Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಸಿ.ಕೆ. ರವಿಕುಮಾರ ಚಾಮಲಾಪುರ ಅವರ ನಿಧನಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ಮಂಡ್ಯದಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಯೋಜಿತವಾಗಿರುವ ಸಂದರ್ಭದಲ್ಲಿ ಈ ಅಗಲುವಿಕೆ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ ಎಂದು ಅವರು ಕಂಬನಿಯನ್ನು ಮಿಡಿದಿದ್ದಾರೆ. ಕಳೆದ ಏಳು ವರ್ಷಗಳಿಂದ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿ.ಕೆ. ರವಿಕುಮಾರ ಚಾಮಲಾಪುರ ಇವರು ದಿನಾಂಕ 04-03-2024ರ ಬೆಳಿಗ್ಗೆ ನಿಧನರಾಗಿದ್ದಾರೆ. ಮಂಡ್ಯ ತಾಲ್ಲೂಕಿನ ಕೆರಗೋಡು ಹೋಬಳಿಯ ಚಾಮಲಾಪುರ ಗ್ರಾಮದ ಶ್ರೀಮತಿ ಸಣ್ಣಮ್ಮ ಮತ್ತು ಶ್ರೀ ಸಿ. ಕಾಳೇಗೌಡ ದಂಪತಿಗಳ ಮಗನಾದ ಇವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೂ, ಪ್ರೌಢ ಶಿಕ್ಷಣವನ್ನು ಹುಲಿವಾನದಲ್ಲಿ ಪಡೆದು, ಪಿ.ಯು.ಸಿ ಮತ್ತು ಪದವಿ ಶಿಕ್ಷಣವನ್ನು ಮಂಡ್ಯದ ಪ್ರತಿಷ್ಠಿತ ಪಿ.ಇ.ಎಸ್. ವಿಜ್ಞಾನ ಕಾಲೇಜಿನಲ್ಲಿ ಐಚ್ಛಿಕ ಕನ್ನಡ ವಿಷಯದೊಂದಿಗೆ ಪೂರೈಸಿರುತ್ತಾರೆ.…
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಮಂದಿರದಲ್ಲಿ ಕೆಂಗಲ್ ಹನುಮಂತಯ್ಯ ದತ್ತಿ ಮತ್ತು ವಿವಿಧ ಪುಸ್ತಕ ದತ್ತಿ ಪ್ರಶಸ್ತಿ ವಿತರಣಾ ಸಮಾರಂಭವು ದಿನಾಂಕ 03-03-2024ರಂದು ನಡೆಯಿತು. ಈ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಉದ್ಘಾಟನಾ ಭಾಷಣದಲ್ಲಿ “ಕೆಂಗಲ್ ಹನುಮಂತಯ್ಯನವರು ಸದಾ ಕನ್ನಡ ಸಂಸ್ಕೃತಿಯ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದರು. ಅವರ ಕಾಲದಲ್ಲಿಯೇ ಕನ್ನಡ ಸಂಸ್ಕೃತಿ ಕ್ಷೇತ್ರಕ್ಕೆ ಪ್ರತ್ಯೇಕ ಇಲಾಖೆ ಸ್ಥಾಪಿತವಾಯಿತು. ಮಾಸ್ತಿ ಮತ್ತು ಕುವೆಂಪು ಅವರ ಸಂಪಾದಕತ್ವದಲ್ಲಿ ಕುಮಾರವ್ಯಾಸ ಸಂಪುಟವನ್ನು ಎರಡು ರೂಪಾಯಿ ನೀಡಿ ನಾಡಿನೆಲ್ಲೆಡೆ ತಲುಪುವಂತೆ ಮಾಡಿದ್ದರು. ಅಪರೂಪದ ರಾಜಕೀಯ ಮತ್ಸದ್ದಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ನೈಜ ಪುಸ್ತಕ ಪ್ರೇಮಿಯಾಗಿದ್ದರು, ತಮ್ಮ ವಿರುದ್ಧ ರಾಜಕೀಯ ಷಡ್ಯಂತರಗಳು ನಡೆಯುತ್ತಿದ್ದ ಕಾಲದಲ್ಲಿ ಪ್ಲೇಟೋ ರಚಿಸಿದ ‘ರಿಪಬ್ಲಿಕ್’ ಓದುತ್ತಿದ್ದರು. ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಅಪಾರ ಕೊಡುಗೆ ನೀಡಿದ ಕೆಂಗಲ್ಲರು ರಾಷ್ಟ್ರಮಟ್ಟದಲ್ಲಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು. ರೈಲ್ವೇ ಸಚಿವರಾಗಿ ಕರ್ನಾಟಕಕ್ಕೆ ಮಹತ್ವದ ಯೋಜನೆಗಳನ್ನು ತಂದರು. ಕೆಂಗಲ್ಲರ ಕೊಡುಗೆಗಳನ್ನ…
ಉಡುಪಿ : ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಶ್ರೀ ದೇವಳದ ವಸಂತ ಮಂಟಪದಲ್ಲಿ ದಿನಾಂಕ 04-03-2024ರಂದು ನಡೆದ ಸಾಪ್ತಾಹಿಕ ನೃತ್ಯಸರಣಿ ‘ನೃತ್ಯ ಶಂಕರ’ದಲ್ಲಿ ವಿದುಷಿ ಡಾ. ಶೀತಲ್ ರಾವ್ ಮನೋಜ್ಞವಾಗಿ ಅಭಿನಯಿಸಿ ಪೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದಳು. ಈಕೆ ನೃತ್ಯನಿಕೇತನ ಕೊಡವೂರು ಇದರ ಗುರುಗಳಾದ ಸುಧೀರ್ ರಾವ್ ಕೊಡವೂರ್ ಹಾಗೂ ಮಾನಸಿ ಸುಧೀರ್ ಇವರ ಶಿಷ್ಯೆ. ಪ್ರದೀಪ್ ಚಕ್ರಪಾಣಿ ಹಾಗೂ ಗೀತಾಂಜಲಿ ಪ್ರದೀಪ್ ಇವರ ಮುದ್ದಿನ ಕುವರಿ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯು ದಿನಾಂಕ 04-03-2024ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ಪಾರ್ತಿಸುಬ್ಬ ವಿರಚಿತ ‘ಲಂಕಾದಹನ-ಹನೂಮನಿಗೆ ಮುಂದಿನ ಬ್ರಹ್ಮಪಟ್ಟ ಪ್ರದಾನ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ, ನಿತೀಶ್ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪಿ.ಟಿ. ಜಯರಾಮ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ (ಹನೂಮಂತ), ಭಾಸ್ಕರ ಬಾರ್ಯ (ಶ್ರೀರಾಮ ಮತ್ತು ರಾವಣ), ಶ್ರೀಧರ್ ರಾವ್ ಕುಂಬ್ಳೆ (ಪ್ರಹಸ್ತ), ದುಗ್ಗಪ್ಪ ನಡುಗಲ್ಲು (ಅಕ್ಷ ಕುಮಾರ), ಗುಡ್ಡಪ್ಪ ಬಲ್ಯ (ಇಂದ್ರಜಿತು) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಟಿ. ರಂಗನಾಥ ರಾವ್ ವಂದಿಸಿದರು.
ಗೋಪಾಡಿ : ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದಲ್ಲಿ ‘7ನೇ ಅರ್ಥಾಂಕುರ’ ಹೊಸ ಅರ್ಥಧಾರಿಗಳ ಪರಿಶೋಧ ಕಾರ್ಯಕ್ರಮವು ದಿನಾಂಕ 03-03-2024ರಂದು ಗೋಪಾಡಿಯ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಚಂದ್ರಶೇಖರ ಇವರನ್ನು ಅಭಿನಂದಿಸಿ ಮಾತನ್ನಾಡಿದ ಯಕ್ಷಗುರು ಕೃಷ್ಣಮೂರ್ತಿ ಉರಾಳ “ಮುಂದಿನ ತಲೆಮಾರಿಗೆ ಹಾಗೂ ಯಕ್ಷಗಾನ ತಾಳಮದ್ದಳೆಗೆ ಅರ್ಥಧಾರಿಗಳನ್ನು ತಯಾರಿ ಮಾಡುವ ಮತ್ತು ಇತರ ಹಲವಾರು ವಿಭಾಗದ ಕಲಾ ಚಟುವಟಿಕೆಯನ್ನು ನೆರವೇರಿಸುತ್ತಾ ಬಂದ ಸಂಸ್ಥೆಯ ಕಾರ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗೋಪಾಡಿಯ ಗಂಗಾ ಪ್ರೊಡೆಕ್ಟ್ ಮಾಲಕರಾದ ಚಂದ್ರಶೇಖರ್ ಪ್ರಾಯೋಜಕತ್ವವನ್ನು ನಿರ್ವಹಿಸಿಕೊಂಡು ಕಲಾಸಕ್ತಿಯನ್ನು ಮೆರೆದಿದ್ದಾರೆ. ಇವರ ಕಲಾವಂತಿಕೆಯ ಪ್ರೇಕ್ಷಕನಾಗಿ, ಪ್ರೋತ್ಸಾಹಕನಾಗಿ ಮನಮೆಚ್ಚಿ ಹೃದಯದಿಂದ ಕೊಟ್ಟ ಕೊಡುಗೆ ನಿಜಕ್ಕೂ ಶ್ಲಾಘನೀಯ.” ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿ “ಉದ್ಘಾಟನೆಯ ಕಾರ್ಯಕ್ರಮಗಳು ದಾಖಲೆಯ ಕಾರ್ಯಕ್ರಮವಾದವು. ರಾಜಕೀಯ ನೇತಾರರು, ವೈದ್ಯರುಗಳು, ಉದ್ಯಮಿಗಳು ಎಲ್ಲರೂ ಪ್ರಥಮವಾಗಿ ರಂಗದಲ್ಲಿ ಅಭಿನಯಿಸಿದ ಹಿರಿಮೆ ಸಂಸ್ಥೆಯದ್ದು. ವಿವಿಧ ಕಲಾ ಪ್ರಕಾರಗಳ ತರಗತಿಗಳನ್ನು ನಡೆಸುತ್ತಾ ಸಾಗಿ ಬಂದ ಸಂಸ್ಥೆ 25ನೇ…
ಮೈಸೂರು : ಮೈಸೂರಿನ ಜಿ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ದಿನಾಂಕ 26-02-2024ರಂದು ನಡೆದ ದಕ್ಷಿಣ ಪೂರ್ವ ವಲಯ ಅಂತರ್ ವಿಶ್ವವಿದ್ಯಾನಿಲಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಗೋವಿಂದ ದಾಸ ಕಾಲೇಜಿನ ಕಿರು ಪ್ರಹಸನ ತಂಡವು ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದೆ. ಚರ್ಮವಾದ್ಯ ಸ್ಪರ್ಧೆಯಲ್ಲಿ ಮತ್ತು ಇನ್ಸ್ಟಲೇಷನ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದಿರುತ್ತಾರೆ. ತಂಡದಲ್ಲಿ ಅರುಣ್, ಗಣೇಶ್ ಭಟ್, ಭರತ್, ಪ್ರೀತೇಶ್, ಮನೀಶ್ ಬಿ., ಹಿಮಾಂಗಿ ಡಿ. ಉಳ್ಳಾಲ್, ಜಿತೀನ್ ಜೆ. ಶೆಟ್ಟಿ, ಸಂಪತ್ ಎಸ್. ಬಿ., ನಿರ್ಮಿಕಾ ಎನ್. ಸುವರ್ಣ, ಸೈನಾಕುಮಾರ್, ವೈಭವಿ, ಮಹಾಂತೇಶ್ ಬಿ. ಭಾಗವಹಿಸಿದ್ದರು. ತಂಡದ ವ್ಯವಸ್ಥಾಪಕರಾಗಿ ಪುನೀತಾ ಆರ್. ಮತ್ತು ರವಿಚಂದ್ರ ಸಹಕರಿಸಿದರು.
ಕಾಸರಗೋಡು : ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ (ರಿ.) ಗಡಿನಾಡು ಘಟಕ ಹಾಗೂ ಕನ್ನಡ ಭವನ ಕಾಸರಗೋಡು ಆಶ್ರಯದಲ್ಲಿ ಸುಭಾಷಿಣಿ ಚಂದ್ರ ಕನ್ನಟಿಪಾರೆ ಬೇಕೂರು ಸಾರಥ್ಯದಲ್ಲಿ ‘ಗಡಿನಾಡು ಕಾಸರಗೋಡು ಕನ್ನಡ ಹಬ್ಬ’ವು ದಿನಾಂಕ 10-03-2024ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡಿನ ಕನ್ನಡ ಭವನದಲ್ಲಿ ನಡೆಯಲಿದೆ. ಕಾಸರಗೋಡಿನ ಕನ್ನಡ ಭವನದ ಸಂಸ್ಥಾಪಕರಾದ ಶ್ರೀ ವಾಮನ ರಾವ್ ಬೇಕಲ್ ಇವರ ಅಧ್ಯಕ್ಷತೆಯಲ್ಲಿ ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಲೇಖಕರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೃತಿಗಳ ಬಿಡುಗಡೆ ಹಾಗೂ ‘ಕನ್ನಡ ರತ್ನ ರಾಜ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 02-03-2024ರಂದು ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಪಾರ್ತಿಸುಬ್ಬ ವಿರಚಿತ ‘ಚೂಡಾಮಣಿ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಹೊಸ ಮೂಲೆ ಗಣೇಶ್ ಭಟ್, ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಆನಂದ್ ಸವಣೂರು ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪಿ.ಟಿ. ಜಯರಾಮ್ ಭಟ್ ಮಾ.ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಪೂಕಳ ಲಕ್ಷ್ಮೀನಾರಾಯಣ ಭಟ್ ಮತ್ತು ಭಾಸ್ಕರ ಬಾರ್ಯ (ಹನೂಮಂತ), ಶ್ರೀಧರ್ ರಾವ್ ಕುಂಬ್ಳೆ (ಸೀತೆ), ಭಾರತಿ ಜಯರಾಮ್ (ತೃಣಬಿಂದು), ಕಿಶೋರಿ ದುಗ್ಗಪ್ಪ ನಡುಗಲ್ಲು (ಲಂಕಿಣಿ), ಹರಿಣಾಕ್ಷಿ ಜೆ. ಶೆಟ್ಟಿ (ಶೃಂಗಾರ ರಾವಣ), ಲಕ್ಷ್ಮೀ ವಿ.ಜಿ. ಭಟ್ (ತ್ರಿಜಟೆ), ಭಾರತಿ ಅರಿಯಡ್ಕ (ಅನುಕೂಲ ನಾರಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು.
ಉಡುಪಿ : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಇದರ ವತಿಯಿಂದ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಶ್ರೀಮನ್ಮಹಾಶಿವರಾತ್ರಿಯ ಪಯುಕ್ತ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಆಹ್ವಾನಿತ ತಂಡಗಳ ಭಜನೆ ಸ್ಪರ್ಧೆ’ಯನ್ನು ದಿನಾಂಕ 10-03-2024ರಂದು ಪೂರ್ವಾಹ್ನ 9-00 ಗಂಟೆಗೆ ಉಡುಪಿ ಬನ್ನಂಜೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಸಮಾರಂಭದ ನಂತರ ಶ್ರೀ ಭೈರವನಾಥೇಶ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಗಂಟೆ 9-30ರಿಂದ ಭಜನಾ ಸ್ಪರ್ಧೆಯು ಆರಂಭವಾಗಲಿದ್ದು, ಸಂಜೆ ಗಂಟೆ 5.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಜನಾ ಕ್ಷೇತ್ರದ ಹಿರಿಯ ಸಾಧಕರಾದ ಮಲ್ಪೆ ಶ್ರೀರಾಮ ಭಜನಾ ಮಂಡಲಿಯ ಮಾಲಕರಾದ ಶ್ರೀ ಸೋಮಪ್ಪ ಕುಂದರ್ ತೊಟ್ಟಂ ಮತ್ತು ಉಡುಪಿಯ ಕನ್ನರ್ಪಾಡಿ ಜಯ ದುರ್ಗೆ ಭಜನಾ ಮಂಡಳಿಯ ಶ್ರೀ ಕಾಳಪ್ಪ ಶೆಟ್ಟಿ ಕನ್ನರ್ಪಾಡಿ ಒಡ್ಡಾಡಿ ಮನೆ ಇವರುಗಳನ್ನು ಸನ್ಮಾನಿಸಲಾಗುವುದು. ಈ ಭಜನಾ ಸ್ಪರ್ಧೆಯ ಬಹುಮಾನಗಳು : ಪ್ರಥಮ ರೂ.20,000/-,…
ಮಂಗಳೂರು : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಉಳ್ಳಾಲದ ನಗರಸಭೆಯ ಮಹಾತ್ಮಾ ಗಾಂಧಿ ರಂಗ ಮಂದಿರದಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2023-24’ ಕಾರ್ಯಕ್ರಮಗಳು ದಿನಾಂಕ 24-02-2024ರಂದು ಜರಗಿದವು. ಈ ಸಮಾರಂಭಕ್ಕೆ ಚಾಲನೆ ನೀಡಿದ ಚೌಟರ ಅರಮನೆ ಮೂಡುಬಿದಿರೆ ಅಬ್ಬಕ್ಕ ವಂಶಸ್ಥೆ ಮತ್ತು ವೀರರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘ ಮಂಗಳೂರು ಇದರ ಕಾರ್ಯದರ್ಶಿ ಡಾ. ಅಕ್ಷತಾ ಅದರ್ಶ್ ಜೈನ್ ಇವರು ಮಾತನಾಡಿ “ವೀರರಾಣಿ ಅಬ್ಬಕ್ಕ ಉಳ್ಳಾಲ ಮತ್ತು ಮೂಡುಬಿದಿರೆಗೆ ಮಾತ್ರ ಸೀಮಿತವಲ್ಲ. ಅವರು ಇಡೀ ಭಾರತ ದೇಶದ ಸುಪುತ್ರಿ. ಈ ನಿಟ್ಟಿನಲ್ಲಿ ವೀರರಾಣಿ ಅಬ್ಬಕ್ಕ ಉತ್ಸವವನ್ನು ಇಡೀ ಭಾರತ ದೇಶದಾದ್ಯಂತ ಆಚರಿಸುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು. ವಿವಿಧ ಗೋಷ್ಠಿಗಳಿಗೆ ಚಾಲನೆ ನೀಡಿದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಮಾತನಾಡಿ, “ರಾಣಿ ಅಬ್ಬಕ್ಕನ ಬಗ್ಗೆ ಮಾತನಾಡುವಾಗ ಅವಳು ನಮ್ಮವಳು ಮತ್ತು ರಾಷ್ಟ್ರ ಇತಿಹಾಸಕ್ಕೆ ಸೇರಿದವಳು ಎನ್ನವುದು ಉಲ್ಲೇಖಾರ್ಹವಾಗಿದೆ. ಅಬ್ಬಕ್ಕಳ ಇತಿಹಾಸವನ್ನು ಮರು ಕಟ್ಟುವ ಕೆಲಸವಾಗಬೇಕಾಗಿದ್ದು, ಕಳೆದ 27 ವರುಷಗಳಿಂದ ಅಬ್ಬಕ್ಕಳ…