Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ರಂಗಚಂದಿರ (ರಿ.) ಆಯೋಜಿಸಿರುವ ‘ರಂಗಕರ್ಮಿ ಟೆಲಿಕಾಂ ದತ್ತಾತ್ರೇಯ ನೆನಪು’ ಕಾರ್ಯಕ್ರಮದ ಪ್ರಯುಕ್ತ ಗಾಯನ, ರಂಗ ಗೌರವ ಮತ್ತು ನಾಟಕ ಪ್ರದರ್ಶನವು ದಿನಾಂಕ 29 ಜನವರಿ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಸಂಜೆ 4-00 ಗಂಟೆಗೆ ಕುವೆಂಪು ಪ್ರಕಾಶ್ ತಂಡದವರಿಂದ ಗಾಯನ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. 6-00 ಗಂಟೆಗೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಪ್ರಕಾಶಮೂರ್ತಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ಬಲವಂತರಾವ್ ಪಾಟೀಲ್ ಇವರು ಉದ್ಘಾಟನೆ ಮಾಡಲಿರುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಬೈರಮಂಗಲ ರಾಮೇಗೌಡ, ಹಿರಿಯ ಪತ್ರಕರ್ತರಾದ ಶ್ರೀ ರಾಜು ಮಳವಳ್ಳಿ, ರಂಗ ನಿರ್ದೇಶಕರಾದ ಶ್ರೀ ವೆಂಕಟಾಚಲ, ಭಾರತ ತಂಡ ವಾಲಿಬಾಲ್ ಮುಖ್ಯ ತರಬೇತಿದಾರರಾದ ಶ್ರೀ ಕೆ.ಆರ್. ಲಕ್ಷ್ಮೀನಾರಾಯಣ ಮತ್ತು ‘ಕುಹೂ ಕುಹೂ’ ಸಂಗೀತ ಸಂಸ್ಥೆಯ ನಿರ್ದೇಶಕರಾದ ಶ್ರೀ ಸುರೇಶ್ ಬಾಬು ಇವರಿಗೆ…
ಕಾಸರಗೋಡು : ಸಂಘಟಕ, ಪತ್ರಕರ್ತ, ಚಿತ್ರನಟ ಹಾಗೂ ಸಾಹಿತಿಯಾದ ಶ್ರೀ ಬೊಳ್ಳಜಿರ ಬಿ. ಅಯ್ಯಪ್ಪ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಕೊಡಗು ಜಿಲ್ಲೆಯ ಜಿಲ್ಲಾ ಘಟಕದ, ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸಲಾಗುತ್ತಿದೆ. ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿ, ಇನ್ನೊರ್ವ ಕರ್ನಾಟಕ ರಾಜ್ಯ ಸಂಚಾಲಕರಾದ ಬಿ. ಶಿವಕುಮಾರ್ ಕೋಲಾರ ಹಾಗೂ ನಿರ್ದೇಶಕರಾದ ಡಾ. ಕೊಳಚಪ್ಪೆ ಗೋವಿಂದ ಭಟ್ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಶ್ರೀ ಬೊಳ್ಳಜಿರ ಬಿ. ಅಯ್ಯಪ್ಪ ಇವರು ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ, 20,000 ಪುಸ್ತಕಗಳುಳ್ಳ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ, ಸಾಂಸ್ಕೃತಿಕ ಯಾತ್ರಾರ್ಥಿಗಳಿಗೆ ‘ಉಚಿತ ವಸತಿ ಸೌಕರ್ಯ’, ‘ಪ್ರತಿ ಮನೆಗೊಂದು…
ಪೆರ್ಲ : ರಂಗ ಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು. ನಾಲಂದ ಕಾಲೇಜು ಆಡಳಿತ ಮಂಡಳಿ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ರಂಗ ಸಂಸ್ಕೃತಿ ಕಾರ್ಯಾಗಾರವು ದಿನಾಂಕ 17 ಜನವರಿ 2025ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪ ನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರಶಸ್ತಿ ಪುರಸ್ಕೃತ ಸಿನಿಮಾ ನಟ, ನಿರ್ದೇಶಕ ಹಾಗೂ ರಂಗಕರ್ಮಿ ಕಾಸರಗೋಡು ಚಿನ್ನಾ ಮಾತನಾಡಿ “ನಟನೆ ತುಂಬಾ ಸುಲಭ. ಆದರೆ ನಟನೆಯ ಅನುಕರಣೆ ಕಷ್ಟ. ರಂಗ ಕಲೆಯಲ್ಲಿ ನಟನಾ ಕೌಶಲ್ಯ, ವಾಕ್ ಸ್ಪುಟತೆ, ಉಚ್ಚಾರ ಸ್ಪಷ್ಟತೆಯ ಸಂಭಾಷಣೆ, ಪಾತ್ರಕ್ಕೆ ತಕ್ಕ ಹಾವ ಭಾವ, ಸಂಜ್ಞೆಗಳ ಅಭಿನಯ ಮೂಲಕ ಪ್ರೇಕ್ಷಕರ ಮನ ತಣಿಸಬೇಕು. ರಂಗ ಕಲೆ ‘ನಾನು ಅಲ್ಲ ನಾವು’ ಎಂಬುದನ್ನು ಕಲಿಸಿಕೊಡುತ್ತದೆ. ಒಂದು ತಿಂಗಳ ರಂಗ ತರಬೇತಿಯಲ್ಲಿ ಭಾಗವಹಿಸುವ ಮಕ್ಕಳು ಜಾತಿ, ಮತ, ಬೇಧ, ಭಾವವಿಲ್ಲದೆ ಪರಸ್ಪರ ಬೆರೆಯುತ್ತಾರೆ. ಇದರಿಂದ ಮನುಷ್ಯ ಸಂಬಂಧ ಬಲಗೊಳ್ಳುತ್ತದೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಹೆತ್ತವರು ಮತ್ತು ಶಿಕ್ಷಕರು…
ಮಂಗಳೂರು : ರಂಗ ಅಧ್ಯಯನ ಕೇಂದ್ರ, ಸಂತ ಆಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಗೆಳೆಯರು ಮಂಗಳೂರು ಆಯೋಜಿಸುವ ಮಂಡ್ಯ ಪಾಂಡವಪುರದ ಚಾನಲ್ ಥಿಯೇಟರ್ ಪ್ರಸ್ತುತ ಪಡಿಸುವ, ಅಕ್ಷತಾ ಪಾಂಡವಪುರ ರಚಿಸಿ, ನಟಿಸಲಿರುವ ‘ಲೀಕ್ ಔಟ್’ ಕನ್ನಡ ನಾಟಕ ಪ್ರದರ್ಶನವು ದಿನಾಂಕ 22 ಜನವರಿ 2025ರಂದು ಸಂಜೆ ಗಂಟೆ 6-45ಕ್ಕೆ ಮಂಗಳೂರಿನ ಸಂತ ಆಲೋಶಿಯಸ್ ಸಹೋದಯದಲ್ಲಿ ನಡೆಯಲಿದೆ. ಅಸ್ತಿತ್ವ (ರಿ.) ಮಂಗಳೂರು ಮತ್ತು ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದೊಂದಿಗೆ ಪ್ರದರ್ಶನಗೊಳ್ಳುವ ಈ ನಾಟಕಕ್ಕೆ ಉಚಿತ ಪ್ರವೇಶವಿದೆ.
ಕಾಸರಗೋಡು : ಸಂಘಟಕ, ಸಾಹಿತಿ, ಶಿಕ್ಷಕ, ಸಾಹಿತ್ಯ ಪರಿಷತ್, ಜಾನಪದ ಪರಿಷತ್ ಮತ್ತು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಸಂಘ, ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸಕ್ರಿಯರಾಗಿರುವವರು ಚಾಮರಾಜನಗರದ ಶ್ರೀ ಎಸ್. ನಂಜುಂಡಯ್ಯ. ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಚಾಮರಾಜನಗರ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸಲಾಗುತ್ತಿದೆ. ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ. ತ್ಯಾಗರಾಜ್ ಮೈಸೂರು ಇವರು ಎಸ್. ನಂಜುಂಡಯ್ಯನವರನ್ನು ನಾಮ ನಿರ್ದೇಶನ ಮಾಡಿ, ಇನ್ನೊರ್ವ ಕರ್ನಾಟಕ ರಾಜ್ಯ ಸಂಚಾಲಕರಾದ ಬಿ. ಶಿವಕುಮಾರ್ ಕೋಲಾರ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಶ್ರೀ ಎಸ್. ನಂಜುಂಡಯ್ಯ ಇವರು ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ. 20,000 ಪುಸ್ತಕಗಳುಳ್ಳ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ…
ಡಾ. ಗುಂಡ್ಮಿ ಚಂದ್ರಶೇಖರ ಐತಾಳ್ ಇವರು ಕಳೆದ ಶತಮಾನದ ಒಬ್ಬ ಸಜ್ಜನ, ಸಹನೆಯೇ ಮೂರ್ತಿವೆತ್ತಂತಿರುವ ಮೌಲ್ಯಯುತ ಸಾಹಿತಿ. ಸರಳವಾದ ಜೀವನ ಶೈಲಿ, ಮಿತಭಾಷಿಯಾದ ಇವರನ್ನು ನೋಡುವಾಗ ಇವರೊಂದು ಜ್ಞಾನ ಭಂಡಾರ ಎಂಬುದು ಅರಿವಿಗೆ ಬರುವುದಿಲ್ಲ. ಆದರೆ ಅದನ್ನು ಅವರ ಕೃತಿಗಳಲ್ಲಿ ಕಾಣಬಹುದು. 1936 ಜನವರಿ 20ರಂದು ಉಡುಪಿ ತಾಲೂಕಿನ ಗುಂಡ್ಮಿಯಲ್ಲಿ ಇವರ ಜನನವಾಯಿತು. ತಂದೆ ರಾಮಚಂದ್ರ ಮತ್ತು ತಾಯಿ ಸತ್ಯಮ್ಮ. ಎಳವೆಯಿಂದಲೇ ಓದು ಬರಹದಲ್ಲಿ ಬಹಳ ಆಸಕ್ತಿ ತೋರುತ್ತಿದ್ದ ಐತಾಳರ ಒಲವು ಸಾಹಿತ್ಯದ ಕಡೆಗೂ ಇತ್ತು. ತಾನೇ ಸ್ವತಃ ಸಣ್ಣಪುಟ್ಟ ಕವನಗಳನ್ನು ರಚಿಸಿ ಪತ್ರಿಕೆಗಳಿಗೆ ಕಳುಹಿಸುತ್ತಿದ್ದರು. ಬಾಲ್ಯದ ಈ ಅಭ್ಯಾಸವೇ ಮುಂದೆ ಸತ್ವಯುತ ಬರಹಗಳಿಗೆ ನಾಂದಿಯಾಯಿತು. ಡಾ. ಚಂದ್ರಶೇಖರ ಐತಾಳರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿಯನ್ನು ಪಡೆದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ವೃತ್ತಿಯನ್ನು ಆರಂಭಿಸಿದರು. ಇವರು ತಾನು ಹುಟ್ಟಿ ಬೆಳೆದ ಹಳ್ಳಿಯ ಸುತ್ತಮುತ್ತಲಿನ ಪರಿಸರದಲ್ಲಿ ತಿರುಗಾಡಿ ಜನಪದ ಹಾಡುಗಳ ಅಧ್ಯಯನ ಮಾಡಿ ನೂರಾರು ಹಾಡುಗಳನ್ನು ಸಂಗ್ರಹಿಸಿ ಎರಡು ಕೃತಿಗಳ ರೂಪದಲ್ಲಿ…
ಬೆಂಗಳೂರು : ಬಿ.ಎಂ.ಶ್ರೀ. ಪ್ರತಿಷ್ಠಾನ (ರಿ.) ಮತ್ತು ಎಂ.ವಿ.ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರ ಇದರ ವತಿಯಿಂದ ‘ಶ್ರೀ ಸಾಹಿತ್ಯ ಪ್ರಶಸ್ತಿ 2025’ ಪ್ರದಾನ ಸಮಾರಂಭವನ್ನು ದಿನಾಂಕ 25 ಜನವರಿ 2025ರಂದು ಬೆಳಗ್ಗೆ 10-30 ಗಂಟೆಗೆ ಬಿ.ಎಂ.ಶ್ರೀ. ಕಲಾಭವನದ ಎಂ.ವಿ.ಸೀ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರಖರ ಸ್ತ್ರೀ ಸಂವೇದನೆಯ ಲೇಖಕಿ ಪ್ರೊ. ವೀಣಾ ಶಾಂತೇಶ್ವರ ಇವರಿಗೆ ‘ಶ್ರೀ ಸಾಹಿತ್ಯ ಪ್ರಶಸ್ತಿ’ಯನ್ನು ಹಿರಿಯ ವಿದ್ವಾಂಸ ಅಂತಾರಾಷ್ಟ್ರೀಯ ಖ್ಯಾತಿಯ ಸಂಶೋಧಕರಾದ ನಾಡೋಜ ಡಾ. ಹಂಪ ನಾಗರಾಜಯ್ಯ ಇವರು ಪ್ರದಾನ ಮಾಡಲಿರುವರು.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ನಡೆಯಲಿರುವ ದ.ಕ. ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆಗೆ ಅವಕಾಶ ಕಲ್ಪಿಸಿದ್ದು, ಆಸಕ್ತ ಲೇಖಕರು/ಪ್ರಕಾಶಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮ್ಮೇಳನವು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ನಡೆಯಲಿದ್ದು, ಯಾವುದೇ ಪ್ರಕಾರದ ಕನ್ನಡ ಪುಸ್ತಕಗಳ ಬಿಡುಗಡೆಗೆ ಅವಕಾಶವಿದೆ. ಆಸಕ್ತರು ವಿವರಗಳಿಗೆ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಡಾ. ಧನಂಜಯ ಕುಂಬ್ಳೆ ಸಂಪರ್ಕ 8310300875 ಇವರನ್ನು 22 ಜನವರಿ 2025ರ ಮುಂಚಿತವಾಗಿ ಸಂಪರ್ಕಿಸಬಹುದು ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.
ಮಂಗಳೂರು : ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಂಚಾಡಿಯ ಶ್ರೀ ರಾಮ ಯಕ್ಷ ವೃಂದದ ಕಲಾವಿದರಿಂದ ‘ವೀರ ವೀರೇಶ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 18 ಜನವರಿ 2025 ರಂದು ನಡೆಯಿತು. ಕಾರ್ಯಕ್ರಮದ ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಅಶೋಕ್ ಬಿ, ಶಿವಪ್ರಸಾದ ಪ್ರಭು, ಶ್ರೀ ವತ್ಸರಾವ್, ರವಿ ಅಲೆವೂರಾಯ, ವಿಜಯ ಲಕ್ಷ್ಮೀ ಎಲ್. ಎನ್. ಹಾಗೂ ಗಂಗಾಧರ ಕಿರೋಡಿಯನ್ ಸಹಕರಿಸಿದರು. ಮಲ್ಲಿಕಾ ಕಲಾವೃಂದದ ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ್ ಉಪಸ್ಥಿತರಿದ್ದರು.
ಬೆಂಗಳೂರು : ನಾಡಿನ ಪ್ರಸಿದ್ಧ ಚಿತ್ರಕಲಾವಿದರಾದ ಕೆ.ಜಿ. ಲಿಂಗದೇವರು ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ದಿನಾಂಕ 21 ಜನವರಿ 2025ರಿಂದ 30 ಜನವರಿ 2025ರವರೆಗೆ ಬೆಳಗ್ಗೆ 11-00 ಗಂಟೆಯಿಂದ ಸಂಜೆ 7-00 ಗಂಟೆವರೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಕಲಾ ಗ್ಯಾಲರಿಯಲ್ಲಿ ನಡೆಯಲಿದೆ. ‘ಶೋಧ’ ಶೀರ್ಷಿಕೆಯಡಿ ನಡೆಯುತ್ತಿರುವ ಈ ಚಿತ್ರಕಲಾ ಪ್ರದರ್ಶನದಲ್ಲಿ ಸುಮಾರು 63 ಕಲಾಕೃತಿಗಳಿರಲಿವೆ. ಕೆ.ಜಿ. ಲಿಂಗದೇವರು ಕ್ಯಾನ್ಸಾಸ್‌ನಲ್ಲಿ ಮೂಡಿದ ಹತ್ತು ಹಲವು ರೇಖೆಗಳು ಅಸಂಗತ ಆಕೃತಿಗಳಾಗಿ ಬಣ್ಣ ತುಂಬಿಕೊಂಡು ವಿಶಿಷ್ಟ ಚಿತ್ರಗಳಾಗಿ ಹೊರಹೊಮ್ಮಿವೆ. ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಒಂದು ರೀತಿಯ ಶೋಧದಲ್ಲಿ ತೊಡಗಿರುವುದು ಸಹಜ ಮತ್ತು ಅದು ನಮಗೆ ಅನಿವಾರ್ಯ. ಈ ಸರಣಿಯಲ್ಲಿ ಬರುವ ಚಿತ್ರಗಳಲ್ಲಿ ಹುಟ್ಟಿನಿಂದ ಶುರುವಾಗುವ ಹುಡುಕಾಟವಿದೆ. ಬಳಿಕ ಅಧ್ಯಾತ್ಮಿಕ ದೀಪದಿಂದ ಮಾಡುವ ತನ್ನೊಳಗಿನ ಶೋಧವೂ ಇದೆ. ಲಿಂಗದೇವರು ಇವರ ಈ ಸರಣಿಯಲ್ಲಿ ಕಾಣಿಸುವ ಎರಡು ಆಕೃತಿಗಳಲ್ಲಿ ಒಂದು ಪಂಚಮಹಾಭೂತಗಳಿಂದಾದ ಅರಿಷಡ್ವರ್ಗಗಳ ತೊಗಲು ಹೊತ್ತ ದೇಹವಾದರೆ ಇನ್ನೊಂದು ಚಿತ್ರವು ಅವೆಲ್ಲವನ್ನು ಮೀರಿ…