Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (INTAC) ಇದರ ವತಿಯಿಂದ ಕಾರ್ಯಕ್ರಮವನ್ನು ದಿನಾಂಕ 19 ನವೆಂಬರ್ 2024ರಿಂದ 25 ನವೆಂಬರ್ 2024 ರವರೆಗೆ ಪ್ರತಿ ದಿನ ಸಂಜೆ 5-30 ಗಂಟೆಗೆ ಮಂಗಳೂರಿನ ಬಲ್ಲಾಳ್ ಭಾಗ್, ಜಿ. ಜಿ. ರೋಡ್, ಕೊಡಿಯಾಲ್ ಗುತ್ತು (ಪಶ್ಚಿಮ), ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 19 ನವೆಂಬರ್ 2024ರಂದು ಹರಿದಾಸ ಶೇಣಿ ಮುರಳಿ ಇವರಿಂದ ‘ವಾಲಿ ಸುಗ್ರೀವರ ಕಾಳಗ’ ಹರಿಕಥೆ ನಡೆಯಲಿದ್ದು, ಇವರಿಗೆ ಶ್ರೀಪತಿ ಭಟ್ ಬೆಳ್ಳೇರಿ ಹಾರ್ಮೋನಿಯಂನಲ್ಲಿ ಮತ್ತು ಕೌಶಿಕ್ ಮಂಜನಾಡಿ ತಬಲಾದಲ್ಲಿ ಸಹಕರಿಸಲಿದ್ದಾರೆ. ದಿನಾಂಕ 20 ನವೆಂಬರ್ 2024ರಂದು “ಮೌಖಿಕ ಮಹಾಕಾವ್ಯಗಳ ತಯಾರಿಕೆಯಲ್ಲಿ ಸ್ಥಳೀಯ ಜ್ಞಾನದ ಪಾತ್ರ” ಎಂಬ ವಿಷಯದಲ್ಲಿ ಡಾ. ಕೆ. ಚಿನ್ನಪ್ಪ ಗೌಡ ಉಪನ್ಯಾಸ ನೀಡಲಿದ್ದಾರೆ. ದಿನಾಂಕ 21 ನವೆಂಬರ್ 2024ರಂದು ಯು. ಶ್ರೀನಿವಾಸ್ ಮಲ್ಯ ಇವರ “ಮಲ್ಯ ನಿವಾಸದ ಪ್ರದರ್ಶನದೊಂದಿಗೆ ಯು. ಶ್ರೀನಿವಾಸ್ ಮಲ್ಯ ಇವರ ಜನ್ಮ ವಾರ್ಷಿಕೋತ್ಸವದ…
ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯುತ್ತಿರುವ 12ನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ಅಂಗವಾಗಿ ದಿನಾಂಕ 12 ನವೆಂಬರ್ 2024ರಂದು ದಿ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣಾ ಸಮಾರಂಭ ಜರಗಿತು. ಈ ಸಮಾರಂಭದಲ್ಲಿ ‘ಬಾಳಪ್ಪ ಶೆಟ್ಟಿ ಪ್ರಶಸ್ತಿ’ ಸ್ವೀಕರಿಸಿದ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಇವರು ಮಾತನಾಡಿ “ಯಕ್ಷಗಾನ ಕ್ಷೇತ್ರದ ಸುಧೀರ್ಘವಾದ ತನ್ನ ಯಾತ್ರೆಯಲ್ಲಿ ಸಾವಿರಾರು ಮಾನ – ಸಮ್ಮಾನಗಳು ಲಭಿಸಿವೆ; ಇದು 1023ನೇ ಸನ್ಮಾನ. ದೇಹದ ಕಸುವು ಕಡಿಮೆಯಾದರೂ ರಂಗಸ್ಥಳದಲ್ಲಿ ಅದು ಅರಿವಿಗೆ ಬರುವುದಿಲ್ಲ; ಕಾರಣ ರಂಗದ ಒಳಗೂ ಹೊರಗೂ ನಮಗೆ ಅಭಿಮಾನಿಗಳ ರಕ್ಷೆ ಇದೆ. ಕುಂಡಾವು ಮೇಳದಲ್ಲಿ ಬಾಳಪ್ಪ ಶೆಟ್ಟರು ಜೊತೆಗಿದ್ದಾಗ ಅವರ ಪ್ರಬುದ್ಧ ಹಾಸ್ಯವನ್ನು ಹತ್ತಿರದಿಂದ…
ಮಂಗಳೂರು : ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ಹಾಗೂ ನರ್ಸಿಂಗ್ ವಿಭಾಗದ ವತಿಯಿಂದ ದಿನಾಂಕ 14 ನವೆಂಬರ್ 2024ರಂದು ಮಕ್ಕಳ ದಿನಾಚರಣೆಯನ್ನು ಆಸ್ಪತ್ರೆಯ ಸಭಾಂಗಣದಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಶೆಟ್ಟಿಯವರ ಮೂಲಕ ಹಾಗೂ ನರ್ಸಿಂಗ್ ವಿಭಾಗ ಮುಖ್ಯಸ್ಥರ ಸಮ್ಮುಖದಲ್ಲಿ ಜಾದೂವಿನ ಮುಖಾಂತರವೇ ಉದ್ಘಾಟನೆ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಣ್ಣ ಮಕ್ಕಳ ಮನಸೆಳೆಯಲು ಕಲಾಸೃಷ್ಟಿ ಬಳಗದ ಇನೊಳಿಯ ಬ್ಯಾರೀಸ್ ತಾಂತ್ರಿಕ ಸಂಸ್ಥೆಯ ಪ್ರೊಫೆಸರ್ ಹಾಗೂ ಜಾದೂ ಪ್ರಶಸ್ತಿ ವಿಜೇತೆ ಮುಬೀನಾ ಪರವೀನ್ ತಾಜ್ ಮತ್ತು ಕಲಾಸೃಷ್ಟಿ ಬಳಗದ ನಿರ್ದೇಶಕಿ ಅಂತಾರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಸಾಧಾರಣ ಪ್ರತಿಭೆ ಪ್ರಶಸ್ತಿ ವಿಜೇತೆ ಶಮಾ ಪರವೀನ್ ಮತ್ತಿತರ ಕಲಾವಿದರು ಅನೇಕ ವಿಸ್ಮಯಕಾರೀ ಜಾದೂ ಪ್ರದರ್ಶನ ನೀಡಿದರು. ಬಳಿಕ ಮುಬೀನಾರವರು ಚಿಕ್ಕ ಮಕ್ಕಳನ್ನೇ ವೇದಿಕೆಗೆ ಕರೆದು ಕೈ ಚಳಕ ತೋರಿಸಿದರು. ಈ ಪ್ರದರ್ಶನದ ಇನ್ನಿತರ ಮುಖ್ಯ ಕಲಾವಿದರಾಗಿ…
ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೊಂದಣಿಯನ್ನು ಈ ಬಾರಿ ವಿನೂತನವಾಗಿ ಆನ್ ಲೈನ್ ಮೂಲಕ ಮಾಡಲಾಗುತ್ತಿದ್ದು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಇವರು ದಿನಾಂಕ 16 ನವೆಂಬರ್ 2024ರಂದು ಕೆ.ಆರ್.ಎಸ್.ನ ರಾಯಲ್ ಆರ್ಕಿಡ್ ನಲ್ಲಿ ಚಾಲನೆ ನೀಡಿದರು. ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ನೊಂದಣಿಯಾಗಿ ಭಾಗವಹಿಸಲು ರೂ.600/- ನಿಗದಿಯಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ ಸೈಟ್ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರುವವರು ನೊಂದಣಿ ಮಾಡಿಕೊಳ್ಳಲು ಇಂದಿನಿಂದ 20 ದಿನಗಳ ಕಾಲ ಅವಕಾಶ ನೀಡಲಾಗಿದೆ. ಆನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಿದ ನಂತರ ಹಣ ಪಾವತಿ ಕೂಡ ಆನ್‌ಲೈನ್ ಮೂಲಕ ಮಾಡಬೇಕಿರುತ್ತದೆ. ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ ನೊಂದಣಿಯಾಗುವವರಿಗೆ ಆನ್ ಲೈನ್ ಮೂಲಕ ವಸತಿ ಒದಗಿಸುವ ಸ್ಥಳ, ವಿಳಾಸ, ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಾಗೂ ಆನ್ ಲೈನ್ ನಲ್ಲೇ ಫೋಟೋ ಸಹಿತ ಗುರುತಿನ…
ಉಡುಪಿ : ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭವು ಸಂಸ್ಥೆಯ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ ದಿನಾಂಕ 17 ನವೆಂಬರ್ 2024ರಂದು ಅತ್ಯಂತ ಯಶಸ್ವಿಯಾಗಿ ಜರಗಿತು. ಯಕ್ಷಗಾನ ಲೋಕ ಶಿಕ್ಷಣವನ್ನು ಕೊಡುವ ಶ್ರೇಷ್ಠವಾದ ಕಲಾಪ್ರಕಾರವೆಂದು ಪ್ರಶಸ್ತಿ ಪ್ರದಾನ ಮಾಡಿದ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಕುಮಾರ್ ಇವರು ಆರ್.ಎಲ್. ಭಟ್- ವಾರಿಜಾಕ್ಷಿ ಆರ್. ಭಟ್ ಗೌರವಾರ್ಥ ಅವರ ಸುಪುತ್ರ ಹರಿಪ್ರಸಾದ್ ಭಟ್ ಪ್ರಾಯೋಜಿಸಿದ ಬಣ್ಣದ ಕೋಣೆಯನ್ನು ಉದ್ಘಾಟಿಸಿದರು. ಹಾಗೆಯೇ ಸಿ.ಸಿ.ಟಿ.ವಿ.ಯ ಉದ್ಘಾಟನೆಯನ್ನು ದಾನಿ ಎಂ.ಸಿ. ಕಲ್ಕೂರ ಇವರು ನೆರವೇರಿಸಿದರು. ಹರೀಶ್ ರಾಯಸ್ ಇವರು ತಮ್ಮ ತೀರ್ಥ ರೂಪರ ಹೆಸರಿನಲ್ಲಿ ಸ್ಥಾಪಿಸಿದ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯ ನಿಧಿಯನ್ನು ಹಸ್ತಾಂತರಿಸಿದರು. ಶಾಸಕ ಯಶ್ಪಾಸಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ದಾನಿ ಕೆ.…
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ವಿಂಶತಿ ಸಂಭ್ರಮ ಅಂಗವಾಗಿ 13ನೇ ಸರಣಿ ತಾಳಮದ್ದಳೆ ಪಾರ್ತಿಸುಬ್ಬ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಎಂಬ ಆಖ್ಯಾನದೊಂದಿಗೆ ದಿನಾಂಕ 16 ನವೆಂಬರ್ 2024ರಂದು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ ಬೊಳುವಾರು ಇಲ್ಲಿ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಅಚ್ಯುತ ಪಾಂಗಣ್ಣಾಯ ಮತ್ತು ಮಾಸ್ಟರ್ ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್ (ದಶರಥ), ಕಿಶೋರಿ ದುಗ್ಗಪ್ಪ ನಡುಗಲ್ಲು (ಕೈಕೇಯಿ), ಶಾರದಾ ಅರಸ್ (ಶ್ರೀರಾಮ), ಪ್ರೇಮಲತಾ ರಾವ್ (ಲಕ್ಷ್ಮಣ), ಮನೋರಮಾ ಜಿ .ಭಟ್ (ಮಂಥರೆ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಶುಭಾ ಗಣೇಶ್ ಪ್ರಾಯೋಜಿಸಿದ್ದರು.
ಚಿಕ್ಕಮಗಳೂರು : ರಂಗಮಂಡಲ ಬೆಂಗಳೂರು ಮತ್ತು ಅವನಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ‘ಕಾವ್ಯ ಸಂಸ್ಕೃತಿ ಯಾನ’ ಜನರೆಡೆಗೆ ಕಾವ್ಯ ಕಾರ್ಯಕ್ರಮದ ಐದನೇ ಕವಿಗೋಷ್ಠಿಯನ್ನು ದಿನಾಂಕ 18 ನವೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಕಾಫಿನಾಡು ಚಿಕ್ಕಮಗಳೂರಿನ ಕ.ಸಾ.ಪ. ಆವರಣ, ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿರಿಯ ಕವಿಯತ್ರಿ ಮತ್ತು ಕಥೆಗಾರ್ತಿ ಸವಿತಾ ನಾಗಭೂಷಣ ಇವರು ಚಿಕ್ಕಮಗಳೂರು ಕಾವ್ಯ ಸಂಸ್ಕೃತಿ ಯಾನದ ಸರ್ವಾಧ್ಯಕ್ಷರಾಗಿದ್ದು, ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಬೆಳಿಗ್ಗೆ 11-30 ಗಂಟೆಗೆ ಕವಿಗೋಷ್ಠಿ 1 ಕೊಪ್ಪದ ಸಾಹಿತಿ ಎಸ್.ಎನ್. ಚಂದ್ರಕಲಾ ಹಾಗೂ ಮಧ್ಯಾಹ್ನ 1-30 ಗಂಟೆಗೆ ಕವಿಗೋಷ್ಠಿ 2 ಅಂಕಣಕಾರರು ಮತ್ತು ವಿದ್ವಾಂಸರಾದ ಡಾ. ಎಚ್.ಎಸ್. ಸತ್ಯನಾರಾಯಣ ಇವರುಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಜೆ 4-00 ಗಂಟೆಗೆ ಸರ್ವಾಧ್ಯಕ್ಷರೊಂದಿಗೆ ಸಂವಾದ, ಭಕ್ತನಕಟ್ಟೆ ಲೋಕೇಶ್, ರಮೇಶ್ ಕರಡೀಪುರ, ರಂಗಪಯಣ ಕಲಾತಂಡ (ರಿ.) ಹಿರೇನಲ್ಲೂರು ಶ್ರೀನಿವಾಸ್ ಮತ್ತು ತಂಡದ ಹಾಡುಗಾರರಿಂದ ‘ಪದ-ಪಾದ’ ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.
ಪುತ್ತೂರು : ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾ ಸೇವಾ ಸಂಘದ 56ನೇ ವಾರ್ಷಿಕೋತ್ಸವ ಮತ್ತು ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ವರ್ಷಾಚರಣೆಯನ್ನು ವಿಶಿಷ್ಟವಾಗಿ ದಿನಾಂಕ 25 ಡಿಸೆಂಬರ್ 2024ರಂದು ಅರ್ಥಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದ್ದು, ಇದರ ಪೂರ್ವ ಸಿದ್ಧತಾ ಸಭೆಯು ಪರ್ಲಡ್ಕ ಅಗಸ್ತ್ಯ ನಿವಾಸದಲ್ಲಿ ದಿನಾಂಕ 14 ನವೆಂಬರ್ 2024ರಂದು ಜರಗಿತು. ಯಕ್ಷಗಾನ ಸಂಘದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಅಧ್ಯಕ್ಷತೆ ವಹಿಸಿದ್ದರು. ತಾಳಮದ್ದಳೆಯಾಗಿ ಉಭಯಸಂಘದ ಸದಸ್ಯರಿಂದ ಋಷಿ ಪತ್ನಿಯರ ಸಂವಾದ ಸರಣಿ, ಹಿರಿಯ ಕಲಾವಿದರ ತಾಳಮದ್ದಳೆ, ಸಭಾ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಸಾಧಕರಿಗೆ ‘ಯಕ್ಷಾಆಂಜನೇಯ ಪ್ರಶಸ್ತಿ’, ಮಹಿಳಾ ಭಾಗವತರಿಗೆ’ ವಿಂಶತಿ ಪ್ರಶಸ್ತಿ’ ಮತ್ತು ವಿಶೇಷ ಸಾಧಕ ಕಲಾವಿದರೊಬ್ಬರಿಗೆ ಬೆಂಗಳೂರಿನ ‘ಜಸ್ಟಿಸ್ ಜಗನ್ನಾಥ ಶೆಟ್ಟಿ ಮೆಮೊರಿಯಲ್ ಪ್ರಶಸ್ತಿ’ ಪ್ರದಾನ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯದರ್ಶಿ ಆನಂದ ಸವಣೂರು, ಸಹಕಾರ್ಯದರ್ಶಿ ಅಚ್ಯುತ್ತ ಪಾಂಗಣ್ಣಾಯ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ದುಗ್ಗಪ್ಪ ಎನ್., ಬಟ್ಯಮೂಲೆ…
ಶಂಭೂರು : ಮಕ್ಕಳ ಕಲಾ ಲೋಕ, ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇವರ ನೇತೃತ್ವದಲ್ಲಿ ಹಾಗೂ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇದರ ಆಶ್ರಯದಲ್ಲಿ 18ನೇ ವರ್ಷದ ಬಂಟ್ವಾಳ ತಾಲೂಕು ‘ಮಕ್ಕಳ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 19 ನವೆಂಬರ್ 2024ರಂದು ಪೂರ್ವಾಹ್ನ 9-00 ಗಂಟೆಗೆ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9-05 ಗಂಟೆಗೆ ಶೇಡಿಗುರಿಯಿಂದ ಹೊರಡುವ ಮೆರವಣಿಗೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಚಾಲನೆ ನೀಡುವರು. ಇಲ್ಲಿನ ಏಳನೇ ತರಗತಿ ವಿದ್ಯಾರ್ಥಿನಿ ಪ್ರೇಕ್ಷಾ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, 17ನೇ ಸಮ್ಮೇಳನಾಧ್ಯಕ್ಷೆ ಕಡೇಶಿವಾಲಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸಾನ್ವಿ ಸುವರ್ಣ ಸಮ್ಮೇಳನ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಕನ್ನಡ ಧ್ವಜಾರೋಹಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನಡೆಯಲಿದೆ. ಬೆಳಗ್ಗೆ 9-50 ಗಂಟೆಗೆ ಸ್ವರಚನೆ ವಿಷಯ ಪ್ರಕಟಣೆ. ಉದ್ಘಟನಾ ಸಮಾರಂಭದಲ್ಲಿ ಮಕ್ಕಳ ಸ್ವರಚಿತ ಕೃತಿಗಳನ್ನು ಸಾಹಿತಿ ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಇವರು ಬಿಡುಗಡೆಗೊಳಿಸುವರು. ಸಭಾ…
ಧಾರವಾಡ : ಪಂ. ನಾರಾಯಣರಾವ ಮುಜುಂದಾರ ಸ್ಮೃತಿ ಸಂಗೀತ ಸಭಾ ಧಾರವಾಡ ಸಂಸ್ಥೆಯು ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಧಾರವಾಡ ಇವರ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಪಂ. ನಾರಾಯಣರಾವ ಮುಜುಂದಾರ ಅವರ 25ನೆಯ ಮತ್ತು ಅವರ ಮಗ ಪಂ. ಸುಧೀಂದ್ರ ಮುಜುಂದಾರ ಅವರ 18ನೆಯ ಪುಣ್ಯಸ್ಮರಣೆಯೊಂದಿಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು 17 ನವೆಂಬರ್ 2024ರಂದು ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಇರುವ ಕನ್ನಡ ಸಾಹಿತ್ಯ ಸಭಾ ಭವನದಲ್ಲಿ ನಡೆಯಲಿದೆ. ಪಂ. ನಾರಾಯಣ ರಾವ ಮುಜುಂದಾರ ಪಂ.ಗುರುರಾವ ದೇಶಪಾಂಡೆ ಯವರ ಶಿಷ್ಯ. ಶುದ್ಧ ಶಾಸ್ತ್ರೀಯ ಸಂಗೀತವನ್ನು ಕಲಿತು, ಅದನ್ನೇ ತಮ್ಮ ಶಿಷ್ಯಂದಿರಿಗೆ ಹೇಳಿಕೊಟ್ಟ ಧೀಮಂತ. ಅವರ ಮಗ ಪಂ. ಸುಧೀಂದ್ರ ಮುಜುಂದಾರ ಇವರು ಒಬ್ಬ ಅತ್ಯುತ್ತಮ ತಬಲಾಪಟು ಆಗಿದ್ದು, ಪಂ.ಗಿರೀಶ ಆವಟೆ ಮತ್ತು ಪಂ.ಬಸವರಾಜ ಬೆಂಡಿಗೇರಿ ಅವರಲ್ಲಿ ತಬಲಾ ಕಲಿತು ಅನೇಕ ಕಲಾವಿದರಿಗೆ ಸಾಥ್ ಸಂಗತ್ ಮಾಡಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ…