Author: roovari

ಬೆಂಗಳೂರು : ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಯಕ್ಷಗಾನ ಮುಖವರ್ಣಿಕೆ ಶಿಬಿರವು ದಿನಾಂಕ 03-09-2023 ರಂದು ಬೆಂಗಳೂರಿನ ತ್ಯಾಗರಾಜ ನಗರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮುಖವರ್ಣಿಕೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಉಡುಪಿ ಎಂ.ಜಿ.ಎಂ. ಕಾಲೇಜಿನ ಉಪನ್ಯಾಸಕ ಮತ್ತು ಯಕ್ಷಗಾನ ಕಲಾವಿದರಾದ ರಾಘವೇಂದ್ರ ತುಂಗ “ಯೋಗಾಭ್ಯಾಸದಂತೆ ದೇಹ ಮತ್ತು ಮನಸ್ಸಿನ ಸಮನ್ವಯಕ್ಕೆ ಯಕ್ಷಗಾನ ಕಲೆ ಪೂರಕ. ನಿರಂತರ ಯಕ್ಷಗಾನ ಅಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸುಗಳ ಕ್ಷಮತೆ ಹೆಚ್ಚಾಗಿ ದೈನಂದಿನ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಕಲೆಯಲ್ಲಿ ತೊಡಗಿಕೊಳ್ಳುವುದಕ್ಕೆ ವೃತ್ತಿಪರತೆಯ ಅಗತ್ಯವಿದೆ. ಯಕ್ಷಗಾನ ಕಲಾವಿದರಾದವರು ತಾವೇ ವೇಷ ಧರಿಸುವುದನ್ನು ಅಭ್ಯಾಸ ಮಾಡಕೊಳ್ಳಬೇಕು. ಅದರಲ್ಲಿಯೂ ಯಕ್ಷಗಾನ ಮುಖವರ್ಣಿಕೆಯಲ್ಲಿ ಪರಿಣಿತಿ ಇದ್ದರೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯ. ಯಕ್ಷಾಂಗಣ ಟ್ರಸ್ಟ್ ವಿದ್ಯಾರ್ಥಿಗಳಿಗೆ ಮುಖವರ್ಣಿಕೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ” ಎಂದು ಹೇಳಿದರು. ಈ ಯಕ್ಷಗಾನ ಶಿಬಿರದಲ್ಲಿ ಸುಮಾರು ಮೂವತೈದರಿಂದ ನಲವತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ವೇದಿಕೆಯಲ್ಲಿ ಯಕ್ಷದೇಗುಲದ ಸುದರ್ಶನ ಉರಾಳ, ಯಕ್ಷ ಗುರು ಪ್ರಿಯಾಂಕ ಕೆ.ಮೋಹನ್…

Read More

ತೆಕ್ಕಟ್ಟೆ : ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದಲ್ಲಿ ಸೋಣೆ ಆರತಿ ಸಂದರ್ಭ ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಆಯೋಜಿಸಿದ ಯಕ್ಷಗಾನ ತಾಳಮದ್ದಳೆ ಸರಣಿ ಕಾರ್ಯಕ್ರಮ ಅರ್ಥಾಂಕುರ-2 ದಿನಾಂಕ 03-09-2023ರಂದು ಉದ್ಘಾಟಣೆಗೊಂಡಿತು. ಹೊಸ ಅರ್ಥದಾರಿಗಳಿಗೆ ವೇದಿಕೆ ಕಲ್ಪಿಸಲು ಆಯೋಜಿಸುವ ಈ ಸರಣಿ ಕಾರ್ಯಕ್ರಮದ ಎರಡನೇ ಹಂತವನ್ನು ದೀಪ ಪ್ರಜ್ವಲಿಸಿ ಡಾ.ಜಗದೀಶ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಇವರು “ಹಿಂದಿನ ಕಾಲದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಅಭ್ಯಾಸ ಕೂಟಗಳು ತಾಳಮದ್ದಳೆ ಅಭ್ಯಾಸಕ್ಕಾಗಿ ಆಗುತ್ತಿದ್ದವು. ಇದರಿಂದಾಗಿ ಅನೇಕ ಕಲಾವಿದರು ಪ್ರಬುದ್ಧತೆಯನ್ನು ಸಾಧಿಸಿ ಮೆರೆದಿದ್ದಾರೆ. ಇತ್ತೀಚೆಗೆ ಅಲ್ಲಲ್ಲಿ ಇಂತಹ ಕೂಟಗಳು ನೆರವೇರುತ್ತಿರುವ ಈ ಸಂದರ್ಭದಲ್ಲಿ ಯಶಸ್ವೀ ಕಲಾವೃಂದ ‘ಅರ್ಥಾಂಕುರ’ ಎನ್ನುವ ಶಿರೋನಾಮೆಯಡಿಯಲ್ಲಿ ಹೊಸ ಆಯಾಮವನ್ನು ರೂಪಿಸುವಲ್ಲಿ ಕಾಲಿರಿಸಿದೆ. ಇದರಿಂದಾಗಿ ಯಕ್ಷವೃಕ್ಷದ ಗೆಲ್ಲುಗಳು ಕವಲೊಡೆಯುತ್ತ ಸಾಂಸ್ಕೃತಿಕ ಕ್ಷೇತ್ರ ಈ ಅಂಕುರದಿಂದಾಗಿ ಹೆಮ್ಮರವಾಗಿ ಬೆಳೆಯಲಿ” ಎಂದು ಹೇಳಿದರು. ಗೌರವ ಅತಿಥಿಯಾಗಿ ಭಾಗವಹಿಸಿದ ಪ್ರಸಿದ್ಧ ಅರ್ಥದಾರಿ ಸುನೀಲ್ ಹೊಲಾಡು ಮಾತನಾಡುತ್ತಾ “ಕಲಾವಿದರನ್ನು ರಂಗಕ್ಕೆ ತಂದು ತಾಲೀಮು ನಡೆಸುವ ಕಾರ್ಯ ಅತ್ಯಂತ ಸ್ತುತ್ಯರ್ಹ. ಹಿರಿಯ…

Read More

ಬಂಟ್ವಾಳ : ಪಂಚಾಯತ್ ರಾಜ್ ನ ರಾಷ್ಟ್ರೀಯ ತರಬೇತುದಾರ, ಹಿರಿಯ ರಂಗಕರ್ಮಿ, ರಂಗ ನಿರ್ದೇಶಕ ಮಂಜು ವಿಟ್ಲ (77) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಕುಂಟಿಕಾನದಲ್ಲಿರುವ ತಮ್ಮ ಪುತ್ರಿಯ ಮನೆಯಲ್ಲಿ ದಿನಾಂಕ 06-09-2023ರಂದು ನಿಧನರಾಗಿದ್ದಾರೆ. ಧಾರ್ಮಿಕ, ಸಾಮಾಜಿಕ, ವ್ಯಕ್ತಿತ್ವ ವಿಕಸನ, ಮಹಿಳಾ ಸಬಲೀಕರಣ, ನಾಟಕ, ರೂಪಕ, ವರ್ಣಾಲಂಕಾರ, ರಂಗ ಸಜ್ಜಿಕೆ ಸಹಿತ ಮೊದಲಾದ ಚಟುವಟಿಕೆಯಲ್ಲಿ ಮಂಜು ವಿಟ್ಲ ಅವರು ತೊಡಗಿಸಿಕೊಂಡಿದ್ದರು. ಬಿ.ಸಿ.ರೋಡು ಪರಿಸರ ಮತ್ತು ಅವರ ಆಪ್ತ ವಲಯದಲ್ಲಿ ‘ಮಂಜಣ್ಣ’ ಎಂದೇ ಚಿರಪರಿಚಿತರಾಗಿದ್ದ ಇವರು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ಅಲ್ಲದೇ ಹಿರಿಯ ಚಿತ್ರ ಕಲಾವಿದರಾಗಿ, ಕಾರ್ಯಕ್ರಮ ನಿರೂಪಕನಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಮೂಲತಃ ಇವರು ವಿಟ್ಲದ ನಿವಾಸಿ. ಸದಾ ನಗುಮುಖದ ಸರಳ, ಸ್ನೇಹಜೀವಿಯಾಗಿದ್ದ ಇವರು ಹಲವಾರು ತುಳು, ಕನ್ನಡ, ಪೌರಾಣಿಕ ನಾಟಕಗಳ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಲ್ಲದೆ 1000ಕ್ಕೂ ಮಿಕ್ಕಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಇವರು ಅಭಿನಯಿಸಿದ್ದ ‘ಚೋಮನ ದುಡಿ’ ನಾಟಕದ ಚೋಮನ ಪಾತ್ರ ಇವರಿಗೆ ಹೆಚ್ಚು ಮನ್ನಣೆ…

Read More

ಮಂಗಳೂರು : ಮಾಂಡ್‌ ಸೊಭಾಣ್‌ ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಸುತ್ತಿರುವ ಮ್ಹಯ್ನ್ಯಾಳಿ ಮಾಂಚಿ (ಮಾಸಿಕ ರಂಗಭೂಮಿ) ಸರಣಿಯ 261ನೇ ಕಾರ್ಯಕ್ರಮದ ಅಂಗವಾಗಿ ‘ಅಸ್ಮಿ ತಾಯ್’ ಚಿತ್ರದ ಹಾಡುಗಳ ಲೋಕಾರ್ಪಣೆ ಮತ್ತು ‘ನಿಮ್ಣೆಂ ಉತರ್’ ನಾಟಕ ಪ್ರದರ್ಶನ ಕಾರ್ಯಕ್ರಮವು ದಿನಾಂಕ 03-09-2023 ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಗೋವಾದ ಕೊಂಕಣಿ ಮುಖಂಡ ಗೌರೀಶ್ ವೆರ್ಣೇಕರ್ ಅವರು ಘಂಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾಂಗಣ್ ಪಿರ‍್ಜೆಂತ್‌ ಉದ್ಯಮಿ ರೊಯ್ ಕ್ಯಾಸ್ಟಲಿನೊ ಮತ್ತು ಕಸ್ಟಮ್ಸ್ ಅಧಿಕಾರಿ ಸ್ಟೀವನ್ ಡಯಾಸ್ ಗ್ರಾಮಾಫೋನ್‌ ಮುಳ್ಳನ್ನು ತಟ್ಟೆಯ ಮೇಲಿರಿಸುವ ಮೂಲಕ ಗೀತೆಗಳನ್ನು ಬಿಡುಗಡೆ ಮಾಡಿದರು. ನಂತರ ಮಾಂಡ್‌ ತಂಡದವರಿಂದ ವಿದ್ದು ಉಚ್ಚಿಲ್ ನಿರ್ದೇಶನದ ಕೊಂಕಣಿ ನಾಟಕ “ನಿಮ್ಣೆಂ ಉತರ್‌” ಪ್ರದರ್ಶನಗೊಂಡಿತು. ಮೂಲತಃ ಜಿ.ಶಂಕರ್ ಪಿಳ್ಳೆ ಅವರು ರಚಿಸಿದ ‘ಭರತ ವಾಕ್ಯಂ’ ಎಂಬ ಈ  ನಾಟಕವನ್ನು ಕನ್ನಡಕ್ಕೆ ನಾ.ದಾಮೋದರ ಶೆಟ್ಟಿ ಮತ್ತು ಕೊಂಕಣಿಗೆ ವಿತೊರಿ ಕಾರ್ಕಳ್ ಮತ್ತು ರೊನಿ ಕ್ರಾಸ್ತಾ ಕೆಲರಾಯ್‌ ಅನುವಾದಿಸಿದ್ದಾರೆ. ಒಂದಾನೊಂದು ಕಾಲದಲ್ಲಿ ಯಶಸ್ಸಿನ…

Read More

ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ & ಕಲ್ಚರಲ್ ಹೆರಿಟೇಜ್ (ಇಂಟಾಕ್) ಇದರ ಮಂಗಳೂರು ಅಧ್ಯಾಯ, ಆರ್ಟ್ ಕೆನರಾ ಟ್ರಸ್ಟ್ ಮತ್ತು ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಸಹಯೋಗದೊಂದಿಗೆ ‘ಎ ಮಾರ್ನಿಂಗ್ ವಿತ್ ಪಂಡಿತ್ ರವಿಕಿರಣ್ ಮಣಿಪಾಲ್’ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಗೋಷ್ಠಿಯು ದಿನಾಂಕ 03-09-2023ರ ಭಾನುವಾರ ಬೆಳಿಗ್ಗೆ ನಗರದ ಕೊಡಿಯಲ್‌ಗುತ್ತು ಪಶ್ಚಿಮದಲ್ಲಿರುವ ಕೊಡಿಯಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು. ಪಂಡಿತ್ ರವಿಕಿರಣ್ ಮಣಿಪಾಲ್ ಅವರು ಮಂಗಳೂರು ಆಕಾಶವಾಣಿಯ ಪ್ರಥಮ ದರ್ಜೆ ಕಲಾವಿದರಾಗಿರುವರು. ಇವರು ಆಗ್ರಾ ಗ್ವಾಲಿಯರ್ ಘರಾನಾದ ಪ್ರಸಿದ್ಧ ಗುರುಗಳಾದ ಉಡುಪಿಯ ಪಂಡಿತ್ ಮಾಧವ ಭಟ್ ಅವರಲ್ಲಿ ತಮ್ಮ ಆರಂಭಿಕ ತರಬೇತಿಯನ್ನು ಪಡೆದು ನಂತರ ನಾರಾಯಣ ಪಂಡಿತ್ ಅವರಲ್ಲಿ ತಮ್ಮ ವ್ಯಾಸಂಗ ಮುಂದುವರೆಸಿದರು. ಅಖಿಲ ಭಾರತೀಯ ಗಂಧರ್ವ ಮಹಾ ವಿದ್ಯಾಲಯದಿಂದ ‘ಸಂಗೀತ ಅಲಂಕಾರ’ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಿಂದ ‘ವಿದ್ವತ್’ ಪದವಿ ಪಡೆದಿರುವ ಇವರು ಭಾರತದ ಅನೇಕ ಪ್ರತಿಷ್ಠಿತ ಸಂಗೀತ ಉತ್ಸವಗಳಲ್ಲಿ ಪ್ರದರ್ಶನ ನೀಡಿರುವುದು …

Read More

ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ, ರೋಟರಿ ಉಡುಪಿ, ಸ್ವರ ಸರಸ್ವತಿ ಪ್ರತಿಷ್ಠಾನ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಎಂ.ಜಿ.ಎಂ. ಕಾಲೇಜಿನ ಕನ್ನಡ ವಿಭಾಗದ ಸಹಕಾರದಲ್ಲಿ ಡಾ.ಮಂಜಮ್ಮ ಜೋಗತಿ ಜೀವನಾಧಾರಿತ ಏಕವ್ಯಕ್ತಿ ನಾಟಕ ‘ಮಾತಾ’ ಪ್ರದರ್ಶನವು ದಿನಾಂಕ 03-09-2023ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ರಂಗಭೂಮಿ ಉಡುಪಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡುತ್ತಾ “ತೃತೀಯ ಲಿಂಗಿಯಾಗಿ ನಿರಂತರ ಸಂಘರ್ಷ ಜೀವನ ನಡೆಸಿ, ತನ್ನಂತಹ ಶೋಷಿತರ ಧ್ವನಿಯಾದ ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಅವರ ಬದುಕೇ ಅವರಂತಹ ತೊಳಲಾಟದ ಮಂದಿಗೆ ಜೀವನ ಪಾಠವಾಗಿದೆ. ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಸಮಾನತೆ, ಗೌರವಯುತವಾಗಿ ಜೀವನ ನಡೆಸಲು ಉದ್ಯೋಗಾವಕಾಶಗಳು ಸಿಗಬೇಕು. ಅವರದಲ್ಲದ ತಪ್ಪಿಗೆ ಅವರ ಬದುಕು ಹೊರೆಯಂತೆ ಅನಿಸಬಾರದು.…

Read More

ಬೆಂಗಳೂರು : ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ‘ದಕ್ಲಕಥಾ ದೇವಿಕಾವ್ಯ’ ನಾಟಕದ ಪ್ರದರ್ಶನವು ಬೆಂಗಳೂರಿನ ರಂಗಶಂಕರದಲ್ಲಿ ದಿನಾಂಕ 12-09-2023ರಂದು ಸಂಜೆ ಗಂಟೆ 7.30ಕ್ಕೆ ನಡೆಯಲಿದೆ. ಕೆ.ಬಿ. ಸಿದ್ದಯ್ಯನವರ ಆಯ್ದ ಬರಹಗಳನ್ನು ಆಧರಿಸಿದ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಲಕ್ಷ್ಮಣ್ ಕೆ.ಪಿ.ಯವರು. ಇವರಿಗೆ ಸ್ಕಂದ ಘಾಟೆ ಹಾಗೂ ಶ್ರೀಹರ್ಷ ಜಿ.ಎನ್. ಸಹನಿರ್ದೇಶಕರಾಗಿ ಸಹಕರಿಸಿದ್ದಾರೆ. ನಾಟಕದ ಬೆಳಕಿನ ವಿನ್ಯಾಸವನ್ನು ಮಂಜು ನಾರಾಯಣ್ ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ವೇತಾಮಣಿ ಎಚ್.ಕೆ. ಅವರದ್ದು. ನಾಟಕದಲ್ಲಿ ಪಾತ್ರಧಾರಿಗಳು ಮತ್ತು ಸಂಗೀತಗಾರರಾಗಿ ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ್ ದಿಂಡ್ಗೂರು, ನರಸಿಂಹರಾಜು ಬಿ.ಕೆ. ಹಾಗೂ ಭರತ್ ಡಿಂಗ್ರಿ ಕಲಾಭಿಮಾನಿಗಳನ್ನು ರಂಜಿಸಲಿದ್ದಾರೆ. ಹೊಸ ರಂಗ ಪರಿಭಾಷೆಯನ್ನು ಬಹಳ ಜತನದಿಂದ ಕಟ್ಟಿ, ಯಾವುದೇ ಅಬ್ಬರವಿಲ್ಲದೆ ಹಿತಮಿತವಾದ ಸಂಗೀತ ಹಾಗೂ minimalistic stage design ಈ ನಾಟಕದ ಮೆರಗು. ಕೇವಲ ಆಧ್ಯಾತ್ಮಿಕ ಪುರಾಣ ಕಥೆಗಳಿಗೆ ಜೋತು ಬಿದ್ದಿರುವ ಈ ಸಮಯದಲ್ಲಿ ವಿಶಿಷ್ಟವಾದ ಒಂದು ಕಥೆಯನ್ನು ರಂಗರೂಪಕ್ಕೆ ತಂದಿರುವುದು, ಸಿದ್ಧ ಮಾದರಿಯನ್ನು ಮುರಿದು ನಟರ ಅಭಿವ್ಯಕ್ತಿಗೆ…

Read More

ಬೆಂಗಳೂರು : ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ನಾಟಕದ ಪ್ರದರ್ಶನವು ದಿನಾಂಕ 08-09-2023 ರಂದು ಬೆಂಗಳೂರಿನ ಹನುಮಂತನಗರದಲ್ಲಿರುವ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನ ಗೊಳ್ಳಲಿದೆ. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ “ಅಣ್ಣನ ನೆನಪು” ಕೃತಿಯು ಮಹಾಕವಿ ಕುವೆಂಪು ಇವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದೂ ಹೇಳಬಹುದು. ಕುವೆಂಪು, ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಹಿಸಿದ ಮಹತ್ವಪೂರ್ಣ ಪಾತ್ರದಿಂದಾಗಿ ಇವು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳೂ ಆಗಿದೆ. ಇದೆಲ್ಲದರ ಜೊತೆಗೆ ಇದೊಂದು ಅತಿಸುಂದರ ಕಾದಂಬರಿಯಂಥ  ಕಲಾಕೃತಿ. ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ ಮತ್ತು ಅವರ ಸುತ್ತ ಅರಳಿರುವ ಅನೇಕ ಪಾತ್ರಗಳು ಕನ್ನಡ ಸಾಹಿತ್ಯದಲ್ಲಿನ ಅನನ್ಯ ದಾಖಲೆ.

Read More

ಉಡುಪಿ : ಉಡುಪಿಯ 26 ಬಡಗುಬೆಟ್ಟು ಬೈಲೂರು ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಸಿಂಹ ಮಾಸದ ಐದು ಶುಕ್ರವಾರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಸರಣಿಯ ಮೂರನೆಯ ಶುಕ್ರವಾರ ದಿನಾಂಕ 01-09-2023ರ ಸಂಜೆ ಕುಮಾರಿ ಹಿತಾ ಮಯ್ಯ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಲಿಟ್ಟಲ್ ರಾಕ್ ಇಂಡಿಯನ್ ಸ್ಕೂಲ್ ಇಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ರಾಘವೇಂದ್ರ ಮಯ್ಯ ಮತ್ತು ರಮಣಿ ಮಯ್ಯ ಇವರ ಸುಪುತ್ರಿ. ಸನಾತನ ನಾಟ್ಯಾಲಯದ ವಿದುಷಿ ವಾಣಿಶ್ರೀ ಇವರ ಶಿಷ್ಯೆಯಾಗಿರುವ ಕುಮಾರಿ ಹಿತಾ ಮಯ್ಯ ಕಳೆದ ಏಳು ವರ್ಷಗಳಿಂದ ಭಾರತ್ಯನಾಟ್ಯ ಅಭ್ಯಾಸ ಮಾಡುತಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಮಧೂರು ಬಾಲಸುಬ್ರಮಣ್ಯಂ ಇವರಿಂದ ಅಭ್ಯಾಸ ಮಾಡುತ್ತಿದ್ದಾರೆ. ತನ್ನ ಐದನೇ ವಯಸ್ಸಿನಿಂದ ಭಾರತ್ಯನಾಟ್ಯ ಕಾರ್ಯಕ್ರಮ ನೀಡಲು ಆರಂಭಿಸಿರುವ ಈಕೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಈಕೆಯ ಸಾಧನೆಗೆ ಬೆಂಗಳೂರಿನ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ಆರ್ಟ್ಸ್ ನಿಂದ ಕಲಾಯಶಸ್ವಿ ಪ್ರಶಸ್ತಿ , ಎ.ಐ.ಡಿ.ಎ ಇಂದ ಬಾಲಶ್ರೀ ಪ್ರಶಸ್ತಿ ಹಾಗೂ ವಿಜಯಕರ್ನಾಟಕದಿಂದ ವಿಕ…

Read More

ಕಾಸರಗೋಡು: ಬೆಂಗಳೂರಿನ ವೀರಲೋಕ ಪ್ರಕಾಶನದ ದೇಸಿ ಜಗಲಿ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಜಿಲ್ಲಾ ಮಟ್ಟದ ಕಥಾ ಕಮ್ಮಟವು ದಿನಾಂಕ 23-09-2023 ಮತ್ತು 24-09-2023 ರಂದು ಉಪ್ಪಳದ ಬಾಯಿಕಟ್ಟೆ ಸಮೀಪದ ಲಕ್ಷ್ಮಿ ಮಿಲ್ಸ್‌ ಸಭಾಭವನದಲ್ಲಿ ನಡೆಯಲಿದೆ. ಖ್ಯಾತ ಸಂಶೋಧಕ ಮತ್ತು ಅನುವಾದಕ ಡಾ.ಮೋಹನ ಕುಂಟಾರು ಕಥಾ ಕಮ್ಮಟದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುವರು. ಜಿಲ್ಲೆಯ ಉದಯೋನ್ಮುಖ ಬರಹಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, 40 ವರ್ಷದೊಳಗಿನ ಆಸಕ್ತ ಬರಹಗಾರರು ಈ ಕಥಾ ಕಮ್ಮಟದಲ್ಲಿ ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳಬಹುದು. ಈ ಕಮ್ಮಟದ ಎರಡು ದಿನಗಳ ಕಾಲ ಊಟ ಮತ್ತು ಉಪಹಾರಗಳ ವ್ಯವಸ್ಥೆಯಿದ್ದು ಪ್ರವೇಶವು ಉಚಿತವಾಗಿದೆ. ಆಸಕ್ತ ಬರಹಗಾರರು ಹೆಚ್ಚಿನ ಮಾಹಿತಿಗಾಗಿ ಸಂಚಾಲಕ ಡಾ.ಸುಭಾಷ್‌ ಪಟ್ಟಾಜೆ 9645081966, ಹಿರಿಯ ಲೇಖಕ ಪ್ರೊ.ಪಿ.ಎನ್.ಮೂಡಿತ್ತಾಯ 9495296720 ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಬಹುದು.

Read More