Author: roovari

ಡಾ. ಶ್ರೀವಿದ್ಯಾ ಮುರಳೀಧರ್ ಭರತನೃತ್ಯದಲ್ಲಿ ಖ್ಯಾತಿವೆತ್ತ ಕಲಾವಿದೆ. ಕಲೆ ಅವರಿಗೆ ಪರಂಪರಾಗತವಾಗಿ ಬಂದ ಆಸ್ತಿ. ತಂದೆ ಶ್ರೀ ಕೆ. ರಾಮನ್ ಹಾಗೂ ಮಾತೃಶ್ರೀ ಶ್ರೀಮತಿ ಶಾರದಾ ರಾಮನ್ ಕಲೆಯಲ್ಲಿ ಅತಿಯಾದ ಆಸಕ್ತಿಯಿಂದ, ಮಗಳನ್ನು ಮೂರನೆಯ ವಯಸ್ಸಿನಲ್ಲಿಯೇ ಪಂದನಲ್ಲೂರು ಶೈಲಿಯ ಭರತ ನೃತ್ಯ ಕಲಿಕೆಗೆ ಗೆಜ್ಜೆ ಕಟ್ಟಿಸಿದರು. ಪ್ರಥಮ ಗುರು ಅಂಬಳೆ ರಾಜೇಶ್ವರಿ ಸುಬ್ಬರಾವ್ ಇವರು. ಬಳಿಕ ಗೆಜ್ಜೆಯ ಹೆಜ್ಜೆಗೆ ನಾದ ತುಂಬಿದವರು ನಾಟ್ಯಾಚಾರ್ಯ ಶ್ರೀ ಕೆ. ಮುರಳೀಧರ ರಾಯರು. 1986ರಲ್ಲಿ ಮೈಸೂರಿನ ಭಾರತೀಯ ಸಂಗೀತ ಸಭಾದವರು ನಡೆಸಿದ ರಾಜ್ಯಮಟ್ಟದ ಭರತನೃತ್ಯ ಸ್ಪರ್ಧೆಯಲ್ಲಿ ಮೊದಲಿಗರಾಗಿ, ಮಹಾರಾಜಾ ಶ್ರೀ ಶ್ರೀಕಂಠದತ್ತ ಒಡೆಯರ್ ಅವರಿಂದ ಚಿನ್ನದ ಪದಕ ಪಡೆದಾಗ ಶ್ರೀವಿದ್ಯಾ ಇನ್ನೂ ಎಂಟರ ಹರೆಯದ ಬಾಲೆ. ಆ ಮೇಲಿನ ಎರಡು ವರ್ಷಗಳಲ್ಲಿ ಇಂಡಿಯನ್ ಫಿಲಂ ಅಂಡ್ ಟಿವಿ ಇನ್ಸ್ಟಿಟ್ಯೂಟ್ ನವರು ನಡೆಸಿದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಪಡೆದ ಈ ಪ್ರತಿಭಾವಂತೆ ವಿದ್ಯುಕ್ತವಾಗಿ ರಂಗ ಪ್ರವೇಶ ಮಾಡಿದ್ದು ಮಡಿಕೇರಿಯ…

Read More

ಒಂದು ಕಾಲವಿತ್ತು. ಮಹಿಳೆಯರು ಏನಿದ್ದರೂ ಮನೆಯ ಒಳಗೆ, ಮನೆವಾರ್ತೆ ಮಾಡುವುದಕ್ಕಷ್ಟೇ ಸೀಮಿತ ಎಂಬ ಧೋರಣೆ ಇತ್ತು. ಆದರೆ ಈಗ ಹಾಗಲ್ಲ. ಮಹಿಳೆಯರು ಮನೆಯ ಹೊರಗೂ ಏನೇನೆಲ್ಲಾ ಸಾಧನೆಗಳನ್ನು ಮಾಡಬಹುದೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅಂಥವರಲ್ಲಿ ಬಹುಮುಖ ಪ್ರತಿಭಾ ಸಂಪನ್ನರಾಗಿ ಸಾಧನೆಯ ಶಿಖರದತ್ತ ಏರುತ್ತಿರುವ ಶ್ರೀಮತಿ ವಿದುಷಿ ಸುಮಂಗಲಾ ರತ್ನಾಕರರನ್ನು ಹೆಸರಿಸಲೇಬೇಕು. ಸಂಸ್ಕಾರವಂತ ಮನೆತನದಲ್ಲಿ ಜನಿಸಿ, ಹಾಗೆಯೇ ಸಂಸ್ಕಾರವಂತ ಮನೆತನದ ಸೊಸೆಯಾಗಿ, ಹೆತ್ತವರ ಹಾಗೂ ತನ್ನ ಪತಿ, ಅತ್ತೆ, ಮಾವಂದಿರ ಪೂರ್ಣ ಪ್ರೋತ್ಸಾಹ, ಸಹಾಯ, ಬೆಂಬಲದಿಂದ ಓರ್ವ ಕಲಾ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ ಸುಮಂಗಲಾ ರತ್ನಾಕರ್. ಇವರು ಕಲೆಯನ್ನು ಆರಾಧಿಸುವ ಮನೋಭಾವ ಉಳ್ಳವರಾಗಿದ್ದುದರಿಂದಲೇ ತಾನು ಮೂವತ್ತು ವರುಷಗಳ ಹಿಂದೆ ಪ್ರಾರಂಭಿಸಿದಂತಹ ನೃತ್ಯ ತರಬೇತಿ ಕೇಂದ್ರಕ್ಕೆ ‘ನಾಟ್ಯಾರಾಧನಾ ಕಲಾಕೇಂದ್ರ’ ಎಂದು ನಾಮಕರಣ ಮಾಡಿರುತ್ತಾರೆ. ಇವರು ಕೇವಲ ಭರತನಾಟ್ಯ ಕಲಾವಿದೆ ಮಾತ್ರವಲ್ಲ. ಯಕ್ಷಗಾನ ಕಲಾವಿದೆಯೂ ಆಗಿ ಸಾಧನೆ ಮಾಡಿದ್ದಾರೆ. ‘ಯಕ್ಷಾರಾಧನಾ ಕಲಾಕೇಂದ್ರ’ ಸ್ಥಾಪನೆ ಮಾಡಿ ಕಳೆದ ಹದಿನೈದು ವರ್ಷಗಳಿಂದ ಮಕ್ಕಳಿಗೆ, ಮಹಿಳೆಯರಿಗೆ ಯಕ್ಷಗಾನದಲ್ಲಿ ತರಬೇತಿ ನೀಡುವ ‘ಯಕ್ಷಗುರು’ ಎಂದೆನಿಸಿಕೊಂಡಿದ್ದಾರೆ.…

Read More

ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ ಅವರು ಹುಟ್ಟಿದ್ದು ಬೆಂಗಳೂರು ಆದರೂ ಅವರ ಹಿರಿಯರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಗಲವಾಡಿಗೆ ಸೇರಿದವರು. ತಂದೆ ಶ್ರೀ ವೈ.ಕೆ. ಕೇಶವಮೂರ್ತಿಯವರು, ಆಗಿನ ಮೈಸೂರು ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದವರು. ತಾಯಿ ಅಂಬಾಬಾಯಿ. ಸಂಪ್ರದಾಯಸ್ಥ ಕುಟುಂಬವಾದರೂ, ಆಧುನಿಕ ಮನೋಭಾವದ ಮನೆತನ. ತಂದೆ-ತಾಯಿಯರಿಂದ ದೊರೆತ ಸಂಸ್ಕಾರ ಅವರಿಗೆ ಸಾಹಿತ್ಯ-ಕಲೆಗಳಲ್ಲಿ ಆಸಕ್ತಿಯನ್ನು ಮೂಡಿಸಿತ್ತು. ಬಾಲಕಿಯಾಗಿದ್ದಾಗಲೇ ತಮ್ಮ ಪ್ರೌಢ ಶಾಲಾ ದಿನಗಳಲ್ಲಿಯೇ ಸಂಧ್ಯಾ ನಾಟಕವನ್ನು ಬರೆದಿದ್ದರು. ಆಗ ಅವರಿಗೆ ದೊರೆತ ಪ್ರೋತ್ಸಾಹದಿಂದ ಶಾಲಾ-ಕಾಲೇಜುಗಳ ದಿನಗಳಲ್ಲಿಯೇ ಓದಿನ ಜೊತೆಗೆ ಸಾಹಿತ್ಯದ ಓದು ಹಾಗೂ ಬರವಣಿಗೆ ಹವ್ಯಾಸವಾಯಿತು. ಮುಂದೆ ಸಂಧ್ಯಾ ಅವರು ಪದವಿಗೆ ಬಂದಾಗ ಕನ್ನಡ ಸಾಹಿತ್ಯದ ವಿದ್ಯಾರ್ಥಿನಿಯಾಗಿ ಕನ್ನಡ ಬಿ.ಎ. ಆನರ್ಸ್, ಕನ್ನಡ ಎಂ.ಎ. ಪದವಿಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಪದವಿಯನ್ನು ಪಡೆದುಕೊಂಡರು. ಜೊತೆ ಜೊತೆಗೆ ಸಾಹಿತ್ಯ ಕೃಷಿಯೂ ಸಾಗಿತ್ತು. ಸಾಹಿತ್ಯಕ್ಕೆ ಸಂಬಂಧಿಸಿದ ಉದ್ಯೋಗಗಳಲ್ಲೇ ಆಸಕ್ತಿ ತೋರಿದ ಸಂಧ್ಯಾ ಅವರು ಪ್ರಜಾಮತ, ಪ್ರಜಾಪ್ರಭುತ್ವ, ಇಂಚರ…

Read More

ಪುತ್ತೂರು : ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿ ಅರ್ಪಿಸುವ ವಾರ್ಷಿಕ ರಾಷ್ಟ್ರೀಯ ನೃತ್ಯೋತ್ಸವ ‘ನರ್ತನಾವರ್ತನಾ’ ದಿನಾಂಕ 03-03-2024 ರಂದು ಪುತ್ತೂರಿನ ಜೈನ ಭವನದಲ್ಲಿ ಸಂಜೆ ಘಂಟೆ 5.00 ರಿಂದ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಶಾಂತಲಾ ನೃತ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ದೀಪ ಪ್ರಜ್ವಲನೆಗೈದು ಶುಭಹಾರೈಸಿದರು. ಇದೇ ವೇದಿಕೆಯಲ್ಲಿ ಪುತ್ತೂರಿನ ಡಾ. ಹರಿಕೃಷ್ಣ ಪಾಣಾಜೆ ಇವರಿಗೆ ಈ ಸಾಲಿನ ‘ಕಲಾಶ್ರಯ’ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪುತ್ತೂರಿನ ಪ್ರಖ್ಯಾತ ವೈದ್ಯ, ಎಸ್. ಡಿ. ಪಿ. ರೆಮಿಡೀಸ್ ಎಂಡ್ ರಿಸರ್ಚ್ ಸೆಂಟರ್ ಇದರ ಆಡಳಿತ ನಿರ್ದೇಶಕ ಹಾಗೂ ಪುತ್ತೂರಿನಲ್ಲಿ ತನ್ನದೇ ಪರಿಕಲ್ಪನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ ಹಾಗೂ ಯಕ್ಷಗಾನವನ್ನೊಳಗೊಂಡ 3 ದಿನಗಳ ವಿಶಿಷ್ಟ ‘ಕಲೋಪಾಸನಾ’ ನೃತ್ಯೋತ್ಸವವನ್ನು ಕಳೆದ 20 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಹಾಗೂ ಕಲಾಪೋಷಕರಾದ ಇವರ ಕಲಾ ಪೋಷಣೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಅಭ್ಯಾಗತರಾಗಿ ಆಗಮಿಸಿದ ಶ್ರೀಮತಿ ಸುಧಾ ಶ್ರೀಪತಿ ರಾವ್ ಕಾರ್ಯಕ್ರಮಕ್ಕೆ…

Read More

ಡಾ. ಟಿ.ಎಸ್. ಸತ್ಯವತಿ ಇವರ ಹೆಸರು ಕರ್ನಾಟಕ ಕಂಡ ಪ್ರಚಂಡ ಪಾಂಡಿತ್ಯ ಮತ್ತು ವಾಗ್ವಿಲಾಸವುಳ್ಳ ಮಹಿಳೆ. ಸಂಸ್ಕೃತ ಮತ್ತು ಕರ್ನಾಟಕ ಸಂಗೀತ ಇವರ ಇಡಾ-ಪಿಂಗಳ ನಾಡಿಗಳಂತೆ. ಹುಟ್ಟಿದಾರಭ್ಯ ವಾಗೀಶ್ವರಿಯ ಕೃಪೆ ಇವರಿಗೆ. ಕೇವಲ ಎರಡು ವರ್ಷದ ಬಾಲಕಿಯಾಗಿದ್ದಾಗಲೇ ಸತ್ಯವತಿಯವರು ಮೈಸೂರು ಮಹಾರಾಣಿಯವರ ಎದುರು ಹಾಡಿ ಪ್ರಶಂಸೆ ಪಡೆದವರು. ಕುಶಾಗ್ರಮತಿ, ವಿವೇಕಶೀಲೆ, ವಿನಯ ಸಂಪನ್ನೆ, ಏಕ ಸಂಧಿಗ್ರಾಹಿ, ಸಂಸ್ಕೃತ ಮತ್ತು ಕರ್ನಾಟಕ ಸಂಗೀತದಲ್ಲಿ ಪ್ರಗಲ್ಭ ಪಾಂಡಿತ್ಯ ಸಾಧಿಸಿದ ಕರ್ನಾಟಕದ ಹೆಮ್ಮೆಯ ವಿದುಷಿ ಸತ್ಯವತಿ. ಸಂಸ್ಕೃತದ ಸಾಹಿತ್ಯ, ಕಾವ್ಯಗಳ ಮೇಲೆ ಅಸಾಧಾರಣ ಹಿಡಿತ. ಸಂಗೀತದ ಲಕ್ಷ್ಯ ಲಕ್ಷಣಗಳೆರಡರಲ್ಲೂ ಸಾಟಿಯೇ ಇಲ್ಲದಷ್ಟು ಪ್ರತಿಭೆ. ವೇದಿಕೆ ಹತ್ತಿ ನಿಂತರೆ ಸಾಕು ಕನ್ನಡವೋ, ಸಂಸ್ಕೃತವೋ, ಇಂಗ್ಲೀಷೋ… ಅವುಗಳ ವಾಗ್ಝರಿ, ಆಯ್ಕೆಯ ಪದಗಳು, ಆತ್ಮವಿಶ್ವಾಸದ ಮಾತುಗಳು…., ಸ್ಪಟಿಕದಷ್ಟು ಶುದ್ಧವಾದ ಭಾಷಾ ಲಾಲಿತ್ಯವನ್ನು ತನ್ನ ಶ್ರೀಮಂತ ಕಂಠದಲ್ಲಿ, ಸ್ಪಷ್ಟ ಉಚ್ಚಾರದೊಂದಿಗೆ ಬೆರೆಸುವ ಅವರ ಅಸ್ಖಲಿತ ಕನ್ನಡದ ಮೇಲಿನ ವಿದ್ವತ್‌ ಪೂರ್ಣ ಪ್ರಭುತ್ವಕ್ಕೆ ನಿಬ್ಬೆರಗಾಗದ ಶ್ರೋತೃವಿಲ್ಲ. ಅವರ ಕುಟುಂಬವೇ ಪ್ರತಿಭಾವಂತರ ಸಂಸಾರ. ತಂದೆ…

Read More

ಬೆಂಗಳೂರಿನ ಖ್ಯಾತ ‘ಸಾಧನ ಸಂಗಮ’ ನೃತ್ಯಸಂಸ್ಥೆ ಎರಡು ದಿನಗಳ ಕಾಲ ನಡೆಸಿದ ‘ಯುಗಳ’ ಮತ್ತು ‘ಬಹುಳ’ ನೃತ್ಯೋತ್ಸವಗಳು ವರ್ಣರಂಜಿತವಾಗಿ ನೆರೆದ ಕಲಾರಸಿಕರ ಮನರಂಜಿಸಿತು. ‘ಯುಗಳ’ದಲ್ಲಿ ಹಲವು ಜೋಡಿ ಕಲಾವಿದೆಯರ ಪ್ರತಿಭಾ ಪ್ರದರ್ಶನ ಕಣ್ತುಂಬಿದರೆ, ‘ಬಹುಳ’ ಕಾರ್ಯಕ್ರಮದಲ್ಲಿ ಶೀರ್ಷಿಕೆಯೇ ಸೂಚಿಸುವಂತೆ ಬಹು ಕಲಾವಿದರ ತಂಡ ಅರ್ಪಿಸುವ ಎರಡು ನೃತ್ಯರೂಪಕಗಳಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ಸಂಸ್ಥೆ, ಪ್ರತಿವರ್ಷ ತಪ್ಪದೆ ನಡೆಸಿಕೊಂಡು ಬರುತ್ತಿರುವ ನೃತ್ಯೋತ್ಸವಗಳಲ್ಲಿ ‘ಸಾಧನ ಸಂಗಮ’ದ ಆಶ್ರಯದಲ್ಲಿ ನಾಡಿನ ಬಹುತೇಕ ನೃತ್ಯತಂಡಗಳು ಈ ತಮ್ಮ ಕಲಾನೈಪುಣ್ಯವನ್ನು ಪ್ರದರ್ಶಿಸಿ, ಜನಮೆಚ್ಚುಗೆ ಗಳಿಸಿವೆ ಅಷ್ಟೇ ಅಲ್ಲದೆ ಇದರಲ್ಲಿ ಭಾಗವಹಿಸುವುದು ಒಂದು ಪ್ರತಿಷ್ಠೆಯ ಸಂಗತಿಯೂ ಆಗಿದೆ. ಇತ್ತೀಚೆಗೆ ಬೆಂಗಳೂರಿನ ‘ರಂಗೋಪನಿಷತ್’ ಸಭಾಂಗಣದಲ್ಲಿ ಸಾಧನ ಸಂಗಮದ ‘ನಾಟ್ಯ ನಿಪುಣ’ ಹಿರಿಯ ಶಿಷ್ಯೆಯರ ತಂಡ ಅಭಿನಯಿಸಿದ ಮಹಾಭಾರತದ ಒಂದು ಪ್ರಮುಖ ಸನ್ನಿವೇಶದ ಸುತ್ತ ಹೆಣೆದ ರಸವತ್ತಾದ ‘ಪ್ರೇಕ್ಷಾಗೃಹ’- ಮನೋಜ್ಞ ನೃತ್ಯರೂಪಕ ಮನರಂಜನೆಯೊಡನೆ ಗಾಢ ಪರಿಣಾಮ ಬೀರಿತು. ದೇವಲೋಕಕ್ಕೆ ಆಗಮಿಸಿದ್ದ ಸುಂದರಾಂಗ ಅರ್ಜುನನನ್ನು ಕಂಡು ಊರ್ವಶಿ, ಅವನಲ್ಲಿ ಮೋಹಗೊಂಡಾಗ, ಅದನ್ನವನು, ನಿರಾಕರಿಸಿ ಅವಳಿಂದ ಶಾಪಗ್ರಸ್ತನಾಗಿ…

Read More

ಮಂಗಳೂರು: ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಸಂಗೀತ ವಿದ್ಯಾರ್ಥಿಗಳು ಮತ್ತು ಸಂಗೀ ತಾಸಕ್ತರಿಗಾಗಿ ‘ದಾಸ ನಮನ’ ಸಂಗೀತ ಕಾರ್ಯಾಗಾರ ದಿನಾಂಕ 09-03-2024 ರಂದು ಆಯೋಜಿಸಲಾಗಿದೆ. ಮಂಗಳೂರು ವಿ.ಟಿ ರಸ್ತೆಯಲ್ಲಿರುವ ಶ್ರೀಕೃಷ್ಣ ಮಂದಿರ ಸಭಾಂಗಣದಲ್ಲಿ ಸಂಜೆ ಘಂಟೆ 4.00ರಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ಮಲ್ಲಿಕಾರ್ಜುನ ಸಂಶಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಲಿರುವರು. ಕಾರ್ಯಾಗಾರದಲ್ಲಿ ಶುಲ್ಕರಹಿತವಾಗಿ ಹೆಸರು ನೋಂದಾಯಿಸಿಕೊಳ್ಳಲು 9886914748 ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Read More

ಮಂಗಳೂರು : ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಬಂಟಮಲೆ ಅಕಾಡೆಮಿ (ರಿ) ಗುತ್ತಿಗಾರು ಸುಳ್ಯ ಇವರ ವತಿಯಿಂದ ಪುಸ್ತಕ ಬಿಡುಗಡೆ ಹಾಗೂ ‘ಕುವೆಂಪು ಬಂಟಮಲೆ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 09-03-2024ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ. ಹರಿಪ್ರಸಾದ್ ಇವರು ವಹಿಸಲಿದ್ದು, ಸಾಹಿತಿ ಪಾರ್ವತೀಶ ಬಿಳಿದಾಳೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕಲ್ಲೆ ಶಿವೋತ್ತಮ ರಾವ್ ಇವರ ‘ಬದುಕು ಹಾಗೂ ಕೊಡುಗೆ’ ಬಗ್ಗೆ ಬರಹಗಾರರಾದ ಡಾ. ಪುರುಷೋತ್ತಮ ಬಿಳಿಮಲೆ ಹಾಗೂ ‘ಬಂಟಮಲೆ ಅಕಾಡೆಮಿ ಹಾಗೂ ಪ್ರಶಸ್ತಿ’ ಕುರಿತು ನಾಟಕಕಾರರು ಹಾಗೂ ಸಾಮಾಜಿಕ ಚಿಂತಕರಾದ ಎ.ಕೆ. ಹಿಮಕರ ಇವರು ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಲ್ಲೆ ಶಿವೋತ್ತಮ ರಾವ್ ಇವರಿಗೆ ‘ಕುವೆಂಪು ಬಂಟಮಲೆ ಪ್ರಶಸ್ತಿ’ಯನ್ನು ಪುತ್ತೂರಿನ ಖ್ಯಾತ ಶಿಕ್ಷಣ ತಜ್ಞರಾದ ಡಾ. ಎನ್. ಸುಕುಮಾರ ಗೌಡ ಇವರು ಪ್ರದಾನ ಮಾಡಿ ಸನ್ಮಾನಿಸಲಿದ್ದಾರೆ ಹಾಗೂ ಕಲ್ಲೆ ಶಿವೋತ್ತಮ ರಾವ್ ಇವರ…

Read More

ನವ್ಯ ಕತೆಗಳು ತರುಣ ಜನಾಂಗದವರಲ್ಲಿ ಜನಪ್ರಿಯವಾಗುತ್ತಾ ಹೋಗಿದ್ದ ಕಾಲ. ಅನಂತಮೂರ್ತಿ, ಯಶವಂತ ಚಿತ್ತಾಲ, ಲಂಕೇಶರು ಆಗಲೇ ಉತ್ತಮ ಕತೆಗಾರರೆಂದು ಗುರುತಿಸಿಕೊಂಡಿದ್ದರು. ನವ್ಯ ಕತೆಗಳ ಹಾದಿಯು ಹೆಚ್ಚು ಕಡಿಮೆ ಸ್ಪಷ್ಟವಾಗಿತ್ತು. ವಸ್ತು, ತಂತ್ರ, ವೈಚಾರಿಕತೆ ಮತ್ತು ಶೈಲಿಗೆ ಖಚಿತ ರೂಪ ಬಂದಿತ್ತು. ತಕ್ಕಮಟ್ಟಿಗಿನ ಪ್ರಬುದ್ಧತೆಯನ್ನೂ ಸಾಧಿಸಿಕೊಂಡಿತ್ತು. ತಾವು ಅರ್ಥಮಾಡಿಕೊಂಡಿದ್ದ ರೀತಿಯಲ್ಲಿ ನವ್ಯಕತೆಗಳ ಸಂಪ್ರದಾಯವನ್ನು ಮುಂದುವರಿಸಿದ್ದ ಶ್ರೀಕೃಷ್ಣ ಆಲನಹಳ್ಳಿ, ಆರ್ಯ ಮೊದಲಾದವರು ಕತೆಯ ವೈಲಕ್ಷಣ್ಯಗಳಿಗೆ ಸ್ಥಿರತೆಯನ್ನು ತಂದುಕೊಟ್ಟಿದ್ದರೂ ವಸ್ತು ಮತ್ತು ತಂತ್ರಗಳಲ್ಲಿ ಹೊಸ ಸಾಧ್ಯತೆಗಳು ಹುಟ್ಟಿಕೊಂಡಿರಲಿಲ್ಲ. ನವ್ಯ ಮತ್ತು ಈ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ.ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ- ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ.…

Read More

ಮಂಗಳೂರು : ‘ಪಯಣ ಬೆಂಗಳೂರು’ ತಂಡವು ಸಮಾನತೆಯೆಡೆಗೆ ಎಂಬ ಶೀರ್ಷಿಕೆಯಲ್ಲಿ ಅಭಿನಯಿಸಿದ ನಾಟಕ ‘ತಲ್ಕಿ’. ಈ ನಾಟಕದ 9ನೇ ಪ್ರಯೋಗ ದಿನಾಂಕ 05-03-2024ರ ಮಂಗಳವಾರ ಸಂಜೆ ಮಂಗಳೂರಿನ ಸಂತ ಅಲೋಷಿಯಸ್‌ ಕಾಲೇಜಿನಲ್ಲಿ ಪ್ರದರ್ಶನಗೊಂಡಿತು. ಆಯನ ನಾಟಕದ ಮನೆ ಆಯೋಜಿಸಿದ್ದ ಎರಡು ದಿನದ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ಈ ನಾಟಕದ ಎಲ್ಲಾ ಪಾತ್ರಧಾರಿಗಳು ತೃತೀಯ ಲಿಂಗಿಗಳೇ. ಅದೂ 55 ವರ್ಷ ದಾಟಿದವರು. ಇದು ಯಾವುದೇ ಕಥೆಯನ್ನು ಆಧರಿಸಿದ ನಾಟಕವಾಗಿರದೆ ಅವರ ಬದುಕಿನ ಕಥೆಯನ್ನೇ, ಅವರು ಬಾಲ್ಯದಲ್ಲಿ ಕಂಡ ಕನಸುಗಳನ್ನೇ ನಾಟಕವಾಗಿಸಿದ ಈ ನಾಟಕ. ಅವರ ವಿಶಿಷ್ಟ ಖಾದ್ಯವಾದ ‘ತಲ್ಕಿ’ ಎಂಬ ಹೆಸರಿನಿಂದ ರೂಪುಗೊಂಡ ಈ ನಾಟಕ, ಅವರ ಬದುಕಿನ ತೊಳಲಾಟಗಳು, ಅವರೊಳಗೆ ಒಬ್ಬರು ಇನ್ನೊಬ್ಬರನ್ನು ಹೇಗೆ ಸಂಬೋಧಿಸುತ್ತಾರೆ, ಅವರ ಬದುಕಿನಲ್ಲಿರುವ ಆಚಾರ ವಿಚಾರಗಳು, ಅವರ ಪ್ರೀತಿ, ಪ್ರೇಮ, ನೋವು, ನಲಿವು, ಬದುಕಬೇಕೆಂಬ ಆಸೆ ಮತ್ತು ಅವರ ಕುಟುಂಬ ಅವರನ್ನು ನಡೆಸಿಕೊಂಡ ರೀತಿ ಇದೆಲ್ಲವನ್ನೂ ಒಂದು ಕಥೆಯಾಗಿ ಹೇಳಿಕೊಳ್ಳುತ್ತಾ ಸಾಗುತ್ತದೆ. 55 ವರ್ಷ ದಾಟಿದ ಈ…

Read More