Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ವಿವಿಧ ಸಂಘಟನೆಗಳ ಪದಾಧಿಕಾರಿಯಾಗಿ, ವಿಶ್ವ ಸಾಹಿತ್ಯ ಬಳಗದ ಸಂಚಾಲಕಿಯಾಗಿ, ಸಾಹಿತ್ಯ, ಸಾಮಾಜಿಕ ಸೇವಾ ಧರ್ಮವನ್ನು ನಿರಂತರತೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ರೇಖಾ ಸುದೇಶ್ ರಾವ್ ಇವರು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಭವನದ ‘ರಜತ ಸಂಭ್ರಮ’ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮ ಹಾಗೂ ‘ಮನೆಗೊಂದು ಗ್ರಂಥಾಲಯ,-ಪುಸ್ತಕ ಸತ್ಯ ಪುಸ್ತಕ ನಿತ್ಯ’ ಜನಜಾಗೃತಿ ಮೂಡಿಸುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕಾಸರಗೋಡು ಕನ್ನಡ ಭವನದ ನಿರ್ದೇಶಕರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ನಾಮನಿರ್ದೇಶನ ಮಾಡಿದ್ದು, ಕನ್ನಡ ಭವನದಲ್ಲಿ ಗೌರವ ಅಧ್ಯಕ್ಷರಾದ ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅನುಮೋದಿಸಿದರು. ಸರ್ವಾನುಮತದಿಂದ ಆಯ್ಕೆಯಾದ ಶ್ರಿಮತಿ ರೇಖಾ ಸುದೇಶ್ ರಾವ್ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ ಕನ್ನಡ ಭವನ ಉಚಿತ ವಸತಿ ಸೌಕರ್ಯ, ಕನ್ನಡ…
ಮೂಡುಬಿದಿರೆ : ವೈಭವದಿಂದ ಅಲಂಕೃತಗೊಂಡ ಆಳ್ವಾಸ್ ವಿರಾಸತ್ ಸಭಾಂಗಣದಲ್ಲಿ ದಿನಾಂಕ 13 ಡಿಸೆಂಬರ್ 2024ರಂದು ಕೋಲ್ಕತ್ತಾದಿಂದ ಬಂದ ನೀಲಾದ್ರಿ ಕುಮಾರ್ ಸಿತಾರ್- ಝಿತಾರ್ ತರಂಗಗಳ ಕಂಪನದ ಅಲೆ ಸೃಷ್ಟಿಸಿದರು. ನೀಲಾದ್ರಿಯ ಬೆರಳುಗಳ ಸಂಚಲನದ ಕಂಪನ-ತರಾಂಗಂತರಂಗಕ್ಕೆ ಆಳ್ವಾಸ್ ವಿರಾಸತ್‌ನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರವೇ ನಿನಾದದಲ್ಲಿ ತುಂಬಿತ್ತು. ತಾವೇ ಅಭಿವೃದ್ಧಿ ಪಡಿಸಿದ ಎಲೆಕ್ಟ್ರಿಕ್ ಸಿತಾರ್ ಕೆಂಪು ವರ್ಣದ ‘ಝಿತಾರ್’ ಮೂಲಕ ಕಛೇರಿ ಆರಂಭಿಸಿದ ನೀಲಾದ್ರಿ, ತಮ್ಮದೇ ಸಂಯೋಜನೆಯ ‘ಸಮ್ಮಿಲನ’ (ಫ್ಯೂಜನ್) ಮೂಲಕ ಕಛೇರಿಗೆ ನಾಂದಿ ಹಾಡಿದರು. ಇದು ‘ಸೌಂಡ್ ಚೆಕ್’ ಎಂದು ಹಾಸ್ಯವಾಡಿದ ನೀಲಾದ್ರಿ, ‘ರಾಗಗಳು ಇನ್ನಷ್ಟೇ ಶುರುವಾಗ ಬೇಕು’ ಎಂದು ಪ್ರೇಕ್ಷಕರಿಗೆ ಪಂಚ್ ನೀಡಿದರು. ‘ಗ್ರೇಟ್ ಗ್ಯಾಂಬ್ಲರ್’ ಸಿನಿಮಾದ ‘ದೋ ಲಬ್ಜೋ ಕೀ ಹೇ’ ನಾದದ ಮೂಲಕ ಮತ್ತೆ ಚಾಲನೆ ನೀಡಿದ ಅವರು, ಬಳಿಕ ‘ಕರ್ಜ್’ ಸಿನಿಮಾದ ‘ಏಕ್ ದಿವಾನಾ ಥಾ..’ ಸ್ವರ ನುಡಿಸಿದರು. ಮಹಾತ್ಮ ಗಾಂಧೀಜಿಯ ನೆಚ್ಚಿನ ‘ವೈಷ್ಣವ ಜನತೋ..’ ನುಡಿಸಿದರು. ಇದರ ಕನ್ನಡ ಅವತರಣಿಕೆ,…
ಬೆಂಗಳೂರು : ಕುವೆಂಪು ಕರ್ನಾಟಕ ಜನಪರ ವೇದಿಕೆ (ನೋಂ) ಇದರ ವತಿಯಿಂದ ದಿನಾಂಕ 28 ಡಿಸೆಂಬರ್ 2024ರ ಶನಿವಾರದಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಶ್ರೀ ಸಂದೇಶ್ ಕುಂಬಾರ್ ಇವರ ಸಾರಥ್ಯದಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ವಿಚಾರ ಸಂಕೀರಣ, ಮುಖ್ಯ ಅತಿಥಿಗಳ ಹಿತನುಡಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾರಂಭದ ಕವಿಗೋಷ್ಠಿಯಲ್ಲಿ ತಾವು ಭಾಗವಹಿಸಲು ಇಚ್ಛಿಸಿದಲ್ಲಿ ಡಾ. ಸುನೀಲ್ ಕುಮಾರ್, ಇವರ ದೂರವಾಣಿ 9740369046 ಗೆ ತಮ್ಮ ಹೆಸರು, ಊರು, ದೂರವಾಣಿ ಸಂಖ್ಯೆಯನ್ನು ನಮೂದಿಸಿ ವಾಟ್ಸ ಅಪ್ ಮಾಡಿ ನೋಂದಾಯಿಸಲು ಸೂಚಿಸಲಾಗಿದೆ.
ಸಾಲಿಗ್ರಾಮ : ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಸಹಯೋಗದೊಂದಿಗೆ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಆಯೋಜಿಸುವ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಇದರ ಉದ್ಘಾಟನಾ ಸಮಾರಂಭವನ್ನು ದಿನಾಂಕ 15 ಡಿಸೆಂಬರ್ 2024ರಂದು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ವಠಾರದಲ್ಲಿ ಸಂಜೆ 6-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕುಂದಾಪುರ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಇವರ ಅಧ್ಯಕ್ಷತೆಯಲ್ಲಿ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಡಾ. ಕೆ.ಎಸ್. ಕಾರಂತ ಇವರು ಈ ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ದಿನಾಂಕ 15 ಡಿಸೆಂಬರ್ 2024ರಂದು ಹಂಗಾರಕಟ್ಟೆ ಚೇತನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ವನವಿಲಾಸ’ ಮತ್ತು ಕೋಟ ವಿವೇಕ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ದ್ರೌಪದಿ ಪ್ರತಾಪ’, ದಿನಾಂಕ 16 ಡಿಸೆಂಬರ್ 2024ರಂದು ಕುಂದಾಪುರ ಬೀಜಾಡಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ರಾಮಾಶ್ವಮೇಧ’ ಮತ್ತು ಕೋಟ ಗಿಳಿಯಾರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಅಭಿಮನ್ಯು ಕಾಳಗ’, ದಿನಾಂಕ 17 ಡಿಸೆಂಬರ್ 2024ರಂದು ಕೋಟ ಮಣೂರು ಸರಕಾರಿ…
ಈಶ್ವರಮಂಗಲ : ಶ್ರೀ ಅಯ್ಯಪ್ಪ ಸೇವಾ ಸಮಿತಿ ಬೆಳ್ಳಿಚೆಡವು ಈಶ್ವರಮಂಗಲ ಇದರ ದ್ವಿತೀಯ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ದೀಪೋತ್ಸವದ ಪ್ರಯುಕ್ತ ದಿನಾಂಕ 12 ಡಿಸೆಂಬರ್ 2024ರಂದು ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಮಹಿಳಾ ಸದಸ್ಯರಿಂದ ‘ಸಮರ ಸನ್ನಾಹ – ಭೀಷ್ಮ ಸೇನಾಧಿಪಥ್ಯ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಯಕ್ಷಗುರು ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ಜರಗಿದ ಈ ತಾಳಮದ್ದಳೆಯ ಹಿಮ್ಮೇಳದಲ್ಲಿ ಮೋಹನ ಮೆಣಸಿನಕಾನ, ಮತ್ತು ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರಮಂಗಲ ಭಾಗವತರಾಗಿ ಕಾಣಿಸಿಕೊಂಡರು. ಚಂಡೆ ಮದ್ದಳೆ ವಾದನದಲ್ಲಿ ವಿಷ್ಣುಶರಣ ಬನಾರಿ ಹಾಗೂ ಶ್ರೀಧರ ಆಚಾರ್ಯ ಈಶ್ವರಮಂಗಲ ಸಹಕರಿಸಿದರು. ಅರ್ಥಧಾರಿಗಳಾಗಿ ಸರಿತಾ ರಮಾನಂದ ರೈ ದೇಲಂಪಾಡಿ, ಶಾಂತಕುಮಾರಿ ದೇಲಂಪಾಡಿ, ಜಲಜಾಕ್ಷಿ ಸತೀಶ್ ರೈ ಬೆಳ್ಳಿಪ್ಪಾಡಿ, ನಳಿನಾಕ್ಷಿ ಹರೀಶ್ ಗೌಡ ಮುದಿಯಾರು, ಸುಜಾತ ಮೋಹನ್ ದಾಸ ರೈ ದೇಲಂಪಾಡಿ, ಶೀಲಾವತಿ ಹೇಮನಾಥ್ ಕೇದಗಡಿ, ಸುಮಲತಾ ಉದಯ್ ಕುಮಾರ್ ದೇಲಂಪಾಡಿ, ಪವಿತ್ರ ದಿವಾಕರ ಮುದಿಯಾರು, ಕುಸುಮಾವತಿ ಜಯಪ್ರಕಾಶ್ ಕುತ್ತಿ ಮುಂಡ…
ಕಾಸರಗೋಡು : ಸಂಘಟಕ, ಲೇಖಕ ಬಹುಮುಖ ಪ್ರತಿಭೆ ಡಾ. ಹೇಮಂತ ಕುಮಾರ್ ಬಿ. ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ, ಕರ್ನಾಟಕ ರಾಜ್ಯ ಹಾಸನ ಜಿಲ್ಲೆಯ ಕನ್ನಡ ಭವನ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ಕನ್ನಡ ಭವನ ನಿರ್ದೇಶಕರಾದ ಡಾ. ಕೊಲಚಪ್ಪೆ ಗೋವಿಂದ ಭಟ್ ಅನುಮೋದಿಸಿದರು. ಸರ್ವಾನುಮತದಿಂದ ಆಯ್ಕೆಯಾದ ಡಾ. ಹೇಮಂತ್ ಚಿನ್ನು ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಾಯ, ಕಾಸರಗೋಡು ಪ್ರದೇಶಕ್ಕೆ ಕರ್ನಾಟಕದಿಂದ ಆಗಮಿಸುವ ಸಾಹಿತ್ಯ, ಸಾಂಸ್ಕೃತಿಕ ರಾಯಬಾರಿಗಳಿಗೆ ‘ಉಚಿತ ವಸತಿ ಸೌಕರ್ಯ’ ಹಾಗೂ ಕನ್ನಡ ಭವನ ರಜತ ಸಂಭ್ರಮ ವಿಶೇಷ…
ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ ದಿನಾಂಕ 15 ಡಿಸೆಂಬರ್ 2024ಕ್ಕೆ ಹದಿನಾಲ್ಕು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಕೊಡಗು, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ‘ಅರೆಭಾಷೆ ದಿನಾಚರಣೆ’ ಕಾರ್ಯಕ್ರಮಗಳು ಜರುಗಲಿವೆ. ಕೊಡಗು ಜಿಲ್ಲೆಯಲ್ಲಿ ಕುಶಾಲನಗರ ಪಟ್ಟಣ ಮತ್ತು ಐಗೂರು ಗ್ರಾಮ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಹಾಗೂ ಬೆಳ್ತಂಗಡಿ ಹಾಗೆಯೇ ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ಅರೆಭಾಷೆ ದಿನಾಚರಣೆ ನಡೆಯಲಿದೆ. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಔನ್ನತ್ಯಕ್ಕೆ ಕೊಂಡೊಯ್ಯುವಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಅರೆಭಾಷೆಯಲ್ಲಿ ಪುಸ್ತಕ ಪ್ರಕಟಣೆ, ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮ ಹಾಗೂ ಅರೆಭಾಷೆ ಬರವಣಿಗೆಗೆ ಹೆಚ್ಚು ಒತ್ತು ನೀಡುವುದು. ಜೊತೆಗೆ ಸಂಶೋಧನೆಗೆ ಗಮನಹರಿಸುವಲ್ಲಿ ಅಕಾಡೆಮಿ ಕಾರ್ಯಪ್ರವೃತ್ತವಾಗಿದೆ. ಅರೆಭಾಷೆ ಗಡಿ ಉತ್ಸವ ಕಾರ್ಯಕ್ರಮವನ್ನು ಈಗಾಗಲೇ ಕಾಸರಗೋಡಿನ ಬಂದ್ಯಡ್ಕ, ಸುಳ್ಯ ತಾಲೂಕಿನ ಮಂಡೆಕೋಲು ಹಾಗೂ ಕೊಡಗು ಜಿಲ್ಲೆಯ ಚೆಯ್ಯಂಡಾಣೆ ಗ್ರಾಮದಲ್ಲಿ ಆಯೋಜಿಸಿ, ಗ್ರಾಮೀಣ…
ಶಿರ್ವ : ಪ್ರದರ್ಶನ ಸಂಘಟನಾ ಸಮಿತಿ ಶಿರ್ವ ಸಹಯೋಗದೊಂದಿಗೆ ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಆಯೋಜಿಸುವ ‘ಕಿಶೋರ ಯಕ್ಷಗಾನ ಸಂಭ್ರಮ 2024’ ಇದರ ಉದ್ಘಾಟನಾ ಸಮಾರಂಭವು ದಿನಾಂಕ 15 ಡಿಸೆಂಬರ್ 2024ರಂದು ಶಿರ್ವದ ಮಹಿಳಾ ಸೌಧದಲ್ಲಿ ಸಂಜೆ 5-00 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಿವೃತ್ತ ಉಪನ್ಯಾಸಾಕಿ ಶ್ರೀಮತಿ ಶಾರದಾ ಎಂ. ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದಿನಾಂಕ 15 ಡಿಸೆಂಬರ್ 2024ರಂದು ಇನ್ನಂಜೆಯ ಎಸ್.ವಿ.ಎಚ್. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಶಶಿಪ್ರಭಾ ಪರಿಣಯ’ ಮತ್ತು ಕುತ್ಯಾರು ಸೂರ್ಯಚೈತನ್ಯ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಸುದರ್ಶನ ವಿಜಯ’, ದಿನಾಂಕ 16 ಡಿಸೆಂಬರ್ 2024ರಂದು ಮಣಿಪುರ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ವೀರವರ್ಮ ವಿಜಯ’ ಮತ್ತು ಕಟಪಾಡಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ‘ಅಭಿಮನ್ಯು ಕಾಳಗ’, ದಿನಾಂಕ 17 ಡಿಸೆಂಬರ್ 2024ರಂದು ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ…
ಕುಡುಪು : ಯಕ್ಷ ಮಿತ್ರರು ಕುಡುಪು ಇವರ ವತಿಯಿಂದ ಷಷ್ಠಿ ಮಹೋತ್ಸವದ ಪ್ರಯುಕ್ತ ದಿನಾಂಕ 07 ಡಿಸೆಂಬರ್ 2024ರಂದು ಕುಡುಪು ದೇವಸ್ಥಾನದಲ್ಲಿ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೂಡಬಿದ್ರೆಯ ರಾಜಕೀಯ ನೇತಾರ, ಧಾರ್ಮಿಕ ಮುಂದಾಳು ಶ್ರೀ ಅಭಯಚಂದ್ರ ಜೈನ್ ಮಾತನಾಡಿ “ಯಕ್ಷಗಾನವು ಜೀವಂತ ಕಲೆ. ಕಲಾಶ್ರಯವನ್ನು ಬಯಸುವ ಅನೇಕ ಕಲಾವಿದರನ್ನು ರಂಗಸ್ಥಳಕ್ಕೆ ಪರಿಚಯಿಸುತ್ತದೆ. ಇದು ಕಲಾವಿದರಲ್ಲಿನ ಸಂಪೂರ್ಣ ಪ್ರತಿಭೆಯನ್ನು ಹೊರಹಾಕಬಲ್ಲ ಸ್ವತಂತ್ರ ಕಲೆ. ಇದರಲ್ಲೇ ಸಂತೃಪ್ತಿ ಪಡೆದ ಕಲಾವಿದರು ಅಸಂಖ್ಯಾತ. ಈ ಕಲೆಯ ಉಳಿವಿಗಾಗಿ ಯಕ್ಷ ಮಿತ್ರರು, ಕುಡುಪು ಒಂದೂವರೆ ದಶಕಕ್ಕೂ ಮೀರಿ ಇಲ್ಲಿನ ಷಷ್ಠಿ ಉತ್ಸವದಂದು ಯಕ್ಷಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಸಂಪ್ರದಾಯದಂತೆ ಇಂದೂ ಒಬ್ಬ ಶ್ರೇಷ್ಠ ಕಲಾವಿದನನ್ನು ಗೌರವಿಸಿ-ಸನ್ಮಾನಿಸಿರುವುದು ಶ್ಲಾಘನೀಯ. ಇದು ಈ ಕ್ಷೇತ್ರದ ಪ್ರಸಾದ. ಸಂಸ್ಥೆಯ ಉನ್ನತಿಗೂ ಇದು ಕಾರಣವಾಗುತ್ತದೆ. ಉಭಯತ್ರರಿಗೂ ಶುಭವಾಗಲಿ” ಎಂದು ನುಡಿದರು. ಈ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ, ದೇವಿ ಭಟ್ರು ಎಂದೇ ಖ್ಯಾತಿಯನ್ನು ಪಡೆದ ಸರವು ರಮೇಶ ಭಟ್ರು…
ಮಳವಳ್ಳಿ : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ರಂಗಬಂಡಿ ಮಳವಳ್ಳಿ (ರಿ.) ಆಯೋಜಿಸುವ ಒಂದು ತಿಂಗಳ ಮಕ್ಕಳ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ದಿನಾಂಕ 16 ಡಿಸೆಂಬರ್ 2024ರಂದು ಬೆಳಿಗ್ಗೆ 11-30 ಗಂಟೆಗೆ ಮಳವಳ್ಳಿಯ ಅಮೃತೇಶ್ವರನ ಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ದಿನಾಂಕ 16 ಡಿಸೆಂಬರ್ 2024ರಿಂದ 24 ಜನವರಿ 2025ರವೆರೆಗೆ ನಡೆಯಲಿದೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಶ್ರೀ ಚಂದ್ರಶೇಖರ್ ಇವರು ಈ ಶಿಬಿರದ ಉದ್ಘಾಟನೆ ಮಾಡಲಿದ್ದು, ರಂಗ ಸಂಘಟಕರು ಶ್ರೀ ಧನುಷ್ ಎನ್., ಶಾಲಾ ಮುಖ್ಯೋಪಾಧ್ಯರು ಶ್ರೀ ಮಹೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸ್ವಾಮಿ ಎ.ಸಿ., ಕಂದೇಗಾಲ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪಲತಾ, ಗ್ರಾಮ ಪಂಚಾಯತಿ ಸದಸ್ಯ ಶ್ರೀ ಪುಟ್ಟರಾಜು, ಸಮಾಜ ಸೇವಕ ಶ್ರೀ ಲಿಂಗರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಜಯಮ್ಮ ಮತ್ತು ಶ್ರೀಮತಿ ಭಾಗ್ಯಮ್ಮ ಇವರುಗಳು ಭಾಗವಹಿಸಲಿದ್ದಾರೆ.