Author: roovari

ಉಡುಪಿ : ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು (ರಿ.) ಉಡುಪಿ ಮತ್ತು ತಾಲ್ಲೂರು ತೋರಣ ಯೋಜನೆಯ ಭಾಗವಾದ ‘ಕರಾವಳಿ ಕಟ್ಟು’ ಇವರ ಆಶ್ರಯದಲ್ಲಿ ‘ನಿರ್ದಿಂಗತ’ ರಂಗ ತಂಡದಿಂದ ಕಥೆ, ಕವನ, ಕಾದಂಬರಿ, ನಾಟಕ ಹಾಗೂ ರಂಗರೂಪಕ ‘ಗಾಯಗಳು’ ಇದರ ಪ್ರದರ್ಶನ ದಿನಾಂಕ 23-09-2023ರ ಶನಿವಾರ ಸಂಜೆ ಗಂಟೆ 6.30ಕ್ಕೆ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಡಾ. ಶ್ರೀಪಾದ್ ಭಟ್ ನಿರ್ದೇಶನದ ಈ ನಾಟಕಕ್ಕೆ ಶ್ವೇತಾ ರಾಣಿ ಸಹ ನಿರ್ದೇಶಕಿಯಾಗಿ ಸಹಕರಿಸಿದ್ದಾರೆ. ನಾಟಕದ ಕುರಿತು : ಇಡೀಯ ಜಗತ್ತು ಯುದ್ಧೋನ್ಮದದಲ್ಲಿ ನರಳುತ್ತಿದೆ. ರಾಜಕಾರಣಿಗಳ, ಧರ್ಮ ಗುರುಗಳ ಮಾರುಕಟ್ಟೆಯ ದಲ್ಲಾಳಿಗಳ ಕೈಗಳು ಲೇಡಿ ಮ್ಯಾಕ್ ಬೆತ್ ನ ಕೈಗಳಂತೆ ಎಷ್ಟು ತೊಳೆದರೂ ತೊಡೆಯಲಾಗದ ರಕ್ತದ ಕಲೆಗಳಿಂದ ತೊಯ್ದಿದೆ. ಪುರುಷಾಹಂಕಾರದ ಈ ಗಾಯಗಳು ಮೇದಿನಿ ಮತ್ತು ಮಾನಿನಿಯರ ಕರುಳು ಕತ್ತರಿಸುತ್ತಿವೆ. ಮನುಷ್ಯರನ್ನೇ ವಿಭಜಿಸುವ ಮನುಷ್ಯತ್ವವನ್ನೇ ಅಣಕಿಸುವ ವರ್ಣಭೇದವಂತೂ ಇನ್ನೂ ಕ್ರೂರ. ಇವು ನಮಗೆ ನಾವೇ ಮಾಡಿಕೊಂಡ ಗಾಯಗಳು. ಇವುಗಳಿಗೆ ಮುಖಾಮುಖಿಯಾಗದೆ ನಮಗೆ ಬಿಡುಗಡೆ…

Read More

ಬೆಂಗಳೂರು : ಚಿತ್ಪಾವನ ಮಹಿಳಾ ಯಕ್ಷಗಾನ ಮಂಡಳಿ (ರಿ.) ಬೆಂಗಳೂರು ಪ್ರಸ್ತುತಪಡಿಸುವ ‘ಕೃಷ್ಣ ಲೀಲೆ – ಕಂಸ ವಧೆ’ ಪ್ರಸಂಗದ ಯಕ್ಷಗಾನ ಬಯಲಾಟವು ದಿನಾಂಕ 02-10 2023ರ ಸಂಜೆ ಘಂಟೆ 6.00ಕ್ಕೆ ಬೆಂಗಳೂರಿನ ನಾಗರಬಾವಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಕಾಲೋನಿಯ ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಕಲಾಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಯೋಗೀಶ್ ಶರ್ಮಾ, ಮದ್ದಳೆಯಲ್ಲಿ ಶ್ರೀ ಪ್ರಕಾಶ ಗೋಗಟೆ, ಚಂಡೆಯಲ್ಲಿ ಶ್ರೀ ಅರ್ಜುನ್ ಕೊರ್ಡೇಲ್ ಹಾಗೂ ಚಕ್ರತಾಳದಲ್ಲಿ ಶ್ರೀ ಶಂಕರ ಜೋಯಿಸ ಭಾಗವಹಿಸಲಿದ್ದು, ಮುಮ್ಮೇಳದಲ್ಲಿ ಶೈಲಜಾ ಜೋಶಿ, ಶುಭಾ ಗೋರೆ, ಗಾಯತ್ರಿ ಗುರ್ಜರ್, ರಮ್ಯಾ ಸಹಸ್ರಬುದ್ಧೇ, ಭುವನಾ ಡೋಂಗ್ರೆ, ನಾಯನಾ ಭಿಡೆ, ಸೌಮ್ಯ ಪ್ರದೀಪ್, ವರ್ಷಾ ಖಾಡಿಲ್ಕರ್, ಪೂನಂ ಗೋಖಲೆ ಹಾಗೂ ಅನುಪಮಾ ಮರಾಠೆ ಭಾಗವಹಿಸಲಿದ್ದಾರೆ.

Read More

ಸುರತ್ಕಲ್ : ಸುರತ್ಕಲ್ ಗೋವಿಂದ ದಾಸ ಕಾಲೇಜು ಗ್ರಂಥಾಲಯ ವಿಭಾಗ, ಭಾಷಾ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ, ಕರಾವಳಿ ವಿಕೀಮೀಡಿಯಾ ಯೂಸರ್ ಗ್ರೂಪ್, ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿ ಬೆಂಗಳೂರು ಇದರ ಸಹಯೋಗದಲ್ಲಿ ಗೋವಿಂದ ದಾಸ ಕಾಲೇಜಿನಲ್ಲಿ ಎರಡು ದಿನಗಳ ರೀ ಲೈಸನ್ಸಿಂಗ್, ಡಿಜಿಟಲೈಸೇಷನ್ ಮತ್ತು ಅಪ್‍ಲೋಡಿಂಗ್ ಆನ್ ವಿಕಿ ಮೀಡಿಯ ಕಾರ್ಯಾಗಾರ ದಿನಾಂಕ 16-09-2023ರಂದು ಉದ್ಘಾಟನೆಗೊಂಡಿತು. ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಲೇಖಕ ಡಾ.ಎಂ.ಪ್ರಭಾಕರ ಜೋಷಿ “ಓದಿನ ವಿಸ್ತರಣೆಗೆ ಆಧುನಿಕ ತಂತ್ರಜ್ಞಾನದ ಮಾಧ್ಯಮ ಬಳಕೆ ಅನಿವಾರ್ಯವಾಗಿದ್ದು ವಿಕೀಪೀಡಿಯಾ ಈ ನಿಟ್ಟಿನಲ್ಲಿ ಉತ್ತಮಕಾರ್ಯ ನಿರ್ವಹಿಸುತ್ತಿದೆ.” ಎಂದು ನುಡಿದರು. ಈ ಕಾರ್ಯಗಾರದಲ್ಲಿ ಎಂ.ಪ್ರಭಾಕರ ಜೋಷಿಯವರ ಕೇದಗೆ ಪುಸ್ತಕವನ್ನು ಡಿಜಿಟಲೈಸೇಷನ್ ಮಾಡಿ ವಿಕಿ ಕಾಮನ್ಸ್‍ಗೇ ಅಪ್‍ಲೋಡ್ ಮಾಡಲಾಯಿತು. ಮುಂದಿನ ದಿನಗಳಲ್ಲಿ ಅವರ ಹದಿನೆಂಟು ಪುಸ್ತಕಗಳನ್ನು ಡಿಜಿಟಲೀಕರಣ ಮಾಡಿ ವಿಕಿ ಕಾಮನ್ಸ್‍ಗೆ ಅಪ್‍ಲೋಡ್ ಮಾಡಲು ಡಾ.ಎಂ ಪ್ರಭಾಕರ ಜೋಷಿ ಅವರು ಅನುಮತಿ ನೀಡಿದರು. ಪುಸ್ತಕಗಳ ಡಿಜಿಟಲೈಸೇಷನ್ ಮಾಡುವ ತರಬೇತಿಯನ್ನು ಸುಬೋಧ್ ಕುಲಕರ್ಣಿ ಹಾಗೂ ಸಂಜೀವ್…

Read More

ಬೆಂಗಳೂರು: ಒಂದು ಆದರ್ಶಕ್ಕೆ, ಒಂದು ವಿಷಯಕ್ಕೆ ನಮ್ಮನ್ನು ಸಮರ್ಪಿಸಿಕೊಂಡರೆ ಅವೇ ನಮ್ಮ ದಿನನಿತ್ಯದ ಹೆಚ್ಚಿನ ಭಾಗವಾಗಿರುತ್ತದೆ.ಅದರಲ್ಲೂ ಸಂಘಟನೆಗೆ ಸಮರ್ಪಿಸಿಕೊಂಡರಂತೂ ನಮ್ಮ ವೈಯಕ್ತಿಕ ಬೆಳವಣಿಯು ಅರ್ಧ ಕುಂಠಿತವಾದಂತೆ. ಕಲಾವಿದರಾಗಿ ನಾವು ಇಂತಹ ಹುಚ್ಚು ಪ್ರಯಾಸಗಳಲ್ಲಿ ಇಳಿದಿರುತ್ತೇವೆ. ಕಲೆಯನ್ನು ಪಂಚಮವೇದ ಅಂತಲೇ ಪರಿಗಣಿಸಿದ್ದಾರೆ. ಹಾಗಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಾಡುವ ಕೊಡುಗೆ ಕೂಡ ಅತ್ಯಂತ ಶ್ರೇಷ್ಠವಾದದ್ದು ಅಂತ ತಿಳಿದು ನಮಗೆ ನಾವೇ ಸಮಾಧಾನಮಾಡಿಕೊಂಡು ಕೆಲಸ ಮಾಡಬೇಕು. ಇಂತಹ ಸಾಹಸ ಯಾತ್ರೆಯಲ್ಲಿ ಸ್ನೇಹಿತರಾದ ಧನನ್ಜೋಯ್ ದಾಸ್ ಅವರು ಬ್ರಿಗೇಡ್ ರೋಡ್ ನಲ್ಲಿಯ ‘ಆರ್ಟ್ಮಾ ಆರ್ಟ್ ಗ್ಯಾಲರಿ’ಯಲ್ಲಿ ‘ಆರ್ಟ್ ಎಕ್ಸಟ್ರಾವಗಝ’ ಹೆಸರಿನಲ್ಲಿ ಸಮೂಹ ಕಲಾ ಪ್ರದರ್ಶನ ಆಯೋಜನೆ ಮಾಡಿದ್ದರು. ದಿನಾಂಕ 16-9-23ರ ಶನಿವಾರ ಸಂಜೆ ಹಿರಿಯ ಕಲಾವಿದರಾದ ಶ್ರೀ ಚಿ.ಸು.ಕೃಷ್ಣ ಸೆಟ್ಟಿ ಸಿ.ಎಸ್, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಶುಭಾ ಸುರೇಶ್, ಕಲಾವಿದರಾದ ಶ್ರೀ ಗಣಪತಿ ಎಸ್.ಹೆಗಡೆಯವರಿಂದ ಉದ್ಘಾಟನೆಗೊಂಡಿತು. ಬೇರೆ ಬೇರೆ ಕ್ಷೇತ್ರದಿಂದ, ಬೇರೆ ಬೇರೆ ನೆಲೆಯಿಂದ ಬಂದ ಎಂಟು ಕಲಾವಿದರು ಈ ಕಲಾಪ್ರದರ್ಶನದಲ್ಲಿ ಭಾಗವಹಿಸಿದ್ದರು.ಇದನ್ನ UXDD (ಯೂಸರ್ ಎಕ್ಸ್…

Read More

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ರೇವಾ ಯುನಿವರ್ಸಿಟಿಯ ಪ್ರದರ್ಶನ ಕಲೆಗಳ ವಿಭಾಗ ಮತ್ತು ಧಾರಣಾ- ಭಾರತೀಯ ಜ್ಞಾನ ವ್ಯವಸ್ಥೆ ಅಧ್ಯಯನ ಕೇಂದ್ರದ ವತಿಯಿಂದ ಕರಾವಳಿಯ ಭರತನಾಟ್ಯ ಕಲಾವಿದರಾದ ವಿದ್ವಾನ್ ಮಂಜುನಾಥ.ಎನ್ ಪುತ್ತೂರು ಅವರು ರೂಪಿಸಿರುವ ಪರಿಕಲ್ಪನೆ “ಭರತನಾಟ್ಯದಲ್ಲಿ ತಾಳಾವಧಾನ” ಶೈಕ್ಷಣಿಕವಾಗಿ ಮೂರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ರೂಪದಲ್ಲಿ ಮೂಡಿಬರುತ್ತಿದೆ. ಪ್ರದರ್ಶನ ಕಲೆಗಳ ವಿಭಾಗದ ನಿರ್ದೇಶಕರಾದ ಹಿರಿಯ ನೃತ್ಯಗುರು ಡಾ.ವಿದ್ಯಾ ಕುಮಾರಿ ಅವರು ಆನ್ಲೈನ್ ಮುಖಾಂತರ ಈ ಕೋರ್ಸಿಗೆ ಸೆಪ್ಟೆಂಬರ್ 6 ರಂದು ಅಧಿಕೃತವಾಗಿ ಚಾಲನೆ ನೀಡಿ ಶ್ಲಾಘಿಸಿದರು. ಇದನ್ನು ಭರತನಾಟ್ಯ ಕ್ಷೇತ್ರಕ್ಕೆಂದೇ ಅನ್ವೇಷಿಸಿ,ರೂಪಿಸಿದವರು ಯುವ ವಿದ್ವಾಂಸರಾದ ಭರತನಾಟ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್ ಪುತ್ತೂರು. ಈ ಕೋರ್ಸಿನಲ್ಲಿ ನಾಲ್ಕು ಅಧ್ಯಾಯಗಳಿದ್ದು, ಹೊಸ ಪ್ರಯೋಗಗಳನ್ನು ಮತ್ತು ನೃತ್ಯಕ್ಕೆ ಸಂಬಂಧಪಟ್ಟ ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ.ಆಳ್ವಾಸ್ ಪದವಿ ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಪ್ರಾರಂಭಗೊಂಡು ಇದೀಗ ರೇವಾ ಯುನಿವರ್ಸಿಟಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ರೂಪದಲ್ಲಿ ಮೂಡಿಬರುತ್ತಿದೆ.

Read More

ಬದಿಯಡ್ಕ : ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ರಂಗಸಿರಿ ಗ್ರಾಮಪರ್ಯಟನೆಯ 7ನೇ ಕಾರ್ಯಕ್ರಮ ದಿನಾಂಕ 17-09-2023ರ ಭಾನುವಾರ ಬದಿಯಡ್ಕದ ಸಂತ ಬಾರ್ತಲೋಮಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ವಯಲಿನ್ ವಾದಕರಾದ ವಿದ್ವಾನ್ ಪ್ರಭಾಕರ ಕುಂಜಾರು “ಗ್ರಾಮೀಣ ಪ್ರದೇಶಗಳನ್ನು ತಲುಪುವ ರಂಗಸಿರಿಯ ಗ್ರಾಮಪರ್ಯಟನೆಯಂತಹ ಕಾರ್ಯಕ್ರಮಗಳು ತುಂಬಾ ಪರಿಣಾಮಕಾರಿಯಾಗಿವೆ” ಎಂದು ಸಂತಸ ವ್ಯಕ್ತಪಡಿಸಿದರು. ರಂಗಸಿರಿ ಸಾಂಸ್ಕ್ರತಿಕ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ ಪುಂಡೂರು ಸಭೆಯ ಅಧ್ಯಕ್ಷತೆ ವಹಿಸಿ, ಬದಿಯಡ್ಕ ಗ್ರಾಮಪಂಚಾಯತಿನ ಜನಪ್ರತಿನಿಧಿ ಶ್ರೀ ಶಂಕರ.ಡಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಭಗಿನಿ. ಕ್ರಿಸ್ಟೆಲ್ಲ ಫೆರ್ನಾಂಡಿಸ್ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಮತಿ ಭುವನೇಶ್ವರಿ.ಪಿ ಇವರು ಮಂಡಲ ಆರ್ಟ್ ನ ಬಗ್ಗೆ ಪರಿಚಯ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಮಂಡಲ ಆರ್ಟ್ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರದಲ್ಲಿ ಕಾಸರಗೋಡಿನ ವಿವಿಧ ಭಾಗಗಳಿಂದ ಮಕ್ಕಳು ಹಾಗೂ ಹಿರಿಯರು ಪಾಲ್ಗೊಂಡರು.

Read More

ಮಂಗಳೂರು : ರಾಮಕೃಷ್ಣ ಮಠದಲ್ಲಿ ಸೆಪ್ಟೆಂಬರ್ ತಿಂಗಳ ಭಜನ್‌ ಸಂಧ್ಯಾ ಕಾರ್ಯಕ್ರಮ ಸಂಪನ್ನಗೊಂಡಿತು. ಭಜನ್ ಸಂಧ್ಯಾದ ಐದನೇ ವಾರದ ಕಾರ್ಯಕ್ರಮವನ್ನು ದಿನಾಂಕ 03-09-2023ರಂದು ಬೋಳಾರದ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಸದಸ್ಯರು ಹಾಗೂ ಆರನೇ ವಾರದ ಭಜನಾ ಸೇವೆಯನ್ನು ದಿನಾಂಕ 10-09-2023ರಂದು ಜಪ್ಪು ಮಹಾಕಾಳಿಪಡ್ಪಿನ ಶ್ರೀ ಆದಿಮಹೇಶ್ವರಿ ವೈದ್ಯನಾಥ ಭಜನಾ ಮಂಡಳಿಯವರು ನೆರವೇರಿಸಿದರು. ಭಜನಾ ತಂಡದ ಸೇವೆಯ ನಂತರ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ವತಿಯಿಂದ ಭಜನಾ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತದನಂತರ ಆರತಿ ಹಾಗೂ ಆಶ್ರಮದ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಶ್ರಮದ ಭಕ್ತರು, ಸ್ವಯಂಸೇವಕರು ಹಾಗೂ ಹಲವಾರು ಸಾರ್ವಜನಿಕರು ಭಾಗವಹಿಸಿದರು. ಮುಂದಿನ ತಿಂಗಳ ಭಜನ್‌ ಸಂಧ್ಯಾ ಕಾರ್ಯಕ್ರಮವು ದಿನಾಂಕ 01-10-2023 ಭಾನುವಾರದಂದು ಸಂಜೆ 4 ಗಂಟೆಗೆ ಸರಿಯಾಗಿ ಶ್ರೀ ಜನಾರ್ದನ ಭಜನಾ ಮಂಡಳಿ ಜಪ್ಪು ಬಪ್ಪಾಲ್, ಮಂಗಳೂರು ಇವರಿಂದ ಭಜನಾ ಸೇವೆ ನಡೆಯಲಿದೆ. ಶ್ರೀ…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ವತಿಯಿಂದ ಸುರತ್ಕಲ್‌ನ ಭಾಗ್ಯ ರೆಸಿಡೆನ್ಸಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭ ದಿನಾಂಕ 18-09-2023ರಂದು ನಡೆಯಿತು. ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನಗೊಳಿಸಿ ಮಾತನಾಡಿದ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿಯವರು “ವ್ಯಕ್ತಿಯ ಅಂತಸ್ಸತ್ವ ಅಭಿವ್ಯಕ್ತಪಡಿಸುವಲ್ಲಿ ಶಾಸ್ತ್ರೀಯ ಸಂಗೀತ ಕಲೆಯ ಅಭ್ಯಾಸ ವಿಶಿಷ್ಟವಾದುದು” ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಸಂಸ್ಥೆಯ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು “ಶಾಸ್ತ್ರೀಯ ಸಂಗೀತ ದೈವಿಕ ಕಲೆಯಾಗಿದ್ದು ಪೋಷಕರು ಮಕ್ಕಳಿಗೆ ಎಳವೆಯಲ್ಲಿಯೇ ಶಾಸ್ತ್ರೀಯ ಸಂಗೀತದ ಕುರಿತು ಆಸಕ್ತಿ ಮೂಡಿಸಬೇಕು” ಎಂದು ನುಡಿದರು. ಅಗರಿ ಸಮೂಹ ಸಂಸ್ಥೆಗಳ ಮಾಲೀಕ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಮಾತನಾಡಿ “ಸನಾತನ ಧರ್ಮದ ಶ್ರೇಷ್ಠತೆಯ ಅರಿವನ್ನು ಹಿರಿಯರು ಮಕ್ಕಳಿಗೆ ತಿಳಿಯಪಡಿಸಬೇಕು” ಎಂಬ ಸಂದೇಶ ನೀಡಿದರು. ಹಿರಿಯ ನಾದಸ್ವರ ಕಲಾವಿದರಾದ ವಿದ್ವಾನ್ ನಾಗೇಶ ಎ.ಬಪ್ಪನಾಡು “ಮಣಿಕೃಷ್ಣ ಸ್ವಾಮಿ ಅಕಾಡೆಮಿ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದೆ” ಎಂದು ಶುಭ ಹಾರೈಸಿದರು. ಸುರತ್ಕಲ್ ನಾಗರಿಕ…

Read More

ಮಂಗಳೂರು : ಶ್ರೀ ಮಹಾದೇವಿ ಯಕ್ಷ ನಾಟ್ಯಾಲಯ ಬಜಪೆ ಆಯೋಜಿಸಿದ ಯಕ್ಷಗಾನ ಚಂಡೆ, ಮದ್ದಳೆ ಹಾಗೂ ಭಾಗವತಿಕೆ ತರಗತಿಗಳ ಉದ್ಘಾಟನಾ ಸಮಾರಂಭ ದಿನಾಂಕ 17-09-2023ರಂದು ಬಜಪೆಯ ಪೆರ್ಮುದೆಯಲ್ಲಿರುವ ಶಾರದಾ ಯಕ್ಷಗಾನ ಮಂಡಳಿ (ರಿ.)ಯಲ್ಲಿ ನಡೆಯಿತು. ಯಕ್ಷಗಾನ ತರಗತಿಯನ್ನು ಚಂಡೆ, ಮದ್ದಳೆ ಹಾಗೂ ಭಾಗವತಿಕೆ ಗುರುಗಳಾದ ಮಣಿಮುಂಡ ಸುಬ್ರಮಣ್ಯ ಶಾಸ್ತ್ರಿ ಉದ್ಘಾಟಿಸಿದರು, ಈ ಕಾರ್ಯಕ್ರಮದಲ್ಲಿ ಯಕ್ಷಗಾನ ನಾಟ್ಯ ಗುರುಗಳಾದ ರಾಜೇಶ್ ಕಟೀಲು, ಕೃಷ್ಣ, ದಯಾವತಿ, ಗುರುರಾಜ ಶೆಟ್ಟಿ, ಭರತೇಶ್ ಶೆಟ್ಟಿ, ಸುರೇಶ್ ಬಜಪೆ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

Read More

ಕೋಟ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ ಪುಟಾಣಿಗಳ ‘ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ’ಯು  ದಿನಾಂಕ 15-09-2023ರಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಎಮ್.ಜಿ.ಎಮ್.ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀವಟಿಕೆಗೆ ಎಣ್ಣೆ ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕೋಟ ವಿವೇಕ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಜಗದೀಶ ನಾವುಡ “ಯಕ್ಷಗಾನದ ಮೂಲ ಸತ್ವವು ಯಕ್ಷರಂಗದಲ್ಲಿ ವಿರಳವಾಗಿದೆ. ಪೂರ್ವರಂಗ ಪ್ರಾತ್ಯಕ್ಷಿಕೆಯ ಮೂಲಕ ರಂಗದಲ್ಲಿ ಎಳೆ ಎಳೆಯಾಗಿ ಮಕ್ಕಳಿಗೆ ಬಿತ್ತರಿಸುವ ಕಾರ್ಯ ಮಹತ್ತರವಾದದ್ದು. ಯಶಸ್ವೀ ಕಲಾವೃಂದ ಹಲವಾರು ವರ್ಷಗಳಿಂದ ಅತ್ಯುನ್ನತ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಮೆರೆದಿರುವುದನ್ನು ಹತ್ತಿರದಿಂದ ಬಲ್ಲೆವು. ಚಿಣ್ಣರ ಮೂಲಕವೇ ಚಿಣ್ಣರಿಗೆ ಕಲೆಯನ್ನು ಉಣಿಸಿದಾಗ ಹೆಚ್ಚು ಫಲಕಾರಿಯಾಗುವುದರಲ್ಲಿ ಸಂಶಯವಿಲ್ಲ” ಎಂದು ಅಭಿಪ್ರಾಯ ಪಟ್ಟರು. ಗೌರವ ಉಪಸ್ಥಿತಿಯಲ್ಲಿ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಾಯರಾದ ಭಾಸ್ಕರ ಆಚಾರ್ಯ, ಕೋಟ ವಿದ್ಯಾ ಸಂಘದ ಜೊತೆ ಕಾರ್ಯದರ್ಶಿಗಳಾದ ಮಂಜುನಾಥ ಉಪಾಧ್ಯ, ಯಕ್ಷ ಗುರು ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ವಿವೇಕ ಬಾಲಕಿಯರ…

Read More