Author: roovari

ಕಾಸರಗೋಡು : ಸಂಘಟಕ, ಕನ್ನಡ ಕಟ್ಟಾಳು ಕೇರಳ ಮಲಕಣ್ಣ ಪುಜಾರೀ ಇವರನ್ನು ರಾಜ್ಯದ ಕಾಸರಗೋಡು ಕನ್ನಡ ಭವನದ ವಿಜಯಪುರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ವಿಜಯನಗರ ಜಿಲ್ಲಾಧ್ಯಕ್ಷರು ಹಾಗೂ ನಿರ್ದೇಶಕರಾದ ಸಿ.ವೈ. ಮೆಣಸಿನಕಾಯಿ ಜಂಟಿಯಾಗಿ ಅನುಮೋದಿಸಿದರು. ಸರ್ವಾನುಮತದೊಂದಿಗೆ ಆಯ್ಕೆಯಾದ ಶ್ರೀ ಬೀರಣ್ಣ ಮಲಕಣ್ಣ ಪುಜಾರೀ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡಿಗೆ ಆಗಮಿಸುವ ಸಾಹಿತ್ಯ, ಸಾಂಸ್ಕೃತಿಕ ರಾಯಬಾರಿಗಳಿಗೆ ‘ಉಚಿತ ವಸತಿ ಸೌಕರ್ಯ ಹಾಗೂ ರಜತ ಸಂಭ್ರಮ ವಿಶೇಷ ಕಾರ್ಯಕ್ರಮ ಸಂಯೋಜನೆ, ಸಂಘಟನೆ, ಮನೆಗೊಂದು ಗ್ರಂಥಾಲಯ -ಪುಸ್ತಕವೇ ಸತ್ಯ -ಪುಸ್ತಕವೇ ನಿತ್ಯ’ ಇಂತಹ ವಿನೂತನ ಕಾರ್ಯಕ್ರಮಗಳ ಜವಾಬ್ದಾರಿ ವಹಿಸಿ, ಜಿಲ್ಲಾ ಘಟಕವನ್ನು ವಿಸ್ತರಿಸಿ…

Read More

ಧಾರವಾಡ : ಕನ್ನಡದ ವರಕವಿ ದ.ರಾ. ಬೇಂದ್ರೆಯವರು ಧಾರವಾಡದ ನೆಲದ ಸತ್ವವನ್ನು ಹೀರಿದ ಜನಮಾನಸ ಕವಿ. ಸಂಸಾರಿಕ ಜಂಜಾಟ ಹಾಗೂ ಬದುಕಿನ ಹೊಯ್ದಾಟದಲ್ಲಿ ಬೆಂದು ಪಕ್ವವಾದ ಬೇಂದ್ರೆಯವರು ದಿನನಿತ್ಯದ ಆಡುಮಾತಿನಲ್ಲಿಯೇ ಜೀವನದ ಒಳನೋಟಗಳನ್ನು ನೀಡುವ ಸಾವಿರಾರು ಕವಿತೆಗಳನ್ನು ಬರೆದು ಹಳ್ಳಿಯ ಮುಗ್ಧ ಮನಸುಗಳು ಹಾಗೂ ಪ್ರಜ್ಞಾವಂತ ನಾಗರಿಕರ ಮನೆ ಮನಗಳಲ್ಲಿ ನೆಲೆಸಿದ್ದಾರೆ. ಅವರ ಕವಿತೆಗಳು ಜಾನಪದ ಸೊಗಡು ಹಾಗೂ ಭಾವಗೀತೆಗಳ ಗೇಯತೆಯಿಂದ ಸದಾ ಕಾಲ ಕನ್ನಡಿಗರ ಹೃದಯದಲ್ಲಿ ಇಂದಿಗೂ ಅನುರಣಿಸುತ್ತಿವೆ. ‘ಗಂಗಾವತರಣ’ ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿ ಬರೆದ ನಾಟಕ. ಬೇಂದ್ರೆ ಅವರ ಬದುಕಿನ ಹಲವಾರು ತುಣುಕುಗಳನ್ನು ಬಿಂಬಿಸುತ್ತ, ಬೇಂದ್ರೆ ಮಾಸ್ತರರ ಸಂಶೋಧನೆಗಳ ಆಳವನ್ನು ಅಗೆಯುತ್ತ, ಜೀವನದ ತಾದಾತ್ಮ್ಯವನ್ನು ತೋರುವ ಅವರ ಜೀವನ ಗಾಥೆಯ ಹಿರಿಮೆ ಗರಿಮೆಯನ್ನು ನಾಟಕಕಾರ ನಿರ್ದೇಶಕ ಶ್ರೀ ರಾಜೇಂದ್ರ ಕಾರಂತರು ಬೇಂದ್ರೆಯವರ ಗೀತೆಗಳು ಹಾಗೂ ಅದಕ್ಕನುಗುಣವಾದ ವರ್ಣ ರಂಜಿತ ನೃತ್ಯ ರೂಪಕಗಳ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಈ ನಾಟಕವು ಬೇಂದ್ರೆಯವರ ಬದುಕಿನ ಪುಟಗಳನ್ನು ರಂಗದ ಮೇಲೆ…

Read More

ಮಂಗಳೂರು : ಯಕ್ಷ ಪ್ರತಿಭೆ (ರಿ.) ಮತ್ತು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ವತಿಯಿಂದ 16ನೇ ವರ್ಷದ ‘ಆಸ್ರಣ್ಣ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 17 ಡಿಸೆಂಬರ್ 2024ರಂದು ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಟೀಲಿನ ಪ್ರಧಾನ ಅರ್ಚಕರಾದ ವೇದಮೂರ್ತಿ ಲಕ್ಮೀನಾರಾಯಣ ಆಸ್ರಣ್ಣರು ಆಶೀರ್ವಚನ ನೀಡುತ್ತಾ “ನಮಗೆ ಜೀವಿಸಲು ಬೇಕಾದ ಆದರ್ಶಗಳನ್ನು ಅನೇಕ ದಿವ್ಯಚೇತನಗಳು ಬಿಟ್ಟುಹೋಗಿದ್ದಾರೆ. ಅವರ ಹಾದಿಯಲ್ಲೇ ನಡೆದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ, ಅಂತೆಯೇ ಗೌರವಿಸುತ್ತದೆ. ಇದನ್ನು ನನ್ನ ತೀರ್ಥರೂಪರಾದ ಕೀರ್ತಿಶೇಷ ಗೋಪಾಲಕೃಷ್ಣ ಆಸ್ರಣ್ಣರು ನುಡಿದಂತೆ ನಡೆದು ತೋರಿಸಿದ್ದಾರೆ. ನಾವೂ ಅದೇ ದಾರಿಯಲ್ಲಿ ಸಾಗಿ ಧರ್ಮಮಾರ್ಗಿಗಳಾಗುತ್ತೇವೆ. ಬೇರೆ ಬೇರೆ ಕಡೆಗಳಲ್ಲಿ ಆಸ್ರಣ್ಣರ ಸಂಸ್ಮರಣೆ ಆಗುತ್ತದೆಯಾದರೂ ನಗರದಲ್ಲಿ ಕಲಾತಪಸ್ವಿ ಸಂಜಯ ಕುಮಾರ್ ಗೋಣಿಬೀಡುರವರು ಇದನ್ನು ವ್ರತವೆಂದು ಭಾವಿಸಿ ಕಳೆದ ಹದಿನಾರು ವರ್ಷಗಳಿಂದ ನಿರಂತರವಾಗಿ ಸಂಸ್ಮರಣೆ – ಪ್ರಶಸ್ತಿ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮವನ್ನು ಅನಾಚೂನವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಹಾಗಾಗಿ, ಕಟೀಲಿನ ಶ್ರೀದೇವಿ ಅವರನ್ನು ಹರಸಿ ಅನುಗ್ರಹಿಸಲಿ” ಎಂದು ಹೇಳಿದರು. ಮಾಜಿ…

Read More

ಮಂಗಳೂರು : ನೃತ್ಯಾಂಗನ್ ಸಂಸ್ಥೆ ಮತ್ತು ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ನೃತ್ಯ ಲಹರಿ ವತಿಯಿಂದ ‘ಶಾಸ್ತ್ರೀಯ ಭರತನಾಟ್ಯ ಉತ್ಸವ’ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2024ರಂದು ಸಂತ ಅಲೋಶಿಯಸ್ ಕಾಲೇಜಿನ ಎಲ್‌.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಇವರು ಮಾತನಾಡಿ “ಕಲೆಗಳಿಂದ ಭಾರತದ ಶ್ರೀಮಂತಿಕೆ ಉಳಿದಿದೆ. ಕಲಾರಂಗದಲ್ಲಿ ತೊಡಗಿಕೊಂಡಿರುವ ಕಲಾವಿದರ ಕೊಡುಗೆ ಸ್ಮರಣೀಯ. ನಮ್ಮ ದೇಶದಲ್ಲಿ ಪ್ರದೇಶಗಳಿಗೆ ಅನುಸಾರವಾಗಿ ಹಲವು ಕಲೆಗಳಿವೆ. ಜಾನಪದ ಹಾಗೂ ಶಾಸ್ತ್ರೀಯ ಕಲೆಗಳು ಜನಮಾನಸದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ. ಕಾವ್ಯಾ ಗಣೇಶ್ ಶಾಸ್ತ್ರೀಯ ನೃತ್ಯ ಮತ್ತು ಉತ್ತರ ಭಾರತದಲ್ಲಿ ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಜನಾಂಗದ ಸಮಸ್ಯೆಯನ್ನು ಬಿಂಬಿಸುವ ಪ್ರಾಚಿ ಸಾಥಿ ಅವರ ನಾಟ್ಯ ಈ ದೇಸಿ ಸೊಗಡನ್ನು ಪ್ರತಿಬಿಂಬಿಸಿವೆ. ಮಂಗಳೂರಿನ ಸದಭಿರುಚಿಯ ಪ್ರೇಕ್ಷಕರು ನೃತ್ಯವನ್ನು ಸ್ವೀಕರಿಸಿದ ರೀತಿಯೂ ಶ್ಲಾಘನೀಯ” ಎಂದು ಹೇಳಿದರು. ಚೆನ್ನೈಯ ಕಲಾವಿದೆ ಕಾವ್ಯಾ ಗಣೇಶ್…

Read More

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕಳೆದ 2022-23, 2023-24ನೇ ಸಾಲಿನ ಕೊಡವ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಆಯಾ ಸಾಲಿನಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಮಾತ್ರ ಸಲ್ಲಿಸಬೇಕು. ಕೊಡವ ಕವನ ಸಂಕಲನ, ಕೊಡವ ಕಥಾ ಸಂಕಲನ, ಕೊಡವ ಕಾದಂಬರಿ, ಕೊಡವ ನಾಟಕ, ಕೊಡವ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಧ್ಯಯನ ಗ್ರಂಥ ಹಾಗೂ ಕೊಡವ ಭಾಷೆಯಿಂದ ಇತರೆ ಭಾಷೆಗೆ ಅಥವಾ ಅನ್ಯ ಭಾಷೆಯಿಂದ ಕೊಡವ ಭಾಷೆಗೆ ಭಾಷಾಂತರಿತ ಕೃತಿಗಳನ್ನು ಬಹುಮಾನಕ್ಕೆ ಪರಿಗಣಿಸಲಾಗುವುದು. ಅಕಾಡೆಮಿಯಿಂದ ಪ್ರಕಟಗೊಂಡಿರುವ ಲೇಖಕರ ಪುಸ್ತಕಗಳನ್ನು ಬಹುಮಾನಕ್ಕೆ ಸಲ್ಲಿಸುವಂತಿಲ್ಲ. ಪ್ರಕಟಿತ ಪುಸ್ತಕಗಳ ತಲಾ ಮೂರು ಕೃತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ “ಕೊಡವ ಅಕಾಡೆಮಿಯ ಪುಸ್ತಕ ಬಹುಮಾನ -2022-23” ಅಥವಾ “ಕೊಡವ ಅಕಾಡೆಮಿ ಪುಸ್ತಕ ಬಹುಮಾನ -2023-24” ಎಂದು ಕಡ್ಡಾಯವಾಗಿ ಬರೆದು, ಅಧ್ಯಕ್ಷರು, ರಿಜಿಸ್ಟ್ರಾರ್ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ಸ್ ಭವನ, ಮ್ಯಾನ್ಸ್ ಕಂಪೌಂಡ್ ಮಡಿಕೇರಿ-571201, ಈ ಮೇಲಿನ…

Read More

ತೆಕ್ಕಟ್ಟೆ: ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಇವರ ‘ಸಿನ್ಸ್ – 1999 ಶ್ವೇತಯಾನ – 87’ ಕಾರ್ಯಕ್ರಮದಡಿಯಲ್ಲಿ ರಸರಂಗ ಪ್ರಸ್ತುತ ಪಡಿಸಿದ ‘ಹನುಮದ್ವಿಲಾಸ’ ಯಕ್ಷಗಾನ ಪ್ರದರ್ಶನವು ದಿನಾಂಕ 22 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಧನಸಹಾಯ ಯೋಜನೆಯಡಿಯಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಚಂದ್ರ ಕುಲಾಲ್ ನೀರ್ಜಡ್ಡು ಹಾಗು ಜಿಲ್ಲಾ ರಾಜ್ಯೋತ್ಸವ ಪ್ರಶಸಿ ಪುರಸ್ಕೃತ ಉದಯ್ ಹೊಸಾಳ ಈವರನ್ನು ಅಭಿನಂದಿಸಲಾಯಿತು. ಗೌರವಾನ್ವಿತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ  ತಲ್ಲೂರು ಶಿವರಾಮ ಶೆಟ್ಟಿ “ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿರಬೇಕಾದರೆ ಕಲೆಯ ಹಾಗೂ ಇನ್ನಿತರ ಸಂಘಟನೆಯ ಮುಖ್ಯಸ್ಥರಾಗಿದ್ದಾಗ ಮಾತ್ರ ಸಾಧ್ಯ. ಇಂತಹ ಕ್ರಿಯಾಶೀಲರನ್ನು ಗುರುತಿಸುವ ಕಾರ್ಯ ಸರಕಾರದಿಂದ ಆಗಬೇಕು. ಮಕ್ಕಳು, ಮಹಿಳೆಯರು ಯಕ್ಷರಂಗಕ್ಕೆ ಪಾದಾರ್ಪಣ ಮಾಡುವ ಸಂಖ್ಯೆ ಹೆಚ್ಚಾಗಬೇಕು. ಕಥೆಗೆ ಹಾಗೂ ಕಲೆಗೆ ಲೋಪ ಆಗದಂತೆ ರಂಗದಲ್ಲಿ ಉಳಿಸಿ, ದಾಟಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ಸಾಧ್ಯ.” ಎಂದರು. ಮಂಗಳೂರು ಯಕ್ಷಧಾಮದ ಜನಾರ್ದನ…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕವು ಕನ್ನಡದ ಶ್ರೇಷ್ಠ ಪ್ರಕಾಶಕ, ಪತ್ರಕರ್ತ, ಸಾಹಿತಿ ಹಾಗೂ ನಾಹಿತ್ಯೋಪಾನಕ ವಿ.ಬಿ. ಹೊಸಮನೆ ಅವರು ಸ್ಥಾಪಿಸಿದ ‘ಕಲಾದರ್ಶನ ದತ್ತಿ ಉಪನ್ಯಾಸ’ ಕಾರ್ಯಕ್ರಮವು ದಿನಾಂಕ 18 ಡಿಸೆಂಬರ್ 2024ರಂದು ಮಂಗಳೂರಿನ ವಾಮಂಜೂರಿನಲ್ಲಿರುವ ಸರಕಾರಿ ಪ್ರೌಢಶಾಲೆ ಮೂಡುಶೆಡ್ಡೆ ಇಲ್ಲಿ ನಡೆಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭಗೊಂಡಿತು. ದತ್ತಿ ದಾನಿ ವಿದ್ವಾನ್ ವಿ. ಬಿ. ಹೊಸಮನೆಯವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಕನ್ನಡನಾಡಿನ ಪ್ರಖ್ಯಾತ ಲೇಖಕಿ ಹಾಗೂ ನಿವೃತ್ತ ಅಧ್ಯಾಪಕಿಯಾದ ಬಿ .ಎಂ. ರೋಹಿಣಿ ಇವರು “ಸಣ್ಣ ಪತ್ರಿಕೆಗಳು ಮತ್ತು ಸಾಹಿತ್ಯ” ಎನ್ನುವ ವಿಷಯದಲ್ಲಿ ಸುಲಲಿತವಾಗಿ ಎಳೆಯ ಹೃದಯಗಳಿಗೆ ಮನಮುಟ್ಟುವಂತೆ ಮಾತನಾಡಿ ದತ್ತಿ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿ. ಬಿ. ಹೊಸಮನೆಯವರ ಸುಪುತ್ರ, ನಿವೃತ್ತ ಮುಖ್ಯೋಪಾಧ್ಯಾಯರಾದ ಭಾಸ್ಕರ ಹೊಸಮನೆ ತಮ್ಮ ತಂದೆಯವರು ಬಡತನದ ಬದುಕಿನಲ್ಲೂ ಬೆಳೆಸಿಕೊಂಡು ಬಂದ ಸಾಹಿತ್ಯ ಪ್ರೇಮದ ಬಗ್ಗೆ ನೆನಪಿಸಿಕೊಂಡರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜಯರಾಮ ಕೊಟ್ಟಾರಿ ಹಾಗೂ…

Read More

ಪಡುಬಿದ್ರಿ : ಪಡುಬಿದ್ರಿ ಪರಿಸರದ ಎಂಟು ಪ್ರೌಢಶಾಲೆಗಳ ‘ಕಿಶೋರ ಯಕ್ಷಗಾನ’ ಸಂಭ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 20 ಡಿಸೆಂಬರ್ 2024ರಂದು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಾಲಯದ ವಠಾರದಲ್ಲಿ ನಡೆಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಇವರ  ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಅಧ್ಯಕ್ಷರಾದ ಡಾ. ಜಿ. ಶಂಕರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ  ಜಯ ಸಿ. ಕೋಟ್ಯಾನ್,  ಕ್ಷೇತ್ರ ಆಡಳಿತ ಅಧ್ಯಕ್ಷರಾದ ಗಿರಿಧರ ಸುವರ್ಣ, ಮಹಾಜನ ಸಂಘದ ಸದಸ್ಯರಾದ ಗುಂಡು ಬಿ. ಅಮೀನ್ ಹಾಗೂ ಕೋಶಾಧಿಕಾರಿ ಸುಧಾಕರ ಕುಂದರ್ ಅಭ್ಯಾಗತರಾಗಿ ಭಾಗವಹಿಸಿದರು.  ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿ, ಅಜಿತ್ ಕುಮಾರ್ ಮತ್ತು ಕಿಶೋರ್ ಸಿ. ಉದ್ಯಾವರ ಸಹಕರಿಸಿದರು. ಸಭೆಯ ಪೂರ್ವದಲ್ಲಿ ಗಣಪತಿ ಪ್ರೌಢಶಾಲೆ, ಪಡುಬಿದ್ರಿ ಇಲ್ಲಿಯ ವಿದ್ಯಾರ್ಥಿಗಳಿಂದ ನಿತಿನ್…

Read More

ಕೋಟ : ವಿದೇಶದ ಮಣ್ಣಿನಲ್ಲಿ ಪ್ರಥಮ ಬಾರಿಗೆ ಯಕ್ಷಗಾನದ ಸೀಮೋಲ್ಲಂಘನಗೈದ ಐತಿಹಾಸಿಕ ದಾಖಲೆಯ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವದ ಐದನೆಯ ಕಾರ್ಯಕ್ರಮ ‘ಸುವರ್ಣ ಸಮ್ಮಿಲನ-50’ ಕಾರ್ಯಕ್ರಮವು 25 ಡಿಸೆಂಬರ್ 2024 ಬುಧವಾರದಂದು ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ನೆರವಿನೊಂದಿಗೆ ಹಯಗ್ರೀವ ಸಭಾ ಮಂಟಪದಲ್ಲಿ ಬೆಳಿಗ್ಗೆ ಘಂಟೆ 10.00ರಿಂದ ನಡೆಯಲಿದೆ. ಮಕ್ಕಳ ಮೇಳದ 50ವರ್ಷಗಳ ಹಿರಿಯ ಕಿರಿಯ ವಿದ್ಯಾರ್ಥಿಗಳು ಅವಿಸ್ಮರಣೀಯ ದಿನಕ್ಕೆ ಅಂದು ಜೊತೆಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಯಕ್ಷ ಗುರು ಕೋಟದ ಕೆ. ನರಸಿಂಹ ತುಂಗ ಇವರನ್ನು ‘ಸುವರ್ಣ ಸಂಭ್ರಮ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೋಟದ ಗೀತಾನಂದ ಫೌಂಡೇಶನ್‌ ಇದರ ಆನಂದ ಸಿ. ಕುಂದರ್, ಕುಂದಾಪುರ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಆದರ್ಶ ಹೆಬ್ಬಾರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಉಡುಪಿ ಕ. ಸಾ. ಪ. ಇದರ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಯಶಸ್ವೀ ಕಲಾವೃಂದದ ಅಧ್ಯಕ್ಷರಾದ ಮಲ್ಯಾಡಿ…

Read More

ತೆಕ್ಕಟ್ಟೆ: ಸಂಯಮಂ (ರಿ.)ಕೋಟೇಶ್ವರ ಹಾಗೂ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999’  ಶ್ವೇತಯಾನ-8’ ಇದರ ಜಂಟಿ ಆಶ್ರಯದಲ್ಲಿ ನಾಲ್ಕನೇ ವರ್ಷದ ವಾಸುದೇವ ಸಾಮಗರ ಸಂಸ್ಮರಣೆ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2024 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಂಸದ ಮತ್ತು ಸಚಿವರಾದ ಪ್ರಮೋದ ಮಧ್ವರಾಜ್ ಮಾತನಾಡಿ “ಮಲ್ಪೆಯ ಸಾಮಗ ಮನೆತನದವರೆಲ್ಲರೂ ವಿಶಿಷ್ಟ ಪ್ರತಿಭಾವಂತರು. ವಾಸುದೇವ ಸಾಮಗರು ವಿದ್ವತ್ತಿನಲ್ಲಿ ತಮ್ಮ ಹಿರಿಯರನ್ನು ಅನುಸರಿಸಿದರೂ, ತಮ್ಮದೇ ಆದ ಅಭಿವ್ಯಕ್ತಿಯ ಕ್ರಮವನ್ನು ರೂಪಿಸಿಕೊಂಡು ಜನಪ್ರಿಯ ಕಲಾವಿದರಾದರು. ಪಾತ್ರ ಪೂರಕವಾಗಿ ಬೇಕಾದಾಗ, ಎದುರು ಪಾತ್ರಧಾರಿ ತಮ್ಮ ತಂದೆಯೇ ಆಗಿದ್ದರೂ ನಿಷ್ಠುರವಾಗಿ ಮಾತನಾಡುತ್ತಿದ್ದುದನ್ನು ನಾನು ನೋಡಿದ್ದೇನೆ.” ಎಂದರು. ಸಾಮಗ ಪ್ರಶಸ್ತಿಯನ್ನು ಸ್ವೀಕರಿಸಿದ  ಪ್ರಸಿದ್ಧ ಸ್ತ್ರೀ ವೇಷಧಾರಿ ಎಂ. ಎ. ನಾಯ್ಕ ಮಾತನಾಡಿ “ವಾಸುದೇವ ಸಾಮಗರು ಎಲ್ಲರಿಗೂ ಆತ್ಮೀಯರು. ನಾರಣಪ್ಪ ಉಪ್ಪೂರರ ಅಮೃತೇಶ್ವರಿ ಮೇಳದಲ್ಲಿ ಉದಯೋನ್ಮುಖ ಕಲಾವಿದರಾಗಿ ಹೆಸರಿಸಿಕೊಂಡವರು ಸಾಮಗರು. ಸಾಮಗರೊಂದಿಗಿನ ಸಹವಾಸದಲ್ಲಿ ನಾನು ಮಾತನ್ನು ಹಾಗೂ ಚುರುಕಿನ ಕುಣಿತವನ್ನು  ಕಲಿತೆ. ಇದು…

Read More