Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಮತ್ತು ಮಡಿಕೇರಿ ತಾಲೂಕು ಕ.ಸಾ.ಪ. ಸಂಯುಕ್ತಾಶ್ರಯದಲ್ಲಿ ದಿನಾಂಕ 09 ಜೂನ್ 2025ರಂದು ಮಡಿಕೇರಿಯ ಹೊಟೇಲ್ ರೆಡ್ಬ್ರಿಕ್ಸ್ ನ ‘ಸತ್ಕಾರ’ ಸಭಾಂಗಣದಲ್ಲಿ ಆಯೋಜಿತ ಸಮಾರಂಭದಲ್ಲಿ ಬೂಕರ್ ಪ್ರಶಸ್ತಿಗೆ ಪಾತ್ರರಾದ ದೀಪಾ ಭಾಸ್ತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪಾ ಭಾಸ್ತಿಯವರನ್ನು ಸನ್ಮಾನಿಸಿದ ಹಾಸನ ಜಿಲ್ಲೆಯವರಾದ ಕವಿ ಮತ್ತು ಅನುವಾದಕಿ ಜ.ನಾ. ತೇಜಶ್ರೀ ಮಾತನಾಡಿ “ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿಯವರು ತಮ್ಮ ‘ಹಾರ್ಟ್ ಲ್ಯಾಂಪ್’ ಅನುವಾದ ಕೃತಿಯ ಮೂಲಕ, ಸಾಂಪ್ರದಾಯಿಕವಾದ ಅನುವಾದದ ಚೌಕಟ್ಟುಗಳನ್ನು ಮೀರಿ, ಸೃಜನಾತ್ಮಕವಾದ ಅನುವಾದದ ಹೊಸ ಪಥವನ್ನು ಸೃಷ್ಟಿಸಿದ್ದಾರೆ. ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿ ‘ಎದೆಯ ಹಣತೆ’ಯನ್ನು ಹಾರ್ಟ್ ಲ್ಯಾಂಪ್ ಆಗಿ ಅನುವಾದಿಸಿದ ದೀಪಾ ಭಾಸ್ತಿಯವರು, ಕನ್ನಡದಿಂದ ಇಂಗ್ಲೀಷ್ಗೆ ಮಾಡಿರುವ ಅನುವಾದದಲ್ಲಿ ‘ಕನ್ನಡದ ಭಾಷಾ ಸೌಂದರ್ಯವನ್ನು, ಚೆಲುವನ್ನು’ ಹಾಗೆಯೇ ಕಾಯ್ದುಕೊಂಡಿದ್ದಾರೆ. ಇಂಗ್ಲೀಷ್ ಭಾಷೆಗೆ ಅನುವಾದಿತ ಕೃತಿಗಳು…
ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಕಳೆದ 16 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ ಪೂರ್ಣ ಪ್ರಮಾಣದ ರಂಗಶಿಕ್ಷಣವನ್ನು ನೀಡುವ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ಚವಿದ್ಯಾಲಯದ ಮಾನ್ಯತೆ ಪಡೆದಿದೆ. ಪ್ರತಿವರ್ಷ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೊಮೊ ಕೋರ್ಸನ್ನು ನಡೆಸುವ ಈ ಸಂಸ್ಥೆಯು ಪ್ರಸ್ತುತ 2025-26ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 2025-26ನೇ ಸಾಲಿನ ಈ ರಂಗತರಬೇತಿ ಕೋರ್ಸ್ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷಗಳು ತುಂಬಿರದ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋರ್ಸಿನ ಒಂದು ವರ್ಷದ ವ್ಯಾಸಂಗ ಅವಧಿಯಲ್ಲಿ ಊಟ, ವಸತಿ ಹಾಗೂ ಪಠ್ಯ ಸಾಮಗ್ರಿಗಳ ವೆಚ್ಚಗಳನ್ನು ನಿಯಮಾನುಸಾರ ವಿದ್ಯಾರ್ಥಿ ವೇತನದಲ್ಲಿ ಭರಿಸಲಾಗುವುದು. ಭಾರತೀಯ…
ಮೈಸೂರು : ವಾಸ್ಪ್ ಥಿಯೇಟರ್ ಪ್ರಸ್ತುತ ಪಡಿಸುವ ವಿನಯ್ ಶಾಸ್ತ್ರೀ ಇವರ ನಿರ್ದೇಶನದಲ್ಲಿ ‘ಹೀಗಾದ್ರೆ ಹೇಗೆ ?’ ಟಿ. ಸುನಂದಮ್ಮರವರ ನಗೆ ಬರಹಗಳ ಆಧಾರಿತ ನಾಟಕ ಪ್ರದರ್ಶನವನ್ನು ದಿನಾಂಕ 15 ಜೂನ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುರಳಿ 9742119911 ಸಂಖ್ಯೆಯನ್ನು ಸಂಪರ್ಕಿಸಿರಿ.
ಸಾಲಿಗ್ರಾಮ : ಕಳೆದ ಐವತ್ತೆರಡು ವರ್ಷಗಳಿಂದ ಯಕ್ಷಗಾನಕ್ಕೆ ಗಣನೀಯ ಪ್ರಮಾಣದಲ್ಲಿ ಕಲಾವಿದರನ್ನು ನೀಡಿದ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಇದರ ವತಿಯಿಂದ ಈ ವರ್ಷದ ಹಿಮ್ಮೇಳ (ಮದ್ದಲೆ, ಚೆಂಡೆ, ಭಾಗವತಿಗೆ) ಮತ್ತು ಮುಮ್ಮೇಳ (ಯಕ್ಷಗಾನ ಹೆಜ್ಜೆ, ಅಭಿನಯ) ತರಗತಿಯನ್ನು ದಿನಾಂಕ 14 ಜೂನ್ 2025ರಂದು ಸಂಜೆ ಗಂಟೆ 4-30ಕ್ಕೆ ಪ್ರಾರಂಬಿಸುತ್ತಿದೆ. ಪ್ರಾಚಾರ್ಯ ಸದಾನಂದ ಐತಾಳ ನಿರ್ದೇಶನದಲ್ಲಿ ಸದಾನಂದ ರಂಗ ಮಂಟಪ, ಗುಂಡ್ಮಿ, ಸಾಲಿಗ್ರಾಮದಲ್ಲಿ ನಡೆಯುವ ಈ ತರಗತಿಗೆ ಸೇರಲಿಚ್ಚಿಸುವವರು ಹೆಚ್ಚಿನ ವಿಚಾರಗಳಿಗೆ ಕಾರ್ಯದರ್ಶಿ 9880605610 ಮುಖಾಂತರ ಸಂಪರ್ಕಿಸಲು ಕೋರಲಾಗಿದೆ.
ತೆಕ್ಕಟ್ಟೆ: ಪಟ್ಲ ದಶಮ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಬಡಗು ತಿಟ್ಟು ಯುವ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಯಕ್ಷ ನುಡಿಸಿರಿ ಬಳಗಕ್ಕೆ ಸನ್ಮಾನ ಕಾರ್ಯಕ್ರಮ ದಿನಾಂಕ 11 ಜೂನ್ 2025 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಸಮಾರಂಭದಲ್ಲಿ ಯಕ್ಷ ನುಡಿಸಿರಿ ಬಳಗದ ಎಲ್ಲಾ ಕಲಾವಿದರನ್ನು ಗೌರವಿಸಿದ ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ಮಾತನಾಡಿ “ಯಕ್ಷ ನುಡಿಸಿರಿ ಬಳಗದ ಸದಸ್ಯರು ನಿರಂತರವಾಗಿ ಯಶಸ್ವೀ ಕಲಾವೃಂದದ ವೇದಿಕೆಯಲ್ಲಿ ಅಭ್ಯಾಸ ನಡೆಸಿ ಬಹುಮಾನವನ್ನು ಪಡೆದಿರುವುದು ನಮ್ಮ ಸಂಸ್ಥೆಗೆ ಗೌರವದ ಸಂಗತಿ. ನಿರಂತರ ಕಲಾ ಮನಸ್ಸಿನಿಂದ ತೊಡಗಿಕೊಂಡು ಅನೇಕ ಕಲಾವಿದರನ್ನು ರಂಗದಲ್ಲಿ ವೈಭವೀಕರಿಸಿದ ಯಕ್ಷ ನುಡಿಸಿರಿ ಸಂಸ್ಥೆ ಪಟ್ಲ ದಶಮ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಬಡಗು ತಿಟ್ಟು ಯುವ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದದ್ದು ನಮಗೂ ಸಂಭ್ರಮ” ಎಂದರು. ಸಂಸ್ಥೆಯ ಮುಖ್ಯಸ್ಥ ಡಾ. ಜಗದೀಶ್ ಶೆಟ್ಟಿ ಮಾತನಾಡಿ “ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಂಸ್ಥೆಗೆ ಎಲ್ಲಾ ಕಲಾವಿದರಿಗೂ ಬರುವುದು ಅನುಕೂಲವಾಯಿತು. ಕಲೆಯನ್ನೇ ತಪಸ್ಸಿನಂತೆ ಆರಾಧಿಸುತ್ತಿರುವ ಯಶಸ್ವೀ…
ಸುರಿಯೋ ಸುರಿಯೋ ಜೋರಾಗಿ ಮಳೆರಾಯ ತೊಳೆಯೋ ತೊಳೆಯೋ ಜಗದ ಸಕಲ ಕೊಳೆಯ ಬೆಳೆಯೋ ಬೆಳೆಯೋ ಹೊಲಗದ್ದೆಯಲಿ ಬೆಳೆಯ ಕಳೆಯೋ ಕಳೆಯೋ ಜೀವರಾಶಿಯ ಹಸಿವೆಯ ಮುಂಗಾರು ಮಳೆ ಬಂದಿದೆ ಇಳಿಯು ತಂಪಾಗಿದೆ ಚಿಗುರಿ ನಲಿದಾಡುತಾ ಗಿಡಮರಗಳು ಓಲಾಡಿದೆ ಹಸಿರಿನ ಅಲಂಕಾರದಿ ಬುವಿಯು ಕಂಗೊಳಿಸಿದೆ ತರು ಲತೆಗಳಲ್ಲಿ ಹೂವರಳಿ ಶೃಂಗಾರಗೊಂಡಿದೆ ವರುಣನ ಆರ್ಭಟವು ನೀರಿನ ತೊರೆಯ ಹರಿಸಿದೆ ನೀಲಿ ಸಾಗರವು ಮೈತುಂಬಿ ಭೋರ್ಗೆರೆಯುತಿದೆ ಗಿಡಮರಗಳು ಚಿಗುರಿ ನಿಂತು ಅವನಿ ಹಸಿರಾಗಿದೆ ಕೃಷಿಕನ ಜೀವನದಿ ಹೊಸ ಪುಟವೊಂದು ತೆರೆದಿದೆ ಮಳೆ ಚಳಿ ಬೇಸಿಗೆ ಮೂರು ಕಾಲಗಳ ಸೂತ್ರವು ಜಗದ ಋತುಚಕ್ರ ನಿಯಮಗಳ ಮುಖ್ಯ ಪಾತ್ರವು ಕಾಲ ಕಾಲಕ್ಕೂ ಅದರದ್ದೇ ಆದ ಪ್ರತ್ಯೇಕತೆ ಇಹುದು ಸಮಾನಾಗಿ ಹೊಂದಿಕೊಂಡು ಜಗವ ನಡೆಸುವುದು ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ
ಬೆಂಗಳೂರು : ಅಡವಿ ಫೌಂಡೇಷನ್ (ರಿ.) ರಾಮನಗರ ಮತ್ತು ರಂಗವರ್ಣ (ರಿ.) ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸುವ 10 ದಿನಗಳ ‘ಅಭಿನಯ ಕಾರ್ಯಾಗಾರ’ವನ್ನು ದಿನಾಂಕ 20 ಜೂನ್ 2025ರಿಂದ 29 ಜೂನ್ 2025ರವರೆಗೆ ಸಂಜೆ ಗಂಟೆ 5-00ರಿಂದ 8-00ರ ತನಕ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. 16 ವರ್ಷ ಮೇಲ್ಪಟ್ಟ 20 ಜನರಿಗೆ ಮಾತ್ರ ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ 9110281200 ಮತ್ತು 8296432026 ಸಂಖ್ಯೆಯನ್ನು ಸಂಪರ್ಕಿಸಿರಿ.
ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 129’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 14 ಜೂನ್ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದುಷಿ ಶಿಲ್ಪಾ ನಂಜಪ್ಪ ಇವರು ಕೊಡವ ಸಂಸ್ಕೃತಿ ಮತ್ತು ಪರಂಪರೆಯ ಕುರಿತು ಸಂಶೋಧನೆ ಆಧಾರಿತ ಭರತನಾಟ್ಯ ಪ್ರದರ್ಶನ ನೀಡಲಿದ್ದು, ಪುತ್ತೂರಿನ ಉದ್ಯಮಿ ಏಳ್ತಿಮಾರ್ ವಿಜಯಲಕ್ಷ್ಮೀ ಶೆಣೈ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.
ಸಿ. ಕೆ. ನಾಗರಾಜ್ ಒಬ್ಬ ಭಾರತೀಯ ಬರಹಗಾರ. ಮಾತ್ರವಲ್ಲದೆ ನಾಟಕ ರಚನಾಕಾರ, ರಂಗ ಕಲಾವಿದ, ನಿರ್ದೇಶಕ, ಪತ್ರಕರ್ತ ಮತ್ತು ಕನ್ನಡದ ಹಾಗೂ ಸಾಮಾಜಿಕ ಮಹಾನ್ ಕಾರ್ಯಕರ್ತರಾಗಿ ಹಲವು ಆಯಾಮಗಳಲ್ಲಿ ದುಡಿದವರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1915ರ ಜೂನ್ 12 ರಂದು ಜನಿಸಿದ ಸಿ. ಕೆ. ನಾಗರಾಜ ರಾವ್ ಇವರು ಕೃಷ್ಣಮೂರ್ತಿ ರಾವ್ ಮತ್ತು ಪುಟ್ಟಮ್ಮ ದಂಪತಿಗಳ ಸುಪುತ್ರ. ತಂದೆ ಕೃಷ್ಣಮೂರ್ತಿ ರಾವ್ ಉದ್ಯೋಗ ನಿಮಿತ್ತ ಆಗಾಗ ವರ್ಗಾವಣೆಗೊಂಡು ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಕಾರಣ ಇವರ ವಿದ್ಯಾಭ್ಯಾಸವು ಬೇರೆ ಬೇರೆ ಊರುಗಳಲ್ಲಿ ನಡೆಯಿತು. ಪ್ರಾರಂಭಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ನಡೆದರೂ ಚನ್ನಪಟ್ಟಣ ಚಿತ್ರದುರ್ಗ ಮತ್ತು ಬೆಂಗಳೂರುಗಳಲ್ಲಿಯೂ ವಿದ್ಯಾಭ್ಯಾಸ ಮಾಡಬೇಕಾಯಿತು. ಇಂಟರ್ಮಿಡಿಯಟ್ ನಲ್ಲಿ ತೇರ್ಗಡೆ ಹೊಂದಿದರೂ ಬದುಕಿನ ಆರ್ಥಿಕ ಮಿತಿಯಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ‘ಮೈಸೂರು ಪ್ರೀಮಿಯರ್ ಮೆಟಲ್ ಕಾರ್ಖಾನೆ’ಯಲ್ಲಿ ಸಿಬ್ಬಂದಿ ನಿಯಂತ್ರಕರಾಗಿ ಕೆಲಸ ಮಾಡಿ ಮುಂದೆ ಇವರ ಸೋದರ ಮಾವ ನಿಟ್ಟೂರು ಶ್ರೀನಿವಾಸರಾಯರು ನಡೆಸುತ್ತಿದ್ದ ‘ಸತ್ಯ ಶೋಧನ ಪ್ರಕಟಣಾ ಮಂದಿರ’ದಲ್ಲಿ ಐದು ವರ್ಷ ವ್ಯವಸ್ಥಾಪಕರಾಗಿ…
ತೆಕ್ಕಟ್ಟೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಪ್ರಾಯೋಜಕತ್ವದಲ್ಲಿ ಧಮನಿ ಟ್ರಸ್ಟ್ ಆಯೋಜಿಸಿಕೊಂಡ ಎರಡು ದಿನಗಳ ನಾಟಕೋತ್ಸವ ಉದ್ಘಾಟನಾ ಸಮಾರಂಭ ದಿನಾಂಕ 31 ಮೇ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಖ್ಯಾತ ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಇವರನ್ನು ಅಭಿನಂದಿಸಿದ ಡಾ. ಕೋಟ ಶಿವರಾಮ ಕಾರಂತ ಟ್ರಸ್ಟ್ ಸಾಲಿಗ್ರಾಮ ಇದರ ಅಧ್ಯಕ್ಷರಾದ ಬಿ. ಎಂ. ಗುರುರಾಜ್ ರಾವ್ ಮಾತನಾಡಿ “ಭವಿಷ್ಯದ ಕುಡಿಗಳಲ್ಲಿ ಅಧ್ಯಯನ ಬಹಳಷ್ಟಿದೆ. ರಂಗಭೂಮಿಯ ಮೂಲಕದ ಚಟುವಟಿಕೆಗಳಿಂದ ಮಕ್ಕಳ ಮನಸ್ಸು ಅರಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಧಮನಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಮಕ್ಕಳೊಂದಿಗಿನ ಬದುಕು ಕ್ಲಿಷ್ಟಕರವೆನಿಸಿದರೂ ಮನೋಲ್ಲಾಸದ ಕ್ಷಣವಾಗಿ ಉಳಿಯುವುದು” ಎಂದು ಅಭಿಪ್ರಾಯಪಟ್ಟರು. ಕೋಟ ಶಿವರಾಮ ಕಾರಂತ ಟ್ರಸ್ಟ್ ಇದರ ಕಾರ್ಯದರ್ಶಿ ಕೆ. ನಾರಾಯಣ, ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷರಾದ ಹೆರಿಯ ಮಾಸ್ಟರ್, ಶ್ರೀಷ ತೆಕ್ಕಟ್ಟೆ, ಶ್ರೀಮತಿ ಸುಲೋಚನಾ ಉಪಸ್ಥಿತರಿದ್ದರು. ಪಂಚಮಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಿಕ ರೋಹಿತ್ ಎಸ್. ಬೈಕಾಡಿ…