Author: roovari

ಬೆಂಗಳೂರು: 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಪಾಂಡಪ್ಪ ಲಕ್ಷ್ಮಣ ಹೂಗಾರ್ ದತ್ತಿ ಪ್ರಶಸ್ತಿ’ಗೆ ಹಿರಿಯ ಸಾಧಕರಾದ ಬೀದರ್ ಜಿಲ್ಲೆಯ ಅಕ್ಕ ಡಾ. ಅನ್ನಪೂರ್ಣ ತಾಯಿ ಮತ್ತು ಬೆಳಗಾವಿಯ ವಿನೋದ ಸುರೇಂದ್ರ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ಮೂಲತ: ಬೀದರಿನ ಹಾರೂರಗೇರಿಯವರಾದ ಡಾ. ಅನ್ನಪೂರ್ಣ ತಾಯಿಯವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾನೂನು ವಿಷಯದಲ್ಲಿ ಪದವಿಯನ್ನು ಪಡೆದವರು. ಬಸವ ತತ್ವ ಪ್ರಸಾರಕ್ಕೆ ತಮ್ಮನ್ನು ಸಂಪೂರ್ಣ ತೊಡಗಿಸಿ ಕೊಂಡ ಇವರು ಸಮಾನತೆಯ ಸಮಾಜವನ್ನು ಕಟ್ಟಲು ಅಹರ್ನಿಶಿ ದುಡಿಯುತ್ತಿದ್ದಾರೆ. ವಚನಕ್ಕೊಂದು ಕತೆ, ಸಂಸಾರದಲ್ಲಿ ಸದ್ಗತಿ, ಗುರು ಕರುಣೆ, ಶ್ರಾವಣ ಸುಂದರ, ಬಸವ ಭಾವ ಮೊದಲಾದವು ಇವರ ಪ್ರಮುಖ ಕೃತಿಗಳು. ಬೆಳಗಾವಿಯ ಭರತೇಶ ಎಜ್ಯುಕೇಷನ್ ಟ್ರಸ್ಟಿನ ಕಾರ್ಯದರ್ಶಿಗಳಾದ ವಿನೋದ ಸುರೇಂದ್ರ ಅವರು ಮೂಲತ: ಸಂಶೋಧನಾ ವಿಜ್ಞಾನಿಗಳು, ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ…

Read More

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ ಬ್ಯಾರಿ ಮಹಿಳಾ ಕವಿಗೋಷ್ಠಿಯು ದಿನಾಂಕ 02-03-2024 ರಂದು ಮಂಗಳೂರಿನ ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೇಖಕಿ ಝುಲೇಖಾ ಮುಲ್ತಾಝ್ “ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ಮಾತೃಭಾಷೆಯನ್ನು ಮರೆಯದೆ ಮಕ್ಕಳಿಗೆ ಪರಿಚಯಿಸಿಕೊಡುವ ಜವಾಬ್ದಾರಿ ತಾಯಂದಿರದ್ದಾಗಿದೆ. ಮಕ್ಕಳಿಗೆ ಮಾತೃಭಾಷೆಯ ಹಿರಿಮೆ ಮತ್ತು ಮಹಿಮೆಯನ್ನು ತಿಳಿಹೇಳಬೇಕಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಉದ್ಯೋಗದ ಭಾಷೆಯಾಗಿದ್ದರೂ ಕೂಡ ಮಾತೃಭಾಷೆಯಲ್ಲಿ ಮಾತನಾಡಬೇಕು ಹಾಗೂ ಬರೆಯಬೇಕು. ಆಗ ಮಾತ್ರ ನಮ್ಮ ಮಕ್ಕಳು ನಮ್ಮನ್ನು ಅನುಕರಿಸುತ್ತಾರೆ. ಬ್ಯಾರಿ ಭಾಷೆಯ ಅಳಿವು, ಉಳಿವು ಕೂಡ ತಾಯಂದಿರ ಕೈಯಲ್ಲಿದೆ.” ಎಂದು ಝುಲೇಖಾ ಮುಮಾಝ್ ಹೇಳಿದರು. ಲೇಖಕಿ ಆಯಿಶಾ ಯು.ಕೆ. ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ ಕಾಮತ್ ಸ್ವಾಗತಿಸಿ, ಲೇಖಕಿ ಸಾರಾ ಅಲಿ ಪೆರ್ಲಡ್ಕ ಕಾರ್ಯಕ್ರಮ ನಿರೂಪಿಸಿ, ಕಚೇರಿ ಸಿಬ್ಬಂದಿ ರಂಝೀನಾ ವಂದಿಸಿದರು. ಕವಯತ್ರಿಗಳಾದ ಝುಲೇಖಾ ಮುಲ್ತಾಝ್,…

Read More

ಚನ್ನರಾಯಪಟ್ಟಣ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ನಿಲಯ ಚನ್ನರಾಯಪಟ್ಟಣ, ಹಾಗೂ ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ ಸಹಯೋಗದಲ್ಲಿ ನಡೆದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 05-03-2024ರಂದು ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿರುವ ‘ರಂಗ ಲೋಕ’ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಾಸನ ಜಿಲ್ಲೆ ಕಾರೆಕೆರೆಯ ಕೃಷಿ ಮಹಾವಿದ್ಯಾಲಯದ ಮುಖ್ಯಾಧಿಕಾರಿಯಾಗಿರುವ ಡಾ. ಎಸ್. ಎನ್. ವಾಸುದೇವನ್ ಮಾತನಾಡಿ “ಮಕ್ಕಳು ಇಂತಹ ಚಟುವಟಿಕೆಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ. ನಮ್ಮ ಹಿರಿಯರ ಸಂಸ್ಕೃತಿ, ಸಂಪ್ರದಾಯಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ ಅದನ್ನು ನಾವು ಸರಿಯಾಗಿ ಅರ್ಥೈಹಿಸಿಕೊಳ್ಳ ಬೇಕು. ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರಿಂದ ಮಕ್ಕಳ ಬೌದ್ಧಿಕ ಮಟ್ಟವೂ ಹೆಚ್ಚುತ್ತದೆ.” ಎಂದರು. ವೇದಿಕೆಯಲ್ಲಿ ವಿಸ್ತರಣಾಧಿಕಾರಿಗಳಾದ ರಾಜೇಶ್ ಚೌಹಾಣ್, ನಿಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ರಾಣಿ ಹಾಗೂ ನಿಲಯ ಪಾಲಕರಾದ ಶ್ರೀಮತಿ ಜೆ. ಎಮ್. ಪ್ರತಿಭಾ ಹಾಗೂ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಅರುಣ್ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಕಂಸಾಳೆ, ರಂಗಕುಣಿತ, ಕಿರುನಾಟಕ,…

Read More

ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ಲಾವಣ್ಯ’ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಇದರ ಉಡುಪಿ ಜಿಲ್ಲಾ ಘಟಕದ ಸಹಯೋಗದಲ್ಲಿ ‘ರಂಗಪಂಚಮಿ-2024’ ಐದು ದಿನಗಳ ನಾಟಕೋತ್ಸವದ ಸಮಾರೋಪ ಕಾರ್ಯಕ್ರಮವು ದಿನಾಂಕ 06-03-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ “ಜಾನಪದವೂ ಕೂಡ ಒಂದು ಧರ್ಮವಾಗಿದ್ದು ಇದು ನಾವು ಬದುಕುವ ರೀತಿಗೆ ಹತ್ತಿರದ ಸಂಬಂಧವಿದ್ದು, ಒಂದು ಜೀವನ ಧರ್ಮವಾಗಿದೆ. ಜಾನಪದ ಧರ್ಮವನ್ನು ನಾವು ಅರ್ಥಮಾಡಿಕೊಂಡು ಪಾಲಿಸಿದರೆ ಎಲ್ಲಾ ಕಾಲಮಾನದ ಬದಲಾವಣೆಗಳ ಮಧ್ಯೆ ಕೂಡ ನಮ್ಮ ಸಂಸ್ಕೃತಿ ಉಳಿಯುತ್ತದೆ. ಆಂಗ್ಲ ಮಾಧ್ಯಮ ಶಿಕ್ಷಣ, ನಮ್ಮ ಘನತೆಯ ವೈಭವೀಕರಣಕ್ಕಾಗಿ ದುರದೃಷ್ಟವಶಾತ್ ಜಾನಪದಧರ್ಮವನ್ನು ನಾವು ಇಂದಿನ ದಿನಗಳಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಜಾನಪದ ಧರ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಸ್ಕೃತಿ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ಯಕ್ಷಗಾನ ಉಳಿಸಿ ಬೆಳೆಸುವುದರ ಮೂಲಕ ಇದರೊಂದಿಗೆ ಕನ್ನಡ ಭಾಷೆಯು ಹೆಚ್ಚು ಬಳಕೆಗೆ ಬಂದು ಕನ್ನಡ ಪ್ರೇಮವು ಹೆಚ್ಚಾಗುತ್ತದೆ” ಎಂದರು. ಸಮೃದ್ಧ…

Read More

ನೀರಗೋಡು : ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ಶ್ರೀ ಕದಂಬೇಶ್ವರ ಯಕ್ಷಗಾನ ಕಲಾಪೋಷಕ ಗೆಳೆಯರ ಬಳಗ ನೀರಗೋಡು (ಹರಿಗಾರು) ಇವರ ಸಂಯೋಜನೆಯಲ್ಲಿ ದಿನಾಂಕ 12-03-2024ರಂದು ಸಂಜೆ ಗಂಟೆ 9.30ಕ್ಕೆ ಶ್ರೀ ಕದಂಬೇಶ್ವರ ದೇವಾಲಯ ನೀರಗೋಡು ಇದರ ಬಯಲು ಆವಾರದಲ್ಲಿ ‘ಯಕ್ಷಲೋಕ ವಿಜಯ’ ಮತ್ತು ‘ವೀರ ಬರ್ಭರಿಕ’ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಗೌರವ ಪ್ರವೇಶ ರೂ.500/- ಟಿಕೆಟ್ ದರ 300/-, 200/- ನೆಲ 100/-

Read More

ಕಾಸರಗೋಡು : ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಬೆಳಗಾವಿ ಮತ್ತು ಶಂಪಾ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಆನಂದಕಂದ ಸಾಹಿತ್ಯ ಹಬ್ಬ ಕಾಸರಗೋಡು’ ದಿನಾಂಕ 16-03-2024 ಮತ್ತು 17-03-2024ರಂದು ಕಾಸರಗೋಡಿನ ಚೇವಾರ್ ವಯಾ ಉಪ್ಪಳ, ಕುಡಾಲ್, ಕುಡ್ತಡ್ಕ, ನಿಸರ್ಗ ಧಾಮದಲ್ಲಿ ನಡೆಯಲಿದೆ. ದಿನಾಂಕ 16-03-2024ರಂದು ಬೆಳಿಗ್ಗೆ 10-00 ಗಂಟೆಗೆ ಈ ಕಾರ್ಯಕ್ರಮವು ಲಕ್ಷ್ಮೀಶ ತೊಳ್ಪಾಡಿಯವರಿಂದ ಉದ್ಘಾಟನೆಗೊಳ್ಳಲಿದೆ. ಗೋಷ್ಠಿ 1ರಲ್ಲಿ ‘ಕವಿತೆ ವಾಚನ, ಗಾಯನ ಮನನ’ ಈ ಕಾರ್ಯಕ್ರಮದಲ್ಲಿ ಯು. ಮಹೇಶ್ವರಿ, ಚಂದ್ರಶೇಖರ ವಸ್ತ್ರದ, ಕಲ್ಲಚ್ಚು ಮಹೇಶ, ಸಿ.ಕೆ. ನಾವಲಗಿ ಮತ್ತು ವಿಭಾಶ್ರೀ ಬೆಳ್ಳಾರೆ ಮತ್ತು ಗೋಷ್ಠಿ 2ರಲ್ಲಿ ‘ಕಥೆ ವಾಚನ – ಮನನ’ ಈ ಕಾರ್ಯಕ್ರಮದಲ್ಲಿ ಪ್ರವೀಣ ಪದ್ಯಾಣ, ಮಹಾದೇವ ಹಡಪದ, ವಿಕಾಸ ಹೊಸಮನಿ ಇವರುಗಳು ಭಾಗವಹಿಸಲಿರುವರು. ಗೋಷ್ಠಿ 3ರಲ್ಲಿ ‘ಕನ್ನಡ ವಿಮರ್ಶೆ ಎತ್ತ ಸಾಗಿದೆ ?’ ಈ ಕಾರ್ಯಕ್ರಮದಲ್ಲಿ ಗಿರೀಶ ಭಟ್ಟ ಅಜಕ್ಕಳ, ಬಾಲಕೃಷ್ಣ ಹೊಸಂಗಡಿ ಮತ್ತು ವಿಕಾಸ ಹೊಸಮನಿ ಚರ್ಚೆಯಲ್ಲಿ ಪಾಲ್ಗೊಳ್ಳುವವರು. ಗೋಷ್ಠಿ 4ರಲ್ಲಿ ‘ಹಿರಿಯ…

Read More

ಉಡುಪಿ : ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಹಾಗೂ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ಸಹಯೋಗದಲ್ಲಿ ಉಡುಪಿ ಬನ್ನಂಜೆ ಶ್ರೀ ನಾರಾಯಣಗುರು ಆಡಿಟೋರಿಯಂನ ದಿ. ತೋಮ ಶ್ಯಾನುಭಾಗ್ ವೇದಿಕೆಯ ‘ತ್ಯಾಗ ಮಂಟಪ’ದಲ್ಲಿ ಅವಿಭಜಿತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯು ದಿನಾಂಕ 10-03-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಗೌರವಾಧ್ಯಕ್ಷ ಶಾಂತಾರಾಮ ಸೂಡ ಇವರು ಮಾತನಾಡುತ್ತಾ “ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಇದೆ. ಧಾರ್ಮಿಕ ಕ್ಷೇತ್ರವಾದ ಭಜನೆಯಲ್ಲಿ ಸ್ಪರ್ಧೆಯನ್ನು ಆಯೋಜಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಇದರಿಂದ ಯುವಜನತೆಯನ್ನು ಭಜನೆಯತ್ತ ಆಕರ್ಷಿಸುವುದರೊಂದಿಗೆ ಭಜನೆಯ ಮಹತ್ವವನ್ನು ಎಲ್ಲೆಡೆ ಪಸರಿಸುವ ಆರೋಗ್ಯಕರ ಬೆಳವಣಿಗೆಯೂ ಮೂಡಿಸಿದಂತಾಗುತ್ತದೆ” ಎಂದು ನುಡಿದರು. ಮತ್ತೋರ್ವ ಮುಖ್ಯ ಅತಿಥಿ ಪ್ರಮೋದ್ ರೈ ಪಳಜೆ ಅವರು ಮಾತನಾಡಿ “ಭಜನಾ ಸ್ಪರ್ಧೆಗಳನ್ನು ಕಳೆದ ಹನ್ನೊಂದು ವರ್ಷಗಳಿಂದ ಪೆರ್ಡೂರಿನಲ್ಲಿ ನಡೆಸುತ್ತಿದ್ದು, ಈ ಸ್ಪರ್ಧೆಯು ಇಂದು ಜಿಲ್ಲಾ ಕೇಂದ್ರದಲ್ಲಿ ಜರಗುತ್ತಿದೆ. ಮುಂದೆ ರಾಜ್ಯಮಟ್ಟದ ಸ್ಪರ್ಧೆ ಆಯೋಜಿಸುವುದರ ಮೂಲಕ ಉಡುಪಿಯ…

Read More

ಬೈಂದೂರು : ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ‘ಲಾವಣ್ಯ’ದ ‘ರಂಗಪಂಚಮಿ-2024’ ಐದು ದಿನಗಳ ನಾಟಕೋತ್ಸವದ ನಾಲ್ಕನೇ ದಿನದ ಕಾರ್ಯಕ್ರಮವು ದಿನಾಂಕ 05-03-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಶುಭಾಶಂಸನೆಗೈದ ಖ್ಯಾತ ರಂಗ ನಿರ್ದೇಶಕ ಡಾ. ಜೀವನ್‌ರಾಂ ಸುಳ್ಯ “ಅಭಿವೃದ್ಧಿಯ ನೆಪದಲ್ಲಿ ಜಲ, ವಾಯು, ಭೂಮಿಯ ಮೇಲೆ ಜನರು ಪ್ರಹಾರ ಮಾಡುತ್ತಿದ್ದು, ಆ ಮೂಲಕ ನಮ್ಮೊಳಗಿನ ಸಂಬಂಧಗಳು ಬೇರ್ಪಡುತ್ತಾ ಹೋಗುತ್ತಿದೆ. ಆದರೆ ರಂಗಭೂಮಿಯ ಮೂಲಕ ‘ಲಾವಣ್ಯ’ವು ಸಂಬಂಧವನ್ನು ಗಟ್ಟಿಮಾಡುವ ಪ್ರಯತ್ನ ಮಾಡುತ್ತಿದೆ. ಕಲಾವಿದರು ದೇಶದ ಸಾಂಸ್ಕೃತಿಕ ಸ್ವತ್ತಾಗಿದ್ದು, ಒಂದು ಊರಿನಲ್ಲಿ ಕಲಾವಿದರ ಸಂಖ್ಯೆ ಗರಿಷ್ಠವಾಗಿದ್ದರೆ ಅದು ಶ್ರೀಮಂತವಾದ ಊರಾಗಿರುತ್ತದೆ. ಕಳೆದ 46 ವರ್ಷಗಳಿಂದ ಹಲವು ತ್ರಾಸದಾಯಕ ಪರಿಸ್ಥಿತಿಯನ್ನು ಎದುರಿಸಿಯೂ, ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೇ, ಪರಸ್ಪರ ವಿಶ್ವಾಸದಿಂದ ಮುನ್ನೆಡೆದುಕೊಂಡು ಹೋಗುತ್ತಿರುವುದಲ್ಲದೇ, ಈ ಭಾಗದ ಜನರಿಗೆ ಮನೋರಂಜನೆಯೊಂದಿಗೆ ಉತ್ತಮ ಸಂದೇಶ ನೀಡುವ ಕೆಲಸ ಮಾಡುತ್ತಿದೆ” ಎಂದು ಶ್ಲಾಘಿಸಿದರು. ‘ಲಾವಣ್ಯ’ದ ಹಿರಿಯ ಸದಸ್ಯ ಸದಾಶಿವ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಂಚೆ ಸೇವಕ ಶಂಕರ ನಾಯ್ಕ್ ಹಾಗೂ ಚಲನಚಿತ್ರ…

Read More

ಸೋಮವಾರಪೇಟೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಆಯೋಜಿಸಿರುವ 3 ದಿನಗಳ ‘ಮಕ್ಕಳ ಸಾಹಿತ್ಯ ಸಂಭ್ರಮ’ ದಿನಾಂಕ 04-03-2024 ರಂದು ಸೋಮವಾರಪೇಟೆಯ ಚನ್ನಬಸಪ್ಪ ಸಭಾಂಗಣದಲ್ಲಿ ಉದ್ಘಾಟಣೆಗೊಂಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಮಾತನಾಡಿ “ಮಕ್ಕಳಲ್ಲಿ ಸುಪ್ತವಾಗಿರುವ ಕಲಾ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಇದೊಂದು ಕಲಿಕೆಗೆ ಪೂರಕ ಕಾರ್ಯಕ್ರಮವಾಗಿದೆ. ಮಕ್ಕಳಿಗೆ ಪಠ್ಯದೊಂದಿಗೆ ಪತ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹ ನೀಡಬೇಕಾಗಿದೆ. ಚಿಕ್ಕಂದಿನಿಂದಲೇ ಮಕ್ಕಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು.” ಎಂದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯರಾದ ಸೌಭಾಗ್ಯ ಬೇಲೂರು ಮಾತನಾಡಿ “ಸಾಹಿತ್ಯಾಭಿರುಚಿಯನ್ನು ಬೆಳೆಸಿ ಮಕ್ಕಳನ್ನು ಗ್ರಂಥಾಲಯದ ಕಡೆಗೆ ಸೆಳೆಯುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಮುಂದಿನ ವರ್ಷ ರಾಜ್ಯದ ಎಲ್ಲಾ ತಾಲೂಕುಗಳಲ್ಲಿಯೂ ಈ ಕಾರ್ಯಕ್ರಮ ನಡೆಯಲಿದೆ.” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿ. ಇ. ಒ. ಭಾಗ್ಯಮ್ಮ, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ…

Read More

ಶಿರ್ವ : ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಐದನೆಯ ಸಾಹಿತ್ಯ ಸಮ್ಮೇಳನದ ಸವಿನೆನಪಿನ ಸ್ಮರಣ ಸಂಚಿಕೆ ‘ಕಡಲು’ ಇದರ ಲೋಕಾರ್ಪಣೆ ಸಮಾರಂಭವು ದಿನಾಂಕ 01-03-2024ರಂದು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ “ಕನ್ನಡ ಪರಿಶುದ್ಧವಾದ ಶ್ರೀಮಂತ ಭಾಷೆಯಾಗಿದ್ದು, ಬರೆದ ಹಾಗೆಯೇ ಓದುವ ಭಾಷೆಯಾಗಿದೆ. ಅಲ್ಪಪ್ರಾಣ, ಮಹಾಪ್ರಾಣದಲ್ಲಿ ವ್ಯತ್ಯಾಸ ಆದರೂ ಬೇರೆಯೇ ಅರ್ಥವನ್ನು ಕೊಡುತ್ತದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಹಾಗೂ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕು.” ಎಂದು ನುಡಿದರು. ಕಸಾಪ ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ “ಹೊಸ ತಾಲೂಕುಗಳ ರಚನೆಯ ಬಳಿಕ ಸತತ ಐದು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ರಾಜ್ಯದ ಏಕೈಕ ತಾಲೂಕು ಕಾಪು ಆಗಿದ್ದು, ವೈಶಿಷ್ಟ್ಯಪೂರ್ಣ ಕಾಲಮಿತಿಯ ಸಾಹಿತ್ಯ ಚಟುವಟಿಕೆಗಳು ಜಿಲ್ಲೆಗೆ ಮಾದರಿಯಾಗಿದೆ.” ಎಂದು ಹೇಳಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಐದನೆಯ…

Read More