಲ ನಡೆಸುವ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ- 2024’ರ ಅಪ್ರಕಟಿತ ಸ್ವತಂತ್ರ ನಾಟಕ ಕೃತಿಗಳನ್ನು ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಕೊಡ ಮಾಡುವ ರತ್ನವರ್ಮ ಹೆಗ್ಗಡೆ ಪ್ರಶಸ್ತಿಯನ್ನು ಕುಡ್ಲದ ತುಳುಕೂಟದ ಮೂಲಕ ಕಳೆದ 47 ವರ್ಷಗಳಿಂದ ಪ್ರದಾನಿಸಲಾಗುತ್ತದೆ. ಎ-4 ಹಾಳೆಯಲ್ಲಿ 60-70 ಪುಟಗಳಳೊಳಗೆ ಕೃತಿ ಇರಬೇಕು. ಹಾಳೆಯ ಒಂದೇ ಬದಿಯಲ್ಲಿ ಇರಬೇಕು. ನಾಟಕ ಸ್ವತಂತ್ರ ಕೃತಿಯಾಗಿರಬೇಕು. 2025ರ ಮಕರ ಸಂಕ್ರಾಂತಿಯವರೆಗೆ ಪ್ರದರ್ಶನಗೊಳ್ಳಬಾರದು. ಪೌರಾಣಿಕ / ಚಾರಿತ್ರಿಕ / ಸಾಮಾಜಿಕ / ಜಾನಪದ ಹೀಗೆ ಯಾವ ಪ್ರಕಾರವೂ ಆಗುತ್ತದೆ. ಭಾಷಾಂತರಗೊಂಡ / ಆಧಾರಿತ ಕೃತಿಗಳನ್ನು ನಿರಾಕರಿಸಲಾಗುವುದು. ಪ್ರಶಸ್ತಿಯು ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ನಗದು ಮೊತ್ತವೂ ಇರುತ್ತದೆ. ಲೇಖಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಸ್ವತಂತ್ರ ಕೃತಿಯೆಂದು ಸ್ವಯಂಘೋಷಿತ ಪ್ರಮಾಣ ಪತ್ರ ಇರಬೇಕು. ಬೇರೆಲ್ಲೂ ಪ್ರದರ್ಶನಗೊಂಡಿರದ ನಾಟಕ ಆಗಬೇಕು. ಇನ್ನು ಮೂರು ಬಾರಿ…

Read More

ಬಂಟ್ವಾಳ : ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ.) ಇದರ ವತಿಯಿಂದ ಏರ್ಪಡಿಸಲಾದ ಮೂರು ದಿನಗಳ ‘ಸಂಸ್ಕೃತಿ ಉತ್ಸವ’ ಕಾರ್ಯಕ್ರಮವು ದಿನಾಂಕ 22 ಡಿಸೆಂಬರ್ 2024ರಿಂದ 24 ಡಿಸೆಂಬರ್ 2024ರವರೆಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಕುಕ್ಕಾಜೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ, ಉಪನ್ಯಾಸಕ ಜಯಾನಂದೆ ಪೆರಾಜೆ “ಭಾರತೀಯ ಸಂಸ್ಕೃತಿಯು ಕೃಷಿ ಸಂಸ್ಕೃತಿಯ ಮೂಲದಿಂದ ಬೆಳೆದು ಬಂದಿದೆ. ಬಹುಭಾಷಾ ಸಂಸ್ಕೃತಿ ಇದ್ದರೂ ಏಕಭಾವವನ್ನು ಹೊಂದಿದೆ. ವಿವಿಧ ಹಬ್ಬಗಳ ಆಚರಣೆ ಹಾಗೂ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ” ಎಂದು ಹೇಳಿದರು. ಮಂಚಿ ಹಿ.ಪ್ರಾ. ಶಾಲಾ ಸಂಚಾಲಕ ನೂಜಿಬೈಲು ನಾರಾಯಣ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿ ಮಾತನಾಡಿದರು. “ನಾಟಕ, ಸಾಹಿತ್ಯ, ಸಂಗೀತ, ಚಿತ್ರಕಲೆಗಳೆಲ್ಲ ಸಂಸ್ಕೃತಿಯ ವಿವಿಧ ರೂಪಗಳಾಗಿವೆ. ಜೀವನವು ಕಲಾವಂತಿಕೆಯಿಂದ ಕೂಡಿರಬೇಕು. ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ” ಎಂದು ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು. ಹಿರಿಯ ನ್ಯಾಯವಾದಿ ಚಂದ್ರಶೇಖರ ಕೆ.ವಿ. ಇವರು ಸಭಾಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ…

Read More

ಉಡುಪಿ : ನಾಟ್ಯಶ್ರೀ ಕಲಾತಂಡ ಶಿವಮೊಗ್ಗ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ದಿನಾಂಕ 22 ಡಿಸೆಂಬರ್ 2024ರ ಭಾನುವಾರದಂದು ಉತ್ತರ ಕನ್ನಡದ ಶಿರಸಿಯ ನೆಮ್ಮದಿ ರಂಗಧಾಮದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಧಕರನ್ನು ಸನ್ಮಾನಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನವಾಗಿರಬಹುದು ಅಥವಾ ಜಾನಪದವೇ ಇರಬಹುದು. ಕಲೆ ತನ್ನನ್ನು ನಂಬಿಕೊಂಡವರ ಕೈ ಎಂದಿಗೂ ಬಿಡೋದಿಲ್ಲ. ಕಲಾವಿದನ ಕಲಾ ಸೇವೆಯನ್ನು ಸಮಾಜ ಒಂದಲ್ಲ ಒಂದು ದಿನ ಗುರುತಿಸುವುದು ಖಂಡಿತ. ಇದಕ್ಕೆ ಹಲವಾರು ಸಾಧಕ ಹಿರಿಯ ಕಲಾವಿದರೇ ಸಾಕ್ಷಿಯಾಗಿದ್ದಾರೆ. ಕಲೆ ಕಲಾವಿದರಿಗೆ ಸಮಾಜದಲ್ಲಿ ಸೂಕ್ತ ಗೌರವವನ್ನು ತಂದುಕೊಡುತ್ತದೆ. ಕಲಾತಂಡದ ಸಂಚಾಲಕರಾದ ವಿದ್ವಾನ್ ದತ್ತಮೂರ್ತಿ ಭಟ್ ಅವರು ಯಕ್ಷಗಾನ ಕಲೆಗೆ ತನ್ನನ್ನು ಮುಡಿಪಾಗಿಟ್ಟುಕೊಂಡು ಅದರ ಬೆಳವಣಿಗೆಗಾಗಿ ನಾಟ್ಯಶ್ರೀ ಕಲಾತಂಡವನ್ನು ಸ್ಥಾಪಿಸಿ ಯಕ್ಷಗಾನದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಅವರೊಬ್ಬ ಮಹಾನ್ ಸಾಧಕ. ಅವರು ನಿರ್ಮಲ ಮನಸ್ಸಿನಿಂದ ಯಕ್ಷಗಾನ ಕಲೆಯ ಸೇವೆ ಮಾಡುತ್ತಿದ್ದಾರೆ. ಅವರು ಹುಟ್ಟುಹಾಕಿದ ಈ ಸಂಸ್ಥೆ ಇಂದು 25ವರ್ಷದ…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಹಾಗೂ ಆಕೃತಿ ಆಶ್ರಯ ಪಬ್ಲಿಕೇಷನ್ಸ್ ಇವರ ಸಹಯೋಗದಲ್ಲಿ ಲೇಖಕಿ ಸುಖಲಾಕ್ಷಿ ವೈ. ಸುವರ್ಣ ಇವರ ‘ಮುಂಬಯಿ ಮತ್ತು ಮಹಿಳೆ’ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 24 ಡಿಸೆಂಬರ್ 2024 ರಂದು ಮಂಗಳೂರಿನ ಕೊಡಿಯಾಲಬೈಲ್ ನಲ್ಲಿರುವ ಎಸ್. ಡಿ. ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆಯಾದ ಶಕುಂತಳಾ ಟಿ. ಶೆಟ್ಟಿ ಮಾತನಾಡಿ “ನಮ್ಮೂರಿನ ಸಮಾಜದಲ್ಲಿ ಮಹಿಳೆ ಎದುರಿಸುವ ಸಮಸ್ಯೆಗಳನ್ನು ನಾವು ಕಂಡಿದ್ದೇವೆ ಆದರೆ ಮುಂಬಯಿ ಮಹಿಳೆಯರು ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎನ್ನುವ ವಿಚಾರವನ್ನು ಕೃತಿಯ ಮೂಲಕ ಸುಖಲಾಕ್ಷಿ ವೈ. ಸುವರ್ಣ ತಿಳಿಸಿದ್ದಾರೆ.” ಎಂದರು. ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀ ನಾಥ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ…

Read More

ಕೊಯಿಕ್ಕೋಡ್ : ಮಲಯಾಳ ಸಾಹಿತಿ ಹಾಗೂ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಎಂ. ಟಿ. ವಾಸುದೇವನ್ ನಾಯರ್ ಹೃದ ಯಾಘಾತದಿಂದಾಗಿ ತನ್ನ 91ನೇ ವಯಸ್ಸಿನಲ್ಲಿ ದಿನಾಂಕ 25 ಡಿಸೆಂಬರ್ 2024ರ ಬುಧವಾರದಂದು ಇಹವನ್ನು ತ್ಯಜಿಸಿದ್ದಾರೆ. ಅನಾರೋಗ್ಯದಿಂದಿದ್ದ ಇವರನ್ನು ಕಳೆದ ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಎಂ.ಟಿ’ ಎಂದೇ ಪ್ರಸಿದ್ಧರಾಗಿದ್ದ ಇವರು 09 ಆಗಸ್ಟ್ 1933ರಂದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುಡಲೂರಿನಲ್ಲಿ ಜನಿಸಿದರು. 9 ಕಾದಂಬರಿ ಹಾಗೂ 19 ಸಣ್ಣ ಕತೆಗಳ ಸಂಕಲನಗಳನ್ನು ರಚಿಸಿದ್ದ ಇವರು 6 ಚಲನಚಿತ್ರಗಳನ್ನು ನಿರ್ದೇಶಿಸಿ, 54 ಚಿತ್ರಗಳಿಗೆ ಚಿತ್ರಕತೆ ಬರೆದಿದ್ದರು. ಏಳು ದಶಕಗಳ ಸಾಹಿತ್ಯಕ ಪಯಣದಲ್ಲಿ ಪ್ರಬಂಧಗಳ ಹಲವು ಸಂಕಲನಗಳನ್ನು ಹಾಗೂ ಸ್ಮರಣ ಸಂಚಿಕೆ ರಚಿಸಿದ್ದರು. ಇವರು ‘ಅರಸುವೀಟ್ಟು’, ‘ಮಂಜು’ ಹಾಗೂ ‘ಕಾಲಮ್’ನಂತಹ ಹಲವು ಮಹಾನ್ ಕೃತಿಗಳನ್ನು ರಚಿಸಿದ್ದರು. ಇವರ ‘ನಾಲುಕೆಟ್ಟು’ (ಪೂರ್ವಿಕರ ಮನೆ) ಕಾದಂಬರಿಯನ್ನು ಮಲಯಾಳ ಸಾಹಿತ್ಯದ ಮೇರು ಕೃತಿ ಎಂದೇ ಪರಿಗಣಿಸಲಾಗುತ್ತದೆ. ಕೆಲ ವರ್ಷಗಳ ಕಾಲ ಇವರು ಮಾತೃಭೂಮಿ ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಶ್ರೀಯುತರ…

Read More