Author: roovari

ಉಡುಪಿ : ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು (ರಿ.), ಉಡುಪಿ ಇದರ ವತಿಯಿಂದ ಡಾ. ನಿ. ಮುರಾರಿ ಬಲ್ಲಾಳ್ ಮತ್ತು ಪ್ರೊ. ಕೆ.ಎಸ್. ಕೆದ್ಲಾಯ ನೆನಪಿನ ‘ಮುರಾರಿ-ಕೆದ್ಲಾಯ ರಂಗೋತ್ಸವ’ವನ್ನು ದಿನಾಂಕ 15 ಫೆಬ್ರವರಿ 2025ರಿಂದ 17 ಫೆಬ್ರವರಿ 2025ರವರೆಗೆ ಪ್ರತಿದಿನ ಗಂಟೆ 6-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಡಾ. ಎನ್. ಮುರಾರಿ ಬಲ್ಲಾಳ್ ಚಿಂತನ ಫೌಂಡೇಶನ್ (ರಿ.) ಅಂಬಲಪಾಡಿ ಇವರ ಸಹಕಾರದೊಂದಿಗೆ ನಡೆಯಲಿದೆ. ದಿನಾಂಕ 15 ಫೆಬ್ರವರಿ 2025ರಂದು ಮಂಗಳೂರಿನ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಮುನೀರ್ ಕಾಟಿಪಳ್ಳ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಮತ್ತು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ದಿನಾಂಕ 15 ಫೆಬ್ರವರಿ 2025ರಂದು ಹುಲುಗಪ್ಪ ಕಟ್ಟಿಮನಿ ಇವರ ನಿರ್ದೇಶನದಲ್ಲಿ ಸಂಕಲ್ಪ…

Read More

ಅಪ್ಪನ ಕಾಯುತ್ತಾ ಇನ್ನೂ ನೆನೆಪಿದೆ… ಅದೊಂದು ಬದುಕಿತ್ತು ಅಪ್ಪ ಅಮ್ಮನಿಂದ ಜಗತ್ತು ಬೆಳಗಿತ್ತು ಅಮ್ಮನ ಮಡಿಲು ಅಪ್ಪನ ಹೆಗಲು ಎಲ್ಲವೂ ಚೆನ್ನಾಗಿತ್ತು! ನಾನು ಕಿಲ ಕಿಲ ನಗುತ್ತ ಕಣ್ಣು ಅರಳಿಸಿ ನೋಡುತ್ತಾ ಜಗತ್ತು ಚೆಂದ ವಿತ್ತು. ಅಪ್ಪನಿಗೆ ಕನಸಿತ್ತು ಮನೆಯಲ್ಲಿ ನಗುವಿತ್ತು! ಅಂಗಳದ ತುಂಬಾ ಸಂಭ್ರಮವಿತ್ತು! ಅಪ್ಪನಿಗೆ ಸ್ನೇಹಿತರ ಗುಂಪು ಜೊತೆಯಾಯ್ತು ಮೊದ ಮೊದಲು ಖುಷಿಗೆಂದು, ನಂತರ ತಲೆಬಿಸಿಗೆಂದು ಕುಡಿತ ನಮ್ಮನೇಲಿ ತಳವೂರಿತು! ಕುರುಕಲು ತಿಂಡಿಯೇನೋ ಸಿಗುತಿತ್ತು! ಆದರೆ ಬಾಲ್ಯವೇ ಸುಟ್ಟು ಕರಕಲಾಯ್ತು! ಅಪ್ಪನೆಂಬ ಆಕಾಶ ಮುರಿದು ಬಿದ್ದಿತು! ಅಪ್ಪನೆಂದರೆ ಈಗ ಅಭದ್ರತೆ ! ಅಮ್ಮ ಎಂದರೆ ರೋಧನ! ನೆಂಟರ ಅವಹೇಳನ, ಸ್ನೇಹಿತರ ಅಪಹಾಸ್ಯ. ಕುಸಿದು ಕುಳಿತಿದ್ದೇನೆ ಕುರುಡು ದೀಪವಿಟ್ಟು ಕಳೆದು ಹೋದ ಅಪ್ಪನ ದಾರಿ ಕಾಯುತ್ತಾ… ಮರಳಿ ಬಂದು ಬಿಡಪ್ಪ. ನನ್ನನ್ನು ನಾನು. ಕಳೆದು ಕೊಳ್ಳುವ ಮೊದಲು! -ಅಕ್ಷತಾ ಪ್ರಶಾಂತ್ ಕವಯಿತ್ರಿ/ಆಪ್ತಸಮಾಲೋಚಕಿ/ ಬ್ಯಾಂಕ್ ಉದ್ಯೋಗಿ, ಟೀಚರ್ಸ್ ಬ್ಯಾಂಕ್ ಉಡುಪಿ

Read More

ಬೆಂಗಳೂರು : ‘ಪದ’ ಬೆಂಗಳೂರು ಆಯೋಜಿಸುವ ‘ಬಂಜೆಗೆರೆ ಜಯಪ್ರಕಾಶ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಅಭಿನಂದನಾ ಸಮಾರಂಭ’ವು ದಿನಾಂಕ 11 ಫೆಬ್ರವರಿ 2025ರ ಮಂಗಳವಾರ ಬೆಳಿಗ್ಗೆ ಘಂಟೆ 10.00ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಆರಂಭದಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಶಂಕರ ಭಾರತೀಪುರ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಾಹಿತಿಗಳಾದ ಡಾ. ಕೆ. ಮರುಳಸಿದ್ದಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಾಹಿತಿಗಳಾದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ಪ್ರೊ. ಎಲ್. ಎನ್. ಮುಕುಂದರಾಜ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಡಾ. ಎಚ್. ಎಸ್. ರಾಘವೇಂದ್ರ ರಾವ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ಡಾಕ್ಟರ್ ಮಂಜುನಾಥ ಅದ್ದೆ ಹಾಗೂ ಡಾಕ್ಟರ್ ಸ್ವಾಮಿ ಆನಂದ್ ಆರ್. ಇವರು ‘ಬಂಜೆಗೆರೆಯವರ…

Read More

ಹಳೆಬೇರು‌ ಹೊಸಚಿಗುರಿನಿಂದ ಕೂಡಿದಾಗಲೇ ಕಲಾ ವಿಕಸನ ಸಾಧ್ಯ. “ಪ್ರಜ್ಞಾ ನವನವೋನ್ಮೇಷ ಶಾಲಿನಿ‌ ಕಸ್ಯಚಿತ್ ಪ್ರತಿಭಾ ಮತ” ಎಂದು ಭಟ್ಟ ತೌತನು ಹೇಳಿದಂತೆ ಜ್ಞಾನದ ವಿಕಸನದಿಂದ ಶೋಭಾಯಮಾನವಾದ್ದು ಪ್ರತಿಭೆ. ಅಧ್ಯಯನಶೀಲರು, ಚಿಂತನಾಶೀಲರು ಜತೆಗೆ ಶ್ರದ್ಧೆ, ಉತ್ಸಾಹ, ಪರಿಶ್ರಮವುಳ್ಳವರಿಗೆ ಮಾತ್ರ ಅದು ಸಿದ್ಧಿಸುತ್ತದೆ. ಈ ಮಾತುಗಳನ್ನು ನೆನಪಾಗುವಂತೆ ಮಾಡಿದವರು ಧಾರಾವಾಡದ ರತಿಕಾ ನೃತ್ಯ ನಿಕೇತನದ ಗುರು ಶ್ರೀಮತಿ ನಾಗರತ್ನ ಹಡಗಲಿ ಅವರ ವಿದ್ಯಾರ್ಥಿನಿಯರಾದ ವಿದುಷಿ ಡಾ.ಸಮತಾ ಗೌತಮ್ ಹಾಗೂ ವಿದುಷಿ ಸೃಷ್ಟಿ ಕುಲಕರ್ಣಿ. ಇತ್ತೀಚೆಗೆ ತಮ್ಮ‌ ನೃತ್ಯ ಜೀವನದ ಮೈಲಿಗಲ್ಲನ್ನು ನೆನಪಿಸುವ ನೆಪದಲ್ಲಿ ಪರಿಪೂರ್ಣ ಭರತನಾಟ್ಯ ಮಾರ್ಗಂ ನ ರಂಗಪ್ರಸ್ತುತಿಯನ್ನು ಅದ್ಭುತವಾಗಿ ನೀಡಿ ಜನಮನ ಗೆದ್ದವರು ಸಮತಾ ಮತ್ತು ಸೃಷ್ಟಿ. ಕಳೆದ 2024 ಸಪ್ಟಂಬರ್ ನಲ್ಲೇ ಸಮತಾ ಕರೆ ಮಾಡಿ ತಮ್ಮ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಧಾರಾವಾಡದ “ಸೃಜನಾ” ರಂಗಂಮಂದಿರಕ್ಕೆ ಬರಬೇಕೆಂದು ವಿನಂತಿಸಿಕೊಂಡಿದ್ದರು. ಒಪ್ಪಿದೆ. “ಸಮಸೃಷ್ಟಿ ನೃತ್ಯಾರ್ಪಣಂ” – ರಜತದಶ ಸಂಭ್ರಮ ಎಂಬ ಶೀರ್ಷಿಕೆಯಲ್ಲಿ 01 ಫೆಬ್ರವರಿ 2025ರಂದು ನಡೆದ ಕಾರ್ಯಕ್ರಮ. ತಮ್ಮ‌…

Read More

ತುಮಕೂರು : ನಾಟಕ ಮನೆ ತುಮಕೂರು ಇವರು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸುವ ಎರಡು ದಿನಗಳ ನಾಟಕೋತ್ಸವ ಕಾರ್ಯಕ್ರಮವು ದಿನಾಂಕ 13 ಮತ್ತು 14 ಫೆಬ್ರವರಿ 2925ರಂದು ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತಡೆಯಲಿದೆ. ದಿನಾಂಕ 13 ಫೆಬ್ರವರಿ 2025ರ ಗುರುವಾರದಂದು ಮೇದೂರು ತೇಜ ರಚನೆ ಹಾಗೂ ಧೀಮಂತ್ ರಾಮ್ ನಿರ್ದೇಶನದದಲ್ಲಿ ಸರ್ಕಾರಿ ಕಲಾ ಕಾಲೇಜು ಚಿತ್ರದುರ್ಗ ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸುವ ದಯಾನದಿ ದಂಡೆಯ ಮೇಲೆ ನಾಟಕ ಪ್ರದರ್ಶನಗೊಳ್ಳಲಿದ್ದು, ದಿನಾಂಕ 14 ಫೆಬ್ರವರಿ 2025ರಂದು ಮಂಡ್ಯ ರಮೇಶ್ ಇವರ ಮರುರೂಪ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ನಟನ’ ಮೈಸೂರು ಅಭಿನಯಿಸುವ ಚೋರ ಚರಣದಾಸ ನಾಟಕ ಪ್ರದರ್ಶನ ಗೊಳ್ಳಲಿದೆ.

Read More

ಮೈಸೂರು : ರಂಗಾಯಣ ಮೈಸೂರು ಇದರ ವತಿಯಿಂದ ರಂಗಾಯಣ ವಾರಾಂತ್ಯ ರಂಗಪ್ರದರ್ಶನದ ಪ್ರಯುಕ್ತ ರೆಪರ್ಟರಿ ಹಿರಿಯ ಕಲಾವಿದರು ಅಭಿನಯಿಸುವ ಡಿವೈಸ್ಡ್ ನಾಟಕ ‘ಕಾಣೆ ಆದವರು’ ಇದರ ಪ್ರದರ್ಶನವನ್ನು ದಿನಾಂಕ 09 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಮೈಸೂರು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ಸೌರವ್ ಪೋದ್ದಾರ್ ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ನಂದಿನಿ ಕೆ.ಆರ್., ಶಶಿಕಲಾ ಬಿ.ಎನ್. ಮತ್ತು ಗೀತಾ ಮೋಂಟಡ್ಕ ಇವರು ಅಭಿನಯಿಸಲಿದ್ದಾರೆ.

Read More

ಎಸ್. ವಿ. ಪರಮೇಶ್ವರ ಭಟ್ಟ ಇವರ ಪೂರ್ಣ ಹೆಸರು ಸದಾಶಿವ ರಾವ್ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ. ಶಿವಮೊಗ್ಗ ಜಿಲ್ಲೆಯ ಮಾಳೂರಿನಲ್ಲಿ 8 ಫೆಬ್ರವರಿ 1914ರಂದು ಜನಿಸಿದ ಇವರ ತಂದೆ ಸದಾಶಿವ ರಾವ್ ಹಾಗೂ ತಾಯಿ ಲಕ್ಷ್ಮಮ್ಮ. ಎಳವೆಯಲ್ಲಿಯೇ ನಾಟಕ, ಯಕ್ಷಗಾನ ಮತ್ತು ಓದುವುದರತ್ತ ಪರಮೇಶ್ವರರ ಮನಸ್ಸು ವಾಲಿತ್ತು. ಈ ಆಸಕ್ತಿಗೆ ನೀರುಣಿಸಿ ಬೆಳೆಸಿದವರು ತಂದೆ ತಾಯಿ. ಉಪಾಧ್ಯಾಯರಾಗಿದ್ದ ಸದಾಶಿವರಾಯರು ಪರಮೇಶ್ವರರಿಗೆ ಓದಲು ಹಲವಾರು ಪುಸ್ತಕಗಳನ್ನು ತಂದು ಕೊಡುತ್ತಿದ್ದರು ಮತ್ತು ಯಕ್ಷಗಾನ, ನಾಟಕಗಳಲ್ಲಿ ಸ್ವತಃ ಆಸಕ್ತಿ ಮತ್ತು ಹವ್ಯಾಸವಿದ್ದ ಸದಾಶಿವ ಭಟ್ಟರು ಮಗ ಪರಮೇಶ್ವರ ಭಟ್ಟರನ್ನೂ ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಮುಂದೆ ಪರಮೇಶ್ವರ ಭಟ್ಟರಿಗೆ ವಿವಿಧ ವೇಷಗಳ ಬಣ್ಣವನ್ನು ಮುಖಕ್ಕೆ ಹಚ್ಚಿ, ಗೆಜ್ಜೆ ಕಟ್ಟಿ, ರಂಗಕ್ಕೇರಿಸಿ, ಕುಣಿಸಿ ಸಂತೋಷಪಡುತ್ತಿದ್ದರು ತಂದೆ ಸದಾಶಿವ ಭಟ್ಟರು. ಸದಾಶಿವ ಭಟ್ಟರದು ಕಲಾ ಶ್ರೀಮಂತ ಕುಟುಂಬ. ಈ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಓಂದಿಲ್ಲೊಂದು ಕಲೆಗೆ ತಮ್ಮನ್ನು ಒಡ್ಡಿಕೊಂಡವರು. ಎಸ್. ವಿ. ಪಿ. ಅವರ ಸರ್ವತೋಮುಖ ಅಭಿವೃದ್ಧಿಗೆ ತಂದೆ…

Read More

ಇವರ ಹೆಸರು ಗಣೇಶ್ ನಿಲವಾಗಿಲು. ಪ್ರಸ್ತುತ ಕೊಡಗು ಜಿಲ್ಲೆ ವಿರಾಜಪೇಟೆಯ ಉಪ ಖಜಾನೆಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಿಲವಾಗಿಲು ಗ್ರಾಮದ ಪಟೇಲ ಮನೆತನದ ಕೃಷ್ಣಗೌಡ ಹಾಗೂ ಯಶೋದಮ್ಮ ದಂಪತಿಯ ಪುತ್ರ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿಲವಾಗಿಲು ಗ್ರಾಮದಲ್ಲಿ ಪಡೆದುಕೊಂಡಿದ್ದಾರೆ. ಬಳಿಕ ಹುಣಸೂರಿನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ವ್ಯಾಸಂಗವನ್ನು ಮಾಡಿದ್ದಾರೆ. ಹುಣಸೂರಿನ ಡಿ. ದೇವರಾಜ ಅರಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಪದವಿ ವ್ಯಾಸಂಗದ 2004ನೇ ಸಾಲಿನ ಅಂತಿಮ ಬಿ.ಎ. ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿದ್ದಾರೆ. ತದಾ ನಂತರ ಚಾಮರಾಜನಗರದ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ 2005ನೇ ಸಾಲಿನ ಬಿ.ಇಡಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಹುಣಸೂರಿನ ಶಾಸ್ತ್ರಿ ಮತ್ತು ಟ್ಯಾಲೆಂಟ್ ಶಾಲೆಗಳಲ್ಲಿ ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿದ್ದಾರೆ. ಎರಡು ವರ್ಷಗಳ ಬಳಿಕ 2007ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ಹತ್ತು ವರ್ಷಗಳ…

Read More

ಬೆಂಗಳೂರು : ಸಂಚಾರಿ ಥಿಯೇಟರ್ 20ನೇ ವರ್ಷದ ರಂಗಸಂಭ್ರಮದ ಸಂಚಾರಿ ಸಡಗರದಲ್ಲಿ ‘ಶ್ರೀದೇವಿ ಮಹಾತ್ಮೆ’ ನಾಟಕ ಪ್ರದರ್ಶನವು ದಿನಾಂಕ 09 ಫೆಬ್ರವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರಸ್ತುತಗೊಳ್ಳಲಿದೆ. ವಸುಧೇಂದ್ರ ರಚಿಸಿರುವ ಈ ನಾಟಕಕ್ಕೆ ಶಶಿಧರ ಅಡಪ ರಂಗಸಜ್ಜಿಕೆ, ವಿನಯ್ ಚಂದ್ರ : ಬೆಳಕು, ಗಜಾನನ ಟಿ. ನಾಯ್ಕ ಸಂಗೀತ ನೀಡಿದ್ದು, ಮಂಗಳಾ ಎನ್. ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ಕಲಾವಿದರಾದ ಪ್ರಸನ್ನ ಶೆಟ್ಟಿ, ಸತ್ಯಶ್ರೀ ಮತ್ತು ನಾಗರಾಜ್ ವಿ. ಇವರುಗಳು ಅಭಿನಯಿಸಲಿದ್ದಾರೆ. ಶ್ರೀದೇವಿ ಮಹಾತ್ಮೆ ವಸುಧೇಂದ್ರ ಇವರ ಸಣ್ಣ ಕತೆಯೊಂದನ್ನು ಆಧರಿಸಿ ಮಾಡಿದ ರಂಗರೂಪ. ಅಪಾರ್ಟ್ಮೆಂಟ್ ಒಂದರಲ್ಲಿ ನಡೆಯುವ ಈ ನಾಟಕ ಬೆಂಗಳೂರಿನ ಓಟದ ಬದುಕಿನ, ನಗರೀಕರಣಗೊಂಡ ಬದುಕಿನಲ್ಲಿನ ಅಚ್ಚರಿಗಳು, ಕಳೆದುಹೋಗಿರುವ ಸೂಕ್ಷ್ಮಗಳು, ಬದಲಾದ ಗ್ರಹಿಕೆಗಳು, ಸಹಜವೆನಿಸಿಬಿಡುವ ಅಸಹಜ ನಂಬಿಕೆಗಳು, ಕನಸುಗಳು, ಬದಲಾದ ಬದುಕಿನ ಗತಿಯ ಬಗ್ಗೆ ಮಾತಾಡುತ್ತದೆ. ಬದುಕನ್ನು ನೋಡುವ ಭಿನ್ನ ಬಗೆಗಳು, ವ್ಯಕ್ತವಾಗುತ್ತವೆ. ಸ್ವಸ್ಥ ಬದುಕಿನ ಮೂಲದ್ರವ್ಯಕ್ಕಾಗಿ ನಡೆಸುವ ಹೋರಾಟವೂ ಕಾಣಿಸುತ್ತದೆ. ಇದೊಂದು ನಗರ…

Read More

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬೆಂಗಳೂರು ಕ.ಸಾ.ಪ. ವತಿಯಿಂದ ಜಿ.ಎಸ್. ಶಿವರುದ್ರಪ್ಪರವರ 99ನೆಯ ಜನ್ಮದಿನೋತ್ಸವ ಕಾರ್ಯಕ್ರಮವು ದಿನಾಂಕ 07 ಫೆಬ್ರವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಜಿ.ಎಸ್.ಎಸ್. ತಮ್ಮ ಕವಿತೆಗಳಲ್ಲಿ ಎರಡು ಜಗತ್ತುಗಳಿಗೆ ಸ್ಪಂದಿಸಿದ್ದನ್ನು ಕಾಣಬಹುದು. ಒಂದು ಜೀವಸಂಮೃದ್ಧ ಪ್ರಕೃತಿ; ಇನ್ನೊಂದು ಮಾನವ ಕೇಂದ್ರಿತ ಸಮಾಜ. ಬೆರಗು ಮತ್ತು ಹುಡಕಾಟ ಅವರ ಕವಿತೆಗಳ ಪ್ರಧಾನ ಭಾವಗಳಾಗಿದ್ದವು. ಪ್ರಕೃತಿಯ ನಿಯತ ಲಯಗಳು ಕವಿಗೆ ಸದಾ ಆಕರ್ಷಣೆಯನ್ನು ಉಂಟುಮಾಡಿದ್ದವು. ಕವಿಗಳ ಕುರಿತ ‘ಮಧುರ ಮಧುರವೀ ಮಂಜುಳಗಾನ’ ಕಾರ್ಯಕ್ರಮವನ್ನು ಏರ್ಪಡಿಸಿದಾಗ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಷ್ಟೇ ಎತ್ತರಕ್ಕೆ ಏರಿದರೂ ತಮ್ಮ ಬಡತನದ ದಿನಗಳನ್ನು ಅವರು ಮರೆತಿರಲಿಲ್ಲ. ಹೀಗಾಗಿ ಅವರಿಗೆ ಬದುಕಿನಲ್ಲಿ ಯಾವುದಕ್ಕೆ ಮಹತ್ವ ನೀಡಬೇಕು ಎನ್ನುವುದು ಖಚಿತವಾಗಿ ಗೊತ್ತಿತ್ತು. ಅವರ ‘ಸ್ತ್ರೀ’ ಕವಿತೆ ನನ್ನ ಮೇಲೆ ಅಪಾರ ಪ್ರಭಾವವನ್ನು ಬೀರಿದಂತಹದು. ಈ ಪ್ರೇರಣೆಯಿಂದಲೇ ನಾನು ಎಲ್ಲಾ ಸ್ತ್ರೀಯರನ್ನು ಗೌರವಿಸುತ್ತೇನೆ. ‘ಕಾಣದ…

Read More