Author: roovari

ಕೊಡಗು : ಕೊಡಗಿನ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಕೊಡವ ಸಮಾಜದಲ್ಲಿ ದಿನಾಂಕ 19 ಜನವರಿ 2025ರಂದು ಚೆಕ್ಕೇರ ಕುಟುಂಬದ ಆತಿಥ್ಯದ 23ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪಂಚಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಇವರು ಕೊಡವ ಭಾಷೆಯಲ್ಲಿ ರಚಿಸಿರುವ ಹನ್ನೊಂದು ಪ್ರಕಾರದ ಕವನವನ್ನು ಒಳಗೊಂಡಿರುವ ‘ಪಾನೆಲ್ಚಿಲ್ ಪೊನ್ನೆಳ್ತ್’ ಎಂಬ ಕವನ ಸಂಕಲನವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣರು ಲೋಕಾರ್ಪಣೆ ಮಾಡಿದರು. ಚೆಕ್ಕೇರ ಕಪ್ಪ್ ಪಂದ್ಯಾವಳಿ ಅಧ್ಯಕ್ಷರಾದ ಚಂದ್ರಪ್ರಕಾಶ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ತೀತಿರ ರೋಷನ್ ಅಪ್ಪಚ್ಚು, ಕೊಡವ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಕೀರ್ತಿಯಂಡ ಕಾರ್ಸನ್ ಕಾರ್ಯಪ್ಪ, ಅಂಜಿಗೇರಿ ನಾಡ್ ತಕ್ಕರಾದ ಚೆಕ್ಕೇರ ರಾಜೇಶ್, ಚೆಕ್ಕೇರ ಕುಟುಂಬದ ಅಧ್ಯಕ್ಷರಾದ ಕಾಶಿ ಕಾಳಯ್ಯ ಮತ್ತು ಪುಸ್ತಕ ದಾನಿ ಉಳುವಂಗಡ ಕಮಲಾಕ್ಷಿ ತರುಂಬಯ್ಯ ಉಪಸ್ಥಿತರಿದ್ದರು. ಲೇಖಕಿ ಉಳುವಂಗಡ ಕಾವೇರಿ…

Read More

ಪೆರ್ಮುದೆ : ಶ್ರೀ ಮಹಾದೇವಿ ಯಕ್ಷ ನಾಟ್ಯಾಲಯ ಬಜ್ಪೆ ಪೆರ್ಮುದೆ ಇದರ ತೃತೀಯ ವರ್ಷದ ವಾರ್ಷಿಕೋತ್ಸವ ಮತ್ತು ಯಕ್ಷಗಾನ ಗೌರವಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 25 ಜನವರಿ 2025ರಂದು ಸಂಜೆ 4-00 ಗಂಟೆಗೆ ಪೆರ್ಮುದೆ ಶ್ರೀ ಶಾರದಾ ಯಕ್ಷಗಾನ ಮಂಡಳಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಶಾರದಾ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಶ್ರೀ ಉಲ್ಲಾಸ್ ಆರ್. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಪರ್ವದಲ್ಲಿ ಖ್ಯಾತ ಹಿರಿಯ ಮದ್ದಳೆ ಗಾರರಾದ ಶ್ರೀ ಮಣಿ ಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಗುರುಗಳಾದ ಶ್ರೀ ರಾಜೇಶ್ ಕಟೀಲು ಇವರಿಗೆ ಗುರುವಂದನೆ ಮಾಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾದೇವಿ ಯಕ್ಷ ನಾಟ್ಯಾಲಯದ ಸದಸ್ಯರಿಂದ ‘ಶ್ರೀ ದೇವಿ ಮಹಿಷ ಮರ್ದಿನಿ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ಕನ್ನಡ ಮತ್ತು ಮಲೆಯಾಳಂ ನಡುವೆ ಸೇತುವೆಯಾಗಿದ್ದ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ ಕೆ.ಕೆ. ಗಂಗಾಧರನ್‌ ಇವರು ದಿನಾಂಕ 19 ಜನವರಿ 2025ರಂದು ಈ ಲೋಕವನ್ನಗಲಿದರು. ಇವರ ನಿಧನದಿಂದ ಅನುವಾದ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗಿದೆ. 1949ರ ಮಾರ್ಚ್ 10ರಂದು ಕೇರಳದ ಕಾಸರಗೋಡು ಜಿಲ್ಲೆಯ ಪಾತನಡ್ಕ ಎಂಬ ಹಳ್ಳಿಯಲ್ಲಿ ಜನಿಸಿದ್ದ ಗಂಗಾಧರನ್‌ ಬಾಲ್ಯವನ್ನು ಕೊಡಗಿನ ಸೋಮವಾರಪೇಟೆಯ ಸಮೀಪದ ಕಬ್ಬಿಣಸೇತುವೆ ಎಂಬಲ್ಲಿ ಕಳೆದರು. ಕಾಜೂರು, ಸೋಮವಾರಪೇಟೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ ಬಿ.ಎಸ್‌.ಸಿ. ಪದವಿ ಪಡೆದರು. 1970ರಲ್ಲಿ ಹಾಸನದ ಕೊಥಾರಿ ಕಾಫಿ ಕ್ಯೂರಿಂಗ್‌ ವರ್ಕ್ಸ್ ನಲ್ಲಿ ವೃತ್ತಿಯನ್ನು ಆರಂಭಿಸಿದ ಗಂಗಾಧರನ್ 1974ರಲ್ಲಿ ಅಂಚೆ ಇಲಾಖೆಯ ರೈಲ್ವೆ ಮೇಲ್‌ ಸರ್ವಿಸ್‌ ವಿಭಾಗದಲ್ಲಿ ಉದ್ಯೋಗ ಪಡೆದರು. ಅರಸೀಕೆರೆ, ತುಮಕೂರು, ಮೈಸೂರು, ಮಡಿಕೇರಿ ಹಾಗೂ ಬೆಂಗಳೂರುಗಳಲ್ಲಿ ಕೆಲಸ ಮಾಡಿ, 2009ರಲ್ಲಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕನ್ನಡ ಮಾಧ್ಯಮದಲ್ಲಿ ಕಲಿತ ಗಂಗಾಧರನ್ ರ, ಮನೆ ಮಾತು ಮಲಯಾಳಂ. ಅಂಚೆ ವಿಭಾಗದ ಬಿಡುವಿಲ್ಲದ ಕೆಲಸಗಳ ನಡುವೆ…

Read More

ಮಂಗಳೂರು : ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗಳು ಬಂಟ್ಸ್ ಹಾಸ್ಟಲ್ ಮಂಗಳೂರು ಇದರ ಸಹಯೋಗದೊಂದಿಗೆ ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸುವ ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ‘ರಂಗ ಸಂಗೀತ ಕಾರ್ಯಾಗಾರ’ವನ್ನು ದಿನಾಂಕ 15 ಮತ್ತು 16 ಫೆಬ್ರವರಿ 2025ರಂದು ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9380412518 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಫ್ರೆಂಡ್ಸ್ ಸೆಂಟರ್‌ ಸಹಯೋಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 233ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮವನ್ನು ದಿನಾಂಕ 19 ಜನವರಿ 2025ರಂದು ಗೋಪಾಲ ಫ್ರೆಂಡ್ಸ್ ಸೆಂಟರ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೂಡಾ ಅಧ್ಯಕ್ಷರಾದ ಎಚ್.ಎಸ್. ಸುಂದರೇಶ್ “ಸಮಾಜದಲ್ಲಿನ ವಾಸ್ತವತೆಯನ್ನು ಕವಿತೆ, ಹನಿಗವನ, ಕಥೆಗಳ ಮೂಲಕ ವಿಶ್ಲೇಷಿಸಿ ಪರಸ್ಪರ ಚರ್ಚಿಸುವಂತಹ ಕಾರ್ಯಕ್ಕೆ ಸಾಹಿತ್ಯ ಹುಣ್ಣಿಮೆ ಪ್ರೇರಣೆಯಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಹಾಗೂ ಹಳ್ಳಿಗಳಲ್ಲಿ ಸಾಹಿತ್ಯ ಹುಣ್ಣಿಮೆ ಮೂಲಕ ಸಾಹಿತ್ಯವನ್ನು ಪಸರಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸುತ್ತಿರುವ ವಿಚಾರಗಳು ಸರ್ಕಾರದ ಆಡಳಿತವನ್ನು ಸದಾ ಎಚ್ಚರಿಸುತ್ತಿದ್ದು, ಸಮಾಜಕ್ಕೆ ಪೂರಕ ಶಕ್ತಿಯಾಗಿ ನಿಲ್ಲಲಿದೆ. ಮಲೆನಾಡಿನ ಸಾಹಿತಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ವಿದೇಶದಲ್ಲಿರುವ ಕನ್ನಡಿಗರು ರಾಜ್ಯೋತ್ಸವ ಕಾರ್ಯಕ್ರಮಗಳನ್ನು ತಮ್ಮ ದೇಶಗಳಲ್ಲಿ ಆಯೋಜಿಸುವ ಮೂಲಕ ನಾಡಿನ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಿದ್ದಾರೆ” ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ…

Read More

ಉಪ್ಪಿನಕುದ್ರು : ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ.) ಮತ್ತು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇವರ ಜಂಟಿ ಆಶ್ರಯದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 10ನೇ ವಾರ್ಷಿಕೋತ್ಸವ ಹಾಗೂ ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2025’ ಪ್ರದಾನ ಸಮಾರಂಭವು ದಿನಾಂಕ 19 ಜನವರಿ 2025ರಂದು ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಹರಿಕೃಷ್ಣ ಪುನರೂರುರವರು ಮಾತನಾಡಿ “ಜಾನಪದ ಕ್ಷೇತ್ರಕ್ಕೆ ಉಪ್ಪಿನಕುದ್ರು ಗೊಂಬೆಯಾಟ ತಂಡದ ಕೊಡುಗೆ ಅಪಾರ. ಇಂದು 6ನೇ ತಲಾಂತರದಲ್ಲಿ ನಡೆಯುತ್ತಿರುವ ಈ ಕಲೆಯನ್ನು ನಾವೆಲ್ಲರೂ ಸೇರಿ ಉಳಿಸಬೇಕು” ಎಂದು ನುಡಿದರು. ಹಾಲ್ಮಕ್ಕಿ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಗಂಗೊಳ್ಳಿ ಇವರ ವಿಷ್ಣು ಸಹಸ್ರನಾಮದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಂಗೊಳ್ಳಿಯ ಡಾ. ಕಾಶೀನಾಥ್ ಪೈಯವರು ಪ್ರಾರ್ಥಿಸಿದರು. ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್‌ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ಹಾಗೂ ಇತ್ತೀಚೆಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಪಕಳಕುಂಜ ಶ್ಯಾಮ್ ಭಟ್ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 18 ಜನವರಿ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ಮತ್ತು ಕಲಾವಿದ ಜಯರಾಮ‌ ದೇವಸ್ಯ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ದಿವಂಗತರ ಸಹೋದರಿಯರು, ಬಂಧುಗಳು ಉಪಸ್ಥಿತರಿದ್ದರು. ಬಳಿಕ ‘ಭೀಮ ದ್ರೌಪದೀ ಸ೦ವಾದ – ವಿದುರ ಭಕ್ತಿ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಕುಮಾರಿ ಶರಣ್ಯ ನೆತ್ತೆರ್ಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಜಯರಾಮ ದೇವಸ್ಯ (ಭೀಮ), ಭಾಸ್ಕರ್ ಬಾರ್ಯ (ದ್ರೌಪದೀ ಮತ್ತು ಶ್ರೀ ಕೃಷ್ಣ‌), ತಾರಾನಾಥ ಸವಣೂರು (ವಿಧುರ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು.

Read More

ಮಂಗಳೂರು : ‘ಬಹು ಓದು’ ಬಳಗ ಹಾಗೂ ‘ಆಕೃತಿ ಆಶಯ’ ಪಬ್ಲಿಕೇಶನ್ ಇದರ ಸಹಯೋಗದೊಂದಿಗೆ ‘ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ’ ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 19 ಜನವರಿ 2025ರ ರವಿವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿರುವ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿಲೋಕಾರ್ಪಣೆಗೊಳಿಸಿದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊಫೆಸರ್ ಸಬಿಹಾ ಭೂಮಿಗೌಡ ಮಾತನಾಡಿ “ಅವಿಭಜಿತ ದಕ್ಷಿಣ ಕನ್ನಡದ ಬಹುರೂಪಿ ಚಿಂತನೆಗಳನ್ನು ಒಂದೆಡೆ ಕಟ್ಟಿಕೊಡುವ ಕೃತಿಯೇ ‘ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ’. 1995 ರಿಂದ 2023ರವರೆಗಿನ ಮೂರು ದಶಕಗಳ ಕಾಲದ ಈ ಭಾಗದ ಲೇಖಕ ಲೇಖಕಿಯರು, ಸಾಹಿತಿ, ಸಾಹಿತ್ಯ, ಸಂಸ್ಕೃತಿ ಮತ್ತು ಸ್ತ್ರೀವಾದಿ ತಾತ್ವಿಕತೆಯ ಬಗ್ಗೆ ಏನನ್ನು ಯೋಚನೆ ಮಾಡಿದ್ದಾರೆ, ಕಾಲ ಕಾಲಕ್ಕೆ ಅನುಗುಣವಾಗಿ ಅದನ್ನು ಹೇಗೆ ಅಭಿವ್ಯಕ್ತಿಗೊಳಿಸಿದ್ದಾರೆ ಎಂಬುದು ಈ ಪುಸ್ತಕದ ಓದಿನಿಂದ ತಿಳಿದುಕೊಳ್ಳಬಹುದು” ಎಂದು ಹೇಳಿದರು. ಕೃತಿ ವಿಮರ್ಶೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ರಾಜಲಕ್ಷ್ಮೀ ಎನ್. ಕೆ.…

Read More

ಮಂಗಳೂರು : ಖ್ಯಾತ ಕಲಾವಿದ, ಶೇವಗೂರ್‌ ಫೈನ್ ಆರ್ಟ್ಸ್ ಖ್ಯಾತಿಯ ರಾಮದಾಸ್ ಕಾಮತ್ ಶೇವಗೂರ್‌ ದಿನಾಂಕ 15 ಜನವರಿ 2025 ರಂದು ನಿಧನರಾದರು ಇವರಿಗೆ 78 ವರ್ಷ ವಯಸ್ಸಾಗಿತ್ತು. ಇವರ ಪತ್ನಿ ಕೊಂಕಣಿ ಕಿರು ಕಥೆಗಳ ಹೆಸರಾಂತ ಲೇಖಕಿ ಸಂಧ್ಯಾ ಶೇವಗೂರ್‌ 2011ರಲ್ಲಿ ನಿಧನ ಹೊಂದಿದ್ದರು. ಮಂಗಳೂರಿನ ಪ್ರಸಿದ್ದ ಶೇವಗೂರ್ ಕಲಾವಿದರ ಕುಟುಂಬದ ರಾಮದಾಸ್ ಅಗ್ರಗಣ್ಯ ಗ್ರಾಫಿಕ್ ಡಿಸೈನರ್ ಮತ್ತು ಭಾವಚಿತ್ರ ಕಲಾವಿದ ಎಲ್. ಕೆ. ಶೇವಗೂರ್‌ ಅವರ ಪುತ್ರರಾಗಿದ್ದಾರೆ. ಮುಂಬಯಿಯ ಪ್ರತಿಷ್ಠಿತ ಜೆ. ಜೆ. ಸ್ಕೂಲ್ ಆಫ್ ಆರ್ಟ್‌ನಲ್ಲಿ ಕಲಾ ಶಿಕ್ಷಣವನ್ನು ಪಡೆದ ಇವರು ತಂದೆಯ ನಿಧನಾನಂತರ ಶೇವಗೂರ್ ಫೈನ್ ಆರ್ಟ್ಸ್ ನಲ್ಲಿ ತಂದೆಯ ಪರಂಪರೆಯನ್ನು ಮುಂದುವರಿಸಿದರು. ಭಾವಚಿತ್ರ ರಚನೆಯಲ್ಲಿ, ಅದರಲ್ಲೂ ವಿಶೇಷವಾಗಿ ತೈಲವರ್ಣ ಚಿತ್ರದಲ್ಲಿ ರಾಮದಾಸ್ ಪ್ರಾವೀಣ್ಯ ಹೊಂದಿದ್ದರು. ಕರಾವಳಿಯಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಗೋಡೆಗಳನ್ನು ಇವರ ಜೀವ ಸದೃಶ ಭಾವಚಿತ್ರಗಳು ಅಲಂಕರಿಸಿವೆ. ವಿಶ್ವ ಕೊಂಕಣಿ ಕೇಂದ್ರದ ಹಾಲ್ ಆಫ್ ಫೇಮ್‌ನಲ್ಲಿ ಕಾಣಸಿಗುವ ಅನೇಕ…

Read More

ತೆಕ್ಕಟ್ಟೆ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ-100’ ಕಾರ್ಯಕ್ರಮದಡಿಯಲ್ಲಿ ‘ದೊಂದಿ ಬೆಳಕಿನ ಹಾಗೂ ಮಂದ ಬೆಳಕಿನ ಯಕ್ಷಗಾನ’ ಮತ್ತು ವಿಶ್ರಾಂತ ಕಲಾವಿದರಿಂದ ‘ಗಾನ ವೈಭವ’ ದಿನಾಂಕ 19 ಜನವರಿ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಲಾಸ್ 1, ಕಂಟ್ರ್ಯಾಕ್ಟರ್ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ “ಇಪ್ಪತ್ತೈದರ ‘ಬೆಳ್ಳಿ ಹಬ್ಬ’ದ ಸಂಸ್ಥೆಯಾದ ಯಶಸ್ವೀ ಕಲಾವೃಂದ ಕಳೆದ ಇಪ್ಪತ್ತೈದು ವರ್ಷಗಳಿಂದ ಕಲೆಯ ಉಳಿವಿಗಾಗಿ ಶ್ರಮಿಸಿ, ಈ ವಸಂತದಲ್ಲಿ 100 ಕಾರ್ಯಕ್ರಮ ಈಗಾಗಲೇ ನಿರ್ವಹಿಸಿರುವುದು ಸಣ್ಣ ವಿಶಯವಲ್ಲ. ಈ ತಂಡಕ್ಕೆ ಇನ್ನಷ್ಟು ಸಹಕಾರ ಸರಕಾರದಿಂದ ದೊರೆತು ಶಕ್ತಿ ವೃದ್ಧಿಸಲಿ” ಎಂದು ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಡಾ. ಶಿವರಾಮ ಶೆಟ್ಟಿ ಮಾತನಾಡಿ “ವರ್ಷವಿಡೀ ನಿರಂತರತೆಯನ್ನು ಕಾಯ್ದುಕೊಳ್ಳುವುದು ಬಹಳ ಕಷ್ಟ. ಒಂದೇ ವರ್ಷದಲ್ಲಿ 108ಕಾರ್ಯಕ್ರಮದ ಸಂಕಲ್ಪಕ್ಕೆ ಮನ ಮಾಡಿದ ಸಂಸ್ಥೆಗೆ ಸರಕಾರ ಸಹಕಾರ ಮಾಡದಿದ್ದರೆ…

Read More