Subscribe to Updates
Get the latest creative news from FooBar about art, design and business.
Author: roovari
ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 21 ಡಿಸೆಂಬರ್ 2024ರಂದು ಮಧ್ಯಾಹ್ನ 1-00 ಗಂಟೆಗೆ ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮುರಳಿ ಶೃಂಗೇರಿ ರಚಿಸಿ, ಸಂಗೀತ ನೀಡಿರುವ ರಮೇಶ ಬೆಣಕಲ್ ಇವರ ನಿರ್ದೇಶನದಲ್ಲಿ ಶ್ರೀರಂಗಪಟ್ಟಣದ ಗಮ್ಯ (ರಿ.) ಇವರು ಪ್ರಸ್ತುತ ಪಡಿಸುವ ‘ಪರಿಣಯ ಪ್ರಸಂಗ’ ನಾಟಕ ಪ್ರದರ್ಶನಗೊಳ್ಳಲಿದೆ. ತಂಡದ ಬಗ್ಗೆ : ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕ ಹಲವು ಕುರುಹುಗಳ ಬಾಹುಳ್ಯದಿಂದಾಗಿ ಶ್ರೀರಂಗಪಟ್ಟಣ ಎಂದಿಗೂ ಗಮನೀಯವೇ ಆಗಿದೆ. ಮಂಡ್ಯ ಜಿಲ್ಲೆಯ ಕಲಾಪರಂಪರೆಗೆ ಇಲ್ಲಿನ ಮಣ್ಣಿನ ಕೊಡುಗೆಯೂ ಅಪಾರವೇ ಸರಿ. ಹೀಗಿದ್ದೂ ಹೊಸತನಕ್ಕೆ ತೆರೆದುಕೊಳ್ಳುವ, ರೂಢಿಸಿಕೊಳ್ಳುವ ತುರ್ತು ಇದ್ದೇ ಇತ್ತು ಎನ್ನುವುದೂ ಅಷ್ಟೇ ಸಮೀಚೀನ. ಹಾಗೇ ಚಿಂತನಾಶೀಲರಾದವರ ಮನದಲ್ಲಿ ಗುರಿಯೊಂದನ್ನು ಇರಿಸಿಕೊಂಡು ಮುನ್ನಡೆಯುವ ಮಾರ್ಗವನ್ನು ಹುಡುಕುತ್ತಿದ್ದಾಗ ಹೊಳೆದದ್ದೇ ‘ಗಮ್ಯ’. ಗ್ರಾಮೀಣ ಭಾಗದ ಆಸಕ್ತರಿಂದ ಮೊದಲ್ಗೊಂಡು, ಪಟ್ಟಣವಾಸಿಗಳನ್ನೂ ಒಳಗೊಂಡು ಒಂದು ಶಿಷ್ಟ ತಂಡವಾಗಿ ರೂಪುಗೊಳ್ಳುತ್ತಾ ರಂಗಾಭ್ಯಾಸದ ಹಿನ್ನೆಲೆಯೊಂದಿಗೆ ಒಂದಿಷ್ಟು ಕಲಾಕೈಂಕರ್ಯವನ್ನು ಕೈಗೆತ್ತಿಕೊಳ್ಳುವ ಹುಮ್ಮಸ್ಸಿನಲ್ಲಿ ‘ಗಮ್ಯ’ ರೂಪುಗೊಳ್ಳುತ್ತಿದೆ. ನಿರಂತರ ಕಲಿಕೆಯ…
ಬಾರ್ಕೂರು : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಎಂ. ಜಿ. ಎಂ ಕಾಲೇಜು, ಉಡುಪಿ ಇವರ ಆಶ್ರಯದಲ್ಲಿ ದಿವಂಗತ ಸುಬ್ರಾಯ ಶಾಸ್ತ್ರಿಗಳ ತಾಯಿ ತಂದೆಯರ ಸ್ಮರಣಾರ್ಥವಾಗಿ ಆಯೋಜಿಸಲಾದ ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಚಿತ್ರಕಲಾ ಸ್ಪರ್ಧೆಯು ದಿನಾಂಕ 14 ಡಿಸೆಂಬರ್ 2024ರ ಶನಿವಾರದಂದು ನಡೆಯಿತು. ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪ. ಪೂ., ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀಮತಿ ಪುಷ್ಪಾಂಜಲಿ ಮಂಗಳೂರು, ಚಿತ್ರಕಲಾ ಶಿಕ್ಷಕ ಶ್ರೀ ರಮೇಶ್ ಅಂಬಾಡಿ, ಡಾ. ಜನಾರ್ದನ ಹಾವಂಜೆ ತೀರ್ಪುಗಾರರಾಗಿದ್ದರು. ಎಂ. ಜಿ. ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಡಾ. ಜನಾರ್ದನ ಹಾವಂಜೆ ಕಾರ್ಯಕ್ರಮ ಸಂಘಟಕರಾಗಿ ಸ್ಪರ್ಧೆಯನ್ನು ಆಯೋಜಿಸುವಲ್ಲಿ ಸಹಕರಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಆರ್. ಆರ್. ಸಿ. ಇದರ ಸಹ ಸಂಶೋಧಕ ಡಾ. ಅರುಣ್…
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ನಾಟಕ ಪ್ರದರ್ಶನವು ದಿನಾಂಕ 21 ಡಿಸೆಂಬರ್ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಲಿದೆ. ಈ ಸಂಭ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರಾದ ಜೆ. ಲೋಕೇಶ್ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿರುವರು. ಪ್ರಮೋದ್ ಶಿಗ್ಗಾಂವ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಂಡ್ಯದ ಕರ್ನಾಟಕ ಸಂಘ (ರಿ.) ಅಭಿನಯಿಸುವ ಕೆ.ವಿ. ಶಂಕರೇಗೌಡರ ಜೀವನಾಧಾರಿತ ನಾಟಕ ‘ನಿತ್ಯಸಚಿವ’ ಪ್ರದರ್ಶನಗೊಳ್ಳಲಿದೆ.
ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಆಯೋಜಿಸುವ ‘ಸುನಂದಾ ಬೆಳಗಾಂವಕರ [ವ್ಯಕ್ತಿತ್ವ-ಸಾಹಿತ್ಯ]’ ಪುಸ್ತಕ ಲೋಕಾರ್ಪಣಾ ಸಮಾರಂಭವು ದಿನಾಂಕ 29 ಡಿಸೆಂಬರ್ 2024ರ ರವಿವಾರದಂದು ಸಂಜೆ ಐದು ಘಂಟೆಯಿಂದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿರುವ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಪ್ರೊ. ರಾಘವೇಂದ್ರ ಪಾಟೀಲ ಕೃತಿ ಲೋಕಾರ್ಪಣೆಗೊಳಿಸಲಿರುವರು. ಯುವ ಸಾಹಿತಿಗಳಾದ ಶ್ರೀ ವಿಕಾಸ ಹೊಸಮನಿ ಕೃತಿಯ ಕುರಿತು ಮಾತನಾದಲಿದ್ದು, ಕೃತಿಯ ಲೇಖಕರಾದ ಡಾ. ಸುಭಾಷ ಪಟ್ಟಾಜೆ ಉಪಸ್ಥಿತರಿರುವರು. ಅತಿಥಿಗಳಾಗಿ ಪ್ರಕಾಶಕರಾದ ಡಾ. ವೈಜಯಂತಿ ಸೂರ್ಯನಾರಾಯಣ ಹಾಗೂ ಶ್ರೀಮತಿ ಸೀಮಾ ಕುಲಕರ್ಣಿ ಭಾಗವಹಿಸಲಿದ್ದಾರೆ. ಡಾ. ಸುಭಾಷ್ ಪಟ್ಟಾಜೆ : ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ…
ಕುಂದಾಪುರ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಚಿಣ್ಣರ ತಾಳಮದ್ದಳೆ ‘ಸಿನ್ಸ್ 1999 ಶ್ವೇತಯಾನ-85’ ಕಾರ್ಯಕ್ರಮ ದಿನಾಂಕ 16 ಡಿಸೆಂಬರ್ 2024ರಂದು ಕುಂದಾಪುರದ ಕುಂದೇಶ್ವರ ದೇಗುಲದಲ್ಲಿ ನಡೆಯಿತು. ಶ್ರೀಮತಿ ಶ್ಯಾಮಲ ಶ್ರೀ ಲಕ್ಷ್ಮೀಶ ವರ್ಣ ಪ್ರಾಯೋಜಕತ್ವದಲ್ಲಿ ಬೀಜಾಡಿ ರಾಮಚಂದ್ರ ತೌಳ ಸಂಸ್ಮರಣೆ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ಕುಂದೇಶ್ವರ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ ಮಾತನಾಡಿ “ಯಕ್ಷಗಾನ ಕಲೆಯನ್ನು ಮಕ್ಕಳ ಮೂಲಕ ಬೆಳೆಸುವುದು ಅತ್ಯಂತ ಸೂಕ್ತ. ಪರಿಶುದ್ಧ ಕನ್ನಡ ಭಾಷೆಯ ಸಾಂಸ್ಕೃತಿಕವಾದ ಈ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಯಶಸ್ವೀ ಕಲಾವೃಂದದ ಕಾರ್ಯ ಶ್ಲಾಘನೀಯವಾದದ್ದು. ಅವಿರತ ಪ್ರಯತ್ನದಿಂದ ಸದಾ ಸಾಗಿ ಬಂದು ಬೆಳ್ಳಿ ಹಬ್ಬವನ್ನು ಆಚರಿಸುವುದು ಸಣ್ಣ ವಿಷಯವಲ್ಲ. ಸಂಸ್ಥೆ ಮಕ್ಕಳ ತಂಡದಿಂದ ಬೆಳವಣಿಗೆ ಸಾಧಿಸಿದೆ. ಸಾಧನೆಗೈದ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರುವಲ್ಲಿ ಸಮಾಜದ ಹೊಣೆಗಾರಿಕೆ ಬಹಳಷ್ಟು ಇದೆ. ಬೀಳದಂತೆ ಪೋಷಿಸಬೇಕಾದದ್ದು ಕಲಾಭಿಮಾನಿಗಳ ಕರ್ತವ್ಯ.” ಎಂದರು. ಆಡಳಿತ ಮಂಡಳಿಯ ಸದಸ್ಯ ಜಿ. ಎಸ್.…
ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘ (ರಿ.)ವು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಲೇಖಕಿಯರಿಗಾಗಿ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದೆ. ಸಣ್ಣ ಕತೆಗಳ ಸಂಕಲನ – 2024 ಜನವರಿಯಿಂದ ದಶಂಬರ್ ತಿಂಗಳ ಕೊನೆಯ ಒಳಗೆ ಪ್ರಕಟಿತವಾದ ಸಣ್ಣ ಕಥಾ ಸಂಕಲನ. ಅತ್ಯುತ್ತಮ ಕಥಾಸಂಕಲನಕ್ಕೆ ಬಹುಮಾನ : ಪ್ರಾಯೋಜಕರು – ಶ್ರೀಮತಿ ಯಶೋದಾ ಜೆನ್ನಿ ಸ್ಮೃತಿ ಸಂಚಯ, ಹಿರಿಯಡ್ಕ, ಉಡುಪಿ ತಾಲೂಕು. ಏಕಾಂಕ ನಾಟಕ ರಚನಾ ಹಸ್ತಪ್ರತಿ ಸ್ಪರ್ಧೆ : ಸುಮಾರು ಒಂದು ಗಂಟೆ ಅವಧಿಯಲ್ಲಿ ಅಭಿನಯಿಸಬಹುದಾದ (ಫುಲ್ ಸ್ಕೇಪ್ ಹಾಳೆಯಲ್ಲಿ ಡಿ.ಟಿ.ಪಿ. ಮಾಡಿದ 30ರಿಂದ 35 ಪುಟ) ಸಾಮಾಜಿಕ, ಚಾರಿತ್ರಿಕ ಅಥವಾ ಪೌರಾಣಿಕ ನಾಟಕ ಕೃತಿ. ಅತ್ಯುತ್ತಮ ಕೃತಿಗೆ ಬಹುಮಾನ : ಪ್ರಾಯೋಜಕರು – ಸಂದೀಪ ಸಾಹಿತ್ಯ ಪ್ರಕಾಶನ, ಆತ್ರಾಡಿ, ಉಡುಪಿ- 576107. ಸ್ಪರ್ಧಿಗಳು ತಮ್ಮ ಕೃತಿಗಳನ್ನು ಎರಡೆರಡು ಪ್ರತಿಗಳಂತೆ ದಿನಾಂಕ 15 ಫೆಬ್ರವರಿ 2025ರ ಮೊದಲು ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಮಾರ್ಚ್ ತಿಂಗಳಲ್ಲಿ ಸ್ಪರ್ಧೆಯ…
ಮಡಿಕೇರಿ : ಶ್ರೀಮತಿ ರಮ್ಯ ಕೆ.ಜಿ. ಮಂಡ್ಯದಲ್ಲಿ ದಿನಾಂಕ 20 ಡಿಸಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಲಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದವರು. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮೂರ್ನಾಡಿನಲ್ಲಿ ಪಡೆದಿದ್ದು, ವಿರಾಜಪೇಟೆಯ ಸರ್ವೋದಯ ಡಿ.ಇಡಿ ಕಾಲೇಜಿನಲ್ಲಿ ಟೀಚರ್ ಟ್ರೈನಿಂಗ್ ಪಡೆದು, ಪ್ರಸ್ತುತ ಎಮ್ಮೆಮಾಡು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಮೊದಲ ಪ್ರಕಟಿತ ಕೃತಿ ‘ದಾಹಗಳ ಮೈ ಸವರುತ್ತಾ…’ ಎಂಬ ಕವನ ಸಂಕಲನ. ಈ ಕೃತಿಗೆ ಈ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಸಿಕ್ಕಿದೆ. ‘ಗಾಳಿಯಾಡುತ್ತಿರಲಿ ಗಾಯ’ (ಕವನ ಸಂಕಲನ), ‘ಅಮ್ಮ ಚೂರು ನಿಟಿಕೆ ಮುರಿಯೆ’ (ಮಕ್ಕಳಿಗಾಗಿ ಕವಿತೆಗಳು), ‘ಬೆನ್ನ ಹಾದಿಯ ಚಿಟ್ಟೆ’ (ಗಜ಼ಲ್ ಸಂಕಲನ) ಈಗಾಗಲೇ ಪ್ರಕಟಣೆಗೆ ಸಿದ್ಧವಾಗಿರುವ ಕೃತಿಗಳು. ಓದು, ಬರಹ, ತಿರುಗಾಟ ಇವರ ಮೆಚ್ಚಿನ ಹವ್ಯಾಸ. ಈ ಬಾರಿ ನಡೆಯುವ ಅಖಿಲ ಭಾರತ…
ಹುಬ್ಬಳ್ಳಿ : ಅವ್ವ ಸೇವಾ ಟ್ರಸ್ಟ್ ಆಯೋಜಿಸಿದ್ದ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ 14ನೇ ಪುಣ್ಯಸ್ಮರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 12 ಸಾಧಕರಿಗೆ ‘ಅವ್ವ’ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 15 ಡಿಸೆಂಬರ್ 2024 ರಂದು ಹುಬ್ಬಳ್ಳಿಯ ‘ಗುಜರಾತ್ ಭವನ’ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಮಾತನಾಡಿ “ನಾಡಿನ ಮುತ್ಸದ್ದಿ ನಾಯಕರು ಹಾಗೂ ವಿಧಾನ ಪರಿಷತ್ ಇದರ ಸಭಾಪತಿಯಾದ ಬಸವರಾಜ ಹೊರಟ್ಟಿಯವರು ಅವರ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಹೆಸರಲ್ಲಿ ಸಾಧಕರಿಗೆ ಕೊಡಮಾಡುವ ‘ಅವ್ವ ಪ್ರಶಸ್ತಿ’ಯು ರಾಜ್ಯಕ್ಕೆ ಮಾದರಿಯಾದುದು. ಜನರ ಶ್ರೇಯೋಭಿವೃದ್ಧಿಗೆ ಜನಸೇವಕನಾಗಿ ಶ್ರಮಿಸುತ್ತಿರುವ ಬಸವರಾಜ ಹೊರಟ್ಟಿ ಅವರಂತಹ ಪುತ್ರನಿಗೆ ಜನ್ಮ ನೀಡಿದ ತಾಯಿ ಗುರವ್ವ ಅವರು ಮಗನಿಗೆ ಅತ್ಯುತ್ತಮ ಸಂಸ್ಕಾರ ನೀಡಿರುವುದು ಹೊರಟ್ಟಿಯವರ ಭವಿಷ್ಯ ರೂಪಿಸುವಲ್ಲಿ ಆಗಿನ ಕಾಲದಲ್ಲಿ ಅವರು ಪಟ್ಟಿರುವ ಶ್ರಮ ಎದ್ದು ಕಾಣುತ್ತದೆ. ಆ ಮಹಾ ತಾಯಿಯನ್ನು ಸ್ಮರಿಸೋಣ.” ಎಂದು ನುಡಿದರು. ಪ್ರಶಸ್ತಿ ಪ್ರದಾನ ಮಾಡಿ…
ಬೆಳ್ತಂಗಡಿ : ಮಂಗಳೂರು ಯಕ್ಷಧ್ರುವ ಪಟ್ಟ ಫೌಂಡೇಶನ್ ಇದರ ಬೆಳ್ತಂಗಡಿ ಘಟಕದಿಂದ ಯಕ್ಷಸಂಭ್ರಮ-2024 ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಡಿಸೆಂಬರ್ 2024ರಂದು ಗುರುವಾಯನಕೆರೆ ನವಶಕ್ತಿ – ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ “ಯಕ್ಷಗಾನಕ್ಕೆ ಹೊಸ ಕಲ್ಪನೆ ಕೊಟ್ಟವರು ಪಟ್ಲ ಸತೀಶ್ ಶೆಟ್ಟಿಯಾದರೆ ಅದಕ್ಕೆ ಶಶಿಯಾಗಿ ಬೆಳಕು ಕೊಟ್ಟವರು ಶಶಿಧರ್ ಶೆಟ್ಟಿ. ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನಸ್ಸು ಕರಾವಳಿಯಲ್ಲಿದೆ. ಯಕ್ಷಗಾನವನ್ನು ಈ ರೀತಿಯೂ ನಡೆಸಬಹುದು ಎಂಬ ಕಲ್ಪನೆ ಬೆಳ್ತಂಗಡಿಗೆ ನೀಡುವ ಮೂಲಕ ಬೆಳ್ತಂಗಡಿಯ ಜನತೆ ಹಿಂದೆಂದೂ ಕಂಡರಿಯದಂತಹ ಯಕ್ಷಲೋಕಕ್ಕೆ ಕರೆದೊಯ್ದಿದ್ದಾರೆ. ಯಕ್ಷಗಾನ ಕಲೆಯ ಮೂಲಕ ಎಲ್ಲ ಜಾತಿ, ಧರ್ಮವನ್ನು ಒಗ್ಗೂಡಿಸುವ ಕೆಲಸವಾಗಿದೆ.” ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ “25 ವರ್ಷದ ವೃತ್ತಿ ಜೀವನದ ಇತಿಹಾಸದಲ್ಲಿ ಯಕ್ಷಗಾನಕ್ಕಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಸಂಯೋಜಿಸಿರುವುದು ಇದೇ ಪ್ರಥಮ. ಕರ್ನಾಟಕದಾದ್ಯಂತ ನಮ್ಮ ಫೌಂಡೇಶನ್…
ಮಡಿಕೇರಿ : ಸುಬ್ರಾಯ ಸಂಪಾಜೆಯವರು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನ ಪಡೆಯಲಿದ್ದಾರೆ. ಇವರು ದಕ್ಷಿಣ ಕನ್ನಡದ ಸುಳ್ಯ ತಾಲೂಕಿನವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಂಪಾಜೆಯಲ್ಲಿ ಪೂರೈಸಿದ ಸುಬ್ರಾಯರು ಸುಳ್ಯ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ಬಿ.ಎ. ಓದಿ ಮುಂದೆ ಮಂಗಳೂರು ವಿಶ್ವ ವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು. 1995ರಲ್ಲಿ ಮಡಿಕೇರಿ ಆಕಾಶವಾಣಿಗೆ ಉದ್ಘೋಷಕರಾಗಿ ನೇಮಕಗೊಂಡ ಇವರು ಬಾನುಲಿಯ ಸೇವೆಯ ಜೊತೆಗೆ ಗಮಕ, ಯಕ್ಷಗಾನ ಹಾಡುಗಾರಿಕೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ‘ಪುಟ್ಟಕ್ಕ’ ಇದು ಸುಬ್ರಾಯ ಸಂಪಾಜೆಯವರು ಬರೆದ ಕಿರು ಕಾದಂಬರಿ. ಇವರ ‘ರಸ ರಾಮಾಯಣ’ ಮೂಲ ರಾಮಾಯಣವನ್ನಾಧರಿಸಿದ ರಸಪ್ರಶ್ನೆ ಪುಸ್ತಕ. ‘ಕೊಡಗು ಕ್ವಿಝ್’ ಕೊಡಗು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಕೋಶ. ವಿದ್ವತ್ ವಲಯದಲ್ಲಿ ಸಂಪಾಜೆಯವರಿಗೆ ಅಪಾರ ಜನಪ್ರಿಯತೆ ಮತ್ತು ಗೌರವ ತಂದುಕೊಟ್ಟ ಅಧ್ಯಯನ ಗ್ರಂಥ ‘ಪುರಾಣ ಯಾನ’. ಇದು ಸಂಸ್ಕೃತದ ಹದಿನೆಂಟು ಮತ್ತು…