Subscribe to Updates
Get the latest creative news from FooBar about art, design and business.
Author: roovari
ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ‘ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ನುಡಿಚಿತ್ತಾರ 2024’ ಸಮಾರಂಭವು ದಿನಾಂಕ 10 ನವೆಂಬರ್ 2024ರಂದು ಬೆಳಿಗ್ಗೆ 9-00 ಗಂಟೆಗೆ ಬ್ರಹ್ಮಾವರ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ನೃತ್ಯ ಗುರುಗಳು ಶ್ರೀಧರ್ ರಾವ್ ಬನ್ನಂಜೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ‘ಛದ್ಮವೇಷ ಸ್ಪರ್ಧೆ’ ಮತ್ತು ಮಕ್ಕಳಿಗಾಗಿ ‘ಕಥೆ ಹೇಳುವ ಸ್ಪರ್ಧೆ’ ನಡೆಯಲಿದೆ. ಸಂಜೆ 4-00 ಗಂಟೆಗೆ ಮಕ್ಕಳ ನಾಟಕ ತಂಡ ‘ತೋರಣ’ದ ರಂಗ ವಿದ್ಯಾರ್ಥಿಗಳು ಐ.ಕೆ. ಬೊಳುವಾರ್ ರಚಿಸಿರುವ ರೋಹಿತ್ ಎಸ್. ಬೈಕಾಡಿ ಇವರ ನಿರ್ದೇಶನದಲ್ಲಿ ‘ಪಂಚ 9 ಮುಖವಾಡ) ತಂತ್ರ’ ನಾಟಕವನ್ನು ಅಭಿನಯಿಸಲಿದ್ದಾರೆ.
ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ “ಲಂಕೇಶ್ ಬಹುತ್ವಗಳ ಶೋಧ : ಅಧ್ಯಯನ ಶಿಬಿರ’ವು ದಿನಾಂಕ 11 ನವೆಂಬರ್ 2024ರಿಂದ 13 ನವೆಂಬರ್ 2024ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ, ಕಲಾಗ್ರಾಮ, ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ. ದಿನಾಂಕ 11 ನವೆಂಬರ್ 2024ರಂದು ಈ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಲ್.ಎನ್. ಮುಕುಂದರಾಜ್ ಇವರ ಅಧ್ಯಕ್ಷತೆಯಲ್ಲಿ ಖ್ಯಾತ ವಕೀಲರಾದ ಸಿ.ಹೆಚ್. ಹನುಮಂತರಾಯ ಇವರು ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 12-00 ಗಂಟೆ ನಡೆಯಲಿರುವ ಗೋಷ್ಠಿ 1ರಲ್ಲಿ ದಶಮುಖ ಲಂಕೇಶ್ ‘ಲಕೇಶರ ಬದುಕು ಬರಹ’ – ಅಗ್ರಹಾರ ಕೃಷ್ಣಮೂರ್ತಿ, ಗೋಷ್ಠಿ 2ರಲ್ಲಿ ಲಂಕೇಶರ ಕಾವ್ಯ ‘ನನ್ನವ್ವ ಫಲವತ್ತಾದ ಕಪ್ಪು ನೆಲ’ – ಡಾ. ಎಂ.ಎಸ್. ಆಶಾದೇವಿ, ಗೋಷ್ಠಿ 3ರಲ್ಲಿ ಲಂಕೇಶರ ಕಾದಂಬರಿಗಳು ‘ಮುಸ್ಸಂಜೆಯ ಪ್ರಸಂಗಗಳಲ್ಲಿ’ – ಡಾ. ಅಮರೇಶ ನುಗಡೋಣಿ ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಠಿ 4ರಲ್ಲಿ ಸಂವಾದ – ಶಿಬಿರದ ನಿರ್ದೇಶಕರು ಹಾಗೂ ವಿದ್ವಾಂಸರೊಂದಿಗೆ ಗುಂಪು ಚರ್ಚೆ, ಸಂಜೆ 6-00…
ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು, ವಿಶುಕುಮಾರ್ ದತ್ತಿನಿಧಿ ಸಮಿತಿ ವತಿಯಿಂದ ಹಾಗೂ ಯುವವಾಹಿನಿ ಪಣಂಬೂರು-ಕುಳಾಯಿ ಘಟಕದ ಆತಿಥ್ಯದಲ್ಲಿ ‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 10 ನವೆಂಬರ್ 2024ರಂದು ಬೆಳಗ್ಗೆ 9-30 ಗಂಟೆಗೆ ಉರ್ವಸ್ಟೋರ್‌ನ ತುಳುಭವನದ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಇವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದು, ಮಂಗಳೂರು ವಿವಿ ಉಪಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಶಾಸಕ ಉಮಾನಾಥ್ ಎ. ಕೋಟ್ಯಾನ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಭಾಗವಹಿಸಲಿದ್ದಾರೆ. 2024ನೇ ಸಾಲಿನ ‘ವಿಶುಕುಮಾರ್ ಪ್ರಶಸ್ತಿ’ಯನ್ನು ಸಂಪಾದಕ, ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಮತ್ತು ‘ಡಾ. ಪ್ರಭಾಕರ ನೀರುಮಾರ್ಗ…
ಬೆಂಗಳೂರು : ಅರ್ಪಣ ಸೇವಾಸಂಸ್ಥೆ ಇದರ ವತಿಯಿಂದ ಬೆಂಗಳೂರಿನ ‘ಅಂತರಂಗ’ ಪ್ರಸ್ತುತಪಡಿಸುವ ‘ಕಾಯುವ ಕಾಯಕ’ ನಾಟಕವು ದಿನಾಂಕ 12 ನವೆಂಬರ್ 2024ರಂದು ಬೆಂಗಳೂರಿನ ಬಸವನಗುಡಿ, ಬಿ.ಪಿ. ವಾಡಿಯಾ ರಸ್ತೆ, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಹನಿಗವನ ಕವಿ ಹೆಚ್. ಡುಂಡಿರಾಜ್ ವಿರಚಿತ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಖ್ಯಾತ ನಿರ್ದೇಶಕಿ ಅರ್ಚನಾ ಶ್ಯಾಮ್ ನಿರ್ವಹಿಸಿದ್ದಾರೆ. ನಾಟಕವು ಕಾಯುವಿಕೆಯೆಂಬ ಪರಿಕಲ್ಪನೆಯಲ್ಲಿ ನಿರೀಕ್ಷೆ, ಹುಡುಕಾಟ, ಸಂಬಂಧಗಳ ಸಂಕೀರ್ಣತೆ, ಮನಸಿನ ತೊಳಲಾಟ, ಅಸಹಾಯಕತೆ ಇವೆಲ್ಲವುಗಳನ್ನು ಒಳಗೊಂಡಿದೆ. ವೀಕ್ಷಕರು ‘ಬುಕ್ ಮೈ ಶೋ’ ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಂಕಲ್ ಶ್ಯಾಮ್- 98809 14509 ಮತ್ತು ಮುರಳೀಧರ್ – 99869 11321 ಇವರನ್ನು ಸಂಪರ್ಕಿಸಬಹುದು.
ಕಾರ್ಕಳ : ದಿವಂಗತ ಮೀರಾ ಕಾಮತ್ ಸ್ಮರಣಾರ್ಥ ಹೊಸ ಸಂಜೆ ಬಳಗ ಕಾರ್ಕಳ ಇವರು ‘ಮಕ್ಕಳ ಚಿತ್ರಕಲಾ ಸ್ಪರ್ಧೆ’ಯನ್ನು ದಿನಾಂಕ 24 ನವೆಂಬರ್ 2024ರಂದು ಬೆಳಿಗ್ಗೆ 9-00 ಗಂಟೆಗೆ ಕಾರ್ಕಳದ ಶಿಕ್ಷಣ ಸಂಸ್ಥೆಯ ಸಭಾಂಗಣ ಎಸ್.ವಿ.ಟಿ.ಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ. ಕಾರ್ಕಳ ಟೈಗರ್ಸ್, ಶಿವಾ ಸ್ಮರಣಿಕಾ ಮತ್ತು ಗಿಫ್ಟ್ಸ, ಜನಬಿಂಬ ಪತ್ರಿಕೆ, ಮುಹಮ್ಮದ್ ಗೌಸ್ ಮತ್ತು ಶಿಲಾಮಯ ದೇವಸ್ಥಾನಗಳ ನಿರ್ಮಾಣಕಾರರು ಇವರುಗಳ ಸಹ ಪ್ರಯೋಜಕತ್ವದಲ್ಲಿ ನಡೆಸಲಾಗುವುದು. 1ರಿಂದ 3ನೇ ತರಗತಿ ಮಕ್ಕಳಿಗೆ ‘ಹಣ್ಣು ತುಂಬಿದ ಬುಟ್ಟಿ’, 4ರಿಂದ 7ನೇ ತರಗತಿ ಮಕ್ಕಳಿಗೆ ‘ಬಲೂನ್ ಮಾರುವವ’ ಹಾಗೂ 8 ರಿಂದ 10ನೇ ತರಗತಿ ಮಕ್ಕಳಿಗೆ ‘ಹಳ್ಳಿಯ ಕುಲಕಸುಬು’ ಚಿತ್ರಕಲಾ ಸ್ಪರ್ಧೆಯ ವಿಷಯವಾಗಿರುತ್ತದೆ. ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಮಕ್ಕಳಿಗೆ ಮಾತ್ರ ಅವಕಾಶ. ಭಾಗವಹಿಸುವ ಮಕ್ಕಳು ಹೆಸರು, ವಿಳಾಸ ಸಂಪರ್ಕ ಸಂಖ್ಯೆ ಮತ್ತು ಆಧಾರ ಕಾರ್ಡ್ ನ್ನು ದಿನಾಂಕ 20 ನವೆಂಬರ್ 2024ರ ಒಳಗೆ 9845939051 ವಾಟ್ಸಾಪ್ ನಂಬರಿಗೆ…
ಕಮತಗಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಮತ್ತು ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ (ರಿ.) ಇವುಗಳ ಸಹಯೋಗದಲ್ಲಿ ಜಾನಪದ ಹಾಡುಗಾರ, ಗೀತ ರಚನೆಕಾರ, ನಾಟಕಕಾರ ಹಾಗೂ ಚಲಚಿತ್ರ ನಟರಾದ ಶ್ರೀ ಗುರುರಾಜ್ ಹೊಸಕೋಟೆಯವರ ಸರ್ವಾಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಇದೆ ಪ್ರಥಮ ಬಾರಿಗೆ ‘ನೇಕಾರ ಸಾಹಿತ್ಯ ಸಮ್ಮೇಳನ’ವು ದಿನಾಂಕ 23 ನವೆಂಬರ್ 2024ರ ಶನಿವಾರದಂದು ಬಾಗಲಕೋಟೆ ಜಿಲ್ಲೆಯ ಕಮತಗಿ ಹಿರೇಮಠದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಆದ್ದರಿಂದ ಸಮ್ಮೇಳನದಲ್ಲಿ ಮೆರವಣಿಗೆ, ನೇಕಾರರ ಬದುಕು-ಬವಣೆ ಕುರಿತ ಕವಿಗೋಷ್ಠಿ, ವಿಚಾರಗೋಷ್ಠಿ, ಕಲಾಪ್ರದರ್ಶನ, ಗಾಯನ, ನೃತ್ಯ, ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಭಾಗವಹಿಸುವವರು ದಿನಾಂಕ 18 ನವೆಂಬರ್ 2024ರೊಳಗಾಗಿ ನೋಂದಾಯಿಸಿಕೊಳ್ಳಬೇಕಾಗಿ ಈ ಮೂಲಕ ವಿನಂತಿ. ಶ್ರೀ ಎಂ. ರಮೇಶ ಕಮತಗಿ 9686782774.
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವಿಂಶತಿ ಸಂಭ್ರಮದ ಅಂಗವಾಗಿ ತಾಳಮದ್ದಳೆ ಸರಣಿ-11 ಕಾರ್ಯಕ್ರಮವು ಶ್ರೀ ಲಕ್ಷ್ಮೀದೇವಿ ಬೆಟ್ಟ, ಸಾಲ್ಮರ ಪುತ್ತೂರು ಇಲ್ಲಿ ಮಧುಕುಮಾರ್ ಬೋಳೂರು ವಿರಚಿತ ‘ಸುದರ್ಶನ ವಿಜಯ’ ಎಂಬ ಆಖ್ಯಾನದೊಂದಿಗೆ ದಿನಾಂಕ 08 ನವೆಂಬರ್ 2024ನೇ ಶುಕ್ರವಾರ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮಿ ನಾರಾಯಣ ಭಟ್ ಬಟ್ಯಮೂಲೆ, ಆನಂದ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಪುಂಡಿಕಾಯಿ ರಾಜೇಂದ್ರ ಪ್ರಸಾದ್ ಹಾಗೂ ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಜಯಂತಿ ಹೆಬ್ಬಾರ್ (ವಿಷ್ಣು), ಕಿಶೋರಿ ದುಗ್ಗಪ್ಪ ನಡುಗಲ್ಲು (ಲಕ್ಷ್ಮಿ), ಶುಭಾಜೆ ಸಿ. ಅಡಿಗ (ಸುದರ್ಶನ), ಪ್ರೇಮಲತಾ ರಾವ್ (ದೇವೇಂದ್ರ), ಶಾರದಾ ಅರಸ್ (ಶತ್ರುಪ್ರಸೂದನ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಶ್ರೀ ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ಕಲಾವಿದರಿಗೆ ಶ್ರೀದೇವರ ಪ್ರಸಾದವನ್ನಿತ್ತು ಗೌರವಿಸಿದರು. ಧರ್ಮದರ್ಶಿಗಳ ಮನೆಯವರು ಉಪಸ್ಥಿತರಿದ್ದರು. ರಂಗನಾಥ ರಾವ್ ಸಹಕರಿಸಿದರು.
ಮಂಗಳೂರು : ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ಮತ್ತು ಕರ್ನಾಟಕ ಯಕ್ಷಭಾರತಿ (ರಿ.) ಪುತ್ತೂರು ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲ್ಪಡುವ ಹನ್ನೆರಡನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ 2024’ ದ್ವಾದಶ ಸರಣಿಯು ದಿನಾಂಕ 11 ನವೆಂಬರ್ 2024ರಿಂದ 17 ನವೆಂಬರ್ 2024ರವರೆಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಜರಗಲಿದೆ. ‘ಸಂಘಟನಾ ಪರ್ವ’ ಎಂಬ ಹೆಸರಿನಲ್ಲಿ ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ದಿನಾಂಕ 11 ನವೆಂಬರ್ 2024ರಿಂದ ಕ್ರಮವಾಗಿ ಹವ್ಯಾಸಿ ಬಳಗ ಕದ್ರಿ – ‘ರಾಜಾ ದಂಡಕ’, ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ – ‘ಕಚ ದೇವಯಾನಿ’, ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ – ‘ಸೈಂಧವ ವಧೆ’, ಶ್ರೀ ವಾಣೀ ವಿಲಾಸ ಯಕ್ಷ ಬಳಗ ಕಟೀಲು – ‘ತ್ರಿಶಂಕು ಸ್ವರ್ಗ’, ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ –…
ಕುಂದಾಪುರ : ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಸೀಸನ್ 5ರ ವಿಜೇತೆ, ರಿಷಿಕಾ ಕುಂದೇಶ್ವರ ಇವರು ಅರೆಹೊಳೆ ಪ್ರತಿಷ್ಠಾನವು ಕಳೆದ ಹತ್ತು ವರ್ಷಗಳಿಂದ ಬಾಲ ಪ್ರತಿಭೆಗೆ ನೀಡುತ್ತಿರುವ ‘ನಂದಗೋಕುಲ ಪ್ರತಿಭಾ ಪುರಸ್ಕಾರ’ ದ 2024ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜೀ ಕನ್ನಡದ ಡ್ರಾಮಾ ಜೂನಿಯರ್ಸ್ ಸೀಸನ್ 5ರ ವಿನ್ನರ್ ಮಂಗಳೂರಿನ ರಿಷಿಕಾ ಕುಂದೇಶ್ವರ ಇವರು ಮೂಲತಃ ಕಾರ್ಕಳ ತಾಲೂಕಿನ ಕುಂದೇಶ್ವರದ ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ. ಪ್ರಸ್ತುತ ಮಂಗಳೂರಿನ ಕದ್ರಿ ನಿವಾಸಿಯಾಗಿರುವ ಇವರು ಅಶೋಕನಗರದ ಎಸ್. ಡಿ. ಎಂ. ಸ್ಕೂಲ್ ವಿದ್ಯಾರ್ಥಿನಿ ಹಾಗೂ ಬಾಲಯಕ್ಷಕೂಟ ಮತ್ತು ಯಕ್ಷಮಾಧ್ಯಮ ತಂಡದ ಸದಸ್ಯೆ. ರಾಜ್ಯದ 30 ಸಾವಿರ ಮಕ್ಕಳ ಪ್ರತಿಭಾ ಶೋಧ ನಡೆಸಿ, ಅಂತಿಮ 24 ಮಕ್ಕಳಲ್ಲಿ ಒಬ್ಬಳಾಗಿ ಆಯ್ಕೆಯಾಗಿ 5 ತಿಂಗಳ ಕಾಲ ನಡೆದ ರಿಯಾಲಿಟಿ ಶೋದಲ್ಲಿ ರಂಗಭೂಮಿ, ನಾಟಕ, ಕಾಮಿಡಿ, ಯಕ್ಷಗಾನ, ದೊಡ್ಡಾಟ, ಹಗಲುವೇಷ, ಹರಿಕಥೆ ಎಲ್ಲದರಲ್ಲೂ ಸೈ ಎನಿಸಿಕೊಂಡು ಚಾಂಪಿಯನ್ ಪಟ್ಟ ಗೆದ್ದವಳು. ತಂದೆ…
ಸುಳ್ಯ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಂಘ ಸರಕಾರಿ ಪ್ರೌಢ ಶಾಲೆ ಎಣ್ಮೂರು ಇದರ ಸಹಯೊಗದಲ್ಲಿ ಸುವರ್ಣ ಸಂಭ್ರಮ -50’ರ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮವು ದಿನಾಂಕ 07 ನವಂಬರ್ 2024ರಂದು ಸುಳ್ಯದ ಎಣ್ಮೂರು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಖ್ಯಾತ ವಾಗ್ಮಿ ಹಾಗೂ ಚಿಂತಕರಾದ ದುರ್ಗಾಕುಮಾರ್ ನಾಯರ್ ಕೆರೆ ಮಾತನಾಡಿ “ಕನ್ನಡ ಭಾಷೆಗೆ ಅನೇಕ ಸವಾಲುಗಳಿವೆ. ಅದನ್ನು ನಾವೆಲ್ಲರೂ ಎದುರಿಸಿ ಕನ್ನಡ ಭಾಷೆ, ಸಾಹಿತ್ಯ ಪರಂಪರೆಯನ್ನು ಉಳಿಸಿ ಅದನ್ನು ಮುಂದಿನ ಜನಾಂಗಕ್ಕೆ ತಲಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾಹಿತ್ಯ ಪರಿಷತ್ತಿನಂತಹ ಅನೇಕ ಸಂಸ್ಥೆಗಳು ಈ ಜವಾಬ್ದಾರಿಯನ್ನು ಹೊರಬೇಕು.”ಎಂದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಮೇದಪ್ಪ ಗೌಡ ದೀವ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹೋಬಳಿ ಘಟಕ ಅಧ್ಯಕ್ಷರಾದ ಶ್ರೀ ಬಾಬು ಗೌಡ ಅಚ್ಚಪ್ಪಾಡಿ…