Subscribe to Updates
Get the latest creative news from FooBar about art, design and business.
Author: roovari
ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಗೌರವ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ ‘ಸುವರ್ಣ ಪರ್ವ -5’ | ಡಿಸೆಂಬರ್ 25
ತೆಕ್ಕಟ್ಟೆ : ಐವತ್ತರ ವಸಂತದಲ್ಲಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇವರ ನೆರವಿನೊಂದಿಗೆ ಸುವರ್ಣ ಪರ್ವ -5ರ ಸರಣಿಯಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಐವತ್ತು ವರ್ಷಗಳ ಹಿರಿಯ ಕಿರಿಯ ಕಲಾವಿದರ ‘ಗೌರವ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ’ವನ್ನು ದಿನಾಂಕ 25 ಡಿಸೆಂಬರ್ 2024ರಂದು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಗುರುಗಳಾದ ನರಸಿಂಹ ತುಂಗ ಇವರನ್ನು ಸನ್ಮಾನಿಸಲಾಗುವುದು. ಬೆಳಿಗ್ಗೆ ಗಂಟೆ 10-30ಕ್ಕೆ ಸವಿ ನೆನಪು ಗುರು ಶಿಷ್ಯ ಸಂವಾದ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಪ್ರಾಕ್ತನ ಕಲಾವಿದರಿಂದ ‘ವೃಷಸೇನ-ಕೃಷ್ಣಾರ್ಜುನ-ಬಬ್ರುವಾಹನ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಬಂಟ್ವಾಳ : ಬಂಟ್ವಾಳ ತಾಲೂಕು ಕುಕ್ಕಾಜೆ ಶ್ರೀ ನರಸಿಂಹ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಬಾಬ್ತು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಯಕ್ಷಗಾನ ತಾಳಮದ್ದಳೆ ‘ಜಾಂಬವತಿ ಕಲ್ಯಾಣ’ ಪ್ರಸಂಗವು ದಿನಾಂಕ 18 ಡಿಸೆಂಬರ್ 2024ರಂದು ಶ್ರೀ ದೇವಳದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ರವರ ಸ೦ಯೋಜನೆಯಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಭಾಸ್ಕರ್ ಶೆಟ್ಟಿ ಸಾಲ್ಮರ (ಬಲರಾಮ), ಗುಂಡ್ಯಡ್ಕ ಈಶ್ವರ ಭಟ್ (ಜಾಂಬವ) ಸಹಕರಿಸಿದರು. ಕಯ್ಯೂರು ನಾರಾಯಣ ಭಟ್ ಸ್ವಾಗತಿಸಿ ವಂದಿಸಿದರು.
ಸುಮಾರು ನಾಲ್ಕು ದಶಕಗಳಿಂದ ಮಲಯಾಳಂ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುತ್ತಾ ಬಂದಿರುವ ಮೋಹನ ಕುಂಟಾರ್ ಅವರು 1981ರಿಂದ 2021ರವರೆಗೆ ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ ಹತ್ತು ಕತೆಗಳು ‘ಶಬ್ದಗಳು’ ಎಂಬ ಹೆಸರಿನಲ್ಲಿ ಸಂಗ್ರಹಗೊಂಡಿವೆ. ಮಲಯಾಳಂನ ಎಲ್ಲ ಪ್ರಮುಖ ಕತೆಗಾರರ ಕತೆಗಳು ಇಲ್ಲಿ ಇಲ್ಲದಿದ್ದರೂ ಕನ್ನಡದ ಪ್ರಗತಿಶೀಲ, ನವ್ಯ ಮತ್ತು ಬಂಡಾಯ ಸಾಹಿತ್ಯಗಳಿಗೆ ಸಂವಾದಿಯಾದ ರಿಯಲಿಸಂ, ಪುರೋಗಮನವಾದಂ, ನವೀನ ಭಾವಕತ್ವಂ ಮತ್ತು ಆಧುನಿಕೋತ್ತರ ಸಾಹಿತ್ಯ ಘಟ್ಟಗಳಿಗೆ ಸೇರಿದ ಕಾರೂರ್ ನೀಲಕಂಠ ಪಿಳ್ಳೆ (ಬುತ್ತಿ), ವೈಕಂ ಮಹಮ್ಮದ್ ಬಷೀರ್ (ಶಬ್ದಗಳು), ಎಂ.ಟಿ. ವಾಸುದೇವನ್ ನಾಯರ್ (ಭಾಗ್ಯ), ಮಾಧವಿ ಕುಟ್ಟಿ (ಕಳೆದು ಹೋದ ನೀಲಾಂಬರಿ), ಪುನತ್ತಿಲ್ ಕುಂಞಬ್ದುಲ್ಲ (ಹದಿನಾಲ್ಕರ ಪ್ರಾಯದಲ್ಲಿ), ಇ. ಹರಿಕುಮಾರ್ (ಮುಗಿಸಲಾರದ ಪಯಣ), ಪಾಲ್ ಸಕ್ಕರಿಯ (ತಟ್ಟಿಂಗಲ್ ಕುಂಞುವರೀದ್ ಹಿಂತಿರುಗಿ ನೋಡುತ್ತಾನೆ), ಸಿ.ವಿ. ಬಾಲಕೃಷ್ಣನ್ (ದೇವರು ಹೋಗುವ ದಾರಿ), ಅಶಿತಾ (ಪೆಸಹಾ ಹಬ್ಬ), ಶೋಭಾ ವಾರಿಯರ್ (ಹೂವಾಡಗಿತ್ತಿ) ಮುಂತಾದವರ ಕತೆಗಳ ಅನುವಾದವನ್ನು ಕಾಣಬಹುದು. ಆದ್ದರಿಂದ ಇಲ್ಲಿರುವ ಕತೆಗಳ ವಸ್ತು, ಆಶಯ, ನಿರೂಪಣೆ, ಕಥನ ತಂತ್ರಗಳು…
ಯಲ್ಲಾಪುರ : ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ, ಪ್ರೇರಣಾ ಸಂಸ್ಥೆ ಗುಂದ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರ ಸಹಯೋಗದಲ್ಲಿ ವಿನೂತನ ತಾಳಮದ್ದಳೆ ಕಮ್ಮಟ ‘ಸಂವಾದ ಪಂಚಕ’ ಆಯ್ದ ಐದು ಯಕ್ಷಗಾನ ಪ್ರಸಂಗಗಳ ಸಂವಾದ ಕಾರ್ಯಕ್ರಮವನ್ನು ದಿನಾಂಕ 22 ಡಿಸೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಮಹೇಶ ಭಟ್ಟರ ಮನೆ ಹಸರಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಸಿದ್ಧ ಅರ್ಥದಾರಿಗಳಾದ ಶ್ರೀ ಎಮ್.ಎನ್. ಹೆಗಡೆ ಹಳವಳ್ಳಿ ಇವರು ಕಮ್ಮಟದ ಸಮಗ್ರ ಅವಲೋಕನಕ್ಕಾಗಿ ಮತ್ತು ಪ್ರಸಿದ್ಧ ಅರ್ಥದಾರಿ, ಚಿಂತಕ ಮತ್ತು ಬರಹಗಾರರಾದ ಶ್ರೀ ರಾಧಾಕೃಷ್ಣ ಕಲ್ಚಾರ್ ವಿಟ್ಲ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ತಿಮ್ಮಪ್ಪ ಹೆಗಡೆ ಶಿರಳಗಿ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ‘ಧರ್ಮಾಂಗದ ದಿಗ್ವಿಜಯ’, ‘ಜಾಂಬವತೀ ಕಲ್ಯಾಣ’, ‘ಶರಸೇತು ಬಂಧನ’, ‘ಶ್ರೀರಂಗ ತುಲಾಭಾರ’, ‘ರಾಮನಿರ್ಯಾಣ’ ಎಂಬ ಪ್ರಸಂಗಗಳ ಸಂವಾದ ನಡೆಯಲಿದೆ.
ಪುತ್ತೂರು : ಬಹುವಚನಂ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಶ್ರೀ ಕಿರಣ್ ಹೆಗ್ಡೆ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಕೊಳಲು ವಾದನ ಕಾರ್ಯಕ್ರಮವನ್ನು ದಿನಾಂಕ 22-12-2024ರಂದು ಸಂಜೆ 6-00 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ.
ಮಂಗಳೂರು : ನೃತ್ಯಾಂಗನ್ ನೃತ್ಯ ಸಂಸ್ಥೆ ಮತ್ತು ಸಂತ ಅಲೋಶಿಯಸ್ ಸ್ವಾಯತ್ತ ವಿವಿಯ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ದಿನಾಂಕ 21 ಡಿಸೆಂಬರ್ 2024ರಂದು ‘ಶಾಸ್ತ್ರೀಯ ಭರತನಾಟ್ಯ ಉತ್ಸವ’ವನ್ನು ‘ನೃತ್ಯ ಲಹರಿ’ಯು ಆಯೋಜಿಸಿದೆ. ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಸಂಜೆ 6-00 ಗಂಟೆಗೆ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಳಿಕ ಚೆನ್ನೈಯ ಕಲಾವಿದೆ ಕಾವ್ಯಾ ಗಣೇಶ್ (ಡಾನ್ಸಿಂಗ್ ಟು ಹರ್ ಓನ್ ಟ್ಯೂನ್) ಏಕವ್ಯಕ್ತಿ ನೃತ್ಯವನ್ನು ಪ್ರಸ್ತುತಪಡಿಸುವರು. ಅನಂತರ ಮುಂಬೈಯ ಕಲಾವಿದೆ ಪ್ರಾಚಿ ಸಾಥಿ ‘ವೆನ್ ವಾಲ್ಸ್ ಡಾನ್ಸ್’ ಭರತನಾಟ್ಯ, ವರ್ಲಿ ಕಲೆ ಮತ್ತು ತಲ್ಲೀನತೆಯ ಆನಿಮೇಷನ್ ಎಂಬ ಕಲ್ಪನೆಯ ಜುಗಲ್ಬಂದಿ ಎಂಬ ಏಕವ್ಯಕ್ತಿ ನೃತ್ಯವನ್ನು ಸಾದರಪಡಿಸುವರು. ಕಾರ್ಯಕ್ರಮಕ್ಕೆ ಆಸಕ್ತರಿಗೆ ಮುಕ್ತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆ ನಿರ್ದೇಶಕಿ ವಿದುಷಿ ರಾಧಿಕಾ ಶೆಟ್ಟಿ ತಿಳಿಸಿದ್ದಾರೆ.
ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಅರ್ಪಿಸುವ ಕಾರ್ಯಕ್ರಮ -36 ಉಪನಿಷದ್ ವರ್ಷದ ಪ್ರಯುಕ್ತ ‘ತಿಂಗಳ ಉಪನ್ಯಾಸ ಮಾಲೆ’ಯನ್ನು ದಿನಾಂಕ 21 ಡಿಸೆಂಬರ್ 2024ರಂದು ಸಂಜೆ 5-00 ಗಂಟೆಗೆ ಕಾರ್ಕಳ ಹೊಟೇಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಶ್ರೀ ಲಕ್ಷ್ಮೀಶ ತೋಳ್ಪಾಡಿ ಇವರು ಸಮಾರೋಪ ಉಪನ್ಯಾಸ ನೀಡಲಿರುವರು.
ಕವಲಕ್ಕಿ : ಅಭಿನೇತ್ರಿ ಆರ್ಟ್ ಟ್ರಸ್ಟ್ (ರಿ.) ನೀಲ್ಕೋಡ್ ಅರ್ಪಿಸುವ ‘ಅಭಿನೇತ್ರಿ ಯಕ್ಷೋತ್ಸವ’ವನ್ನು ದಿನಾಂಕ 21 ಡಿಸೆಂಬರ್ 2024 ಮತ್ತು 22 ಡಿಸೆಂಬರ್ 2024ರಂದು ಕವಲಕ್ಕಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 21 ಡಿಸೆಂಬರ್ 2024ರಂದು ಪ್ರಾಚಾರ್ಯರಾದ ಡಾ. ನಾಗಪತಿ ಭಟ್ ಇವರಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಗಜಪುರ ನಾಗಪ್ಪಯ್ಯ ವಿರಚಿತ ‘ನಳದಮಯಂತಿ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ದಿನಾಂಕ 22 ಡಿಸೆಂಬರ್ 2024ರಂದು ಮಧ್ಯಾಹ್ನ 3-00 ಗಂಟೆಗೆ ‘ಕರ್ಣಭೇದನ’ ತಾಳಮದ್ದಳೆ ಮತ್ತು ಸಂಜೆ 6-00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ಅಭಿನೇತ್ರಿ ಪ್ರಶಸ್ತಿ’, ‘ಬೆಳೆಯೂರು ಕೃಷ್ಣಮೂರ್ತಿ ಪ್ರಶಸ್ತಿ’ ಮತ್ತು ‘ಕಣ್ಣಿ ಪ್ರಶಸ್ತಿ’ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ‘ಮಹಾಕಲಿ ಮಗಧೇಂದ್ರ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.
ಮೈಸೂರು : ನಿರಂತರ ಫೌಂಡೇಶನ್ (ರಿ.) ಮೈಸೂರು ಆಯೋಜಿಸಿರುವ ‘ನಿರಂತರ ರಂಗ ಉತ್ಸವ – 2024’ ಕಾರ್ಯಕ್ರಮವನ್ನು ದಿನಾಂಕ 25 ಡಿಸೆಂಬರ್ 2024ರಿಂದ 30 ಡಿಸೆಂಬರ್ 2024ರವರಗೆ ಆರು ದಿನಗಳ ನಾಟಕೋತ್ಸವವನ್ನು ಪ್ರತಿ ದಿನ ಸಂಜೆ 7-00 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 25 ಡಿಸೆಂಬರ್ 2024ರಂದು ಮೈಸೂರಿನ ಸಮತೆಂತೋ ಪ್ರಸ್ತುತಿಯ ಏಕವ್ಯಕ್ತಿ ರಂಗ ಪ್ರಯೋಗ ಡಾ. ಶ್ರೀಪಾದ ಭಟ್ ಇವರ ರಂಗಪಠ್ಯ ವಿನ್ಯಾಸ ನಿರ್ದೇಶನದಲ್ಲಿ, ಇಂದಿರಾ ನಾಯರ್ ಅಭಿನಯಿಸುವ ‘ನೀರ್ಮಾದಳ ಹೂವಿನೊಂದಿಗೆ…’ ನಾಟಕದಲ್ಲಿ ಮೊದಲ ಬಾರಿಗೆ ಕಮಲಾ ದಾಸ್ ರಂಗದ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ದಿನಾಂಕ 26 ಡಿಸೆಂಬರ್ 2024ರಂದು ಅಭಿನವ ವೀರಭದ್ರೇಶ್ವರ ತಂಡದ ವೀರಗಾಸೆ ಜನಪದ ನೃತ್ಯ ನಡೆಯಲಿದೆ. ಇದೇ ದಿನ ನಡೆಯಲಿರುವ ‘ನಿರಂತರ ರಂಗ ಉತ್ಸವ-2024’ದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ನಿರ್ದೇಶಕರಾದ ಡಾ. ಧರಣಿದೇವಿ ಮಾಲಗತ್ತಿ ಮತ್ತು…
ಪಣಂಬೂರು : ಶ್ರೀ ಕೊಲ್ಲಂಗಾನ ಮೇಳದ ವತಿಯಿಂದ ‘ಯಕ್ಷ ಪಂಚಕ’ ಎಂಬ ಯಕ್ಷಗಾನ ಕಾರ್ಯಕ್ರಮವು ದಿನಾಂಕ 16 ಡಿಸೆಂಬರ್ 2024ರಂದು ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಇವರು ಮಾತನಾಡಿ “ಯಕ್ಷ ರಂಗ ಸದಾ ಲಾಲಿತ್ಯ ಹೊಂದಿದ್ದು, ಭಾರತೀಯ ಲಲಿತಕಲೆಗಳಲ್ಲಿ ಮೇರು ಸ್ಥಾನವನ್ನು ಪಡೆದಿದೆ. ಹಲವು ರಂಗ ಪ್ರಾಕಾರಗಳೂ ಇದರಲ್ಲಿ ಮಿಳಿತವಾಗಿದ್ದು, ಸರ್ವ ಜನಾಂಗಕ್ಕೂ ಒಪ್ಪಿತವಾದ ರಂಗ ಕಲೆ. ಗಡಿನಾಡ ಮೇಳವೊಂದು ಪಣಂಬೂರಿಗೆ ಬಂದು ಈ ಪಂಚಕವನ್ನು ನಡೆಸುತ್ತಿರುವುದು ಕಲೆಯನ್ನು ಕಾಪಾಡಿಕೊಳ್ಳುವಲ್ಲಿ ಉತ್ತಮ ಪ್ರಯತ್ನ” ಎಂದು ಹೇಳಿದರು. ವೇದಮೂರ್ತಿ ಸುಬ್ರಹ್ಮಣ್ಯ ಮಯ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. “ಬಿಡುಗಡೆಗೊಂಡ ಅತ್ಯಲ್ಪ ಸಮಯದಲ್ಲಿ 60ಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ಹೊಂದಿದ ತಾನು ನೀಡಿದ ಕಥೆ ಶೂರ್ಪನಖಾವಧಾ ಪ್ರಸಂಗ ಈ ಮೇಳದಲ್ಲಿ ಪ್ರದರ್ಶಿತವಾಗುತ್ತಿರುವುದು ಸಂತಸದ ವಿಷಯ” ಎಂದು ನಿವೃತ್ತ ಯೋಧ ಹಾಗೂ ಕಲಾ ಸಂಘಟಕ ಪಿ. ಮಧುಕರ ಭಾಗವತ್ ಹೇಳಿದರು. ಹಿರಿಯ ಕಲಾವಿದ ಶ್ರೀಧರ ಐತಾಳ್, ಪಿ.…