Author: roovari

ಬೆಂಗಳೂರು : ಖ್ಯಾತ ಲೇಖಕಿ ಡಾ.ಕಮಲಾ ಹೆಮ್ಮಿಗೆ ದಿನಾಂಕ 24-09-2023ರ ಭಾನುವಾರದಂದು ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ದಿನಾಂಕ 20-11-1952ರಂದು ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ ಜನಿಸಿದ ಕಮಲಾ ಹೆಮ್ಮಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು  ಎಂ.ಎ.ಪದವಿ ಪಡೆದರು. ‘ಸವದತ್ತಿ ಎಲ್ಲಮ್ಮ’ ಹಾಗೂ ‘ದೇವದಾಸಿ ಪದ್ದತಿ’ಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ.ಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾವನ್ನು ಪಡೆದರು. ಕಮಲ ಹೆಮ್ಮಿಗೆ ಅವರು ಆಕಾಶವಾಣಿಯ ಧಾರವಾಡ ಮತ್ತು ಮಂಗಳೂರು ಕೇಂದ್ರಗಳಲ್ಲಿ ಹಾಗೂ ದೂರದರ್ಶನದ ಬೆಂಗಳೂರು ಮತ್ತು ತಿರುವನಂತಪುರದ ಕೇಂದ್ರಗಳಲ್ಲಿ ವೃತ್ತಿಯಲ್ಲಿದ್ದರು. ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ರೂಪಗಳಲ್ಲಿ ಬರಹಗಳನ್ನು ನೀಡುತ್ತಾ ಬಂದಿದ್ದರು. ಅವರ ಬರಹಗಳಲ್ಲಿ ‘ಪಲ್ಲವಿ’, ‘ವಿಷಕನ್ಯೆ’, ‘ಮುಂಜಾನೆ ಬಂದವನು’, ‘ನೀನೆ ನನ್ನ ಆಕಾಶ’, ‘ಮರ್ಮರ’ ಮತ್ತು  ‘ಕರುಳ ಸಂವಾದ’ ಮುಂತಾದ ಕಾವ್ಯಗಳಿವೆ. ‘ಬದುಕೆಂಬ ದಿವ್ಯ’, ‘ಆಖ್ಯಾನ’, ‘ಕಿಚ್ಚಿಲ್ಲದ ಬೇಗೆ’ ಮುಂತಾದ ಕಾದಂಬರಿಗಳಿವೆ. ‘ಮಾಘ ಮಾಸದ ದಿನ’, ‘ಬಿಸಿಲು ಮತ್ತು ಬೇವಿನ ಮರ’,…

Read More

ಸುನಂದ ಹಾಗೂ ಹೆಚ್. ಕುಶಾಲ್ ಇವರ ಮಗಳಾಗಿ 24.09.1997 ರಂದು ಕೀರ್ತನಾ ಉದ್ಯಾವರ ಅವರ ಜನನ. M.com in Human resource and development ಇವರ ವಿದ್ಯಾಭ್ಯಾಸ. ಯಕ್ಷಗುರುಗಳಾದ ಉದ್ಯಾವರ ಜಯಕುಮಾರ್, ಕರ್ಗಲ್ಲು ವಿಶ್ವೇಶ್ವರ ಭಟ್, ಶೇಖರ ಡಿ.ಎಸ್ ಹಾಗೂ ನಂದಿಕೂರು ರಾಮಕೃಷ್ಣ ಇವರ ತೆಂಕುತಿಟ್ಟಿನ ಯಕ್ಷಗಾನ ಗುರುಗಳು. ಗಣೇಶ್ ಚೇರ್ಕಾಡಿಯವರಲ್ಲಿ ಬಡಗುತಿಟ್ಟಿನ ನಾಟ್ಯವನ್ನು ಅಭ್ಯಸಿಸಿ, ಯಕ್ಷಗಾನದ ಭಾಗವತಿಕೆ ಮತ್ತು ಛಂದಸ್ಸನ್ನು ಗುರು, ಯಕ್ಷಕವಿ ಗಣೇಶ ಕೊಲೆಕಾಡಿ ಹಾಗೂ ಪ್ರಸ್ತುತ ಪ್ರಸಾದ್ ಚೇರ್ಕಾಡಿಯವರಲ್ಲಿ ಅಭ್ಯಸಿಸುತ್ತಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು:- ಹೆತ್ತವರು ಯಕ್ಷಗಾನ ಪ್ರಿಯರಾಗಿದ್ದರಿಂದ ಅವರೊಡನೆ ಯಕ್ಷಗಾನ ನೋಡುತ್ತಲೇ ನನಗೆ ಅರಿವಿಲ್ಲದೆ ಆ ಕಲೆ ನನ್ನ ಮನಸ್ಸನ್ನು ಆವರಿಸಿತು. ರಾತ್ರಿ ಆಟ ನೋಡಿ ಮರುದಿನ ಮನೆಯಲ್ಲಿ ಅಮ್ಮನ ಸೀರೆ,‌ ರವಕೆ, ರಟ್ಟಿನ ಭೂಷಣಗಳನ್ನು ಕಟ್ಟಿ, ಮುಖಕ್ಕೆ ‌ಮನೆಯಲ್ಲಿದ್ದ ಬಣ್ಣ ಹಚ್ಚಿ ಕುಣಿದು ಮನೆಯೆಲ್ಲಾ‌‌ ಚೆಲ್ಲಾಪಿಲ್ಲಿ ಮಾಡುವುದನ್ನು ಗಮನಿಸಿದ ಹೆತ್ತವರು ಯಕ್ಷಗಾನ ತರಗತಿಗೆ ಸೇರಿಸಿದರು. ತೆಂಕುತಿಟ್ಟಿನ ಪ್ರಖ್ಯಾತ ಕಲಾವಿದರಾದ ಡಿ. ಮನೋಹರ್…

Read More

ಕುಂದಾಪುರ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಂಡ್ಲೂರು ಇದರ ರಜತ ಸಂಭ್ರಮದ ಪ್ರಯುಕ್ತ ಯಕ್ಷ-ಗಾನ-ವೈಭವ ಕಾರ್ಯಕ್ರಮವು ದಿನಾಂಕ 21-09-2023 ರಂದು ಯಶಸ್ವೀ ಕಲಾವೃಂದ (ರಿ.)ಕೊಮೆ-ತೆಕ್ಕಟ್ಟೆ ತಂಡದ ಸದಸ್ಯರಿಂದ ನಡೆಯಿತು. ಕಾರ್ಯಕ್ರಮದಲ್ಲಿ ಕಲಾವಿದರಿಗೆ ಗೌರವ ಸಲ್ಲಿಸಿ ಮಾತನಾಡಿದ ಕಂಡ್ಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಸುಧಾಕರ ಶೆಟ್ಟಿ “ಚೌತಿಯ ಸಂದರ್ಭದಲ್ಲಿ ಸಾಂಸ್ಕೃತಿಕ ಸಡಗರದ ಒಟ್ಟಾರೆ ಅನುಪಾತ ತೆಗೆದರೆ ಯಕ್ಷಗಾನದ ಕಾರ್ಯಕ್ರಮಗಳ ಸಂಖ್ಯೆ ಅಧಿಕವಾಗಿದೆ. ಹೆಚ್ಚಾಗಿ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಲ್ಲದೆ ಪರಿಪೂರ್ಣ ಆಗಲಾರದು. ಹಾಗಾಗಿಯೇ ಕಾರ್ಯಕ್ರಮ ಎಂದಾಕ್ಷಣ ಯಕ್ಷಗಾನದ ಪ್ರಕಾರ ಇದ್ದೇ ಇರುತ್ತದೆ. ಯಶಸ್ವೀ ಕಲಾವೃಂದ ತಕ್ಷಣದಲ್ಲಿ ದೊರೆತ ಕಲಾ ತಂಡ. ಅದ್ಭುತ ಕಾರ್ಯಕ್ರಮಕ್ಕೆ ಹೆಸರಾದ ತಂಡದ ಕಾರ್ಯಕ್ರಮ ಯಶಸ್ವಿಯಾಗಿದೆ” ಎಂದರು. ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಭಾಗವತ ಹರೀಶ್ ಪೂಜಾರಿ ಕಾವಡಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಬಳಿಕ ಯಶಸ್ವಿ ಕಲಾವೃಂದದ ಬಳಗದಿಂದ ಯಕ್ಷ-ಗಾನ-ವೈಭವ ರಂಗದಲ್ಲಿ ಪ್ರಸ್ತುತಿಗೊಂಡಿತು.

Read More

ಬೆಳ್ತಂಗಡಿ ತಾಲೂಕಿನ ಸವಣಾಲು ಡಿ.ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ಶೆಟ್ಟಿ ದಂಪತಿಗೆ 01-06-1948ರಂದು ಜನಿಸಿದ ದಯಾನಂದ ಶೆಟ್ಟರು ಕಲಿತದ್ದು ಎರಡನೇ ತರಗತಿ. ಯಕ್ಷಗಾನದ ಸಾಮಾನು ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸುತ್ತಿದ್ದ ಕಾಲದಲ್ಲಿ 12ನೇ ವರ್ಷ ಪ್ರಾಯದ ದಯಾನಂದ ಕುಮಾರ ವೇಣೂರು ದೇಲಂಪುರಿ ಮೇಳದಲ್ಲಿ ಬಾಲ ಕಲಾವಿದರಾಗಿ ಸೇರಿಕೊಂಡರು. ದಶಾವತಾರಿ ಸೂರಿಕುಮೇರಿ ಗೋವಿಂದ ಭಟ್ಟರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತ ಅವರು ಮುಂದೆ ತಮ್ಮ ನೃತ್ಯಾಭಿನಯವನ್ನು ವಿಸ್ತರಿಸಿಕೊಂಡದ್ದು ಇತರರನ್ನು ನೋಡಿಯೇ. ಕುಂಡಾವು ಮೇಳದಲ್ಲಿ ಅರುವ ಕೊರಗಪ್ಪ ಶೆಟ್ಟರ ಸಾಂಗತ್ಯದಲ್ಲಿ ಅದು ಸ್ಪುಟಗೊಂಡಿತು. ಮುಂದೆ ಕರ್ನಾಟಕ ಮೇಳವೊಂದರಲ್ಲೇ 36ವರ್ಷ ವ್ಯವಸಾಯ ಮಾಡಿದ ಹಿರಿಮೆ ಅವರದು. ದಾಮೋದರ ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ಸಾಮಗ, ಕ್ರಿಶ್ಚನ್ ಬಾಬು, ಮಿಜಾರು, ಕೋಳೂರು ಮೊದಲಾದ ದಿಗ್ಗಜರ ಒಡನಾಟದಲ್ಲಿ ಕಲ್ಲಾಡಿ ಮನೆತನದ ಮೂವರು ಯಜಮಾನರನ್ನು ಕಂಡ ದಯಾನಂದ, ಕಲ್ಲಾಡಿ ಕೊರಗ ಶೆಟ್ಟರಿಂದಾಗಿ ಮಂಗಳೂರಿನ ಜೆಪ್ಪಿನ ಮೊಗರಿನಲ್ಲಿ ನೆಲೆಸಿ ಜಪ್ಪು ದಯಾನಂದ ಶೆಟ್ಟಿ ಎಂದಾದರು. ಖಚಿತ ಲಯ ಜ್ಞಾನ, ಲಾಲಿತ್ಯ ಪೂರ್ಣ…

Read More

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಆಕಾಡೆಮಿಯು ಹಮ್ಮಿಕೊಂಡ ‘ನೃತ್ಯಾಂತರಂಗ’ದ 104ನೇ ಸರಣಿ ಕಾರ್ಯಕ್ರಮವು ದಿನಾಂಕ 16-09-2023ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಿನ್ನಿಗೋಳಿಯ ‘ಶಿವ ಪ್ರಣಾಮ್’ ನೃತ್ಯ ಸಂಸ್ಥೆಯ ನಿರ್ದೇಶಕಿಯಾದ ವಿದುಷಿ ಅನ್ನಪೂರ್ಣ ರಿತೇಶ್ ಮೂಲ್ಕಿ ಇವರು ಭರತನಾಟ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದ ಮೊದಲಿಗೆ ಸಂಸ್ಥೆಯ ನಿರ್ದೇಶಕ ವಿದ್ವಾನ್ ದೀಪಕ್ ಇವರಿಂದ ಶಂಖನಾದ ಹಾಗೂ ಸಂಸ್ಥೆಯ ಸಂಗೀತ ನಿರ್ದೇಶಕಿಯಾದ ವಿದುಷಿ ಪ್ರೀತಿಕಲಾ ದೀಪಕ್ ಇವರಿಂದ ಮಂಗಳಮಯ ಓಂಕಾರನಾದ ಮತ್ತು ಸಂಸ್ಥೆಯ ಪುಟಾಣಿ ಕಲಾವಿದರ ‘ಅಲಪದ್ಮ’ ತಂಡದಿಂದ ಪ್ರಾರ್ಥನೆ ನಡೆಯಿತು. ಅಭ್ಯಾಗತರಾಗಿ ಆಗಮಿಸಿದ ಪತ್ರಕರ್ತ ಶ್ರೀಯುತ ಹರಿಪ್ರಸಾದ್ ನೆಲ್ಯಾಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಂತರ ಶ್ರೀ ಹಿಮನೀಶ್, ಕುಮಾರಿಯರಾದ ಅಪೇಕ್ಷಾ ಮತ್ತು ದಿಶಾ ಆರ್.ಶೆಟ್ಟಿ ಅಭ್ಯಾಗತರನ್ನು ಹಾಗೂ ಕಲಾವಿದರನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಕಲಾವಿದೆಯಾದ ಕುಮಾರಿ ಅಕ್ಷಯ ಪಾರ್ವತಿ ಸರೊಳಿ ತುಳುವಿನಲ್ಲಿ ನಿರೂಪಿಸಿದರು. ಮಂಗಳೂರಿನ ಭಾರತಾಂಜಲಿ ನೃತ್ಯ ಸಂಸ್ಥೆಯ ಗುರು ಪ್ರತಿಮಾ ಶ್ರೀಧರ್ ಹಾಗೂ…

Read More

ಮಂಗಳೂರು : ಕನ್ನಡ ನಾಡಿನ ಹೆಮ್ಮೆಯ ‘ಚಂದನ ವಾಹಿನಿ’ಯಲ್ಲಿ 4000 ಕಂತುಗಳನ್ನು ದಾಟಿ ಮುಂದುವರೆದು ಭಾರತದ ಟೆಲಿವಿಶನ್ ಇತಿಹಾಸದಲ್ಲೇ ದಾಖಲೆಯನ್ನು ಸೃಷ್ಟಿಸಿರುವ ‘ಥಟ್ಟಂತ ಹೇಳಿ’ ಕಾರ್ಯಕ್ರಮದ ಮೂಲಕ ಜನಮಾನಸಕ್ಕೆ ಚಿರಪರಿಚಿತರಾಗಿ ಖ್ಯಾತರಾದವರು ಡಾ. ನಾ.ಸೋಮೇಶ್ವರರು. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು 30ಕ್ಕೂ ಹೆಚ್ಚು ವಿವಿಧ ವಿಷಯಾಧಾರಿತ ಪುಸ್ತಕಗಳನ್ನು ಬರೆದಿದ್ದಾರೆ. ಈ ಪೈಕಿ ‘ಏಳು ಸುತ್ತಿನ ಕೋಟೆಯಲಿ ಎಂಟು ಕೋಟೆ’ ಎನ್ನುವ ಕೃತಿ ಹೆಚ್ಚು ಪ್ರಸಿದ್ದವಾಗಿದೆ. ವೈದ್ಯ ಸಾಹಿತ್ಯ ಪ್ರಶಸ್ತಿ -2003, ಡಾಕ್ಟರ್ಸ್ ಡೇ ಅವಾರ್ಡ್, ಕರ್ನಾಟಕ ಸಾಹಿತ್ಯ ಅಕಾಡಮಿ ಅವಾರ್ಡ್, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಸಹಿತವಾಗಿ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಡಾ. ನಾ.ಸೋಮೇಶ್ವರ ಅವರನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ಕಾರಂತ ಪ್ರಶಸ್ತಿ -2023’ಗೆ ಆಯ್ಕೆ ಮಾಡಲಾಗಿದೆ. ದಿನಾಂಕ 10-10-2023ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

Read More

ದೆಹಲಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ದೆಹಲಿ ಘಟಕ ಮತ್ತು ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಬೆಳ್ಳಾರೆ ಆಯೋಜಿಸುವ ‘ಯಕ್ಷಧ್ರುವ ಪಟ್ಲ ಸಂಭ್ರಮ 2023’ವು ದಿನಾಂಕ 30-09-2023ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಪ್ರಧಾನ ಸಂಚಾಲಕರಾದ ಶ್ರೀ ಶಶಿಧರ ಶೆಟ್ಟಿ ಬರೋಡ ಇವರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಚಲನ ಚಿತ್ರನಟ ಶ್ರೀ ದಯಾನಂದ ಶೆಟ್ಟಿಯವರು ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಜಯರಾಮ ಬನಾನ್ ಮತ್ತು ದೆಹಲಿ ಕನ್ನಡ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಡೇರೆಲ್ ಜೆಸ್ಸಿಕಾ ಫೆರ್ನಾಂಡಿಸ್ ಇವರುಗಳನ್ನು ಸನ್ಮಾನಿಸಲಾಗುವುದು. ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಇವರಿಂದ ‘ಮಾಯಾ ಮೋಹಿನಿ’ ಮತ್ತು ‘ವೀರ ಭಾರ್ಗವ’ ಯಕ್ಷಗಾನ ಪ್ರದರ್ಶನ ಹಾಗೂ ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ, ಬೆಳ್ಳಾರೆ ಇವರಿಂದ ‘ಪಜ್ಜೆ ಗೆಜ್ಜೆ’ ತುಳು, ಕನ್ನಡ ಜಾನಪದ ಮತ್ತು…

Read More

ಬಂಟ್ವಾಳ : ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ‘ಶ್ರಾವಣ ಮಾಸದ ತಾಳಮದ್ದಳೆ ಸೇವೆ’ಯು ದಿನಾಂಕ 10-09-2023ರಂದು ಸಮಾರೋಪಗೊಂಡಿತು. ಸಮಾರೋಪ ಸಂದರ್ಭ ವಾರ್ಷಿಕೋತ್ಸವ, ಸನ್ಮಾನ, ಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ನೆರವೇರಿತು. ಇದೇ ಸಂದರ್ಭದಲ್ಲಿ ಕಲಾಪೋಷಕ, ಸಂಘಟಕ, ಕಲಾವಿದ ಶ್ರೀ ವಾಸುದೇವ ರಾವ್ ಸುರತ್ಕಲ್ ಮತ್ತು ಸ್ನೇಹಶೀಲ ಭಾಗವತರಾದ ಶ್ರೀ ಸೀತಾರಾಮ ಸಾಲೆತ್ತೂರು ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಹವ್ಯಾಸಿ ಭಾಗವತರಾದ ಮಂಗಳೂರು ಆಕಾಶವಾಣಿ ಎ ಗ್ರೇಡ್ ನಾಟಕ ಕಲಾವಿದೆ ಮಲ್ಲಿಕಾ ಅಜಿತ್ ಶೆಟ್ಟಿಯವರು ಸನ್ಮಾನ ಪತ್ರ ವಾಚಿಸಿ ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ವಾಸುದೇವ ರಾವ್ ಸುರತ್ಕಲ್, ತನ್ನ ಜೀವನದಲ್ಲಿ ಯಕ್ಷಗಾನದ ನಂಟನ ವಿಷಯವನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮೊಕ್ತೇಸರ ಅಶೋಕ್ ಶೆಣೈ ಮಾತನಾಡಿ, ಶ್ರಾವಣ ಮಾಸದ ಮಹತ್ವದ ಬಗ್ಗೆ ವಿವರಿಸಿದರು. ದೇಗುಲದ ಮೊಕ್ತೇಸರರಾದ ಭಾಮಿ ನಾಗೇಂದ್ರ ಶೆಣೈ ಉಪಸ್ಥಿತರಿದ್ದರು. ನಾಗೇಂದ್ರ ಪೈ ಸ್ವಾಗತಿಸಿ, ಸಮಿತಿಯ ಕಾರ್ಯದರ್ಶಿ ಅರ್ಲ ಯೋಗೀಶ ಪ್ರಭು ವರದಿ ವಾಚಿಸಿದರು. ರೋಟೀರಿಯನ್ ಪಿ.…

Read More

ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯಿಂದ ಸಾಹಿತಿ ದಿವಂಗತ ಯಶವಂತಿ ಸುವರ್ಣ ಇವರ ಸಂಸ್ಮರಣೆ ಹಾಗೂ ಕೃತಿ ವಿಮರ್ಶೆ ಕಾರ್ಯಕ್ರಮವು ಕಾರ್ಕಳದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 16-09-2023ರಂದು ಜರುಗಿತು. “ಯಶವಂತಿ ಸುವರ್ಣ ಅವರು ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ರಂಗದಲ್ಲಿ ಕ್ರಿಯಾಶೀಲರಾಗಿದ್ದು ತಮ್ಮ ಸ್ತ್ರಿಪರ ಚಿಂತನೆಯಿಂದ ಜನಪ್ರಿಯರಾಗಿದ್ದರು” ಎಂದು ಪ್ರಸ್ತಾವಿಕ ನುಡಿಗಳಲ್ಲಿ ಸುಲೋಚನಾ ತಿಲಕ್ ಇವರು ನುಡಿದರು. ಯಶವಂತಿ ಸುವರ್ಣರ ‘ದಾರಿ’ ಕಥಾ ಸಂಕಲನದ ವಿಮರ್ಶೆ ಮಾಡಿದ ಶ್ಯಾಮಲಾ ಕುಮಾರಿ ಬೇವಿಂಜೆ ಇವರು “ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಯಶವಂತಿಯವರಂತಹ ಹೆಣ್ಣು ಮಗಳು ಸಮಾಜದ ಓರೆ ಕೋರೆಗಳು, ರಾಜಕೀಯ ತಂತ್ರಗಳು, ಅಧಿಕಾರಶಾಹಿ, ಕಾಮ ಪ್ರೇಮಗಳ ಕುರಿತು ದಿಟ್ಟವಾಗಿ ತೆರೆದುಕೊಳ್ಳುವುದು ಅಚ್ಚರಿ ಮೂಡಿಸಿತು” ಎಂದರು. ಅವರ ತುಳು ಕೃತಿಗಳ ಬಗ್ಗೆ ಮಾತನಾಡಿದ ಡಾ.ಸುಮತಿ ಪಿ. ಇವರು “ಯಶವಂತಿ ಸುವರ್ಣರಿಂದ ತುಳುನಾಡಿನ ಪರಂಪರೆ ಮತ್ತು ದೈವಗಳ ಕುರಿತು ಅಧ್ಯಯನ ಯೋಗ್ಯ ರಚನೆ ಆಗಿದೆ” ಎಂದರು. ಅವರ ಆತ್ಮಕತೆ ‘ಪಶ್ಚಿಮಕ್ಕೆ…

Read More

ಬೆಂಗಳೂರು: ದಿನಾಂಕ 19-09-2023 ರಂದು ಎ.ಡಿ.ಎ. ರಂಗಮಂದಿರದಲ್ಲಿ ನಡೆದ ‘ಲೀಲಾ ನಾಟ್ಯ ಕಲಾವೃಂದ’ದ ಯಶಸ್ವೀ 47ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿವಿಧ ಆಕರ್ಷಕ ನೃತ್ಯಾವಳಿಗಳು ಕಣ್ಮನ ಸೆಳೆದವು. ಸುಮಾರು 150 ಮಂದಿ ನೃತ್ಯಾಕಾಂಕ್ಷಿಗಳು ಅತ್ಯುತ್ಸಾಹದಿಂದ ಭಾಗವಹಿಸಿದ ನಲಿವಿನ ಹೆಜ್ಜೆ-ಗೆಜ್ಜೆಗಳ ಸಮೂಹ ನೃತ್ಯಾರ್ಪಣೆಯ ಸೌಂದರ್ಯಕರ ನೋಟ ಮುದನೀಡಿತು. ಪುಟಾಣಿ ಮಕ್ಕಳಿಂದ ಹಿಡಿದು ಹದಿಹರೆಯದ ಲಲನೆಯರರೂ ಅಂದವಾದ ಅಲಂಕಾರ, ಸುಮನೋಹರ ವೇಷಭೂಷಣಗಳಲ್ಲಿ ಶೋಭಿಸಿ ರಂಗದ ಮೇಲೆ ವಿವಿಧ ಸುಂದರ ಕೃತಿಗಳನ್ನು ನಿರೂಪಿಸಿದರು. ಅಂಗಶುದ್ಧ-ಲವಲವಿಕೆಯ ನರ್ತನ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು. ಕೊನೆಯಲ್ಲಿ ಪ್ರಸ್ತುತವಾದ ‘ನವರಸ ರಾಮಾಯಣ’-ನೃತ್ಯರೂಪಕದ ವಿಶೇಷವೆಂದರೆ, ಇದು ಕೇವಲ ನೃತ್ಯ ನಾಟಕವಾಗಿರದೆ, ‘ಮಾರ್ಗಂ’ ಸಂಪ್ರದಾಯದ ‘ವರ್ಣ’ ಸ್ವರೂಪ-ವಿನ್ಯಾಸಗಳಲ್ಲಿ, ಅದರ ಎಲ್ಲ ಶಾಸ್ತ್ರೀಯ ವ್ಯಾಕರಣಾಂಶಗಳನ್ನೂ ಒಳಗೊಂಡು ನಿರೂಪಿತವಾದ ಹೊಸ ಪ್ರಯೋಗವಾಗಿತ್ತು. ನೃತ್ತ-ನೃತ್ಯ ಮತ್ತು ಅಭಿನಯಗಳ ಮೆರುಗಿನಲ್ಲಿ ರಾಮಾಯಣದ ಹಲವು ರಸಘಟ್ಟಗಳನ್ನು ಪ್ರದರ್ಶಿಸಲಾಯಿತು. ಭರತನಾಟ್ಯದಲ್ಲಿ ‘ನವರಸ’ಗಳು ತನ್ನದೇ ಆದ ವಿಶೇಷ ಸ್ಥಾನ-ವೈಶಿಷ್ಟ್ಯಗಳನ್ನು ಪಡೆದಿವೆ. ಶೃಂಗಾರ, ಹಾಸ್ಯ, ಭಯಾನಕ, ಕ್ರೋಧ, ವೀರ, ಅದ್ಭುತ, ಭೀಭತ್ಸ, ಕರುಣಾ ಮತ್ತು ಶಾಂತ ಮುಂತಾದ…

Read More