Subscribe to Updates
Get the latest creative news from FooBar about art, design and business.
Author: roovari
ಬಾರ್ಕೂರು : ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಹಾಗೂ ಬಾರಕೂರು ಇದರ ಜಂಟಿ ಆಶ್ರಯದಲ್ಲಿ ‘ಕನಕ ಜಯಂತಿ’ ಕಾರ್ಯಕ್ರಮವು ದಿನಾಂಕ 18 ನವೆಂಬರ್ 2024ರ ಸೋಮವಾರದಂದು ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರು ಬಿ. ಬಿ. ಎಂ. ಪಿ. ಇದರ ಹೆಚ್ಚುವರಿ ಆಯುಕ್ತರಾದ ಶ್ರೀ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಮಾತನಾಡಿ “500 ವರ್ಷಗಳಿಗೂ ಹಿಂದೆ ಜೀವಿಸಿದ್ದ ಕನಕದಾಸರು ಇಂದೂ ನಮಗೆ ಪ್ರಸ್ತುತ. ಎಲ್ಲಾ ದಾಸರು ಕೀರ್ತನೆಗಳನ್ನು ಬರೆದಿದ್ದರೂ ಕನಕದಾಸರು ಅವರಲ್ಲಿ ಶ್ರೇಷ್ಠರಾಗಿ ಕಂಡುಬರುತ್ತಾರೆ. ಅದಕ್ಕೆ ಕಾರಣ ಕನಕದಾಸರು ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವುದಕ್ಕೆ ಮಾಡಿದ ಪ್ರಯತ್ನ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ರತ್ನಗಳಾದ ನಳಚರಿತ್ರೆ, ರಾಮಧಾನ್ಯಚರಿತ್ರೆ, ಮೋಹನ ತರಂಗಿಣಿ ಹಾಗೂ ಹರಿಭಕ್ತಿಸಾರ. ಅವರ ಹರಿಭಕ್ತಿ ಸಾರದ 108 ಭಾಮಿನಿ ಷಟ್ಪದಿ ಪದ್ಯಗಳಿಗೆ ಇತ್ತೀಚೆಗೆ ವಿದ್ವಾಂಸರೊಬ್ಬರು 2000…
ಉಡುಪಿ : ತುಳುಕೂಟ ಉಡುಪಿ (ರಿ.) ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ದಿ. ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ‘ತುಳು ಭಾವಗೀತೆ ಸ್ಪರ್ಧೆ -2024’ಯನ್ನು ದಿನಾಂಕ 24 ನವೆಂಬರ್ 2024ರಂದು ಅಪರಾಹ್ನ 2-00 ಗಂಟೆಗೆ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಯು 1ರಿಂದ 5ನೇ ತರಗತಿ – ಬಾಲ ವಿಭಾಗ, 6ರಿಂದ 10ನೇ ತರಗತಿ – ಕಿರಿಯ ವಿಭಾಗ, ಕಾಲೇಜು ವಿದ್ಯಾರ್ಥಿಗಳು – ಹಿರಿಯ ವಿಭಾಗ ಮತ್ತು 25 ವರ್ಷ ಮೇಲಿನವರು – ಸಾರ್ವಜನಿಕ ವಿಭಾಗ ಹೀಗೆ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಗೂಗಲ್ ನಲ್ಲಿ ಐಲೇಸಾ ಮ್ಯೂಸಿಕ್ ಚಾನೆಲ್ ಎಂದು ಹುಡುಕಿದರೆ ಖ್ಯಾತ ಹಿನ್ನೆಲೆ ಗಾಯಕರು ರಮೇಶ್ಚಂದ್ರರವರು ಹಾಡಿರುವ ಅನೇಕ ತುಳು ಭಾವಗೀತೆಗಳು ಸಿಗುತ್ತದೆ. ತುಳು ಭಾಂದವರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ತುಳು ಭಾಷೆ ಉಳಿಸಿ ಬೆಳೆಸುವಲ್ಲಿ ಕೈ ಜೋಡಿಸಬೇಕಾಗಿ ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕರಾದ ಜಯರಾಂ ಮಣಿಪಾಲ್…
ಕೊಪ್ಪಳ : ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ, ತಳಮಳ ಪ್ರಕಾಶನ, ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯ ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ (ರಿ.) ಕೊಪ್ಪಳ ಇವುಗಳ ಆಶ್ರಯದಲ್ಲಿ ‘ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ -2024’ನ್ನು ದಿನಾಂಕ 24 ನವೆಂಬರ್ 2024ರಂದು ಮುಂಜಾನೆ 10 ಗಂಟೆ 15 ನಿಮಿಷಕ್ಕೆ ಕೊಪ್ಪಳದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕೃತಿಗಳ ಲೋಕಾರ್ಪಣೆ, ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪ್ರದಾನ, ಸಾಹಿತ್ಯಿಕ ಚರ್ಚೆ, ಸಾಧಕರಿಗೆ ಸಮಾಜಮುಖಿ ಗೌರವ ಪ್ರದಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಅಭಿನಂದನಾ ಗೌರವ ನಡೆಯಲಿದೆ. ಮೊದಲಿಗೆ ಮಹೆಬೂಬ ಕಿಲ್ಲೇದಾರ ಮತ್ತು ಮರಿಯಪ್ಪ ಚಾಮಲಾಪುರ ಇವರಿಂದ ಗೀತ ಗಾಯನ ಪ್ರಸ್ತುತಗೊಳ್ಳಲಿದೆ. ಕೊಪ್ಪಳ ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಡಾ. ಬಿ.ಕೆ. ರವಿ ಇವರು ಉದ್ಘಾಟನೆ ಮಾಡಲಿದ್ದು, ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ…
ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕಾಪು ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ದಿನಾಂಕ 16 ನವೆಂಬರ್ 2024ರಂದು ಪಲಿಮಾರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ನೆಲದುಲಿಯ ಪರಿಕಲ್ಪನೆಯೇ ಅದ್ಭುತ. ಸಾಹಿತ್ಯದ ಮೂಲಕ ಪ್ರತಿಸ್ಪಂದಿಸುವ ಗುಣ ಹಿಂದಿನಿಂದಲೂ ನಡೆದು ಬಂದಿದೆ. ತಲ್ಲಣಗಳಿಗೆ ಸಮ್ಮೇಳನಗಳು ಪ್ರತಿಸ್ಪಂದಿಸುತ್ತಿತ್ತು. ಇದು ಸೃಜನಶೀಲ ಸಾಹಿತ್ಯಗಳ ಪರಂಪರೆಯಾಗಿ ಬಂದಿದೆ. ಈ ಸಮ್ಮೇಳನವೂ ಅದನ್ನೇ ಮಾಡಿದೆ ಎಂದು ಮೂಲ್ಕಿ ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಹಿರಿಯ ಸಾಹಿತಿ ಡಾ. ವಾಸುದೇವ ಬೆಳ್ಳೆ ಹೇಳಿದರು. ಕಾಪು ತಾಲೂಕು ಕ.ಸಾ.ಪ. ಅಧ್ಯಕ್ಷ ಬಂಟಕಲ್ಲು ಪುಂಡಲೀಕ ಮರಾಠೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಂಗಾಳ ಬಾಬು ಕೊರಗ ಸರ್ವಾಧ್ಯಕ್ಷತೆ ವಹಿಸಿದ್ದರು. ಕಾಪು ತಹಶೀಲ್ದಾರ್ ಪ್ರತಿಭಾ ಆರ್., ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಅದಾನಿ ಅಧ್ಯಕ್ಷ ಕಿಶೋರ್ ಆಳ್ವ ವೈ. ಸುಧೀರ್ ಕುಮಾರ್ ಪಡುಬಿದ್ರಿ. ಗಾಯತ್ರಿ ಪ್ರಭು, ಪ್ರಕಾಶ್ ಶೆಟ್ಟಿ…
ವಾಮಂಜೂರು : ಅಂಗವಿಕಲರ ಕಲ್ಯಾಣ ಸಂಸ್ಥೆ (ರಿ.) ಮತ್ತು ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಆಶ್ರಯದಲ್ಲಿ ದಿನಾಂಕ 23 ನವೆಂಬರ್ 2024ರಂದು ಪೂರ್ವಾಹ್ನ 10-00 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧೆ ‘ಕಲೋತ್ಸವ’ವನ್ನು ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ (ರಿ) ಉಜಿರೆ ಇದರ ಆಡಳಿತಕ್ಕೆ ಒಳಪಟ್ಟ ರಜತ ಮಹೋತ್ಸವದ ಸಂದರ್ಭದಲ್ಲಿ ದಿವಂಗತ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಸ್ಮರಣಾರ್ಥ ಈ ಸ್ಪರ್ಧೆಯನ್ನು ನಡೆಸಲಾಗುವುದು. ಇದರ ಉದ್ಘಾಟನೆಯನ್ನು ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ (ರಿ) ಇದರ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್. ಇವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮಂಗಳೂರಿನ ಅಂಗವಿಕಲರ ಕಲ್ಯಾಣ ಸಂಸ್ಥೆ (ರಿ) ಇದರ ಕಾರ್ಯದರ್ಶಿಗಳಾದ ಪ್ರೊಫೆಸರ್ ಎ. ರಾಜೇಂದ್ರ ಶೆಟ್ಟಿ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಮಂಗಳೂರು ಪದವು ವಾರ್ಡ್ ಕಾರ್ಪೊರೇಟರ್ ಶ್ರೀ ಭಾಸ್ಕರ್ ಕೆ., ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ…
ಕುಂಬಳೆ : ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಿನಾಂಕ 20 ನವೆಂಬರ್ 2024ರಂದು ಸಂಜೆ ಕುಂಬಳೆ ಉಪಜಿಲ್ಲಾ ಮಟ್ಟದ 63ನೇ ಕೇರಳ ಶಾಲಾ ‘ಕಲೋತ್ಸವಂ’ನ ಸಮಾರೋಪ ಸಮಾರಂಭವು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಇವರು ಮಾತನಾಡಿ “ತುಳುನಾಡು ಸಾಂಸ್ಕೃತಿಕ ಪರಂಪರೆಯ ನೆಲೆಬೀಡು. ಕಾಸರಗೋಡು ಅನೇಕ ಕವಿಗಳು, ಕಲಾವಿದರನ್ನು ನಾಡಿಗೆ ನೀಡಿದೆ. ಕಲೋತ್ಸವವು ಅನೇಕ ಕಲಾವಿದರನ್ನು ನಾಡಿಗೆ ಸಮರ್ಪಿಸುವ ಉತ್ತಮ ವೇದಿಕೆಯಾಗಿದೆ. ಕಲೋತ್ಸವವು ಬದುಕಿನಲ್ಲಿ ಆದರ್ಶ, ಸಂಸ್ಕಾರ, ಗುಣ ನಡತೆ, ಸೇವಾತತ್ಪರ ತಲೆಮಾರನ್ನು ರೂಪಿಸಲು ಸಹಾಯ ಮಾಡುತ್ತದೆ. ಕಲೋತ್ಸವದ ಸ್ಪರ್ಧೆಗಳಲ್ಲಿ ಯಾರೂ ಸೋಲುವುದಿಲ್ಲ. ಗೆಲ್ಲುವುದೂ ಇಲ್ಲ. ಕಲೋತ್ಸವವು ಮಕ್ಕಳ ನಡುವಿನ ಸ್ಪರ್ಧೆಯಾಗಬೇಕೇ ಹೊರತು ಪೋಷಕರ ನಡುವಿನ ಸ್ಪರ್ಧೆಯಾಗಬಾರದು” ಎಂದು ಹೇಳಿದರು. ಕಾಸರಗೋಡಿನ ಶಾಸಕರಾದ ಎನ್.ಎ. ನೆಲ್ಲಿಕ್ಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಶೇಖರ ಜೆ.ಎಸ್. ಅಧ್ಯಕ್ಷತೆಯನ್ನು ವಹಿಸಿದ್ದರು. ಕುಂಬ್ದಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸಳಿಗೆ, ಎಣ್ಮಕಜೆ ಗ್ರಾಮ…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 23 ನವೆಂಬರ್ 2024ರಂದು ಸಂಜೆ 4-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಇವರ ಅಧ್ಯಕ್ಷತೆಯಲ್ಲಿ ವಿಶ್ರಾಂತ ಮುಖ್ಯ ನ್ಯಾಯಾದೀಶರಾದ ಕೆ. ಶ್ರೀಧರ ರಾವ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಭಾರತಮಿತ್ರ ಸನ್ಮಾನಿತರು ಇತಿಹಾಸ ಶಾಸನ ಹಾಗೂ ಭಾರತೀಯ ಕಲಾತಜ್ಞೆ ಡಾ. ವಸುಂಧರಾ ಕವಲಿ ಫಿಲಿಯೋಜಾ ಕನ್ನಡ ರಾಜ್ಯೋತ್ಸವದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಪರ ಹೋರಾಟಗಾರ ಶ್ರೀ ಗೋ. ಮೂರ್ತಿ ಯಾದವ್, ರಂಗಭೂಮಿ ಕಲಾವಿದರಾದ ಶ್ರೀ ಕೆ. ರೇವಣ್ಣ, ಸಾಹಿತಿಗಳಾದ ಡಾ. ಮೀರಾಸಾಬೀಹಳ್ಳಿ ಶಿವಣ್ಣ, ಕನ್ನಡ ಪರ ಹೋರಾಟಗಾರ ಶ್ರೀ ಜಿ. ಬಾಲಾಜಿ, ರಂಗಭೂಮಿ ಕಲಾವಿದರಾದ ಶ್ರೀ ಕೃಷ್ಣಮೂರ್ತಿ ಕವತ್ತಾರ್,…
ಉಡುಪಿ : ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಮಾಸದ ಸಂಭ್ರಮಾಚರಣೆ ಕಾರ್ಯಕ್ರಮವು ದಿನಾಂಕ 20 ನವೆಂಬರ್ 2024ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಹಾಗೂ ಭಾರತ ಸ್ಕೌಟ್ ಜಿಲ್ಲಾ ಆಯುಕ್ತ ಜನಾರ್ದನ್ ಕೊಡವೂರು ಮಾತನಾಡಿ “ಕನ್ನಡ ಭಾಷೆಯ ಬಗೆಗಿನ ಒಲವು ಸಾಹಿತ್ಯ ಸಂಸ್ಕೃತಿಯ ಅಭಿಮಾನ ಎಲ್ಲರಲ್ಲೂ ಮೂಡಬೇಕು.” ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ದೇವಿದಾಸ್ ಎಸ್. ನಾಯ್ಕ ಕನ್ನಡ ಭಾಷೆ, ನಾಡು , ನುಡಿಯ ಬಗ್ಗೆ ಚಿಂತನೆ ನಡೆಸಿದರು. ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕವನ ಹಾಗೂ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಸಂಯೋಜಕಿ ಕನ್ನಡ ವಿಭಾಗದ ಕುಮಾರಿ ದೀಪಿಕಾ ಉಪಸ್ಥಿತರಿದ್ದರು. ಭೂಮಿಕ ಸ್ವಾಗತಿಸಿ, ದಿಶಾ ರಾವ್ ಅತಿಥಿಗಳನ್ನು ಪರಿಚಯಿಸಿ, ಶ್ರೀಕರ ಕಾರ್ಯಕ್ರಮ ನಿರೂಪಿಸಿ, ಮಾಧುರ್ಯ ವಂದನಾರ್ಪಣೆಗೈದರು.
ಬ್ರಹ್ಮಾವರ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು, ಬ್ರಹ್ಮಾವರ ಘಟಕದ 2ನೇ ವಾರ್ಷಿಕೋತ್ಸವ ಸಮಾರಂಭವು ದಿನಾಂಕ 21 ನವೆಂಬರ್ 2024ರಂದು ನೂತನವಾಗಿ ಉದ್ಘಾಟನೆಗೊಂಡ ಶೇಡಿಕೊಡ್ಲು ಮಂದಾರ್ತಿ ದುರ್ಗಾ ಗಾರ್ಡನ್ ಆವರಣದಲ್ಲಿ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ಬಾಲಕೃಷ್ಣ ಹೆಗ್ಡೆ ಕೊಕ್ಜರ್ಣೆ ಇವರ ಸಭಾಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು. ದಿ. ಚಂದ್ರ ನಾಯ್ಕರ ಧರ್ಮಪತ್ನಿ ಶ್ರೀಮತಿ ವಾಣಿ ಇವರಿಗೆ ನೀಲಾಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೂ.25,000/- ಆಸರೆಯ ಪ್ರೋತ್ಸಾಹಧನ, ಹಿರಿಯ ಕಲಾವಿದ ಅಜ್ರಿ ಗೋಪಾಲ ಗಾಣಿಗ ಇವರಿಗೆ ಮನೆ ನಿರ್ಮಾಣ ಸಹಾಯಾರ್ಥವಾಗಿ ರೂಪಾಯಿ ಐದು ಲಕ್ಷದ ಮೊತ್ತವನ್ನು ನೀಡಲಾಯಿತು. ಹಾಲಾಡಿ ರಾಘವ ಆಚಾರ್ಯ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಗೌರವಾಧ್ಯಕ್ಷರಾದ ಶೇಡಿಕೊಡ್ಲು ವಿಠಲ ಶೆಟ್ಟಿ ಮತ್ತು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಪ್ರಸ್ತಾವಿಸಿ, ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿ ಸ್ವಾಗತಿಸಿ, ಜೆ.ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ…
ಧಾರವಾಡ : ಧಾರವಾಡದ ರಂಗ ಸಂಸ್ಥೆಯಾದ ಅಭಿನಯ ಭಾರತಿ ಇದರ ವತಿಯಿಂದ ದಿನಾಂಕ 23 ನವೆಂಬರ್ 2024ರಂದು ಸಂಜೆ 5-30 ಗಂಟೆಗೆ ಧಾರವಾಡ ರಂಗಾಯಣದ ಸಾಂಸ್ಕೃತಿಕ ಸಮುಚ್ಚಯದಲ್ಲಿ ದಿ. ಡಾ. ಸುಲಭಾ ದತ್ತ ನೀರಲಗಿ ಸ್ಮರಣಾರ್ಥ ಶ್ರೀ ದತ್ತ ನೀರಲಗಿ ಇವರು ನೀಡಿದ ದತ್ತಿ ಕಾರ್ಯಕ್ರಮದ ಅಂಗವಾಗಿ ‘ನಾ ರಾಜಗುರು’ ನಾಟಕ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದೆ. ಪ್ರಸಿದ್ಧ ಚರ್ಮರೋಗ ತಜ್ಞರು ಮತ್ತು ಲೇಖಕರಾದ ಡಾ. ವಿಜಯೇಂದ್ರ ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಶ್ರೀ ದತ್ತ ನೀರಲಗಿ ಮತ್ತು ಅಭಿನಯ ಭಾರತಿ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಶ್ರೀಮತಿ ಸುಲಭಾ ದತ್ತ ನೀರಲಗಿ ಸ್ಮರಣಾರ್ಥ ‘ಮಹಿಳಾ ರಂಗಕರ್ಮಿ’ ಪ್ರಥಮ ಪ್ರಶಸ್ತಿಯನ್ನು ಶ್ರೀಮತಿ ವಿಷಯಾ ಜೇವೂರ ಇವರಿಗೆ ನೀಡಲಾಗುವದು. ಸಾಂಕೇತಿವಾಗಿ ಅಭಿನಯ ಭಾರತಿಯ ರಂಗ ಕಾರ್ಯಾಗಾರದ ಭಾಗವಾದ ‘ಏನು ಬೇಡಲಿ ನಿನ್ನ ಬಳಿಗೆ ಬಂದು ?’ ನಾಟಕ ತಯಾರಿ ಹಾಗೂ ತಾಲೀಮಿನ ಉದ್ಘಾಟನೆ ನೆರವೇರಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ…