Subscribe to Updates
Get the latest creative news from FooBar about art, design and business.
Author: roovari
ಮಂಜೇಶ್ವರ: ಮಂಜೇಶ್ವರದ ಯುವ ಸಾಹಿತಿ ಗಣೇಶ್ ಪ್ರಸಾದ್ ಮಂಜೇಶ್ವರ ಇವರ ‘ಚಿಲ್ಲಾ’ ಕಥಾ ಸಂಕಲನವು 22 ಡಿಸೆಂಬರ್ 2024ರಂದು ಅಪರಾಹ್ನ ಘಂಟೆ 2.30ಕ್ಕೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಭವನ ಗಿಳಿವಿಂಡುವಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಹಿರಿಯ ಕವಿ ಹಾಗೂ ಪತ್ರಕರ್ತರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಲ್ಲಿ ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕರಾದ ಕಾಸರಗೋಡು ಚಿನ್ನಾ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಪತ್ರಕರ್ತ ಹಾಗೂ ಲೇಖಕರಾದ ವಿಕ್ರಂ ಕಾಂತಿಕೆರೆ ಪುಸ್ತಕ ಪರಿಚಯ ಮಾಡಲಿದ್ದು, ಲೇಖಕರಾದ ಪ್ರೊ .ಪಿ. ಎನ್. ಮೂಡಿತ್ತಾಯ, ಕಲ್ಲಚ್ಚು ಪ್ರಕಾಶನದ ಪ್ರಕಾಶಕ ಹಾಗೂ ಸಾಹಿತಿಗಳಾದ ಮಹೇಶ ಆರ್. ನಾಯಕ್, ಖ್ಯಾತ ಲೇಖಕಿ ಡಾ. ಮಹೇಶ್ವರಿ ಯು., ನಿವೃತ್ತ ಶಿಕ್ಷಕಿ ಗಾಯಕಿ ಪ್ರಭಾ ನಾಯಕ್, ಲೇಖಕ, ಅಧ್ಯಾಪಕ ಹಾಗೂ ರಂಗಕರ್ಮಿಗಳಾದ ದಿವಾಕರ ಬಲ್ಲಾಳ್ ಮೊದಲಾದವರು ಉಪಸ್ಥಿತರಿರುವರು.
ಬೆಂಗಳೂರು : ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿ ನಮ್ಮಲ್ಲಿ ಅರಿವಿನ ಆತ್ಮ ಶಕ್ತಿಯನ್ನು ಹೆಚ್ಚಿಸುವ ಪುಸ್ತಕದ ಓದು ಸಮಾಜದ ಸರ್ವರೂ ರೂಢಿಸಿಕೊಳ್ಳಲೇಬೇಕಾದ ಉತ್ತಮ ಹವ್ಯಾಸ. ಸಾಮಾಜಿಕ ಮಾಧ್ಯಮದ ಹಾವಳಿಯಲ್ಲಿ ಯುವಜನತೆಯಲ್ಲಿ ಓದು ಕ್ಷೀಣಿಸಿದೆ ಎಂಬ ಅಪವಾದವನ್ನು ತಗ್ಗಿಸಿ ಮನೆ ಮನಗಳಲ್ಲಿ ಪುಸ್ತಕ ಓದಿನ ರುಚಿ ಹತ್ತಿಸಬೇಕು, ಈ ಕಾರ್ಯಕ್ಕಾಗಿ ಪುಸ್ತಕ ಓದುವ, ಬರೆಯುವ ಹಾಗೂ ತಲುಪಿಸುವ ವಿಧಾನಕ್ಕೆ ಇನ್ನಷ್ಟು ನಾವಿನ್ಯತೆಯನ್ನು ನೀಡಿ, ಆಧುನಿಕ ತಂತ್ರಜ್ಞಾನದ ಸ್ಪರ್ಶವಿಟ್ಟು ಕನ್ನಡ ಸಾಹಿತ್ಯದ ಔನ್ನತ್ಯಕ್ಕೆ ಶ್ರಮಿಸಬೇಕೆಂಬ ಮಹಾದಾಸೆಯಿಂದ ಪ್ರಾರಂಭವಾದ ಸಂಸ್ಥೆ ‘ಕ್ರಿಯೇಟಿವ್ ಪುಸ್ತಕ ಮನೆ’. ಪ್ರತಿಭಾವಂತ ಯುವ ಬರಹಗಾರರಿಗೆ ಒಂದೊಳ್ಳೆ ವೇದಿಕೆಯನ್ನು ಒದಗಿಸುವ ಜೊತೆಗೆ ಖ್ಯಾತ ಬರಹಗಾರರ ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳನ್ನು ಪ್ರಕಟಿಸುವ ಮೂಲಕ ಅಕ್ಷರ ಅಭಿಮಾನಿಗಳಿಗೆ ಜ್ಞಾನದ ಹೂರಣ ನೀಡಬೇಕೆನ್ನುವ ಕಲ್ಪನೆಯೊಂದಿಗೆ ವಿಧವಿಧವಾದ ಪುಸ್ತಕಗಳನ್ನು ಪ್ರಕಟಿಸುತ್ತಿದೆ. 1 ಜುಲೈ 2024ರಂದು ಏಕಕಾಲದಲ್ಲಿ ನಾಡಿನ ಹೆಸರಾಂತ ಸಾಹಿತಿಗಳ 15 ಪುಸ್ತಕಗಳನ್ನು ಖ್ಯಾತ ಬರಹಗಾರ ಜೋಗಿ ನಾಮಂಕಿತ ಗಿರೀಶ್ ರಾವ್ ಹತ್ವಾರ್ ಬಿಡುಗಡೆಗೊಳಿಸಿದ್ದರು. 15 ಡಿಸೆಂಬರ್…
ಮಡಿಕೇರಿ : ವಿಕೆ3 ಪಿಕ್ಚರ್ಸ್‌ನಡಿ ಸಿನಿಮಾ ನಿರ್ಮಾಪಕಿ, ಸಹ ನಿರ್ದೇಶಕಿ, ನಟಿ ಹಾಗೂ ಬರಹಗಾರ್ತಿ ಈರಮಂಡ ಹರಿಣಿ ವಿಜಯ್ ಇವರ ಮೂರನೇ ಪುಸ್ತಕ ‘ವಾಸ್ತವ'(ಮನಗಳ ಮಂಥನ) ಕಥಾ ಪುಂಜದ ಲೋಕಾರ್ಪಣಾ ಸಮಾರಂಭವು ದಿನಾಂಕ 11 ಡಿಸೆಂಬರ್ 2024ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಈರಮಂಡ ಹರಿಣಿ ವಿಜಯ್ “ಅಕ್ಷರಗಳಿಗೆ ಮತ್ತು ಓದುವ ಹವ್ಯಾಸಕ್ಕೆ ತನ್ನದೇ ಆದ ಶಕ್ತಿ ಇದ್ದು, ಸಾಹಿತ್ಯದಿಂದಲೂ ಸಾಮಾಜಿಕ ಬದಲಾವಣೆ ಸಾಧ್ಯ. ಇತ್ತೀಚೆಗೆ ಅಕ್ಷರಗಳಿಗಾಗಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಕೈಬರಹಗಳನ್ನು ಮರೆಯುವ ಪರಿಸ್ಥಿತಿ ಎದುರಾಗಿದೆ, ಈ ಬೆಳವಣಿಗೆ ಒಳ್ಳೆಯದಲ್ಲ. ಕೈಬರಹಕ್ಕೆ ತನ್ನದೇ ಆದ ಶಕ್ತಿ ಇದೆ, ಅಕ್ಷರಗಳನ್ನು ಯಾರೂ ಮರೆಯಬಾರದು. ಬರೆಯುವ ಮತ್ತು ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು.” ಎಂದು ಕರೆ ನೀಡಿದರು. ‘ವಾಸ್ತವ’ ಪುಸ್ತಕವನ್ನು ಲೋಕರ್ಪಣೆಗೈದ ಕನ್ನಡ ಸಾಹಿತ್ಯ ಪರಿಷತ್ ಇದರ ಜಿಲ್ಲಾ ಕೋಶಾಧಿಕಾರಿ ಎಸ್. ಎಸ್. ಸಂಪತ್ ಕುಮಾರ್ ಮಾತನಾಡಿ “ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು…
ದಾವಣಗೆರೆ : ದಾವಣಗೆರೆ ಲಿಟರರಿ ಫೋರಂ ವತಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಕಥಾ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಲಾಗಿದೆ. ಕತೆಯು 3,000 ಪದಗಳ ಮಿತಿಯಲ್ಲಿರಬೇಕು. ಕತೆ ಸ್ವಂತದ್ದಾಗಿದ್ದು, ಕಳುಹಿಸುವವರ ಪರಿಚಯ, ಭಾವಚಿತ್ರ ಹಾಗೂ ವಿಳಾಸ ಪ್ರತ್ಯೇಕ ಪುಟದಲ್ಲಿರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಆಯ್ಕೆಯಾದ ಒಟ್ಟು 3 ಬಹುಮಾನಿತ ಕತೆಗಳಿಗೆ ತಲಾ ರೂಪಾಯಿ 5,000 ನಗದು ಬಹುಮಾನ ನೀಡಲಾಗುವುದು. ಬಹುಮಾನಿತ 3 ಕತೆಗಳು ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗುವ 10 ಕತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತದೆ. ಕಥೆ ಕಳುಹಿಸಲು 31 ಡಿಸೆಂಬರ್ 2024 ಕೊನೆಯ ದಿನವಾಗಿದೆ. ಕತೆ ಕಳುಹಿಸಲು ವಯೋಮಿತಿ ಇಲ್ಲ. ಒಬ್ಬರು ಒಂದೇ ಕತೆಯನ್ನು ಇ-ಮೇಲ್ ಮೂಲಕ ಮಾತ್ರ ಕಳುಹಿಸಬೇಕು. ಇ-ಮೇಲ್: [email protected]
ಮೂಡುಬಿದಿರೆ : ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ದಿನಾಂಕ 12 ಡಿಸೆಂಬರ್ 2024ರಂದು 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಮೂರನೇ ದಿನದ ಗಾಯನದ ಬಳಿಕ ಮೂಡಿ ಬಂದ ಸಾಂಸ್ಕೃತಿಕ ವೈಭವದಲ್ಲಿ ಪ್ರೇಕ್ಷಕರೆಲ್ಲ ನೃತ್ಯ ರೂಪಕದ ಸಿಂಚನದಲ್ಲಿ ಮಿಂದೆದ್ದರು. ಆಶಿಂಬಂಧು ಚಟರ್ಜಿ ನಿರ್ದೇಶನದಲ್ಲಿ ಪ್ರಸ್ತುತಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರ ಕಥಕ್ ‘ವರ್ಷಧಾರೆ’ಯನ್ನೇ ಸುರಿಸಿತು. ತುಂತುರು ಮಳೆಯನ್ನು ಸಂಭ್ರಮಿಸುವ ಋತುವಿನ ದರ್ಶನ ನೀಡಿತು. ಉತ್ತರದ ಕಥಕ್ ಬಳಿಕ ನೃತ್ಯ ಲೋಕವು ದ್ವೀಪ ರಾಷ್ಟ್ರ ಶ್ರೀಲಂಕಾ ಸಂಸ್ಕೃತಿಗೆ ಹೆಜ್ಜೆ ಇಟ್ಟಿತು. ಅಖಿಲ ಪರಿಮಳನ್ ನಿರ್ದೇಶನದ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ‘ಭೂಮಿ’ ದ್ವೀಪ ದೇಶದ ಚಮತ್ಕಾರದ ಶಕ್ತಿಯೆಡೆಗೆ ಕೊಂಡೊಯ್ಯಿತು. ತಿರುಗುವ ಚಕ್ರ, ಹಾರುವ ಬೆಂಕಿ ಉಂಡೆ ಇತ್ಯಾದಿಗಳು ಸೊಬಗೇರಿಸಿದವು. ವಿಷ್ಣು, ಸಮನ್, ಕಾತರಂಗಂ, ಪಟ್ಟಿನಿ, ಕಾಳಿ ಮತ್ತು ಸುನಿಯಂ ಶ್ರೀಲಂಕಾದ ಪ್ರಮುಖ ದೇವ-ದೈವಗಳಾಗಿವೆ. ಅವರ ಆರಾಧನಾ ವಿಧಾನವಾಗಿ ನೃತ್ಯ ಬೆಳೆದು ಬಂದಿದೆ. ಶ್ರೀಲಂಕಾದ ಪ್ರಮುಖ ಪಟ್ಟಣವಾಗಿದ್ದ ‘ಕ್ಯಾಂಡಿ’ಯಲ್ಲಿ ಬೆಳೆದು ಬಂದ ನೃತ್ಯ…
ಮೈಸೂರಿನಲ್ಲಿ ‘ಸಂಚಲನ ಮೈಸೂರು’ ಇವರ ವತಿಯಿಂದ ನಡೆದ ‘ಮಹಿಳಾ ನಾಟಕೋತ್ಸವ’ದಲ್ಲಿ ದಿನಾಂಕ 05 ಡಿಸೆಂಬರ್ 2024ರಂದು ರಂಗಬಂಡಿ ಮಳವಳ್ಳಿ (ರಿ.) ತಂಡದವರಿಂದ ಏಕವ್ಯಕ್ತಿ ಪ್ರಯೋಗದ ‘ಮಧುರ ಮಂಡೋದರಿ’ ನಾಟಕವನ್ನು ಕಲಾಮಂದಿರ ಆವರಣ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು. ತುಂಬಾ ದಿನಗಳಿಂದ ಕೆಲಸ, ಒತ್ತಡಗಳಿಂದ ತುಂಬಿಕೊಂಡಿದ್ದ ಬದುಕಿಗೆ ವಿರಾಮದ ಅಗತ್ಯ ಅನ್ನಿಸಿತ್ತು. ಅಂದುಕೊಂಡಂತೆ ನಾಟಕ ಪ್ರದರ್ಶನಕ್ಕೆ ಕೊಂಚ ಬಿಡುವು ಮಾಡಿಕೊಂಡು ಹೋದೆ ತುಂಬಾ ಕುತೂಹಲದಿಂದ ಕಾದ ಘಳಿಗೆ ಅಂದರೆ ತಪ್ಪಾಗಲಾರದು, ಏಕವ್ಯಕ್ತಿ ಪ್ರಯೋಗ ಅಂದ್ರೆ ಒಂದು ರೀತಿಯ ಸವಾಲ್ ಆಗಿರುತ್ತೆ ಯಾಕೆಂದರೆ ಮುಖ್ಯವಾಗಿ ರಂಗದ ಮೇಲೆ ಒಬ್ಬರೇ ಇದ್ದು ಪ್ರೇಕ್ಷಕರನ್ನು ಒಂದು ಗಂಟೆ ಇಲ್ಲವೇ ಅದಕ್ಕು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವುದು ಸುಲಭವಾಗಿರುವುದಿಲ್ಲ. ಆದರೆ ಮಧುರ ಮತ್ತು ಮಂಡೋದರಿ ಎರಡು ಪಾತ್ರಗಳನ್ನು ಪ್ರಸ್ತುತ ಪಡಿಸಿದ ವನಿತಾ ರಾಜೇಶ್ ರವರು ತುಂಬಾ ಅಚ್ಚುಕಟ್ಟಾಗಿ ಆ ಪಾತ್ರದಲ್ಲಿ ಜೀವಿಸಿದ ರೀತಿ ಎಲ್ಲರನ್ನೂ ಸೆಳೆಯುವಂತೆ ಮಾಡಿತ್ತು. ನಾಟಕಗಳಲ್ಲಿ ಸ್ತ್ರೀ ಪಾತ್ರಗಳಿಗೆ ಮಹತ್ವ ಸ್ವಲ್ಪ ಕಡಿಮೆ ಎನ್ನುತ್ತಾರೆ. ಆದರೆ ಹೆಣ್ಣಿನ ಪಾತ್ರಗಳಿಗೆ…
ಉಡುಪಿ: ರಂಗಭೂಮಿ ಕ್ಷೇತ್ರದ ಖ್ಯಾತ ಗಾಯಕ, ನಟ ಬಿ. ಕೃಷ್ಣ ಕಾರಂತ ಇವರು ದಿನಾಂಕ 12 ಡಿಸೆಂಬರ್ 2024ರ ಗುರುವಾರದಂದು ನಿಧನ ಹೊಂದಿದರು. ಇವರಿಗೆ 76 ವರ್ಷ ವಯಸ್ಸಾಗಿತ್ತು. ಉಡುಪಿಯ ಎಂ. ಜಿ. ಎಂ. ಕಾಲೇಜಿನ ಪ್ರಾದೇಶಿಕ ಸಂಶೋಧನಾ ಕೇಂದ್ರ (ಆರ್.ಆರ್.ಸಿ.) ಇದರ ನಿವೃತ್ತ ಉದ್ಯೋಗಿಯಾಗಿರುವ ಬಿ. ಕೃಷ್ಣ ಕಾರಂತ್ ಖ್ಯಾತ ಗಾಯಕರಾಗಿದ್ದರು. ಇವರ ಸಂಗೀತ ಕಾರ್ಯಕ್ರಮಗಳು ಮತ್ತು ಧ್ವನಿ ಸುರುಳಿ ಬಹಳ ಜನಪ್ರಿಯವಾಗಿದ್ದವು. ಇವರು ತಮ್ಮ ನಾಟಕಗಳಿಗೆ ಹಿನ್ನೆಲೆ ಗಾಯನ ನೀಡುತಿದ್ದುದು ಮಾತ್ರವಲ್ಲದೆ ಅನೇಕ ರಂಗಭೂಮಿ ನಿರ್ಮಾಣದ ನಾಟಕಗಳಿಗೂ ಹಿನ್ನೆಲೆ ಗಾಯಕರಾಗಿ ಸಹಕರಿಸಿದ್ದಾರೆ. ಇತ್ತೀಚೆಗಷ್ಟೇ ಉಡುಪಿಯ ರಂಗಭೂಮಿಯವರು ಸಾಂಸ್ಕೃತಿಕ ಮತ್ತು ರಂಗ ಕಲೆಗೆ ನೀಡಿದ ಅಮೂಲ್ಯ ಕೊಡುಗೆಗಾಗಿ ಬಿ.ಕೃಷ್ಣ ಕಾರಂತರನ್ನು ಸನ್ಮಾನಿಸಿದ್ದರು . ರಂಗಭೂಮಿಯ ಎಲ್ಲಾ ಕಾರ್ಯಕ್ರಮಗಳಿಗೆ ಅವರ ಅಚಲ ಬೆಂಬಲ ಮತ್ತು ಪ್ರೋತ್ಸಾಹವು ಸಮುದಾಯದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದೆ. ಅವರ ಅಗಲಿಕೆಯಿಂದ ಸಂಗೀತ ಮತ್ತು ರಂಗಭೂಮಿಗೆ ಅಪಾರ ನಷ್ಟವುಂಟಾಗಿದೆ. ಬಿ.ಕೃಷ್ಣ ಕಾರಂತರು ಪತ್ನಿ, ಇಬ್ಬರು ಪುತ್ರರು, ಸಂಬಂಧಿಕರು…
ಮಂಗಳೂರು : ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ವತಿಯಿಂದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ರಥಬೀದಿ ಮಂಗಳೂರು ಇದರ ಆಶ್ರಯದಲ್ಲಿ ‘ವಿಶ್ವಕರ್ಮ ಕಲಾ ಸಿಂಚನ 2024’ ಭಕ್ತಿ ಸಿಂಚನ, ಜ್ಞಾನ ಸಿಂಚನ, ಚಿತ್ರ ಸಿಂಚನ ಮತ್ತು ಪ್ರತಿಭಾ ಸಿಂಚನ, ಕೃತಿ ಬಿಡುಗಡೆ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ದಿನಾಂಕ 15 ಡಿಸೆಂಬರ್ 2024ರಂದು ಪೂರ್ವಾಹ್ನ 9-00 ಗಂಟೆಗೆ ಮಂಗಳೂರು ರಥಬೀದಿಯ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಇವರ ಅಧ್ಯಕ್ಷತೆಯಲ್ಲಿ ಸ್ಪೂರ್ತಿ ಮೆಡಿಕಲ್ ಅಕಾಡೆಮಿಯ ನಿರ್ದೇಶಕರಾದ ಡಾ. ಜ್ಯೋತಿ ಜಗದೀಶ್ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಲೇಖಕಿ ಕಲಾವಿದೆ ಶ್ರೀಮತಿ ಲಲಿತಾ ಕೆ. ಆಚಾರ್ ಇವರ ‘ಸುಲಲಿತ ಕಾವ್ಯ ಚಿತ್ತಾರ’ ಎಂಬ ಕೃತಿಯು ಲೋಕಾರ್ಪಣೆಗೊಳ್ಳಲಿದೆ. ಸಭಾ ಕಾರ್ಯಕ್ರಮದ ಬಳಿಕ ಭಕ್ತಿಗೀತೆ ಗಾಯನ, ಚಿನ್ನದ ಆಭರಣ ವಿನ್ಯಾಸ, ರಸಪ್ರಶ್ನೆ ಮತ್ತು…
ಮೂಡುಬಿದಿರೆ : ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಮೂರನೇ ದಿನವಾದ ದಿನಾಂಕ 12-12-2024ರಂದು ಗೋಧೂಳಿಯಲ್ಲಿ ಗಜಲ್-ಭಜನ್ ಸುಧೆ ಹರಿಸಿದ ಒಸ್ಮಾನ್ ಮೀರ್ ಮೀರ್ ಹಾಗೂ ಅಮೀರ್ ಮೀರ್, ಸಾಥ್ ನೀಡಿದ ಪಾರತಿ ವ್ಯಾಸ್ ಪ್ರೀತಿ, ಭಕ್ತಿ, ದೇಶಪ್ರೇಮ ಹೊನಲಾಗಿಸಿದ ‘ಸೌಹಾರ್ದತೆಯ ಗಾನ ಸಂತ’ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ 30ನೇ ವರ್ಷದ ಆಳ್ವಾಸ್ ವಿರಾಸತ್‌ನ ಕಾರ್ಯಕ್ರಮದ ಗೋಧೂಳಿ ಸೊಬಗು ಸೌಹಾರ್ದತೆಯ ಮೆರುಗು ನೀಡಿತ್ತು. ಬಿದಿರೆಯ ಆಗಸದಲ್ಲಿ ಹೊಂಗಿರಣ ಮೂಡಿದ್ದರೆ, ‘ಆಳ್ವಾಸ್ ವಿರಾಸತ್’ನ ವೇದಿಕೆಯಲ್ಲಿ ‘ಸಬ್ ಕಾ ಶುಕ್ರಿಯಾ’ ಎಂದು ವಿನಮ್ರತೆ ವ್ಯಕ್ತಪಡಿಸಿ ಒಸ್ಮಾನ್ ಮೀರ್ ಧನ್ಯರಾದರು, ‘ತುಜ್ ಸೇ ಮೇರಾ ಜೀನಾ ಮರ್ನಾ… ಮೈ ಮುಸಾಫಿರ್ ತು ಮುಸಾಫಿರ್’ ಎಂದು ಅವರ ಪುತ್ರ ಅಮೀರ್ ಮೀರ್ ವೈರಲ್ ಆದ ತಮ್ಮ ಆಲ್ಬಂನ ಗಾನದ ಹೊನಲು ಹರಿಸಿದರು. ‘ತೇರೆ ಬಿನಾ ಸೋ ನಹೀ ಸಕ್ತೇ….’ ಎಂದಾಗ ಸಭಾಂಗಣ ಕಿಕ್ಕಿರಿದ ವಿದ್ಯಾರ್ಥಿಗಳ ಉದ್ಘಾರ ನಿದ್ದೆಗೆಡಿಸಿತು. ಬಳಿಕ ಅಮೀರ್ ಮೀರ್…
ಕಾರ್ಕಳ : ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ ಮತ್ತು ಪಠ್ಯೇತರ ಸ್ಪರ್ಧೆಗಳು ದಿನಾಂಕ 09 ಡಿಸೆಂಬರ್ 2024ರ ಸೋಮವಾರದಂದು ಕರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಇದರ ಸಪ್ತಸ್ವರ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಮಮತಾ ದೇವಿ ಜಿ. ಎಸ್. ಮಾತನಾಡಿ “ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅಂದರೆ ಅರ್ಧ ಜಯಶಾಲಿಯಾದಂತೆ. ಪಠ್ಯ ವಿಷಯದ ಕಲಿಕೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮ ಪ್ರತಿಭೆಯನ್ನು ತೋರಿಸಿ ವಿಜೇತರಾಗಿ.” ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಇದರ ಉಪನಿರ್ದೇಶಕರಾದ…