Author: roovari

ಬೆಂಗಳೂರು : ಕೋಲಾರ ಜಿಲ್ಲೆಯ ‘ಸಾರಂಗರಂಗ (ರಿ.)’ ಇವರು ಆಯೋಜಿಸುತ್ತಿರುವ ‘ಆಜೀವಿಕ’ ಅಭಿನಯಿಸುವ ‘ಮರೆತದಾರಿ’ ನಾಟಕ ಪ್ರದರ್ಶನವು ದಿನಾಂಕ 01 ಡಿಸೆಂಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಈ ನಾಟಕದ ರಚನೆ : ಲಕ್ಷ್ಮೀಪತಿ ಕೋಲಾರ, ನಿರ್ದೇಶನ : ಡಾ. ಉದಯ್ ಸೋಸಲೆ, ಸಹ ನಿರ್ದೇಶನ : ವಾಸವಿ, ಸಂಗೀತ: ಹನುಮಂತ್ ಮಂಡ್ಯ, ಬೆಳಕು : ಮಹದೇವಸ್ವಾಮಿ ಮತ್ತು ಪ್ರಸಾಧನ : ಮೋಹನ್ ಕುಮಾರ್ ಇವರದ್ದು. ಹೆಚ್ಚಿನ ಮಾಹಿತಿ ಹಾಗೂ ಟಿಕೆಟ್ ಸಂಪರ್ಕಿಸಿರಿ ಪಿಚ್ಚಲ್ಲಿ ಶ್ರೀನಿವಾಸ 9448032328 ಮತ್ತು ಡಾ. ಉದಯ್ ಸೋಸಲೆ 9535831039. “ತಾಯನ್ನೇ ಮರೆತೋರಿಗೇ | ಇಂಥ ಕನಸು ಕಾಡಲಿ | ಪೂರ್ವಿಕರ ಹಾದಿ ತೊರೆದ | ಪ್ರತಿ ಎದೆಗೂ ತಾಕಲಿ” ಆಜೀವಿಕ ತಂಡದ ಹೆಮ್ಮೆಯ ಪ್ರಯೋಗವಾದ ‘ಮರೆತ ದಾರಿ’ ನಾಟಕವು ದ್ರಾವಿಡರ ಪೂರ್ವಜರು ಸಾವಿರಾರು ವರ್ಷಗಳ ಅಲೆದಾಟದ ನಡುವೆಯೂ ತಮ್ಮ ನೆನಪಿನ ಹೊತ್ತಿಗೆಯಲ್ಲಿ ಜತನವಾಗಿ ಕಾಪಾಡಿಕೊಂಡು ಬಂದ ಸಂಸ್ಕೃತಿಯ ಮೂಲ ಬೇರು…

Read More

ಉಡುಪಿ : ತುಳುಕೂಟ ಉಡುಪಿ (ರಿ.), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ಜೈ ತುಳುನಾಡ್ (ರಿ.) ಒಡಿಪು ಎಗ್ಗೆ, ರೋಟರಿ ಕ್ಲಬ್ ಕಲ್ಯಾಣಪುರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪರಿಚಯ ಕೊಡುವ ವಿಶೇಷ ಕಾರ್ಯಕ್ರಮ ‘ತುಳು ಮಿನದನ 2024’ನ್ನು ದಿನಾಂಕ 30 ನವೆಂಬರ್ 2024ರಂದು ಬೆಳಿಗ್ಗೆ 9-30 ಗಂಟೆಗೆ ಉಡುಪಿಯ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಬಿ. ಜಯಕಾರ ಶೆಟ್ಟಿ ಇಂದ್ರಾಳಿ ಇವರು ವಹಿಸಲಿದ್ದು, ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ಉದ್ಘಾಟನೆ ಮಾಡಲಿರುವರು. ಈ ಕಾರ್ಯಕ್ರಮದಲ್ಲಿ ತುಳು ಭಾಷೆಯಲ್ಲಿ ಹಲವು ಸ್ಪರ್ಧೆಗಳು ಹಾಗೂ ವಿದ್ಯಾರ್ಥಿ ತುಳು ಕವಿಗೋಷ್ಠಿ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

Read More

ರಂಗಭೂಮಿಯಲ್ಲಿ ಒಂದು ಸೌಂದರ್ಯ ಇದೆ. ರಂಗಕಲೆಯ ಸೌಂದರ್ಯಶಾಸ್ತ್ರ ಅಡಗಿರುವುದು ಅದು ಸಮಾಜದ ಮುಂದೆ ತೆರೆದಿಡಬಹುದಾದ ಬಹುಮುಖಿ ಸಾಧ್ಯತೆಗಳು ಮತ್ತು ಆಯಾಮಗಳಲ್ಲಿ. ನಾಟಕ ಎಂದರೆ ಹೀಗೇ ಇರಬೇಕು ಎನ್ನುವ ತಾತ್ವಿಕ ಸರಳುಗಳ ಹಿಂದೆ ಕಟ್ಟಿಹಾಕಿಕೊಳ್ಳದೆ ಸಾಂದರ್ಭಿಕವಾಗಿ ಸಮಾಜದ ವಿಭಿನ್ನ ಚಹರೆಗಳನ್ನು ದಾಖಲಿಸುತ್ತಾ, ಎಲ್ಲ ಸ್ತರಗಳಲ್ಲೂ ತನ್ನ ಧ್ವನಿಯನ್ನು ದಾಖಲಿಸುವುದು ರಂಗಭೂಮಿಯ ಒಂದು ವೈಶಿಷ್ಟ್ಯ. ಕನ್ನಡದ ರಂಗಭೂಮಿ ಇದನ್ನು ಸಾಕಾರಗೊಳಿಸುತ್ತಲೇ ಬಂದಿದೆ. ವಾರ್ತಮಾನದ ಸಾಮಾಜಿಕ ಪ್ರಕ್ಷುಬ್ಧತೆ, ಆರ್ಥಿಕ ಸಂದಿಗ್ಧತೆ ಮತ್ತು ಸಾಂಸ್ಕೃತಿಕ ಗೋಜಲುಗಳ ನಡುವೆ ರಂಗಭೂಮಿಯ ಜವಾಬ್ದಾರಿ ತುಸು ಹೆಚ್ಚಾಗಿರುವುದು ವಾಸ್ತವ. ರಂಗಭೂಮಿಯತ್ತ ಸಮಾಜದ ನೋಟ ಸಾಮಾಜಿಕ ಸಂವೇದನೆಯುಳ್ಳ ಸಮಾಜದ ಒಂದು ವರ್ಗ ಸಾಹಿತ್ಯದತ್ತ , ವಿಶೇ಼ವಾಗಿ ರಂಗಭೂಮಿಯತ್ತ ದೃಷ್ಟಿ ನೆಟ್ಟಿರುತ್ತದೆ. ಸಾಂಸ್ಕೃತಿಕ ಪಲ್ಲಟಗಳಿಗೆ ಸ್ಪಂದಿಸಲು, ಜಟಿಲ ಸಾಮಾಜಿಕ ಸಿಕ್ಕುಗಳಿಗೆ ಪರಿಹಾರೋಪಾಯಗಳನ್ನು ಸೂಚಿಸಲು ಮತ್ತು ಬದುಕಿನ ಜಂಜಾಟಗಳಿಂದ ಜರ್ಜರಿತವಾದ ಸಮಾಜಕ್ಕೆ ಸಾಂತ್ವನದ ಮುಲಾಮು ಹಚ್ಚುವ ಸಾಧನಗಳಿಗಾಗಿ ಹಪಹಪಿ ಸಹಜವಾಗಿಯೇ ಇರುತ್ತದೆ, ಅದರೊಂದಿಗೆ ಒಂದು ತಿಳಿಯಾದ ವಾತಾವರಣಕ್ಕಾಗಿ, ಮನರಂಜನೆಗಾಗಿ, ಮನ-ಹೃದಯಗಳನ್ನು ಸಂತೈಸುವ ಸಂವಹನ ಸೇತುವೆಗಳಿಗಾಗಿ ಹಾತೊರೆಯುತ್ತಿರುತ್ತದೆ.…

Read More

ಪುತ್ತೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ – 2024’ ಸರಣಿಯ 18ನೇ ಕಾರ್ಯಕ್ರಮವು ದಿನಾಂಕ 30 ನವೆಂಬರ್ 2024ರ ಶನಿವಾರದಂದು ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿನ ಸಭಾಂಗಣದಲ್ಲಿ ಬೆಳಿಗ್ಗೆ 9.30 ರಿಂದ ನಡೆಯಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಅರಿಯಡ್ಕ ಹಾಗೂ ಸರಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಸಹಕಾರದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಇವರ ಪೋಷಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

Read More

ತಮಿಳುನಾಡು : ಶ್ರೀ ವಾಮನ್ ರಾವ್ ಬೇಕಲ್ ಇವರಿಗೆ ‘ಸೋಶಿಯಲ್ ಸರ್ವಿಸಸ್’ ವಿಭಾಗದಲ್ಲಿ ಏಶಿಯ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ‘ಗೌರವ ಡಾಕ್ಟಾರೇಟ್’ ಘೋಷಿಸಿದೆ. ಸೀತಮ್ಮ ಪುರುಷನಾಯಕ ಸ್ಮಾರಕ… ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ ಉಚಿತ ವಸತಿ ವ್ಯವಸ್ತೆ, ಇಂತಹ ಸಾರ್ವಜನಿಕ, ಸಮಾಜಸೇವೆ, ಕನ್ನಡ ಪರ ನಿಸ್ವಾರ್ಥ ಸೇವೆ, ಇಷ್ಟನ್ನೂ ಯಾವುದೇ ವಂತಿಗೆ, ದೇಣಿಗೆ, ಅನುದಾನ ಪಡೆಯದೆ, ನಿರ್ವಹಿಸುತ್ತಿರುವ ಇವರ ಈ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯನು ದಿನಾಂಕ 30 ನವೆಂಬರ್ 2024ರಂದು ತಮಿಳುನಾಡಿನ ಹೊಸೂರ್ ಇಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೀಡಿ ಗೌರವಿಸಲಿದೆ.

Read More

ಮಂಗಳೂರು : ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಆಶ್ರಯದಲ್ಲಿ ಹಿರಿಯ ಲೇಖಕಿ ಅವರ ಲೇಖನಗಳ ಸಂಗ್ರಹ ‘ಸಾಹಿತ್ಯ ಕವಳ’ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 24 ನವೆಂಬರ್ 2024ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ನಡೆಯಿತು. ಕೃತಿ ಲೋಕರ್ಪಣೆಗೊಳಿಸಿದ ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಿಕೆ ಡಾ. ಶೈಲಾ ಯು. ಮಾತನಾಡಿ “ಸಾಹಿತ್ಯ ಕವಳವು ವಿಷಯ ವೈವಿಧ್ಯಗಳನ್ನು ಒಳಗೊಂಡ ಕೃತಿ. ಉತ್ತಮ ಸಂಘಟಕಿ, ಬರಹಗಾರ್ತಿ ಮತ್ತು ಉತ್ತಮ ಮನುಷ್ಯ ಜೀವಿಯೂ ಆಗಿರುವ ಚಂದ್ರಕಲಾ ಅವರು ಇಲ್ಲಿ ಹಿಂಜರಿಕೆಯಿಲ್ಲದೆ, ಯಾವುದೇ ಇಸಂ ಹಾಗೂ ಅಹಂ ಇಲ್ಲದೆ ಸ್ಥಿತಪ್ರಜ್ಞತೆಯಿಂದ ಸತ್ಯವನ್ನು ತಮ್ಮ ಬರವಣಿಗೆಯಲ್ಲಿ ಹೇಳಿದ್ದಾರೆ. ಅವರ ಬರವಣಿಗೆಯಲ್ಲಿ ಹೆಣ್ಣು – ಗಂಡಿನ ಸಮಾನತೆಯ ಅಪೇಕ್ಷೆಯಿದೆ. ಜೀವನವನ್ನು ವಾಸ್ತವವಾಗಿ ನೋಡುವ ಕ್ರಮವಿದೆ.” ಎಂದರು. ಇದೇ ಸಂದರ್ಭದಲ್ಲಿ ಹೇಮಾಂಶು ಪ್ರಕಾಶನದ ವತಿಯಿಂದ ನೀಡಿಲಾದ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪ್ರಕಾಶಕರಾದ ಕಲ್ಲೂರು ನಾಗೇಶ್ “ಬರಹಗಾರರು ತಮ್ಮ ಬರಹಗಳಿಗೆ ತಾವೇ ಓದುಗರ ಬಳಗವನ್ನು ಸೃಷ್ಟಿಸಬೇಕು.” ಎಂದರು. ಸಂಘದ…

Read More

ಮೂಡುಬಿದಿರೆ: ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವತಿಯಿಂದ ಸಾಹಿತಿ ಡಾ. ಮಹಾಲಿಂಗ ಭಟ್ ಬರೆದ ನಾಣಜ್ಜೆರ್ ಸುದೆ ತಿರ್ಗಾಯೆರ್’ ಕಾದಂಬರಿಯ ಅವಲೋಕನ ಕಾರ್ಯಕ್ರಮವು ದಿನಾಂಕ 27 ನವೆಂಬರ್ 2024ರ ಬುಧವಾರದಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುಲಸಚಿವ (ಶೈಕ್ಷಣಿಕ) ಡಾ. ಟಿ. ಕೆ. ರವೀಂದ್ರನ್ “ತುಳು ಭಾಷೆಯು ತಮಿಳಿನಷ್ಟೇ ಪುರಾತನವಾದ ಭಾಷೆ. ಪ್ರಪಂಚದಾದ್ಯಂತ ಒಂದು ಕೋಟಿಗೂ ಹೆಚ್ಚು ತುಳು ಭಾಷಿಕರಿದ್ದಾರೆ. ಸಂಗಮ ಸಾಹಿತ್ಯದಲ್ಲೂ ತುಳು ಭಾಷೆಯ ಉಲ್ಲೇಖವಿದೆ. ತಮ್ಮ ಭಾಷೆಯ ಮೇಲೆ ಯಾರಿಗೂ ಕೀಳರಿಮೆ ಇರಬಾರದು. ತುಳು ಭಾಷಿಕರು ಸಾಹಿತ್ಯಕ್ಕೆ ಹೆಚ್ಚಿನ ಒಲವು ನೀಡದೇ ಇರುವುದರಿಂದ ಸಾಹಿತ್ಯದಲ್ಲಿ ತುಳು ಭಾಷೆಯು ಹಿಂದುಳಿದಿದೆ.  ತುಳು ಭಾಷಿಕರು ತುಳು  ಭಾಷೆಯನ್ನು ಉತ್ತೇಜಿಸಬೇಕು. ‘ನಾಣಜ್ಜೆರ್ ಸುದೆ ತಿರ್ಗಾಯೆರ್’ ಕೃತಿಯು ತುಳು ಸಾಹಿತ್ಯದ ಸ್ಥಿತಿಯನ್ನೇ ಬದಲಾಯಿಸಿದ ಕೃತಿಯಾಗಿದೆ. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ ಇದಾಗಿದ್ದು, ತುಳು ಸಾಹಿತ್ಯವು ಈ ಕೃತಿಯ ನಂತರ…

Read More

ಬೆಂಗಳೂರು : ಕಾವಿ ಆರ್ಟ್ ಫೌಂಡೇಶನ್ ಹಾಗೂ ಆರ್ಟ್ ಮ್ಯಾಟರ್ಸ್ ಸಂಯೋಜಿಸುವ ‘ಕರಾವಳಿಯ ಕಾವಿ ಕಲೆ ಮತ್ತು ಯಕ್ಷಗಾನ’ ಕರಿತು ವಿಚಾರ ಸಂಕಿರಣವನ್ನು ದಿನಾಂಕ 01 ಡಿಸೆಂಬರ್ 2024ರಂದು ಅಪರಾಹ್ನ 2-30 ಗಂಟೆಗೆ ಬೆಂಗಳೂರಿನ ಜಯನಗರ ಯುವ ಪಥ, ವಿವೇಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಇದರ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರು ವಹಿಸಲಿದ್ದು, ಬೆಂಗಳೂರಿನ ಸಂಶೋಧಕರಾದ ಡಾ. ವಿಶ್ವನಾಥ ಎ. ಎಸ್., ಉಡುಪಿಯ ಲೇಖಕರಾದ ಡಾ. ಪೃಥ್ವೀರಾಜ ಕವತ್ತಾರು ಮತ್ತು ಉಡುಪಿಯ ಕಲಾವಿದರಾದ ಡಾ. ಜನಾರ್ದನ ರಾವ್ ಹಾವಂಜೆ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

Read More

ಬೆಂಗಳೂರು : ಯಕ್ಷ ಸಂಕ್ರಾಂತಿ ಬಳಗ, ಅಭಾಸಾಪ ತಾಳಮದ್ದಳೆ ಘಟಕ, ಯಕ್ಷ ಶರವಣ ಬಳಗ, ರಂಗಸ್ಥಳ ಯಕ್ಷಮಿತ್ರ ಕೂಟ, ಯಕ್ಷ ಕಲಾಸಾಗರ ಬಳಗ, ಕಲಾಕ್ಷೇತ್ರ ಯಕ್ಷಮಿತ್ರ ಬಳಗ, ಯಕ್ಷನುಡಿಸಿರಿ ಬಳಗ, ಯಕ್ಷ ಸಂಗಮ ಬಳಗ, ಟೀಮ್ ತಿತ್ತಿತೈ, ಧಾರ್ಮಿಕ್ ಸಂಸ್ಥೆ ಬಳಗ, ಯಕ್ಷ ಬ್ರಹ್ಮಶ್ರೀ, ಯಕ್ಷ ಪೌರ್ಣಿಮೆ ಬಳಗ ಇವುಗಳ ಸಂಯುಕ್ತ ಆಯೋಜನೆಯಲ್ಲಿ ‘ಭೃಗುಶಾಪ’ ಯಕ್ಷಗಾನ ತಾಳಮದ್ದಳೆಯನ್ನು ದಿನಾಂಕ 29 ನವೆಂಬರ್ 2024ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಶ್ರೀ ವಿನಯ್ ಆರ್. ಶೆಟ್ಟಿ, ಶ್ರೀ ಸಂಪತ್ ಆಚಾರ್ಯ ಮತ್ತು ಶ್ರೀ ಪನ್ನಗ ಮಯ್ಯ ಹಾಗೂ ಮುಮ್ಮೇಳದಲ್ಲಿ ಶ್ರೀ ಜಬ್ಬಾರ್ ಸಮೋ, ಶ್ರೀ ಸತೀಶ್ ಶೆಟ್ಟಿ ಮೂಡುಬಗೆ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಶ್ರೀ ಅವಿನಾಶ್ ಉಬರಡ್ಕ ಮತ್ತು ಶ್ರೀ ಸುಧಾಕರ ಜೈನ ಹೊಸಬೆಟ್ಟುಗುತ್ತು ಇವರುಗಳು ಸಹಕರಿಸಲಿರುವರು. ಬೆಂಗಳೂರಿನಲ್ಲಿ ಯಕ್ಷಗಾನಗಳು ಹೆಚ್ಚು ಆಗುತ್ತಲೆ ಇರುತ್ತವೆ. ಆದರೆ ಪೌರಾಣಿಕ ಕಥೆಗಳ ಪೂರ್ಣಪ್ರಮಾಣದ ಅರಿವು ಮೂಡಿಸುವ ಕೂಟಗಳು ಅಂದರೆ ತಾಳಮದ್ದಳೆಗಳು ಬೆಂಗಳೂರಿನಲ್ಲಿ ವಿರಳ.…

Read More

ಮಂಗಳೂರು : ಕಥಾಬಿಂದು ಪ್ರಕಾಶನ ಇದರ ಹದಿನೇಳನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ‘ಕಥಾಬಿಂದು ಸಾಹಿತ್ಯೋತ್ಸವ’ವು ದಿನಾಂಕ 01 ಡಿಸೆಂಬರ್ 2024ರಂದು ಮಂಗಳೂರಿನ ಬಾಳಂಭಟ್ ಹಾಲ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ 50 ಕೃತಿಗಳ ಲೋಕಾರ್ಪಣೆ, ‘ಚೈತನ್ಯ ಶ್ರೀ’, ಸೌರಭ ರತ್ನ’, ‘ಸಮಾಜಸೇವಾ ರತ್ನ’ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾಸರಗೋಡು ಕನ್ನಡ ಭವನ ಮತ್ತು ಕನ್ನಡ ಭವನ ಪ್ರಕಾಶನ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ 7045353049 ಇವರನ್ನು ಸಂಪರ್ಕಿಸಿರಿ.

Read More