Author: roovari

ಮಂಗಳೂರು: ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಆಯೋಜಿಸಿದ್ದ 12ನೇ ವರ್ಷದ ನುಡಿ ಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭ 17 ನವೆಂಬರ್ 2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್‌ ಬೋಳಾ‌ರ್ ಮಾತನಾಡಿ “ಕಲೆಯ ಆರಾಧನೆಯಿಂದ ಕಲಾವಿದ ಬೆಳೆಯುತ್ತಾನೆ. ಕಲೆಯೂ ತನ್ನ ಮೌಲ್ಯ ಹೆಚ್ಚಿಸಿಕೊಳ್ಳುತ್ತದೆ. ಕಲಾರಾಧನೆಯಿಂದ ಯಕ್ಷಗಾನ ಕಲೆ ಹೆಚ್ಚು ಶ್ರೀಮಂತಗೊಳ್ಳಲಿದೆ. ನುರಿತ ಕಲಾವಿದ ತನ್ನ ಪ್ರಾವೀಣ್ಯವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡದೆ ಕಲೆಯ ಶ್ರೀಮಂತಿಕೆ ಹೆಚ್ಚಿಸಲು ನಡೆಸುವ ಪ್ರಯತ್ನಗಳು ಕಲೆಯ ಬೆಳವಣಿಗೆಗೆ ಕಾರಣವಾಗುತ್ತವೆ. ಕಲೆ ತನ್ನ ಬದುಕಿಗೆ ಮೌಲ್ಯ ತಂದುಕೊಟ್ಟಿದೆ ಎಂಬ ವಿನೀತ ಭಾವದಿಂದ ಕಲೆಯನ್ನು ಅರಾಧಿಸುತ್ತ ಹೋದರೆ ಅದು ಇನ್ನಷ್ಟು ಹೆಚ್ಚಿನ ಸಿದ್ಧಿ ಮತ್ತು ಪ್ರಸಿದ್ಧಿ ಸಾಧಿಸಲು ಸಾಧ್ಯ.” ಎಂದರು. ಕರ್ಣಾಟಕ ಬ್ಯಾಂಕ್‌…

Read More

ಮಂಗಳೂರು : ಮಧುರತರಂಗ (ರಿ.), ಮಂಗಳೂರು ದಕ್ಷಿಣ ಕನ್ನಡ ಅರ್ಪಿಸುವ ಜಗದೀಶ್ ಶಿವಪುರ ಇವರ ಗಾಯನ ಜೀವನದ 55ನೇ ವರ್ಷದ ‘ಗಾಯನಜ್ಯೋತಿ’ ಮನರಂಜನಾ ಕಾರ್ಯಕ್ರಮವನ್ನು ದಿನಾಂಕ 22 ನವೆಂಬರ್ 2024ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಕದ್ರಿ ಮಲ್ಲಿಕಟ್ಟೆ ಶ್ರೀ ಕೃಷ್ಣ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕದ್ರಿಯ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರ ಅಧ್ಯಕ್ಷತೆಯಲ್ಲಿ ಶ್ರೀ ವೆಂಕಟೇಶ್ ಹೊಸಬೆಟ್ಟು ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿರುವರು. ಹಿರಿಯ ಕಲಾ ಸಾಹಿತಿ ಶ್ರೀ ಜನಾರ್ದನ ಹೆಚ್. ಹಂದೆ ಕೋಟ ಇವರಿಂದ ಶುಭ ಗಾಯನ ನಡೆಯಲಿದ್ದು, ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು.

Read More

ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ‘ಅಮ್ಮ ಪ್ರಶಸ್ತಿ’ಗೆ 10 ಮಂದಿ ಲೇಖಕರು ಆಯ್ಕೆಯಾಗಿದ್ದಾರೆ. ವಿದ್ಯಾರಶ್ಮಿ ಪೆಲತ್ತಡ್ಕ – ಕರೆ ದಡ, ಡಾ. ಎಚ್.ಎಸ್. ಸತ್ಯನಾರಾಯಣ – ಬಿದಿರ ತಡಿಕೆ, ಪ್ರಭಾವತಿ ದೇಸಾಯಿ – ಸೆರಗಿಗಂಟಿದ ಕಂಪು, ವೀರೇಂದ್ರ ರಾವಿಹಾಳ್ – ಡಂಕಲ್ ಪೇಟೆ, ಪೂರ್ಣಿಮಾ ಮಾಳಗಿಮನಿ – ಮ್ಯಾಜಿಕ್ ಸೌಟು, ದ್ವಾರನಕುಂಟೆ ಪಾತಣ್ಣ – ರಾಣಿ ಅಹಲ್ಯಾಬಾಯಿ ಹೋಳ್ಕರ್, ಗುರುಪ್ರಸಾದ ಕಂಟಲಗೆರೆ – ಅಟ್ರಾಸಿಟಿ, ಡಾ. ಪರ್ವಿನ್ ಸುಲ್ತಾನಾ – ಶರಣರ ನಾಡಿನ ಸೂಫಿ ಮಾರ್ಗ, ಡಾ. ಪ್ರಕಾಶ ಭಟ್ – ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ ಹಾಗೂ ಮಂಜುನಾಥ ಚಾಂದ್ – ಪ್ರಿಯ ಮೀರಾ ಕೃತಿಗಳನ್ನು 24ನೇ ವರ್ಷದ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲ ರೆಡ್ಡಿ ಮುನ್ನೂರ್ ತಿಳಿಸಿದ್ದಾರೆ. ಪತ್ರಕರ್ತ-ಲೇಖಕ ಮಹಿಪಾಲ ರೆಡ್ಡಿ ಮುನ್ನೂರ್ ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿರುವ ಈ…

Read More

ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು ಇದರ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು ಆಯೋಜಿಸುವ ‘ವಿಶ್ವಕರ್ಮ ಕಲಾ ಸಿಂಚನ 2024’ ಕಾರ್ಯಕ್ರಮವು  ದಿನಾಂಕ 15 ಡಿಸೆಂಬರ್ 2024ರಂದು ಪೂರ್ವಾಹ್ನ 9-00 ಗಂಟೆಯಿಂದ ಮಂಗಳೂರು ರಥಬೀದಿಯ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತಿ ಸಿಂಚನ, ಜ್ಞಾನ ಸಿಂಚನ, ಚಿತ್ರ ಸಿಂಚನ ಮತ್ತು ಪ್ರತಿಭಾ ಸಿಂಚನ ಎಂಬ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಿಶ್ವಬ್ರಾಹ್ಮಣ ಸಮಾಜ ಬಾಂಧವರಿಗಾಗಿ ಕಲೆ, ಸಂಸ್ಕೃತಿ, ಪರಂಪರೆ, ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿದೆ. ನೋಂದಾವಣೆಗೆ ಕೊನೆಯ ದಿನಾಂಕ 08 ಡಿಸೆಂಬರ್ 2024 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಾವಣೆಗೆ 9482184197 ಸಂಪರ್ಕಿಸಿರಿ. ಸಂಜೆ 5-00 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

Read More

ಬೆಂಗಳೂರು: ಇಂದಿರಾನಗರದ ಎಸ್. ಚನ್ನಪ್ಪ ಪ್ರತಿಷ್ಠಾನವು ಮಕ್ಕಳ ಸಾಹಿತ್ಯ ಕೃತಿಗಳಿಗೆ ಬಹುಮಾನ ನೀಡಲು ನಿರ್ಧರಿಸಿದೆ. ಈ ಸಂಬಂಧ 2024ನೇ ಸಾಲಿನಲ್ಲಿ ಪ್ರಕಟಗೊಂಡ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತರು ಪುಸ್ತಕದ ನಾಲ್ಕು ಪ್ರತಿಗಳನ್ನು ಕಾರ್ಯದರ್ಶಿ, ಎಸ್. ಚನ್ನಪ್ಪ ಪ್ರತಿಷ್ಠಾನ, 333, ಅರ್ಕಾವತಿ ಮೊದಲ ಹಂತ, ಇಂದಿರಾನಗರ, ಬೆಂಗಳೂರು-560038 ಈ ವಿಳಾಸಕ್ಕೆ 15 ಡಿಸೆಂಬ‌ರ್ 2024ರೊಳಗೆ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ: 9880848716

Read More

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ  ಅಹಲ್ಯಾಬಾಯಿ ಹೋಳ್ಕರ್ ವೇದಿಕೆಯಲ್ಲಿ ನಡೆದ ಎರಡು ದಿನದ ‘ಕನಸುಗಳು-2024’  ಕಾರ್ಯಕ್ರಮದ ಸಮಾರೋಪ ಸಮಾರಂಭ ದಿನಾಂಕ 16 ನವೆಂಬರ್ 2024ರಂದು ನಡೆಯತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ವಿಶ್ವಾಸ್‌ ಶೆಣೈ ಮಾತನಾಡಿ “ಕನಸುಗಳನ್ನು ಎಲ್ಲರೂ ಕಾಣುತ್ತಾರೆ. ಯಶಸ್ಸು ಸಾಧಿಸಲು ಕನಸು ಬೇಕೇ ಬೇಕು, ಆದರೆ ಕನಸು ನನಸಾಗಲು  ಪ್ರಯತ್ನ ಮತ್ತು ಪರಿಶ್ರಮ ಬಹು ಮುಖ್ಯ. ಪೆನ್ಸಿಲ್‌ ತಪ್ಪು ಬರೆದಾಗ ಇರೇಸರ್‌ ಅದನ್ನು ತಿದ್ದಿ ತೀಡುವ ರೀತಿಯಲ್ಲಿ ಅಧ್ಯಾಪಕರು ಮತ್ತು ಪೋಷಕರು ವಿದ್ಯಾರ್ಥಿಗಳನ್ನು ತಿದ್ದಿ, ಗುರಿಯತ್ತ ಚಲಿಸುವಂತೆ ಮಾಡುತ್ತಾರೆ. ಹಾಗಾಗಿ ಕನಸು ನನಸಾದ  ಮೇಲೆ ಸಾಧನೆಯ ಹಾದಿಯಲ್ಲಿ ನಿಮ್ಮ ಜೊತೆಗಿದ್ದವರನ್ನು ಮರೆಯಬಾರದು. ಈ ಕಾಲಘಟ್ಟದಲ್ಲಿ ರಾಷ್ಟ್ರಪ್ರೇಮ ಇರುವ ಯುವಶಕ್ತಿ ದೇಶದ ವಿಕಾಸಕ್ಕೆ ಬೇಕು, ಇಂದು ನಮ್ಮ ದೇಶಕ್ಕೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕ ಸಿಕ್ಕಿದ್ದಾರೆ, ನಾವೂ ಕೂಡಾ ಅವರಂತೆ ರಾಷ್ಟ್ರೀಯತೆ ಬೆಳೆಸಿಕೊಳ್ಳಬೇಕು.” ಎಂದರು. ಇನ್ನೋರ್ವಮುಖ್ಯ ಅತಿಥಿ  ಲೇಬಲ್ ಫ್ಯೂಸ್ ಕಂಪನಿಯ…

Read More

ಕುಂಬಳೆ: ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ, ಕವಿ, ಶಿಕ್ಷಣ ತಜ್ಞ ವಿ. ಬಿ. ಕುಳಮರ್ವ ಅವರ ಮುಕ್ತಕಗಳ ಸಂಕಲನ ‘ಕಂದನ ಮುತ್ತು’ ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 17 ನವೆಂಬರ್ 2024ರ ಭಾನುವಾರದಂದು ಕುಂಬಳೆ ಸಮೀಪದ ನಾರಾಯಣಮಂಗಳದಲ್ಲಿರುವ ಅವರ ನಿವಾಸದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮದುರೈ ಕಾಮರಾಜ ಯುನಿವರ್ಸಿಟಿಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾಗಿರುವ ಡಾ. ಹರಿಕೃಷ್ಣ ಭರಣ್ಯ ಕೃತಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಹಾಗೂ ನಿವೃತ್ತ ಶಿಕ್ಷಕರಾದ ಬಳ್ಳಂಬೆಟ್ಟು ಈಶ್ವರ ಭಟ್ ಹಾಗೂ ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಆಯಿಶಾ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕೃತಿಕಾರರು ಮತ್ತು ಕೃತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕೃತಿಯನ್ನು ಪ್ರಕಟಿಸಿದ ಮಂಗಳೂರಿನ ಕಥಾಬಿಂದು ಪ್ರಕಾಶನದ ಪಿ. ವಿ. ಪ್ರದೀಪ್ ಕುಮಾರ್ (ಲೇಖಕ, ಪ್ರಕಾಶಕ) ಉಪಸ್ಥಿತರಿದ್ದರು.…

Read More

ಮೂಡುಬಿದಿರೆ: ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮಹತ್ವದ ಪ್ರಯೋಗ, ನಾಡೋಜ ಹಂಪನಾ ವಿರಚಿತ ದೇಸೀ ಮಹಾಕಾವ್ಯದ ರಂಗರೂಪ ‘ಚಾರುವಸಂತ’ ನಾಟಕವು ಮತ್ತೆ ರಂಗಕ್ಕೆ ಬರಲು ಸಿದ್ಧತೆ ನಡೆಸಿದೆ. 21 ಹಾಗೂ 22 ನವೆಂಬರ್ 2024ರಂದು ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡಭವನದಲ್ಲಿ ಮೊದಲೆರಡು ಪ್ರದರ್ಶನ ಏರ್ಪಡಿಸಲಾಗಿದೆ. ಡಾ. ನಾ. ದಾಮೋದರ ಶೆಟ್ಟಿ ರಚಿಸಿದ, ಡಾ.ಜೀವನ್ ರಾಂ ಸುಳ್ಯ ನಿರ್ದೇಶನದ ‘ಚಾರುವಸಂತ’ವು ಕಳೆದ ವರ್ಷ ರಾಜ್ಯಾದ್ಯಂತ ಪ್ರದರ್ಶನ ನಡೆಸಿ ಸಂಚಲನ ಮೂಡಿಸಿತ್ತು. ಬಹುಬೇಡಿಕೆಯ ನಾಟಕವಾಗಿರುವ ‘ಚಾರುವಸಂತ’ ಮತ್ತೆ ತನ್ನ ಚೈತ್ರಯಾತ್ರೆ ಕೈಗೊಳ್ಳಲಿದೆ. 21 ನವೆಂಬರ್ 2024ರಂದು ಗುರುವಾರ ಸಂಜೆ 06.15ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ‘ಚಾರುವಸಂತ’ ರಂಗ ಪಯಣವನ್ನು ಉದ್ಘಾಟಿಸಲಿದ್ದಾರೆ. ಚಾರುವಸಂತ ನಾಟಕ ಕೃತಿಯನ್ನು ವಿಶ್ರಾಂತ ಕುಲಪತಿಗಳಾದ ಫ್ರೊ. ಬಿ. ಎ. ವಿವೇಕ ರೈ ಲೋಕಾರ್ಪಣೆಗೊಳಿಸಲಿದ್ದು,ಕಾರ್ಯಕ್ರಮದಲ್ಲಿ ನಾಟಕಕಾರ ನಾ. ದಾಮೋದರ ಶೆಟ್ಟಿ ಇವರು ಉಪಸ್ಥಿತರಿರುತ್ತಾರೆ, ಬಳಿಕ ಸಂಜೆ ಘಂಟೆ 6.45ರಿಂದ ‘ಚಾರುವಸಂತ’ ನಾಟಕ ಪ್ರದರ್ಶನ ನಡೆಯಲಿದೆ. 22…

Read More

ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ಸರಣಿ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 16 ನವೆಂಬರ್ 2024ರ ಶನಿವಾರದಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ‘ಬೃಹದಾರಣ್ಯಕ ಉಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಲು ಆಗಮಿಸಿದ ಸಂಸ್ಕೃತ ವಿದ್ವಾಂಸರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ವಿದ್ಯಾವಾರಿಧಿ ಡಾ. ವಾಗೀಶ್ವರೀ ಶಿವರಾಮ್ ಮಾತನಾಡಿ “ನಾಮರೂಪಗಳ ಆಚೆಗಿರುವ ಪರಮಾತ್ಮನ ಶಕ್ತಿಯ ಪರಿಚಯವನ್ನು ಮಾಡಿಸಿ ಅಂತಹ ಪರಮಾತ್ಮನೆಡೆಗೆ ಸಾಗಲು ನೆರವಾಗುವ ಇಂದ್ರಿಯಗಳ ನಿಗ್ರಹ, ಪರಿಶ್ರಮದ ಸಾಧನೆಯ ವಿವರಗಳನ್ನು ಶಿಷ್ಯರಿಗೆ ಬೋಧಿಸಿದ ಜ್ಞಾನವೇ ‘ಬೃಹದಾರಣ್ಯಕ ಉಪನಿಷತ್ತು’ ಆಗಿದೆ. ನಮ್ಮ ವಿವೇಕದ ಪ್ರಜ್ಞೆಯನ್ನು ಜಾಗೃತಗೊಳಿಸಿ ಪಂಚೇಂದ್ರಿಯಗಳಿಗೆ ನಿಲುಕುವ ಭೌತಿಕ ಜ್ಞಾನವನ್ನು ಮೀರಿದ ಇಂದ್ರಿಯಾತೀತ ಜ್ಞಾನವನ್ನು ನೀಡುವ ಉಪನಿಷತ್ತುಗಳು ಜ್ಞಾನದ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ನಮ್ಮನ್ನು ದುರ್ಬಲಗೊಳಿಸುವ ಅಹಂಕಾರ, ಮಮಕಾರ, ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ ಲೋಕಹಿತದ ಕಾರ್ಯದಲ್ಲಿಯೇ…

Read More

ಉಡುಪಿ : ಮಾಹೆ ವಿ.ವಿ.ಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಗೋವಿಂದ ಪೈ ಸಂಶೋಧನಾ ಸಂಪುಟ-1 ಇದರ ಲೋಕಾರ್ಪಣಾ ಸಮಾರಂಭವು ದಿನಾಂಕ 16 ನವೆಂಬರ್ 2024ರ ಶನಿವಾರ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಶ್ರಾಂತ ಕುಲಪತಿ ಹಾಗೂ  ಗೋವಿಂದ ಪೈ ಸಂಶೋಧನಾ ಸಂಪುಟದ ಪ್ರಧಾನ ಸಂಪಾದಕರಾದ ಡಾ. ಬಿ. ಎ. ವಿವೇಕ್ ರೈ ಮಾತನಾಡಿ “ಸಂಶೋಧನೆಯೆಂದರೆ ಕೇವಲ ವಿಷಯಾಧಾರಿತ ಸಾಮಗ್ರಿ ಸಂಗ್ರಹವಲ್ಲ. ಒಳಗೊಳ್ಳುವಿಕೆ, ತಾತ್ವಿಕತೆ, ಸಿದ್ದಾಂತ, ವೈಜ್ಞಾನಿಕತೆ ಎಲ್ಲವನ್ನೂ ಹೊಂದಿರಬೇಕು. ಈ ರೀತಿಯ ಸಂಶೋಧನೆಯನ್ನು ರಾಷ್ಟ್ರಕವಿ ಗೋವಿಂದ ಪೈ ಅವರ ಬರಹಗಳಲ್ಲಿ ಕಾಣಲು ಸಾಧ್ಯ. ಅದು ಎಲ್ಲವನ್ನೂ ಒಳಗೊಂಡಿರುವ ಸಮಗ್ರತೆಯ ಹೂರಣ. ಕಾಲ ಯಾರಿಗೂ ಕಾಯುವುದಿಲ್ಲ. ನಾವು ಕಾಲದ ಜತೆಗೆ ಸೆಣಸಾಡಬೇಕು. ಗೋವಿಂದ ಪೈ ಅವರ ಆದರ್ಶ ಸಂಶೋಧನಾ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಪುಸ್ತಕವನ್ನು ಓದಿದರೆ ಸಾಲದು. ಓದಿ ಅರಿಯಬೇಕು. ಅರಿತಾಗ ನಾವು ಸ್ನಾತರಾಗುತ್ತೇವೆ.…

Read More