Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕರ್ನಾಟಕ ಸುವರ್ಣ ಸಂಭ್ರಮ 50 ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎ.ಎಲ್.ಜಿ .ಕ್ರೆಸೆಂಟ್ ಶಾಲೆ, ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್( ರಿ ), ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ (ರಿ), ಮಡಿಕೇರಿ.ಇವರ ಸಂಯುಕ್ತ ಆಶ್ರಯದಲ್ಲಿ, 69ನೇ ಕನ್ನಡ ರಾಜ್ಯೋತ್ಸವ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಮತ್ತು ಗೀತಗಾಯನ ಕಾರ್ಯಕ್ರಮವು ಮಡಿಕೇರಿಯ ಮಹದೇವಪೇಟೆ ಎ. ಎಲ್. ಜಿ. ಕ್ರೆಸೆಂಟ್ ಶಾಲೆಯ ಸಭಾಂಗಣದಲ್ಲಿ ದಿನಾಂಕ 23 ನವೆಂಬರ್ 2024ರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂಥರ್ ಗೌಡ ಉದ್ಘಾಟಿಸಿಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎ. ಎಲ್. ಜಿ. ಕ್ರೆಸೆಂಟ್ ಶಾಲೆಯ ಅಧ್ಯಕ್ಷರಾದ ನಿಜಾಮುದ್ದಿನ್ ಸಿದ್ದೀಖ್ , ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್ ಟ್ರಸ್ಟ್( ರಿ.) ಇದರ ಅಧ್ಯಕ್ಷ…
ಭಾರತಿ ಕೇದಾರಿ ನಲವಡೆಯವರ ‘ಅವಕಾಶವೆಂಬ ಅಮೃತ ಘಳಿಗೆ’ ಎಂಬ ಈ ಲೇಖನಗಳ ಸಂಕಲನ ಒಟ್ಟು ಐವತ್ತು ಲೇಖನಗಳನ್ನೊಳಗೊಂಡಿದೆ. ಪುಸ್ತಕದ ಶೀರ್ಷಿಕೆಯೇ ಆಕರ್ಷವಾಗಿದ್ದು ಅರ್ಥಪೂರ್ಣವಾಗಿದೆ. ಈಗಾಗಲೇ ‘ಕಾವ್ಯ ಕನಸು’ ಎಂಬ ಒಂದು ಕವನ ಸಂಕಲನ ಹಾಗೂ ‘ಸಂಕಲ್ಪ’ ಅನ್ನೋ ಒಂದು ಮಕ್ಕಳ ಕವನ ಸಂಕಲನವನ್ನು ಪ್ರಕಟಿಸಿದ್ದು ಸೇರಿದಂತೆ ಇದು ಇವರ ಮೂರನೆಯ ಕೃತಿಯಾಗಿದೆ. ಲೇಖನವು ಕಾಲ್ಪನಿಕ ಮತ್ತು ಮನರಂಜನೆಗಿಂತ ತಿಳಿವಳಿಕೆ ಅಥವಾ ಶೈಕ್ಷಣಿಕವಾಗಿರಬೇಕು. ಒಂದು ಲೇಖನವು ಪ್ರಧಾನವಾಗಿ ನಾಲ್ಕು ಅಂಗಗಳನ್ನು ಹೊಂದಿರುವುದು ಅಗತ್ಯ. ಮೊದಲನೆಯದಾಗಿ ಶಿರೋನಾಮೆ : ಶಿರೋನಾಮೆಗೆ ತಲೆಬರಹವೆಂದು ಪರ್ಯಾ ಯ ಪದವಿದೆ. ಯಾವುದೇ ಲೇಖನಕ್ಕೆ ತಲೆ ಬರಹ ಕೊಡುವುದು ಸುಲಭವಲ್ಲ. ಲೇಖನ ಪುಟ್ಟದಿರಲಿ, ಬೃಹದಾಗಿರಲಿ, ಲೇಖನದ ಮುನ್ನೋಟ ಶಿರೋನಾಮೆಯಲ್ಲೇ ಎದ್ದು ಕಾಣಬೇಕು. ಲೇಖನದ ಒಳ ಹರಿವನ್ನು ಶಿರೋನಾಮೆಯೇ ಧ್ವನಿಸಬೇಕು. ಶಿರೋನಾಮೆ ಮತ್ತು ಲೇಖನ ಪರಸ್ಪರ ಸರಪಣಿಯ ಕೊಂಡಿಗಳಂತಿರಬೇಕು. ಶಿರೋನಾಮೆಯು ಆಕರ್ಷವಾಗಿರಬೇಕು ಮತ್ತು ಅರ್ಥವತ್ತಾಗಿರಬೇಕು. ನಂತರದಲ್ಲಿ ಶಿರೋನಾಮೆಗೆ ಪೂರಕವಾದ ಪೀಠಿಕೆಯಿರಬೇಕು. ಆರಂಭಿಕ ಮಾತು ಎಂದು ಹೇಳುವ ಪೀಠಿಕೆಯು ಬಹಳ ದೊಡ್ಡದಾಗಿರಬಾರದು. ಲೇಖನದ…
ಮಂಗಳೂರು : ಶರಧಿ ಪ್ರತಿಷ್ಠಾನದ ವತಿಯಿಂದ ದಿನಾಂಕ 11 ಹಾಗೂ 12 ಜನವರಿ 2025 ರಂದು ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆಯಲಿರುವ ‘ಕಲಾ ಪರ್ಬ’ದ ಲಾಂಛನ ಮತ್ತು ಕರಪತ್ರವನ್ನು ದಿನಾಂಕ 21 ನವೆಂಬರ್ 2024ರಂದು ನಗರದ ವಿಷ್ಣು ವೈಭವ ಹೊಟೇಲ್‌ನಲ್ಲಿ ವಿಧಾನ ಸಭೆಯ ಸ್ಪೀಕರ್ ಯು. ಟಿ .ಖಾದರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು “ಎಳೆಯ ಕಲಾವಿದರಿಗೆ ಸ್ಪೂರ್ತಿ ನೀಡಲು ‘ಕಲಾ ಪರ್ಬ’ ಆಯೋಜಿಸಿರುವುದು ಶ್ಲಾಘನೀಯ. ಕದ್ರಿ ಪಾರ್ಕ್‌ನ ಒಟ್ಟು ಅಭಿವೃದ್ದಿ ಹಾಗೂ ಪಾರ್ಕ್‌ನ ಒಳಗೆ ವಿವಿಧ ಕಲಾ ಚಟುವಟಿಕೆಗೆ ಅವಕಾಶ ಕಲ್ಪಿಸಲು 1 ಕೋಟಿ ರೂ. ಮೀಸಲಿಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಕಲಾಪರ್ಬ ಸಹಿತ ವಿವಿಧ ಕಲಾ ಚಟುವಡಿಕೆಗಳಿಗೆ ಪೂರಕವಾಗುವ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು.” ಎಂದು ತಿಳಿಸಿದರು. ಸಂಘಟಕ ಪುನೀಕ್ ಶೆಟ್ಟಿ ಮಾತನಾಡಿ “ಕಲಾವಿದರೆಲ್ಲರನ್ನೂ ಒಗ್ಗೂಡಿಸಿ ವಿವಿಧ ಕಲಾ ಪ್ರಕಾರಗಳನ್ನು ಒಂದೇ ಕಡೆ ಅಭಿವ್ಯಕ್ತ ಪಡಿಸುವ ಹಾಗೂ ತನ್ಮೂಲಕ ಕಲಾ ಕ್ಷೇತ್ರ ಇನ್ನಷ್ಟು ವಿಕಸನವಾಗುವ ಉದ್ದೇಶದಿಂದ ಕಲಾ ಪರ್ಬ…
ಉಡುಪಿ : ಅಂತರಾಷ್ಟ್ರೀಯ ಜಾದುಗಾರ ಉಡುಪಿಯ ಗಿಲಿ ಗಿಲಿ ಮ್ಯಾಜಿಕ್ ಗಾರುಡಿಗ ಪ್ರೊಫೆಸರ್ ಶಂಕರ್ ಇವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದು, ಸಮಾರಂಭವು 14 ಡಿಸೆಂಬರ್ 2024ರ ಶನಿವಾರದಂದು ಸಂಜೆ ಘಂಟೆ 400 ರಿಂದ ಉಡುಪಿಯ ಯಕ್ಷಗಾನ ಕಲಾರಂಗದ ಐ. ವೈ. ಸಿ. ಸಭಾಂಗಣದಲ್ಲಿ ನಡೆಯಲಿದೆ. ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಅನಾವರಣ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು “ಪ್ರೊ. ಶಂಕರ್ ಅಭಿನಂದನಾ ಸಮಿತಿ”ಯ ಅಧ್ಯಕ್ಷರಾದ ಪ್ರೊ. ಮುರಳೀಧರ ಉಪಾಧ್ಯ ತಿಳಿಸಿರುತ್ತಾರೆ. ಗಿಲಿ ಗಿಲಿ ಮ್ಯಾಜಿಕ್ ಲೋಕದ ಗಾರುಡಿಗ ಪ್ರೊ. ಶಂಕರ್ 3 ಬಾರಿ ಅಂತರರಾಷ್ಟ್ರೀಯ ಜಾದೂ ಸಮ್ಮೇಳನವನ್ನು ಉಡುಪಿಯಲ್ಲಿ ಆಯೋಜಿಸಿದ್ದು, ಅಮೇರಿಕಾದ ಮರ್ಲಿನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಇವರ ಜಾದೂ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಈ ಸಮಾರಂಭ ಆಯೋಜಿಸಲಾಗಿದೆ.
ಮೈಸೂರು : ಆಯಾಮ ಅಕಾಡೆಮಿ ಮೈಸೂರು ಮತ್ತು ಶ್ರೀ ಹರ್ಷ ಪ್ರಕಾಶನ ಶ್ರೀರಂಗಪಟ್ಟಣ ಇವರ ಸಹಯೋಗದಲ್ಲಿ ಸಾ. ವೆ. ರ. ಸ್ವಾಮಿಯವರ ‘ಮರೆಯೋದುಂಟ ಈ ಸಕಲೆಂಟ’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 16 ನವೆಂಬರ್ 2024ರ ಶನಿವಾರ ಬೆಳಗ್ಗೆ 10.30ಕ್ಕೆ ಮೈಸೂರಿನ ಆಯಾಮ ಅಕಾಡೆಮಿ ಕಲಾ ಕುಟೀರದಲ್ಲಿ ನಡೆಯಿತು. ಕನ್ನಡ ಸಾಹಿತಿ ಮತ್ತು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಕಾಳೇಗೌಡ ನಾಗವಾರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಸಿ. ಮಹದೇವು, ಕನ್ನಡ ಸಾಹಿತಿ, ಉಪನ್ಯಾಸಕ ಹಾಗೂ ಸಿನಿಮಾ ನಿರ್ದೇಶಕರಾದ ಡಾ. ರಾಗಂ ಬೆಂಗಳೂರು, ನಿರಂತರ ಮೈಸೂರುಇಲ್ಲಿನ ರಂಗ ನಿರ್ದೇಶಕರಾದ ಶ್ರೀಯುತ ಪ್ರಸಾದ್ ಕೂಂದುರ್, ನಿವೃತ್ತ ಶಿಕ್ಷಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಶ್ರೀರಂಗಪಟ್ಟಣ ತಾಲ್ಲೂಕು ಇಲ್ಲಿನ ಅಧ್ಯಕ್ಷರಾದ ಶ್ರೀಯುತ ಸಿದ್ದಲಿಂಗ ಹಾಗೂ ಲಲಿತಕಲಾ ಕಾಲೇಜು ಮೈಸೂರು ವಿದ್ಯಾನಿಲಯ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ವಿದುಷಿ ಡಾ. ಶಾಂಭವಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ…
ಮಂಗಳೂರು : 2023ರ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಉಪನ್ಯಾಸಕ, ಲೇಖಕ, ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಕೋಟದ ಎಚ್. ಸುಜಯೀಂದ್ರ ಹಂದೆಯವರಿಗೆ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ದಿನಾಂಕ 19 ನವೆಂಬರ್ 2024ರಂದು ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಹಂದೆಯವರ ‘ಯಕ್ಷ ದೀವಟಿಕೆ’ ಕೃತಿ ಬಹುಮಾನಕ್ಕೆ ಆಯ್ಕೆಯಾಗಿತ್ತು. ಮಂಗಳೂರಿನ ಶಾಸಕರಾದ ವೇದವ್ಯಾಸ ಕಾಮತ್ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೇರು ನಿಗಮ ಅಧ್ಯಕ್ಷರಾದ ಮಮತಾ ಗಟ್ಟಿ, ಕೊಂಕಣಿ ಅಕಾಡೆಮಿ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಮಂಗಳೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮೃತಾ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಕೇಶ್ ಜಿ. ಉಪಸ್ಥಿತರಿದ್ದರು.
ಕೊಡಗು : ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿನ ಕಾವೇರಿ ಸಭಾಂಗಣದಲ್ಲಿ ಸಂತ ಕವಿ ದಾಸ ಶ್ರೇಷ್ಠ ಕಾಲಜ್ಞಾನಿ ಶ್ರೀ ಕನಕದಾಸರ 537ನೇ ಜಯಂತೋತ್ಸವವನ್ನು ದಿನಾಂಕ 18 ನವೆಂಬರ್ 2024ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಆದ ಪ್ರೊ. ಸುರೇಶ್ ಎಂ. ಮತ್ತು ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆಗಳ ಸಂಯೋಜಕರಾದ ಪ್ರೊ. ರವಿಶಂಕರ್ ಇವರು ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬೋಧಕ ವರ್ಗ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ಜಮೀರ್ ಅಹಮದ್ ಸ್ವಾಗತಿಸಿ, ವಿದ್ಯಾರ್ಥಿನಿ ಕುಮಾರಿ ದೀಪ್ತಿ ನಿರೂಪಣೆಯನ್ನು ಮಾಡಿದರು.
ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಆಶ್ರಯದಲ್ಲಿ ದಿನಾಂಕ 23 ನವೆಂಬರ್ 2024ರಂದು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ, ನಿರಂಜನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷರಾದ ಕೇಶವ ಅಡ್ತಲೆ, ಸಂತೋಷ್ ಕುತ್ತಮೊಟ್ಟೆ, ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ. ಹಿರಿಯ ಸಾಹಿತಿ ಶ್ರೀಮತಿ ಲೀಲಾ ದಾಮೋದರ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಬೆಳಿಗ್ಗೆ 9-00 ಗಂಟೆಗೆ ಅರಂತೋಡು ಪೇಟೆಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ. ನಿವೃತ್ತ ಮುಖ್ಯ ಶಿಕ್ಷಕ ಹೊನ್ನಪ್ಪ ಮಾಸ್ತರ್ ಅಡ್ತಲೆ ಮೆರವಣಿಗೆಗೆ ಚಾಲನೆ ನೀಡುವರು. ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ರಾಷ್ಟ್ರಧ್ವಜಾರೋಹಣ ಹಾಗೂ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ…
ತೀರ್ಥಹಳ್ಳಿ : ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ತೀರ್ಥಹಳ್ಳಿ ಇದರ ಆಶ್ರಯದಲ್ಲಿ ನಾಡಿನ ಹೆಸರಾಂತ ಗಾಯಕ ಸಂಗೀತ ನಿರ್ದೇಶಕ ಉಪಾಸನಾ ಮೋಹನ್ ಅವರ ಮಾರ್ಗದರ್ಶನದಲ್ಲಿ ‘ಭಾವಗೀತೆಗಳ ಶಿಬಿರ ಮತ್ತು ಸಂಗೀತ ಸಂಜೆ’ ಕಾರ್ಯಕ್ರಮವನ್ನು ದಿನಾಂಕ 24 ನವೆಂಬರ್ 2024ರಂದು ಬೆಳ್ಳಿಗೆ 10-00 ಗಂಟೆಗೆ ಮೃಗವಧೆ, ಆನುಗುಡಿಗೆ, ಎಲೆಮನೆ ರಿಟ್ರೀಟ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಭಾಗವಹಿಸುವ ಆಸಕ್ತರು ನೋಂದಾಯಿಸಿಕೊಳ್ಳಲು 9844651774 ಮತ್ತು 8277582809 ಸಂಖ್ಯೆಯನ್ನು ಸಂಪರ್ಕಿಸಿರಿ.
ಮಂಗಳೂರು : ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರದ 30ನೇ ವರ್ಷದ ಸಂಭ್ರಮ ತ್ರಿಂಶೋತ್ಸವದ ಸರಣಿ ಕಾರ್ಯಕ್ರಮದಲ್ಲಿ ‘ನೃತ್ಯಾಮೃತ 12’ ಭರತನಾಟ್ಯದೊಳಗಿನ ಧ್ವನಿ ಮತ್ತು ಬೆಳಕು ಎಂಬ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ದಿನಾಂಕ 18 ನವಂಬರ್ 2024ರಂದು ಸಂತ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜನಪದ ವಿದ್ವಾಂಸರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಇವರು ಮಾತನಾಡಿ “ಮನುಷ್ಯ ದೇಹದೊಳಗೆ ಅಡಗಿರುವ ಧ್ವನಿ ಮತ್ತು ಬೆಳಕು ಅದು ದೇವ ಸೃಷ್ಟಿಯ ಜೀವ ಭಾವ. ಅಂತಹ ಜೀವ ಭಾವವೇ ಭರತನಾಟ್ಯದ ಒಳಗೆ ಅಡಗಿರುವ ಧ್ವನಿ ಮತ್ತು ಬೆಳಕು. ಧ್ವನಿ ಬೆಳಕಿನ ಆಟವಿಲ್ಲದೆ ಯಾವ ನಾಟ್ಯವೂ ಈ ಪ್ರಪಂಚದೊಳಗೆ ಇಲ್ಲ. ಅಂತಹ ಆಧ್ಯಾತ್ಮದ ಶಕ್ತಿಯೇ ನಾವು ಕಾಣುವ ಧ್ವನಿ ಮತ್ತು ಬೆಳಕು” ಎಂದು ಅಭಿಪ್ರಾಯಪಟ್ಟರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿದ ದಕ್ಷಿಣ ಕನ್ನಡ ಸಹಕಾರಿ ಹಾಲು…