Author: roovari

ಪುತ್ತೂರು : ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಇದೀಗ ನಿವೃತ್ತಿಗೊಂಡು ಸಮಾಜಮುಖಿಯಾಗಿ ತನ್ನನ್ನು ತಾನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಖ್ಯಾತಿಯನ್ನು ಪಡೆದ ಶಿಕ್ಷಣ ತಜ್ಞ, ಉತ್ತಮ ವಾಗ್ಮಿಗಳಾಗಿರುವ ಬಿ.ವಿ. ಸೂರ್ಯನಾರಾಯಣ ಇವರ ‘ಪದ ಪಲ್ಲವಿ’ ಕವನ ಸಂಕಲನ ದಿನಾಂಕ 22 ಡಿಸೆಂಬರ್ 2024ರಂದು ಪುತ್ತೂರಿನ ಮಂಜಲ್ಪಡ್ಪು ಸುಧಾನ ವಿದ್ಯಾ ಸಂಸ್ಥೆಯ ಎಡ್ವರ್ಡ್ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಸುಧಾನ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ರೆ. ವಿಜಯ ಹಾರ್ವಿನ್ ಇವರು ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಸಾಹಿತಿಗಳಾದ ಡಾ. ನರೇಂದ್ರ ರೈ ದೇರ್ಲ ಇವರು ಕೃತಿ ಲೋಕಾರ್ಪಣೆ ಮಾಡಿದರು. ಡಾ. ರಾಜೇಶ್ ಬೆಜ್ಜಂಗಳ ಕೃತಿಯ ಕುರಿತು ಮಾತನಾಡಿ, ಶ್ರೀಮತಿ ಸುನೀತಾ ಕಾರ್ಯಕ್ರಮದ ನಿರೂಪಣೆಗೈದರು. ವಿ.ಬಿ. ಸೂರ್ಯನಾರಾಯಣ ಇವರ ಕೃತಿಯಿಂದ ಆಯ್ದ ಕೆಲವು ಹಾಡುಗಳನ್ನು ಡಾ. ಪವಿತ್ರ ರೂಪೇಶ್, ಶ್ರೀಮತಿ ಅಪರ್ಣಾ ನಿಟಿಲಾಪುರ, ಶ್ರೀಮತಿ ರಮಾ ಹೆಬ್ಬಾರ್, ಪ್ರೊ. ದತ್ತಾತ್ರೇಯ…

Read More

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ‘ಬಹುವಚನಂ’ನ ಪದ್ಮಿನಿ ಸಭಾಭವನದಲ್ಲಿ ದಿನಾಂಕ 22 ಡಿಸೆಂಬರ್ 2024ರ ಸಂಜೆ ಸಂಪನ್ನಗೊಂಡ ಹಿಂದೂಸ್ಥಾನೀ ಶಾಸ್ತ್ರೀಯ ಬಾನ್ಸುರಿ ವಾದನವು ಪ್ರೇಕ್ಷಕರಾಗಿ ಬಂದ ಸಂಗೀತಾಸ್ವಾದಕರನ್ನು ಸುಮಾರು ಎರಡು ಗಂಟೆಗಳ ಕಾಲ – ಒಂದರ್ಥದಲ್ಲಿ – ಸೆರೆಹಿಡಿದಿಟ್ಟಿತು. ಕಲೆಯೇ ಕಲಾವಿದನ ಉಸಿರು! ಹಾಗೆ ನೋಡಿದರೆ ಶ್ರುತಿಪ್ರಧಾನವಾಗಿರುವ ಹಾಡುವಿಕೆಯೋ ಗಾಳಿವಾದ್ಯದ ನುಡಿಸಾಣಿಕೆಯೋ ಉಸಿರಿನ ಮೇಲಿನ ಹತೋಟಿಯನ್ನೇ ಅವಲಂಬಿಸಿರುವುದು ಸುಸ್ಪಷ್ಟ. ಆ ದೃಷ್ಟಿಯಲ್ಲಿ, ಹಾಡುಗಾರಿಕೆಯಾಗಲಿ, ಗಾಳಿವಾದ್ಯ ವಾದನವಾಗಲಿ ಪ್ರಾಣಾಯಾಮವೇ ಆಗಿದೆ. ಕಲಾವಿದ ಕಿರಣ್ ಹೆಗ್ಡೆ ತಮ್ಮ ಬಾನ್ಸುರಿ ವಾದನದ ಮೂಲಕ ‘ಪ್ರಾಣಾಯಾಮ’ ಮಾಡಿ ಸೇರಿದ್ದ ಸಂಗೀತಾಸ್ವಾದಕರಿಗೆಲ್ಲ ‘ಸಂಗೀತ ಯೋಗ’ವನ್ನೊದಗಿಸಿದರು. ಅವರ ‘ನಾದ ತಾದಾತ್ಮ್ಯ’ವಂತೂ ಅದ್ಭುತ ! ತಾವು ಧ್ಯಾನಸ್ಥರಾದುದಲ್ಲದೆ ನೆರೆದಿದ್ದ ಅಷ್ಟೂ ಪ್ರೇಕ್ಷಕರನ್ನು ಧ್ಯಾನಸ್ಥರಾಗುವಂತೆ ಮಾಡಿದರು. ಆಸ್ವಾದಕರನ್ನೆಲ್ಲ ತನ್ನ ಬಾನ್ಸುರಿಯ ಸ್ವರದೊಂದಿಗೆ ಬೆಸೆದರು. ತಾವು ಬೆವೆತರೂ ಕಲಾಸ್ವಾದಕರಿಗೆ ತಂಪನ್ನೇ ಹಂಚಿದರು. ಪ್ರೇಕ್ಷಕರನ್ನೆಲ್ಲ ತಮ್ಮ ‘ರಾಗ’ದ ಮಾಲೆಯಲ್ಲಿ ಪೋಣಿಸಿದರು. ಬಾನ್ಸುರಿ ಮತ್ತು ತಬಲಾ ‘ದ್ವೈತ’ವನ್ನು ಪ್ರತಿನಿಧಿಸಿದರೂ ಅವು ಸೃಷ್ಟಿಸಿದ ಸಂಗೀತತತ್ತ್ವವು ‘ಅದ್ವೈತ’ವೇ ಸರಿ. ತಬಲಾವಾದನವು…

Read More

ಮಂಗಳೂರು : ಮಂಗಳೂರಿನ ಉರ್ವದ ಹೆಸಾರಂತ ಭರತನಾಟ್ಯ ಸಂಸ್ಥೆ ನಾಟ್ಯಾರಾಧನಾ ಕಲಾ ಕೇಂದ್ರದ ‘ತ್ರಿಂಶೋತ್ಸವದ ಸಮಾರೋಪ ಸಮಾರಂಭ’ವನ್ನು ದಿನಾಂಕ 27 ಡಿಸೆಂಬರ್ 2024 ಮತ್ತು 28 ಡಿಸೆಂಬರ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ನಾಟ್ಯಾರಾಧನಾ ಕಲಾ ಕೇಂದ್ರ ಟ್ರಸ್ಟ್ (ರಿ.) ಉರ್ವ ಮಂಗಳೂರು, ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಹಾಗೂ ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ದಿನಾಂಕ 27 ಡಿಸೆಂಬರ್ 2024ರಂದು ಸಂಜೆ 5-00 ಗಂಟೆಗೆ ಸಮಾರೋಪ ಸಮಾರಂಭವನ್ನು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರು ಉದ್ಘಾಟಿಸಲಿದ್ದಾರೆ. ಅನನ್ಯ ಕಲ್ಚರಲ್ ಅಕಾಡೆಮಿ ಬೆಂಗಳೂರು ಮತ್ತು ಡಾ. ಶ್ರೀಧರ ಅಕ್ಕಿಹೆಬ್ಬಾಳು ಕಾವೇರಿ ನಾಟ್ಯಯೋಗ ಯು.ಎಸ್.ಎ. ಇವರ ಸಹಯೋಗದಲ್ಲಿ ನಾಟ್ಯಾರಾಧನಾದ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ ರಾವ್ ಮಂಗಳೂರು ವಿರಚಿತ ಸಂಗೀತ ಮತ್ತು ನೃತ್ಯ ನಿರ್ದೇಶಿತ ಕನ್ನಡ ಭಾಷಾ ಭರತನಾಟ್ಯ ಮಾರ್ಗದ ಧ್ವನಿ ಮುದ್ರಣ ‘ನೃತ್ಯಾಮೃತ’ವನ್ನು ಮೂಡಬಿದ್ರೆಯ ಧನಲಕ್ಷ್ಮೀ ಕ್ಯಾಶೂಸ್…

Read More

ಚನ್ನಪಟ್ಟಣ : ಚನ್ನಪಟ್ಟಣದ ಸಿಂಗರಾಜಪುರದಲ್ಲಿರುವ ಸಿಂ.ಲಿಂ. ನಾಗರಾಜು ಪ್ರತಿಷ್ಠಾನ ಟ್ರಸ್ಟ್ (ನೋಂ) ಇವರು ಮಹಾಕವಿ ಕುವೆಂಪು ಜನ್ಮದಿನದಂದು ಆಯೋಜಿಸಿರುವ ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕವು ದಿನಾಂಕ 29 ಡಿಸೆಂಬರ್ 2024ರಂದು ಸಂಜೆ ಗಂಟೆ 6-00ಕ್ಕೆ ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ನಿರ್ವಹಣೆ ಸಚಿನ್ ಹೆಚ್. ಶೆಟ್ಟಿ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕಿನ ವಿನ್ಯಾಸ ಮಂಜು ನಾರಾಯಣ್ ನೀಡಿದ್ದು, ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಶಂಭೂಗೌಡ ನಾಗವಾರ 9880012881 ಮತ್ತು ಆದರ್ಶ ಕುಮಾರ್ ಎಸ್.ಎನ್. 9945968639 ಸಂಪರ್ಕಿಸಿರಿ. ಪ್ರವೇಶ ದರ ರೂ.100/- ಆಗಿರುತ್ತದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯು ಮಹಾಕವಿ ಕುವೆಂಪು ಇವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ…

Read More

ಕಾಸರಗೋಡು : ಸಂಘಟಕಿ, ಬಹುಮುಖ ಪ್ರತಿಭೆ, ಕನ್ನಡ ಸಾಹಿತ್ಯ ನಾಡು ನುಡಿಗೆ, ಕನ್ನಡ ಸಂಸ್ಕೃತಿಗೆ ತನ್ನದೇ ಆದ ಬಹುಮುಖ ಕೊಡುಗೆಗಳನ್ನು ನೀಡುತ್ತಾ ವಿವಿಧ ಸಂಘ, ಸಂಸ್ಥೆಗಳೊಂದಿಗೆ ಕಾರ್ಯಮುಖ ಸಂಪರ್ಕ ಸಾಧನೆಯಲ್ಲಿರುವ ಡಾ. ಅಮೀನಾ ಬೇಗಂ ಎಂ. ಕಾಲೇಖಾನ್ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಮೈಸೂರು ಜಿಲ್ಲಾಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಾರೆ. ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕವನ್ನು ಸ್ಥಾಪಿಸಲಾಗುತ್ತದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ಬಾಗಲಕೋಟ ಜಿಲ್ಲಾಧ್ಯಕ್ಷರಾದ ಡಾ. ಸಿದ್ದಣ್ಣ ಬ್ಯಾಡಗಿ ಮುದೋಳ ಹಾಗೂ ಕನ್ನಡ ಭವನ ನಿರ್ದೇಶಕರಾದ ಸಿ.ವೈ. ಮೆಣಸಿನಕಾಯಿ ಅನುಮೋದಿಸಿದರು. ಸರ್ವಾನುಮತದೊಂದಿಗೆ ಆಯ್ಕೆಯಾದ ಡಾ. ಅಮೀನಾ ಬೇಗಂ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ…

Read More

‘ಒಂದು ಪುರಾತನ ನೆಲದಲ್ಲಿ’ ಕನ್ನಡದ ಖ್ಯಾತ ಲೇಖಕಿ ಮಿತ್ರಾ ವೆಂಕಟ್ರಾಜ ಅವರು ಇಂಗ್ಲೀಷಿನಿಂದ ಅನುವಾದಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಭಾರತೀಯ ಆಂಗ್ಲ ಲೇಖಕ ಅಮಿತಾವ್‌ ಘೋಷ್ ಅವರ ‘ಇನ್‌ ಆನ್‌ ಆಂಟಿಕ್ ಲ್ಯಾಂಡ್’ ಅನ್ನುವ ಕೃತಿಯ ಅನುವಾದ. ಆಂಗ್ಲ ಶೀರ್ಷಿಕೆಯನ್ನು ನೋಡುತ್ತಲೇ ನೆನಪಿಗೆ ಬರುವುದು ರೊಮ್ಯಾಂಟಿಕ್ ಕವಿ ಪಿ.ಬಿ. ಷೆಲ್ಲಿಯ ‘ಒಝಿಮ್ಯಾಂಡಿಯಾಸ್’ ಅನ್ನುವ ಸಾನೆಟ್. ಎರಡೂ ಕಡೆ ಇರುವುದು ಕಣ್ಣೆತ್ತುವ ತನಕವೂ ಕಾಣಿಸುವಂಥ ಮರಳುಗಾಡಿನ ಮಧ್ಯಪ್ರಾಚ್ಯ ದೇಶವಾದ ಈಜಿಪ್ಟ್. ಆದರೆ ಸಾಮ್ಯವು ಅಲ್ಲಿಗೆ ಮುಗಿಯುತ್ತದೆ. ‘ಇನ್‌ ಆನ್‌ ಆಂಟಿಕ್ ಲ್ಯಾಂಡ್’ ಎಂಬ ಈ ಕಾದಂಬರಿಯು ಪೂರ್ತಿ ಭಿನ್ನವಾದ ಒಂದು ವಿಸ್ತಾರವನ್ನು ಹೊಂದಿದೆ. ಭಾರತದಲ್ಲಿ ಮಾನವಶಾಸ್ತ್ರದ ಕುರಿತು ತಮ್ಮ ಶಿಕ್ಷಣವನ್ನು ಮುಗಿಸಿ ಮುಂದಿನ ಸಂಶೋಧನೆಗಾಗಿ ಪ್ರಾಚೀನಕಾಲದಲ್ಲಿ ನಾಗರಿಕತೆಯ ಶಿಖರವನ್ನೇರಿದ್ದ ಈಜಿಪ್ಟಿಗೆ ಪ್ರಯಾಣ ಬೆಳೆಸುವ ಲೇಖಕ ಅಮಿತಾವ್ ಘೋಷ್ ಓದುಗರೊಂದಿಗೆ ತಮ್ಮ ಅನುಭವ, ಅನ್ನಿಸಿಕೆಗಳನ್ನೂ ಹಂಚಿಕೊಳ್ಳುವುದು ಈ ಕೃತಿಯ ಉದ್ದೇಶ. ಇದು ಕಾದಂಬರಿಯೇ, ಪ್ರವಾಸ ಕಥನವೇ, ಆತ್ಮಕಥನವೇ – ಯಾವ ಪ್ರಕಾರಕ್ಕೆ ಸೇರಿದ್ದು ಅನ್ನುವುದು…

Read More

ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ವತಿಯಿಂದ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮವನ್ನು ದಿನಾಂಕ 27 ಡಿಸೆಂಬರ್ 2024ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ 121ನೆಯ ಜಯಂತಿಯ ಅಂಗವಾಗಿ ‘ಮಲೆಗಳಲ್ಲಿ ಮದುಮಗಳು’ ಮಹಾಕಾದಂಬರಿಯ ಮೆಲುಕು ಹಾಕುವವರು ಕುವೆಂಪು ಅವರ ಪ್ರಿಯ ಶಿಷ್ಯ ಪಂಪ ಪ್ರಶಸ್ತಿ ಪುರಸ್ಕೃತರಾದ ಡಾ. ಸಿ.ಪಿ. ಕೃಷ್ಣ ಕುಮಾರ್ ಇವರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಇವರು ಅಧ್ಯಕ್ಷತೆ ವಹಿಸಲಿದ್ದು, ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಮಾಜಿ ಅಧ್ಯಕ್ಷರಾದ ಶ್ರೀ ಎಂ. ಚಂದ್ರಶೇಖರ್ ಇವರು ನಿರೂಪಣೆ ಮಾಡಲಿರುವರು.

Read More

ಕಾಸರಗೋಡು : ಸಂಘಟಕ, ಕನ್ನಡ ಕಟ್ಟಾಳು ಕೇರಳ ಮಲಕಣ್ಣ ಪುಜಾರೀ ಇವರನ್ನು ರಾಜ್ಯದ ಕಾಸರಗೋಡು ಕನ್ನಡ ಭವನದ ವಿಜಯಪುರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ವಿಜಯನಗರ ಜಿಲ್ಲಾಧ್ಯಕ್ಷರು ಹಾಗೂ ನಿರ್ದೇಶಕರಾದ ಸಿ.ವೈ. ಮೆಣಸಿನಕಾಯಿ ಜಂಟಿಯಾಗಿ ಅನುಮೋದಿಸಿದರು. ಸರ್ವಾನುಮತದೊಂದಿಗೆ ಆಯ್ಕೆಯಾದ ಶ್ರೀ ಬೀರಣ್ಣ ಮಲಕಣ್ಣ ಪುಜಾರೀ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಸಾಹಿತ್ಯ, ಸಾಂಸ್ಕೃತಿಕ ರಾಯಬಾರಿಗಳಿಗೆ ‘ಉಚಿತ ವಸತಿ ಸೌಕರ್ಯ ಹಾಗೂ ರಜತ ಸಂಭ್ರಮ ವಿಶೇಷ ಕಾರ್ಯಕ್ರಮ ಸಂಯೋಜನೆ, ಸಂಘಟನೆ, ಮನೆಗೊಂದು ಗ್ರಂಥಾಲಯ -ಪುಸ್ತಕವೇ ಸತ್ಯ -ಪುಸ್ತಕವೇ ನಿತ್ಯ’ ಇಂತಹ ವಿನೂತನ ಕಾರ್ಯಕ್ರಮಗಳ ಜವಾಬ್ದಾರಿ ವಹಿಸಿ, ಜಿಲ್ಲಾ ಘಟಕವನ್ನು ವಿಸ್ತರಿಸಿ…

Read More

ಧಾರವಾಡ : ಕನ್ನಡದ ವರಕವಿ ದ.ರಾ. ಬೇಂದ್ರೆಯವರು ಧಾರವಾಡದ ನೆಲದ ಸತ್ವವನ್ನು ಹೀರಿದ ಜನಮಾನಸ ಕವಿ. ಸಂಸಾರಿಕ ಜಂಜಾಟ ಹಾಗೂ ಬದುಕಿನ ಹೊಯ್ದಾಟದಲ್ಲಿ ಬೆಂದು ಪಕ್ವವಾದ ಬೇಂದ್ರೆಯವರು ದಿನನಿತ್ಯದ ಆಡುಮಾತಿನಲ್ಲಿಯೇ ಜೀವನದ ಒಳನೋಟಗಳನ್ನು ನೀಡುವ ಸಾವಿರಾರು ಕವಿತೆಗಳನ್ನು ಬರೆದು ಹಳ್ಳಿಯ ಮುಗ್ಧ ಮನಸುಗಳು ಹಾಗೂ ಪ್ರಜ್ಞಾವಂತ ನಾಗರಿಕರ ಮನೆ ಮನಗಳಲ್ಲಿ ನೆಲೆಸಿದ್ದಾರೆ. ಅವರ ಕವಿತೆಗಳು ಜಾನಪದ ಸೊಗಡು ಹಾಗೂ ಭಾವಗೀತೆಗಳ ಗೇಯತೆಯಿಂದ ಸದಾ ಕಾಲ ಕನ್ನಡಿಗರ ಹೃದಯದಲ್ಲಿ ಇಂದಿಗೂ ಅನುರಣಿಸುತ್ತಿವೆ. ‘ಗಂಗಾವತರಣ’ ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿ ಬರೆದ ನಾಟಕ. ಬೇಂದ್ರೆ ಅವರ ಬದುಕಿನ ಹಲವಾರು ತುಣುಕುಗಳನ್ನು ಬಿಂಬಿಸುತ್ತ, ಬೇಂದ್ರೆ ಮಾಸ್ತರರ ಸಂಶೋಧನೆಗಳ ಆಳವನ್ನು ಅಗೆಯುತ್ತ, ಜೀವನದ ತಾದಾತ್ಮ್ಯವನ್ನು ತೋರುವ ಅವರ ಜೀವನ ಗಾಥೆಯ ಹಿರಿಮೆ ಗರಿಮೆಯನ್ನು ನಾಟಕಕಾರ ನಿರ್ದೇಶಕ ಶ್ರೀ ರಾಜೇಂದ್ರ ಕಾರಂತರು ಬೇಂದ್ರೆಯವರ ಗೀತೆಗಳು ಹಾಗೂ ಅದಕ್ಕನುಗುಣವಾದ ವರ್ಣ ರಂಜಿತ ನೃತ್ಯ ರೂಪಕಗಳ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಈ ನಾಟಕವು ಬೇಂದ್ರೆಯವರ ಬದುಕಿನ ಪುಟಗಳನ್ನು ರಂಗದ ಮೇಲೆ…

Read More

ಮಂಗಳೂರು : ಯಕ್ಷ ಪ್ರತಿಭೆ (ರಿ.) ಮತ್ತು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ವತಿಯಿಂದ 16ನೇ ವರ್ಷದ ‘ಆಸ್ರಣ್ಣ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 17 ಡಿಸೆಂಬರ್ 2024ರಂದು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಟೀಲಿನ ಪ್ರಧಾನ ಅರ್ಚಕರಾದ ವೇದಮೂರ್ತಿ ಲಕ್ಮೀನಾರಾಯಣ ಆಸ್ರಣ್ಣರು ಆಶೀರ್ವಚನ ನೀಡುತ್ತಾ “ನಮಗೆ ಜೀವಿಸಲು ಬೇಕಾದ ಆದರ್ಶಗಳನ್ನು ಅನೇಕ ದಿವ್ಯಚೇತನಗಳು ಬಿಟ್ಟುಹೋಗಿದ್ದಾರೆ. ಅವರ ಹಾದಿಯಲ್ಲೇ ನಡೆದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ, ಅಂತೆಯೇ ಗೌರವಿಸುತ್ತದೆ. ಇದನ್ನು ನನ್ನ ತೀರ್ಥರೂಪರಾದ ಕೀರ್ತಿಶೇಷ ಗೋಪಾಲಕೃಷ್ಣ ಆಸ್ರಣ್ಣರು ನುಡಿದಂತೆ ನಡೆದು ತೋರಿಸಿದ್ದಾರೆ. ನಾವೂ ಅದೇ ದಾರಿಯಲ್ಲಿ ಸಾಗಿ ಧರ್ಮಮಾರ್ಗಿಗಳಾಗುತ್ತೇವೆ. ಬೇರೆ ಬೇರೆ ಕಡೆಗಳಲ್ಲಿ ಆಸ್ರಣ್ಣರ ಸಂಸ್ಮರಣೆ ಆಗುತ್ತದೆಯಾದರೂ ನಗರದಲ್ಲಿ ಕಲಾತಪಸ್ವಿ ಸಂಜಯ ಕುಮಾರ್ ಗೋಣಿಬೀಡುರವರು ಇದನ್ನು ವ್ರತವೆಂದು ಭಾವಿಸಿ ಕಳೆದ ಹದಿನಾರು ವರ್ಷಗಳಿಂದ ನಿರಂತರವಾಗಿ ಸಂಸ್ಮರಣೆ – ಪ್ರಶಸ್ತಿ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮವನ್ನು ಅನಾಚೂನವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹಾಗಾಗಿ, ಕಟೀಲಿನ ಶ್ರೀದೇವಿ ಅವರನ್ನು ಹರಸಿ ಅನುಗ್ರಹಿಸಲಿ” ಎಂದು ಹೇಳಿದರು. ಮಾಜಿ…

Read More