Author: roovari

ಸುಳ್ಯ : ಯಕ್ಷಧ್ರುವ  ಪಟ್ಲ ಪೌಂಡೇಶನ್ ಟ್ರಸ್ಟ್ ( ರಿ.), ಮಂಗಳೂರು ಇದರ ಯಕ್ಷ ಧ್ರುವ ಯಕ್ಷ ಶಿಕ್ಷಣ ಅಭಿಯಾನದ ಅಂಗವಾಗಿ ತೆಂಕುತಿಟ್ಟು ಯಕ್ಷಗಾನ ತರಗತಿಯ ಉದ್ಘಾಟನಾ ಸಮಾರಂಭ ದಿನಾಂಕ 30-08-2023 ರಂದು  ಸ.ಪ.ಪೂ ಕಾ. ಸುಳ್ಯದಲ್ಲಿ ನಡೆಯಿತು. ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ.ಎಮ್.ಎಲ್.ಸಾಮಗ ಆರತಿ ಬೆಳಗಿ ತರಗತಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ವಹಿಸಿದ್ದರು. ತರಬೇತಿ ಸಂಚಾಲಕರಾದ ವಾಸುದೇವ ಐತಾಳ್, ಪಟ್ಲ ಪೌಂಡೇಶನ್ ಇದರ ಸುಳ್ಯ ಘಟಕದ ಅಧ್ಯಕ್ಷರಾದ ಶ್ರೀನಾಥ್ ರೈ ಹಾಗು ಕಾರ್ಯದರ್ಶಿಗಳಾದ ಪ್ರೀತಂ ರೈ, ಯಕ್ಷಗಾನ ಗುರುಗಳಾದ ಉಬರಡ್ಕ ಉಮೇಶ ಶೆಟ್ಟಿ, ಪ್ರಸಾದ್ ಸವಣೂರು, ಎಸ್.ಡಿ.ಎಮ್.ಸಿ ಸದಸ್ಯರಾದ ರೇಖಾ ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಸ್ವಾಗತಿಸಿ, ಹಿರಿಯ ಶಿಕ್ಷಕರಾದ ಕಲಾವಿದ ಸುಂದರ ಕೇನಾಜೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮವನ್ನು ಕನ್ನಡ  ಶಿಕ್ಷಕರಾದ ಮಮತಾ ಎಂ.ಜೆ. ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಚನಾ ಚಿದ್ಗಲ್, ಶ್ರೀ ವತ್ಸ ಭಾರದ್ವಾಜ್, ಪ್ರಥಮ ಮೂಡಿತ್ತಾಯ,…

Read More

01.02.2000ರಂದು ಸದಾನಂದ ರೈ ಹಾಗೂ ಚಂದ್ರಕಲಾ ರೈ ಇವರ ಮಗಳಾಗಿ ಪ್ರತಿಷ್ಠ ಎಸ್ ರೈ ಅವರ ಜನನ. Msc in Big Data Analytics ಇವರ ವಿದ್ಯಾಭ್ಯಾಸ. ಪೂರ್ಣಿಮಾ ಯತೀಶ್ ರೈ ಇವರ ಯಕ್ಷಗಾನ ಗುರುಗಳು. ಅಮ್ಮನಿಗೆ ಯಕ್ಷಗಾನ ಅಂದ್ರೆ ಬಹಳ ಇಷ್ಟ, ಹಾಗಾಗಿ ನನ್ನನ್ನು ಹಾಗೂ ತಮ್ಮನನ್ನು ಪೂರ್ಣಿಮಾ ಯತೀಶ್ ರೈ ಅವರ ಹತ್ತಿರ ಯಕ್ಷಗಾನ ಕಲಿಯಲು ಸೇರಿಸಿದರು. ನಾನು ತುಂಬಾ ಚಿಕ್ಕ ಇದ್ದೆ ಹಾಗೂ ಯಕ್ಷಗಾನ ನೋಡಿ ಮಾತ್ರ ಗೊತ್ತಿತ್ತು, ಹಾಗಾಗಿ ನಾನು ಯಕ್ಷಗಾನ ರಂಗಕ್ಕೆ ಬರಲು ಮೂಲ ಪ್ರೇರಣೆ ಹೆತ್ತವರು ಎಂದು ಹೇಳುತ್ತಾರೆ ರೈಯವರು. ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:- ನನಗೆ ಒಂದು ದೊಡ್ಡ ಸಮಸ್ಯೆ ಅಂದ್ರೆ ಕನ್ನಡ. ನಾನು ಕಲಿತ ಶಾಲೆಯಲ್ಲಿ ಕನ್ನಡ ಇರಲಿಲ್ಲ, ಹಾಗೆಯೇ ನಮ್ಮ ಮನೆಯಲ್ಲಿ ನಾವು ತುಳು ಮಾತನಾಡುವುದು. ಹಾಗಾಗಿ ರಂಗಕ್ಕೆ ಹೋಗುವಾಗ ತಕ್ಷಣ ಸಂಭಾಷಣೆ ಹೇಳಲು ಕಷ್ಟ, ಅದಕ್ಕೆ ನಾನು ಅರ್ಥವನ್ನು ಕಂಠ…

Read More

ಮಂಗಳೂರು : ಕುಂದೇಶ್ವರ ಪ್ರತಿಷ್ಠಾನ ಮಂಗಳೂರು ಘಟಕ ವತಿಯಿಂದ ದಿನಾಂಕ 04-09-2023ರ ಸೋಮವಾರ ಸಂಜೆ 6 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಶ್ರೀಪ್ರಾಪ್ತಿ ಕಲಾವಿದೆರ್ ಕುಡ್ಲ’ ತಂಡ ಅಭಿನಯಿಸುವ ಕಲಾಸವ್ಯಸಾಚಿ ಪ್ರಶಾಂತ ಸಿ.ಕೆ. ವಿರಚಿತ ‘ಮಣೆ ಮ೦ಚೊದ ಮಂತ್ರಮೂರ್ತಿ’ ನಾಟಕದ ಉದ್ಘಾಟನಾ ಪ್ರದರ್ಶನ ನಡೆಯಲಿದೆ. ಇದೇ ಸಂದರ್ಭದಲ್ಲಿ ತುಳು, ಕೊಂಕಣಿ, ಕನ್ನಡ, ತೆಲುಗು ಸಿನಿಮಾ ಮತ್ತು ರಂಗಭೂಮಿ ದಿಗ್ಗಜ ಕಲಾವಿದ ಗೋಪಿನಾಥ್ ಭಟ್‌ ಅವರಿಗೆ ‘ಕುಂದೇಶ್ವರ ಕಲಾಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಗೋಪಿನಾಥ್ ಭಟ್ ಅವರು ರಂಗಭೂಮಿಯಲ್ಲಿ 100ಕ್ಕೂ ಹೆಚ್ಚು ಪಾತ್ರ ನಿರ್ವಹಿಸಿ 750ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ವೀರಮದಕರಿ ಸಹಿತ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಟ್ಸ್ ಆಲ್ ಯುವರ್ ಆನರ್ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಗೆದ್ದುಕೊಂಡಿರುವ ಭಟ್ ಅವರು ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್‌, ಶಾಸಕ ಡಿ.ವೇದವ್ಯಾಸ ಕಾಮತ್, ನಿವೃತ್ತ ಸೇನಾಧಿಕಾರಿ ಕ್ಯಾ. ಬ್ರಿಜೇಶ್ ಚೌಟ, ತೆಲಿಕೆದ ಬೊಳ್ಳಿ ದೇವದಾಸ್…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಜಿಲ್ಲಾ ಗ್ರಂಥಾಲಯ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ಆಶ್ರಯದಲ್ಲಿ ದಿನಾಂಕ 04-09-2023ರಂದು ಬೆಳಗ್ಗೆ 11:30 ಗಂಟೆಗೆ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರೊಂದಿಗೆ ‘ಸಂವಾದ’ ಕಾರ್ಯಕ್ರಮವು ಉಡುಪಿ ಅಜ್ಜರಕಾಡಿನ ಜಿಲ್ಲಾ ಗ್ರಂಥಾಲಯದ ಎ.ಸಿ. ಸಭಾಂಗಣದಲ್ಲಿ ನಡೆಯಲಿದೆ. ಸಂವಾದದಲ್ಲಿ ಮಾಜಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಕಲಾವಿದ ಹಾಗೂ ಮೂಳೆ ರೋಗ ತಜ್ಞ ಡಾ.ಸುರೇಶ್ ಶೆಣೈ, ಕವಯತ್ರಿ ಜ್ಯೋತಿ ಮಹಾದೇವ್ ಮತ್ತು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಉಪನ್ಯಾಸಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಮುಖ್ಯ ಗ್ರಂಥಾಧಿಕಾರಿ ಜಯಶ್ರೀ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷರಾದ ಪ್ರೊ.ಶಂಕರ್, ತುಳುಕೂಟದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಹರೀಶ್ಚಂದ್ರ, ಕ.ಸಾ.ಪ. ಕಾಪು ತಾಲೂಕು ಅಧ್ಯಕ್ಷರಾದ ಪುಂಡಲೀಕ ಮರಾಠೆ, ಕ.ಸಾ.ಪ. ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಎಚ್.ಪಿ. ಇವರುಗಳ…

Read More

ಬೆಂಗಳೂರು : ಥಿಯೇಟರ್ ಲ್ಯಾಬ್ ಆಯೋಜಿಸಿದ ಮಕ್ಕಳ ರಂಗ ಪ್ರಯೋಗ ಶಾಲೆಯ ಈ ವರ್ಷದ ವಿದ್ಯಾರ್ಥಿಗಳಿಂದ ‘ಮೊಬೈಲ್ ಕಿರಿಕಿರಿ’ ಎಂಬ ಬೀದಿ ನಾಟಕ ದಿನಾಂಕ 03-09-2023ರ ಬೆಳಗ್ಗೆ 9.30ಕ್ಕೆ ಆರ್.ಆರ್.ನಗರದ ಮುನಿವೆಂಕಟಯ್ಯ ಬಯಲು ರಂಗಮಂದಿರದ ಅವರಣದಲ್ಲಿ ಪ್ರದರ್ಶನಗೊಳ್ಳಲಿದೆ. ಡಾ.ಎಸ್.ವಿ. ಕಶ್ಯಪ್ ನಿರ್ದೇಶನದ ಈ ನಾಟಕಕ್ಕೆ ಡಾ. ಬೃಂದಾ ಇವರು ಸಹ ನಿರ್ದೇಶಕಿಯಾಗಿ ಸಹಕರಿಸಿದ್ದಾರೆ. ನಾಟಕದ ಬಗ್ಗೆ : ಜಂಗಮವಾಣಿ ಇಂದು ನಮ್ಮ ಮನೆ ಮನಗಳನ್ನು ಆವರಿಸಿದೆ. ಅದು ನಮ್ಮ ಮಿತ್ರನೋ ಇಲ್ಲ ಶತ್ರುವೋ ? ಎಂಬ ಪ್ರಶ್ನೆ ನಮಗೆ ಎದುರಾಗಿದೆ. ಕೊರೋನಾ ಕಾಲದಲ್ಲಿ ಮಕ್ಕಳ ಕೈಗಳಿಗೆ ಮೊಬೈಲ್ ತಲುಪಿತು. ಅದರ ಸಾಧಕ ಬಾಧಕಗಳು ಮಕ್ಕಳ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿವೆ. ಎದುರಿಗಿರುವ ವ್ಯಕ್ತಿಗಿಂತ ಜೇಬಿನಲ್ಲಿರುವ ಮೊಬೈಲ್ ಮುಖ್ಯವಾಗಿದೆ. ಇಂಥ ಹತ್ತು ಹಲವಾರು ವಿಷಯಗಳ ಬಗ್ಗೆ ಮತ್ತು ಮೊಬೈಲ್ ಬಳಕೆಯ ಶಿಷ್ಟಾಚಾರದ ಬಗ್ಗೆ ಇರುವ ನಾಟಕ “ಮೊಬೈಲ್ ಕಿರಿಕಿರಿ ” ರಂಗ ಪ್ರಯೋಗಶಾಲೆಯ ಬಗ್ಗೆ : ಮಕ್ಕಳಲ್ಲಿ ರ೦ಗಪ್ರೀತಿ ಬೆಳೆಸಿ ರ೦ಗ…

Read More

ಉಡುಪಿ : ರೋಟರಿ ಉಡುಪಿ, ಸ್ವರ ಸರಸ್ವತಿ ಪ್ರತಿಷ್ಠಾನ, ಇಂದ್ರಾಳಿ ಕನ್ನಡ ವಿಭಾಗ ಎಂ.ಜಿ.ಎಂ. ಕಾಲೇಜು ಉಡುಪಿ, ಕರ್ನಾಟಕ ಜಾನಪದ ಪರಿಷತ್ತು, ಉಡುಪಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಹಯೋಗದೊಂದಿಗೆ ಶಾರದಾ ಪ್ರತಿಷ್ಠಾನ (ರಿ.), ರಂಗ ಚಂದಿರ (ರಿ.) ಮತ್ತು ರಂಗ ಭೂಮಿ (ರಿ.) ಉಡುಪಿ ಸಹಕಾರದೊಂದಿಗೆ ಕಾಜಾಣ ಅರ್ಪಿಸುವ ಪದ್ಮಶ್ರೀ ಡಾ.ಮಂಜಮ್ಮ‌ ಜೋಗತಿ ಜೀವನಾಧಾರಿತ ಏಕ ವ್ಯಕ್ತಿ ನಾಟಕ ‘ಮಾತಾ’ ದಿನಾಂಕ 03-09-2023ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ. ಅರುಣ್ ಕುಮಾರ್ ಅಭಿನಯಿಸುವ ಈ ನಾಟಕಕ್ಕೆ ರಂಗಪಠ್ಯ, ವಿನ್ಯಾಸ, ನಿರ್ದೇಶನ ಡಾ. ಬೇಲೂರು ರಘುನಂದನ್ ಅವರದ್ದು. ಈ ನಾಟಕಕ್ಕೆ ಸಂಗೀತ ಸಂಯೋಜನೆ ಮತ್ತು ಗಾಯನ ಮಾಡಿದ್ದು ಶ್ರೀಮತಿ ಸವಿತಕ್ಕ, ಬೆಳಕು ಮತ್ತು ಪ್ರಸಾಧನ ರವಿ ಶಂಕರ್ ನಿರ್ವಹಿಸಲಿದ್ದಾರೆ. ಸಂಗೀತ ನಿರ್ವಹಣೆ ಮತ್ತು ರಂಗಸಜ್ಜಿಕೆಯಲ್ಲಿ ಶ್ರೀನಿ ಸಂಪತ್ ಮತ್ತು ಲಕ್ಷ್ಮೀ ಸಹಕರಿಸಲಿರುವರು. ಸಹ ನಿರ್ವಹಣೆ ಸುಬ್ರಮಣಿ ಬಯ್ಯಣ್ಣ ಅವರದ್ದು, ರಂಗಸಜ್ಜಿಕೆಯಲ್ಲಿ…

Read More

ಮಂಗಳೂರು : ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಇದರ ಆಶ್ರಯದಲ್ಲಿ ಶ್ರೀ ಸಿದ್ಧಿ ವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಎಲ್ಲಾ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ‘ಬಂಟ ಕಲಾ ಸಂಭ್ರಮ’ ಸ್ಪರ್ಧಾ ಕಾರ್ಯಕ್ರಮವು ದಿನಾಂಕ 03-09-2023ರಂದು ನಡೆಯಲಿದೆ. ಸ್ಪರ್ಧೆಯಲ್ಲಿ ಭಾರತದ ಪರಂಪರೆ, ಪುರಾಣ, ಇತಿಹಾಸ, ಸಾಮಾಜಿಕ, ಜನಪದ, ಸಂಸ್ಕೃತಿಯ ದೃಶ್ಯ ವಿಚಾರಗಳನ್ನು ರೂಪಕದ ಮೂಲಕ ಸಂಯೋಜನೆ ಮಾಡಬಹುದು. ನಿಗದಿತ ಸಮಯದಲ್ಲಿ ಯಾವುದೇ ವಿಷಯಗಳ ಕುರಿತು ನೃತ್ಯ, ಸಂಗೀತ, ರೂಪಕ, ನವ್ಯ ವೈಭವೀಕರಣದ ಜೊತೆಗೆ ಮೌಲ್ಯಯುತ ಸಂದೇಶ ಸಾರುವ ಅಪೂರ್ವ ಕಲಾ ಸಂಗಮವೇ ಭಾರತ ದರ್ಶನವಾಗಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ. ಸ್ಪರ್ಧೆಯ ನಿಯಮಗಳು : ನಿಗದಿತ 20 ನಿಮಿಷಗಳ ಕಾಲಾವಕಾಶದಲ್ಲಿ ಪ್ರಹಸನ, ಸಮೂಹ ನೃತ್ಯ, ಉತ್ತಮ ಸಂದೇಶ ಒಳಗೊಂಡಂತ ಇತರ ಸಾಂಸ್ಕೃತಿಕ ವೈವಿಧ್ಯವನ್ನು ಪ್ರದರ್ಶಿಸಬೇಕು. ತಂಡಕ್ಕೆ 20+5 ನಿಮಿಷಗಳ ಅವಕಾಶ…

Read More

ಬೆಂಗಳೂರು : ಡಾ. ಶಿವರಾಮ ಕಾರಂತರಿಂದ ಉದ್ಘಾಟನೆಗೊಂಡು ‘ಜಾನಪದ ಜ್ಞಾನ ವಿಜ್ಞಾನ’ವನ್ನು ಭಾರತ ದೇಶದುದ್ದಗಲಕ್ಕೂ ಹರಡುತ್ತಲಿರುವ ‘ಜಾನಪದ ವಿಶ್ವ ಪ್ರತಿಷ್ಠಾನ’ವು 40 ವರ್ಷಗಳಿಂದ ‘ಜಾನಪದ ದೀಪಾರಾಧನೆ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಮತ್ತು ಜೊತೆಗೆ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಜನಾನುರಾಗಿ ಸೇವಾನಿರತರಿಗೆ ಪ್ರಶಸ್ತಿಗಳನ್ನು ನೀಡುತ್ತ ಬಂದಿದೆ. 2023ನೆಯ ಸಾಲಿನ ‘ಕುವೆಂಪು ದೀಪ ಪ್ರಶಸ್ತಿ’ಗೆ ಬಹುಮುಖಿ ಚಿಂತಕರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಕಾರಂತ ದೀಪ ಪ್ರಶಸ್ತಿ’ಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಡೀನ್ ಡಾ. ಸಿ.ನಾಗಭೂಷಣ, ‘ಕಲಾದೀಪ ಪ್ರಶಸ್ತಿ’ಗೆ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ಶ್ರೀ ಎಚ್.ಎನ್. ಸುರೇಶ್, ‘ದೇವಮ್ಮ ರಾಮನಾಯಕ ದೀಪ ಪ್ರಶಸ್ತಿ’ಗೆ ಅಂಕೋಲದ ಕಮ್ಮಾರ ಶ್ರೀ ಚಂದ್ರಕಾಂತ ಮುಕುಂದ ಆಚಾರಿ, ‘ವಿದ್ಯಾರ್ಥಿ ದೀಪ ಪ್ರಶಸ್ತಿ’ಗೆ ಯೋಗಪಟು ಕುಮಾರಿ ಶ್ರೀನಿಧಿ ಪ್ರಕಾಶ್ ಗೌಡ ಇವರುಗಳು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ.6,000/- ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿದೆ. ಆಯ್ಕೆ ಸಮಿತಿಯಲ್ಲಿ ಡಾ. ಎನ್.ಆರ್. ನಾಯಕ, ನಾಗರಾಜ ಹೆಗಡೆ ಅಪಗಾಲ, ಅಭಿನವ ರವಿಕುಮಾರ್ ಮತ್ತು ಸಂಧ್ಯಾ ಹೆಗಡೆ ದೊಡ್ಡಹೊಂಡ ಇದ್ದರು.…

Read More

ಬೆಂಗಳೂರು : ಅಯೋಧ್ಯಾ ಪಬ್ಲಿಕೇಷನ್ಸ್ ಪ್ರಕಟಿಸುವ ಡಾ. ಮೀನಾಕ್ಷಿ ರಾಮಚಂದ್ರ ಇವರ ‘ನರಾಧಮರ ನಡುವೆ’ ಕಾದಂಬರಿ ಲೋಕಾರ್ಪಣೆ ಕಾರ್ಯಕ್ರಮವು ಬೆಂಗಳೂರಿನ ಬಸವನ ಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇದರ ವಾಡಿಯಾ ಸಭಾಂಗಣದಲ್ಲಿ ದಿನಾಂಕ 02-09-2023ರಂದು ಸಂಜೆ ಗಂಟೆ 5ಕ್ಕೆ ನಡೆಯಲಿದೆ. ವಿಂಗ್ ಕಮಾಂಡರ್ ಬಿ. ಎಸ್. ಸುದರ್ಶನ್, ಕ್ಯಾಪ್ಟನ್ ನವೀನ ನಾಗಪ್ಪ, ರೋಹಿತ್‌ ಚಕ್ರತೀರ್ಥ ಹಾಗೂ ಮೋಹನ ವಿಶ್ವ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Read More

ಮಂಗಳೂರು : ತುಳುನಾಡ ತುಡರ್ (ರಿ.) ಪ್ರಸ್ತುತಪಡಿಸುವ ‘ದೈವೊದ ಬೂಳ್ಯ’ ನಾಟಕದ ಪ್ರದರ್ಶನವು ರೋಮಾಂಚನಕಾರಿ ರಂಗತಂತ್ರದೊಂದಿಗೆ ದಿನಾಂಕ 02-09-2023ರ ಸಂಜೆ 5.30ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ತುಳುನಾಡಿನ ಬೀಡೊಂದರಲ್ಲಿ ಸುಮಾರು 400 ವರ್ಷಗಳಷ್ಟು ಹಿಂದೆ ಜರಗಿದ ಸತ್ಯಘಟನೆಯೊಂದರ ಪರತಿಮಂಗಣೆ ಪಾಡ್ದಣದ ಕಥಾನಕವನ್ನು ಆಧರಿಸಿದ ಬಿ.ಕೆ.ಗಂಗಾಧರ ಕಿರೋಡಿಯನ್ ನಿರ್ದೇಶನದಲ್ಲಿ ಸಿನೆಮಾ ರೂಪದಲ್ಲಿ ನೋಮೊದ ಬೂಳ್ಯ ಪ್ರದರ್ಶನವಾಗಿತ್ತು. ಇದೇ ಕೃತಿ ದೈವೊದ ಬೂಳ್ಯ ಎಂಬ ಹೆಸರಿನಲ್ಲಿ ಕೆಲವು ದೃಶ್ಯಗಳ ಬದಲಾವಣೆಯೊಂದಿಗೆ ಹೊಸ ರೀತಿಯ ರೋಮಾಂಚನಕಾರಿ ರಂಗತಂತ್ರದೊಂದಿಗೆ ಗಂಗಾಧರ ಕಿರೋಡಿಯನ್ ನಿರ್ದೇಶನ ಹಾಗೂ ನಯನಾ ಕೋಟ್ಯಾನ್ ಸಹನಿರ್ದೇಶನದಲ್ಲಿ ಮೂಡಿಬಂದಿದೆ. ಈ ನಾಟಕಕ್ಕೆ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಶ್ರೀ ಬಿ.ಕೆ ಗಂಗಾಧರ ಕಿರೋಡಿಯಾನ್ ಗೀತೆ ರಚನೆ ಮಾಡಿದ್ದು, ಶ್ರೀ ಎ.ಕೆ ವಿಜಯ (ಕೋಕಿಲಾ) ಸಂಗೀತ ನೀಡಿರುವ ಈ ನಾಟಕಕ್ಕೆ ಶ್ರೀ ವಿದ್ದು ಉಚ್ಚಿಲ್ ಇವರ ಸಹಕಾರವಿದೆ.

Read More