Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಇಂಗ್ಲೀಷ್, ಕನ್ನಡ ಹಾಗೂ ತುಳು ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಡಾ. ಅಮೃತ ಸೋಮೇಶ್ವರ ಇವರ ಇಂಗ್ಲೀಷ್ ಗೆ ಅನುವಾದಗೊಂಡ ಗೋಂದೋಳು ಮತ್ತು ಇತರ ನಾಟಕ ಕೃತಿಯು ದಿನಾಂಕ 14 ಜನವರಿ 2026ರಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಾನ್ನಿಧ್ಯ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಕೃತಿಯನ್ನು ಬಿಡುಗಡೆಗೊಳಿಸಿದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಮಾತನಾಡಿ “ಅಮೃತ ಸೋಮೇಶ್ವರ ಅವರಂತಹ ಮೇರು ಬರಹಗಾರರ ತುಳು ಕೃತಿಗಳು ಇಂಗ್ಲೀಷ್ ಹಾಗೂ ಇತರ ಭಾಷೆಗಳಿಗೆ ಅನುವಾದಗೊಂಡಾಗ ತುಳುವಿನ ಸತ್ವ ಹಾಗೂ ಕಂಪು ತುಳುನಾಡಿನ ಆಚೆಗೂ ಪಸರಿಸುವುದು. ಒಂದೇ ಕೃತಿಯ ಅನುವಾದವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ಪಶ್ಚಿಮ ದೇಶಗಳಲ್ಲಿ ಒಂದು ಪುಸ್ತಕದ 10ರಿಂದ 20 ಬೇರೆ ಬೇರೆ ಮಾದರಿಯ ಅನುವಾದಗಳು ಪ್ರಕಟವಾಗುತ್ತಿವೆ. ನಮ್ಮಲ್ಲಿಯೂ ಅನುವಾದವನ್ನು ಒಂದು ವೃತ್ತಿಯಾಗಿ ಪರಿಗಣಿಸಬೇಕಿದೆ. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿಯೂ ಅನುವಾದ ಕೇಂದ್ರ ಆರಂಭವಾಗಲಿ”…
ಬೆಂಗಳೂರು : ಕಾಜಾಣ ರಂಗ ಶಾಲೆ ಇದರ ವತಿಯಿಂದ ರಂಗ ತರಬೇತಿ ತರಗತಿಗಳು ದಿನಾಂಕ 01 ಫೆಬ್ರುವರಿ 2026ರಂದು ಮೊದಲ ಬ್ಯಾಚ್ ಪ್ರಾರಂಭವಾಗಲಿದೆ. 2026ನೇ ಸಾಲಿನ ವಾರಾಂತ್ಯ ತರಗತಿಯಲ್ಲಿ ಅಭಿನಯ, ಬೆಳಕು, ಪ್ರಸಾದನ, ವಸ್ತ್ರ ವಿನ್ಯಾಸ, ರಂಗಸಜ್ಜಿಕೆ, ರಂಗ ಪರಿಕರಗಳು, ನಾಟಕ ರಚನೆ, ನಿರ್ದೇಶನ ಮತ್ತು ರಂಗ ಸಂಗೀತ ಮುಂತಾದ ಕಲಿಕಾ ವಿಷಯಗಳಲ್ಲಿ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 8123407755, 8431803866, 8660886439 ಮತ್ತು 9880339669 ಸಂಖ್ಯೆಗಳನ್ನು ಸಂಪರ್ಕಿಸಿರಿ.
ದಾವಣಗೆರೆ : ಬೆಳಕು ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಟ್ರಸ್ಟ್ (ರಿ.) ಹಾಗೂ ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ (ರಿ.) ಇವರ ಸಹಯೋಗದಲ್ಲಿ ‘ಕಲಾ ಸಮ್ಮೇಳನ – 2026’ ಕಾರ್ಯಕ್ರಮವನ್ನು ದಿನಾಂಕ 08 ಫೆಬ್ರವರಿ 2026ರಂದು ದಾವಣಗೆರೆಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಾಹಿತ್ಯ, ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮ, ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಕವಿಗೋಷ್ಠಿ, ಗಾಯನ, ನೃತ್ಯ ಹಾಗೂ ಪ್ರಶಸ್ತಿ ಪ್ರದಾನಕ್ಕೆ ಹೆಸರು ನೋಂದಣಿಗಾಗಿ ಕೊನೆಯ ದಿನಾಂಕ 24 ಜನವರಿ 2026ರ ಒಳಗೆ ನೋಂದಾಯಿಸಿಕೊಳ್ಳಿ. ಆಸಕ್ತಿಯುಳ್ಳವರು 9035996070 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಾಲತಿ ಪಟ್ಟಣಶೆಟ್ಟಿಯವರ ‘ನನ್ನ ಸೂರ್ಯ’ (2012) ಸಂಕಲನವು ಅವರ ಜೀವನ ಮತ್ತು ಕಾವ್ಯಜೀವನಕ್ಕೆ ಸಂಬಂಧಿಸಿದಂತೆ ಒಂದು ಮೈಲಿಗಲ್ಲೇ ಸರಿ. 32 ಕವಿತೆಗಳಿಂದ ಕೂಡಿದ ಈ ಸಂಕಲನದಲ್ಲಿ 23 ಪುಟ್ಟ ಪದ್ಯಗಳ ‘ನನ್ನ ಸೂರ್ಯ’ ಎಂಬ ಸರಣಿಯು ತನ್ನೆಲ್ಲ ವಿಶೇಷತೆಗಳೊಂದಿಗೆ ಕಂಗೊಳಿಸುತ್ತದೆ. ಕವಯತ್ರಿಯು ತಮ್ಮ ಮಗನನ್ನು ಸ್ಫೂರ್ತಿಯ ಸಂಕೇತವಾಗಿ, ಮೂಲ ಸೆಲೆಯಾಗಿ ಪರಿಭಾವಿಸುತ್ತಾರೆ. ‘ನನ್ನ ಸೂರ್ಯ’ ಕವನದಲ್ಲಿ ವಾತ್ಸಲ್ಯ ಭಾವವು ಕಂಡುಬರುತ್ತದೆ. ಲೋಕಕ್ಕೆ ಬೆಳಕನ್ನು ಕೊಡುವವನು ಸೂರ್ಯನಾದರೆ ತಾಯಿಯ ಮನೆಮನಗಳಿಗೆ ಬೆಳಕು ಕೊಡುವವನು ಮಗ. “ಪ್ರೊ. ಮಾಲತಿ ಈಗ ಮಾಗಿದ್ದಾರೆ. ಹಿಂದಿನ ನೆನಪುಗಳಿವೆ. ಆದರೆ ಉಪ್ಪು, ಹುಳಿ, ಖಾರಗಳ ಲೇಪನವಿಲ್ಲ. ಕವನಗಳ ತುಂಬಾ ತಾಯಿಯ ಮಮತೆ ಕಾಳಜಿಗಳಿವೆ” ಎಂದು ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟ ಚಂದ್ರಶೇಖರ ಕಂಬಾರರ ಮಾತುಗಳು ಗಮನಾರ್ಹವಾಗಿವೆ. 2022ರಲ್ಲಿ ಪ್ರಕಟವಾದ ‘ಕಳ್ಳುಬಳ್ಳಿ’ಯ ಪ್ರಸ್ತಾವನೆಯಲ್ಲಿ ಇದಕ್ಕೆ ಸಮರ್ಥನೆ ದೊರಕುತ್ತದೆ. “ಸಂತಸಪಡುವ ನನ್ನ ಮನಸ್ಸು ಹೇಳುತ್ತದೆ- ‘ನೋಡು ಹೇಗೆ ಹಬ್ಬಿಕೊಂಡಿದೆ ನಿನ್ನ ಸಾಹಿತ್ಯದ ಬಳ್ಳಿ!’ ನನ್ನದು ಈಗ ಸಂತೃಪ್ತ ಜೀವನ. ಹೀಗೆ ಮೂಡಿಕೊಂಡಿವೆ ನನ್ನ ಕಳ್ಳುಬಳ್ಳಿಯಲ್ಲಿ…
ಮಂಗಳೂರು : ‘ಅನುಪಮ’ ಮಹಿಳಾ ಮಾಸಿಕದ ಬೆಳ್ಳಿ ಹಬ್ಬದ ಸಂಭ್ರಮ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ದಿನಾಂಕ 15 ಜನವರಿ 2026ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದ ಸಾಹಿತಿ ಕೆ. ಶರೀಫಾ ಇವರು ಮಾತನಾಡಿ “ಹೋರಾಟದಲ್ಲಿ ಮುಸ್ಲಿಂ ಮಹಿಳೆಯರು ಸದಾ ಮುಂಚೂಣಿಯಲ್ಲಿರುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ, ಎನ್‌ಆರ್‌ಸಿ- ಸಿಎಎ ವಿರುದ್ಧದ ಹೋರಾಟದಲ್ಲೂ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲೂ ಹಲವು ಪ್ರಥಮಗಳನ್ನು ಸ್ಥಾಪಿಸಿದ್ದಾರೆ. ಮುಸ್ಲಿಂ ಮಹಿಳೆ ಮನೆಯಿಂದ ಹೊರ ಬರಲು ಅವಕಾಶಗಳೇ ಕಡಿಮೆ ಇದ್ದ ಸಂದರ್ಭದಲ್ಲೂ ಮಹಿಳೆಯ ನೇತೃತ್ವದಲ್ಲಿ, ಅನುಪಮ ಮಾಸಿಕ 25 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ. ಪತ್ರಿಕೆಯು ನೈತಿಕತೆಯನ್ನು ಅನುಸರಿಸಿಕೊಂಡು ಅಕ್ಷರದ ಬಳಕೆಯ ಗೌರವ ಉಳಿಸಿಕೊಂಡು ಬರುತ್ತಿದೆ” ಎಂದು ಹೇಳಿದರು. ವಕೀಲರಾದ ರೋಹಿಣಿ ಸಾಲ್ಯಾನ್ “ಮಹಿಳೆಯರಲ್ಲಿ ಅದ್ಭುತ ಶಕ್ತಿ ಇದೆ. 25 ವರ್ಷಗಳ ಕಾಲ ಮಹಿಳೆಯೊಬ್ಬರು ‘ಅನುಪಮ’ ಪತ್ರಿಕೆ ನಡೆಸಿದ್ದು ಸಣ್ಣ ವಿಚಾರವಲ್ಲ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಸಿಪಿ ನಜ್ಮಾ ಫಾರೂಕಿ,…
ಮಂಗಳೂರು : ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ 35ನೇ ವರ್ಷದ ಮಹೋತ್ಸವ ‘ಸಂದೇಶ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 21 ಜನವರಿ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ನಂತೂರಿನಲ್ಲಿರುವ ಸಂದೇಶ ಪ್ರತಿಷ್ಠಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ವಂದನೀಯ ಹೆನ್ರಿ ಡಿ’ಸೋಜರವರು ವಹಿಸಲಿದ್ದು, ನಿರ್ದೇಶಕ, ನಟ, ಚಿತ್ರಕಥೆಗಾರ ಮತ್ತು ಗೀತ ರಚನೆಕಾರ ಡಾ. ನಾಗತಿಹಳ್ಳಿ ಚಂದ್ರಶೇಖರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜಾ ಇವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ‘ಸಂದೇಶ ಸಾಹಿತ್ಯ ಪ್ರಶಸ್ತಿ – ಕನ್ನಡ’ ಡಾ. ನಾ. ಮೊಗಸಾಲೆ, ‘ಸಂದೇಶ ಸಾಹಿತ್ಯ ಪ್ರಶಸ್ತಿ – ಕೊಂಕಣಿ’ ಪ್ಯಾಟ್ರಿಕ್ ಕಾಮಿಲ್ ಮೋರಸ್, ಸಂದೇಶ ಸಾಹಿತ್ಯ ಪ್ರಶಸ್ತಿ – ತುಳು’…
ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ, ನಾಡು-ನುಡಿ ಹಬ್ಬ, ಸಾಧಕರಿಗೆ ವಿವಿಧ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 18 ಜನವರಿ 2026ರಂದು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7-30ರಿಂದ ಕಾಸರಗೋಡಿನ ವಿಶ್ವಕರ್ಮ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಧಾರ್ಮಿಕ ಮುಖಂಡರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸುವರು. ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸುವರು. ಸಾಹಿತಿ ಆಯಿಷಾ ಪೆರ್ಲ ದಿಕ್ಸೂಚಿ ಭಾಷಣ ಮಾಡುವರು. ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡುವರು. ರಾಜ ವಂಶಸ್ಥರಾದ ಮೈಸೂರಿನ ಡಾ. ಎಂ.ಜಿ.ಆರ್. ಅರಸ್ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವರು. ಡಾ. ರತ್ನಾ ಹಾಲಪ್ಪ ಗೌಡ ಕನ್ನಡ ಧ್ವಜಾರೋಹಣ ಮಾಡುವರು. ಸಭೆಯಲ್ಲಿ ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ, ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.…
ಬೈಂದೂರು : ಸುರಭಿ (ರಿ.) ಬೈಂದೂರು ಸಾಂಸ್ಕೃತಿಕ ಸಾಹಿತ್ಯ ಸೇವಾ ಪ್ರತಿಷ್ಠಾನ ಇವರ ರಜತ ವರ್ಷದ ಸಂಭ್ರಮದಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವನ್ನು ದಿನಾಂಕ 17 ಜನವರಿ 2026ರಂದು ಸಂಜೆ 6-30 ಗಂಟೆಗೆ ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಶಾರದಾ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆ ಯನ್ನು ಮಾನ್ಯ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಇವರು ವಹಿಸಲಿದ್ದು, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಇವರು ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪುರಸ್ಕೃತ ನಾಟಕ ‘ಶಿವೋಹಂ’ ಪ್ರದರ್ಶನಗೊಳ್ಳಲಿದೆ.
ಕಾಸರಗೋಡು : ಪೆರ್ಲ ಸಮೀಪದ ಬಳ್ಳಂಬೆಟ್ಟು ಶ್ರೀ ಪರಿವಾರ ಸಹಿತ ಶಾಸ್ತಾರ ದೇವಳದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ದಿನಾಂಕ 14 ಜನವರಿ 2026ರಂದು ಅಗರಿ ಭಾಗವತ ವಿರಚಿತ ‘ಶಾಂಭವಿ ವಿಲಾಸ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ್ ಭಟ್ ಹೊಸ ಮೂಲೆ, ಚೆಂಡೆ ಮದ್ದಳೆಗಳಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಕೌಶಿಕೆ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭ), ಶುಭಾ ಅಡಿಗ (ರಕ್ತಬೀಜ), ಶುಭಾ ಗಣೇಶ್ (ಚಂಡ), ಶಾರದ ಅರಸ್ (ಮುಂಡ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಸತತ ಮೂರು ವರ್ಷಗಳಿಂದ ಆಂಜನೇಯ ಮಹಿಳಾ ಯಕ್ಷಗಾನ ಸಂಘಕ್ಕೆ ತಾಳಮದ್ದಳೆ ಮಾಡುವರೇ ಅವಕಾಶವಿತ್ತ ಪ್ರಾಯೋಜಕರಾದ ಬದಿಯಡ್ಕದ ಉದ್ಯಮಿ ಗಿರಿಧರ ಪೈಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾಸರಗೋಡು : ಕಾಸರಗೋಡಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ (ರಿ.) ಇದರ ಸಹ ಸಂಸ್ಥೆಗಳಲ್ಲಿ ಒಂದಾದ ‘ನಾರಿ ಚಿನ್ನಾರಿ’ ಏರ್ಪಡಿಸುತ್ತಿರುವ ಗ್ರಾಮೀಣ ಹೆಣ್ಮಕ್ಕಳ ಅಪೂರ್ವ ಸಹೋದರಿಯರಿಂದ ವಾದ್ಯ ಸಂಗೀತ ‘ಶ್ರುತಿ ಸುಗಂಧ’ ದಿನಾಂಕ 17 ಜನವರಿ 2026ರಂದು ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾಕುಟೀರ’ದಲ್ಲಿ ನಡೆಯಲಿದೆ.