Subscribe to Updates
Get the latest creative news from FooBar about art, design and business.
Author: roovari
ವಿದ್ಯಾಗಿರಿ, ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘30ನೇ ವರ್ಷದ ಆಳ್ವಾಸ್ ವಿರಾಸತ್’ನಲ್ಲಿ ಪ್ರತಿಷ್ಠಿತ ‘ಆಳ್ವಾಸ್ ವಿರಾಸತ್-2024’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 11 ಡಿಸೆಂಬರ್ 2024ನೇ ಬುಧವಾರ ಸಂಜೆ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಿತು. ಪ್ರಶಸ್ತಿಯನ್ನು ಸ್ವೀಕರಿಸಿದ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಮಾತನಾಡಿ “ಬಡವರು, ದೀನ ದಲಿತರು, ಅಂಗವಿಕಲರಿಗಾಗಿ ಬದುಕು ಮುಡುಪಾಗಿಟ್ಟಿದ್ದ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಈ ಪ್ರಶಸ್ತಿ ಅರ್ಪಣೆ. ಶಿಸ್ತು, ಸಂಯಮ, ಸಮಯ ಬಹಳ ದೊಡ್ಡದು. ಅದನ್ನು ತೋರಿಸಿದ ಡಾ. ಎಂ. ಮೋಹನ ಆಳ್ವರ ಸಾಧನೆ ಅನನ್ಯ. ಅವರಿಂದ 101 ವರ್ಷ ಕಾರ್ಯಕ್ರಮ ನಡೆಯಲಿ. ಗವಾಯಿಗಳು ರಾಜ್ಯದಲ್ಲಿ ಹಿಂದೂಸ್ತಾನಿ ಸಂಗೀತ ಪಸರಿಸಲು ಕಾರಣ. ಅದಕ್ಕಾಗಿ ಜೀವನ ಮುಡುಪಾಗಿಟ್ಟ ಮಹಾತ್ಮ. ಪ್ರಶಸ್ತಿ ಹುಡುಕಿಕೊಂಡು ಬರಬೇಕು. ನಾವು ಅದರ ಹಿಂದೆ ಹೋಗಬಾರದು.” ಎಂದು ಕಿವಿಮಾತು ಹೇಳಿದರು. ಅದಕ್ಕೂ ಮೊದಲು, ಕಲೆ-ಸಂಸ್ಕೃತಿಯ ಸಮ್ಮಿಲನದ ಸ್ವರೂಪದಂತೆ ಅಲಂಕೃತ ಗೊಂಡ ವಿರಾಸತ್ ಬಯಲು…
ಕಾಸರಗೋಡು : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಮತ್ತು ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗದಲ್ಲಿ ಒಂದು ದಿನದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ 2024 ‘ಕೇರಳ – ಕರ್ನಾಟಕ ಮಕ್ಕಳ ಉತ್ಸವ’ ದಿನಾಂಕ 10 ನವೆಂಬರ್ 2024ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಕನ್ನಡ ಗ್ರಾಮದ ಪರಿಸರ, ವೇದಿಕೆ ಮತ್ತು ಮನೆಯಂಗಳದಲ್ಲಿ ಕಾಸರಗೋಡು ಜಿಲ್ಲೆಯ ಶಾಲಾ ಮಕ್ಕಳಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಸುಮಾರು 100ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 15 ದಶಂಬರ್ 2024 ಆದಿತ್ಯವಾರದಂದು ಅಪರಾಹ್ನ 3-00 ಗಂಟೆಗೆ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಹೆತ್ತವರು, ಪೋಷಕರು, ಅಧ್ಯಾಪಕರು ಸ್ಪರ್ಧಾ ತೀರ್ಪುಗಾರರ ಸಮ್ಮುಖದಲ್ಲಿ ಸಮ್ಮೇಳನದ ಸ್ಪರ್ಧೆಯ ವಿಜೇತರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಸ್ಪರ್ಧಾ…
ವಿದ್ಯಾಗಿರಿ(ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ 30ನೇ ವರ್ಷದ ಆಳ್ವಾಸ್ ವಿರಾಸತ್ ಇದರ ಮೊದಲ ದಿನವಾದ ದಿನಾಂಕ 10 ಡಿಸೆಂಬರ್ 2024ರ ಮಂಗಳವಾರ ಉದ್ಘಾಟನೆಯ ಬಳಿಕ ಮೂಡಿಬಂದದ್ದು, ಶ್ರದ್ಧಾಭಕ್ತಿಯ ನಾಡು-ನುಡಿಯ ಕಲಾ ವೈಶಿಷ್ಟ್ಯತೆಯ ಸಾಂಸ್ಕೃತಿಕ ವೈಭವ. ಭಾರತದ ಭವ್ಯ ಸಂಸ್ಕೃತಿಯ ಕಲಾರೂಪವೇ ಧರೆಗಿಳಿದು ಬಿದಿರೆಯ ನಾಡಿಗೆ ಬಂದಂತೆ ಭಾಸವಾಯಿತು. ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುತ್ತ ತುದಿವರೆಗಿನ ವೈವಿಧ್ಯ ಕಲಾಪ್ರಕಾರಗಳೂ ಮಾತ್ರವಲ್ಲ, ಶ್ರೀಲಂಕಾ ಸೇರಿದಂತೆ ನೆರೆಹೊರೆ ರಾಷ್ಟ್ರಗಳ ಸಂಸ್ಕೃತಿ ಶ್ರೀಮಂತಿಕೆಗೆ ಆಳ್ವಾಸ್ ಆವರಣ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಸಾನಿಧ್ಯವಿದ್ದ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಯೋಗಾನಂದ ಸ್ವಾಮೀಜಿ ಕೊಂಡೆವೂರು, ಮಾಣಿಲ ಮೋಹನದಾಸ ಸ್ವಾಮೀಜಿ ಹಾಗೂ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು ವೇದಿಕೆಯ ಬಲಭಾಗದಲ್ಲಿದ್ದ ರಥದಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ಭವ್ಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು. ನಿಗದಿಯಂತೆ ಕ್ಲಪ್ತ ಸಮಯಕ್ಕೆ ಆರಂಭಗೊಂಡ ಈ ಭವ್ಯ ಸಾಂಸ್ಕೃತಿಕ ಮೆರವಣಿಗೆಯು…
ಮಂಗಳೂರು : ಡಾ. ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ಸಂಸ್ಥೆ ವತಿಯಿಂದ ಡಾ. ಕದ್ರಿ ಗೋಪಾಲನಾಥ್ ಅವರ 75ನೇ ಜನ್ಮ ಜಯಂತಿ ಪ್ರಯುಕ್ತ ‘ಕದ್ರಿ ಸಂಗೀತ ಸೌರಭ’ ಕಾರ್ಯಕ್ರಮವು ದಿನಾಂಕ 07 ಡಿಸೆಂಬರ್ 2024ರ ಶನಿವಾರ ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿದ್ಧ ಗುರುಪೀಠದ ಗುರು ಗೋಮತಿ ದಾಸ್ ಇವರು ಮಾತನಾಡಿ “ಡಾ. ಕದ್ರಿ ಗೋಪಾಲನಾಥ್ ಧರ್ಮಾತೃ, ಧರ್ಮ ಚಿಂತನೆಯುಳ್ಳ ಮಾನವತಾವಾದಿಯಾಗಿದ್ದರು. ಕದ್ರಿ ಎಂಬ ಪುಟ್ಟ ಊರಿನ ಹೆಸರನ್ನು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ ಖ್ಯಾತಿ ಗೋಪಾಲನಾಥ್ ಅವರದ್ದು” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ‘ಡಾ. ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಶ್ರೇಷ್ಠ ಪ್ರಶಸ್ತಿ’ಯನ್ನು ಮೋಹನ ವೀಣಾ ಸೃಷ್ಟಿಕರ್ತ ಹಾಗೂ ವಾದಕ, ಪದ್ಮಭೂಷಣ ಪುರಸ್ಕೃತ ಪಂಡಿತ್ ವಿಶ್ವ ಮೋಹನ್ ಭಟ್ ಅವರಿಗೆ ಪ್ರದಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಪಂಡಿತ್ ವಿಶ್ವ ಮೋಹನ್ ಭಟ್ ಮಾತನಾಡಿ “ಕದ್ರಿ ಗೋಪಾಲನಾಥರು ನಮ್ಮೆಲ್ಲರ ಹೃದಯದಲ್ಲಿ…
ನಾಪೋಕ್ಲು : ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 04 ಡಿಸೆಂಬರ್ 2024ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 5ರಿಂದ 7ನೇ ತರಗತಿ ವಿಭಾಗದಲ್ಲಿ ಕನ್ನಡ ಕಂಠಪಾಠ ವಿಭಾಗದಲ್ಲಿ ಪೆರಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರತೀಕ್, ಮಕ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಕ್ಷಾ ಹಾಗೂ ಎಕ್ಸೆಲ್ ಶಾಲೆಯ ಎಂ.ಲಕ್ಷ್ಮಣ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಶಾಲೆಯ ಬಿ. ನಿಹಾರಿಕಾ ಪ್ರಥಮ, ಪೆರಾಜೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸ್ನೇಹ ದ್ವಿತೀಯ, ಮಡಿಕೇರಿಯ ಸಂತ ಮೈಕಲ್ಸ್ ಶಾಲೆಯ ಅಶೋಕ್ ಜೋಶ್ವ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಹಿಂದಿ ಕಂಠಪಾಠದಲ್ಲಿ ಚೇರಂಬಾಣೆಯ ಅರುಣ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ, ಬೇತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ.ಆರ್. ನವೀನ್, ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ಟಿ.ಆರ್. ಅಭಿನವ…
ಮೈಸೂರು : ರಂಗಬಂಡಿ ಮಳವಳ್ಳಿ (ರಿ.) ವತಿಯಿಂದ ಸಂಸ್ಕೃತಿ (ರಿ.) ಸಹಕಾರದೊಂದಿಗೆ ಅಯೋಜಿಸುವ ಕೆರಗೋಡು ಪ್ರಸನ್ನ ಕುಮಾರ್ ರಚನೆ ಮತ್ತು ಮಧು ಮಳವಳ್ಳಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ವನಿತಾ ರಾಜೇಶ್ ಪ್ರಸ್ತುತ ಪಡಿಸುವ ಏಕವ್ಯಕ್ತಿ ಪ್ರಯೋಗದ ‘ಮಧುರ ಮಂಡೋದರಿ’ ನಾಟಕ ಪ್ರದರ್ಶನವನ್ನು ದಿನಾಂಕ 15 ಡಿಸೆಂಬರ್ 2024ರಂದು ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ತಂಡದ ಬಗ್ಗೆ : ರಂಗಬಂಡಿ ಮಳವಳ್ಳಿ (ರಿ.) ಆಸಕ್ತರ ಗುಂಪುಗಳು ಕೇಂದೀಕೃತಗೊಂಡು ಹೊಸತನವನ್ನು ಕಾಣುವ, ಕನಸು ಕಂಗಳ ಹೊಸ್ತಿಲನ್ನು ಮೆಟ್ಟುವ ಸುಸಂದರ್ಭಕ್ಕಾಗಿ ರಂಗಬಂಡಿ ಮಳವಳ್ಳಿ ತಂಡ ಸಜ್ಜಾಗುತ್ತಿದೆ. ಕೇವಲ ರಂಗಾಸಕ್ತರಿಗೆ ನೋಟವನ್ನಷ್ಟೇ ಉಣಬಡಿಸುವುದಲ್ಲದೇ ರಂಗಾಭ್ಯಾಸಿಗಳಿಗೆ ಅಧ್ಯಯನಶೀಲತೆ, ರಂಗ ಪ್ರಯೋಗಗಳ ವಿಭಿನ್ನತೆ, ಭಾಷಾ ಪ್ರೇಮದ ಹೊಳಹು, ಆಂಗಿಕ ಚಲನೆಯ ಸರಿಯಾದ ಮಾರ್ಗದರ್ಶನದ ಹೆಗ್ಗುರಿಯನ್ನು ಹೊಂದಿದೆ. ಬದುಕಿಗೆ ಪೂರಕವಾದ ರಂಗಾಸಕ್ತಿಯನ್ನು ಪೂರೈಸುವ ನಿಟ್ಟಿನಲ್ಲಿ ಪ್ರಗತಿಯಲ್ಲಿ ತೊಡಗಿಕೊಳ್ಳುವ ನಿರೀಕ್ಷೆಯನ್ನು ಮುಂದಿಟ್ಟುಕೊಂಡಿದೆ. ಯಾವುದೇ ಸತ್ಸಂಕಲ್ಪಕ್ಕೆ ಸಾಮಾಜಿಕ ಕಳಕಳಿಯಿರುವ ಸಹೃದಯಿಗಳ ಸಹಕಾರ ತೀರ ಅತ್ಯಗತ್ಯವೆನ್ನುವುದು ಸರ್ವವಿಧಿತ ಈಗಾಗಲೇ ರಂಗಬಂಡಿ ಮಳವಳ್ಳಿ…
ಧಾರವಾಡ : ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಹಾವೇರಿ ಮತ್ತು ಮನೋಹರ ಗ್ರಂಥ ಮಾಲಾ ಧಾರವಾಡ ಇವರ ವತಿಯಿಂದ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ ಎಲ್ಲ ಕಾದಂಬರಿಗಳ ಹಾಗೆಯೇ ಅವರ ಜೀವನವನ್ನು ಕುರಿತು ಡಾ. ಕೃಷ್ಣಮೂರ್ತಿ ಕಿತ್ತೂರ ಇವರು ಸಂಶೋಧಿಸಿ ಬರೆದ ‘ಗಳಗನಾಥರು ಮತ್ತು ಅವರ ಕಾದಂಬರಿಗಳು’ ಎಂಬ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 14 ಡಿಸೆಂಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಧಾರವಾಡದ ರಂಗಾಯಣ ಆವರಣದಲ್ಲಿಯ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ. ಖ್ಯಾತ ಕಾದಂಬರಿಕಾರ ಪ್ರೊ. ರಾಘವೇಂದ್ರ ಪಾಟೀಲರು ಪುಸ್ತಕ ಬಿಡುಗಡೆ ಮಾಡಲಿದ್ದು, ಸಾಹಿತಿ ಪ್ರೊ. ಹರ್ಷ ಡಂಬಳ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೇರಿಯ ಶ್ರೀ ಗಳಗನಾಥ ಮತ್ತು ನಾ ಶ್ರೀ ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ದುಷ್ಯಂತ ನಾಡಗೌಡರು ವಹಿಸಲಿದ್ದಾರೆ. ಬಿಡುಗಡೆ ಸಮಾರಂಭದಲ್ಲಿ ಈ ಗ್ರಂಥದ ಮುಖ್ಯಪ್ರೇರಣೆಯಾದ ಶ್ರೀ ಬಿ.ವಿ. ಕುಲಕರ್ಣಿ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಂತೆಯೇ ಗಳಗನಾಥ ಕುಟುಂಬದ…
ಬೆಂಗಳೂರು : ನಾಟಕ ಬೆಂಗಳೂರು 25 ರಂಗಭೂಮಿ ಸಂಭ್ರಮದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಟಿ.ಎನ್. ಸೀತಾರಾಮ್ ಇವರ ರಚನೆಯ ಋತ್ವಿಕ್ ಸಿಂಹ ಇದರ ನಿರ್ದೇಶನದಲ್ಲಿ ವೇದಿಕೆ ಫೌಂಡೇಷನ್ ಅಭಿನಯಿಸುವ ‘ಆಸ್ಫೋಟ’ ನಾಟಕ ಪ್ರದರ್ಶನವನ್ನು ದಿನಾಂಕ 16 ಡಿಸೆಂಬರ್ 2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಕುಂದಾಪುರ : ಜೆ.ಸಿ.ಐ. ಕುಂದಾಪುರ ಇದರ ಸುವರ್ಣ ಸಂಭ್ರಮ ಪ್ರಯುಕ್ತ ‘ಸುವರ್ಣ ಜೇಸೀಸ್ ನಾಟಕೋತ್ಸವ’ವನ್ನು ದಿನಾಂಕ 22 ಡಿಸೆಂಬರ್ 2024ರಿಂದ 26 ಡಿಸೆಂಬರ್ 2024ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 22 ಡಿಸೆಂಬರ್ 2024ರಂದು ಶಶಿರಾಜ್ ಕಾವೂರು ಇವರ ರಚನೆ ಮತ್ತು ನಿರ್ದೇಶನದಲ್ಲಿ ರಂಗ ಸಂಗಾತಿ ತಂಡದವರು ‘ದಟ್ಸ್ ಆಲ್ ಯುವರ್ ಆನರ್’, ದಿನಾಂಕ 23 ಡಿಸೆಂಬರ್ 2024ರಂದು ಶಶಿರಾಜ್ ಕಾವೂರು ಇವರ ರಚನೆ ಹಾಗೂ ಹಾರಾಡಿಯ ಬಿ.ಎಸ್. ರಾಮ್ ಶೆಟ್ಟಿ ಇವರ ನಿರ್ದೇಶನದಲ್ಲಿ ಹಾರಾಡಿಯ ಭೂಮಿಕಾ (ರಿ.) ತಂಡದವರು ‘ಬರ್ಬರಿಕ’, ದಿನಾಂಕ 24 ಡಿಸೆಂಬರ್ 2024ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ. ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರು ‘ಮಾಲತೀ ಮಾಧವ’, ದಿನಾಂಕ 25 ಡಿಸೆಂಬರ್ 2024ರಂದು ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರು ‘ಅಂಕದ ಪರದೆ’, ದಿನಾಂಕ 26 ಡಿಸೆಂಬರ್ 2024ರಂದು ಮಂಜು ಕೊಡಗು…
ಬದಿಯಡ್ಕ (ಕಾಸರಗೋಡು): ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರ ವಿಶೇಷ ಭರತನಾಟ್ಯ ಪ್ರಸ್ತುತಿಯು ಸಂಗೀತ ಸಂಸ್ಥೆಯಾದ ‘ನಾರಾಯಣೀಯಂ’ನ ವೀಣಾವಾದಿನಿ ಸಂಗೀತ ವಿದ್ಯಾಪೀಠದ ಇಪ್ಪತ್ತೈದನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 7 ಡಿಸೆಂಬರ್ 2024ರ ಶನಿವಾರದಂದು ತುಂಬಿದ ಸಭಾಗೃಹದಲ್ಲಿ ಪ್ರದರ್ಶಿಸಲ್ಪಟ್ಟಿತು. ಮೋಹನಕಲ್ಯಾಣಿ ರಾಗದ ಆದಿತಾಳದಲ್ಲಿರುವ ‘ಭುವನೇಶ್ವರಿಯ ನೆನೆ ಮಾನಸವೇ… ‘ ಎಂಬ ಹಾಡಿಗೆ ಅಯನಾ ಪೆರ್ಲ ಅವರು ಮನೋಜ್ಞವಾಗಿ ಅಭಿನಯಿಸಿದರು. ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಇದಕ್ಕೆ ನೃತ್ಯಸಂಯೋಜನೆ ಮಾಡಿದ್ದಾರೆ. ಅನಂತರ ಆಂಗಿಕ ಹಾಗೂ ಅಭಿನಯಕ್ಕೆ ವಿಪುಲ ಅವಕಾಶಗಳಿರುವ ಪದವರ್ಣವನ್ನು ತನ್ನ ಪ್ರಸ್ತುತಿಗೆ ಆಯ್ದುಕೊಂಡರು. ಭೈರವಿ ರಾಗದಲ್ಲಿರುವ ಇದು ಆದಿತಾಳದಲ್ಲಿ ನಿಬದ್ಧವಾಗಿದೆ. ಇದು ಪೆರಿಯಸಾಮಿ ತೂರನ್ ಇವರ ರಚನೆಯಾಗಿದ್ದು, ಪ್ರಸಿದ್ಧ ಕಲಾವಿದೆ ಜಾನಕಿ ರಂಗರಾಜನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿದುಷಿ ಅಯನಾ ಅವರು ಉತ್ತಮವಾದ ಆಂಗಿಕ, ಅಭಿನಯ ಹಾಗೂ ಸಾಂದರ್ಭಿಕ ನಡೆಗಳಿಂದ ಆಕರ್ಷಕ ಮತ್ತು ಅರ್ಥಪೂರ್ಣ ಅಭಿನಯ ನೀಡಿದರು. ಬಳಿಕ ಯಮನ್ ರಾಗದ ಆದಿತಾಳದಲ್ಲಿರುವ ಶ್ರೀಕೃಷ್ಣನ ಕುರಿತ ‘ಕಡೆಗೋಲ ತಾರೆನ್ನ ಚಿನ್ನವೇ’…