Author: roovari

ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024’ ಕಾರ್ಯಕ್ರಮವು ದಿನಾಂಕ 14 ನವೆಂಬರ್ 2024ರ ಗುರುವಾರ ಉಡುಪಿಯ ಕಿದಿಯೂರು ಹೋಟೆಲಿನ ಶೇಷಶಯನ ಬಾಲ್ಕನಿ ಸಭಾಂಗಣದಲ್ಲಿ ನಡೆಯಿತು.. ರಾಜ್ಯದ ಮೂವರು ಹಿರಿಯ ಸಾಹಿತಿಗಳಾದ ಶಿವಮೊಗ್ಗದ ಅಂಬ್ರಯ್ಯ ಮಠ (ಇತಿಹಾಸ ಸಂಶೋಧನೆ), ಚಿಕ್ಕಮಂಗಳೂರಿನ ಡಾ. ಎಚ್.ಎಸ್. ಸತ್ಯನಾರಾಯಣ (ವಿಮರ್ಶೆ), ಕುಂದಾಪುರದ ಡಾ. ಉಮೇಶ್ ಪುತ್ರನ್ (ವೈದ್ಯ ಸಾಹಿತ್ಯ) ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024’ ನ್ನು ಜಾನಪದ ವಿದ್ವಾಂಸ ಡಾ. ಗಣನಾಥ್ ಎಕ್ಕಾರ್ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಗಣಕ ಪಿತಾಮಹ ನಾಡೋಜ ಡಾ. ಕೆ.ಪಿ. ರಾವ್ ವಹಿಸಿ ಮಾತನಾಡುತ್ತಾ “ಎಲ್ಲ ಪ್ರಶಸ್ತಿ ಪುರಸ್ಕೃತರು ಅಭಿನಂದನಾರ್ಹರು. ಸಾಹಿತ್ಯ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಕಾಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳು ತರಲಿದ್ದು, ಇದರ ಕುರಿತು ನಾವು ಎಚ್ಚರದಿಂದ ಇರಬೇಕು…

Read More

ಬಂಟ್ವಾಳ : ಮಡಂತ್ಯಾರ್, ಬಸವನಗುಡಿ ಇಲ್ಲಿರುವ ವಿಶ್ವಕರ್ಮ ಸಭಾಭವನದಲ್ಲಿ ದಿನಾಂಕ 19 ನವೆಂಬರ್ 2024ರಂದು ಚಿತ್ರಕಲಾ ತರಗತಿ ಶುಭಾರಂಭಗೊಳ್ಳಲಿದೆ. ತರಗತಿಯು ಪ್ರತಿ ಮಂಗಳವಾರ ಸಂಜೆ 5-00ರಿಂದ 6-00 ಗಂಟೆ ತನಕ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9611004700 ಮತ್ತು 9008819157 ಚಿತ್ರಕಲಾ ಶಿಕ್ಷಕರಾದ ಹರೀಶ್ ಯಂ. ಆಚಾರ್ಯ ಇವರನ್ನು ಸಂಪರ್ಕಿಸಿರಿ.

Read More

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಕೃಪಾಶ್ರಯದಲ್ಲಿ ಯಕ್ಷರಂಗ ಪುತ್ತೂರು ದ.ಕ. ಇದರ ವತಿಯಿಂದ ಬಡಗುತಿಟ್ಟಿನ ಯಕ್ಷಗಾನ ಬಯಲಾಟವನ್ನು ದಿನಾಂಕ 16 ನವೆಂಬರ್ 2024ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ‘ಸುಧನ್ವಾರ್ಜುನ – ಗದಾಯುದ್ ಪೌರಾಣಿಕ ಕಥಾನಕಗಳ ಪ್ರಸಂಗದ ಯಕ್ಷಗಾನ ಬಯಲಾಟದಲ್ಲಿ ಹಿಮ್ಮೇಳದಲ್ಲಿ ಶ್ರೀ ರಾಮಕೃಷ್ಣ ಹಿಲ್ಲೂರು ಮತ್ತು ಶ್ರೀ ಸರ್ವೇಶ್ವರ ಹೆಗಡೆ ಭಾಗವತರಾಗಿ, ಶ್ರೀ ರಾಘವೇಂದ್ರ ಯಲ್ಲಾಪುರ ಮತ್ತು ಶ್ರೀ ಪ್ರಜ್ವಲ ಮುಂಡಾಡಿ ಮೃದಂಗ ಮತ್ತು ಚೆಂಡೆಯಲ್ಲಿ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ಶ್ರೀ ಉದಯ ಹೆಗಡೆ ಕಡಬಾಳ – ಸುಧನ್ವ, ಶ್ರೀ ವಿದ್ಯಾಧರ ಜಲವಳ್ಳಿ – ಕೌರವ, ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ – ಅರ್ಜುನ, ಶ್ರೀ ಆನಂದ ಕೆಕ್ಕಾರು – ಸಂಜಯ, ಶ್ರೀ ಕೆ.ಜಿ. ಕಾರ್ತಿಕ – ಪ್ರದ್ಯುಮ್ನ, ಶ್ರೀ ಮೂರೂರು ನಾಗೇಂದ್ರ – ಧರ್ಮರಾಯ, ಶ್ರೀ ಶಂಕರ ಹೆಗಡೆ ನೀಲ್ಕೋಡು – ಪ್ರಭಾವತಿ, ಶ್ರೀ ಶಂಕರ…

Read More

ಉಡುಪಿ : ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 17 ನವೆಂಬರ್ 2024ರಂದು ಅಪರಾಹ್ನ 2-00 ಗಂಟೆಗೆ ಉಡುಪಿಯ ಕಲಾರಂಗ ಐ.ವೈ.ಸಿ. ಸಭಾಭವನದಲ್ಲಿ ಆಯೋಜಿಸಲಾಗಿದೆ. ಅಪರಾಹ್ನ 1-45 ಗಂಟೆಗೆ ‘ನವರಸಾಯನ : ಯಕ್ಷಗಾಯನ’ ದೇವಿ ಪ್ರಸಾದ್ ಆಳ್ವ ತಾಳಪಡಿ ಮತ್ತು ಶಾಲಿನಿ ಹೆಬ್ಬಾರ್ ಇವರಿಗೆ ಮದ್ದಳೆಯಲ್ಲಿ ಚೈತನ್ಯ ಕೃಷ್ಣ ಪದ್ಯಾಣ ಚೆಂಡೆಯಲ್ಲಿ ಸೂರಜ್ ಪುನರೂರು ಸಹಕರಿಸಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಪೇಜಾವರ ಮಠಾಧೀಶರಾದ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಇವರು ಆರ್.ಎಲ್. ಭಟ್ – ವಾರಿಜಾಕ್ಷಿ ಆರ್. ಭಟ್ ಗೌರವಾರ್ಥ ಪ್ರಸಾಧನ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ. ‘ಯಕ್ಷಚೇತನ ಪ್ರಶಸ್ತಿ’, ಶ್ರೀವಿಶ್ವೇಶ ತೀರ್ಥ ಪ್ರಶಸ್ತಿ’ ಮತ್ತು ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಬಡಗುತಿಟ್ಟಿನ ಕಲಾವಿದರಿಂದ ‘ಬಭ್ರುವಾಹನ…

Read More

ಉಡುಪಿ : ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂ.ಜಿ.ಎಂ ಕಾಲೇಜು ಉಡುಪಿ ಹಾಗೂ ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುವ 46ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಕಾರ್ಯಕ್ರಮವು ದಿನಾಂಕ 06, 07 ಮತ್ತು 08 ಡಿಸೆಂಬರ್ 2024ರಂದು ಉಡುಪಿಯ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗಾಗಿ  ವಾದಿರಾಜ-ಕನಕ ಗಾಯನ ಸ್ಪರ್ಧೆಯನ್ನು ದಿನಾಂಕ 07 ಡಿಸೆಂಬರ್ 2024ರಂದು ಮಧ್ಯಾಹ್ನ ಘಂಟೆ 2.00ರಿಂದ ಎಂ. ಜಿ. ಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿಯಲ್ಲಿ ಆಯೋಜಿಸಲಾಗಿದೆ, ಸ್ಪರ್ಧಾಳುಗಳು ವಾದಿರಾಜರ ಮತ್ತು ಕನಕದಾಸರ ಎರಡೆರಡು ಕೀರ್ತನೆಗಳನ್ನು ಅಭ್ಯಸಿಸಿ, ತೀರ್ಪುಗಾರರು ಕೇಳುವ ನಾಲ್ಕು ಕೀರ್ತನೆಗಳಲ್ಲಿ ಯಾವುದಾದರು ಒಂದು ಕೀರ್ತನೆಯನ್ನು ಹಾಡಲು ಶಕ್ತರಿರಬೇಕು. ಭಾಗವಹಿಸಲು ಇಚ್ಛಿಸುವವರು ಕಡ್ಡಾಯವಾಗಿ ತಮ್ಮ ಹೆಸರು, ವಿಳಾಸವನ್ನು 01 ಡಿಸೆಂಬರ್…

Read More

ಕಾಸರಗೋಡು :  ಬರಹಗಾರ್ತಿ ಪ್ರಸನ್ನಾ ವಿ. ಚೆಕ್ಕೆಮನೆ ಇವರ ಎರಡು ಹೊಸ ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 11 ನವೆಂಬರ್ 2024ರ ಸೋಮವಾರ ಸಂಜೆ ಎದುರ್ತೋಡಿನ ‘ಸೀ ಕ್ಯೂಬ್’ ಇಲ್ಲಿ  ನಡೆಯಿತು. ಪ್ರಸನ್ನಾ ಅವರ ಹನ್ನೊಂದನೇ ಕೃತಿ ‘ಬಾನಂಚಿನ ಹೊಸಗಾನ’ ಪುಸ್ತಕವನ್ನು ಭಾರತೀಯ ಭೂ ಸೇನೆಯ ನಿವೃತ್ತ ಕಮಾಂಡೋ ಶ್ಯಾಮರಾಜ್ ಇ. ವಿ. ಹಾಗೂ ಹನ್ನೆರಡನೇ ಕೃತಿ ‘ಪೋಗದೆ ಇರೆಲೋ ರಂಗ…’ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷರಾದ  ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಲೋಕಾರ್ಪಣೆಗೊಳಿಸಿದರು. ಸರಳ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷರಾದ  ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ “ಕಾಸರಗೋಡು ಎಂದಿಗೂ ಕನ್ನಡದ ಕಂಪನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿದ ಅನೇಕ ಘಟಾನುಘಟಿಗಳು ಕನ್ನಡಕ್ಕಾಗಿ ದೊಡ್ಡ ಕೊಡುಗೆ ನೀಡಿದ್ದಾರೆ.  ಯಾವತ್ತೂ ಕಾರ್ಯಕ್ರಮಗಳು ಹೃದಯಕ್ಕೆ ಹತ್ತಿರವಾಗಿ, ಮನಸ್ಸಿಗೆ ಸಂತೋಷ ನೀಡುವಂತಿರಬೇಕು. ಇಂತಹ ಸನ್ನಿವೇಶದಲ್ಲಿ ಈ ಕೃತಿ ಲೋಕಾರ್ಪಣೆಗೊಳ್ಳುತಿರುವುದು…

Read More

ಧಾರವಾಡ : ಬೆಳಗಾವಿಯ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ (ರಿ.) ಇದರ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಕನ್ನಡ ನುಡಿ ಸಂಭ್ರಮ -2024’ವನ್ನು ದಿನಾಂಕ 15 ನವೆಂಬರ್ 2024ರಂದು ಮುಂಜಾನೆ 9-30 ಗಂಟೆಗೆ ಧಾರವಾಡದ ರಂಗಾಯಣ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪರಮಪೂಜ್ಯ ಶ್ರೀ ರಮೇಶ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಿರಿಯ ಸಾಹಿತಿಗಳಾದ ಡಾ. ಬೆ.ಗೋ. ರಮೇಶ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹಾಗೂ ‘ಜ್ಞಾನಾಮೃತ ಜ್ಯೋತಿ’ ಕಿರು ಕೃತಿ ಬಿಡುಗಡೆ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹುಬ್ಬಳ್ಳಿಯ ಕುಮಾರಿ ಕೀರ್ತನಾ ಆರ್. ಪೂಜಾರಿ ಮತ್ತು ವಿಜಯಪುರ ಜಿಲ್ಲೆಯ ಕುಮಾರಿ ಪೃಥ್ವಿ ಎಮ್. ಹೆಗಡೆ ಇವರಿಂದ ಭರತನಾಟ್ಯ ಪ್ರದರ್ಶನ, ಉತ್ತರ ಕನ್ನಡ ಜಿಲ್ಲೆಯ ಕುಮಾರಿ ನಿಶಾ ಎಮ್. ನಾಯ್ಕ್ ಇವರಿಂದ ಯಕ್ಷಗೀತ ಗಾಯನ ನೃತ್ಯ ಪ್ರದರ್ಶನ, ಬ್ಯಾಕೂಡ ಸದಾಶಿವ ಎಚ್. ನಾಯಕವಾಡಿ ಇವರಿಂದ ಕನ್ನಡ ಕರೋಕೆ…

Read More

ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ, ರಂಗಭೂಮಿ (ರಿ.) ಉಡುಪಿ ಹಾಗೂ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇವುಗಳ ಸಂಯುಕ್ತ ಸಂಯೋಜನೆಯಲ್ಲಿ ‘ರಂಗಭಾಷೆ’ ಕಾಲೇಜು ವಿದ್ಯಾರ್ಥಿಗಳಿಗಾಗಿ ರಂಗ ಕಾರ್ಯಾಗಾರ ಮತ್ತು ಕಿರು ನಾಟಕಗಳ ಉತ್ಸವವನ್ನು ದಿನಾಂಕ 16 ನವೆಂಬರ್ 2024ರಿಂದ 18 ನವೆಂಬರ್ 2024ರವರೆಗೆ ಉಡುಪಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 16 ನವೆಂಬರ್ 2024ರಂದು ಬೆಳಿಗ್ಗೆ 11-00 ಗಂಟೆಗೆ ಈ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಉಡುಪಿ ರಂಗಭೂಮಿ (ರಿ.) ಇದರ ಗೌರವಾಧ್ಯಕ್ಷರು ಮತ್ತು ಮಾಹೆಯ ಸಹ ಕುಲಾಧಿಪತಿಗಳಾದ ಡಾ. ಹೆಚ್.ಎಸ್. ಬಲ್ಲಾಳ್ ಇವರು ಅಧ್ಯಕ್ಷತೆ ವಹಿಸಲಿರುವರು. ಪ್ರಸಿದ್ಧ ರಂಗ ನಿರ್ದೇಶಕರಾದ ಶ್ರೀ ಪ್ರಸನ್ನ ಇವರು ಉದ್ಘಾಟನೆ ಮತ್ತು ಆಶಯ ಭಾಷಣ ಮಾಡಲಿರುವರು. ‘ರಂಗಾಟಗಳು ಮತ್ತು ಪರಿಚಯ’ – ಡಾ. ಶ್ರೀಪಾದ ಭಟ್, ಶ್ವೇತಾ ರಾಣಿ ಹೆಚ್. ಕೆ., ವಿನೀತ್ ಕುಮಾರ್, ‘ರಂಗಭೂಮಿ ಮಾಧ್ಯಮ ಮತ್ತು ಅದರ ಪ್ರಯೋಜನ’ – ಮಂಡ್ಯ ರಮೇಶ್, ‘ರಂಗ…

Read More

ಮೂಡಬಿದ್ರೆ : ಮೂಡಬಿದ್ರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ದಿನಾಂಕ 16 ನವೆಂಬರ್ 2024 ರಾತ್ರಿ 8-00 ಗಂಟೆಗೆ ಮುಗೇರ ಸಮುದಾಯದ ಹಿರಿಮೆಯನ್ನು ಸಾರುವ ಪುಣ್ಯ ಐತಿಹಾಸಿಕ ತುಳು ಪ್ರಸಂಗ ‘ಎಡ್ಮೂರ ಮುಗೇರ ಸತ್ಯೊಲು’ ಯಕ್ಷಗಾನ ಕ್ಷೇತ್ರದ ಹೊಸ ದಾಖಲೆಯ ಪ್ರದರ್ಶನದ ಕನಸಿನೊಂದಿಗೆ ಭರ್ಜರಿ ಸಿದ್ದತೆಯಲ್ಲಿ ಅದ್ದೂರಿ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ತೆಂಕುತಿಟ್ಟಿನ 50ಕ್ಕೂ ಮಿಕ್ಕಿ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ, 7 ಮಂದಿ ಸುಪ್ರಸಿದ್ದ ಭಾಗವತರುಗಳ ದ್ವಂದ್ವ ಭಾಗವತಿಕೆಯಲ್ಲಿ 5 ಪ್ರಸಿದ್ಧ ಹಾಸ್ಯಗಾರರ ವೈಭವದಲ್ಲಿ ನಡೆಯಲಿದೆ. ನೀವೆಲ್ಲರೂ ಕಂಡು ಸ್ಲಾಗಿಸಿದಂತಹ ‘ಕುಲದೖವೋ ಬ್ರಹ್ಮ’ ಮತ್ತು ‘ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗದ ದಾಖಲೆಯ ಪ್ರದರ್ಶನದ ಬಳಿಕ ಮತ್ತದೇ ಹುಮ್ಮಸ್ಸಿನೊಂದಿಗೆ ಯಕ್ಷರಂಗ ಕಂಡ ಚತುರ ಸಂಘಟಕನೆಂದೇ ಕರೆಸಿಕೊಂಡ ಪ್ರಸಂಗಕರ್ತ ಶ್ರೀ ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ, ನಿರ್ದೇಶಿಸಿ, ಸಂಯೋಜಿಸಲಿದ್ದು, ಸಂಪೂರ್ಣ ಮನೋರಂಜನೆಯ ಭರವಸೆಯೊಂದಿಗೆ ನಡೆಯುವ ಈ ಅದ್ದೂರಿ ಯಕ್ಷಗಾನ ನೂತನ ಪ್ರಸಂಗ ಬಿಡುಗಡೆ ಹಾಗೂ ಪ್ರಥಮ ಪ್ರದರ್ಶನ ಯಕ್ಷಗಾನ ಬಯಲಾಟ ಸಮಾರಂಭಕ್ಕೆ ನೀವುಗಳು ಅತೀ…

Read More

ಕೋಟ : ಕೋಟ ವಿವೇಕ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮತ್ತು ಸಾಹಿತ್ಯ ಸಂಘ ಪ್ರೌಢಶಾಲಾ ವಿಭಾಗದ ಜಂಟಿ ಆಶ್ರಯದಲ್ಲಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ “ಸಿನ್ಸ್ 1999 ಶ್ವೇತಯಾನ-77ನೇ ಕಾರ್ಯಕ್ರಮದ ಅಂಗವಾಗಿ ‘ಹೂವಿನಕೋಲು ಪ್ರದರ್ಶನ’ವು ದಿನಾಂಕ 12 ನವೆಂಬರ್ 2024ರಂದು ನಿಸರ್ಗದ ಶಾಂತಿ ವಿಹಾರದ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನ್ನಾಡಿದ ಕೋಟ ವಿವೇಕ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಜಗದೀಶ್ ನಾವುಡ “ಯಕ್ಷಗಾನದ ಹಲವು ಪ್ರಕಾರಗಳಾದ  ತಾಳಮದ್ದಳೆ, ಯಕ್ಷಗಾನ, ಗಾನವೈಭವ, ಹೂವಿನಕೋಲು, ಯಕ್ಷಗಾನ ಪ್ರಾತ್ಯಕ್ಷಿಕೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಮಕ್ಕಳಿಗೆ ಕಲಿಸಿ, ವೇದಿಕೆ ಒದಗಿಸಿಕೊಡುತ್ತ ಬೆಳೆಸುತ್ತಿರುವ ಯಶಸ್ವೀ ಕಲಾವೃಂದ ಸಂಸ್ಥೆ ಮಾದರಿಯಾಗಿದೆ. ಅಷ್ಟೇ ಅಲ್ಲದೆ, ಭರತನಾಟ್ಯ, ಚಿತ್ರಕಲೆ, ಸಂಗೀತ ಹೀಗೆ ಅನ್ಯ ಕಲೆಯನ್ನು ಮಕ್ಕಳಿಗೆ ತಮ್ಮ ಸೂರಿನಡಿಯಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ ಕಾರ್ಯ. ವರ್ಷ ಪೂರ್ತಿ ಕಾರ್ಯಕ್ರಮವನ್ನು ಬೆಳ್ಳಿ ಹಬ್ಬದಲ್ಲಿ ಆಚರಿಸುತ್ತಾ ಬಂದ ಸಂಸ್ಥೆ ಕರ್ನಾಟಕದ ಎಲ್ಲಾ ಕಲಾಸಕ್ತರ ಗಮನವನ್ನು ಸೆಳೆದಿರುವುದು ಗಮನಾರ್ಹ.” ಎಂದರು. ಯಕ್ಷಗುರು…

Read More