Author: roovari

ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇದರ 60ರ ಸಂಭ್ರಮದಲ್ಲಿ ದಿ. ಡಾ. ಟಿ.ಎಂ.ಎ. ಪೈ, ದಿ. ಎಸ್.ಎಲ್. ನಾರಾಯಣ ಭಟ್ ಮತ್ತು ದಿ. ಮಲ್ಪೆ ಮಧ್ವರಾಜ್ ಸ್ಮಾರಕ 45ನೇಯ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ದಿನಾಂಕ 04 ಡಿಸೆಂಬರ್ 2024ರಿಂದ 15 ಡಿಸೆಂಬರ್ 2024ರವರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 04 ಡಿಸೆಂಬರ್ 2024ರಂದು ರಂಗಭೂಮಿ (ರಿ.) ಉಡುಪಿ ಇದರ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ರಂಗಭೂಮಿ (ರಿ.) ಉಡುಪಿ ಇವರ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಕಲ್ಪವೃಕ್ಷ ಟ್ರಸ್ಟ್ ತಂಡದವರು ಭೀಷ್ಮ ರಾಮಯ್ಯ ರಚಿಸಿರುವ ಭಾಷ್ ರಾಘವೇಂದ್ರ ಇವರ ನಿರ್ದೇಶನದಲ್ಲಿ ‘ಮಿ. ರಾವ್ & ಅಸೋಸಿಯೇಟ’ ಸಾಮಾಜಿಕ ನಾಟಕ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 05…

Read More

ಬೆಂಗಳೂರು: ಶೂದ್ರ ಶ್ರೀನಿವಾಸ ನೆಲದ ಮಾತು ಪ್ರತಿಷ್ಠಾನ ಬೆಂಗಳೂರು ವತಿಯಿಂದ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿಗಾಗಿ 2023 ರಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾಗಿರುವ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿಗಳ ನಗದು ಬಹುಮಾನದ ಜೊತೆಗೆ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಆಸಕ್ತರು ಕವನ ಸಂಕಲನದ ಎರಡು ಪ್ರತಿಗಳನ್ನು ‘ಮಾನಸ ವಿದ್ಯಾಕೇಂದ್ರ’, ಅಣ್ಣಯ್ಯರೆಡ್ಡಿ ಬಡಾವಣೆ, ಜೆ. ಪಿ. ನಗರ ಆರನೇ ಹಂತ, ಬೆಂಗಳೂರು 560078 ಇಲ್ಲಿಗೆ 10 ಡಿಸೆಂಬರ್ 2024 ರ ಒಳಗಾಗಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ 7899896744, 9481485109ಕ್ಕೆ ಕರೆ ಮಾಡಿ ವಿಚಾರಿಸಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಎಚ್ ದಂಡಪ್ಪ ಅವರು ತಿಳಿಸಿದ್ದಾರೆ.

Read More

ಬಂಟ್ವಾಳ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಬಂಟ್ವಾಳ ವಲಯದ ಸಹಯೋಗದಲ್ಲಿ ಯುವ ಲೇಖಕರಿಗೆ ತರಬೇತಿ ಕರ‍್ಯಾಗಾರ ದಿನಾಂಕ 24 ನವೆಂಬರ್ 2024 ರಂದು ಮೊಡಂಕಾಪು ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ  ಬಂಟ್ವಾಳ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ವಂ. ಫಾ. ವಲೇರಿಯನ್‌ ಡಿಸೋಜ, ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಬಂಟ್ವಾಳ ವಲಯದ ಅಧ್ಯಕ್ಷರಾದ ಶ್ರೀ ಜೋನ್‌ ಲಸ್ರಾದೊ, ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಿಣ ಅಭಿವೃದ್ದಿ ಬ್ಯಾಂಕ್‌ ಇದರ ಅಧ್ಯಕ್ಷರಾದ ಶ್ರೀ ಅರುಣ್‌ ರೋಶನ್‌ ಡಿಸೋಜ,  ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೇಶ್‌ (ರಿ.) ಕೇಂದ್ರಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೊ ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ತರಬೇತುದಾರರಾಗಿ ಆಗಮಿಸಿದ…

Read More

ಕನ್ನಡದ ಪ್ರಗತಿಶೀಲ ಬರಹಗಾರ ಎಂದೇ ಪ್ರಸಿದ್ಧರಾಗಿರುವ ಎಸ್. ಅನಂತನಾರಾಯಣರು ದಿನಾಂಕ 30 ನವೆಂಬರ್ 1925ರಂದು ಮೈಸೂರಿನಲ್ಲಿ ಜನಿಸಿದರು. ಆರ್. ಸದಾಶಿವಯ್ಯ ಮತ್ತು ಗಂಗಮ್ಮ ದಂಪತಿಗಳ ಸುಪುತ್ರರಾದ ಇವರು ತಮ್ಮ ಎಲ್ಲಾ ವಿದ್ಯಾಭ್ಯಾಸವನ್ನೂ ಮೈಸೂರಿನಲ್ಲಿ ಮುಗಿಸಿದರು. ಇಂಗ್ಲೀಷ್ ಸಾಹಿತ್ಯದಲ್ಲಿ ಬಿ. ಎ. (ಆನರ್ಸ್) ಮತ್ತು ಎಂ. ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆ ಹೊಂದಿದ ಮೇಧಾವಿ. ಮೈಸೂರು ವಿಶ್ವವಿದ್ಯಾಲಯದ ಹೆಚ್ಚಿನ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ಸಂಗೀತ ನಾಟಕ ಕಾಲೇಜಿನಲ್ಲಿಯೂ ಮೂರು ವರ್ಷ ನಾಟಕ ಶಾಸ್ತ್ರದ ಉಪನ್ಯಾಸಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, ಶಿಷ್ಯ ವೃಂದದ ಅಪಾರ ಪ್ರೀತ್ಯಾದರ ಮತ್ತು ಗೌರವಗಳಿಗೆ ಪಾತ್ರರಾದವರು. ಹದಿನೇಳರ ತಾರುಣ್ಯದಲ್ಲಿಯೇ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸವನ್ನು ಅನುಭವಿಸಿದ ಇವರು ಸೆರೆಮನೆಯಿಂದಲೇ ಕವಿತಾ ರಚನೆಯ ಕಾರ್ಯ ಆರಂಭಿಸಿದರು. ‘ಅತ್ತಿಗೆ’, ‘ಆಲದ ಹೂ’, ‘ತೀರದ ಬಯಕೆ’, ‘ಪಯಣದ ಹಾದಿಯಲ್ಲಿ’, ‘ಹಣ್ಣು ಹಸಿರು’, ‘ರತ್ನ ಪರೀಕ್ಷೆ’, ‘ಸಾಹಿತ್ಯ ಮನನ’, ‘ಮುರುಕು ಮಂಟಪ’ ಮತ್ತು ‘ಸಪ್ತ ಸಮಾಲೋಕ…

Read More

ದಾವಣಗೆರೆ : ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ‘ಕರ್ನಾಟಕ ಮುಕುಟಮಣಿ’ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ‘ಹೊಂಗನಸು’ ಕವನ ಸಂಕಲನ ಲೋಕಾರ್ಪಣೆ ಸಮಾರಂಭವು ದಿನಾಂಕ 01 ಡಿಸೆಂಬರ್ 2024ರ ಭಾನುವಾರ ಪೂರ್ವಾಹ್ನ ಘಂಟೆ 9.30 ರಿಂದ ದಾವಣಗೆರೆಯ ರೈಲ್ವೆ ನಿಲ್ದಾಣ ರಸ್ತೆಯ ಗಡಿಯಾದ ಗೋಪುರದ ಬಳಿ ಇರುವ ಚೆನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ಮಾನ್ಯಶ್ರೀ ಬಿ. ವಾಮದೇವಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ರಾಯಚೂರಿನ ‘ಬೆಳಕು’ ಸಾಹಿತ್ಯ, ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ (ರಿ.) ಇದರ ಸಂಸ್ಥಾಪಕರಾದ ಮಾನ್ಯಶ್ರೀ ಅಣ್ಣಪ್ಪ ಮೆಜುಗೌಡ ಉದ್ಘಾಟಿಸಲಿದ್ದಾರೆ. ರಾಯಚೂರಿನ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ರಾಜ್ಯ ಸಮಿತಿಯ ಸಂಸ್ಥಾಪಕರು ಯುವಸಾಹಿತಿ ಹಾಗೂ ಕವಯತ್ರಿಯಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ‘ಹೊಂಗನಸು’ ಕವನ ಸಂಕಲನವನ್ನು ಲೋಕಾರ್ಪಣೆ ಗೊಳಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವ ಕನ್ನಡಿಗರ…

Read More

ಕಾರ್ಕಳ : ಡಾ. ಸುಧಾಕರ ಶೆಟ್ಟಿ ಅಧ್ಯಕ್ಷರು ಅಜೆಕಾರು ಪದ್ಮಗೋಪಾಲ ಎಜ್ಯಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಇವರು ಪ್ರಾಯೋಜಿಸಿದ ಪ್ರೊ. ಎಂ. ರಾಮಚಂದ್ರ ಸಂಸ್ಮರಣೆಯ ಉಡುಪಿ ಜಿಲ್ಲಾ ಉತ್ತಮ ‘ಯುವ ಸಾಹಿತಿ ಪ್ರಶಸ್ತಿ’ಗೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರದ ಎಚ್. ವಿಧಾತ್ರೀ ರವಿಶಂಕರ್ ಆಯ್ಕೆಯಾಗಿದ್ದಾರೆ. ಇವರ ಮೂರು ಪುಸ್ತಕಗಳು ಈಗಾಗಲೇ ಪ್ರಕಟಗೊಂಡಿದ್ದು, ನಾಲ್ಕನೆ ಪುಸ್ತಕ ‘ನಕ್ಷತ್ರ ಪಟಲ’ ಇದು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ. ಪ್ರಶಸ್ತಿ ಪ್ರದಾನವು ದಿನಾಂಕ 6 ಡಿಸೆಂಬರ್ 2024ರಂದು ನಾಲ್ಕೂರು ನರಸಿಂಗರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ನಡೆಯುವ ಕಾರ್ಕಳ ತಾಲೂಕು ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯಲಿದೆ. ಶ್ರೀಯುತ ರವಿಶಂಕರ್ ಎಚ್. ಆರ್.ಹಾಗೂ ವಸಂತಿ ರವಿಶಂಕರ್ ಇವರ ಪುತ್ರಿಯಾಗಿರುವ ವಿಧಾತ್ರೀ ರವಿಶಂಕರ್, ಸರಸ್ವತಿ ವಿದ್ಯಾಲಯ ಸಿದ್ದಾಪುರದ ಆರನೇ ತರಗತಿಯ ವಿದ್ಯಾರ್ಥಿನಿ. ಎರಡು ವರ್ಷದವಳಿದ್ದಾಗಲೇ ನೂರಾ ಒಂದು ಕೌರವರ ಹೆಸರು, ಅರವತ್ತು ಸಂವತ್ಸರಗಳು, ಮಳೆ ನಕ್ಷತ್ರಗಳು, ಸಂಸ್ಕೃತದ ಸುಭಾಷಿತಗಳು, 118 ಮೂಲವಸ್ತುಗಳು,  224…

Read More

ಮಂಗಳೂರು : ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇದರ ವತಿಯಿಂದ ‘ಹೆರಿಟೇಜ್ ವೀಕ್’ ‘ಪ್ರತಿಧ್ವನಿಗಳು : ಮಂಗಳೂರಿನಲ್ಲಿ ಆಚರಿಸುವ ಪರಂಪರೆಯ ಹಬ್ಬ’ ಎಂಬ ಕಾರ್ಯಕ್ರಮವನ್ನು ದಿನಾಂಕ 30 ನವೆಂಬರ್ 2024 ಮತ್ತು 01 ಡಿಸೆಂಬರ್ 2024ರಂದು ಮಂಗಳೂರಿನ ಹಳೆ ಡಿ.ಸಿ. ಆಫೀಸಿನಲ್ಲಿ ಆಯೋಜಿಸಲಾಗಿದೆ. ದಿನಾಂಕ 30 ನವೆಂಬರ್ 2024ರಂದು ಬೆಳಗ್ಗೆ 9-30 ಗಂಟೆಗೆ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. 10-00 ಗಂಟೆಗೆ ಶಾಲಾ ವಿದ್ಯಾರ್ಥಿಗಳಿಗೆ ಕಲಾ ಸ್ಪರ್ಧೆ, ಮಾರ್ಗದರ್ಶಿ ಮಿನಿ ಹೆರಿಟೇಜ್ ವಾಕ್‌ಗಳು ಎಲ್ಲರಿಗೂ ತೆರೆದಿರುತ್ತದೆ. ಮಧ್ಯಾಹ್ನ 2-00 ಗಂಟೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಅರ್ಬನ್ ಸ್ಕೆಚಿಂಗ್ ಸ್ಪರ್ಧೆ, ಸಮರ್ಥನೀಯತೆಯ ಕುರಿತು ಸಮಿತಿ ಚರ್ಚೆ, ಬಹುಮಾನ ವಿತರಣೆ ಮತ್ತು ಸಂಗೀತ ಸಂಜೆ ನಡೆಯಲಿದೆ. ದಿನಾಂಕ 01 ಡಿಸೆಂಬರ್ 2024ರಂದು ಪರಂಪರೆಯ ಪ್ರದರ್ಶನ ಬೆಳಿಗ್ಗೆ 10-00ರಿಂದ ಸಂಜೆ 6-00ರವರೆಗೆ ಎಲ್ಲರಿಗೂ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 7483414681 ಸಂಪರ್ಕಿಸಿರಿ.

Read More

ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ, ತುಳು, ಬ್ಯಾರಿ ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಮತ್ತು ಜಿಲ್ಲಾಡಳಿತ – ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ‘ಬಹುಸಂಸ್ಕೃತಿ ಉತ್ಸವ’ವನ್ನು ದಿನಾಂಕ 03 ಡಿಸೆಂಬರ್ 2024 ಮತ್ತು 04 ಡಿಸೆಂಬರ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾತಂಡಗಳ ಭವ್ಯ ಮೆರವಣಿಗೆ, ವಿವಿಧ ಅಕಾಡೆಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಶಿಲ್ಪಕಲಾ ಪ್ರದರ್ಶನ, ವಿದ್ಯಾರ್ಥಿ ಸಮಾವೇಶ ನಡೆಯಲಿದೆ. ದಿನಾಂಕ 03 ಡಿಸೆಂಬರ್ 2024ರಂದು ಭವ್ಯ ಸಾಂಸ್ಕೃತಿಕ ಮೆರವಣಿಗೆಯ ಉದ್ಘಾಟನೆಯು ಬೆಳಿಗ್ಗೆ 9-00 ಗಂಟೆಗೆ ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಮಾನ್ಯ ಸಭಾಧ್ಯಕರಾದ ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಫರೀದ್ ಹಾಗೂ ‘ಬಹುಸಂಸ್ಕೃತಿ ಉತ್ಸವ’ದ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಇವರಿಂದ ನೆರವೇರಲಿದೆ.…

Read More

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘವು 2020 ರಿಂದ 2024ರವರೆಗಿನ ‘ಅನುಪಮಾ ದತ್ತಿ ಪ್ರಶಸ್ತಿ’ ಪ್ರಕಟಿಸಿದ್ದು, ಐವರು ಲೇಖಕಿಯರು ಅಯ್ಕೆಯಾಗಿದ್ದಾರೆ. 2020ನೇ ಸಾಲಿನ ಪ್ರಶಸ್ತಿಗೆ ವಿಜಯಾ ಸುಬ್ಬರಾಜ್, 2021ನೇ ಸಾಲಿನ ಪ್ರಶಸ್ತಿಗೆ ಡಾ. ವಸುಂಧರಾ ಭೂಪತಿ, 2022ನೇ ಸಾಲಿನ ಪ್ರಶಸ್ತಿಗೆ ಸಬಿಹಾ ಭೂಮಿಗೌಡ, 2023ನೇ ಸಾಲಿನ ಪ್ರಶಸ್ತಿಗೆ ಕೆ. ಆರ್. ಸಂಧ್ಯಾ ರೆಡ್ಡಿ ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಲತಾ ಗುತ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಲೇಖಕಿ ಡಾ. ಅನುಪಮಾ ನಿರಂಜನ ಅವರ ಹೆಸರಿನ ದತ್ತಿ ಪ್ರಶಸ್ತಿ ಇದಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿನ ಲೇಖಕಿಯರ ಒಟ್ಟು ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ರೂಪಾಯಿ 10ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ದಿನಾಂಕ 08 ಡಿಸೆಂಬರ್ 2024ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ತಿಳಿಸಿದ್ದಾರೆ. ವಿಜಯಾ ಸುಬ್ಬರಾಜ್ ಡಾ. ವಸುಂಧರಾ ಭೂಪತಿ ಸಬಿಹಾ ಭೂಮಿಗೌಡ …

Read More

ಕಾರ್ಕಳ : ಆಳ್ವಾಸ್‌ ನುಡಿಸಿರಿ – ವಿರಾಸತ್ ಘಟಕ ಕಾರ್ಕಳ ಇದರ ವತಿಯಿಂದ ಆಳ್ವಾಸ್ ಪ್ರತಿಭಾವಂತ ವಿದ್ಯಾರ್ಥಿಗಳಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ವನ್ನು ದಿನಾಂಕ 03 ಡಿಸೆಂಬರ್ 2024ರಂದು ಸಂಜೆ ಗಂಟೆ 5-45ಕ್ಕೆ ಕಾರ್ಕಳದ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರೊ. ಎಂ. ರಾಮಚಂದ್ರ ವೇದಿಕೆಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ, ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಗೌರವಾಧ್ಯಕ್ಷರಾದ ವಿ. ಸುನಿಲ್ ಕುಮಾರ್ ಇವರು ಘನ ಉಪಸ್ಥಿತಿಯಲ್ಲಿರಲಿದ್ದಾರೆ. ಉದ್ಯಮಿ ಶಶಿಧರ ಶೆಟ್ಟಿ ಬರೋಡ ಕಾರ್ಯಕ್ರಮ ಉದ್ಘಾಟಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್‌ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಅಧ್ಯಕ್ಷ ವಿಜಯ ಶೆಟ್ಟಿ ವಹಿಸಲಿದ್ದು, ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಒಂದನೇಯ ಮೊಕ್ತೇಸರ ಜಯರಾಮ ಪ್ರಭು, ಅತ್ತೂರು ಸೈಂಟ್ ಲಾರೆನ್ಸ್ ಬಸಲಿಕಾ ಚರ್ಚ್ ನಿರ್ದೇಶಕ ರೇ. ಫಾ. ಅಲ್ಬನ್ ಡಿಸೋಜ ಹಾಗೂ ಅತ್ತೂರು ಇಮಾಮರು ಅಲ್ ಹವ್ವಾ ಮಸೀದಿಯ ಮೌಲಾನಾ ಅಬ್ದುಲ್ ಹಫೀಝ್ ದಿವ್ಯ ಉಪಸ್ಥಿತಿಯಲ್ಲಿರಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಉಡುಪಿ…

Read More