Author: roovari

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ಘಟಕವು ಚೈತನ್ಯ ಯುವ ವೃಂದ ಮತ್ತು ಚೈತನ್ಯ ಮಹಿಳಾ ವೃಂದದ ಸಹಯೋಗದಲ್ಲಿ ಗಾಂಧಿ ಜಯಂತಿಯ ಅಂಗವಾಗಿ ಆಯೋಜಿಸಿದ ಗಾಂಧಿ ಸ್ಮೃತಿ  ಕಾರ್ಯಕ್ರಮ  ದಿನಾಂಕ 02-10-2023ರಂದು ಅಪರಾಹ್ನ ಹೆಬ್ರಿ ಚೈತನ್ಯ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗಾಂಧಿ ಭಾವ ಚಿತ್ರಕ್ಕೆ ಪುಷ್ಪ ನಮನ ಹಾಗೂ ಮಹಾತ್ಮಗಾಂಧಿ ಕುರಿತ ಕವನಗೋಷ್ಠಿ – ಚಿಂತನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕರು ಮತ್ತು ರಾಜ್ಯ ಅತ್ತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದಿನೇಶ ಶೆಟ್ಟಿಗಾರ್  ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕ.ಸಾ.ಪ ಹೆಬ್ರಿ ಇದರ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಚೈತನ್ಯ ಯುವ ವೃಂದದ ಗೌರವ ಅಧ್ಯಕ್ಷರಾದ ಜನಾರ್ದನ ಹೆಚ್, ಚೈತನ್ಯ ಮಹಿಳಾ ವೃಂದದ ಅಧ್ಯಕ್ಷರಾದ ವಿದ್ಯಾ ಜನಾರ್ದನ್, ಚೈತನ್ಯ ಮಹಿಳಾ ವೃಂದದ ಕಾರ್ಯದರ್ಶಿ ಸುಮನಾ ಜಿ. ನಾಯಕ್, ಕ. ಸಾ.ಪ ಗೌರವ ಕಾರ್ಯದರ್ಶಿ ಡಾ.ಪ್ರವೀಣ್ ಕುಮಾರ್  ಅವರು ಗಾಂಧಿ ಕುರಿತು ಚಿಂತನ ಪ್ರಸ್ತುತ…

Read More

ಬೆಂಗಳೂರು: ಕನ್ನಡ ಶಾಲೆಗಳನ್ನು ಉಳಿಸಿ ಬೆಳಸಬೇಕು. ಮಕ್ಕಳಲ್ಲಿ ಕನ್ನಡ ಪ್ರಜ್ಞೆಯನ್ನು ಬೆಳೆಸಬೇಕು, ಜೊತೆಗೆ ಕನ್ನಡ ಭಾಷೆಯ ಮಹತ್ವ ಅರಿವಾಗಬೇಕು. ಕನ್ನಡ ಸಾಹಿತ್ಯ ಓದುವ ಹವ್ಯಾಸ ಮಕ್ಕಳಲ್ಲಿ ಆರಂಭಿಸುವ ಹಿನ್ನೆಲೆಯಲ್ಲಿ, ಕನ್ನಡ ಶಾಲೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಕಟವಾಗಿರುವ ಮೌಲ್ಯಯುತ ಪುಸ್ತಕಗಳನ್ನು ಉಚಿತವಾಗಿ ವಿತರಿಸಲು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷ ಯೋಜನೆಯೊಂದನ್ನು ಅಳವಡಿಸಿಕೊಂಡಿದೆ. ಯೋಜನೆಯ ಬಗ್ಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಕನ್ನಡ ಸಾಹಿತ್ಯ ಪರಿಷತ್ತು ತನ್ನ ವ್ಯಾಪ್ತಿಯಲ್ಲಿ ಬಂದಿರುವ ವಿವಿಧ ಲೇಖಕರ ಬುಹುತೇಕ ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುತ್ತಾ ಬಂದಿದೆ. ಪರಿಷತ್ತಿನ 108ವರ್ಷಗಳ ಇತಿಹಾಸದಲ್ಲಿ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ  ಅಕ್ಷರಲೋಕಕ್ಕೆ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದೆ.  ಜೊತೆಗೆ ಹೊಸ ತಲೆಮಾರಿನ ಬರಹಗಾರರ ಪುಸ್ತಕಗಳನ್ನು ಸಹ ಪ್ರಕಟಿಸಿರುವ ಹೆಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಕನ್ನಡ ಸಾಹಿತ್ಯದ ಅಘಾದತೆ ಮತ್ತು ಮಹತ್ವವನ್ನು ಕಾಲ ಕಾಲಕ್ಕೆ ಜನರಿಗೆ ತಿಳಿಸುವ ಕೆಲಸವನ್ನು ಪರಿಷತ್ತು…

Read More

ಮಂಗಳೂರು : ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಆಯೋಜಿಸುವ 2023- 24ರ ಸಾಲಿನ ದತ್ತಿ ಪ್ರಶಸ್ತಿ ಮತ್ತು ಬಹುಮಾನಗಳಿಗೆ ಲೇಖಕಿಯರ ಕೃತಿಗಳನ್ನು ಆಹ್ವಾನಿಸಲಾಗಿದೆ. ಡಾ. ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ: ಸಂಘದ ಸದಸ್ಯೆಯಾಗಿದ್ದ ವೈಚಾರಿಕ ಮನೋಧರ್ಮದ ಸಂವೇದನಾಶೀಲ ಲೇಖಕಿ ನಾಡೋಜ ಡಾ. ಸಾರಾ ಅಬೂಬಕ್ಕರ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಕೊಡುವ ಸಾಹಿತ್ಯ ಪ್ರಶಸ್ತಿಗೆ ‘ಪ್ರವಾಸ ಕಥನ’ ಆರಿಸಲಾಗಿದೆ. 2021, 2022, 2023ನೇ ಸಾಲಿನಲ್ಲಿ ಪ್ರಕಟವಾದ ಲೇಖಕಿಯರ ಪ್ರವಾಸ ಕಥನದ ಮೂರು ಪ್ರತಿಗಳನ್ನು ದಿನಾಂಕ 15-11-2023ರೊಳಗೆ ತಲುಪುವಂತೆ ಸಂಘದ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಪುಸ್ತಕದ ಜತೆಗೆ ವೈಯಕ್ತಿಕ ಮಾಹಿತಿ ಹಾಗೂ ಸಂಪರ್ಕ ಸಂಖ್ಯೆಯಿರುವ ಪ್ರವೇಶ ಪತ್ರವನ್ನು ಲಗತ್ತಿಸಿರಬೇಕು. ಚಂದ್ರಭಾಗಿ ರೈ ದತ್ತಿ ಬಹುಮಾನ : ಕರಾವಳಿಯ ಮೊದಲ ತಲೆಮಾರಿನ ಹಿರಿಯ ಲೇಖಕಿ, ಸಂಘದ ಸದಸ್ಯೆಯಾಗಿದ್ದ ಚಂದ್ರಭಾಗಿ ರೈ ಅವರ ಹೆಸರಿನಲ್ಲಿ ಕೊಡುವ ಬಹುಮಾನಕ್ಕೆ 50 ವರ್ಷದ ಒಳಗಿನ ಲೇಖಕಿಯರ ಕನಿಷ್ಠ 40 ಸ್ವರಚಿತ ಕವನಗಳಿರುವ ಅಪ್ರಕಟಿತ ಸಂಕಲನದ ಡಿಟಿಪಿ…

Read More

ಉಳ್ಳಾಲ : ಉಳ್ಳಾಲದ ಶ್ರೀ ಶಾರದಾ ನಿಕೇತನದಲ್ಲಿ 76ನೇ ಶಾರದೋತ್ಸವದ ಅಂಗವಾಗಿ ‘ಸಾರ್ವಜನಿಕ ರಸಪ್ರಶ್ನೆ’ ಸ್ಪರ್ಧೆಯನ್ನು ದಿನಾಂಕ 24-10-2023ರಂದು ಬೆಳಿಗ್ಗೆ 10-30ಕ್ಕೆ ಹಮ್ಮಿಕೊಳ್ಳಲಾಗಿದೆ. ಪ್ರೊ. ಗಿಲ್ ರಾಜ್ ಉಳ್ಳಾಲ್ ಆಸ್ಟ್ರೇಲಿಯ ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ ಜರುಗಲಿರುವ ಈ ಸ್ಪರ್ಧೆಯಲ್ಲಿ ಸಾರ್ವಜನಿಕರೆಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ. ತಲಾ ಇಬ್ಬರ ತಂಡಗಳಿಗೆ ಆರಂಭಿಕ ಸುತ್ತಿನಲ್ಲಿ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ. ಸರಿ ಉತ್ತರ ನೀಡಿರುವ ಆಧಾರದಲ್ಲಿ ಆರು ತಂಡಗಳನ್ನು ಆಯ್ಕೆ ಮಾಡಿ, ಮುಂದಿನ ಸುತ್ತನ್ನು ವೇದಿಕೆಯಲ್ಲಿ ನಡೆಸಲಾಗುವುದು. ವಿಜೇತ ತಂಡಗಳಿಗೆ ಪ್ರಥಮ ರೂ.11,111/- , ದ್ವಿತೀಯ ರೂ.5,555/- ಹಾಗೂ ತೃತೀಯ ರೂ.2,222/- ನಗದು ಬಹುಮಾನ ಲಭಿಸುವುದು. ಸ್ಪರ್ಧಾ ತಂಡಗಳಿಗೆ ಉತ್ತರ ಗೊತ್ತಿಲ್ಲವಾದಲ್ಲಿ ಅದೇ ಪ್ರಶ್ನೆಯನ್ನು ಸಭಿಕರಿಗೆ ಕೇಳಲಾಗುವುದಲ್ಲದೆ, ಸರಿಯುತ್ತರ ನೀಡಿದವರಿಗೆ ಸ್ಥಳದಲ್ಲೇ ಬಹುಮಾನವನ್ನು ನೀಡಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಂಕಟಗಿರಿ ಬೇಕಲ್ ( 9845083765 ) ಅಥವಾ ದಿನೇಶ್ ಉಳ್ಳಾಲ್ ( 9341109898 ) ಇವರನ್ನು ಸಂಪರ್ಕಿಸಬಹುದು.

Read More

ಕಾಸರಗೋಡು : ಯಕ್ಷಗಾನ ಕಲಾವಿದರಿಗೆ ಸಮಗ್ರ ಮಾಹಿತಿ ಇರುವ ತೆಂಕುತಿಟ್ಟು ಯಕ್ಷಮಾರ್ಗ ಸರಣಿಯ ಮೊದಲ ಪ್ರಾತ್ಯಕ್ಷಿಕೆಯನ್ನು ಹಿರಿಯ ಯಕ್ಷಗಾನ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ದಿನಾಂಕ 28-09-2023ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಸಿಕೊಟ್ಟರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಕಲಾಪೋಷಕ ಶ್ರೀಕರ ಭಟ್ ಮುಂಡಾಜೆ, “ಈಗಿನ ಯಕ್ಷಗಾನ ಹಾದಿ ತಪ್ಪುತ್ತಿದೆ. ಯಕ್ಷಗಾನ ಪ್ರದರ್ಶನಕ್ಕೂ ನಿಯಂತ್ರಕ ಶಕ್ತಿ ಬೇಕು. ಭಾಗವತರು ನಿರ್ದೇಶಕರು, ಆದರೆ ಅವರಿಗೆ ಹೇಳಲು ದಾಕ್ಷಿಣ್ಯ. ಈ ಕಾರಣದಿಂದಾಗಿ ಯಕ್ಷಗಾನದ ಸತ್ವ ಕ್ಷೀಣಿಸುತ್ತಿದೆ. ಜೊತೆಗೆ, ಯಕ್ಷಗಾನ ಆಡಿಸುವವರು ಕೂಡ ‘ಬಹುಜನರ ಅಪೇಕ್ಷೆ ಮೇರೆಗೆ’ ಎಂದು ಪ್ರೇಕ್ಷಕರ ಮೇಲೆಯೇ ಎಲ್ಲವನ್ನೂ ಹಾಕಿ ನುಣುಚಿಕೊಳ್ಳುತ್ತಾರೆ” ಎಂದು ವಿಷಾದಿಸಿದರು. ‘ಅಕಾಡೆಮಿಯೊಂದು ಮಾಡಬೇಕಿರುವ ಕಾರ್ಯಕ್ರಮವನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮಾಡುತ್ತಿದ್ದಾರೆ. ಈಗ ಸಮಯವಿದ್ದರೂ ವ್ಯವಧಾನವಿಲ್ಲದ ಈ ಕಾಲದಲ್ಲಿ, ಸಿರಿಬಾಗಿಲು ಪ್ರತಿಷ್ಠಾನವು ಮಾಡುತ್ತಿರುವ ದಾಖಲೀಕರಣಗಳು ಕಲಾವಿದರಿಗೆ ಸದಾ ಕಾಲಕ್ಕೂ ಪ್ರಯೋಜನಕರ’ ಎಂದರು.…

Read More

ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತಿಗಳ ಮನೆ ಭೇಟಿ ಕಾರ್ಯಕ್ರಮದ ಅಂಗವಾಗಿ ದಿನಾಂಕ 02-10-2023ರಂದು ಹಿರಿಯ ಸಾಹಿತಿ, ಸಂಶೋಧಕ ಡಾ.ಅಮೃತ ಸೋಮೇಶ್ವರ ಅವರನ್ನು ಸೋಮೇಶ್ವರದ ಅವರ ಮನೆ ‘ಒಲುಮೆ’ಯಲ್ಲಿ ಭೇಟಿಯಾಗಿ ಗೌರವಿಸಲಾಯಿತು. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಅಮೃತರ ಪರವಾಗಿ ಪತ್ನಿ ಶ್ರೀಮತಿ ನರ್ಮದಾ ಸೋಮೇಶ್ವರ ಇವರನ್ನು ಗೌರವಿಸಿ ಅಮೃತರ ವ್ಯಕ್ತಿತ್ವದ ಮಾನವೀಯತೆಯನ್ನು ಕುರಿತು ಮಾತನಾಡಿದರು. ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ದ.ಕ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ., ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಸೋಮೇಶ್ವರ ಗ್ರಾಮ ಸಂಚಾಲಕ ಕಲಾವಿದ ತೋನ್ಸೆ ಪುಷ್ಕಳ ಕುಮಾರ್, ಅಮೃತರ ಮಗ ಸಾಹಿತಿ ಡಾ.ಚೇತನ ಸೋಮೇಶ್ವರ, ಜೀವನ್, ಸೊಸೆ ಸತ್ಯಜೀವನ್ ಮತ್ತಿತರರು ಉಪಸ್ಥಿತರಿದ್ದರು.

Read More

ಉಚ್ಚಿಲ : ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಾಸುದೇವ ರಾವ್ ಇವರ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ‘ರುಕ್ಮಿಣಿ ಕಲ್ಯಾಣ’ವು ದಿನಾಂಕ 30-09-2023ರಂದು ನಡೆಯಿತು. ಹಿಮ್ಮೇಳದಲ್ಲಿ ರಾಘಣ್ಣ ಉಚ್ಚಿಲ, ಸುರೇಶ ಭಟ್ ಸಾಂತೂರು ಭಾಗವತರಾಗಿ ಸತೀಶ ಆಚಾರ್ಯ ಕಾಪು, ಮನೀಷ್ ರಾವ್ ಪಡುಬಿದ್ರಿ ಮತ್ತು ಸುರೇಶ ಭಟ್ ಚಂಡೆ ಮದ್ದಳೆಯಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್ ಸುರತ್ಕಲ್ ಇದರ ಸದಸ್ಯೆರಾದ ಶ್ರೀಮತಿಯರಾದ ಸುಲೋಚನ ವಿ. ರಾವ್ (ರುಕ್ಮ), ಸುಮಿತ್ರ ಶಶಿಕಾಂತ ಕಲ್ಲೂರಾಯ (ಶ್ರೀಕೃಷ್ಣ), ಸುಮತಿ ಭಟ್ ಕೆ.ಯನ್. (ರುಕ್ಮಿಣಿ)ಯಾಗಿಯೂ, ವಿಶ್ವನಾಥ ಸಾಂತೂರು (ಭೀಷ್ಮಕ), ಅಶೋಕ ನಾಯಕ್ (ಬಲರಾಮ), ಜನಾರ್ದನ ಆಚಾರ್ಯ (ಅಗ್ನಿದ್ಯೋತ), ರಂಗನಾಥ ಭಟ್ ಕಳತ್ತೂರು (ಶಿಶುಪಾಲ) ಮತ್ತು ಮೋಹನ ಕಟಪಾಡಿ (ಚಾರಕ)ನಾಗಿ ಭಾಗವಹಿಸಿ ನಡೆಸಿಕೊಟ್ಟರು.

Read More

ಮೂಲ್ಕಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಸಾಹಿತ್ಯ ಬೆಳಕು ಕಾರ್ಯಕ್ರಮವು  ದಿನಾಂಕ 01-10-2023ರ ಭಾನುವಾರ ಸಂಜೆ ಬಪ್ಪನಾಡಿನ ಮಾತಾ ಪಂಚದುರ್ಗಾ ರೆಸಿಡೆನ್ಸಿಯ ಮಾಳಿಗೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು “ವಿಶಿಷ್ಟ ಕಲ್ಪನೆಯ ಇಂತಹ ಸಾಹಿತ್ಯ ಕಾರ್ಯಕ್ರಮಗಳು ಸಾಹಿತ್ಯಾಸಕ್ತರನ್ನು ಹೆಚ್ಚಿಸಲಿ ಹಾಗೂ ಮಕ್ಕಳಿಗೂ ಪ್ರೇರಣೆ ನೀಡಲಿ” ಎಂದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳೈರು ಮಾತನಾಡಿ “ಕಡಲ ಕತ್ತಲೆ, ಪಶ್ಚಿಮ ಘಟ್ಟದ ಕತ್ತಲೆಯ ನಡುವಿನ ಈ ಸ್ಥಳದಲ್ಲಿ ಬೆಳಕಿನ ಚಿಂತನೆ ವಿಶಿಷ್ಟವಾದುದು” ಎಂದರು. ಕಾರ್ಯಕ್ರಮದಲ್ಲಿ ಬೆಳಕಿನ ಬಗ್ಗೆ ಉಪನ್ಯಾಸ ನೀಡಿದ ಸಾಹಿತಿ ಕಲಾವಿದ ತಾರಾನಾಥ ವರ್ಕಾಡಿ “ಕತ್ತಲಿದ್ದಾಗ ಬೆಳಕಿನ ಅನುಭವ. ಬೆಳಕೆಂದರೆ ಜ್ಞಾನ, ಆಧ್ಯಾತ್ಮ, ಧನಾತ್ಮಕ ಚಿಂತನೆ, ವಿಜ್ಞಾನ, ಆಧ್ಯಾತ್ಮ ಹೀಗೆ ಎಲ್ಲವೂ ಬೆಳಕಿನ ಚಿಂತನೆಯಲ್ಲೇ ಇರುವಂತಹವು. ನಮ್ಮೊಳಗಿನ ಬೆಳಕು ಬೆಳಗುವ ನಿಟ್ಟಿನಲ್ಲಿ ನಮ್ಮ ಓದು, ಅಧ್ಯಯನ, ನಡುವಳಿಕೆ ಇತ್ಯಾದಿಗಳಿರಬೇಕು, ದಿವ್ಯ ಬೆಳಕೆಂದರೆ ಪರಬ್ರಹ್ಮ, ಅಪರಿಮಿತ ಆನಂದದ ಆ…

Read More

ಸಾಗರ ಗಾತ್ರದ ಪ್ರಾಚೀನ ಕಥಾಸಂಪತ್ತಿದ್ದೂ ಪಾಶ್ಚಾತ್ಯ ಸಣ್ಣಕತೆಗಳ ಪ್ರವಾಹದೆದುರು ನಾವು ಕಂಗಾಲಾದೆವು. ನಮ್ಮ ದೇಶದ ಸಾಹಿತ್ಯ ಹೊರಗಿನಿಂದ ಬಂದದ್ದೆಂದೂ ಅದು ನಡೆಯದ ನಾಣ್ಯವೆಂದೂ ಆಕ್ರಮಣಕಾರರು ಘೋಷಿಸಿದ್ದರು. ಅಷ್ಟೊಂದು ಮೋಡಿ ಮಾಡುವ ಶಕ್ತಿ ಪಾಶ್ಚಾತ್ಯ ಸಾಹಿತ್ಯಕ್ಕೆ ಸಿಕ್ಕಿದ್ದೂ ಸತ್ಯ. ಅದಕ್ಕೆ ಕಾರಣಗಳೂ ಇವೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ವಲಯಗಳಲ್ಲಿ ತಾವು ಆಕ್ರಮಿಸಿದ ದೇಶಗಳಲ್ಲಿ ಸುಧಾರಣೆಗಳನ್ನು ತರುವುದಕ್ಕೆ ಶ್ರಮಿಸಿದ ಬ್ರಿಟಿಷರು ನಮಗಿಂತ ಮೊದಲೇ ಯಂತ್ರಗಳ ಬಳಕೆಯನ್ನು ಆರಂಭಿಸಿದ್ದರು. ಮುದ್ರಣ ಯಂತ್ರಗಳ ಮೂಲಕ ಅವರು ಪತ್ರಿಕೆಗಳನ್ನು ಬಳಕೆಗೆ ತಂದರು. ಸಾರಿಗೆ ಸೌಕರ್ಯವನ್ನು ಅಭಿವೃದ್ಧಿಪಡಿಸಿಕೊಂಡು ನಮಗಿಂತ ಮೊದಲೇ ನಾಗರಿಕರೆನಿಸಿಕೊಂಡರು. ಬರೆದ ತಕ್ಷಣ ಸಾಹಿತ್ಯ ಕೃತಿಗಳನ್ನು ಓದುಗರಿಗೆ ತಲುಪಿಸುವುದಕ್ಕೆ ಸಾಧ್ಯವಾದಂದಿನಿಂದ ನಮ್ಮ ದೇಶದಲ್ಲೂ ಕಥಾ ರಚನೆಗೆ ವೇಗ ಸಿಕ್ಕಿತು. ಆಧುನಿಕ ಕಥಾ ಸಾಹಿತ್ಯಕ್ಕೂ ಚಾಲನೆ ದೊರಕಿತು. ಭಾರತೀಯ ಸಾಹಿತ್ಯಲೋಕದಲ್ಲಿ ಆಧುನಿಕ ಸಣ್ಣಕತೆ ದೇಶದಾದ್ಯಂತ ಚಿಗುರೊಡೆಯಿತು. ಸಾಹಿತ್ಯ ರಚನೆಗಳಲ್ಲಿ ರೈಲು, ಬಸ್ಸು, ಕಾರು, ಅಫೀಮು, ಕೋರ್ಟು ಕಛೇರಿ, ಬ್ಯಾಡ್ಮಿಂಟನ್, ಸೊಳ್ಳೆ ಬಲೆ, ಸಾಬೂನು, ಕ್ವಿನೀನು ಇದ್ದುವು. ಮುಕ್ತ ಪ್ರೇಮ ಕಾಮ…

Read More

ಬೆಂಗಳೂರು : ಬಂಡಾಯ ಸಾಹಿತ್ಯ ಸಂಘಟನೆ ಬೆಂಗಳೂರು ಜಿಲ್ಲಾ ಘಟಕ ಆಯೋಜಿಸುವ ತಿಂಗಳ ಕಾರ್ಯಕ್ರಮ ದಿನಾಂಕ 06-10-2023 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಇರುವ ಸಚಿವಾಲಯ ಕ್ಲಬ್ಬಿನ ಸಿ.ಎಂ.ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗಾಂಧೀಜಿ – ಸಮಕಾಲೀನ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಡಾ.ಅಶ್ವತ್ಥ ನಾರಾಯಣ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಭಾರತದ ಅಧ್ಯಕ್ಷರಾದ ಶ್ರೀ ಕಿಗ್ಗ ರಾಜಶೇಖರ್ ಎಸ್.ಜಿ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಲಕರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸರ್ವರ ಸ್ವಾಗತ ಕೋರಿದ್ದಾರೆ.

Read More