Author: roovari

ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-7’ ಕಾರ್ಯಕ್ರಮವು ಕಂಕನಾಡಿ ಗರೋಡಿಯ ಸರ್ವಮಂಗಳ ಸಭಾಭವನದಲ್ಲಿ ದಿನಾಂಕ 28-09-2023ರಂದು ನಡೆಯಿತು. ದೀಪ ಬೆಳಗಿಸಿ ‘ಆಟ-ಕೂಟ–ನಲಿಕೆ’ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಚಿಲಿಂಬಿ ಸಾಯಿ ಮಂದಿರದ ಮುಕ್ತೇಸರರಾದ ಶ್ರೀ ವಿಶ್ವಾಸ ಕುಮಾರ್ ದಾಸ್‌ ಇವರು “ತುಳುವನ್ನು ನಾವು ಬಹಳ ಹಚ್ಚಿಕೊಂಡು ಕೃಷಿ ಮಾಡುವ ಭಾಷೆ, ನಮ್ಮ ಮಾತೃಭಾಷೆಯನ್ನು ನಾವೇ ಕಾಪಾಡಿಕೊಂಡು ಬರಬೇಕು. ಹಾಗಾಗಿ ನಾನು ತುಳು ಭಾಷಾ ಕಾರ್ಯಕ್ರಮಗಳಿಗೆ ಕೂಡಲೇ ಸ್ಪಂದಿಸುತ್ತೇನೆ. ತುಳು ಭಾಷೆ, ಸಂಘಟನೆಗಳಿಗೆ ನಮ್ಮ ದೇವಾಲಯದಲ್ಲಿ ಬಹಳ ಅವಕಾಶ ಮಾಡಿಕೊಟ್ಟು, ತುಳು ಕೂಟದ ಸರಣಿ ಕಾರ್ಯಕ್ರಮವನ್ನು ನಮ್ಮಲ್ಲಿಯೂ ನಡೆಸಲು ಈ ಮೂಲಕ ಆಹ್ವಾನಿಸುತ್ತೇನೆ. ನನ್ನ ಧರ್ಮಪತ್ನಿ ಲಾವಣ್ಯ ದಾಸ್ ಕೂಡಾ ತುಳು ನಾಟಕ, ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶವಿದೇಶಗಳಲ್ಲಿ ಭಾಷಾ ಪ್ರಸರಣಕ್ಕಾಗಿ ಶ್ರಮ ಪಡುತ್ತಿದ್ದಾರೆ. ತುಳುಕೂಟದ ನಿರಂತರ ಐವತ್ತು ವರ್ಷಗಳ ಸಾಧನೆಗಾಗಿ ಕೂಟವನ್ನು ಅಭಿನಂದಿಸುತ್ತೇನೆ” ಎಂದರು. ಮಾಜಿ ವಿಧಾನ ಸಭಾ ಸದಸ್ಯರಾದ ಶ್ರೀ ಜೆ.ಆರ್. ಲೋಬೊ…

Read More

ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭವವು ದಿನಾಂಕ 1-10-2023ರಂದು ಮಂಗಳೂರಿನ ಬಳ್ಳಾಲ್‌ಬಾಗಿನಲ್ಲಿರುವ ಲೋಕಯ್ಯ ಶೆಟ್ಟಿ ರಸ್ತೆಯಲ್ಲಿನ ಶ್ರೀ ದುರ್ಗಾ ಕಾಂಪ್ಲೆಕ್ಸ್, 3ನೇ ಮಹಡಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು “ಭಾರತೀಯ ಕಲೆಗಳು ವ್ಯಕ್ತಿತ್ವ ವಿಕಸನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಹೀಗಾಗಿ ಇಂತಹ ಕಲೆಗಳನ್ನು ಬೆಳೆಸುವುದು ಪ್ರತಿಯೊಬ್ಬನ ಕರ್ತವ್ಯ” ಎಂದು ತಿಳಿಸಿದರು. ಸಿಮ್ ಟೆಕ್ನಾಲಜೀಸ್ ಗ್ರೂಪಿನ ಮಾಲೀಕರಾದ ನವೀನ್ ಕಿಲ್ಲೆ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ, ಸಿಂಫನಿ ಸಂಸ್ಥೆಯ ಮಾಲೀಕರಾದ ಶ್ರೀ ಲಾಯ್ ನೊರೊನ್ಹಾ, ಸಂಗೀತ ಗುರುಗಳೂ, ಕಲಾವಿದರೂ ಆದ ವಿದ್ವಾನ್ ಅನೀಶ್ ವಿ. ಭಟ್, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಅಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಪ್ರಸಿದ್ಧ ನಾಗಸ್ವರ ವಿದ್ವಾಂಸ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಕಾರ್ಯದರ್ಶಿ…

Read More

ದಕ್ಷಿಣ ಕೊರಿಯಾ: ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ಗುರು ವಿದ್ಯಾಶ್ರೀ ರಾಧಾಕೃಷ್ಣ ಮತ್ತು ತಂಡದವರು ದಕ್ಷಿಣ ಕೊರಿಯಾದಲ್ಲಿ ದಿನಾಂಕ 06-10-2023ರಿಂದ 12-10-2023ರವರೆಗೆ ನಡೆಯಲಿರುವ ‘ಸಾರಂಗ ಫೆಸ್ಟಿವಲ್’ನಲ್ಲಿ ನೃತ್ಯ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಪ್ರತಿನಿಧಿಸಲಿರುವರು. ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಐಸಿಸಿಆರ್ ದಾಖಲಿತ ಪ್ರತಿನಿಧಿಯಾಗಿರುವ ಇವರು ದಕ್ಷಿಣ ಕೊರಿಯಾದ ‘ಸಾರಂಗ’ ಉತ್ಸವದಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ನೃತ್ಯ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಲಿದ್ದಾರೆ. ಇವರೊಂದಿಗೆ ಸಹಕಲಾವಿದರಾಗಿ ರಶ್ಮಿ ಉಡುಪ, ಅಂಕಿತ ರೈ, ಮೇಘ ಮಲರ್ ಪ್ರಭಾಕರ್, ತ್ವಿಶಾ ಶೆಟ್ಟಿ, ದಿಶಾ ಗಿರೀಶ್, ಪೂರ್ವಿ ಕೃಷ್ಣ ಹಾಗೂ ತಾಂತ್ರಿಕ ಸಹಕಾರಕ್ಕಾಗಿ ರಾಧಾಕೃಷ್ಣ ಭಟ್ ಇವರುಗಳು ಭಾಗವಹಿಸಲಿದ್ದಾರೆ.

Read More

ಕಾಶ್ಮೀರ : ದಿನಾಂಕ 02-10-2023 ಗಾಂಧಿ ಜಯಂತಿ ಪ್ರಯುಕ್ತ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಶೇರ್-ಇ-ಕಾಶ್ಮೀರ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ದೆಹಲಿ ಘಟಕ, ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷಾ ಇಲಾಖೆ ಆಯೋಜಿಸಿದ್ದ ಹಿಂದಿ ಯಕ್ಷಗಾನ ಮತ್ತು ಪಜ್ಜೆ-ಗೆಜ್ಜೆ ತುಳು-ಕನ್ನಡ ಶಾಸ್ತ್ರೀಯ, ಜಾನಪದ ನೃತ್ಯ ಪ್ರಕಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಮಾತನಾಡಿ “ಮಹಾಭಾರತ ಯುದ್ಧಕ್ಕೆ ಮುನ್ನ ಯಕ್ಷನು ಯುಧಿಷ್ಠಿರನ ಬಳಿ ಜಗತ್ತಿನಲ್ಲಿ ನಿನಗೆ ಅತ್ಯಂತ ಅಚ್ಚರಿಯ ವಿಷಯ ಯಾವುದು ಎಂಬ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಯುಧಿಷ್ಠಿರ, ಜಗತ್ತಿನಲ್ಲಿ ಇಷ್ಟೊಂದು ಸಾವು-ನೋವುಗಳಾಗುತ್ತಿದ್ದರೂ ಬದುಕಿನ ಬಗ್ಗೆ ಜನರಿಗೆ ಏಕಿಷ್ಟು ಆಸಕ್ತಿ ಎನ್ನುವುದೇ ಅಚ್ಚರಿ ಎಂದು ಉತ್ತರಿಸಿದ್ದ. ಯಕ್ಷನು ಈಗ ಜಮ್ಮು-ಕಾಶ್ಮೀರಕ್ಕೆ ಬಂದು ನನ್ನಲ್ಲಿ, ನಿನಗೆ ಮಹದಚ್ಚರಿಯ ವಿಷಯ ಯಾವುದು ಎಂದು ಕೇಳಿದರೆ, ಇಷ್ಟು ಮಂದಿ ಕರ್ನಾಟಕದಿಂದ ಬಂದು…

Read More

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವು ದಿನಾಂಕ 03-10-2023ರಂದು ಅಕಾಡೆಮಿ ಕಚೇರಿ ಆವರಣದ ಸಾಮರ್ಥ್ಯ ಸೌಧದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಬ್ಯಾರಿ ಭಾಷಾ ದಿನಾಚರಣೆ ಮತ್ತು ಅದರ ಮಹತ್ವದ ಬಗ್ಗೆ ಉಪನ್ಯಾಸ ನೀಡಿದ ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಹಂಝ ಮಲಾರ್ “ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯ ಉಳಿವು ಬ್ಯಾರಿ ಮುಸ್ಲಿಮರ ಕೈಯಲ್ಲಿದೆ. ಅದಕ್ಕಾಗಿ ಮರೆತು ಹೋದ ಹಳೆಯ ಬ್ಯಾರಿ ಪದಗಳನ್ನು ಮತ್ತೆ ಬಳಸಲು ಮುಂದಾಗಬೇಕು. ಮುಂದಿನ ಪೀಳಿಗೆಗೆ ಬ್ಯಾರಿ ಭಾಷೆಯ ಮೇಲೆ ಅಭಿಮಾನ, ಗೌರವ ಬರುವಂತಹ ಪ್ರಯತ್ನ ಮಾಡಬೇಕು. ಬ್ಯಾರಿ ಅಕಾಡೆಮಿ ಪ್ರಕಟಿಸಿದ ಬ್ಯಾರಿ ಭಾಷಾ ಕೃತಿಗಳು ಓದುಗರ ಕೈ ಸೇರುವಂತೆ ಪ್ರಯತ್ನಿಸಬೇಕು” ಎಂದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಮಾತನಾಡಿ “ಬ್ಯಾರಿ ಸಮುದಾಯದ ಪ್ರಾಚೀನ ವಸ್ತುಗಳ ಸಂಗ್ರಹಾಲಯ ಸ್ಥಾಪಿಸಬೇಕು. ಮಂಗಳೂರಿನಲ್ಲಿ ಬ್ಯಾರಿ ಸಮ್ಮೇಳನ ಆಯೋಜಿಸಬೇಕು” ಎಂದರು. ಬ್ಯಾರಿ ಅಧ್ಯಯನ…

Read More

ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯ ವತಿಯಿಂದ 2023ನೆಯ ಸಾಲಿನ ರಾಜ್ಯೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಕವನ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನದೊಂದಿಗೆ ಎರಡು ಮೆಚ್ಚುಗೆ ಬಹುಮಾನ ನೀಡಲಾಗುವುದು. ವಿಜೇತರಿಗೆ ಪುಸ್ತಕ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುವುದು. ಸ್ಪರ್ಧೆಯ ನಿಯಮಗಳು – * ಸ್ಪರ್ಧೆಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. * ಒಬ್ಬರು ಒಂದು ಅಪ್ರಕಟಿತ, ಸ್ವತಂತ್ರ ಕವನವನ್ನು ಮಾತ್ರ ಕಳಿಸಬಹುದು. * ಸ್ಪರ್ಧಿಗಳು ಯಾವುದೇ ವಿಷಯದ ಮೇಲೆ ಕವನಗಳನ್ನು ರಚಿಸಬಹುದು. ಅನುವಾದ, ಅನುಕರಣೆ, ರೂಪಾಂತರವಾದ ಕವನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. * ಕವನವನ್ನು ತಪ್ಪಿಲ್ಲದಂತೆ ಟೈಪು ಮಾಡಿ, ಪಿ.ಡಿ.ಎಫ್. ರೂಪದಲ್ಲಿ ಕಳಿಸಬೇಕು. * ಸ್ಪರ್ಧಿಯ ಪರಿಚಯ, ವಿಳಾಸ ಮತ್ತು ಒಂದು ಫೋಟೋವನ್ನು ಪ್ರತ್ಯೇಕವಾಗಿ ಕಳಿಸಬೇಕು. * ಕವನಗಳನ್ನು ಕಳಿಸಲು 31-10-2023 ಕೊನೆಯ ದಿನಾಂಕವಾಗಿರುತ್ತದೆ. * ಫಲಿತಾಂಶವನ್ನು ದಿನಾಂಕ 05-11-2023ರಂದು ಪ್ರಕಟಿಸಲಾಗುವುದು. * ಸ್ಪರ್ಧಿಗಳು ನಮ್ಮ ವಾಟ್ಸಪ್…

Read More

ಬೆಳಗಾವಿ : ರಂಗಸಂಪದ ಬೆಳಗಾವಿಯು ಆಯೋಜಿಸಿದ ಮೂರು ದಿನಗಳ ಹೆರಿಟೇಜ್ ಕಿಚನ್ ನಾಟಕೋತ್ಸವವು ದಿನಾಂಕ 30-09-2023ರಂದು ಬೆಳಗಾವಿಯ ಟಿಳಕ ಚೌಕ್ ಹತ್ತಿರದ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಉದ್ಘಾಟನೆಗೊಂಡಿತು. ಶ್ರೀಮತಿ.ಸುಮನ ಮತ್ತು ಶ್ರೀ.ಸುಧೀರ ಸಾಲಿಯಾನ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀ.ಗುರುನಾಥ ಕುಲಕರ್ಣಿ ಅತಿಥಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ.ಸುಧೀರ ಸಾಲಿಯಾನ “ನಾಟಕ ಮತ್ತು ಯಕ್ಷಗಾನ ಕಲಾವಿದರಿಗೆ ಬದುಕಾದರೆ ಪ್ರೇಕ್ಷಕರಿಗೆ ಮನೋರಂಜನೆ” ಎಂದು ರಂಗಸಂಪದ ಬೆಳಗಾವಿಯ ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ “ಮರಣ ಮೃದಂಗ ನಾಟಕ ಪ್ರಚಲಿತವಾದ ರಾಜಕೀಯವನ್ನು ಹೆಜ್ಜೆ ಹೆಜ್ಜೆಗೂ ನಮಗೆ ಮನವರಿಕೆ ಮಾಡಿಕೊಡುವಂಥ ಕಥಾವಸ್ತು. ಕಾಲ ಬದಲಾದರೂ ರಾಜಕೀಯ ಬದಲಾಗುವುದಿಲ್ಲ ಎಂಬುದಕ್ಕೆ ಈ ನಾಟಕ ಸಾಕ್ಷಿಯಾಗಿದೆ” ಎಂದರು. ನಟ ಹಾಗೂ ನಿರ್ದೇಶಕ ಯಶವಂತ ಸರದೇಶಪಾಂಡೆ ಮಾತನಾಡಿ “ರಂಗಭೂಮಿಗೆ ಹಾಗೂ ಹೊಸ ಹೊಸ ಕಲಾವಿದರಿಗೆ ಅವಕಾಶ ಕೊಡುವ ಜತೆಗೆ ಪ್ರೇಕ್ಷಕರಲ್ಲಿ ರಂಗಾಸಕ್ತಿ ಮೂಡಿಸುವಂತಹ ಪಾಮಾಣಿಕ ಪ್ರಯತ್ನವನ್ನು…

Read More

ಉಡುಪಿ : ರಂಗಭೂಮಿ (ರಿ.) ಉಡುಪಿ ಆಯೋಜಿಸುತ್ತಿರುವ 2 ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರದ 13ನೇ ಶಿಬಿರವು ದಿನಾಂಕ 14-10-2023ನೇ ಶನಿವಾರ ಹಾಗೂ 15-10-2023ನೇ ಭಾನುವಾರ ಬೆಳಿಗ್ಗೆ 9.00 ರಿಂದ ಸಂಜೆ 7.00ರ ವರೆಗೆ ಉಡುಪಿಯ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ. ರಂಗಭೂಮಿ (ರಿ.) ಉಡುಪಿ ಉಡುಪಿಯಲ್ಲಿ 2021ರ ಅಕ್ಟೋಬರ್‌ನಿಂದ ಪ್ರತೀ ತಿಂಗಳ 2ನೇ ಯಾ 3ನೇ ವಾರಾಂತ್ಯದಲ್ಲಿ ರಾಜ್ಯದ ಹಲವಾರು ಹೆಸರಾಂತ ರಂಗಕರ್ಮಿಗಳ ಸಹಕಾರದೊಂದಿಗೆ 2 ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರವನ್ನು ಆಯೋಜಿಸುತ್ತಿದೆ. ಈ ಬಾರಿ ಹೆಸರಾಂತ ನಿರ್ದೇಶಕ ಮತ್ತು ತಂತ್ರಜ್ಞ ನೀನಾಸಂ ಪದವೀಧರರಾದ ಶ್ರೀ ರಿಯಾಜ್ ಸಿಹಿಮೊಗೆ ಹಾಗೂ ಹೆಸರಾಂತ ನಿರ್ದೇಶಕಿ, ತಂತ್ರಜ್ಞೆ ಮತ್ತು ಎನ್.ಎಸ್.ಡಿ. ಪದವೀಧರೆಯಾದ ಡಾ. ಸಹನ ಪಿಂಜಾರ್ ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಶ್ರೀ ರಿಯಾಜ್ ಸಿಹಿಮೊಗೆ: ನೀನಾಸಂ ರಂಗ ಶಿಕ್ಷಣ ಕೇಂದ್ರ ಪದವೀಧರರಾದ ಇವರು ನಾಟಕ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡಿದ್ದಿದ್ದಾರೆ. ಕಳೆದ 15ವರ್ಷಗಳಿಂದ ರಂಗ ಭೂಮಿಯಲ್ಲಿ…

Read More

ಉಡುಪಿ : ತುಳು ರಂಗಭೂಮಿ ಅನ್ಯ ಭಾಷಾ ರಂಗಭೂಮಿಗಳಿಗೆ ಸರಿಸಮನಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಪ್ರಾರಂಭಗೊಂಡ ಕೆಮ್ತೂರು ನಾಟಕ ಪ್ರಶಸ್ತಿಗಾಗಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ 22ನೇ ವರ್ಷದ ಸ್ಪರ್ಧೆಯನ್ನು 2024ರ ಜನವರಿ ಮೊದಲ ವಾರದಿಂದ ಉಡುಪಿಯಲ್ಲಿ ಆಯೋಜಿಸಲಾಗಿದೆ. ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಗರಿಷ್ಠ 7 ನಾಟಕಗಳನ್ನು ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳೊಂದಿಗೆ ರೂ.20,000/-, ರೂ.15,000/- ಮತ್ತು ರೂ.10,000/- ನಗದು ಬಹುಮಾನ ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ ರೂ.1,000/- ಮತ್ತು ದ್ವಿತೀಯ, ತೃತೀಯ ಬಹುಮಾನ ಕೊಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರೂ.5,000/- ಮತ್ತು ಹೊರರಾಜ್ಯದ ತಂಡಗಳಿಗೆ ರೂ.10,000/- ಭತ್ತೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯ ಒದಗಿಸಲಾಗುವುದು. ಭಾಗವಹಿಸಲಿಚ್ಛಿಸುವ ಕ್ರಿಯಾಶೀಲ ತುಳು ಹವ್ಯಾಸಿ ರಂಗತಂಡಗಳು ಮುದ್ರಿತ ಪ್ರವೇಶ ಪತ್ರ ಮತ್ತು ನಿಯಮಾವಳಿಗಳ…

Read More

ಬೆಂಗಳೂರು : ಹದಿನೈದು ವಸಂತಗಳನ್ನು ಪೂರೈಸಿರುವ ಬೆಂಗಳೂರಿನ ಚಿತ್ಪಾವನ ಮಹಿಳಾ ಯಕ್ಷಗಾನ ಮೇಳ (ರಿ) ಹೆಚ್ಚು ಹೆಚ್ಚು, ವಿಭಿನ್ನ ಯಕ್ಷಗಾನ ಪ್ರದರ್ಶನಗಳನ್ನು ನೀಡುವ ಮೂಲಕ ಕಲಾರಸಿಕರ ಮನೆ, ಮನಸ್ಸಿನ ಮಾತಾಗುತ್ತಿದೆ. ಹವ್ಯಾಸಿ ತಂಡವಾಗಿದ್ದರೂ ವ್ಯವಸಾಯೀ ತಂಡಕ್ಕೆ ಸರಿಸಮನಾಗಿ ಪ್ರದರ್ಶನದ ಗುಣಮಟ್ಟದ ನಿರಂತರ ಪ್ರಗತಿ ಸಾಧಿಸುತ್ತಿದೆ. ನುರಿತ ಕಲಾವಿದೆಯರ ಜೊತೆಗೆ ಯುವ ರಕ್ತದ  ಸೇರ್ಪಡೆ ಮೇಳಕ್ಕೆ ವ್ಯಾಪಕ ಆಯಾಮವನ್ನು ನೀಡುತ್ತಿದೆ. ಮಂಗಳಾದೇವಿ ಮೇಳದ ಹೆಸರಾಂತ ಭಾಗವತರಾದ ಶ್ರೀಯುತ ಯೋಗೀಶ್ ಶರ್ಮರು ಆಸಕ್ತಿ ತೋರಿ ಹೊಸ ಪ್ರಸಂಗಗಳ ತರಬೇತಿ/ನಿರ್ದೇಶನ ನೀಡುತ್ತಿರುವುದು ಇದಕ್ಕೆ ಸಾಕ್ಷಿ. ದಿನಾಂಕ 02-10-2023ರಂದು ನಾಗರಬಾವಿ ಕೆನರಾ ಬ್ಯಾಂಕ್ ಕಾಲೋನಿಯ ಅಮ್ಮೆಂಬಳ ಸುಬ್ಬರಾವ್ ಕಲಾಮಂಟಪದಲ್ಲಿ ನಡೆದ ‘ಬಿಲ್ಲ ಹಬ್ಬ ಕಂಸವಧೆ’ ನೆರೆದಿದ್ದ ಅಪಾರ ಯಕ್ಷಾಭಿಮಾನಿಗಳ ಮನ ಸೂರೆಗೈದಿತು. ಕಂಸನಾಗಿ ಶ್ರೀಮತಿ ಪೂನಂ ಗೋಖಲೆ ಅಮೋಘ ಅಭಿನಯ ನೀಡಿದರು. ಕೆಟ್ಟ ಕನಸಿಂದ ಮಂಚದಿಂದ ಬಿದ್ದು ಭಯ, ರೋಷದಿಂದ ತಲ್ಲಣಗೊಳ್ಳುವ ದೃಶ್ಯವಂತೂ ಬಹುಕಾಲ ಮನದಲ್ಲಿ ನೆಲೆಗೊಳ್ಳುವಂತಹುದು. ಕೃಷ್ಣನಾಗಿ ಶ್ರೀಮತಿ ಅನುಪಮಾ ಮರಾಠೆಯವರ ಎಂದಿನ ಪ್ರೌಢ ಅಭಿನಯ…

Read More