Author: roovari

ಕುಂದಾಪುರ : ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ ಪ್ರಖ್ಯಾತ ಪರಿಣಿತ ಯಕ್ಷ ಕಲಾವಿದರ ಪ್ರಬುದ್ಧ ಪ್ರಭಾವೀ ಪ್ರದರ್ಶನವನ್ನು ದಿನಾಂಕ 11 ಏಪ್ರಿಲ್ 2025ರಂದು ಸಂಜೆ 6-30 ಗಂಟೆಗೆ ಕಾರ್ಕಡದ ಭೂಮಿಕ ಆವರಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವದಲ್ಲಿ ಪಂಚ ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ ಬೈಲೂರು ಇವರಿಗೆ ‘ಯುಗಾದಿ ವಸಂತ ಪುರಸ್ಕಾರ’ವನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ ಕಲ್ಕೂರ ಇವರು ಪ್ರಧಾನ ಮಾಡಲಿದ್ದು, ಉಪನ್ಯಾಸಕರಾದ ಎಚ್. ಸುಜಯೀಂದ್ರ ಹಂದೆ ಇವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಬಳಿಕ ‘ಬಬ್ರುವಾಹನ ಕಾಳಗ’ ಮತ್ತು ‘ಶ್ರೀ ಶಿವಪಂಚಾಕ್ಷರಿ ಮಹಿಮೆ’ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಏರ್ಪಾಟಾಗಿದ್ದ ಹಿರಿಯ ವಿದ್ವಾಂಸ ಪ್ರೊ. ಅ.ರಾ. ಮಿತ್ರ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿದ್ಯಾರಣ್ಯ ಪ್ರತಿಷ್ಠಾನ ಸ್ಥಾಪಿಸಿರುವ ‘ವಿದ್ಯಾರಣ್ಯ ದತ್ತಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಾಧ್ಯಾಪಕ, ಚಿಂತಕ, ವಿಮರ್ಶಕ, ಮಾತುಗಾರ ಪ್ರೊ. ಅ.ರಾ. ಮಿತ್ರ ಇವರು ಕುಮಾರ ವ್ಯಾಸ ಭಾರತದ ವ್ಯಾಖ್ಯಾನ, ಹಾಸ್ಯೋತ್ಸವಗಳ ಮೂಲಕ ಕರ್ನಾಟಕದ ಮನೆ ಮನೆಯಲ್ಲಿಯೂ ಹೆಸರಾಗಿರುವವರು. ಕನ್ನಡ ಸಾಹಿತ್ಯವನ್ನು ಬಹುಮುಖಿಯಾಗಿ ಬೆಳೆಸಿದ ಅವರು ಪರಂಪರೆ ಮತ್ತು ಆಧುನಿಕತೆಗೆ ಕೊಂಡಿಯಾಗಿರುವವರು. ಪ್ರೊ. ಅ.ರಾ. ಮಿತ್ರ ಅವರ ‘ಛಂದೋಮಿತ್ರ’ ಸುಲಭವಾಗಿ ಎಲ್ಲರೂ ಕನ್ನಡ ಛಂದಸ್ಸನ್ನು ಅರಿಯಲು ನೆರವಾಯಿತು. ಹಾಸ್ಯ, ಮಿತ್ರ ಅವರ ಮಾರ್ಗವಾದರೂ ಗುರಿ ಗಂಭೀರ ಸಾಹಿತ್ಯದ ಅಧ್ಯಯನ, ಪ್ರಾಚೀನ ಕಾವ್ಯಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಅವರು ನಾಡಿನೆಲ್ಲೆಡೆ ಕುಮಾರ ವ್ಯಾಸನನ್ನು ತಲಪಿಸಿದರು. ಕನ್ನಡ…

Read More

ಉಡುಪಿ : ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.) ಬೋಳ ಇದರ ವತಿಯಿಂದ ‘ಅಕ್ಷರಾಮೃತ’ ರಜತ ಸಂಭ್ರಮದ ಉದ್ಘಾಟನಾ ಸಮಾರಂಭವನ್ನು ದಿನಾಂಕ 13 ಏಪ್ರಿಲ್ 2025ರಂದು ಸಂಜೆ 4-30 ಗಂಟೆಗೆ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಕೇಶವ ಆಚಾರ್ಯ ಇವರು ಅಧ್ಯಕ್ಷತೆ ವಹಿಸಲಿದ್ದು, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ರಜತ ಸಂಭ್ರಮದ ಲೋಗೋ ಬಿಡುಗಡೆ, ಯಕ್ಷಾಕ್ಷರ ರಜತ ಪ್ರಶಸ್ತಿ ಪ್ರದಾನ ಹಾಗೂ ಪರಿಸರ ಜಾಗ್ರತಿ ಅಭಿಯಾನದ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಂಜೆ 4-30 ಗಂಟೆಗೆ ‘ಶ್ರೀರಾಮ ದರ್ಶನ’ ಹಾಗೂ ರಾತ್ರಿ 8-00 ಗಂಟೆಗೆ ‘ಗಿರಿಜಾ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ವಿದ್ಯಾರ್ಥಿಗಳಿಂದ ಪ್ರಸ್ತುತಗೊಳ್ಳಲಿದೆ.

Read More

ಬೈಂದೂರು : ಲಾವಣ್ಯ (ರಿ.) ಬೈಂದೂರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು, ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಬೈಂದೂರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಯಕ್ಷಗಾನ ತಾಳಮದ್ದಲೆ’ ಕಾರ್ಯಕ್ರಮವನ್ನು ದಿನಾಂಕ 12 ಏಪ್ರಿಲ್ 2025ರಂದು ಸಂಜೆ 5-30 ಗಂಟೆಗೆ ಶ್ರೀ ಶಾರದಾ ವೇದಿಕೆಯಲ್ಲಿ ಆಯೋಜಿಸಲಾಗಿದೆ. ‘ಅಂಗದ ಸಂಧಾನ’ ಹಾಗೂ ‘ಮಾಗಧ ವಧೆ’ ಎಂಬ ಪ್ರಸಂಗಗಳು ಪ್ರಸ್ತುತಗೊಳ್ಳುವ ಈ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಭಾಗವತರು ಗಣೇಶ್ ಕುಮಾರ್ ಹೆಬ್ರಿ, ಮದ್ದಳೆಯಲ್ಲಿ ಸುಬ್ರಹ್ಮಣ್ಯ ಚಿತ್ರಾಪು ಮತ್ತು ಚೆಂಡೆಯಲ್ಲಿ ಸ್ಕಂದ ಕೊನ್ನಾರು ಹಾಗೂ ಜಬ್ಬಾರ್ ಸಮೊ, ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣ್ಕೆರೆ, ಶ್ರೀ ಸತೀಶ ಶೆಟ್ಟಿ ಮೂಡುಬಗೆ ಮತ್ತು ಶಿವಪ್ರಸಾದ್ ಭಟ್ಕಳ ಇವರುಗಳು ಅರ್ಥಧಾರಿಗಳಾಗಿ ಸಹಕರಿಸಲಿದ್ದಾರೆ.

Read More

ಮೈಸೂರು : ಸಮಾಜವಾದಿ ಅಧ್ಯಯನ ಕೇಂದ್ರ ಟಸ್ಟ್ (ರಿ), ಮೈಸೂರು ಆಯೋಜಿಸುವ ಲೇಖಕ ಪ್ರಸನ್ನ ಇವರ ‘ಆಕ್ಟಿಂಗ್ ಅಂಡ್ ಬಿಯಾಂಡ್’ ಪುಸ್ತಕ ಲೋಕಾರ್ಪಣೆ ಮತ್ತು ಚರ್ಚಾ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರ ಭಾನುವಾರ ಸಂಜೆ ಘಂಟೆ 5.00ಕ್ಕೆ ಮೈಸೂರಿನ ಜೆ. ಎಲ್. ಬಿ. ರಸ್ತೆಯಲ್ಲಿರುವ ಹಾರ್ಡ್ರಿಕ್ ಶಾಲೆ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಇಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೈಸೂರಿನ L&T ಟೆಕ್ನಾಲಜಿ ಸರ್ವಿಸಸ್ ಸಂಸ್ಥೆಯ ಡೆಲಿವರಿ ಮುಖ್ಯಸ್ಥ ಹಾಗೂ ಲೇಖಕರಾದ ಶಶಿಧರ ಡೋಂಗ್ರೆ, ಮೈಸೂರಿನ ಲೇಖಕರಾದ ಪ್ರೀತಿ ನಾಗರಾಜ್ ಹಾಗೂ ಲೇಖಕರು ಮತ್ತು ಖ್ಯಾತ ರಂಗ ನಿರ್ದೇಶಕರಾದ ಪ್ರಸನ್ನ ಭಾಗವಹಿಸಲಿದ್ದಾರೆ.

Read More

ಬೇಲೂರಿನ ನಾಟ್ಯ ಶಿಲ್ಪದ ರೂವಾರಿಯಾದ ಜಕ್ಕಣಾಚಾರಿಯಷ್ಟೇ ಅವಕ್ಕೆ ರಾಜಪೋಷಣೆ ಒದಗಿಸುವುದರೊಂದಿಗೆ ಸ್ವತಃ ರೂಪದರ್ಶಿಯೂ ಆಗಿದ್ದ ರಾಣಿ ಶಾಂತಲೆಯೂ ಜನಪದದಲ್ಲಿ ಸುಖ್ಯಾತಳು. ಈಕೆ ಹೊಯ್ಸಳೇಶ್ವರ ವಿಷ್ಣುವರ್ಧನನ ಪಟ್ಟಮಹಿಷಿ. ಇವಳ ಕುರಿತು ಹಲವು ಸಾಹಿತ್ಯ ಕಥನಗಳೂ (ಕೆವಿ ಅಯ್ಯರ್, ಸಿ. ಕೆ. ನಾಗರಾಜರಾವ್, ಮನ ಮೂರ್ತಿ…), ನಾಟಕ, ಸಿನಿಮಾಗಳೂ ಬಂದಿವೆ. ನಾನು ತಿಳಿದಂತೆ, ಅಲ್ಲೆಲ್ಲ ಶಾಂತಲೆಯ ಜೀವನ ಮತ್ತು ಸಾಧನೆಗಳಿಗೆ ಅನಿವಾರ್ಯವಾಗಿ ಸಾಹಿತ್ಯದ ಹೊರೆಯನ್ನು ಸಂಘರ್ಷದ ಬಿಸಿಯನ್ನು ತುಸು ಹೆಚ್ಚೇ ಸೇರಿಸಿದ್ದಾರೆ. ಆದರೆ ಆಕೆಯ ಪ್ರಧಾನ ಶಕ್ತಿಯಾದ ನೃತ್ಯ ಮೆರೆಯುವುದರೊಡನೆ, ಸಂವಹನಶೀಲತೆ ಕುಗ್ಗದಂತೆ ನಾಟಕೀಯತೆಯನ್ನು ಬೆಸೆದು ಮೂಡಿದ ಏಕವ್ಯಕ್ತಿ ಪ್ರಯೋಗ – ‘ಹೆಜ್ಜೆಗೊಲಿದ ಬೆಳಕು’. ಅರೆಹೊಳೆ-ಕಲಾಭೀ ಪಂಚ ದಿನ ನಾಟಕೋತ್ಸವದ ಕೊನೆಯ ದಿನಕ್ಕಿದನ್ನು (೩೧-೩-೨೫), ವಿದುಷಿ ಸಂಸ್ಕೃತಿ ಪ್ರಭಾಕರ್ ಕೇಂದ್ರವಾಗಿರುವ ಉಡುಪಿಯ ಪ್ರಜ್ಞಾನಂ ಟ್ರಸ್ಟ್ ಪ್ರಸ್ತುತಪಡಿಸಿತು. ಸುಧಾ ಆಡುಕಳ ರಂಗ ಪಠ್ಯವನ್ನೂ ಗಣೇಶ್ ರಾವ್ ಎಲ್ಲೂರು ರಂಗ ವಿನ್ಯಾಸ, ಸಂಗೀತ ಮತ್ತು ಬೆಳಕಿನೊಡನೆ ನಿರ್ದೇಶನವನ್ನೂ ಸಮರ್ಥವಾಗಿ ನಡ್ಡೆಸಿದ್ದಕ್ಕೆ ‘ಹೆಜ್ಜೆಗೊಲಿದ ಬೆಳಕು’, ನಮ್ಮೆಲ್ಲರ ಮನದುಂಬಿ ಹರಿಯಿತು.…

Read More

ಮಂಗಳೂರು: ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರು ಮಂಗಳೂರಿನ ಕೊಡಿಯಾಲಗುತ್ತು ಸಂಸ್ಕೃತಿ ಕೇಂದ್ರದಲ್ಲಿ (ಇಂಟ್ಯಾಕ್) ಭರತನಾಟ್ಯದ ಆಂಗಿಕದ ಚಾರಿಗೆ ಸಂಬಂಧಿಸಿದ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದನ್ನು ದಿನಾಂಕ 04 ಏಪ್ರಿಲ್ 2025ರ ಶುಕ್ರವಾರ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರಿನ ಹಿರಿಯ ಉದ್ಯಮಿ ಎಂ. ಮುರಳೀಧರ ಶೆಟ್ಟಿ ಮಾತನಾಡಿ “ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆ ಹೊಂದಿರುವ ಭರತನಾಟ್ಯವು ಹಾಡು, ವೇಷಭೂಷಣ, ನರ್ತನ, ಅಭಿನಯ ಮುಂತಾದ ಎಲ್ಲ ಅಂಗಗಳನ್ನೂ ಹೊಂದಿರುವ ಒಂದು ಪರಿಪೂರ್ಣ ಕಲೆ. ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಭರತನಾಟ್ಯವು ಎತ್ತಿ ಹಿಡಿಯುತ್ತದೆ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸುಮಾರು ಐವತ್ತು ವರ್ಷಗಳ ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ಅಷ್ಟೊಂದು ಪ್ರಚಾರದಲ್ಲಿ ಇರದಿದ್ದ ಭರತನಾಟ್ಯವು ಇಂದು ಪ್ರಸಿದ್ಧಿ ಗಳಿಸಿರುವುದು ಸಂತೋಷದ ವಿಷಯ. ಈ ಶ್ರೀಮಂತ ಕಲೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಹೇಳಿದರು. ಇನ್ನೋರ್ವ ಮುಖ್ಯ…

Read More

ಮೈಸೂರು : ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.), ರಂಗಾಯಣ ಮೈಸೂರು ಸಹಯೋಗದೊಂದಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಗಳ ಸಹಕಾರದೊಂದಿಗೆ ಮೈಸೂರಿನಲ್ಲಿ ದಿನಾಂಕ 22 ಮಾರ್ಚ್ 2025ರಿಂದ 27 ಮಾರ್ಚ್ 2025ರವರೆಗೆ ‘ವಿಶ್ವ ರಂಗ ಸಂಭ್ರಮ -2025’ ಎಂಬ ಆರು ದಿನಗಳ ರಂಗೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಸಮಗ್ರ ವರದಿಯು ರಂಗೋತ್ಸವದ ಯೋಜನೆ, ಅನುಷ್ಠಾನ ಮತ್ತು ಪ್ರಮುಖ ಅಂಶಗಳನ್ನು ವಿವರಿಸುತ್ತದೆ. ಈ ಉತ್ಸವವು ನಾಟಕಗಳ ಪ್ರದರ್ಶಿಸುವುದು, ರಂಗಕಲೆಯನ್ನು ಆಚರಿಸುವುದು, ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಸಮುದಾಯವನ್ನು ತೊಡಗಿಸಿಕೊಳ್ಳುವುದನ್ನು ಗುರಿಯಾಗಿರಿಸಿಕೊಂಡಿತ್ತು. ಯೋಜನೆ ಮತ್ತು ಸಂಘಟನೆ: ಈ ಉತ್ಸವವನ್ನು ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.) ಕಾರ್ಯಕಾರಿ ಸಮಿತಿಯು ಗೌರವಾಧ್ಯಕ್ಷರ ಅಮೂಲ್ಯ ಸಲಹೆಗಳು ಮತ್ತು ಸೂಚನೆಗಳೊಂದಿಗೆ ರೂಪಿಸಿ ಯೋಜಿಸಿತ್ತು. ರಂಗಪ್ರದರ್ಶನಗಳು, ಪ್ರಗತಿಪರ ಚರ್ಚೆ – ವಿಚಾರ ಸಂಕಿರಣ, ಸಾಧನೆಗಳ ಗುರುತಿಸುವಿಕೆ, ಸಾಂಪ್ರದಾಯಿಕ ಜಾನಪದ ಕಲೆ ಮತ್ತು ರಂಗ ಸಂಗೀತವನ್ನು ಒಳಗೊಂಡ…

Read More

ಬೆಂಗಳೂರು : ಹನುಮಂತನಗರ ಬಿಂಬ ಇದರ ವತಿಯಿಂದ ‘ಕಲಾಭಿರುಚಿ ಶಿಬಿರ 2025’ವನ್ನು ದಿನಾಂಕ 15 ಏಪ್ರಿಲ್ 2025ರಿಂದ 30 ಏಪ್ರಿಲ್ 2025ರವರೆಗೆ ಬೆಂಗಳೂರು ಹೊಸಕೆರೆ ಹಳ್ಳಿ ಔಡೆನ್ ಸ್ಕೂಲಿನಲ್ಲಿ ಪ್ರತಿದಿನ 10-30 ಗಂಟೆಯಿಂದ 4-30 ಗಂಟೆ ತನಕ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ 9ರಿಂದ 15 ವರ್ಷದ ಮಕ್ಕಳು ಭಾಗವಹಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ ವನಮಾಲಾ ಪ್ರಕಾಶ್ 9731211147 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರ ಮಂಗಳೂರು ಆಯೋಜನೆಯಲ್ಲಿ ಸಂತ ಅಲೋಶಿಯಸ್ ವಿ.ವಿ. ಕನ್ನಡ ವಿಭಾಗ ಮತ್ತು ಅಸ್ತಿತ್ವ (ರಿ.) ಇವರ ಸಹಯೋಗದಲ್ಲಿ ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ‘ಅಶ್ವತ್ಥಾಮ’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 08 ಏಪ್ರಿಲ್ 2025ರಂದು ಸಂಜೆ 6-30 ಗಂಟೆಗೆ ಸಂತ ಅಲೋಶಿಯಸ್ ಪರಿಗಣಿತ ವಿ.ವಿ. ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೋಹನಚಂದ್ರ ಉರ್ವ ಇವರು ಈ ನಾಟಕದ ರಚನೆ, ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.

Read More