Author: roovari

ಶಿವಮೊಗ್ಗ: ತೀರ್ಥಹಳ್ಳಿಯ ಕುವೆಂಪು ಕವಿಶೈಲದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವರಾದ ಬಿ. ಎಲ್. ಶಂಕರ್ ಇವರನ್ನು ಸರ್ಕಾರ ನೇಮಿಸಿದೆ. ಪ್ರತಿಷ್ಠಾನದ ಪದನಿಮಿತ್ತ ಉಪಾಧ್ಯಕ್ಷರಾಗಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಪದನಿಮಿತ್ತ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ,  ಸಮಕಾರ್ಯದರ್ಶಿಯಾಗಿ ಕಡಿದಾಳ್ ಪ್ರಕಾಶ್, ಖಜಾಂಚಿಯಾಗಿ ಡಿ. ಎಂ. ಮನುದೇವ್ ಹಾಗೂ ಸದಸ್ಯರುಗಳಾಗಿ ಹಿರಿಯ ಪತ್ರಕರ್ತ ಹಾಗೂ ಜಾನಪದ ತಜ್ಞ ಶಿವಾನಂದ ಕರ್ಕಿ, ಸಿ. ಬಸವಲಿಂಗಯ್ಯ, ಎಸ್. ವಿ. ದಯಾನಂದ, ಕುವೆಂಪು ವಿ. ವಿ. ಇದರ ಮಾಜಿ ಕುಲಪತಿ ಡಾ. ಚಿದಾನಂದಗೌಡ, ಎಂ. ಸಿ. ನರೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಶಿವಮೊಗ್ಗ ಉಪಅರಣ್ಯ ಸಂರಕ್ಷಣಾಧಿಕಾರಿ, ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆಯ ವೃತ್ತ ಅಧೀಕ್ಷಕ ಇಂಜಿನಿಯರ್, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರುಗಳು, ಸರ್ಕಾರದ ಆರ್ಥಿಕ ಇಲಾಖೆಯ ಕಾರ್ಯದರ್ಶಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರುಗಳು ಮತ್ತು ಪದನಿಮಿತ್ತ…

Read More

ಧಾರವಾಡ: ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಹಾವೇರಿ, ಮನೋಹರ ಗ್ರಂಥ ಮಾಲಾ ಆಶ್ರಯದಲ್ಲಿ ಡಾ. ಕೃಷ್ಣಮೂರ್ತಿ ಕಿತ್ತೂರ ಸಂಶೋಧಿಸಿ ಬರೆದ ‘ಗಳಗನಾಥರು ಮತ್ತು ಅವರ ಕಾದಂಬರಿಗಳು’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 15 ಡಿಸೆಂಬರ್ 2024ರ ಶನಿವಾರದಂದು ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ರಾಘವೇಂದ್ರ ಪಾಟೀಲ ಮಾತನಾಡಿ “ಗಳಗನಾಥರು ಮತ್ತು ಅವರ ಕಾದಂಬರಿಗಳು’ ಕೃತಿ ಗಳಗನಾಥರ ಬರಹವನ್ನು ಅಮೂಲಾಗ್ರವಾಗಿ ಚರ್ಚಿಸುವುದಾಗಿದೆ. ಈ ಪುಸ್ತಕ ಭಾಷಾ ಸಂಪತ್ತನ್ನು ಒಳಗೊಂಡಿದೆ. ಗಳಗನಾಥರ ವ್ಯಕ್ತಿತ್ವವನ್ನು ಈ ಕೃತಿ ತೋರ್ಪಡಿಸುತ್ತದೆ. ಹೊಸಗನ್ನಡ ಭಾಷೆ-ಸಾಹಿತ್ಯಗಳಿಗೆ ಭದ್ರ ಬುನಾದಿ ಹಾಕಿದ ಪುಣ್ಯ ಪುರುಷರಲ್ಲಿ ಗಳಗನಾಥರೂ ಒಬ್ಬರು. 70ರ ದಶಕದಲ್ಲಿ ಕಾದಂಬರಿಗಳು ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದವು. ಆಧುನಿಕ ಕಲಾತ್ಮಕ ಕೃತಿಗಳನ್ನು ತುಲನೆ ಮಾಡುವ ಕಾರ್ಯವನ್ನು ಡಾ. ಕೃಷ್ಣಮೂರ್ತಿ ಕಿತ್ತೂರ ಮಾಡಿದ್ದಾರೆ. ಗಳಗನಾಥರ ಸಾಹಿತ್ಯವನ್ನು ವಿಸ್ತಾರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಭಾಷಾಂತರ, ರೂಪಾಂತರ, ಅನುವಾದದ ರೀತಿಗಳನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.…

Read More

ಉಡುಪಿ : ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಇವರ ವಿನೂತನ ಪ್ರಯೋಗ ‘ಮೈಂಡ್ ಮಿಸ್ಟರಿ’ ಕಾರ್ಯಕ್ರಮವು ದಿನಾಂಕ 21 ಹಾಗೂ 22 ಡಿಸೆಂಬರ್ 2024ರಂದು ಉಡುಪಿಯ ಐ. ವೈ. ಸಿ. ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ನಿಮ್ಮ ಮನಸ್ಸಿನಲ್ಲಿರುವ ವಿಚಾರವನ್ನು ಬಹಿರಂಗ ಪಡಿಸುವ ‘ಮೈಂಡ್ ರೀಡಿಂಗ್’, ಮನಸ್ಸಿನಿಂದ ಮನಸ್ಸಿನ ಮಧ್ಯೆ ಅಗೋಚರ ಸಂಪರ್ಕ ಕಲ್ಪಿಸುವ ‘ಟೆಲಿಪತಿ’, ಪಂಚೇಂದ್ರಿಯಗಳ ಪ್ರಜ್ಞೆ ಮೀರಿ ಆರನೇ ಇಂದ್ರಿಯದ ಅನುಭೂತಿಯ ‘ಎಕ್ಸ್ಟ್ರಾ ಸೆನ್ಸರಿ ಪರ್ಸೆಪ್ಶನ್’ (ಇ. ಎಸ್. ಪಿ. ), ವ್ಯಕ್ತಿಯ ವರ್ತನೆಯ ಮೇಲೆ ಪ್ರಭಾವ ಬೀರುವ ಪ್ರಯೋಗ ‘ಎನ್. ಎಲ್. ಪಿ.’ ಹಾಗೂ ಮುಂಬರುವ ವಿಚಾರಗಳನ್ನು ಪೂರ್ವದಲ್ಲೇ ಸೂಚಿಸುವ ಚಮತ್ಕಾರವಾದ ‘ಭವಿಷ್ಯವಾಣಿ’ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮ 2 ದಿನಗಳಲ್ಲಿ 3 ಪ್ರದರ್ಶನ ನಡೆಯಲಿದ್ದು, ಡಿಸೆಂಬರ್ 21ರಂದು ಸಂಜೆ ಘಂಟೆ 6.30ಕ್ಕೆ ಒಂದು ಪ್ರದರ್ಶನ ಹಾಗೂ ಡಿಸೆಂಬರ್ 22 ರಂದು ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 6.30ಕ್ಕೆ ಒಟ್ಟು ಎರಡು ಪ್ರದರ್ಶನಗಳು ನಡೆಯಲಿದೆ. ಕಾರ್ಯಕ್ರಮದ ಟಿಕೆಟ್ ಗಳಿಗಾಗಿ…

Read More

ಮಂಗಳೂರು: ಖ್ಯಾತ ನೃತ್ಯ ಗುರು ಕರ್ನಾಟಕ ಕಲಾಶ್ರೀ ಪುರಸ್ಕೃತ ಕಮಲಾ ಭಟ್ ಇವರು 17 ಡಿಸೆಂಬರ್ 2024ರ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕಮಲಾಭಟ್ ಇವರು ನಾಟ್ಯಾಲಯ ಉರ್ವ ಸಂಸ್ಥೆಯ ನಿರ್ದೇಶಕಿಯಾಗಿದ್ದು, ಸುಮಾರು 45 ವರ್ಷಗಳಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರು. ರಾಜ್ಯ, ದೇಶ ಹಾಗೂ ಹೊರದೇಶಗಳಲ್ಲೂ ನೃತ್ಯ ಶಿಕ್ಷಕರಾಗಿ, ಕಲಾವಿದರಾಗಿ ಮಿಂಚಿ ಅನೇಕ ಶಿಷ್ಯರನ್ನು ರಂಗಕ್ಕೆ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರ ಹಿರಿಯ ಶಿಷ್ಯರಾಗಿ ಪ್ರತಿಮಾ ಶ್ರೀಧರ್, ಸೌಮ್ಯ ಸುಧೀಂದ್ರ, ಬೆಂಗಳೂರಿನಲ್ಲಿ ಸರಿತಾ ಕೊಟ್ಟಾರಿ ಇನ್ನು ಅನೇಕ ಶಿಷ್ಯರು ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಕಮಲಾ ಭಟ್ ಇವರು ಗುರು ಉಳ್ಳಾಲ ಮೋಹನ್ ಕುಮಾರರ ಶಿಷ್ಯರಾಗಿ ಗಮನ ಸೆಳೆದವರು. ತಮ್ಮ ಸಂಸ್ಥೆಯಿಂದ ರಾಜ್ಯದ ಪ್ರತಿಷ್ಠಿತ ವೇದಿಕೆಗಳಲ್ಲಿ ಸಾವಿರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ಸಾಧನೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ಶ್ರೀ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಪೇಜಾವರ ಮಠದ…

Read More

ಮಂಡ್ಯ : ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು ಇದರ ವತಿಯಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 20 ಡಿಸೆಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 20 ಡಿಸೆಂಬರ್ 2024ರಂದು ಪ್ರಧಾನ ವೇದಿಕೆಯಲ್ಲಿ ಬೆಳಿಗ್ಗೆ 6-00 ಗಂಟೆಗೆ ಧ್ವಜಾರೋಹಣ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ನಾಡೋಜ ಡಾ. ಗೊ.ರು. ಚನ್ನಬಸಪ್ಪ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ಕರ್ನಾಟಕ ಸರಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಇವರು ಈ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆ, ಮಹಾಮಂಟಪ, ಮಹಾದ್ವಾರ, ಪ್ರವೇಶ ದ್ವಾರ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ, ಪುಸ್ತಕ ಬಿಡುಗಡೆ, ಸ್ಮರಣ ಸಂಚಿಕೆ ಬಿಡುಗಡೆ ಮತ್ತು ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 2-00 ಗಂಟೆಗೆ ಖ್ಯಾತ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಮಹಿಳಾ ವಿಂಶತಿ ಸಂಭ್ರಮದ ಅಂಗವಾಗಿ 20ನೇ ಸರಣಿ ತಾಳಮದ್ದಳೆ ‘ಮೇಘನಾದ’ ಎಂಬ ಆಖ್ಯಾನದೊಂದಿಗೆ ದಿನಾಂಕ 17 ಡಿಸೆಂಬರ್ 2024ರಂದು ಬಲಮುರಿ ಶ್ರೀ ವಿದ್ಯಾ ಗಣಪತಿ ದೇವಸ್ಥಾನ ಭಾರತೀ ನಗರ ಬನ್ನೂರಿನಲ್ಲಿ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್, ಪಿ.ಟಿ. ಜಯರಾಮ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಮಾಂಬಾಡಿ ವೇಣುಗೋಪಾಲ್ ಭಟ್ (ಶ್ರೀರಾಮ), ಗುಂಡ್ಯಡ್ಕ ಈಶ್ವರ ಭಟ್ (ಇಂದ್ರಜಿತು), ಗುಡ್ಡಪ್ಪ ಬಲ್ಯ (ಲಕ್ಷ್ಮಣ), ದುಗ್ಗಪ್ಪ ನಡುಗಲ್ಲು (ರಾವಣ), ಚಂದ್ರಶೇಖರ ಭಟ್ ಬಡೆಕ್ಕಿಲ (ಜಾಂಬವ), ವಿ.ಕೆ. ಶರ್ಮ ಅಳಿಕೆ (ಹನೂಮಂತ), ಶುಭಾ ಜೆ.ಸಿ. ಅಡಿಗ (ವಿಭೀಷಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಮಾಯಾ ಸೀತೆ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಗಾಯತ್ರಿ ಹೆಬ್ಬಾರ್ ಪ್ರಾಯೋಜಿಸಿದರು.

Read More

ಕಾಸರಗೋಡು : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ-2024 ಇದರ ಅಂಗವಾಗಿ ಕನ್ನಡ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ,ಸ್ಮರಣಿಕೆ ಹಾಗೂ ಪುಸ್ತಕಗಳೊಂದಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿನಾಂಕ 15 ಡಿಸೆಂಬರ್ 2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಸಣ್ಣ ಕಥೆ ಹೇಳುವ ಸ್ಪರ್ಧೆ, ಚಿತ್ರ ರಚನೆ, ರಸಪ್ರಶ್ನೆ, ಛದ್ಮವೇಷ, ಏಕಪಾತ್ರಾಭಿನಯ, ಕನ್ನಡ ವಾರ್ತಾ ಪತ್ರಿಕೆ ವಾಚನ ಸ್ಪರ್ಧೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗ, ಹಿರಿಯ ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ…

Read More

ಕಾಸರಗೋಡು : “ರಾಗಾಲಾಪ ಎಂಬ ಕಾರ್ಯಕ್ರಮವೇ ವಿಶಿಷ್ಟವಾಗಿದೆ. ಕರ್ನಾಟಕದಲ್ಲಿಯೇ ಇಂಥ ಪ್ರಯೋಗಗಳು ನಡೆದಿಲ್ಲ. ಅಂಥದ್ರಲ್ಲಿ ಕಾಸರಗೋಡಿನ ‘ಸ್ವರ ಚಿನ್ನಾರಿ’ಯ ಈ ಪ್ರಯತ್ನ ಶ್ಲಾಘನೀಯ. ಇಂಥಹ ಕಾರ್ಯಕ್ರಮಗಳ ಮೂಲಕ ಒಬ್ಬ ಅದ್ಭುತ ಕವಿ ಹುಟ್ಟಿಕೊಳ್ಳಬಹುದು. ಒಬ್ಬ ರಾಗ ಸಂಯೋಜಕ ಸೃಷ್ಟಿ ಆಗಬಹುದು. ಹಲವು ಪ್ರತಿಭೆಗಳಿಗೆ ವೇದಿಕೆ ಆಗುವ ಸಾಧ್ಯತೆ ಇದೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರರವರ ನಿರ್ದೇಶನದಲ್ಲಿ ಇಂಥಹ ವಿಶಿಷ್ಟವಾದ ಕಾರ್ಯಕ್ರಮ ಜರಗುವುದು ಖುಷಿ ನೀಡಿದೆ” ಎಂದು ಖ್ಯಾತ ಪತ್ರಕರ್ತ, ಅಂಕಣಗಾರ ರವೀಂದ್ರ ಜೋಶಿ ಮೈಸೂರು ನುಡಿದರು. ಅವರು ಕಾಸರಗೋಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಜರಗಿದ ರಾಗಸಂಯೋಜನಾ ಶಿಬಿರ ‘ರಾಗಾಲಾಪ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಮ್ಮಟದ ನಿರ್ದೇಶಕ ವಿ. ಮನೋಹರರವರು ಮಾತನಾಡಿ “ನಾವು ಸ್ವರ ಸಂಯೋಜಕರಲ್ಲ, ನಿಜ ಅರ್ಥದಲ್ಲಿ ಗಾನ ಸಂಯೋಜಕರು ಅಂತ ಹೇಳಬೇಕು. ನಾವು ಪದಗಳನ್ನು ಜೋಡಿಸಿ ಗಾಯನ ಮಾಡುತ್ತೇವೆ. ಸಿನೇಮಾದಲ್ಲಿ ಇದಕ್ಕೆ ವಿರುದ್ಧ ಸಂಪ್ರದಾಯವಿದೆ.…

Read More

ವಿರಾಜಪೇಟೆ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಹಾಗೂ ಕಲಾ ಉತ್ಸವ ಕೊಡಗು 2024 ಇವರ ಸಹಯೋಗದಲ್ಲಿ ಕಲೋತ್ಸವ ಬಹುಭಾಷಾ ಕವಿಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮವು ದಿನಾಂಕ 15 ಡಿಸೆಂಬರ್ 2024ರಂದು ವಿರಾಜಪೇಟೆಯ ಶಾನುಭೋಗ್‌ ಸೆಂಟರ್‌ನಲ್ಲಿ ನಡೆಯಿತು. ಮೈಸೂರಿನ ಕಾದಂಬರಿಕಾರರಾದ ಎಂ.ಬಿ. ಸಂತೋಷ್ ಇವರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರು ಮತ್ತು ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಬಿ.ಎಸ್. ಲೋಕೇಶ್ ಸಾಗರ್ ಇವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಾಸನದಿಂದ ಎನ್.ಎಲ್. ಚನ್ನೇಗೌಡ ಹಾಗೂ ಕುಮಾರ್ ಚಲವಾದಿ ಹಾಸನ ಇವರು ಭಾಗವಹಿಸಿದ್ದರು. ವಿರಾಜಪೇಟೆಯ ಹಿರಿಯ ವಕೀಲರು ಎಸ್.ಆರ್. ಜಗದೀಶ್, ವಿರಾಜಪೇಟೆ ರೋಟರಿ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಜೆ. ವಿಶಾಲಾಕ್ಷಿ, ಕೊಡಗು ಜಿಲ್ಲೆ ಹಿರಿಯ ಕವಿಗಳು ಗಿರೀಶ್ ಕಿಗ್ಗಾಲು ಇವರು ಉಪಸ್ಥಿತರಿದ್ದರು. ವೈಲೇಶ್ ಪಿ.ಎಸ್. ಕೊಡಗು ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿತ್ರಕಲಾಕಾರ ಸಾಧಿಕ್ ಹಂಸ ಕಾರ್ಯಕ್ರಮದ ಕುರಿತು ನಲ್ಮೆಯ ಮಾತುಗಳನ್ನಾಡಿದರು. ಸುಮಾರು 50 ಜನ ಭಾಗವಹಿಸಿದ ಈ…

Read More

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಕಾರ್ಯ ಚಟುವಟಿಕೆಗಳಲ್ಲಿ ಪುಸ್ತಕ ಪ್ರಕಟಣೆ ಬಹಳ ಮುಖ್ಯವಾದದ್ದು. ಇದುವರೆಗೂ 1,800ಕ್ಕೂ ಹೆಚ್ಚು ಪುಸ್ತಕಗಳನ್ನು ಪರಿಷತ್ತು ಪ್ರಕಟಿಸಿದ್ದು, ಅದು ಒಂದು ರೀತಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಬಿಂಬಿಸುತ್ತದೆ ಎಂದರೆ ತಪ್ಪಾಗಲಾರದು. ಪರಿಷತ್ತು ಪ್ರಕಟಿಸುವ ಪುಸ್ತಕಗಳು ಎಂದರೆ ಹೂರಣ ಮತ್ತು ಮುದ್ರಣಗಳೆರಡರೆಲ್ಲಿಯೂ ಶ್ರೇಷ್ಠ ಗುಣಮಟ್ಟವನ್ನು ಹೊಂದಿರುತ್ತದೆ. ಪುಸ್ತಕಗಳ ಬಗ್ಗೆ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ “ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳಲ್ಲಿ ಬಹಳ ವಿಶೇಷವಾದದ್ದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಗುವ ಪ್ರಕಟಣೆಗಳು. ಎಷ್ಟನೆಯ ಸಮ್ಮೇಳನ ನಡೆಯತ್ತದೆಯೋ ಅಷ್ಟು ಪುಸ್ತಕಗಳನ್ನು ಪ್ರಕಟಿಸುವ ಉನ್ನತ ಪರಂಪರೆಯೊಂದು ಪರಿಷತ್ತಿನಲ್ಲಿತ್ತು. ಕಾರಣಾಂತರಗಳಿಂದ ಅದು ನಿರಂತರವಾಗಿರಲಿಲ್ಲ. ನನ್ನ ಅವಧಿಯಲ್ಲಿ ಅದನ್ನು ಮುಂದುವರೆಸಲು ಸಂಕಲ್ಪಿಸಿದ್ದೇನೆ. ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 86 ಪುಸ್ತಕಗಳು ಪ್ರಕಟವಾಗಿ ನಾಡಿನ ಸಾಹಿತ್ಯಾಸಕ್ತರ ಮೆಚ್ಚುಗೆಯನ್ನು ಪಡೆದಿದ್ದವು. ಪ್ರಸ್ತುತ ಮಂಡ್ಯದಲ್ಲಿ ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ…

Read More