Author: roovari

ತೆಕ್ಕಟ್ಟೆ: ಕಳೆದ ಹಲವಾರು ವರ್ಷಗಳಿಂದ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ ಕೆಲವು ಚಿಣ್ಣರಿಗೆ ಹೂವಿನಕೋಲು ಪ್ರದರ್ಶನಕ್ಕೆ ತಯಾರಿ ನಡೆಸಿ ದಿನಾಂಕ 15-10-2023 ರಿಂದ 24-10-2023ರವರೆಗೆ ನವರಾತ್ರಿ ಸಂದರ್ಭದಲ್ಲಿ ಆಯ್ದ ಮನೆ ಮನೆಗಳಿಗೆ ಪ್ರದರ್ಶನ ನೀಡಲು ತೆರಳುತ್ತಿದ್ದಾರೆ. ಪ್ರತೀ ದಿನ ಬೆಳಿಗ್ಗೆ ಘಂಟೆ 8.00ರಿಂದ ಸಂಜೆ ಗಂಟೆ 7.00ರ ತನಕ ಕುಂದಾಪುರ, ಉಡುಪಿ, ಮಂಗಳೂರು ಭಾಗದಲ್ಲಿ 20 ಪೌರಾಣಿಕ ಪ್ರಸಂಗದ ತುಣುಕುಗಳನ್ನು ಅಭ್ಯಸಿಸಿ, ಕಲಾಸಕ್ತರ ಮನೆಗಳಿಗೆ ತೆರಳಿ ಪ್ರದರ್ಶಿಸಲಿದ್ದಾರೆ. ‘ಧನ ಕನಕ, ಸಂಪತ್ತು ಸಂಮೃದ್ಧಿಯಾಗಲೆಂದು’ ಹಾರೈಸುವುದಕ್ಕಾಗಿ ಯಶಸ್ವೀ ಕಲಾವೃಂದ ಚಿಣ್ಣರ ಪಡೆ ಪ್ರತೀ ವರ್ಷದಂತೆ ಈ ವರ್ಷವೂ ಅಭಿಯಾನ ರೂಪದ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದೆ. ಈ ಅಳಿವಿನಂಚಿನಲ್ಲಿರುವ ಕಲಾ ಪ್ರಕಾರವನ್ನು ಪುನಃರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸತತ 15ವರ್ಷಗಳಿಂದ ಯಶಸ್ವೀ ಕಲಾವೃಂದ ಶ್ರಮಿಸುತ್ತಿದೆ. ಕಲಾಸಕ್ತರು ತಮ್ಮ ಮನೆಗೂ ಆಹ್ವಾನಿಸುವುದಿದ್ದರೆ ಸಂಪರ್ಕ ಸಂಖ್ಯೆ:994594771 ಸಂಪರ್ಕಿಸಬಹುದೆಂದು ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ ತಿಳಿಸಿದ್ದಾರೆ.

Read More

ಮಂಗಳೂರು : ಕಾಂತಾವರ ಕನ್ನಡ ಸಂಘದ 2023ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ‘ಶ್ರೀಮತಿ ಸರಸ್ವತಿ ಬಲ್ಲಾಳ್ ಮತ್ತು ಡಾ. ಸಿ.ಕೆ. ಬಲ್ಲಾಳ್ ದಂಪತಿ ಪ್ರತಿಷ್ಠಾನ’ದಿಂದ ನೀಡುವ ‘ಕರ್ನಾಟಕ ಏಕೀಕರಣದ ನೇತಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಗೆ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಮೂರ್ಕಜೆಯಲ್ಲಿರುವ ಮೈತ್ರೇಯಿ ಗುರುಕುಲವನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಭಾಷಾ ತಜ್ಞ ಯು.ಪಿ.ಉಪಾಧ್ಯಾಯ ಅವರ ಹೆಸರಿನ ‘ಮಹೋಪಾಧ್ಯಾಯ ಪ್ರಶಸ್ತಿ’ಯನ್ನು ಉಜಿರೆಯ ಡಾ. ಎಸ್.ಡಿ. ಶೆಟ್ಟಿ ಅವರಿಗೆ, ಧಾರವಾಡದ ಹಿರಿಯ ಸಾಹಿತಿ ಡಾ. ಜಿ.ಎಂ. ಹೆಗಡೆ ಅವರ ದತ್ತಿನಿಧಿಯ ‘ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ಯನ್ನು ಚೆನೈಯ ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ ಅವರಿಗೆ ಮತ್ತು ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಅವರು ಸ್ಥಾಪಿಸಿದ ದತ್ತಿನಿಧಿಯಿಂದ ಕೊಡಲಾಗುವ ‘ಮಂಜನಬೈಲ್ ರಂಗಸನ್ಮಾನ್’ ಪ್ರಶಸ್ತಿಯನ್ನು ಬೆಂಗಳೂರಿನ ವೈ.ವಿ. ಗುಂಡೂರಾವ್ ಅವರಿಗೆ ನೀಡಲಾಗುವುದು.                              …

Read More

ಸುಳ್ಯ : ಮೋಹನ ಸೋನ ಕಲಾ ಗ್ಯಾಲರಿ ಆಯೋಜಿಸುವ ‘ಸೋನ ನೆನಪು’ ಕಾರ್ಯಕ್ರಮವು ದಿನಾಂಕ 14-10-2023 ರಂದು ಸುಳ್ಯ ತಾಲೂಕಿನ ಸೊಣಂಗೇರಿಯ ನಡುಮನೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾರವಾರದ ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕರಾದ ಗಂಗಾಧರ ಹಿರೇಗುತ್ತಿ ಭಾಗವಹಿಸಲಿದ್ದಾರೆ. ಸುಮಧುರ ಕಂಠದ ಗಾಯಕ ದೇವಾನಂದ ಗಾಂವ್ಕರ್ ಇವರಿಂದ ಹಾಡುಗಳ ಕಾರ್ಯಕ್ರಮ ನಡೆಯಲಿದೆ. ಮತ್ತು ಸಂದರ್ಭದಲ್ಲಿ ಮೋಹನ ಸೋನ ಕಲಾ ಗ್ಯಾಲರಿಯಲ್ಲಿ ಸುದೇಶ್ ಮಹಾನ್ ಮತ್ತು ಆದ್ಯ ರಾಜೇಶ್ ಮಹಾನ್ ಇವರ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ಮೋಹನ ಸೋನ : ವರ್ಣ ಚಿತ್ರ ಕಲಾವಿದ, ಶಿಕ್ಷಕ, ರಂಗಕರ್ಮಿ, ವರ್ಣ ಸಂಶೋಧಕ, ಬರಹಗಾರ, ಛಾಯಾ ಚಿತ್ರಗಾರ, ರಂಗತಂತ್ರಜ್ಞ, ನಟ ಸಂಘಟಕ ಹೀಗೆ ಬಹುಮುಖ ಪ್ರತಿಭೆಯ ಮೋಹನ ಸೋನ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ. 19-01-1954ರಂದು ಸುಳ್ಯ ತಾಲೂಕಿನ ಸೊಣಂಗೇರಿಯ ನಡುಮನೆ ವೆಂಕಟರಮಣ ಗೌಡ ಮತ್ತು ಚಿನ್ನಮ್ಮ ದಂಪತಿಗಳ ಸುಪುತ್ರರಾದ ಇವರು ಪದವಿ ಶಿಕ್ಷಣ ಪೂರೈಸಿದ ನಂತರ ತಂದೆಯ ಒತ್ತಾಸೆಯಂತೆ ಮಂಗಳೂರಿನ ಸರಕಾರಿ ಶಿಕ್ಷಕರ…

Read More

ಶ್ರೀಕೃಷ್ಣನ ವರ್ಣರಂಜಿತ ಬದುಕಿನ ಪುಟಗಳು ಕಲ್ಪನೆಗೂ ನಿಲುಕದ ವರ್ಣನಾತೀತ ದೃಶ್ಯಕಾವ್ಯ. ಎಲ್ಲ ಕವಿಗಳ ಭಾವಕೋಶವನ್ನು ಆವರಿಸಿಕೊಂಡ ಹೃದ್ಯವ್ಯಕ್ತಿತ್ವ ಅವನದು. ದೈವಸ್ವರೂಪಿಯಾದ ಅವನ ಬದುಕಿನ ಬಣ್ಣದ ಪದರಗಳು ಒಂದೊಂದೂ ರಮ್ಯ-ಚೇತೋಹಾರಿ. ಹೀಗಾಗಿ ಕೃಷ್ಣನ ಬಗ್ಗೆ ಚಿತ್ರಿಸದ ಕೃತಿಕಾರ, ಶಿಲ್ಪಿ ಅಥವಾ ಚಿತ್ರಕಾರರಿಲ್ಲ. ಅಂಥ ವರ್ಣರಂಜಿತ ಕೃಷ್ಣಕಥೆ ಎಂದೆಂದೂ ಬತ್ತದ ಬತ್ತಳಿಕೆ, ಮುಗಿಯದ ಅಕ್ಷಯ ಕಣಜ. ಅಷ್ಟೇ ನವ ನವೋನ್ಮೇಷಶಾಲಿನಿ ಕೂಡ. ಇಂಥ ಒಂದು ಅದ್ಭುತ ವ್ಯಕ್ತಿತ್ವದ ಕೃಷ್ಣನ ಸುತ್ತ ನೃತ್ಯರೂಪಕವನ್ನು ಹೆಣೆದು, ಅಷ್ಟೇ ರಸವತ್ತಾಗಿ ಪ್ರಸ್ತುತಿಪಡಿಸಿದವರು ಅಂತರರಾಷ್ಟ್ರೀಯ ಖ್ಯಾತಿಯ ಒಡಿಸ್ಸಿ ನೃತ್ಯ ಕಲಾವಿದೆ ‘ನೃತ್ಯಾಂತರ’ ಸಂಸ್ಥೆಯ ಗುರು ಮಧುಲಿತಾ ಮಹಾಪಾತ್ರ. ದಿನಾಂಕ 27-09-2023ರಂದು ನಗರದ ಎ.ಡಿ.ಎ. ರಂಗಮಂದಿರದಲ್ಲಿ ತುಂಬಿದ ಸಭಾಗೃಹದ ಪ್ರೇಕ್ಷಕರೆದುರು ‘ಕಲರ್ಸ್ ಆಫ್ ಕೃಷ್ಣ’ -ನೃತ್ಯರೂಪಕ ಸುಮನೋಹರವಾಗಿ ಅನಾವರಣಗೊಂಡಿತು. ‘ನೃತ್ಯಾಂತರ ಎನ್ಸೆಮ್ಬಲ್’ ಪ್ರದರ್ಶಿಸಿದ ‘ನಮನ್-2023’ – ಕಣ್ಮನ ತುಂಬಿದ ಕೃಷ್ಣನ ಲೀಲಾವಿನೋದಗಳ ಅನೇಕ ರಸಪೂರ್ಣ ಅಂಕಗಳ ನೃತ್ಯಗುಚ್ಚವಾಗಿತ್ತು. ಕೋಮಲ ಚಲನೆಗಳ, ಮೃದುವಾದ ಆಂಗಿಕಾಭಿನಯದ ಅಸ್ಮಿತೆಯುಳ್ಳ ಒಡಿಸ್ಸಿ ನೃತ್ಯ ಶೈಲಿಯೇ ನಯನ ಮನೋಹರ.…

Read More

ಮಂಗಳೂರು : ಅಂಚೆ ಇಲಾಖೆಯ ವತಿಯಿಂದ ‘ಢಾಯಿ ಆಖ‌ರ್’ ರಾಷ್ಟ್ರೀಯ ಮಟ್ಟದ ಪತ್ರ ಬರೆಯುವ ಸ್ಪರ್ಧೆ ಆಯೋಜಿಸಲಾಗಿದ್ದು ಮಂಗಳೂರಿನ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ‘ನವ ಭಾರತ ನಿರ್ಮಾಣಕ್ಕಾಗಿ ಡಿಜಿಟಲ್ ಇಂಡಿಯಾ’ ವಿಷಯದಲ್ಲಿ ಇಂಗ್ಲಿಷ್, ಹಿಂದಿ, ಕನ್ನಡದಲ್ಲಿ ಪತ್ರ ಬರೆಯಬಹುದು. 18 ವರ್ಷದವರು ಮತ್ತು 18 ವರ್ಷ ಮೇಲ್ಪಟ್ಟವರು ಇನ್ ಲ್ಯಾಂಡ್ ಲೆಟರ್ ಕಾರ್ಡ್‌ನಲ್ಲಿ ಗರಿಷ್ಠ 500 ಪದಗಳು, ಲಕೋಟೆಯಲ್ಲಿ ಗರಿಷ್ಠ 1,000 ಪದಗಳನ್ನು ಬರೆಯಬೇಕು. ಪ್ರತಿ ವಿಭಾಗದಲ್ಲಿ ರಾಜ್ಯಮಟ್ಟ ವಿಜೇತರಿಗೆ ಪ್ರಥಮ ಬಹುಮಾನ ರೂ.25,000/-, ದ್ವಿತೀಯ ಬಹುಮಾನ ರೂ.10,000/-, ತೃತೀಯ ಬಹುಮಾನ ರೂ.5,000/- ಆಗಿರುತ್ತದೆ. ರಾಷ್ಟ್ರೀಯ ಮಟ್ಟದ ವಿಜೇತರಿಗೆ ಪ್ರಥಮ ಬಹುಮಾನ ರೂ.50,000/-, ದ್ವಿತೀಯ ಬಹುಮಾನ ರೂ.25,000/- ಮತ್ತು ತೃತೀಯ ಬಹುಮಾನ ರೂ.10,000/- ಆಗಿರುತ್ತದೆ. ಇನ್ ಲ್ಯಾಂಡ್ ಲೆಟರ್ ಕಾರ್ಡ್ ಮತ್ತು ಲಕೋಟೆಗಳನ್ನು ಹಿರಿಯ ಅಂಚೆ ಅಧೀಕ್ಷಕರು ಮಂಗಳೂರು ವಿಭಾಗ ಇವರಿಗೆ ಕಳುಹಿಸಬೇಕು. ಪೋಸ್ಟ್‌ ಮಾಡಲು ಕೊನೆಯ ದಿನಾಂಕ 31-10-2023 ಆಗಿರುತ್ತದೆ. ಮಾಹಿತಿಗಾಗಿ www.karnatakapost.gov.in ಭೇಟಿ ನೀಡಬಹುದು.

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿರುವ ‘ಉದಯರಾಗ – 45’ನೇ ಸಂಗೀತ ಕಛೇರಿಯು ಸುರತ್ಕಲ್ ನ ‘ಅನುಪಲ್ಲವಿ’ಯಲ್ಲಿ ದಿನಾಂಕ 15-10-2023 ಭಾನುವಾರ ಪೂರ್ವಾಹ್ನ ಗಂಟೆ 6ಕ್ಕೆ ನಡೆಯಲಿದೆ. ತನ್ಮಯೀ ಉಪ್ಪಂಗಳ ಇವರ ವಯಲಿನ್ ಕಛೇರಿಗೆ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ, ಸುಮುಖ ಕಾರಂತ್ ಖಂಜೀರದಲ್ಲಿ ಮತ್ತು ಸುಜಾತ ಎಸ್. ಭಟ್ ತಂಬೂರದಲ್ಲಿ ಸಾಥ್ ನೀಡಲಿದ್ದಾರೆ. ಪರಮಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಆಶ್ರಯ ಮತ್ತು ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಅರ್ಪಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ರಚಿಸಲಾದ ಆಯ್ದ ಕೃತಿಗಳ ಬಗ್ಗೆ ‘ಕಾರ್ಯಾಗಾರ’ವನ್ನು ಚೆನ್ನೈಯ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಇವರು ಅದೇ ದಿನ ಬೆಳಿಗ್ಗೆ 10 ಘಂಟೆಯಿಂದ ನಡೆಸಲಿದ್ದಾರೆ. ಸಂಗೀತಾಭ್ಯಾಸಿಗಳಿಗೆ ಮುಕ್ತ ಪ್ರವೇಶವಿದೆ. ಮಣಿ ಕೃಷ್ಣಸ್ವಾಮಿ,…

Read More

ಯಕ್ಷಗಾನ ರಂಗದಲ್ಲಿ  ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರು, ಮಹಿಳಾ ಕಲಾವಿದರು ರಂಗವೇರಿ ಮಿಂಚುತ್ತಿದ್ದಾರೆ. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಕಲಾವಿದೆ CA ವೃಂದಾ ಕೊನ್ನಾರ್. ಬಿ ಸುಬ್ಬರಾವ್ ಮತ್ತು ವಿದ್ಯಾ ಎಸ್ ರಾವ್ ಇವರ ಮಗಳಾಗಿ ೧೩.೧೦.೧೯೯೭ ರಂದು ಇವರ ಜನನ. BCom, ACA, DISA(ICAI) ವಿದ್ಯಾಭ್ಯಾಸ. ವೃತ್ತಿಯಲ್ಲಿ ಪ್ರಸ್ತುತ Practicing Chartered Accountant and Teaching faculty. ಶಂಕನಾರಾಯಣ ಮೈರ್ಪಾಡಿ, ಶಿವರಾಮ ಪಣಂಬೂರು,  ಪ್ರಸ್ತುತ ರಾಕೇಶ್ ರೈ ಅಡ್ಕ ಇವರ ಯಕ್ಷಗಾನ ಗುರುಗಳು. ತಂದೆ ಹವ್ಯಾಸಿ ಯಕ್ಷಗಾನ ಕಲಾವಿದರು ಹಾಗೂ ಊರಿನಲ್ಲಿರುವ ಯಕ್ಷಗಾನದ ಪರಿಸರವು ವೃಂದಾ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ಗುರುಗಳು ಮಾರ್ಗದರ್ಶನ ಮಾಡಿದ್ದನ್ನು ಅನುಸರಿಸುತ್ತಾ, ಪದ್ಯಗಳು ಹಾಗೂ ಪ್ರಸಂಗದ ನಡೆಯನ್ನು ಗಮನಿಸಿ ತಿಳಿದುಕೊಂಡು, ತಂದೆಯೊಂದಿಗೆ ಮುಖ್ಯ ವಿಷಯಗಳನ್ನು ಚರ್ಚಿಸಿ, ರಂಗಕ್ಕೇರುವ ಮೊದಲು ಸಾಧ್ಯವಾದಷ್ಟು  ಮನೆಯಲ್ಲಿ ಅಭ್ಯಾಸ ಮಾಡಿ, ಕೊಟ್ಟ‌…

Read More

ಮಂಗಳೂರು : ಶಿವರಾಮ ಕಾರಂತರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕೊಡಿಯಾಲ್ ಬೈಲಿನ ಪತ್ತುಮುಡಿ ಸೌಧದಲ್ಲಿ ದಿನಾಂಕ 10-10-2023ರಂದು ‘ಕಾರಂತ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಡಾ. ನಾ. ಸೋಮೇಶ್ವರ ಇವರು “ಶಿವರಾಮ ಕಾರಂತರ ಬದುಕು ಒಂದು ವಿರಾಟ್ ರೂಪ. ಅವರ ಜೀವನ ಅನುಕರಣೀಯ. ಹಾಗೆಂದು ಅವರನ್ನು ಅನುಕರಣೆ ಮಾಡುವುದೂ ಅಷ್ಟು ಸುಲಭ ಅಲ್ಲ. ಕಾರಂತರು ಸ್ವತಃ ಪರೀಕ್ಷಿಸದೆ ಅಂತಿಮ ತೀರ್ಮಾನ ಮಾಡುವವರಲ್ಲ. ರವೀಂದ್ರನಾಥ್ ಠಾಗೂರ್ ಮತ್ತು ಕಾರಂತರನ್ನು ಒಂದು ರೀತಿಯಲ್ಲಿ ನೋಡಿದರೂ ಕೂಡ ಕಾರಂತರು ಹೆಚ್ಚು ಸಾಹಸಮಯ ಕೆಲಸಗಳಿಂದ ಗಮನ ಸೆಳೆಯುತ್ತಾರೆ. ಕಳೆದ 21 ವರ್ಷಗಳನ್ನು ಪೂರೈಸಿಕೊಂಡು 22 ವರ್ಷಕ್ಕೆ ಕಾಲಿಡುತ್ತಿರುವ ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ಹಣಕ್ಕಾಗಿ ಮಾಡುತ್ತಿಲ್ಲ. ನನ್ನದು ವೈದ್ಯ ವೃತ್ತಿ. ಅಲ್ಲೇ ಕೈ ತುಂಬಾ ದುಡಿಯಬಹುದು. ಆದರೆ ನಾನು ನಂಬಿರುವ ನಾಲ್ಕು ಋಣಗಳಲ್ಲಿ ಆಚಾರ್ಯ ಋಣ ಹಾಗೂ ಸಮಾಜದ…

Read More

ಸುಳ್ಯ : ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸಾಂಸ್ಕೃತಿಕ ಸಂಘ ಐಕ್ಯೂಏಸಿ ವಿಭಾಗ ಮತ್ತು ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ಖ್ಯಾತ ಸಾಹಿತಿ ಡಾ. ಕೆ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಕಾರ್ಯಕ್ರಮವು ದಿನಾಂಕ 10-10-2023ರಂದು ಬೆಳ್ಳಾರೆಯ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದಾಮೋದರ ಕಣಜಾಲು ಇವರು ಶಿವರಾಮ ಕಾರಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಶಿವರಾಮ ಕಾರಂತರ ಬದುಕೇ ಯುವಜನರಿಗೆ ಸ್ಫೂರ್ತಿ. ಅವರು ನಿಷ್ಠುರವಾದಿ ನಿಲುವಿನ ಮೂಲಕ ಜೀವನ ಸಾಗಿಸಿ ಮಾದರಿಯಾದವರು” ಎಂದರು. ಡಾ.‌ಶಿವರಾಮ ಕಾರಂತರ ಬದುಕು ಬರಹದ ಕುರಿತು ವಿಶೇಷ ಉಪನ್ಯಾಸ ನೀಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಕೆ. ಇವರು “ವ್ಯಕ್ತಿ ಹೇಗೆ ಬದುಕಬೇಕೆಂಬುದನ್ನು ಸಾಧಿಸಿ ತೋರಿಸಿದವರು ಶಿವರಾಮ ಕಾರಂತರು. ವ್ಯಕ್ತಿ ಹೇಗೆ…

Read More

ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠಕ್ಕೆ ಉಜಿರೆಯ ಡಾ.ಜಯಮಾಲಾ ಇವರು ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯರು ರಚಿಸಿದ ಮಹಾಪುರಾಣದ ಎರ್ತೂರು ಶಾಂತಿರಾಜ ಶಾಸ್ತ್ರಿಗಳು ಮಾಡಿದ ಕನ್ನಡ ಅನುವಾದ ಕೃತಿಯನ್ನು ದಿನಾಂಕ 09-10-2023ರಂದು ಶಾಸ್ತ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ ಕೆ ಚಿನ್ನಪ್ಪ ಗೌಡ “ಗ್ರಂಥಾಲಯಗಳಿಗೆ ಪುಸ್ತಕದಾನ ಮಾಡುವುದು ದಾನಗಳಲ್ಲಿ ಶ್ರೇಷ್ಠವಾದದ್ದು. ಈ ದಾನವು ಅರಿವನ್ನು ವಿಸ್ತರಿಸುವ ಹಾಗೂ ಭವಿಷ್ಯದ ತಲೆಮಾರಿಗೆ ಜ್ಞಾನವನ್ನು ತಲುಪಿಸುವ ಪುಣ್ಯ ಕಾರ್ಯ. ಡಾ.ಜಯಮಾಲಾ ಅವರ ಈ ಕೊಡುಗೆ ಉಳಿದವರಿಗೂ ಪ್ರೇರಣೆಯಾಗಲಿ. ಗ್ರಂಥಾಲಯಗಳು ಸಮಾಜದ ದಾನಿಗಳ ಕೊಡುಗೆಯಿಂದ ಉತ್ತಮ ಕೃತಿಗಳ ತಾಣವಾಗಲಿ” ಎಂದು ಹಾರೈಸಿದರು. ಮಹಾಕವಿ ರತ್ನಾಕರವರ್ಣಿ ಪೀಠದ ಸಂಯೋಜಕ ಡಾ. ಸೋಮಣ್ಣ ಮಾತನಾಡಿ “ಪೀಠದಲ್ಲಿ ಮೌಲಿಕ ಕೃತಿಗಳ ಗ್ರಂಥಾಲಯವನ್ನು ವಿಸ್ತರಿಸುವ ಯೋಜನೆಯಿದೆ. ಅದಕ್ಕೆ ದಾನಿಗಳ ಸಹಕಾರ ಬೇಕು. ಡಾ.ಜಯಮಾಲಾ ಉಜಿರೆ ಅವರು ಅಪೂರ್ವ ಕೃತಿಯನ್ನು ನೀಡಿದ್ದಾರೆ” ಎಂದು ಹೇಳಿದರು. ಸಮಾರಂಭದಲ್ಲಿ ಡಾ. ಜಯಮಾಲಾ ಉಜಿರೆ, ಶ್ರೇಯಸ್ ಉಜಿರೆ,…

Read More