Author: roovari

ತುಮಕೂರು : ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ‘ತುಮಕೂರು ಜಿಲ್ಲಾ ಹದಿನಾರನೆಯ ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ಡಾ. ಅಗ್ರಹಾರ ಕೃಷ್ಣಮೂರ್ತಿ ಇವರು ಸಮ್ಮೇಳನಾಧ್ಯಕ್ಷತೆಯಲ್ಲಿ ದಿನಾಂಕ 29 ನವೆಂಬರ್ 2024 ಮತ್ತು 30 ನವೆಂಬರ್ 2024ರಂದು ತುಮಕೂರು ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 29 ನವೆಂಬರ್ 2024ರಂದು ಬೆಳಿಗ್ಗೆ 8-00 ಗಂಟೆಗೆ ಜಾನಪದ ಕಲಾ ತಂಡದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಸುಗಮ ಸಂಗೀತ ಪ್ರಸ್ತುತಿಯ ಬಳಿಕ ರಾಷ್ಟ್ರ ಧ್ವಜಾರೋಹಣ, ನಾಡ ಧ್ವಜಾರೋಹಣ ಮತ್ತು ಪರಿಷತ್ತಿನ ಧ್ವಜಾರೋಹಣ ನಡೆಯಲಿದೆ. 10-00 ಗಂಟೆಗೆ ಡಾ. ಶ್ರೀ ಶ್ರೀ ಹನುಮಂತನಾಥ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬೆಂಗಳೂರಿನ ಸಾಹಿತಿಗಳು ಹಾಗೂ ಚಿಂತಕರಾದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಇವರು ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಕೆ.ಎನ್. ರಾಜಣ್ಣ ಇವರು ಸ್ಮರಣ ಸಂಚಿಕೆ ‘ಕಲ್ಪಸಂಪದ’, ಸಮ್ಮೇಳನಾಧ್ಯಕ್ಷರ ಕೃತಿಗಳಾದ ನಾಡ ವರ್ಗಳ್ – ವ್ಯಕ್ತಿ ಚಿತ್ರಗಳು, ಕಾಲ್ದಾರಿ – ವಿಮರ್ಶಾ ಲೇಖನಗಳು ಮತ್ತು ಜೀನ್ಸ್ ಪ್ಯಾಂಟ್…

Read More

ಧಾರವಾಡ : ದಿನಾಂಕ 26 ನವೆಂಬರ್ 2024ರಂದು ನಡೆದ 76ನೇಯ ಸಂವಿಧಾನ ದಿನಾಚರಣೆಯ ಅಂಗವಾಗಿ ‘ಗಣಕರಂಗ’ (ರಿ) ಧಾರವಾಡ ಇವರು ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಬರಹಗಾರ, ಮೂಲವ್ಯಾಧಿ ಹಾಗೂ ಚರ್ಮರೋಗ ತಜ್ಞ, ವೈದ್ಯಕೀಯ ನಿರ್ದೇಶಕ, ಕಣಚೂರು ಮತ್ತು ಮಂಗಳಾ ಆಸ್ಪತ್ರೆಯಲ್ಲಿ ಸಲಹಾ ವೈದ್ಯರಾಗಿರುವ ಡಾ. ಸುರೇಶ ನೆಗಳಗುಳಿ ಇವರು ಬರೆದ ‘ಸ್ವಯಂ ವಿಧಾನ’ ಶಿರೋನಾಮೆಯ ಕಥೆಗೆ ಪ್ರಥಮ ಬಹುಮಾನವನ್ನು ಲಭಿಸಿದೆ. ರೂಪಾಯಿ ಐದು ಸಾವಿರ ನಗದು ಹಾಗೂ ಪ್ರಮಾಣ ಪತ್ರ ಹೊಂದಿರುವ ಈ ಪ್ರಶಸ್ತಿಯು ಅಂತರ್ಜಾಲ ಮಟ್ಟದಲ್ಲಿ ಲಭಿಸಿದ್ದು, ಪ್ರಥಮ, ದ್ವಿತೀಯ, ತೃತೀಯ ಹಾಗೂ ಹತ್ತು ಮೆಚ್ಚುಗೆಯ ಬಹುಮಾನಗಳನ್ನು ಒಳಗೊಂಡಿತ್ತು. ರಾಜ್ಯ ರಾಷ್ಟ್ರಾದ್ಯಂತದ ಹಲವು ಮಂದಿ ಕನ್ನಡಿಗರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಸಂವಿಧಾನದ ಮಹತ್ವ ಸಾರುವ ವಿಭಿನ್ನ ಕಥೆಗಳ ಬಿತ್ತರವಾಯಿತು. ಧಾರವಾಡದಲ್ಲಿ ವಿಜೃಂಭಣೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭವು ಶೀಘ್ರದಲ್ಲೇ ನಡೆಯಲಿದೆ ಎಂದು ಸಂಘಟಕ ಸಿದ್ಧರಾಮ‌ ಹಿಪ್ಪರಗಿ, ಗಣಪತಿ ಗೋ ಚಲವಾದಿ ಮತ್ತು ರವಿ ಚಲವಾದಿ ತಿಳಿಸಿರುತ್ತಾರೆ. ಈ ಸ್ಪರ್ಧೆಯಲ್ಲಿ ಡಾ ವಿ.…

Read More

ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಮಂಗಳೂರು ಸಂಗೀತೋತ್ಸವ 2024’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 29 ನವೆಂಬರ್ 2024ರಿಂದ 1 ಡಿಸೆಂಬರ್ 2024ರವರೆಗೆ ಆಯೋಜಿಸಲಾಗಿದೆ. ದಿನಾಂಕ 29 ನವೆಂಬರ್ 2024ರಂದು ಸಂಜೆ 5-00 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶರವು ಮಹಾ ಗಣಪತಿ ದೇವಸ್ಥಾನದ ಟ್ರಸ್ಟಿ ಶ್ರೀ ರಾಘವೇಂದ್ರ ಶಾಸ್ತ್ರಿ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಶ್ರೀ ಚೇರ್ತಲ ಕೆ.ಎನ್. ರಂಗನಾಥ ಶರ್ಮ ಇವರಿಂದ ಹಾಡುಗಾರಿಕೆಗೆ ಅವನೇಶ್ವರಂ ಎಸ್.ಆರ್. ವಿನು ಇವರು ವಯೋಲಿನ್, ಶ್ರೀ ಮನ್ನಾರಗುಡಿ ಎ. ಈಶ್ವರನ್ ಮೃದಂಗ ಮತ್ತು ಶ್ರೀ ವೆಲ್ಲನ್ ತ್ತಂಜೂರ್ ಶ್ರೀಜಿತ್ ಘಟಂನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 30 ನವೆಂಬರ್ 2024ರಂದು ಸಂಜೆ 5-00 ಗಂಟೆಗೆ ಶ್ರೀಮತಿ ಎನ್.ಜೆ. ನಂದಿನಿ ಇವರಿಂದ ಹಾಡುಗಾರಿಕೆಗೆ ಶ್ರೀ…

Read More

ಬೆಂಗಳೂರು: ಮಂಡ್ಯದಲ್ಲಿ 20,21 ಮತ್ತು 22 ಡಿಸಂಬರ್ 2024 ರಂದು ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿಯನ್ನು ಹೊತ್ತ ‘ಕನ್ನಡ ರಥ’ ಕನ್ನಡದ ನಾಡದೇವತೆಯಾದ ‘ಶ್ರೀ ಭುವನೇಶ್ವರಿಯ ದೇವಿ ದೇವಾಲಯ’ವಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೋಕಿನ ಭುವನಗಿರಿಯಿಂದ ಪ್ರಾರಂಭವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳನ್ನು ಸಂಚರಿಸಿ ದಿನಾಂಕ 27 ನವೆಂಬರ್ 2024ರಂದು ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಗೆ ಬಂದಿತ್ತು.\ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ, ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಮತ್ತು ಅಪಾರ ಸಂಖ್ಯೆ ಕನ್ನಡಿಗರು ಕನ್ನಡ ರಥಕ್ಕೆ ಸ್ವಾಗತವನ್ನು ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಕನ್ನಡ ರಥ ಸಂಚರಿಸಿದಲ್ಲೆಲ್ಲ ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ನೆರೆದು ಸ್ವಾಗತವನ್ನು ಕೋರಿದ್ದಾರೆ.…

Read More

ಮಂಗಳೂರು : ಮಂಗಳೂರು ಸಂಸ್ಕೃತ ಸಂಘ ಮತ್ತು ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಸೋಂದಾ ಸ್ವರ್ಣವಲ್ಲಿ ಮಠ ಶಿರಸಿ ಹಾಗೂ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧಾ ಕಾರ್ಯಕ್ರಮ ದಿನಾಂಕ 23 ನವೆಂಬರ್ 2024 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಬಿ. ಪುರಾಣಿಕರು ಮಾತನಾಡಿ “ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿದ ಶ್ರೀಕೃಷ್ಣ ಸಂದೇಶ ಸಾರ್ವಕಾಲಿಕವಾದುದು. ಜೀವನವನ್ನು ಸಂತೋಷವಾಗಿ ನೋಡಬಲ್ಲ ಅಂತರಂಗ ದೃಷ್ಟಿಯನ್ನು ಜಗತ್ತಿಗೆ ತೋರಿಸಿದ ಭಗವದ್ಗೀತಾ ಸಂದೇಶ ವಿಶ್ವಮಾನ್ಯವಾದುದು. ಹಾಗಾಗಿ ನಾವು ನಮ್ಮ ಸನಾತನ ಧರ್ಮದ ರಕ್ಷಣೆಯ ಕರ್ತವ್ಯವನ್ನು ಅರಿತು ಗೀತೆಯ ಸಾರವನ್ನು ಜನಸಾಮಾನ್ಯರಿಗೂ ತಲುಪುವಂತೆ ಮಾಡುವ ಶ್ರೀ ಸೋಂದಾ ಸ್ವರ್ಣವಲ್ಲೀ ಶ್ರೀಗಳ ಕಾರ್ಯ ಸ್ತುತ್ಯರ್ಹವಾದುದು.” ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ “ಆಧುನಿಕ ಜಗತ್ತಿಗೆ ಭಗವದ್ಗೀತಾ ಸಂದೇಶದ ಮಹತ್ವವನ್ನು ತಿಳಿಯಪಡಿಸುತ್ತಿರುವ…

Read More

ಕಾಸರಗೋಡು : ಬಿ ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್ ಕೋಲಾರ, ಕನ್ನಡ ಭವನ ಕಾಸರಗೋಡು ಹಾಗೂ ಕನ್ನಡ ಭವನ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಸವಿಸಂಭ್ರಮ ಕಾರ್ಯಕ್ರಮವು ದಿನಾಂಕ 18 ನವೆಂಬರ್ 2024 ರಂದು ಕನ್ನಡ ಭವನ ಸಭಾ ಸದನದಲ್ಲಿ ನಡೆಯಿತು. ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ವಾಮನ್ ರಾವ್ ಬೇಕಲ್ ಇವರ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸ್ವರ್ಣಭೂಮಿ ಫೌಂಡೇಶನ್ ಇದರ ಅಧ್ಯಕ್ಷರಾದ ಬಿ. ಶಿವಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಕಾಸರಗೋಡಿನ ಕನ್ನಡಿಗರ ಕನ್ನಡ ಪ್ರೇಮ ಕರ್ನಾಟಕದ ಎಲ್ಲಾ ಕನ್ನಡಿಗರಿಗೆ ಹಾಗೂ ಕನ್ನಡ ಸಂಘ ಸಂಸ್ಥೆಗಳಿಗೆ ಮಾದರಿ. ಇಲ್ಲಿ ಎಂದಿಗೂ ಕನ್ನಡ ಶಾಶ್ವತವಾಗಿ ಉಳಿಯುತ್ತೆ, ಇಲ್ಲಿನ ಮನೆ ಮನೆಗಳನ್ನು ಕನ್ನಡ ಸಂಸ್ಥೆಗಳ ಕಾರ್ಯಕ್ರಮಗಳಿಗಾಗಿ ತೆರೆದಿಟ್ಟು ಕನ್ನಡ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದೇ ಇದಕ್ಕೆ ಸಾಕ್ಷಿ. ಇದರಿಂದಲೇ ಕನ್ನಡ ಭವನ ನಮಗೆ ಮಾದರಿಯಾಗಿರುವುದು. ಇಲ್ಲಿನ ಕನ್ನಡಿಗರ ಆತಿಥ್ಯ, ಪ್ರೀತಿ, ಗೌರವ ನಮ್ಮನ್ನು ಕಾಸರಗೋಡು ಪ್ರದೇಶಕ್ಕೆ ಪದೇ ಪದೇ ಬರಲು ಪ್ರೇರಣೆ.”…

Read More

ಮಂಗಳೂರು: ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ನಡೆದ ಸರೋಜ್ ಮಧುಕಲಾ ಉತ್ಸವದ ಸಮಾರಂಭವು ದಿನಾಂಕ 23 ನವೆಂಬರ್ 2024ರ ಶನಿವಾರ ಶಾಲಾ ಸಂಸ್ಥಾಪಕ ಸರೋಜಿನಿ ಮಧುಸೂದನ ಕುಶೆ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಐ. ಸಿ. ಎ. ಐ. ಇದರ ಮಾಜಿ ಅಧ್ಯಕ್ಷರಾದ  ಸಿಎ ಎಸ್. ಎಸ್. ನಾಯಕ್ ಮಾತನಾಡಿ “ಮಕ್ಕಳಿಗೆ ಅಭಿರುಚಿ ಇರುವ ಕ್ಷೇತ್ರದಲ್ಲೇ ಅವರಿಗೆ ಪ್ರೋತ್ಸಾಹ ನೀಡಬೇಕು, ಕೇವಲ ಅಂಕಗಳಿಸುವುದೇ ಜೀವನದ ಗುರಿಯಾಗಿರಬಾರದು. ನಮ್ಮಲ್ಲಿ ಇರುವ ಪ್ರತಿಭೆಗಳಿಂದಲೇ ಜೀವನದಲ್ಲಿ ಯಶಸ್ಸು ಗಳಿಸಬಹುದು. ಸಮಯ ವ್ಯರ್ಥ ಮಾಡದೆ ನಿರಂತರ ಪ್ರಯತ್ನದ ಮೂಲಕ ಜೀವನದಲ್ಲಿ ನಾವು ಅಂದುಕೊಂಡದ್ದನ್ನು ಸಾಧಿಸಬಹುದು, ಮಕ್ಕಳ ಅನಾವರಣಕ್ಕೆ ಇದು ಉತ್ತಮ ವೇದಿಕೆಯಾಗಿದೆ.” ಎಂದು ಹೇಳಿದರು. ಮತ್ತೋರ್ವ ಅತಿಥಿ ರಂಗಭೂಮಿ ಮತ್ತು ಸಿನಿಮಾ ಕಲಾವಿದರಾದ ಪ್ರದೀಪ್ ಚಂದ್ರ ಕುತ್ಪಾಡಿ ಮಾತನಾಡಿ “ಇಂದಿನ ಕಾಲಘಟ್ಟದಲ್ಲಿ ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂಬ ಅಭಿಲಾಷೆ ಹೊಂದಿರುವ ಕುಶೆ ಸಂಸ್ಥೆಯ ಸಾಧನೆ ಅಮೋಘವಾದುದು, ಮಕ್ಕಳಲ್ಲಿರುವ ವ್ಯಕ್ತಿತ್ವ ವಿಕಸನಕ್ಕೆ ಪಠ್ಯದ…

Read More

ತೀರ್ಥಹಳ್ಳಿ : ಕೊಡಚಾದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಇದರ ಸಾಂಸ್ಕೃತಿಕ ಸಮಿತಿ ವತಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಇವರಿಂದ ‘ಯಕ್ಷಧ್ರುವ ‘ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ‘ಶ್ರೀ ಹರಿ ಲೀಲಾಮೃತ’ ಎನ್ನುವ ಕಥಾ ಪ್ರಸಂಗದ ಯಕ್ಷಗಾನ ಬಯಲಾಟವು ದಿನಾಂಕ 29 ನವೆಂಬರ್ 2024ರಂದು ಶುಕ್ರವಾರ ಸಂಜೆ 6 ಗಂಟೆಯಿಂದ 10 ಗಂಟೆವರೆಗೆ ನಡೆಯಲಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದೆದುರಿನ ಸಂಸ್ಕೃತಿ ಮಂದಿರದ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಮತ್ತು ಹಿರಿಯ ಸಹಕಾರಿಗಳಾಗಿರುವ ಡಾ. ಆರ್. ಎಂ. ಮಂಜುನಾಥ ಗೌಡ ವಿನಂತಿಸಿದ್ದಾರೆ. ಇದೇ ಸಂದರ್ಭದಲ್ಲಿ ಗುಡ್ಡೇಕೇರಿ ಕಾಳಿಂಗ ಫೌಂಡೇಶನ್ ಇದರ ಡಾ. ಗೌರಿಶಂಕರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ತೀರ್ಥಹಳ್ಳಿ ತಾಲೂಕಿನವರಾದ ಎಂ. ಕೆ. ರಮೇಶ್ ಆಚಾರ್ಯ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ವಿಜೇತ ಕೊಕ್ಕುಡ್ತಿ…

Read More

ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ನ ಮಂಗಳೂರು ವಿಭಾಗವು ವಿಶ್ವ ಪರಂಪರೆಯ ಸಪ್ತಾಹದ ಆಚರಣೆಯ ಅಂಗವಾಗಿ ಸಪ್ತಾಹದ ಸರಣಿಯಲ್ಲಿ ನಾಲ್ಕನೇ ಕಾರ್ಯಕ್ರಮವಾಗಿ ಆಯೋಜಿಸಿದ ಕಾವಿ ಕಲಾ ಪರಂಪರೆ ಕುರಿತು ಉಪನ್ಯಾಸವು ದಿನಾಂಕ 22 ನವೆಂಬರ್ 2024ರಂದು ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು. ಈ ಸ್ಥಳೀಯ ಮತ್ತು ಬಹುಮುಖ ಕಲಾ ಪ್ರಕಾರದ ಐತಿಹಾಸಿಕ ವಿಕಸನದ ಕುರಿತು ಖ್ಯಾತ ಕಲಾವಿದ ಮತ್ತು ಕಾವಿ ಕಲೆ ಕ್ಷೇತ್ರದ ಸಂಶೋಧಕ ಡಾ. ಜನಾರ್ದನ ರಾವ್ ಹಾವಂಜೆಯವರು ವಿವರವಾದ ಪ್ರಸ್ತುತಿಯನ್ನು ನೀಡಿದರು. ಸುಣ್ಣ, ಕೆಂಪು ಮಣ್ಣು ಮತ್ತು ಮರಳಿನಂತಹ ನೈಸರ್ಗಿಕ ವಸ್ತುಗಳನ್ನು ಬಳಸಿ, ವಿಭಿನ್ನ ಶೈಲಿಗಳನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಡಾ. ಹಾವಂಜೆಯವರ ಪ್ರಸ್ತುತಿಯು ಕೊಂಕಣ ಕರಾವಳಿಯಾದ್ಯಂತ ದೇವಾಲಯಗಳು, ಚರ್ಚ್ ಮತ್ತು ಖಾಸಗಿ ಮನೆಗಳಲ್ಲಿ ಕಾವಿ ಕಲೆಯನ್ನು ಪ್ರದರ್ಶಿಸುವ ಛಾಯಾಚಿತ್ರಗಳನ್ನು ಒಳಗೊಂಡಿತ್ತು. ಕಾವಿ ಕಲೆ ನಿಯಮಿತ ರೂಪರೇಷೆಗಳಿಲ್ಲದ ವಿಧಾನ ಆಧಾರಿತ ಕಲೆ, ಇದು ವಿಭಿನ್ನ ಕಲಾಶೈಲಿಗಳನ್ನು…

Read More

ಬೆಂಗಳೂರು : ಮಂಡ್ಯದಲ್ಲಿ ದಿನಾಂಕ 20 ಡಿಸಂಬರ್ 2024ರಿಂದ 22 ಡಿಸೆಂಬರ್ 2024ರವರೆಗೆ ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಬರಹಗಾರ, ಜನಪದ ವಿದ್ವಾಂಸ ಗೊ.ರು. ಚನ್ನಬಸಪ್ಪನವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ದಿನಾಂಕ 20 ನವೆಂಬರ್ 2024ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ 60 ಸದಸ್ಯರಲ್ಲಿ 53 ಜನ ಭಾಗವಹಿಸಿದ್ದು, ಐತಿಹಾಸಿಕವೆಂದು ತಿಳಿಸಿದ ಅವರು ಸೌಹಾರ್ದಯುತ ವಾತಾವರಣದಲ್ಲಿ ಈ ಚರ್ಚೆ ನಡೆದು ಗೊ.ರು.ಚ. ಅವರ ಆಯ್ಕೆಯಾಯಿತು. ಆಯ್ಕೆಯ ನಂತರ ನಾಡೋಜ ಡಾ. ಮಹೇಶ ಜೋಷಿಯವರು ದೂರವಾಣಿಯ ಮೂಲಕ ಗೊ.ರು. ಚನ್ನಬಸಪ್ಪನವರಿಗೆ ವಿಷಯವನ್ನು ತಿಳಿಸಿ ಅಭಿನಂದಿಸಿದಾಗ ಅವರು ಅತ್ಯಂತ ಸಂತೋಷದಿಂದ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದನ್ನೂ ನಾಡೋಜ ಡಾ.ಮಹೇಶ ಜೋಶಿ ಪತ್ರಿಕಾ ಗೋಷ್ಟಿಯಲ್ಲಿ ಹಂಚಿಕೊಂಡರು.…

Read More