Subscribe to Updates
Get the latest creative news from FooBar about art, design and business.
Author: roovari
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸುಂಟಿಕೊಪ್ಪದಲ್ಲಿ ನಡೆಸಲು ಜಿಲ್ಲಾ ಸಮಿತಿಯು ತನ್ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ. ಈ ಸಭೆಯು ದಿನಾಂಕ 16-02-2024ರಂದು ಮಡಿಕೇರಿಯ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆದಿದೆ. ಮಾರ್ಚ್ ಎರಡನೇ ವಾರದಲ್ಲಿ ಈ ಸಮ್ಮೇಳನವು ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರ ಸಮಿತಿ ನೀಡುವ ಸತ್ಯವತಿ ವಿಜಯ ರಾಘವ ಚಾರಿಟೇಬಲ್ ಟ್ರಸ್ಟ್ ದತ್ತಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಬರಹಗಾರ್ತಿ ಹಂಚೆಟೀರ ಫ್ಯಾನ್ಸಿ ಮುತ್ತಣ್ಣ ಇವರು ಆಯ್ಕೆಯಾಗಿದ್ದು, ಅವರು ಜಿಲ್ಲಾ ಕಾರ್ಯಕಾರಿ ಸಮಿತಿಯ ನಿರ್ದೇಶಕರೂ ಆಗಿದ್ದು, ಅವರನ್ನು ಅವರ ಸಾಧನೆಗಾಗಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ “ಕೊಡಗು ಜಿಲ್ಲೆಯ ಇತಿಹಾಸ ಮತ್ತು ಮಹಿಳೆಯ ಸಮಸ್ಯೆ ಬಗ್ಗೆ ವಿಶೇಷ ಅಧ್ಯಯನ…
ನೃತ್ಯ ಕಲಾವಿದ/ ಕಲಾವಿದೆಯಾಗಿ ಕಲಾಮಾತೆಯ ಸೇವಾ ಕೈಂಕರ್ಯದಲ್ಲಿ ನಿರಂತರವಾಗಿ ಮುಂದುವರೆದು, ನಟರಾಜನ ದಯೆಗೆ ಪಾತ್ರರಾಗಿ, ಕಲಾ ರಸಿಕರ ಮನದಲ್ಲಿ ಸದಾ ನೆಲೆಗೊಂಡು ಅತ್ಯುತ್ತಮ ಸ್ಥಾನ ಗಳಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ. ಈ ಸಾಧನೆಗೆ ಪರಿಪಕ್ವ ಮನಸ್ಸು ಮತ್ತು ಶಾಂತಚಿತ್ತದಿಂದ ಎಲ್ಲವನ್ನೂ ಒಂದೇ ರೀತಿಯಲ್ಲಿ ಒಪ್ಪಿಕೊಳ್ಳುವ – ಅಪ್ಪಿಕೊಳ್ಳುವ ಗುಣವು ಬೇಕೇ ಬೇಕು. ಧನಾತ್ಮಕ ಮತ್ತು ಮುಖ್ಯವಾಗಿ ಋಣಾತ್ಮಕ ಅಂಶಗಳನ್ನೂ ಪಡೆದುಕೊಂಡು, ಅದನ್ನು ಮನದಲ್ಲಿ ಅಳೆದು ತೂಗಿ, ತಪ್ಪುಗಳಿದ್ದರೆ ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಯನ್ನು ಸೃಷ್ಟಿಸಿ ಎಲ್ಲರಿಂದ ಸೈ ಅನ್ನಿಸಿಕೊಳ್ಳಲು ಬಹಳ ಕಾಲ ಹಿಡಿಯುತ್ತದೆ. ಈ ಮಧ್ಯೆ ಅದೆಷ್ಟೋ ಅಡಚಣೆಗಳು, ಕಠೋರ ಮಾತುಗಳು, ಮೂಕ ರೋದನೆ ಮತ್ತು ಕೆಲವೊಮ್ಮೆ ಪ್ರತಿಭಟನೆ ಹೀಗೆ ಹಲವಾರು ಆಪತ್ತನ್ನು ಎದುರಿಸುತ್ತಾ, ಒಳ್ಳೆಯದನ್ನು ಸ್ವೀಕರಿಸಿ, ಖುಷಿ ಪಟ್ಟುಕೊಳ್ಳುತ್ತಾ ಸಾಗುತ್ತದೆ ಕಲಾ ಬದುಕು. ನಾವು ಮಾಡುವ ಕೆಲಸಗಳು ಎಲ್ಲರನ್ನೂ ತಲುಪುವುದಿಲ್ಲ, ತಲುಪಿದರೂ ಸಹಜವಾದ ಬದಲಾವಣೆಯನ್ನು ಅವರವರ ದೃಷ್ಟಿಕೋನದಲ್ಲಿ ಉಂಟುಮಾಡಿ ನಮ್ಮನ್ನು ಕ್ರಿಯಾತ್ಮವಾಗಿ ಬೆಳೆಸುತ್ತದೆ. ಇಂತಹ ಕಲಾವಿದ/ಕಲಾವಿದೆಯರು ನಮ್ಮ ನಡುವೆ…
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವವು ‘ಶತಕಂಠ ಗಾಯನ’ವು ದಿನಾಂಕ 09-02-2024ರಂದು ಶ್ರೀ ಕೃಷ್ಣ ಮಠ ರಾಜಾಂಗಣದಲ್ಲಿ ನಡೆಯಿತು. ಆ ಪ್ರಯುಕ್ತ ನಡೆದ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು “ಶ್ರೀ ಪುರಂದರ ದಾಸರ ಒಂದೊಂದು ರಚನೆಯಲ್ಲೂ ದೈವಿಕತೆ ಮತ್ತು ದೇವರ ಸಾನ್ನಿಧ್ಯವಿದೆ. ಅವುಗಳನ್ನು ಬಹಳ ಭಕ್ತಿಯಿಂದ ಭಾವಪೂರ್ಣವಾಗಿ ರಚಿಸಿದ್ದಾರೆ. ಅವುಗಳು ಸುಲಲಿತ ಮತ್ತು ಭಾವಜನಕವಾಗಿದ್ದು, ಪ್ರಭಾವ ಬೀರುತ್ತವೆ. ನಿರಂತರ ಆಲಿಸುವಂತೆ ಮಾಡುವ ಶಕ್ತಿಯುಳ್ಳ ಶಾಸ್ತ್ರೀಯ ರಚನೆಗಳು ಪುರಂದರದಾಸರನ್ನು ಆದುದರಿಂದಲೇ ಅವರ ಹಾಡುಗಳು ಎಲ್ಲ ಕಾಲಕ್ಕೂ ಎಲ್ಲರ ಮೇಲೂ ಪ್ರಭಾವ ಬೀರುತ್ತದೆ” ಎಂದು ನುಡಿದರು. ಶ್ರೀಮನ್ ಮಾಧವತೀರ್ಥ ಸಂಸ್ಥಾನದ ಕಿರಿಯ ಪಟ್ಟದ ಯತಿ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರು ಮಾತನಾಡಿ, ಭ – ಭಕ್ತಿ ಪೂರ್ವಕವಾಗಿ, ಜ – ಜನಾರ್ದನ ರೂಪಿಯಾದ ಕೃಷ್ಣನನ್ನು ಕೃಷ್ಣರೂಪಿ ಜನಾರ್ದನನ್ನು, ನೆ – ನಿರಂತರ ನೆನೆಯುವುದೇ…
ಹಲವು ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ‘ಒಡಪುಗಳು’, ‘ಪ್ರತಿಮೆಗಳು’, ‘ದೇಸಗತಿ’, ‘ಮಾಯಿಯ ಮುಖಗಳು’, ‘ಎಷ್ಟು ಕಾಡತಾವ ಕಬ್ಬಕ್ಕೀ’ (ಕಥಾ ಸಂಕಲನಗಳು) ಬಾಳವ್ವನ ಕನಸುಗಳು, ತೇರು, ಅಮೃತವಾಹಿನಿ (ಕಾದಂಬರಿಗಳು) ಎಂಬ ಕೃತಿಗಳನ್ನು ಪ್ರಕಟಿಸಿದ ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’ ಎಂಬ ಕಾದಂಬರಿಯು ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವೆನಿಸುತ್ತದೆ. ವ್ಯಾಸರಾಯ ಬಲ್ಲಾಳರ ‘ಹೆಜ್ಜೆ ಗುರುತು’, ಎಚ್. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿಗಳನ್ನು ಹೊರತು ಪಡಿಸಿ ಹೇಳುವುದಾದರೆ, ವಿಧವೆಯರ ವೈಯಕ್ತಿಕ ಬಾಳಿನ ಮೇಲೆ ಮಾತ್ರ ಗಮನವನ್ನು ಹರಿಸಿಕೊಂಡು ಬೆಳಕು ಕಂಡ ಮಾಸ್ತಿಯವರ ‘ಶೇಷಮ್ಮ’, ಶಿವರಾಮ ಕಾರಂತರ ‘ನಿರ್ಭಾಗ್ಯ ಜನ್ಮ’, ಎಂ.ಕೆ. ಇಂದಿರಾ ಅವರ ‘ಫಣಿಯಮ್ಮ’, ‘ಸದಾನಂದ’, ನಿರಂಜನರ ‘ಸ್ಮರಣೆಯೊಂದೇ ಸಾಲದೇ?’ ಎಂಬ ರಚನೆಗಳಿಗಿಂತ ಹೆಚ್ಚಿನ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಈ ಕೃತಿಯು ಕಾದಂಬರಿಯ ಚೌಕಟ್ಟನ್ನು ಮೀರಿ ಬೆಳೆದಿದೆ. ಬೆಳಗಾವಿ ಪ್ರದೇಶದ ಆಡುಮಾತಿನ ಸೊಗಡಿನೊಂದಿಗೆ ಪೌರಾಣಿಕ, ಸಾಮಾಜಿಕ ಮತ್ತು ರಾಜಕೀಯ ಆಯಾಮಗಳು ಹಾಸು ಹೊಕ್ಕಿರುವುದರಿಂದ ಚರ್ಚಿತ ಸಮಸ್ಯೆಗಳನ್ನು ಕುಟುಂಬ, ಪ್ರಾಂತ್ಯಗಳ ಎಲ್ಲೆಗಳನ್ನು ಮೀರಿ, ದೇಶದ…
ಕಾಸರಗೋಡು : ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕಾಸರಗೋಡು ಮತ್ತು ಕನ್ನಡ ಭವನ ಪ್ರಕಾಶನ ಇದರ ಸಾರಥ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.) ಇದರ ಸಹಯೋಗದಲ್ಲಿ ಕಾಸರಗೋಡಿನ ನುಳ್ಳಿಪ್ಪಾಡಿಯ ಪಿ.ಎಂ.ಎಸ್. ರಸ್ತೆಯಲ್ಲಿರುವ ಕನ್ನಡ ಭವನ ಸಮುಚ್ಚಯ ಸಭಾಂಗಣದಲ್ಲಿ ದಿನಾಂಕ 22-02-2024ರಂದು ಅಪರಾಹ್ನ 3 ಗಂಟೆಗೆ ‘ಶ್ರೀಮಾನ್ ಪಂಜೆ ಮಂಗೇಶರಾಯರ 150ನೇ ಜನ್ಮದಿನ ಸಂಭ್ರಮ – 2024’ ಕಾರ್ಯಕ್ರಮವು ನಡೆಯಲಿದೆ. ಡಾ. ಪಿ. ಶ್ರೀಕೃಷ್ಣ ಭಟ್, ಡಾ. ಕೆ. ಕಮಲಾಕ್ಷ, ಡಾ. ಯು. ಮಹೇಶ್ವರಿ, ಡಾ. ರಾಧಾಕೃಷ್ಣ ಬೆಳ್ಳೂರು, ಪ್ರೊ. ನಾರಾಯಣ ಮೂಡಿತ್ತಾಯ, ಪ್ರೊ. ಎ. ಶ್ರೀನಾಥ್, ವಿ.ಬಿ. ಕುಳಮರ್ವ, ಅಡ್ವ ಥೋಮಸ್ ಡಿ’ಸೋಜಾ, ಪಿ.ವಿ. ಪ್ರದೀಪ್ ಕುಮಾರ್ ಮಂಗಳೂರು, ಡಾ. ಕೊಳ್ಚಪೆ ಗೋವಿಂದ ಭಟ್, ಎ.ಆರ್. ಸುಬ್ಬಯ್ಯಕಟ್ಟೆ, ಪ್ರದೀಪ್ ಬೇಕಲ್, ವಿಶಾಲಾಕ್ಷ ಪುತ್ರಕಳ, ಅರಿಬೈಲ್ ಗೋಪಾಲ ಶೆಟ್ಟಿ, ವೈ. ಸತ್ಯನಾರಾಯಣ ಮತ್ತು…
ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ‘ಚಾಂದ್ರ ಮಧ್ವನವಮಿ’ ಕಾರ್ಯಕ್ರಮವು ದಿನಾಂಕ 18-02-2024ರಂದು ಉಡುಪಿಯ ಮಧ್ವ ಮಂಟಪ ಹಾಗೂ ರಾಜಾಂಗಣದಲ್ಲಿ ನಡೆಯಿತು. ಮಧ್ವ ಮಂಟಪದಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಪೂರ್ವಾಹ್ನ ಘಂಟೆ 11.00ರಿಂದ ತೌಳವ ಮಾಧ್ವ ಒಕ್ಕೂಟದ ಸದಸ್ಯರಿಂದ ‘ಮಧ್ವನಾಮಾವಳಿ ಪಾರಾಯಣ’ ನಡೆಯಿತು. ಬಳಿಕ ವಿದ್ವಾನ್ ವಾಗೀಶ್ ಭಟ್ ಇವರಿಂದ ‘ಆಚಾರ್ಯ ಮಧ್ವ’ ಎಂಬ ವಿಷಯದಲ್ಲಿ ಉಪನ್ಯಾಸ ನಡೆಯಿತು. ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ರಸಪ್ರಶ್ನೆ ಆಯೋಜಿಸಲಾಗಿತ್ತು. ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭಾಜನಾ ಮಂಡಳಿಗಳಿಂದ ಮಧ್ವಾಚಾರ್ಯರ ಚರಿತ್ರೆಯ ಹಿನ್ನೆಲೆಯ ಸಾಮೂಹಿಕ ಮಧ್ವಗಾಯನ ಹಾಗೂ ಪರ್ಯಾಯ ಶ್ರೀ ಪಾದದ್ವಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಆಶೀರ್ವಚನ ಹಾಗೂ ವಿದ್ವಾಂಸರಿಗೆ ಅನುಗ್ರಹ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಪ್ರಿಯಾಂಜಲಿ ರಾವ್ ಹಾಗೂ ಶ್ರೀಸ್ವರಂ ಮುಂಬೈ ಇವರಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು.
ಕಾಸರಗೋಡು : ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಕಾಸರಗೋಡು ಕೋಟೆಕಣಿಯ ಭರವಸೆಯ ಕವಯತ್ರಿ ಚಂಚಲಾಕ್ಷಿ ಶ್ಯಾಮ್ ಪ್ರಕಾಶ್ ಇವರ ಕವನ ಸಂಕಲನ ‘ಮತ್ತೆ ಚಿಗುರಿದ ಭಾವ’ ದಿನಾಂಕ 22-02-2024ರಂದು ಅಪರಾಹ್ನ 2 ಗಂಟೆಗೆ ಕನ್ನಡ ಭವನ ಪ್ರಕಾಶನದಿಂದ ಕೃತಿ ಬಿಡುಗಡೆಗೊಳ್ಳಲಿದೆ. ಇದು ಕನ್ನಡ ಭವನ ಪ್ರಕಾಶನದಿಂದ ಬಿಡುಗಡೆಯಾಗುವ ನಾಲ್ಕನೇ ಕೃತಿಯಾಗಿದೆ. ಕಥಾಬಿಂದು ಪ್ರಕಾಶನದ ರೂವಾರಿ ಸಾಹಿತಿ ಪ್ರದೀಪ್ ಕುಮಾರ್, ಡಾ. ಕೊಳ್ಚಪೆ ಗೋವಿಂದ ಭಟ್, ಕವಯತ್ರಿ ರೇಖಾ ಸುದೇಶ್ ರಾವ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಜಿಲ್ಲಾ ಮಹಿಳಾ ಸಂಘ ಗೌರವಾಧ್ಯಕ್ಷೆ ಕವಯತ್ರಿ ಆಶಾ ರಾಧಾಕೃಷ್ಣ, ನಿಕಟಪೂರ್ವ ಅಧ್ಯಕ್ಷೆ ಉಷಾಕಿರಣ್, ಲೇಖಕ ಪ್ರದೀಪ್ ಬೇಕಲ್, ಜಗದೀಶ್ ಕೂಡ್ಲು, ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮಮನೆ, ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ಮುಂತಾದವರು ಉಪಸ್ಥಿತರಿರುವರು. ಕಲ್ಕೂರ ಪ್ರತಿಷ್ಠಾನ ಮಂಗಳೂರಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಗಂಟೆ 2ರಿಂದ ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ…
ಮಂಗಳೂರು : ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ‘ಸಂದೇಶ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 11-02-2024ರ ಭಾನುವಾರದಂದು ಮಂಗಳೂರಿನ ಬಜ್ಜೋಡಿಯ ಸಂದೇಶ ಪ್ರತಿಷ್ಠಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ವಿಧಾನಸಭೆಯ ಸ್ಪೀಕರ್ ಆಗಿರುವ ಯು.ಟಿ. ಖಾದರ್ ”ಕಲೆ, ಸಾಹಿತ್ಯ ಸಂಸ್ಕೃತಿ ಮತ್ತು ಸೌಹಾರ್ದ ಪರಂಪರೆಯೇ ಒಂದು ಪ್ರದೇಶದ ಬಹುದೊಡ್ಡ ಆಸ್ತಿಯೇ ಹೊರತು, ಬೃಹತ್ ಕಟ್ಟಡಗಳಲ್ಲ. ಇಂತಹ ಸೌಹಾರ್ದ ಪರಂಪರೆ ಉಳಿಸಲು ನಾವು ಎಲ್ಲ ರೀತಿಯ ತ್ಯಾಗಕ್ಕಾಗಿ ಸಿದ್ಧರಾಗಬೇಕು. ಪಾಶ್ಚಿಮಾತ್ಯ ಸಂಸ್ಕೃತಿಯ ಒಲವಿನ ಮಧ್ಯೆ ನಮ್ಮ ನೆಲದ ಸಂಸ್ಕೃತಿಯನ್ನು ಜೀವಂತವಾಗಿಡುವ ಕೆಲಸವನ್ನು ಸಂದೇಶದಂಥ ಸಂಸ್ಥೆಗಳು ಮಾಡುತ್ತಿವೆ. ಸಂಸ್ಕೃತಿ ದುರ್ಬಲಗೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ನಮ್ಮ ಸಂಸ್ಕಾರ, ಪರಂಪರೆಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಕೆಲಸವನ್ನು ಸಂದೇಶ ಪ್ರತಿಷ್ಠಾನ ಮಾಡುತ್ತಿದೆ. ಸಾಧಕರನ್ನು ಗುರುತಿಸುವ ಜತೆಗೆ, ಯುವಜನತೆಗೆ ಪ್ರೇರಣೆ ನೀಡುತ್ತಿದೆ.” ಎಂದರು. ಅಧ್ಯಕ್ಷತೆ ವಹಿಸಿದ ಬೆಂಗಳೂರಿನ ಮಹಾ ಧರ್ಮಪ್ರಾಂತದ ಮಹಾ ಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಮಾತನಾಡಿ…
ಪುತ್ತೂರು : ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಬಾಲವನ ಅಭಿವೃದ್ಧಿ ಸಮಿತಿ ಪುತ್ತೂರು ಸಹಯೋಗದಲ್ಲಿ ಗಣರಾಜ್ಯೋತ್ಸವದ ಕುರಿತು ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಇದರ ವೆಬ್‌ಸೈಟ್‌ನ ಮೊಬೈಲ್ ಆವೃತ್ತಿ ಅನಾವರಣ ಕಾರ್ಯಕ್ರಮವು ದಿನಾಂಕ 14-02-2024ರಂದು ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್‌ಸೈಟ್ ಮೊಬೈಲ್ ಆವೃತ್ತಿ ಅನಾವರಣಗೊಳಿಸಿದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, “ಬಾಲವನದಲ್ಲಿ ತೆರೆದ ರಂಗ ಮಂದಿರವಿದೆ. ಇಲ್ಲಿ ಮಕ್ಕಳಲ್ಲಿರುವ ಪ್ರತಿಭೆಗಳ ಬೆಳವಣಿಗೆಗೆ ಮತ್ತು ಅನಾವರಣಕ್ಕೆ ಅವಕಾಶ ಕಲ್ಪಿಸಬಹುದು. ಇದಕ್ಕಾಗಿ ಯೋಜನೆ ರೂಪಿಸಲಾಗುವುದು. ಬಾಲವನದ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಾಲವನದ ತೆರೆದ ರಂಗ ಮಂದಿರವನ್ನು ಆದ್ಯತೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ನಂತರ ವಾರಾಂತ್ಯಕ್ಕೆ ವಿವಿಧ…
ಪಾರ್ವತಿ ಜಿ. ಐತಾಳ್ ಅವರ ‘ಮಹಾಬೆಳಗು ಮತ್ತು ಇತರ ನಾಟಕಗಳು ‘ಎಂಬ ಕೃತಿಯನ್ನು ಶ್ರೀನಿವಾಸ ಪುಸ್ತಕ ಪ್ರಕಾಶನವು ಇತ್ತೀಚೆಗೆ ಪ್ರಕಟಿಸಿದೆ. ಇದರಲ್ಲಿ ‘ಮಹಾಬೆಳಗು’ ಎಂಬ ಪೂರ್ಣ ಪ್ರಮಾಣದ ನಾಟಕದ ಜೊತೆಗೆ ಐದು ಏಕಾಂಕ ನಾಟಕಗಳಿವೆ. ಎಲ್ಲವೂ ಮಾನವೀಯತೆಯ ಬೆಳಕಿನ ಸಂದೇಶವನ್ನು ಸಾರುವ ನಾಟಕಗಳು. ಜಾತಿ-ಧರ್ಮಗಳ ಹೆಸರಿನಲ್ಲಿ ಛಿದ್ರಗೊಳ್ಳುತ್ತಿರುವ ನಮ್ಮ ಸಮಾಜಕ್ಕೆ ಮನುಷ್ಯ ಧರ್ಮಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂಬ ಸಂದೇಶವನ್ನು ಈ ನಾಟಕಗಳು ಸಾರುತ್ತವೆ. ಒಂದು ಗ್ರಾಮೀಣ ಪ್ರದೇಶದಲ್ಲಿ ಶ್ರೀಮಂತರು ಮತ್ತು ಬಲಾಢ್ಯರು ತಮ್ಮ ಪ್ರತಿಷ್ಠೆಗೋಸ್ಕರ ಜಾತಿ-ಧರ್ಮಗಳನ್ನು ಬಳಸಿಕೊಂಡು ಮುಗ್ಧ ಜನರನ್ನು ಹೇಗೆ ವಂಚಿಸುತ್ತಾರೆ ಎಂಬುದನ್ನು ‘ಮಹಾಬೆಳಗು’ ನಾಟಕವು ಮನಮುಟ್ಟುವಂತೆ ಚಿತ್ರಿಸುತ್ತದೆ. ಸ್ವಾರ್ಥಿಗಳಿಂದಾಗಿ ಊರಿನಲ್ಲಿ ಹಿಂದೂ-ಮುಸ್ಲಿಂ ಬಣಗಳು ಹುಟ್ಟಿಕೊಳ್ಳುತ್ತವೆ. ಅವುಗಳ ನಡುವೆ ಸಂಘರ್ಷಗಳು ನಡೆಯುತ್ತವೆ. ಆದರೆ ಸೂಕ್ಷ್ಮಮತಿಯಾದ ಅಂದೂಕಾಕನಿಗೆ ಇದರ ಹಿಂದಿನ ಸಂಚು ಅರ್ಥವಾಗುತ್ತದೆ. ಅವನ ಮೂಲಕ ಕಥಾನಾಯಕ ಸೂರ್ಯನಿಗೆ ಸತ್ಯದ ಅರಿವಾಗುತ್ತದೆ. ಅವನು ಮನುಷ್ಯನಾಗಲು ನಿರ್ಧರಿಸುತ್ತಾನೆ. ಕಾಸರಗೋಡಿನ ಆಡು ಭಾಷೆ, ಮಾಪಿಳ್ಳೆಗಳ ಮಲೆಯಾಳ ಮಿಶ್ರಿತ ಕನ್ನಡದ ಸಂಭಾಷಣೆಗಳು, ನಡುನಡುವೆ ಹಾಡುಗಳು…