Author: roovari

ಮಂಗಳೂರು : ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ನಡೆಯುತ್ತಿರುವ ಕಥಾಬಿಂದು ಪ್ರಕಾಶನವು ಲೇಖಕ-ಲೇಖಕಿಯರಿಂದ ಕವನ ಸಂಕಲನಗಳಿಗೆ ಕವನಗಳನ್ನು ಆಹ್ವಾನಿಸಿದೆ. ಕಳೆದ ತಿಂಗಳು ಹೊಸ ಬರಹಗಾರರನ್ನು ಪ್ರೋತ್ಸಾಹಿಸಲು ಸ್ಪರ್ಧಾತ್ಮಕ ಬೆಲೆಯಲ್ಲಿ ಪುಸ್ತಕ ಪ್ರಕಟಣೆಗೆ ಪ್ರಕಟಣೆ ಹೊರಡಿಸಿತು. ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಬಂದುದರಿಂದ 50 ಕೃತಿಗಳನ್ನು ಮಾತ್ರ ಪ್ರಕಟಣೆಗೆ ಆಯ್ದುಕೊಳ್ಳಲಾಯಿತು. ನಾವು ಸಮಯಕ್ಕೆ ಪುಸ್ತಕಗಳನ್ನು ಪ್ರಕಟಿಸಿ ಅಕ್ಟೋಬರ್ 29ಕ್ಕೆ ಪುಸ್ತಕ ಬಿಡುಗಡೆ ಮಾಡಿ ನಿಮ್ಮ ವಿಶ್ವಾಸಕ್ಕೆ ಪಾತ್ರರಾಗಿದ್ದೇವೆ. ಕಳೆದ ಬಾರಿ ನಿರಾಶೆಗೊಂಡ ಕವಿಗಳಿಗೆ ಈಗ ಇನ್ನೊಂದು ಅವಕಾಶ ಒದಗಿ ಬಂದಿದೆ. ಕವಿಗಳ ಬೇಡಿಕೆಯನ್ನು ಗಮನದಲ್ಲಿರಿಸಿ ಈ ಕೆಳಗಿನ ಎರಡು ಯೋಜನೆಗಳನ್ನು ಪ್ರಕಟಿಸುತ್ತಿದ್ದೇನೆ. ಯೋಜನೆ 1 : 30 ಪುಟಗಳ ಸೆಂಟರ್ ಪಿನ್ನಿಂಗ್ ಪುಸ್ತಕ 20 ಪ್ರತಿಗಳು ಒಟ್ಟು ಶುಲ್ಕ ರೂ 3500/- ಯೋಜನೆ 2 : 56 ಪುಟಗಳ ಪರ್ಫೆಕ್ಟ್ ಬೈಂಡಿಂಗ್ ಪುಸ್ತಕ ಪ್ರತಿಗಳು 50 ಒಟ್ಟು ಶುಲ್ಕ ರೂ 6,000/- ಎರಡೂ ಯೋಜನೆಗಳಲ್ಲಿ ನಮೂದಿಸಿದ ಶುಲ್ಕ ಕವರ್ ಪೇಜ್ ಮತ್ತು ಪುಸ್ತಕ ಬಿಡುಗಡೆ…

Read More

ಉಡುಪಿ : 1947-48ರ ಸ್ವರಾಜ್ಯ ವಿಜಯ, ಹೈದರಾಬಾದ್ ವಿಜಯ, 2023ರ ಕಾಶ್ಮೀರ ವಿಜಯದಂತಹ ಐತಿಹಾಸಿಕ ರಾಷ್ಟ್ರ ಪ್ರಜ್ಞೆಯ ಪ್ರಸಂಗಗಳನ್ನು ಪ್ರಸ್ತುತ ಪಡಿಸಿದ ಉಡುಪಿಯ ಸುಶಾಸನ ‘ನಾರೀ ಶಕ್ತಿ- ಮಾನಿನಿ ಮನ್ವಂತರ’ ಎಂಬ ವಿನೂತನ ಪ್ರಾಯೋಗಿಕ ಯಕ್ಷಗಾನ ಪ್ರಸಂಗದ ತಾಳಮದ್ದಳೆ 2024ರ ಜನವರಿಯಂದು ಉಡುಪಿಯಲ್ಲಿ ಲೋಕಾರ್ಪಣೆಯಾಗಲಿದೆ. ಸ್ವಾತಂತ್ರೋತ್ಸವದ ತಾಳಮದ್ದಳೆಯ ರೂವಾರಿ ಉಡುಪಿಯ ಸುಧಾಕರ ಆಚಾರ್ಯರ ಸಂಕಲ್ಪದಂತೆ ಪ್ರಸಿದ್ಧ ಪ್ರಸಂಗಕರ್ತ ಹಾಗೂ ತಾಳಮದ್ದಳೆ ಅರ್ಥಧಾರಿ ಪ್ರೊ. ಪವನ್ ಕಿರಣಕೆರೆ ಪರಿಕಲ್ಪನೆಯಲ್ಲಿ ಈ ಪ್ರಸಂಗ ಮೂಡಿ ಬರಲಿದೆ. ನವರಾತ್ರಿಯಂದು ಶ್ರೀಕ್ಷೇತ್ರ ಕಟೀಲಿನಲ್ಲಿ ಶ್ರೀ ಶೀರೂರು ಶ್ರೀಪಾದರು, ಅರ್ಚಕರಾದ ಆಸ್ರಣ್ಣರು, ನವ ಕನ್ನಿಕಾ ಮುತ್ತೈದೆಯರ ಉಪಸ್ಥಿತಿಯಲ್ಲಿ ವೀಳ್ಯ ಪ್ರದಾನ ಪೂರೈಸಿ, ಪ್ರಸಂಗ ರಚನೆಗೆ ಸಿದ್ಧತೆ ನಡೆಸಿದೆ. ಭಾರತೀಯ ಸಂಸ್ಕೃತಿ ಹೆಣ್ಣಿಗೆ ನೀಡಿದ ಸ್ಥಾನಮಾನ, ಐತಿಹಾಸಿಕ ಸ್ಥಿತ್ಯಂತರಗಳು, ಪ್ರಸ್ತುತ ಸಮಾಜದಲ್ಲಿನ ಸ್ತ್ರೀ ಸಂವೇದನೆ, ಸ್ತ್ರೀ ಶಕ್ತಿಯ ಪ್ರಾಬಲ್ಯದ ಅನಾವರಣವೇ ಮುಂತಾದ ಮಹತ್ವಪೂರ್ಣ ವಿಷಯಗಳ ನೆಲೆಗಟ್ಟಿನಲ್ಲಿ ಸಿದ್ಧವಾಗಲಿರುವ ‘ನಾರೀ ಶಕ್ತಿ’ ಪ್ರಸಂಗವು ಈಗಾಗಲೇ ಚಾಲ್ತಿಯಲ್ಲಿರುವ ಪೌರಾಣಿಕ ಪ್ರಸಂಗಗಳಿಗಿಂತ ಭಿನ್ನವಾಗಿದ್ದು, ಪುರಾಣ…

Read More

ಮೂಡುಬಿದಿರೆ : ದ.ಕ. ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವುಗಳ ಆಶ್ರಯದಲ್ಲಿ 3 ದಿನಗಳ ಕಾಲ ನಡೆಯುವ ‘ಮೈಸೂರು ವಿಭಾಗ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಾಗಾರ’ ದಿನಾಂಕ 02-11-2023 ರ ಗುರುವಾರದಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೈಸೂರು ವಿಭಾಗದ ಆರೋಗ್ಯ, ಕುಟುಂಬ ಕಲ್ಯಾಣ ಸೇವೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ| ರಾಜೇಶ್ವರಿ ದೇವಿ “ಆಧುನಿಕತೆಯ ಬಿರುಗಾಳಿಯಲ್ಲಿ ಜಾನಪದ ಕಲೆಗಳು ಎಲ್ಲೋ ಸಾಗುತ್ತಿವೆ. ಆದರೆ ದ.ಕ., ಉಡುಪಿ ಜಿಲ್ಲೆಯ ಮಣ್ಣಿನ ಗಟ್ಟಿತನದಿಂದಾಗಿ 5 ಸಾವಿರ ವರ್ಷಗಳಿಂದಲೂ ಇಲ್ಲಿಯ ಜಾನಪದ ಕಲೆಗಳು ಜೀವಂತವಾಗಿವೆ. ಸಿನೆಮಾದ ಮೂಲಕ ಜಾನಪದ ಕಲೆಗಳನ್ನು ಜೀವಂತವಾಗಿ ಉಳಿಸುವ ಕೆಲಸ ನಡೆಯುತ್ತಿದೆ” ಎಂದು ಹೇಳಿದರು. ವಿದ್ಯಾಗಿರಿಯಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ವಹಿಸಿದ್ದರು. ಬೆಂಗಳೂರು ಆರೋಗ್ಯ ಸೌಧ ಆ.ಕು.ಕ.ಸೇವೆಗಳ ಉಪ ನಿರ್ದೇಶಕ…

Read More

ಮಂಗಳೂರು : ಸಂತ ಅಲೋಶಿಯಸ್ ಪ್ರೌಢಶಾಲಾ ವತಿಯಿಂದ ಶಾಲಾ ಸಭಾಂಗಣದಲ್ಲಿ ‘ಸಿಂಫನಿ’ – ಶಾಂತಿ ಸೌಹಾರ್ದಕ್ಕಾಗಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿಗಳು ದಿನಾಂಕ 31-10-2023ರಂದು ನಡೆಸಿಕೊಟ್ಟರು. ಬೆಳಗ್ಗಿನ ಕಾರ್ಯಕ್ರಮವನ್ನು ಬಹುಮುಖ ಪ್ರತಿಭೆ, ಲೆಕ್ಕಪರಿಶೋಧಕಿ ಪಲ್ಲವಿ ಪ್ರಭು ಎಚ್. ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ವಂ. ಜೆರಾಲ್ಡ್‌ ಫುರ್ಟಾಡೊ ಮಾತನಾಡಿ, “ಪ್ರಸ್ತುತ ಸಮಾಜದಲ್ಲಿ ತಾಂಡವವಾಡುತ್ತಿರುವ ಅಶಾಂತಿ, ಅಪನಂಬಿಕೆಗಳ ಬದುಕಿನಲ್ಲಿ ಸೌಹಾರ್ದ ವಾತಾವರಣದ ಅಗತ್ಯವನ್ನು ತಿಳಿಸಿದರು. ಮಧ್ಯಾಹ್ನ ಕಾರ್ಯಕ್ರಮದಲ್ಲಿ ಖ್ಯಾತ ಹಾಡುಗಾರ್ತಿ, ಸಂತ ಅಲೋಶಿಯಸ್ ಐಟಿಐ ವಿಭಾಗದ ಉಪನ್ಯಾಸಕಿ ಅಂಕಿತ ಮಸ್ಕರೇನ್ಹಸ್ ಭಾಗವಹಿಸಿದ್ದರು. ‘ಸಿಂಫನಿ’ ಕಾರ್ಯಕ್ರಮದಲ್ಲಿ ಮೂವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಹಾಡುಗಾರಿಕೆಯ ಅನಾವರಣವಾಯಿತು. ಉಪ ಮುಖ್ಯೋಪಾಧ್ಯಾನಿ ಲ್ಯಾನ್ಸಿ ಡಿ’ಸೋಜಾ ಅತಿಥಿಗಳನ್ನು ಸಮ್ಮಾನಿಸಿದರು. ಶಿಕ್ಷಕಿಯರಾದ ಲಿನೆಟ್ ಮಥಾಯಸ್ ಮತ್ತು ಸುನಿತಾ ಪಾಯ್ಸ್ ಪ್ರಸ್ತುತ ಸಮಾಜದ ಸಂಘರ್ಷಮಯ ಚಿತ್ರಣ, ಜಾಗೃತಿಯ ಅಗತ್ಯ ಹಾಗೂ ಸೌಹಾರ್ದವನ್ನು ಪ್ರೇರೇಪಿಸುವ ವಿಚಾರ ಆಧಾರಿತ ವೀಡಿಯೋ ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ಜೋಶುವಾ, ಸಿಮಂತಾ, ಆಫ್ಲಾ, ವಿವಾನ್, ನವೊಮಿ, ಶನನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜೊವಿಟಾ…

Read More

ಮಂಗಳೂರು : ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ನಡೆದ ವಿಶ್ವ ಬಂಟರ ಸಮ್ಮೇಳನದ ಅಂಗವಾಗಿ ಏರ್ಪಡಿಸಲಾಗಿದ್ದ ಕವಿಗೋಷ್ಠಿಯಲ್ಲಿ ‘ಕವಿ ಸಮಯ – ಕಾವ್ಯ ನಮನ – ಚಿತ್ತ ಚಿತ್ತಾರ’ ಕಾರ್ಯಕ್ರಮವು ಉಡುಪಿಯ ಬಂಟರ ಸಂಘದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ದಿನಾಂಕ 29-10-2023ರಂದು ನಡೆಯಿತು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡುತ್ತಾ “ಪ್ರಾಚೀನ ಕಾಲದಿಂದಲೂ ನಾಡಿನ ಕಲೆ-ಸಾಹಿತ್ಯಗಳಿಗೆ ರಾಜಾಶ್ರಯ ನೀಡಿದ ವರ್ಗಗಳಲ್ಲಿ ಬಂಟ ಸಮಾಜದವರೂ ಪ್ರಮುಖರು. ಮೌಖಿಕ ಪರಂಪರೆಯಿಂದ ತೊಡಗಿ ಸಮೃದ್ಧವಾದ ಆಧುನಿಕ ಸಾಹಿತ್ಯ ಕೃಷಿಯವರೆಗೆ ಅನೇಕ ವಿದ್ವನ್ಮಣಿಗಳು ವಿವಿಧ ಪ್ರಕಾರಗಳಲ್ಲಿ ನಮ್ಮ ಸಾರಸ್ವತ ಲೋಕವನ್ನು ಶ್ರೀಮಂತ ಗೊಳಿಸಿದ್ದಾರೆ. ನೃಪತುಂಗನ ಕವಿರಾಜಮಾರ್ಗದಲ್ಲಿ ಬರುವ ಕಾವ್ಯ ಪ್ರಯೋಗ ಪರಿಣತಮತಿಗಳ್ ನಾಡವರ್ಗಳ್ ಎಂಬ ಸೊಲ್ಲು ನಾಡವ – ಬಂಟರ ಕುರಿತಾಗಿಯೇ ಹೇಳಲ್ಪಟ್ಟಿದೆ ಎಂಬುದನ್ನು ಹಿರಿಯ ಭಾಷಾ ವಿದ್ವಾಂಸರರಾದ ಡಾ.ಶಂಬಾ ಜೋಶಿಯವರೇ ತಮ್ಮ ಸಂಶೋಧನಾತ್ಮಕ ಬರಹದಲ್ಲಿ…

Read More

ಉಡುಪಿ : ಕುಂದಾಪುರ ತಾಲ್ಲೂಕಿನ ಮೋರ್ಟು-ಬೆಳ್ಳಾಲದ ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ (ರಿ.) ಇದರ ರಜತ ವರ್ಷದ ಸಂಭ್ರಮದ ಪ್ರಯುಕ್ತ ಮಕ್ಕಳಿಗಾಗಿ ಯಕ್ಷಗಾನ ಚಿತ್ರಕಲಾ ಸ್ಪರ್ಧೆಯನ್ನು ನೇರಳಕಟ್ಟೆಯ ಬ್ರಹ್ಮನಜೆಡ್ಡು, ಶ್ರೀ ಶಂಕರ ಧಾರ್ಮಿಕ ಸಭಾ ಭವನದಲ್ಲಿ ದಿನಾಂಕ 14-11-2023 ಮಂಗಳವಾರದಂದು ಸಂಜೆ 3 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ. ಮೂರು ಬೇರೆ ಬೇರೆ ವಿಭಾಗಗಳು ಮತ್ತು ಸ್ಪರ್ಧೆಯ ವಿಷಯ: 1] 1ರಿಂದ 3ನೇತರಗತಿಯವರಿಗೆ, ವಿಷಯ : ಯಕ್ಷಗಾನ ವೇಷದ ಮುಖವರ್ಣಿಕೆ 2] 4ರಿಂದ 7ನೇ ತರಗತಿಯವರೆಗೆ, ವಿಷಯ : ಯಕ್ಷಗಾನದ ರಾಜವೇಷ/ಪುಂಡುವೇಷ 3] 8ರಿಂದ 10ನೇ ತರಗತಿಯವೆರೆಗೆ, ವಿಷಯ : ಯಕ್ಷಗಾನದ ಬಣ್ಣದವೇಷ * ಭಾಗವಹಿಸಲಿಚ್ಚಿಸುವ ಮಕ್ಕಳು ತಮ್ಮ ಹೆಸರು, ವಯಸ್ಸು, ತರಗತಿ, ಶಾಲೆ, ಪೋಷಕರ ಮೊಬೈಲ್ ಸಂಖ್ಯೆಯನ್ನು 9986363495 ಈ ನಂಬರಿಗೆ ವಾಟ್ಸಪ್ ಮಾಡಿ, ದಿನಾಂಕ 10-11-2023ರ ಒಳಗಾಗಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಂಡವರಿಗೆ ಮಾತ್ರ ಅವಕಾಶ. ನೋಂದಣಿ ಮಾಡುವಾಗ ನೀಡಿದ ವಿವರಗಳನ್ನು ಬಳಸಿ ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಮಾತ್ರವೇ ಪರಿಗಣಿಸಲಾಗುವುದು. * ಸ್ಪರ್ಧೆಯ ದಿನ ಮಧ್ಯಾಹ್ನ…

Read More

ಬೆಳಗಾವಿ: ಕವಿ ಡಿ.ಎಸ್.ಕರ್ಕಿ ಅವರ 116ನೇ ಜನ್ಮದಿನೋತ್ಸವದ ಪ್ರಯುಕ್ತ ಬೆಳಗಾವಿಯ ಡಿ.ಎಸ್.ಕರ್ಕಿ ಪ್ರತಿಷ್ಠಾನ ಟ್ರಸ್ಟ್ 2022-23ನೇ ಸಾಲಿನ ‘ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನಿಸಿದೆ. 2022ರಲ್ಲಿ ಪ್ರಕಟಗೊಂಡ ಕವನ ಸಂಕಲನದ ಎರಡು ಪ್ರತಿಗಳನ್ನು 25-11-2023ರೊಳಗೆ ಕಳುಹಿಸಬೇಕು.  ಪ್ರಶಸ್ತಿ ಪ್ರದಾನ  ಸಮಾರಂಭ ಬೆಳಗಾವಿ ಯಲ್ಲಿ ಇದೇ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ . ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ರಮೇಶ್ ಮುರಿಗೆಪ್ಪ ಕರ್ಕಿ.ಅವರು ತಿಳಿಸಿದ್ದಾರೆ ಕವನ ಸಂಕಲನ ಕಳುಹಿಸಬೇಕಾದ ವಿಳಾಸ: ಸತೀಶ ಮು.ಕರ್ಕಿ, ಪ್ಲಾಟ್ ನಂ.354, ಗಂಗೋತ್ರಿ, ರಾಮತೀರ್ಥನಗರ, ಬೆಳಗಾವಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9449650174, 7975376501.

Read More

ಕಡಬ : ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪುತ್ತೂರು ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಕಡಬ ಸಂಯುಕ್ತ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್‌ ಪ್ರೌಢ ಶಾಲೆಯ ಆತಿಥ್ಯದಲ್ಲಿ ದಿನಾಂಕ 30-10-2023ರಂದು ಕಡಬ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ‘ಪ್ರತಿಭಾ ಕಾರಂಜಿ 2023-24’ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್‌.ಆರ್. ಮಾತನಾಡುತ್ತಾ “ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾದ ಪ್ರತಿಭೆ ಹುದುಗಿರುತ್ತದೆ. ಅಂತಹ ಪ್ರತಿಭೆಗಳು ಬೆಳಕಿಗೆ ಬರಲು ಅವಕಾಶಗಳು ಮುಖ್ಯ. ಅದನ್ನು ಪ್ರತಿಭಾ ಕಾರಂಜಿಯಂತಹ ವೇದಿಕೆಗಳು ಒದಗಿಸಿಕೊಡುತ್ತದೆ. ಪಠ್ಯ ಚಟುವಟಿಕೆಗಳಷ್ಟೇ ಪ್ರಾಮುಖ್ಯತೆ ಪಠ್ಯೇತರ ಚಟುವಟಿಕೆಗಳಿಗೂ ಇದೆ. ಅದಕ್ಕಾಗಿಯೇ ಸರಕಾರವು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆಯನ್ನು ನೀಡುತ್ತಿದೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಡಬದ ಸೈಂಟ್ ಜೋಕಿಮ್ ವಿದ್ಯಾ ಸಂಸ್ಥೆಗಳ ಸಂಚಾಲಕ ಫಾ. ಪಾವ್ಲ್ ಪ್ರಕಾಶ್ ಡಿ’ಸೋಜ, “ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಶಿಕ್ಷಕರು ಮತ್ತು ಹೆತ್ತವರು ಪ್ರಮುಖ ಪಾತ್ರ…

Read More

ಸುರತ್ಕಲ್ : ಸುರತ್ಕಲ್ಲಿನ ಗೋವಿಂದ ದಾಸ ಕಾಲೇಜಿನಲ್ಲಿ  ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ದಿನಾಂಕ 01-11-2023ರಂದು  ತಾಯಿ ಭುವನೇಶ್ವರಿಯ ಛಾಯಾ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು . ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಗೋವಿಂದ ದಾಸ ಕಾಲೇಜಿ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿಯವರು “ಮೈಸೂರು ರಾಜ್ಯವಾಗಿದ್ದ ನಮ್ಮ ರಾಜ್ಯವು ಕರ್ನಾಟಕ ರಾಜ್ಯವಾಗಿ ರೂಪುಗೊಂಡು ಐದು ದಶಕಗಳಾಗುತ್ತಿದೆ. ಕನ್ನಡ ನಾಡಿನ ಭಾಷೆ, ಕಲೆ, ಸಂಸ್ಕೃತಿಯು ಶ್ರೀಮಂತಿಕೆ ಮತ್ತು ವೈವಿಧ್ಯತೆಯಿಂದ ಕೂಡಿದ್ದು ವಿದ್ಯಾರ್ಥಿಗಳು ಇವುಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕು” ಎಂದರು. ವಿದ್ಯಾರ್ಥಿಗಳು ಕನ್ನಡದ ಹೆಸರಾಂತ ಕವಿಗಳಾದ ಹುಯಿಲಗೋಳ ನಾರಾಯಣ ರಾವ್ ಇವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ರಚಿಸಿದ ‘ಎಲ್ಲಾದರು ಇರು ಎಂತಾದರು ಇರು’, ದ.ರಾ ಬೇಂದ್ರೆ ಇವರ ‘ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕ ಇವರ ‘ಹೊತ್ತಿತೊ ಹೊತ್ತಿತ್ತು’ ಹಾಗೂ ಚೆನ್ನವೀರ ಕಣವಿಯವರ ಹೆಸರಾಯಿತು ‘ಕರ್ನಾಟಕ ಉಸಿರಾಗಲಿ ಕನ್ನಡ’ ಸಾಹಿತ್ಯಕ್ಕೆ ಧ್ವನಿಯಾಗುವ ಮೂಲಕ ನಾಡಿಗೆ ಗಾನ ನಮನ…

Read More

ಕೊಲ್ಯ : ಶ್ರೀ ಕೊಲ್ಯ ಮಠ, ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನ (ತೆಂಕಣ ಕೊಲ್ಲೂರು) ಜಗದ್ಗುರು ಶ್ರೀ ಶ್ರೀ ಶ್ರೀ ರಮಾನಂದ ಸ್ವಾಮೀಜಿ ಮಹಾಸಂಸ್ಥಾನಮ್ ಚಾರಿಟೇಬಲ್ ಟ್ರಸ್ಟ್ (ರಿ.) ಇಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ದಿನಾಂಕ 18-10-2023ರಂದು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ‘ಶರಸೇತು ಬಂಧ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು, ಚೆಂಡೆ ಮದ್ದಳೆಗಳಲ್ಲಿ ಶ್ರೀ ದಯಾನಂದ ಕೋಡಿಕಲ್ ಮತ್ತು ಶ್ರೀ ರಾಕೇಶ್ ಅರ್ಕುಳ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿ ಶುಭಾ ಅಡಿಗ (ಹನೂಮಂತ), ಶ್ರೀಮತಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ), ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ (ವೃಧ್ಧ ಬ್ರಾಹ್ಮಣ ಹಾಗೂ ಶ್ರೀ ರಾಮ) ಸಹಕರಿಸಿದರು. ನಿರ್ದೇಶಕ ಶ್ರೀ ಭಾಸ್ಕರ ಬಾರ್ಯ ಸ್ವಾಗತಿಸಿದರು. ಹರಿದಾಸ ಶ್ರೀ ದೇವಕಿತನಯ (ಮಹಾಬಲ ಶೆಟ್ಟಿ) ಕೂಡ್ಲು ವಂದಿಸಿದರು.

Read More